ವಿಷಯಕ್ಕೆ ಹೋಗು

ರಾಬರ್ಟ್ ಫ್ರಾಸ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೀವು ಇತಿಹಾಸಜ್ಞ, ರಾಬರ್ಟ್ I. ಫ್ರಾಸ್ಟ್, ಬಗ್ಗೆ ತಿಳಿದಿರಬಹುದು.

Robert Frost
Robert Frost (1941)
ಜನನRobert Lee Frost
(೧೮೭೪-೦೩-೨೬)೨೬ ಮಾರ್ಚ್ ೧೮೭೪
San Francisco, California,
United States
ಮರಣJanuary 29, 1963(1963-01-29) (aged 88)
Boston, Massachusetts,
United States
ವೃತ್ತಿPoet, Playwright

ರಾಬರ್ಟ್ ಲೀ ಫ್ರಾಸ್ಟ್

[ಬದಲಾಯಿಸಿ]
  • ರಾಬರ್ಟ್ ಲೀ ಫ್ರಾಸ್ಟ್ (ಮಾರ್ಚ್ 26,1874 - ಜನವರಿ 29, 1963) ಒಬ್ಬ ಅಮೇರಿಕನ್ ಕವಿ. ಅವರನ್ನು ಗ್ರಾಮೀಣ ಬದುಕಿನ ವಾಸ್ತವ ವರ್ಣನೆಯ ಜೊತೆಗೆ ಅವರ ಪ್ರಭುತ್ವವಾದ ಅಮೇರಿಕಾದ ವಾಕ್ಪಟುತ್ವದ ಭಾಷೆಯ ಬಳಕೆಗಾಗಿ ಹೆಚ್ಚು ಖ್ಯಾತಿ ಪಡೆದಿದ್ದಾರೆ.[]
  • ಅವರು ಬರಹಗಳಲ್ಲಿ, ಸಾಧಾರಣವಾಗಿ ಇಪ್ಪತ್ತನೇ ಶತಮಾನ ಪೂರ್ವದ ನವೀನ ಇಂಗ್ಲೆಂಡ್ಗ್ರಾಮೀಣ ಜೀವನದ ಸನ್ನಿವೇಶಗಳನ್ನು ಬಳಸಿಕೊಂಡಿದ್ದಾರೆ. ಇವುಗಳನ್ನು ಜಟಿಲ ಸಾಮಾಜಿಕ ಜೊತೆಗೆ ತತ್ವಶಾಸ್ತ್ರದ ವಿಷಯಗಳನ್ನು ಒರೆಗೆ ಹಚ್ಚಲು ತಮ್ಮ ಸಾಹಿತ್ಯ ಬಳಸಿಕೊಳ್ಳುತ್ತಾರೆ.
  • ಇವರು ಜನಪ್ರಿಯ ಮತ್ತು ಪದೇ ಪದೇ-ಉಲ್ಲೇಖವಾಗುವ ಕವಿ. ಫ್ರಾಸ್ಟ್ ಗೆ ಅವರ ಜೀವಿತಾವಧಿಯಲ್ಲಿ ಸತತವಾಗಿ ನಾಲ್ಕು ಬಾರಿ ಕವಿತೆಗಳಿಗಾಗಿ ಪುಲಿಟ್ಸರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಜೀವನ ಚರಿತ್ರೆ

[ಬದಲಾಯಿಸಿ]

ಆರಂಭಿಕ ವರ್ಷಗಳು

[ಬದಲಾಯಿಸಿ]
ರಾಬರ್ಟ್ ಫ್ರಾಸ್ಟ್, ಸುಮಾರು 1910ನೇ ವರ್ಷ
  • ರಾಬರ್ಟ್ ಫ್ರಾಸ್ಟ್ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿ ಪತ್ರಕರ್ತ ವಿಲ್ಲಿಯಮ್ ಪ್ರೆಸ್ಕಾಟ್ ಫ್ರಾಸ್ಟ್, ಜೂ ಮತ್ತು ಇಸಬೆಲ್ಲೇ ಮೂಡಿ ದಂಪತಿಯ ಪುತ್ರನಾಗಿ ಜನಿಸಿದರು.[] ಅವರ ತಾಯಿ ಸ್ಕಾಟಿಷ್ ಮೂಲದವರು ಮತ್ತು ತಂದೆ ಇಂಗ್ಲೆಂಡ್ ನಲ್ಲಿರುವ ಟಿವರ್ಟನ್, ಡೆವಾನ್ ನ ನಿಕೊಲಸ್ ಫ್ರಾಸ್ಟ್ ಮೂಲದವರು. ಇವರು 1634ರಲ್ಲಿ ವೊಲ್ಫ್ರನ ಮೂಲಕ ನ್ಯೂ ಹಾಮ್ಪ್ಶೈರ್ ಗೆ ಪ್ರಯಾಣ ಬೆಳಸಿದರು.[ಸೂಕ್ತ ಉಲ್ಲೇಖನ ಬೇಕು]
  • ಫ್ರಾಸ್ಟ್ ನ ತಂದೆ ಮೊದಲು ಶಿಕ್ಷಕರಾಗಿದ್ದರು. ನಂತರದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಇವಿನಿಂಗ್ ಬುಲ್ಲೆಟಿನ್ ನ ಸಂಪಾದಕರಾದರು. (ಇದು ನಂತರ ಸ್ಯಾನ್ ಫ್ರಾನ್ಸಿಸ್ಕೋ ಎಕ್ಸಾಮಿನರ್ ಜೊತೆ ವಿಲೀನಗೊಂಡಿತು), ಇದರ ಜೊತೆಗೆ ಅವರು ನಗರ ತೆರಿಗೆ ಸಂಗ್ರಾಹಕರಾಗಿ ಕೆಲಸ ಮಾಡಿದರೂ ಯಶಸ್ವು ಕಾಣಲಿಲ್ಲ.
  • ಮೇ 5, 1885ರಲ್ಲಿ ಅವರ ತಂದೆಯ ನಿಧನದ ನಂತರ, ಅವರ ಕುಟುಂಬವು ಲಾರೆನ್ಸ್, ಮಾಸ್ಸಚುಸೆಟ್ಸ್ ನ ಪಕ್ಕದ ಗ್ರಾಮಾಂತರ ಪ್ರದೇಶಕ್ಕೆ ತೆರಳಿತು. ಕುಟುಂಬವು ವಿಲ್ಲಿಯಮ್ ಫ್ರಾಸ್ಟ್, Sr.,( ರಾಬರ್ಟ್ ರ ಅಜ್ಜ) ಆಶ್ರಯಕ್ಕೆ ಬಂದಿತು. ಇವರು ನ್ಯೂ ಇಂಗ್ಲೆಂಡ್ ಗಿರಣಿಯಲ್ಲಿ ಒಬ್ಬ ಮೇಲ್ವಿಚಾರಕರಾಗಿದ್ದರು.
  • ಫ್ರಾಸ್ಟ್ 1892ರಲ್ಲಿ ಲಾರೆನ್ಸ್ ಪ್ರೌಢ ಶಾಲೆಯಲ್ಲಿ ತಮ್ಮ ಪದವಿ ಪಡೆದರು.[]
  • ಫ್ರಾಸ್ಟ್ ರ ತಾಯಿಯು ಅವರನ್ನು ಸ್ವೀಡೆನ್ಬೋರ್ಗಿಯನ್ ಚರ್ಚ್ ಗೆ ಸೇರಿಸಿ ಕ್ರಿಸ್ತೀಕರಿಸಿದರು. ಆದರೆ ಇವರು ವಯಸ್ಕರಾದ ನಂತರ ಅಲ್ಲಿಂದ ಹೊರನಡೆದರು.
  • ಅವರು ನಂತರದಲ್ಲಿ ಹಳ್ಳಿ ಜೀವನದ ಒಡನಾಟದಲ್ಲಿದ್ದರೂ, ಫ್ರಾಸ್ಟ್ ನಗರದಲ್ಲಿ ಬೆಳೆದರು. ಅವರು ತಮ್ಮ ಮೊದಲ ಪದ್ಯವನ್ನು ಅವರ ಪ್ರೌಢಶಾಲೆಯ ಮ್ಯಾಗಸೀನ್ ನಲ್ಲಿ ಬರೆದರು.
  • ಅವರು ಎರಡು ತಿಂಗಳು ಡಾರ್ಟ್ ಮೌತ್ ಕಾಲೇಜ್ ಗೆ ಹೋದರು. ಥೆಟ ಡೆಲ್ಟ ಚಿ ಎಂಬ ವಿದ್ಯಾರ್ಥಿ ಸಂಘವು ಇವರನ್ನು ಸದಸ್ಯರಾಗಿ ಸ್ವೀಕರಿಸಲು ದೀರ್ಘ ಸಮಯ ತೆಗೆದುಕೊಂಡಿತು.
  • ಫ್ರಾಸ್ಟ್ ಮನೆಗೆ ಹಿಂದಿರುಗಿ ಬೋಧನೆಯ ಜೊತೆಗೆ ವಿವಿಧ ಕೆಲಸಗಳನ್ನೂ ಮಾಡಿದರು. ಇದರಲ್ಲಿ ಅವರು ತಮ್ಮ ತಾಯಿಯೊಂದಿಗೆ ಅಶಿಸ್ತಿನ ಹುಡುಗರಿಗೆ ಪಾಠ ಮಾಡಲು ಸಹಾಯ ಮಾಡುವುದು, ದಿನ ಪತ್ರಿಕೆಗಳನ್ನು ಹಂಚುವುದು ಮತ್ತು ಕಾರ್ಖಾನೆಯಲ್ಲಿ ಬಲ್ಬುಗಳ ಫಿಲಮೆಂಟ್ ಗಳನ್ನು ಬದಲಾಯಿಸುವ ಕೆಲಸವೂ ಸೇರಿಕೊಂಡಿತ್ತು. ಅವರು ಈ ಕೆಲಸಗಳಿಂದ ಸಂತುಷ್ಟರಾಗಿರಲಿಲ್ಲ, ಅವರೊಳಗಿನ ಕವಿಯು ಅವರನ್ನು ಪ್ರಚೋದಿಸುತ್ತಿದ್ದ.

