ರತ್ನಗಂಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Caesalpinia pulcherrima
Caesalpinia pulcherrima f. rosea
buds and flowers
Conservation status
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಫ್ಯಾಬೇಲ್ಸ್
ಕುಟುಂಬ: ಫ್ಯಾಬೇಸಿಯೇ
ಉಪಕುಟುಂಬ: ಸಿಸ್ಯಾಲ್ಪಿನಿಯಾಯ್ಡಿಯೇ
ಕುಲ: ಸಿಸಾಲ್‍ಪಿನಿಯಾ
ಪ್ರಜಾತಿ:
C. pulcherrima
Binomial name
Caesalpinia pulcherrima
Synonyms[೨]
  • Caesalpinia lutea
  • Poinciana pulcherrima L.

ರತ್ನಗಂಧಿ ಲೆಗ್ಯೂಮಿನೋಸೀ ಕುಟುಂಬದ ಸಿಸಾಲ್‌ಪಿನೇ ಉಪಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯ (ಪೀಕಾಕ್ ಕೋಂಬ್ ಫ್ಲವರ್). ಕೆಂಜಿಗೆಗಿಡ್ಡ ಪರ್ಯಾಯ ನಾಮ. ಸೀಸಾಲ್‌ಪಿನಿಯ ಪಲ್ಚರೈಮ ಇದರ ವೈಜ್ಞಾನಿಕ ಹೆಸರು. ಇದು ಅಮೇರಿಕಾ ಖಂಡಗಳ ಉಷ್ಣವಲಯ ಮತ್ತು ಉಪೋಷ್ಣವಲಯಗಳಿಗೆ ಸ್ಥಳೀಯವಾಗಿದೆ. ಇದು ವೆಸ್ಟ್ ಇಂಡೀಸ್‍ಗೆ ಸ್ಥಳೀಯವಾಗಿರಬಹುದು,[೩] ಆದರೆ ವ್ಯಾಪಕ ಬೇಸಾಯದ ಕಾರಣದಿಂದ ಇದರ ನಿಖರವಾದ ಮೂಲ ಗೊತ್ತಿಲ್ಲ. ಭಾರತವೂ ಸೇರಿದಂತೆ ಉಷ್ಣವಲಯದ ಹಲವಾರು ದೇಶಗಳಲ್ಲಿ ಇದನ್ನು ಕಾಣಬಹುದು.

ಗುಣಲಕ್ಷಣಗಳು[ಬದಲಾಯಿಸಿ]

ಇದು ಸುಮಾರು ೩.೭ ಮೀಟರ್ ಎತ್ತರ ಬೆಳೆಯುವ ಪೊದೆರೂಪದ ಮರ. ಎಲೆಗಳು ಸಂಯುಕ್ತ ಮಾದರಿಯವು; ಒಂದೊಂದು ಎಲೆಯಲ್ಲೂ ೮.೧೬ ಕಿರುಎಲೆಗಳಿರುವುವು. ಹೂಗಳು ರೆಂಬೆಗಳ ತುದಿಗಳಲ್ಲಿ ರೇಸಿಮೋಸ್ ಮಾದರಿಯ ಗೊಂಚಲುಗಳಲ್ಲಿ ಅರಳುವುವು. ದಳಗಳು ಕೆಂಪು ಇಲ್ಲವೆ ಹಳದಿ ಬಣ್ಣದವಾಗಿದ್ದು ಹೂಗಳ ಆಕರ್ಷಕ ಗುಣಕ್ಕೆ ಕಾರಣವಾಗಿದೆ.

ಕೃಷಿ[ಬದಲಾಯಿಸಿ]

ರತ್ನಗಂಧಿ ಗಿಡವನ್ನು ಬೀಜಗಳಿಂದ ವೃದ್ಧಿಸಬಹುದು.

ಉಪಯೋಗಗಳು[ಬದಲಾಯಿಸಿ]

ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲದೆ ಈ ಸಸ್ಯವನ್ನು ಔಷಧಿಗಾಗಿಯೂ ಬಳಸುವುದುಂಟು. ಸೊಪ್ಪಿನ ಕಷಾಯ ಗರ್ಭಸ್ರಾವಕಾರಕ. ಆಮಶಂಕೆ, ಚರ್ಮರೋಗ ಚಿಕಿತ್ಸೆಯಲ್ಲೂ ಕಷಾಯವನ್ನು ಉಪಯೋಗಿಸುವುದಿದೆ. ಹೂವಿನಲ್ಲಿ ಗ್ಯಾಲಿಕ್ ಆಮ್ಲ, ಟ್ಯಾನಿನ್ ಮುಂತಾದ ರಾಸಾಯನಿಕಗಳು ಸಮೃದ್ಧಿಯಾಗಿದೆ. ಹೂವಿನಿಂದ ಕೆಂಪು ಬಣ್ಣವನ್ನು ತಯಾರಿಸುವುದುಂಟು.

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Botanic Gardens Conservation International (BGCI); IUCN SSC Global Tree Specialist Group (2019). "Caesalpinia pulcherrima". IUCN Red List of Threatened Species. 2019: e.T130102665A148994097. doi:10.2305/IUCN.UK.2019-2.RLTS.T130102665A148994097.en. Retrieved 16 December 2022.
  2. "Caesalpinia pulcherrima". Germplasm Resources Information Network (GRIN). Agricultural Research Service (ARS), United States Department of Agriculture (USDA). Retrieved 2010-12-03.
  3. "Tropical Flower Guide". Archived from the original on 14 October 2012. Retrieved 30 November 2012.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: