ರೀತ್ ಅಬ್ರಹಾಂ
ರೀತ್ ಅಬ್ರಹಾಂ | |
---|---|
ಜನನ | ೧೯೬೧/೧೯೬೨(ವಯಸ್ಸು ೫೭-೫೮)
ಮೈಸೂರು[ಸೂಕ್ತ ಉಲ್ಲೇಖನ ಬೇಕು] |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ಕ್ರೀಡಾಪಟು(ಓಟಗಾರ್ತಿ) |
ಉದ್ಯೋಗದಾತ | ಕಾರ್ಪೊರೇಷನ್ ಬ್ಯಾಂಕ್[೧] |
ಗಮನಾರ್ಹ ಕೆಲಸಗಳು | ಅರ್ಜುನ ಪ್ರಶಸ್ತಿ ಹಾಗೂ ಕ್ಲೀನ್ ಸ್ಪೋರ್ಟ್ಸ್ ಇಂಡಿಯಾದ ಸಹ-ಸಂಸ್ಥಾಪಕರು |
ಸಂಗಾತಿ | ಸುನಿಲ್ ಅಬ್ರಹಾಂ |
ಮಕ್ಕಳು | ಶಿಕ, ಶಮಿರ್ |
ರೀತ್ ಅಬ್ರಹಾಂ ಅವರು ಬೆಂಗಳೂರಿನ ಕ್ರೀಡಾಪಟು. ಇವರು ಲಾಂಗ್ ಜಂಪ್ [೨] ಹಾಗು ೧೦೦ ಮೀಟರ್ ಹರ್ಡಲ್ಸ್‌ನಲ್ಲಿ ಏಷ್ಯಾದ ಮಾಜಿ ಪದಕ ವಿಜೇತೆ ಮತ್ತು ಹೆಪ್ಟಾಥ್ಲಾನ್‌ನಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್. ೧೯೯೭ ರಲ್ಲಿ ಅರ್ಜುನ ಪ್ರಶಸ್ತಿ [೩] ಮತ್ತು ೧೯೮೩ ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ. ಅತ್ಲೆಟಿಕ್ ಅಲ್ಲಿ ರೀತ್ ಅವರು ೧೫ ವರ್ಷಗಳ (೧೯೭೬–೧೯೯೨) ವೃತ್ತಿಜೀವನದ ಅನುಭವವನ್ನು ಹೊಂದಿದ್ದಾರೆ. ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಅವರು ೧೬ ಚಿನ್ನ ಮತ್ತು ೧೧ ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.
ರೀತ್ ಅವರು ಸದ್ಯ ಸಕ್ರಿಯ ಕ್ರೀಡಾಪಟು ಮತ್ತು ವಿಶ್ವ ಮಾಸ್ಟರ್ಸ್ ಸ್ಪರ್ಧೆಗಳಲ್ಲಿ ನಿಯತವಾಗಿ ಸ್ಪರ್ಧಿಸುತ್ತಾರೆ ಮತ್ತು ಪದಕಗಳನ್ನು ಗೆಲ್ಲುತ್ತಿದ್ದಾರೆ. ಪ್ರಸ್ತುತ ತಮ್ಮ ವಯಸ್ಸಿನ ವಿಭಾಗದಲ್ಲಿ ಟ್ರಿಪಲ್ ಜಂಪ್‌ನಲ್ಲಿ ವಿಶ್ವ ಮತ್ತು ಏಷ್ಯನ್ ಮಾಸ್ಟರ್ಸ್ ಚಾಂಪಿಯನ್ ಆಗಿದ್ದಾರೆ. ಅವರು ಕ್ಲೀನ್ ಸ್ಪೋರ್ಟ್ಸ್ ಇಂಡಿಯಾದ ಸಹ-ಸಂಸ್ಥಾಪಕರಾಗಿದ್ದಾರೆ. ಜನರ ಸಕ್ರಿಯ ಜೀವನಶೈಲಿಯಲ್ಲಿ ಯುಕ್ತತೆಯನ್ನು ಉತ್ತೇಜಿಸುವಲ್ಲಿ ಅವರು ತುಂಬಾ ಸಕ್ರಿಯರಾಗಿದ್ದಾರೆ. ಭಾರತದಲ್ಲಿ ವಿವಿಧ ಓಟ ಸ್ಪರ್ಧೆಗಳು ಮತ್ತು ಮ್ಯಾರಥಾನ್‌ಗಳನ್ನು ಅವರು ಸಕ್ರಿಯವಾಗಿ ಉತ್ತೇಜಿಸುತ್ತಾರೆ. ಅವರು ೨೦೧೪ರಿಂದ ಬೆಂಗಳೂರಿನ ಏಕೈಕ ಮ್ಯಾರಥಾನ್ - ಶ್ರೀರಾಮ್ ಪ್ರಾಪರ್ಟೀಸ್ ಬೆಂಗಳೂರು ಮ್ಯಾರಥಾನ್‌ನ ರಾಯಭಾರಿಯಾಗಿದ್ದಾರೆ. [೪] ಪ್ರಸ್ತುತ ಅವರು ಎನ್ಇಬಿ ಸ್ಪೋರ್ಟ್ಸ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾಗಿದ್ದಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]ವೃತ್ತಿ