ಪ್ರೌಢಾವಸ್ಥೆಯ ವರ್ಷಗಳು

[ಬದಲಾಯಿಸಿ]
"ಮೂರು ಪದಗಳಲ್ಲಿ ನಾನು ಜೀವನದಿಂದ ಕಲಿತ ಎಲ್ಲವನ್ನು ಹೇಳಬಲ್ಲೆ - ಅದು ಸಾಗುತ್ತಿರುತ್ತದೆ" -- ರಾಬರ್ಟ್ ಫ್ರಾಸ್ಟ್
ಇದು ಡೆರ್ರಿ, ನ್ಯೂ ಹಾಮ್ಪ್ಶೈರ್ ನಲ್ಲಿರುವ ಫ್ರಾಸ್ಟ್ ರ ಜಮೀನಿನ ಕಲ್ಲು ಗೋಡೆ, ಇದನ್ನು ಅವರು "ಮೆನ್ಡಿಂಗ್ ವಾಲ್" ಎಂದು ವಿವರಿಸುತ್ತಾರೆ.
  • ಅವರು ತಮ್ಮ ಮೊದಲ ಕವನ "ಮೈ ಬಟರ್ಫ್ಲೈ: ಎನ್ ಎಲಿಜಿ" ಯನ್ನು 1894ರಲ್ಲಿ ( ಇದು ನ್ಯೂ ಯಾರ್ಕ್ ಇಂಡಿಪೆಂಡೆಂಟ್ ನ 1894ರ ನವೆಂಬರ್ 8ರ ಆವೃತ್ತಿಯಲ್ಲಿ ಪ್ರಕಟಗೊಂಡಿತ್ತು.) ಅವರು ಅದನ್ನು ಹದಿನೈದು ಡಾಲರ್ ಗೆ ಮಾರಾಟ ಮಾಡಿದರು.
  • ಈ ಸಾಧನೆಯಿಂದ ಹೆಮ್ಮೆ ಪಟ್ಟುಕೊಂಡ ಅವರು ಎಲಿನೋರ್ ಮಿರಿಯಂ ವೈಟ್ ಮುಂದೆ ಮದುವೆಯ ಪ್ರಸ್ತಾಪವಿರಿಸಿದರು. ಆದರೆ ಎಲಿನೋರ್ ಇದಕ್ಕೆ ಆಕ್ಷೇಪಿಸುತ್ತಾರೆ. ಜೊತೆಗೆ ತಾವು ಮದುವೆ ಮಾಡಿಕೊಳ್ಳುವ ಮುಂಚೆ ತಮ್ಮ ಕಾಲೇಜು ವಿದ್ಯಾಭ್ಯಾಸವನ್ನು(St. ಲಾರೆನ್ಸ್ ವಿಶ್ವವಿದ್ಯಾನಿಲಯದಲ್ಲಿ) ಮುಗಿಸಬೇಕೆಂಬ ಇಚ್ಛೆ ವ್ಯಕ್ತಪಡಿಸುತ್ತಾರೆ.
  • ಫ್ರಾಸ್ಟ್ ನಂತರ ವರ್ಜೀನಿಯ ದಲ್ಲಿರುವ ಗ್ರೇಟ್ ಡಿಸ್ಮಲ್ ಸ್ವಾಮ್ಪ್ ಗೆ ಮೋಜಿನ ಪ್ರವಾಸ ಕೈಗೊಳ್ಳುತ್ತಾರೆ. ಅವರು ಹಿಂದಿರುಗಿದ ಬಳಿಕ ಮತ್ತೊಮ್ಮೆ ಎಲಿನೋರ್ ರ ಮುಂದೆ ಮದುವೆಯ ಬಗ್ಗೆ ಪ್ರಸ್ತಾಪಿಸುತ್ತಾರೆ. ಪದವಿ ಪಡೆದ ಎಲಿನೋರ್ ಪ್ರಸ್ತಾಪವನ್ನು ಒಪ್ಪಿಕೊಳ್ಳುತ್ತಾರೆ. ನಂತರ ಇಬ್ಬರು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಮದುವೆಯಾಗುತ್ತಾರೆ; ಅಲ್ಲಿ ಫ್ರಾಸ್ಟ್ ಮಾನವಿಕ ಶಾಸ್ತ್ರಗಳ ಬಗ್ಗೆ ಎರಡು ವರ್ಷ ಅಧ್ಯಯನ ನಡೆಸುತ್ತಾರೆ.
  • ಅವರು ಹಾರ್ವರ್ಡ್ ನಲ್ಲಿ ಯಶಸ್ವೀ ವಿದ್ಯಾರ್ಥಿಯಾಗಿದ್ದರು. ಆದರೆ ತಮ್ಮ ಬೆಳೆಯುತ್ತಿರುವ ಕುಟುಂಬದ ನೆರವಿಗಾಗಿ ಅಧ್ಯಯನವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು. ಅಜ್ಜ ಫ್ರಾಸ್ಟ್, ತಮ್ಮ ನಿಧನಕ್ಕೆ ಸ್ವಲ್ಪ ಮುಂಚೆ, ನವ ದಂಪತಿಗಳಿಗಾಗಿ ಡೆರ್ರಿ, ನ್ಯೂ ಹಾಮ್ಪ್ಶೈರ್ ನಲ್ಲಿ ಒಂದು ಜಮೀನನ್ನು ಖರೀದಿಸಿದ್ದರು. ಈ ಜಮೀನಿನಲ್ಲಿ ರಾಬರ್ಟ್ ಒಂಬತ್ತು ವರ್ಷಗಳ ಕಾಲ ದುಡಿದರು. ಈ ನಡುವೆ ಬೆಳಗಿನ ಸಮಯದಲ್ಲಿ ಪದ್ಯಗಳನ್ನು ಬರೆದರು. ಜೊತೆಗೆ ಮುಂದೆ ಪ್ರಸಿದ್ಧಿಗೆ ಬಂದ ಹಲವು ಪದ್ಯಗಳನ್ನೂ ಬರೆದರು.
