ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ)

ವಿಕಿಪೀಡಿಯ ಇಂದ
Jump to navigation Jump to search

ಶ್ರೀ ರಾಮಚಂದ್ರ ಕುಲಕರ್ಣಿಯವರು ರಾವಬಹಾದ್ದೂರ ಎಂಬ ಹೆಸರಿನಲ್ಲಿ ಅನೇಕ ಕತೆ ಹಾಗು ಕಾದಂಬರಿಗಳನ್ನು ಬರೆದ ಕನ್ನಡ ಸಾಹಿತಿ. ಇವರ ಗ್ರಾಮಾಯಣ ಕಾದಂಬರಿಯು ಕನ್ನಡ‍ದ ಹತ್ತು ಶ್ರೇಷ್ಠ ಕಾದಂಬರಿಗಳಲ್ಲಿ ಒಂದು ಎಂದು ಪರಿಗಣಿತವಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿರುವದಲ್ಲದೆ ಭಾರತ‍ದ ಎಲ್ಲ ಭಾಷೆಗಳಿಗೆ ಅನುವಾದವಾಗಿದೆ.

ಜೀವನ[ಬದಲಾಯಿಸಿ]

೧೯೧೦ ಸಪ್ಟಂಬರ೨೪ರಂದು ವಿಜಯಪುರ ಜಿಲ್ಲೆಯ ಜಮಖಂಡಿತಾಲೂಕಿನ ಹಿರೆಪಡಸಲಗಿಯಲ್ಲಿ ಜನಿಸಿದರು. ಇವರ ತಾಯಿ ಸುಭದ್ರಾಬಾಯಿ ; ತಂದೆ ಭೀಮರಾವ. ಧಾರವಾಡ‍ದ ಕರ್ನಾಟಕ ಕಾಲೇಜಿನಲ್ಲಿ ಓದಿ, ೧೯೩೫‍ರಲ್ಲಿ ಬಿ.ಎ.ಪದವಿ ಗಳಿಸಿದರು. ಅನೇಕ ವರ್ಷ ಜಯಂತಿ ಮಾಸಪತ್ರಿಕೆಯನ್ನು ನಡೆಯಿಸಿದರು.ಕೆಲ ಕಾಲ ಖಾಸಗಿ ಬ್ಯಾಂಕುಗಳಲ್ಲಿ ಕೆಲಸ ಮಾಡಿದರು.ಸ್ವಾತಂತ್ರ್ಯ ಹೋರಾಟಗಾರ ಕೌಜಲಗಿ ಹನುಮಂತರಾಯರ ಪ್ರೇರಣೆಯಿಂದ ಚರಕಾ ಸಂಘ ಸೇರಿದರು. ೧೯೩೮‍ರಿಂದ ೧೯೪೬‍ರವರೆಗೆ ಚರಕಾ ಸಂಘದ ವ್ಯವಸ್ಥಾಪಕರಾಗಿದ್ದರು.ತನ್ನಂತರ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸಂಪಾದಕೀಯ ವಿಭಾಗಕ್ಕೆ ಸೇರಿಕೊಂಡರು. ಕರ್ನಾಟಕ ರಾಜ್ಯ ಪುನಾರಚನೆಯ ಮೊದಲು, ಆಗಿನ ಮುಂಬಯಿ ಪ್ರಾಂತದ ಮುಖ್ಯ ಮಂತ್ರಿಗಳಾಗಿದ್ದ ಮೊರಾರಜಿ ದೇಸಾಯಿ ಇವರ ವಿರುದ್ಧ ಇವರು ಬರೆದ ಖಾರವಾದ ಲೇಖನಗಳಿಂದಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಸರಕಾರೀ ಜಾಹೀರಾತುಗಳನ್ನು ನಿಲ್ಲಿಸಲಾಗಿತ್ತು. ಆದರೆ ಚುನಾವಣಾ ಪ್ರಚಾರ ಸಮಯದಲ್ಲಿ ತನ್ನ ತಪ್ಪಿನ ಅರಿವಾದ ಮೊರಾರಜಿಯವರು ಜಾಹೀರಾತುಗಳನ್ನು ಪುನರಾರಂಭಿಸಿದರು. ಬಂಗ್ಲಾದೇಶ [೧] ಉದಯವಾದ ಹೊಸತರಲ್ಲಿ ರಾವಬಹಾದ್ದೂರರು ಸಂಯುಕ್ತ ಕರ್ನಾಟಕದ ಪ್ರತಿನಿಧಿಯಾಗಿ ಅಲ್ಲಿಗೆ ತೆರಳಿ “ನಾನು ಕಂಡ ಬಂಗ್ಲಾದೇಶ” ಎನ್ನುವ ಪುಸ್ತಕ ಬರೆದರು.

ಕಾದಂಬರಿಗಳು[ಬದಲಾಯಿಸಿ]

 • ಚಂದ್ರಗ್ರಹಣ ಮೊದಲ ಕಥೆ
 • ಗ್ರಾಮಾಯಣ, ಇವರಿಗೆ ಜನಪ್ರಿಯತೆ ಹಾಗೂ ಗೌರವಗಳನ್ನು ತಂದಿತ್ತ ಕಾದಂಬರಿ.
 • ಬಾಳುಬಂಗಾರ
 • ಬಿತ್ತಿ ಬೆಳೆದವರು
 • ಧೂಮಕೇತು
 • ಗೌಡರ ಕೋಣ
 • ಮುತ್ತು ಕಟ್ಟಿದವಳು
 • ಕನಸು-ನನಸು
 • ಕಾಂಚನ ಮೃಗ
 • ಸೂಜಿಗಲ್ಲು
 • ತಬ್ಬಲಿಗಳು

ಕಥಾ ಸಂಕಲನ[ಬದಲಾಯಿಸಿ]

 • ಮನಸುಟ್ಟ ಕಿಡಿ
 • ಮನ ಬೆಳಗಿತು
 • ಇತಿಹಾಸ ಭೂತ ಇತ್ಯಾದಿ

ಇತರೆ ಕೃತಿಗಳು[ಬದಲಾಯಿಸಿ]

 • ಪಂಚಜನ್ಯ ನಾಟಕ
 • ನಾನು ಕಂಡ ಬಾಂಗ್ಲಾದೇಶ-ಪ್ರವಾಸ ಕಥನ
 • ಸಾಮ್ಯವಾದ
 • ಕರ್ಮಯೋಗಿ ಹಣಮಂತರಾಯರು
 • ಅಸುರಾಯಣ
 • ಇತಿಹಾಸ ಭೂತ
 • ವೃಂದಾವನ
 • ಮರೆಯದ ನೆನಪುಗಳು
 • ಪಡುವಾರಳ್ಳಿ ಪಾಂಡವರು ಚಲನಚಿತ್ರವಾಗಿ ರಚಿಸಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

 • ಇತಿಹಾಸ ಭೂತಕೃತಿ ಕಥೆಗೆ ೧೯೧೫ರಲ್ಲಿ ಜಾಗತಿಕ ಬಹೂಮಾನ ಲಭಿಸಿತ್ತು.
 • ಬಿತ್ತಿ ಬೆಳೆದವರು,ಗೌಡರ ಕೋಣ,ಮರೆಯದ ನೆನಪುಗಳು ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
 • ೧೯೭೫ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಅವರನ್ನು ಗೌರವಿಸಿತ್ತು.

ನಿಧನ[ಬದಲಾಯಿಸಿ]

೧೯೮೪ರ ಡಿಸೆಂಬರ್ ೩೧ರಂದು ನಿಧನ ಹೊಂದಿದರು.

ರಾವಬಹಾದ್ದೂರರು ೧೯೮೪ ಡಿಶಂಬರ ೩೧ರಂದು ನಿಧನರಾದರು.