ರಾಶಿಸಂಖ್ಯೆ

ವಿಕಿಪೀಡಿಯ ಇಂದ
Jump to navigation Jump to search

ರಾಶಿಸಂಖ್ಯೆ(Mass number)ಎಂದರೆ ಒಂದು ಪರಮಾಣುವಿನ ಪ್ರೋಟಾನ್ ಹಾಗೂ ನ್ಯೂಟ್ರಾನ್‍ಗಳ ಒಟ್ಟು ಸಂಖ್ಯೆ.ಇದು ಪರಾಮಾಣು ಸಂಖ್ಯೆ (Atomic number)ಗಿಂತ ವಿಭಿನ್ನವಾಗಿದೆ. ಪರಮಾಣು ಸಂಖ್ಯೆ ಕೇವಲ ಪರಮಾಣುವಿನಲ್ಲಿರುವ ಪ್ರೋಟಾನ್‍ಗಳ ಸಂಖ್ಯೆಯನ್ನಷ್ಟೇ ಸೂಚಿಸಿದರೆ ರಾಶಿಸಂಖ್ಯೆಯು ಪ್ರೋಟಾನ್ ಹಾಗೂ ನ್ಯೂಟ್ರಾನ್‌ಗಳ ಒಟ್ಟು ಸಂಖ್ಯೆಯನ್ನು ನಿರ್ದೇಶಿಸುತ್ತದೆ.ಒಂದು ಮೂಲಧಾತುವಿನ ಪರಮಾಣುವಿನಲ್ಲಿ ಪ್ರೊಟಾನ್‌ಗಳ ಸಂಖ್ಯೆ ಸಮನಾಗಿದ್ದರೂ ನ್ಯೂಟ್ರಾನ್‍ಗಳ ಸಂಖ್ಯೆಯಲ್ಲಿ ವ್ಯತ್ಯಾಸವಿರುತ್ತದೆ.ಇವುಗಳನ್ನು ನಾವು ಸಮಸ್ಥಾನಿಗಳು ಎಂದು ಕರೆಯುತ್ತೇವೆ.ಹೆಚ್ಚಿನ ಎಲ್ಲಾ ಮೂಲಧಾತುಗಳು ಒಂದಕ್ಕಿಂತ ಹೆಚ್ಚಿನ ಸಮಸ್ಥಾನಿಗಳನ್ನು ಹೊಂದಿರುತ್ತವೆ.ಆದುದರಿಂದ ಮೂಲಧಾತುವನ್ನು ನಿರ್ದಿಷ್ಟವಾಗಿ ಗುರುತಿಸಲು ರಾಶಿಸಂಖ್ಯೆ ಸಹಾಯಮಾಡುತ್ತದೆ.ಹೆಚ್ಚಿನ ಹಗುರ ಮೂಲಧಾತುಗಳು ಸಮಾನ ಪ್ರಮಾಣದ ಪ್ರೊಟಾನ್ ಹಾಗೂ ನ್ಯೂಟ್ರಾನ್‌ಗಳನ್ನು ಹೊಂದಿದ್ದರೆ ಭಾರವಾದ ಮೂಲಧಾತುಗಳಲ್ಲಿ ನ್ಯೂಟ್ರಾನ್‌ಗಳ ಸಂಖ್ಯೆಯು ಪ್ರೊಟಾನ್‌ಗಳ ಸಂಖ್ಯೆಗಿಂತ ಬಹಳ ಹೆಚ್ಚಾಗಿರುತ್ತದೆ.ಉದಾಹರಣೆಗೆ ಯುರೇನಿಯಮ್-೨೩೮ ರಲ್ಲಿ ನ್ಯೂಟ್ರಾನ್‌ಗಳ ಸಂಖ್ಯೆಯು ೧೪೬ ಇದ್ದು ಪ್ರೊಟಾನ್‌ಗಳು ಕೇವಲ ೯೨ ಮಾತ್ರವಿರುತ್ತದೆ.

ಬಾಹ್ಯ ಸಂಪರ್ಕ[ಬದಲಾಯಿಸಿ]