  • ಅಂತಿಮವಾಗಿ ಅವರು ಕೃಷಿ ವೃತ್ತಿಯಲ್ಲಿ ಸೋತ ನಂತರ ಬೋಧನಾ ವೃತ್ತಿಗೆ ಹಿಂದಿರುಗಿ 1906 ರಿಂದ 1911ವರೆಗೂ ಪಿಂಕರ್ಟನ್ ಅಕ್ಯಾಡಮಿ ಯಲ್ಲಿ ಒಬ್ಬ ಇಂಗ್ಲಿಷ್ ಶಿಕ್ಷಕನಾಗಿ ದುಡಿದರು.
  • ನಂತರ ಪ್ಲೈ ಮೌತ್, ನ್ಯೂ ಹಾಮ್ಪ್ಶೈರ್ ನಲ್ಲಿರುವ ನ್ಯೂ ಹಾಮ್ಪ್ಶೈರ್ ನಾರ್ಮಲ್ ಶಾಲೆಯಲ್ಲಿ (ಈಗ ಪ್ಲೈಮೌತ್ ಸ್ಟೇಟ್ ವಿಶ್ವವಿದ್ಯಾಲಯ) ಬೋಧಿಸಿದರು.
  • ಫ್ರಾಸ್ಟ್ 1912ರಲ್ಲಿ ತಮ್ಮ ಕುಟುಂಬದ ಜೊತೆ ಗ್ರೇಟ್ ಬ್ರಿಟೈನ್ಗೆ ಪ್ರವಾಸ ಮಾಡಿದರು. ಅಲ್ಲಿ ಅವರು ಲಂಡನ್ ನ ಹೊರಭಾಗದ ಬೇಕನ್ಸ್ ಫೀಲ್ಡ್ ನಲ್ಲಿ ನೆಲೆಯೂರುವ ಮುಂಚೆ ಗ್ಲಾಸ್ಗೌ ನಲ್ಲಿ ಮೊದಲು ವಾಸಿಸುತ್ತಿದ್ದರು.
  • ಅವರ ಮೊದಲ ಕವಿತಾ ಸಂಗ್ರಹ, ಏ ಬಾಯ್'ಸ್ ವಿಲ್ , ಅದರ ಮುಂದಿನ ವರ್ಷ ಪ್ರಕಟಗೊಂಡಿತು. ಇಂಗ್ಲೆಂಡ್ ನಲ್ಲಿ ಅವರು ಕೆಲವು ಪ್ರಮುಖ ವ್ಯಕ್ತಿಗಳ ಸಂಪರ್ಕಕ್ಕೆ ಬಂದರು. ಇದರಲ್ಲಿ ಎಡ್ವರ್ಡ್ ಥಾಮಸ್ (ಡೈಮಾಕ್ ಕವಿಗಳು ಎಂಬ ಗುಂಪಿನ ಒಬ್ಬ ಸದಸ್ಯ), T. E. ಹ್ಯೂಮ್, ಮತ್ತು ಎಸ್ರ ಪೌಂಡ್ ಕೂಡ ಸೇರಿದ್ದರು.
  • ಫ್ರಾಸ್ಟ್ ಕೃತಿಗಳನ್ನು ವಿಮರ್ಶೆ ಮಾಡಲು (ಫ್ರಾಸ್ಟ್ ರ ಪರವಾದ ಅಭಿಪ್ರಾಯ) ಪೌಂಡ್ ಮೊದಲ ಅಮೆರಿಕನ್ ವಿಮರ್ಶಕರಾಗಿರುತ್ತಿದ್ದರು. ಆದರೆ ಫ್ರಾಸ್ಟ್ ನಂತರ ತಮ್ಮ ಅಮೆರಿಕನ್ ಪದ್ಯರಚನಾ ಸಿದ್ದಾಂತ ಮತ್ತು ಪ್ರಯೋಗವನ್ನು ಪೌಂಡ್ ರು ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಸಮಾನಸ್ಕಂದರಿಂದ ಸುತ್ತುವರಿದ ಫ್ರಾಸ್ಟ್ ಇಂಗ್ಲೆಂಡ್ ನಲ್ಲಿರುವಂತೆಯೇ ತಮ್ಮ ಕೆಲವು ಅತ್ಯುತ್ತಮ ಕೃತಿಗಳನ್ನು ಬರೆದರು.
ರಾಬರ್ಟ್ ಫ್ರಾಸ್ಟ್ ರ ಡೆರ್ರಿ, ನ್ಯೂ ಹಾಮ್ಪ್ಶೈರ್ ನಲ್ಲಿರುವ ಜಮೀನು, ಇಲ್ಲಿ ಅವರು ತಮ್ಮ ಅನೇಕ ಪದ್ಯಗಳನ್ನು ಬರೆದರು. ಇದರಲ್ಲಿ "ಟ್ರೀ ಅಟ್ ಮೈ ವಿಂಡೋ" ಮತ್ತು "ಮೆನ್ಡಿಂಗ್ ವಾಲ್" ಕೂಡ ಸೇರಿದೆ.
  • ಮೊದಲ ವಿಶ್ವಯುದ್ಧ ಪ್ರಾರಂಭವಾಗುತ್ತಿದ್ದಂತೆ, ಫ್ರಾಸ್ಟ್ 1915ರಲ್ಲಿ ಅಮೇರಿಕಾಗೆ ಹಿಂದಿರುಗಿದರು. ಅವರು ಫ್ರಾಂಕೊನಿಯ, ನ್ಯೂ ಹಾಮ್ಪ್ಶೈರ್ ನಲ್ಲಿ ಒಂದು ಜಮೀನು ಖರೀದಿಸಿದರು. ಅಲ್ಲಿ ಅವರು ಬರವಣಿಗೆ, ಭೋದನೆ, ಮತ್ತು ಉಪನ್ಯಾಸಗಳ ವೃತ್ತಿ ಪ್ರಾರಂಭಿಸಿದರು.
  • ಈ ವಸತಿ ನಿವೇಶನವು 1938ರವರೆಗೂ ಫ್ರಾಸ್ಟ್ ರ ಬೇಸಿಗೆ ಕಾಲದ ಬಿಡಾರವಾಗಿತ್ತು. ಇದನ್ನು ಇವತ್ತಿಗೂ 'ದಿ ಫ್ರಾಸ್ಟ್ ಪ್ಲೇಸ್' ಎಂದು ಸಂರಕ್ಷಿಸಲಾಗುತ್ತಿದೆ. ಇದು ಫ್ರಾಂಕೊನಿಯದಲ್ಲಿರುವ ಒಂದು ಸಂಗ್ರಹಾಲಯ ಮತ್ತು ಕಾವ್ಯ ಸಮಾಲೋಚನಾ ಸ್ಥಳ.
  • ಈ ನಡುವೆ 1916-20, 1923-24, ಮತ್ತು 1927-1938ರ ಅವಧಿಯಲ್ಲಿ, ಫ್ರಾಸ್ಟ್ ಮಾಸ್ಸಚುಸೆಟ್ಸ್ ನಲ್ಲಿರುವ ಅಮ್ಹೆರ್ಸ್ಟ್ ಕಾಲೇಜ್ ನಲ್ಲಿ ಇಂಗ್ಲಿಷ್ ಭೋದನೆ ಮಾಡಿದರು. ಇಲ್ಲಿ ಅವರು ವಿದ್ಯಾರ್ಥಿಗಳಿಗೆ ತಮ್ಮ ಅಭಿಪ್ರಾಯವನ್ನು ಬರವಣಿಗೆಯ ಮೂಲಕ ವರದಿ ಮಾಡುವಂತೆ ವಿಶೇಷ ಪ್ರೋತ್ಸಾಹ ನೀಡಿದರು.
  • ಈ ಮಧ್ಯೆ 1921 ರಿಂದ 1963ರವರೆಗೂ ನಲವತ್ತೆರೆಡು ವರ್ಷಗಳ ಕಾಲ, ಫ್ರಾಸ್ಟ್ ಹೆಚ್ಚು ಕಡಿಮೆ ಪ್ರತಿ ಬೇಸಿಗೆ ಮತ್ತು ಶರತ್ಕಾಲದಲ್ಲಿ ರಿಪ್ಟನ್, ವರ್ಮೊಂಟ್ ನ ಪರ್ವತ ಕ್ಷೇತ್ರದ ಮಿಡಲ್ ಬರಿ ಕಾಲೇಜ್ ನ ಬ್ರೆಡ್ ಲೋಫ್ ಸ್ಕೂಲ್ ಆಫ್ ಇಂಗ್ಲಿಷ್ ನಲ್ಲಿ ಬೋಧಿಸುತ್ತಿ ದ್ದರು. ಇವರನ್ನು ಶಾಲೆಯ ಅಭಿವೃದ್ದಿ ಮತ್ತು ಅದರ ಬರವಣಿಗೆಯ ಯೋಜನೆಗಳಲ್ಲಿ ಪ್ರಮುಖ ಪ್ರಭಾವ ಬೀರಿದ್ದಾರೆಂದು ಪ್ರಶಂಸಿಸಲಾಗಿದೆ; ಬ್ರೆಡ್ ಲೋಫ್ ಬರಹಗಾರರ ಸಮಾಲೋಚನೆಯು ಫ್ರಾಸ್ಟ್ ರ ಕಾಲದಲ್ಲಿ ಪ್ರಸಿದ್ಧಿ ಪಡೆಯಿತು.[ಸೂಕ್ತ ಉಲ್ಲೇಖನ ಬೇಕು]
  • ಈಗ ಕಾಲೇಜ್ ಅವರ ಹಳೆಯ ರಿಪ್ಟನ್ ಜಮೀನಿನ ಒಡೆತನ ಹೊಂದುವುದರ ಜೊತೆಗೆ ಅದನ್ನು ಬ್ರೆಡ್ ಲೋಫ್ ಆವರಣದ ಸಮೀಪ ರಾಷ್ಟ್ರೀಯ ಐತಿಹಾಸಿಕ ಸ್ಥಳವೆಂದು ಸಂರಕ್ಷಿಸಲಾಗುತ್ತಿದೆ.
  • ಫ್ರಾಸ್ಟ್ 1921ರಲ್ಲಿ ಆನ್ ಆರ್ಬರ್ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಗೌರವ ಬೋಧಕರಾಗಲು ಒಪ್ಪಿಕೊಂಡರು. ಇಲ್ಲಿ ಅವರು 1927ರವರೆಗೂ ವಾಸಿಸಿದರು. ಅಲ್ಲಿ ಅವರಿಗೆ ಗೌರವ ಸಾಹಿತಿ ಎಂಬ ಕಾರಣದಿಂದಾಗಿ ಜೀವಮಾನದವರೆಗೂ ಬೋಧಕ ಹುದ್ದೆಯನ್ನು ನೀಡಿ ಗೌರವಿಸಲಾಯಿತು.[]
  • ರಾಬರ್ಟ್ ಫ್ರಾಸ್ಟ್ ನ ಆನ್ ಆರ್ಬರ್ ನಿವಾಸವು ಡಿಯರ್ ಬಾರ್ನ್, ಮಿಚಿಗನ್ ನಲ್ಲಿರುವ ದಿ ಹೆನ್ರಿ ಫೋರ್ಡ್ ಮ್ಯೂಸಿಯಂನಲ್ಲಿ ಸ್ಥಾಪಿತವಾಗಿದೆ. ಫ್ರಾಸ್ಟ್ 1927ರಲ್ಲಿ ಅಮ್ಹೆರ್ಸ್ಟ್ ಗೆ ಹಿಂದಿರುಗಿದರು. ಅವರು 1940ರಲ್ಲಿ ದಕ್ಷಿಣ ಮಿಯಾಮಿ, ಫ್ಲೋರಿಡಾದಲ್ಲಿ ಒಂದು5-acre (2.0 ha)ಜಮೀನು ಖರೀದಿಸಿ, ಅದಕ್ಕೆ ಪೆನ್ಸಿಲ್ ಪೈನ್ಸ್ ಎಂದು ಹೆಸರಿಸಿದರು; ಅವರು ತಮ್ಮ ಮುಂದಿನ ಚಳಿಗಾಲಗಳನ್ನು ಅಲ್ಲೇ ಕಳೆದರು.[]