[ಬದಲಾಯಿಸಿ]ಪದಕ ದಾಖಲೆ | ||
---|---|---|
ಮಹಿಳೆಯರ ಅಥ್ಲೆಟಿಕ್ಸ್ | ||
ಸೌತ್ ಏಷಿಯನ್ ಗೇಮ್ಸ್ | ||
೧೯೮೯ ಇಸ್ಲಾಮಾಬಾದ್ | ೧೦೦ ಮೀಟರ್ಸ್ ಹರ್ಡಲ್ಸ್ | |
೧೯೮೯ ಇಸ್ಲಾಮಾಬಾದ್ | ಲಾಂಗ್ ಜಂಪ್ | |
೧೯೯೧ ಕೊಲೊಂಬೊ | ಲಾಂಗ್ ಜಂಪ್ | |
ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ | ||
೨೦೧೩ ಪೋರ್ಟೊ ಅಲೆಗ್ರೆ | ಡಬ್ಲ್ಯೂ೫೦(W50) ಟ್ರಿಪಲ್ ಜಂಪ್ | |
೨೦೧೧ ಸ್ಯಾಕ್ರಮೆಂಟೊ | ಡಬ್ಲ್ಯೂ೪೫(W45) ಲಾಂಗ್ ಜಂಪ್ | |
೨೦೧೧ ಸ್ಯಾಕ್ರಮೆಂಟೊ | ಡಬ್ಲ್ಯೂ೪೫(W45) ಟ್ರಿಪಲ್ ಜಂಪ್ | |
೨೦೦೩ ಕರೋಲಿನಾ | ಡಬ್ಲ್ಯೂ೪೦(W40) ಲಾಂಗ್ ಜಂಪ್ | |
೨೦೧೩ ಪೋರ್ಟೊ ಅಲೆಗ್ರೆ | ಡಬ್ಲ್ಯೂ೫೦(W50) ಲಾಂಗ್ ಜಂಪ್ |
೧೫ ವರ್ಷಗಳ (೧೯೭೬–೧೯೯೨) ಸುದೀರ್ಘವಾದ ಅಥ್ಲೆಟಿಕ್ ವೃತ್ತಿಜೀವನದ ಅವಧಿಯಲ್ಲಿ ರೀತ್ ಅವರು ಕರ್ನಾಟಕ ರಾಜ್ಯ ಮತ್ತು ಭಾರತವನ್ನು ಹಲವಾರು ಸಂದರ್ಭಗಳಲ್ಲಿ ಪ್ರತಿನಿಧಿಸುತ್ತಾ ದಾರಿಯುದ್ದಕ್ಕೂ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರ ಎಲ್ಲಾ ಸಾಧನೆಗಳು ಅವರ ಸಮರ್ಪಿಸಿಕೊಳ್ಳುವಿಕೆ, ಅನ್ವಯಿಸುವಿಕೆ ಮತ್ತು ಶಿಸ್ತಿನ ಪ್ರಜ್ಞೆಯ ಪರಿಣಾಮಗಳಾಗಿವೆ.
ಇದನ್ನೂ ನೋಡಿ
[ಬದಲಾಯಿಸಿ]- ಭಾರತೀಯ ಮಹಿಳಾ ಕ್ರೀಡಾಪಟುಗಳ ಪಟ್ಟಿ
ಉಲ್ಲೇಖಗಳು
[ಬದಲಾಯಿಸಿ]- ↑ D, Dharmendra. "She rakes in medals for India even after 3 decades". Citizen Matters. Retrieved 9 November 2014.
{{cite web}}
: Unknown parameter|ದಿನಾಂಕ=
ignored (help) - ↑ "Reeth Abraham at IAAF page". IAAF.
- ↑ "President honours sportspersons". Online Edition of The Tribune, dated 1998-08-30. Retrieved 2007-11-13.
- ↑ http://www.nebsports.in/.
{{cite web}}
: Missing or empty|title=
(help)