  • ಹಾರ್ವರ್ಡ್ ನ 1965ರ ಅಲುಮ್ನಿ ವಿವರ ಪತ್ರವು ಫ್ರಾಸ್ಟ್ ಅಲ್ಲಿ ಗೌರವ ಪದವಿ ಪಡೆದಿದ್ದರೆಂಬುದನ್ನು ಸೂಚಿಸುತ್ತದೆ. ಫ್ರಾಸ್ಟ್ ಕಾಲೇಜ್ ಗೆ ಹೋಗಿ ಪದವಿ ಪಡೆಯದಿದ್ದರೂ, 40ಕ್ಕೂ ಹೆಚ್ಚು ಗೌರವ ಪದವಿಗಳಿಗೆ ಭಾಜನರಾಗಿದ್ದರು. ಇದರಲ್ಲಿ ಪ್ರಿನ್ಸ್ಟನ್, ಆಕ್ಸ್ಫಾರ್ಡ್ ಮತ್ತು ಕೆಂಬ್ರಿಡ್ಜ್ ವಿಶ್ವವಿದ್ಯಾಲಯಗಳೂ ಒಳಗೊಂಡಿವೆ;
  • ಇವರು ಡಾರ್ಟ್ ಮೌತ್ ಕಾಲೇಜ್ ನಲ್ಲಿ ಎರಡು ಬಾರಿ ಗೌರವ ಪದವಿ ಪಡೆದ ಏಕೈಕ ವ್ಯಕ್ತಿ. ಅವರ ಜೀವಿತಾವಧಿಯಲ್ಲಿ ಫೇರ್ಫಾಕ್ಸ್, ವರ್ಜೀನಿಯ ದ ದಿ ರಾಬರ್ಟ್ ಫ್ರಾಸ್ಟ್ ಮಿಡಲ್ ಸ್ಕೂಲ್ ಗೆ, ಮತ್ತು ಅಮ್ಹೆರ್ಸ್ಟ್ ಕಾಲೇಜ್ ನ ಮುಖ್ಯ ಗ್ರಂಥಾಲಯಕ್ಕೆ ಅವರ ಹೆಸರಿಡಲಾಗಿದೆ.
  • ಫ್ರಾಸ್ಟ್ ತಮ್ಮ ಕವಿತೆಗಳ ಬಗ್ಗೆ ಭಾಷಣ ಮತ್ತು ಕವನ ವಾಚನವನ್ನು ಜನವರಿ 20, 1961ರಲ್ಲಿ ಅಧ್ಯಕ್ಷ ಜಾನ್ F. ಕೆನ್ನೆಡಿ ಯವರ ಅಧಿಕಾರ ಸ್ವೀಕಾರದ ಸಮಯದಲ್ಲಿ ಮಾಡಿದರು. ಅವರು ಎರಡು ವರ್ಷದ ನಂತರ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆಯ ತೊಡಕಿನಿಂದ ಜನವರಿ 29, 1963ರಲ್ಲಿ ಬಾಸ್ಟನ್ ನಲ್ಲಿ ನಿಧನ ಹೊಂದಿದರು. ಅವರ ಅಂತ್ಯಕ್ರಿಯೆಯನ್ನು ವರ್ಮೊಂಟ್ ನಲ್ಲಿರುವ ಬೆನ್ನಿಂಗ್ಟನ್ ನ ಹಳೆ ಬೆನ್ನಿಂಗ್ಟನ್ ಸ್ಮಶಾನದಲ್ಲಿ ನಡೆಸಲಾಯಿತು. ಅವರ ಸಮಾಧಿಯ ಮೇಲೆ ಅವರ ಒಂದು ಪದ್ಯದ ಸಾಲು: "I had a lover's quarrel with the world" ಎಂದು ಬರೆಯಲಾಗಿದೆ.
  • (ಫ್ರಾಸ್ಟ್ ರ ಕವಿತೆಗಳನ್ನು ಆಂತೋಲಾಜಿ ಆಫ್ ಮಾಡ್ರನ್ ಅಮೆರಿಕನ್ ಪೋಯಟ್ರಿ (ಆಕ್ಸ್ಫಾರ್ಡ್ ವಿಶ್ವವಿದ್ಯಾಲಯದ ಮುದ್ರಣಾಲಯ) ಯಲ್ಲಿ ವಿಮರ್ಶಿಸಲಾಗಿದೆ. ಇದರಲ್ಲಿ ಪ್ರಸ್ತಾಪಿಸಿರುವಂತೆ ಕೆಲವು ಬಾರಿ ಸಾಮಾನ್ಯ ಆಕರ್ಷಣೆ ಮತ್ತು ಹಳ್ಳಿಯ ಚಿತ್ರಣದ ಹೊರನೋಟದ ಆಚೆಗೂ ಫ್ರಾಸ್ಟ್ ರ ಕವಿತೆಗಳು ಸಾಧಾರಣವಾಗಿ ಹತಾಶೆ ಮತ್ತು ದಿಗಿಲು-ಹುಟ್ಟಿಸುವ ಒಳ-ಲಕ್ಷಣಗಳನ್ನು ಹೊಂದಿರುತ್ತವೆ. ಇವುಗಳನ್ನು ಸಾಮಾನ್ಯವಾಗಿ ಗುರುತಿಸಲಾಗಿರುವುದಿಲ್ಲ ಅಥವಾ ವಿಶ್ಲೇಷಿಸಲಾಗಿರುವುದಿಲ್ಲ.[]
  • ಫ್ರಾಸ್ಟ್ ತಾವೇ ಒದಗಿಸಿದ ವಿಷಯ-ವಸ್ತುವಿನ ಒಂದು ಮೂಲ ಸಂಗ್ರಹವನ್ನು, ಅಮ್ಹೆರ್ಸ್ಟ್, ಮಾಸ್ಸಚುಸೆಟ್ಸ್ ನ ಜೋನೆಸ್ ಗ್ರಂಥಾಲಯದ ವಿಶೇಷ ಸಂಗ್ರಹಗಳ ವಿಭಾಗದಲ್ಲಿ ಕಾಣಬಹುದು. ಸಂಗ್ರಹವು ಹೆಚ್ಚು ಕಡಿಮೆ ಹನ್ನೆರೆಡು ಸಾವಿರ ವಸ್ತುಗಳನ್ನು ಹೊಂದಿದೆ. ಇದರಲ್ಲಿ ಕವನಗಳ ಮೂಲ ಹಸ್ತಪ್ರತಿ ಮತ್ತು ಪತ್ರ, ಪತ್ರ ವ್ಯವಹಾರ, ಮತ್ತು ಛಾಯಾಚಿತ್ರ ಅಲ್ಲದೆ ದೃಶ್ಯ ಮತ್ತು ಶ್ರಾವ್ಯ ಮುದ್ರಿಕೆಗಳನ್ನು ಹೊಂದಿದೆ.[]

ವೈಯಕ್ತಿಕ ಜೀವನ

[ಬದಲಾಯಿಸಿ]
  • ರಾಬರ್ಟ್ ಫ್ರಾಸ್ಟ್ ರ ವೈಯುಕ್ತಿಕ ಜೀವನವು ದುಃಖ ಮತ್ತು ನಷ್ಟದಿಂದ ಕೂಡಿದೆ. ಅವರ ತಂದೆ ಕ್ಷಯರೋಗ ದಿಂದ 1885ರಲ್ಲಿ ತಮ್ಮ ಕುಟುಂಬಕ್ಕಾಗಿ ಕೇವಲ $8 ನ್ನು ಬಿಟ್ಟು ಮರಣ ಹೊಂದಿದಾಗ ಫ್ರಾಸ್ಟ್ ಗೆ 11 ವರ್ಷ. ಫ್ರಾಸ್ಟ್ ರ ತಾಯಿ 1900ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು. ಫ್ರಾಸ್ಟ್ 1920ರಲ್ಲಿ ತಮ್ಮ ಕಿರಿಯ ಸಹೋದರಿ, ಜೆನ್ನಿಯನ್ನು ಮಾನಸಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಬೇಕಾಯಿತು. ಅಲ್ಲಿ ಅವಳು ಒಂಬತ್ತು ವರ್ಷಗಳ ಬಳಿಕ ಮರಣ ಹೊಂದಿದಳು. ಮಾನಸಿಕ ಅಸ್ವಸ್ಥತೆಯು ಫ್ರಾಸ್ಟ್ ರ ಕುಟುಂಬವನ್ನು ಮೇಲ್ನೋಟಕ್ಕೆ ಬೆನ್ನಟ್ಟಿದಂತೆ ಕಾಣುತ್ತದೆ. ಅವರು ಮತ್ತು ಅವರ ತಾಯಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಜೊತೆಗೆ ಅವರ ಪುತ್ರಿ ಇರ್ಮಾ ಳನ್ನು ಕೂಡ 1947ರಲ್ಲಿ ಚಿಕಿತ್ಸೆಗಾಗಿ ಮಾನಸಿಕ ಆಸ್ಪತ್ರೆಗೆ ಸೇರಿಸಲಾಗಿತ್ತು. ಫ್ರಾಸ್ಟ್ ರ ಪತ್ನಿ, ಎಲಿನೋರ್, ಕೂಡ ಹಲವಾರು ಬಾರಿ ಮಾನಸಿಕ ಖಿನ್ನತೆ ಅನುಭವಿಸಿದರು.[]
  • ಎಲಿನೋರ್ ಮತ್ತು ರಾಬರ್ಟ್ ಫ್ರಾಸ್ಟ್ ದಂಪತಿಗೆ ಆರು ಜನ ಮಕ್ಕಳು: ಮಗ ಎಲ್ಲಿಯೋಟ್ (1896-1904, ಕಾಲರಾದಿಂದ ಮರಣ ಹೊಂದಿದ), ಮಗಳು ಲೆಸ್ಲೆಯ್ ಫ್ರಾಸ್ಟ್ ಬಾಲ್ಲನ್ಟೈನ್ (1899-1983), ಮಗ ಕ್ಯಾರೊಲ್ (1902-1940 ಆತ್ಮಹತ್ಯೆಗೆ ಶರಣಾದ), ಮಗಳು ಇರ್ಮಾ(1903-1967), ಮಗಳು ಮರ್ಜೋರಿ (1905-1934, ಮಗುವಿನ ಜನನದ ಬಳಿಕ ಹೆರಿಗೆಯ ಜ್ವರದಿಂದ ಅಸು ನೀಗಿದಳು), ಇನ್ನೊಬ್ಬ ಮಗಳು ಎಲಿನೋರ್ ಬೆಟ್ಟಿನಾ( 1907 ರಲ್ಲಿ ಜನಿಸಿದ ಮೂರು ದಿನಗಳ ಬಳಿಕ ಮರಣಿಸಿದಳು).
  • ಕೇವಲ ಲೆಸ್ಲೆಯ್ ಮತ್ತು ಇರ್ಮಾ ತಮ್ಮ ತಂದೆಗಿಂತ ದೀರ್ಘಕಾಲ ಬದುಕಿದರು. ಫ್ರಾಸ್ಟ್ ರ ಪತ್ನಿ ತಮ್ಮ ಜೀವನದುದ್ದಕ್ಕೂ ಹೃದಯರೋಗದ ಸಮಸ್ಯೆಯಿಂದ ಬಳಲಿದರು. 1937ರಲ್ಲಿ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಇಸವಿ 1938ರಲ್ಲಿ ಹೃದಯ ಸ್ತಂಭನ ದಿಂದ ಮರಣ ಹೊಂದಿದರು.[]

ಆಯ್ದ ಕೃತಿಗಳು

[ಬದಲಾಯಿಸಿ]

ಕವನಗಳು

[ಬದಲಾಯಿಸಿ]

ಕವನ ಸಂಗ್ರಹಗಳು

[ಬದಲಾಯಿಸಿ]
ಇದು ಮೊದಲ ಮೂರು ಸಂಪುಟಗಳ ಕವಿತೆಗಳನ್ನು ಮತ್ತು ದಿ ರನ್ ಅವೆ ಪದ್ಯವನ್ನು ಒಳಗೊಂಡಿದೆ.
  • ನ್ಯೂ ಹಾಮ್ಪ್ಶೈರ್ (ಹೊಲ್ಟ್, 1923; ಗ್ರಾಂಟ್ ರಿಚರ್ಡ್ಸ್, 1924)
  • ಅನೇಕ ಕಿರು ಪದ್ಯಗಳು (ಹೊಲ್ಟ್, 1924) [೧]
  • ಆಯ್ದ ಕವನಗಳು (ಹೊಲ್ಟ್, 1928)
  • ವೆಸ್ಟ್-ರನ್ನಿಂಗ್ ಬ್ರೂಕ್ (ಹೊಲ್ಟ್, 1928? 1929)
  • ದಿ ಲವ್ಲಿ ಶಲ್ ಬೀ ಚೂಸರ್ಸ್ (ರಾನ್ಡಂ ಹೌಸ್, 1929)
  • ಕಲ್ಲೆಕ್ಟ್ಟೆಡ್ ಪೋಯಮ್ಸ್ ಆಫ್ ರಾಬರ್ಟ್ ಫ್ರಾಸ್ಟ್ (ಹೊಲ್ಟ್, 1930; ಲಾಂಗ್ಮನ್ಸ್, ಗ್ರೀನ್, 1930)
  • ದಿ ಲೋನ್ ಸ್ಟೈಕರ್ (Knopf, 1933)
  • ಆಯ್ದ ಕವನಗಳು: ಮೂರನೇ ಸಂಪುಟ (ಹೊಲ್ಟ್, 1934)
  • ಮೂರು ಕವಿತೆಗಳು (ಬೇಕರ್ ಗ್ರಂಥಾಲಯ, ಡಾರ್ಟ್ ಮೌತ್ ಕಾಲೇಜ್, 1935)
  • ದಿ ಗೋಲ್ಡ್ ಹೆಸ್ಪೆರಿಡೀ (ಬಿಬ್ಲಿಒಫಿಲ್ ಪ್ರೆಸ್, 1935)
  • ಫ್ರಂ ಸ್ನೋ ಟು ಸ್ನೋ (ಹೊಲ್ಟ್, 1936)
  • ಏ ಫರ್ದರ್ ರೇಂಜ್ (ಹೊಲ್ಟ್, 1936; ಕೇಪ್, 1937)
  • ಕಲ್ಲೆಕ್ಟೆಡ್ ಪೋಯಮ್ಸ್ ಆಫ್ ರಾಬರ್ಟ್ ಫ್ರಾಸ್ಟ್ (ಹೊಲ್ಟ್, 1939; ಲಾಂಗ್ಮನ್ಸ್, ಗ್ರೀನ್, 1939)
  • ಏ ವಿಟ್ನೆಸ್ ಟ್ರೀ (ಹೊಲ್ಟ್, 1942; ಕೇಪ್, ೧೯೪೩)
  • ಕಂ ಇನ್, ಮತ್ತು ಇತರ ಕವನಗಳು (1943)
  • ಸ್ಟೀಪಲ್ ಬುಶ್ (ಹೊಲ್ಟ್, 1947)
  • ರಾಬರ್ಟ್ ಫ್ರಾಸ್ಟ್ ರ ಸಂಪೂರ್ಣ ಕವಿತೆಗಳು , 1949 (ಹೊಲ್ಟ್, 1949; ಕೇಪ್, 1951)
  • ಹಾರ್ಡ್ ನಾಟ್ ಟು ಬಿ ಕಿಂಗ್ (ಹೌಸ್ ಆಫ್ ಬುಕ್ಸ್, 1951)
  • ಅಫೋರ್ಸೆಡ್ (ಹೊಲ್ಟ್, 1954)
  • ಏ ರೆಮೆಮ್ಬ್ರೆನ್ಸ್ ಕಲ್ಲೆಕ್ಶನ್ ಆಫ್ ನ್ಯೂ ಪೋಯಮ್ಸ್ ಹೊಲ್ಟ್, 1959)
  • ಯು ಕಂ ಟೂ (ಹೊಲ್ಟ್, 1959; ಬೊಡ್ಲೆಯ್ ಹೆಡ್, 1964)
  • ಇನ್ ದಿ ಕ್ಲಿಯರಿಂಗ್ (ಹೊಲ್ಟ್ ರಿನೆಹಾರ್ಟ್ & ವಿನ್ಸ್ಟನ್, 1962)
  • ದಿ ಪೋಯಟ್ರಿ ಆಫ್ ರಾಬರ್ಟ್ ಫ್ರಾಸ್ಟ್ (ನ್ಯೂ ಯಾರ್ಕ್, 1969)
  • ಏ ಫರ್ದರ್ ರೇಂಜ್ ( ಫರ್ದರ್ ರೇಂಜ್ ಎಂದು 1926ರಲ್ಲಿ ಪ್ರಕಟವಾಯಿತು, ಹೊಲ್ಟ್ ನ್ಯೂ ಪೋಯಮ್ಸ್ ಎಂದು 1936; ಕೇಪ್, 1937 ಎಂದು ಪ್ರಕಟಮಾಡಿತು)
  • ನಥಿಂಗ್ ಗೋಲ್ಡ್ ಕ್ಯಾನ್ ಸ್ಟೇ
  • ವಾಟ್ ಫಿಫ್ಟಿ ಸೆಡ್
  • ಫೈರ್ ಅಂಡ್ ಐಸ್
  • ಏ ಡ್ರಂಲಿನ್ ವುಡ್ಚಕ್

ನಾಟಕಗಳು

[ಬದಲಾಯಿಸಿ]
  • ಏ ವೇ ಔಟ್: ಏಕಾಂಕ ನಾಟಕ (ಹಾರ್ಬರ್ ಪ್ರೆಸ್, 1929)
  • ದಿ ಕೌ'ಸ್ ಇನ್ ದಿ ಕಾರ್ನ್ : ಒಂದು ಪ್ರಾಸಬದ್ದ ಐರಿಶ್ ಏಕಾಂಕ ನಾಟಕ (ಸ್ಲೈಡ್ ಮೌಂಟೈನ್ ಪ್ರೆಸ್, 1929).
  • ಏ ಮಾಸ್ಕ್ ಆಫ್ ರೀಸನ್ (ಹೊಲ್ಟ್, 1945).
  • ಏ ಮಾಸ್ಕ್ ಆಫ್ ಮರ್ಸಿ (ಹೊಲ್ಟ್, 1947).
  • ದಿ ಲೆಟರ್ಸ್ ಆಫ್ ರಾಬರ್ಟ್ ಫ್ರಾಸ್ಟ್ ಟು ಲುಯಿಸ್ ಅಂಟರ್ಮೆಯೇರ್ (ಹೊಲ್ಟ್, ರಿನೆಹಾರ್ಟ್ & ವಿನ್ಸ್ಸ್ಟನ್, 1963; ಕೇಪ್, 1964).
  • ರಾಬರ್ಟ್ ಫ್ರಾಸ್ಟ್ ಅಂಡ್ ಜಾನ್ ಬಾರ್ಲೆಟ್: ದಿ ರೆಕಾರ್ಡ್ ಆಫ್ ಏ ಫ್ರೆಂಡ್ ಶಿಪ್ , ಬೈ ಮಾರ್ಗರೆಟ್ ಬಾರ್ಲೆಟ್ ಆನ್ಡರ್ಸನ್ (ಹೊಲ್ಟ್, ರಿನೆಹಾರ್ಟ್ & ವಿನ್ಸ್ಸ್ಟನ್ , 1963).
  • ಸೆಲೆಕ್ಟೆಡ್ ಲೆಟರ್ಸ್ ಆಫ್ ರಾಬರ್ಟ್ ಫ್ರಾಸ್ಟ್ (ಹೊಲ್ಟ್, ರಿನೆಹಾರ್ಟ್ & ವಿನ್ಸ್ಟನ್, 1964).
  • ಇಂಟರ್ವ್ಯೂಸ್ ವಿಥ್ ರಾಬರ್ಟ್ ಫ್ರಾಸ್ಟ್ (ಹೊಲ್ಟ್, ರಿನೆಹಾರ್ಟ್ & ವಿನ್ಸ್ಟನ್, 1966; ಕೇಪ್, 1967).
  • ಫ್ಯಾಮಿಲಿ ಲೆಟರ್ಸ್ ಆಫ್ ರಾಬರ್ಟ್ ಅಂಡ್ ಎಲಿನೋರ್ ಫ್ರಾಸ್ಟ್ (ಸ್ಟೇಟ್ ಯುನಿವರ್ಸಿಟಿ ಆಫ್ ನ್ಯೂ ಯಾರ್ಕ್ ಪ್ರೆಸ್, 1972).
  • ರಾಬರ್ಟ್ ಫ್ರಾಸ್ಟ್ ಅಂಡ್ ಸಿಡ್ನಿ ಕಾಕ್ಸ್: ಫಾರ್ಟಿ ಇಯರ್ಸ್ ಆಫ್ ಫ್ರೆಂಡ್ ಶಿಪ್ (ಯುನಿವರ್ಸಿಟಿ ಪ್ರೆಸ್ ಆಫ್ ನ್ಯೂ ಇಂಗ್ಲೆಂಡ್, 1981).
  • ದಿ ನೋಟ್ ಬುಕ್ಸ್ ಆಫ್ ರಾಬರ್ಟ್ ಫ್ರಾಸ್ಟ್ , ರಾಬರ್ಟ್ ಫಾಗ್ಗೆನ್ ರ ಪರಿಷ್ಕರಣೆ (ಹಾರ್ವರ್ಡ್ ಯುನಿವರ್ಸಿಟಿ ಪ್ರೆಸ್, ಜನವರಿ 2007). [೨] Archived 2009-11-26 ವೇಬ್ಯಾಕ್ ಮೆಷಿನ್ ನಲ್ಲಿ.

ಪ್ರಕಟಣಾ ಶೀರ್ಷಿಕೆ

[ಬದಲಾಯಿಸಿ]

ಪುಲಿಟ್ಸರ್ ಪ್ರಶಸ್ತಿಗಳು

[ಬದಲಾಯಿಸಿ]
  • ನ್ಯೂ ಹಾಮ್ಪ್ಶೈರ್: ಏ ಪೋಯಂ ವಿಥ್ ನೋಟ್ಸ್ ಅಂಡ್ ಗ್ರೇಸ್ ನೋಟ್ಸ್ ಗಾಗಿ 1924ರಲ್ಲಿ ಪ್ರಶಸ್ತಿ.
  • ಕವನ ಸಂಗ್ರಹ ಕ್ಕೆ 1931ರಲ್ಲಿ ಪ್ರಶಸ್ತಿ.
  • ಏ ಫಾರ್ದರ್ ರೇಂಜ್ ಗಾಗಿ 1937ರಲ್ಲಿ ಪ್ರಶಸ್ತಿ.
  • ಏ ವಿಟ್ನೆಸ್ಸ್ ಟ್ರೀ ಗಾಗಿ 1934ರಲ್ಲಿ ಪ್ರಶಸ್ತಿ

ಟಿಪ್ಪಣಿಗಳು

[ಬದಲಾಯಿಸಿ]
  1. ೧.೦ ೧.೧ Robert-Frost "Robert Frost". Encyclopædia Britannica (Online edition ed.). 2008. Retrieved 2008-12-21. {{cite encyclopedia}}: |edition= has extra text (help); Check |url= value (help)
  2. Ehrlich, Eugene (1982). The Oxford Illustrated Literary Guide to the United States. Vol. vol. 50. New York: Oxford University Press. ISBN 0195031865. {{cite book}}: |volume= has extra text (help); Unknown parameter |coauthors= ignored (|author= suggested) (help)
  3. ೩.೦ ೩.೧ ೩.೨ Frost, Robert (1995). Collected Poems, Prose, & Plays. The Library of America. Vol. vol. 81. New York: Library of America. ISBN 188301106X. {{cite book}}: |volume= has extra text (help); Unknown parameter |coauthors= ignored (|author= suggested) (help)
  4. Muir, Helen (1995). Frost in Florida. Valiant Press. p. 41. ISBN 0963346164.
  5. Nelson, Cary (2000). Anthology of Modern American Poetry. New York: Oxford University Press. p. 84. ISBN 0195122704. {{cite book}}: Cite has empty unknown parameter: |coauthors= (help)
  6. .org/specialcollections /collections/ frost/ frost_print.html#contact "Robert Frost Collection". Jones Library, Inc. website, Amherst, Massachusetts. Retrieved 2009-03-28. {{cite web}}: Check |url= value (help)

ಮೂಲಗಳು

[ಬದಲಾಯಿಸಿ]
  • Pritchard, William H. (2000). "Frost's Life and Career". Archived from the original (http) on ಡಿಸೆಂಬರ್ 16, 2008. Retrieved March 18, 2001.
  • Taylor, Welford Dunaway (1996). Robert Frost and J.J. Lankes: Riders on Pegasus. Hanover, New Hampshire: Dartmouth College Library. ASIN B0006FAO4Q.
  • ಬರ್ಲಿಂಗ್ಟನ್ ಫ್ರೀ ಪ್ರೆಸ್, ಜನವರಿ 8, 2008ರ ಬರಹ: ನಾಶವಾದ ಫ್ರಾಸ್ಟ್ ರ ಮನೆ ಒಂದು ಗುಂಪನ್ನು ಸೆಳೆಯಿತು
  • ಪದ್ಯ, ಗದ್ಯ, & ನಾಟಕಗಳ ಸಂಗ್ರಹ. 10/1995 ಲೈಬ್ರರಿ ಆಫ್ ಅಮೇರಿಕ. ರಾಬರ್ಟ್ ಫ್ರೋಸ್ಟ್ ರಿಚರ್ಡ್ ಪೋಯರಿಯರ್ ಮತ್ತು ಮಾರ್ಕ್ ರಿಚರ್ಡ್ಸನ್ ಪರಿಷ್ಕರಣೆ. Trade ISBN 1-883011-06-X.[೩][೪]

ಹೊರಗಿನ ಕೊಂಡಿಗಳು

[ಬದಲಾಯಿಸಿ]