ಯೋಸಾಂಗ್
ಯೋಸಾಂಗ್/ಯಾವೋಸಾಂಗ್ ಎಂಬುದು ಮಣಿಪುರದಲ್ಲಿ ಚಳಿಗಾಲದಲ್ಲಿ ಐದು ದಿನಗಳ ಕಾಲ ಆಚರಿಸಲಾಗುವ ಹಬ್ಬವಾಗಿದ್ದು, ಇದು ಲಾಮ್ಡಾ ತಿಂಗಳ ಹುಣ್ಣಿಮೆಯ ದಿನದಂದು (ಫೆಬ್ರವರಿ-ಮಾರ್ಚ್) ಪ್ರಾರಂಭವಾಗುತ್ತದೆ. ಈ ಹಬ್ಬ ಮೈಟೈ ಜನರ ಸ್ಥಳೀಯ ಸಂಪ್ರದಾಯವಾಗಿದೆ. ಇದನ್ನು ಮಣಿಪುರದ ಅತ್ಯಂತ ಪ್ರಮುಖ ಹಬ್ಬವೆಂದು ಪರಿಗಣಿಸಲಾಗಿದೆ. ಈ ಹಬ್ಬ ಹೋಳಿಯಂತೆ ಇದ್ದರೂ ಇದರ ಆಚರಣೆಗಳು ಬಣ್ಣಗಳ ಎರಚಾಟಕ್ಕೆ ಸೀಮಿತವಾಗುವುದಿಲ್ಲ. ಇದರ ಬಗ್ಗೆ ಇಮೋಕಾಂತ ಸಿಂಗ್ ಅವರು ಯೂನಿವರ್ಸಿಟಿ ಆಫ್ ಬರ್ಮಿಂಗ್ ಹ್ಯಾಮಿನಲ್ಲಿ ಪಠ್ಯವಾಗಿರುವ ತಮ್ಮ ಪುಸ್ತಕ Religion and Development in North-east India: A sociological understanding ನಲ್ಲಿ ದಾಖಲಿಸಿದ್ದಾರೆ. [೧] ಈ ಪುಸ್ತಕದಲ್ಲಿ ಅವರು ಹೀಗೆ ಬರೆಯುತ್ತಾರೆ. "ತಮ್ಮದೇ ಒಂದು ಹೊಸ ಸಂಪ್ರದಾಯವನ್ನು ಶುರು ಮಾಡುವ ಬದಲು ಇವರು ವೈಷ್ಣವ ಸಂಪ್ರದಾಯಕ್ಕೆ ಸಮಕಾಲೀನವಾದ ತಮ್ಮದೊಂದು ಆಚರಣೆಯನ್ನು ಹೊಂದಲು ಪ್ರಯತ್ನಿಸಿದ್ದಾರೆ. ಉದಾಹರಣೆಗೆ ಇಲ್ಲಿನ ಮೈಟಾಯಿ ಜನರು ಹಿಂದೂಗಳ ಹೋಳಿ ಹಬ್ಬದ ಬದಲು ಇವರು ಯೋಸಾಂಗನ್ನು ಆಚರಿಸುತ್ತಾರೆ. ಇದು ಹಿಂದೂಗಳ ಹೋಳಿ ಹಬ್ಬ ಅಥವಾ ಡೋಲ್ ಜಾತ್ರಾ ಬರುವ ಸಮಯಕ್ಕೇ ಬರುತ್ತದೆ. ಈ ತರಹ ಸಮಕಾಲೀನ ಆಚರಣೆಯನ್ನು ಹುಟ್ಟುಹಾಕುವ ಪ್ರಯತ್ನ ರಾಜಕೀಯ ಸಂಘರ್ಷಗಳಿಗೆ ಕಾರಣವಾಗಬಹುದೇನೋ. ಎಷ್ಟೋ ವರ್ಷಗಳ ಪರಸ್ಪರ ಕೊಡುಕೊಳ್ಳುವಿಕೆ ಇರುವುದರಿಂದ ಈ ಆಚರಣೆಗಳಲ್ಲಿ ಯಾವುದು ಹಿಂದೂ ಧರ್ಮದ ಮೂಲ ಆಚರಣೆ ಮತ್ತು ಮೈಟಾಯಿ ಜನಾಂಗದ ಆಚರಣೆ ಎಂದು ವಿಭಾಗಿಸುವುದು ಬಹಳ ಕಷ್ಟ.
ವಿವರಣೆ
[ಬದಲಾಯಿಸಿ]ಪ್ರತಿ ಹಳ್ಳಿಯಲ್ಲಿ ಮಣಿಪುರಿ ತಿಂಗಳ ಲಾಮ್ತಾದ ಹುಣ್ಣಿಮೆಯ ರಾತ್ರಿ ಯೊಸಾಂಗ್ ಮೇಯಿ ಥಾಬಾದೊಂದಿಗೆ ಅಥವಾ ಹುಲ್ಲಿನ ಗುಡಿಸಲಿನ ಸುಡುವಿಕೆಯೊಂದಿಗೆ ಯೊಸಂಗ್ ಪ್ರಾರಂಭವಾಗುತ್ತದೆ. ನಂತರ ಮಕ್ಕಳು ಪ್ರತಿ ಮನೆಯಲ್ಲೂ ನಾಕಾಥೆಂಗ್ ಎಂದು ಕರೆಯಲಾಗುವ ಹಣಕಾಸಿನ ದೇಣಿಗೆಗಳನ್ನು ಕೇಳುತ್ತಾರೆ. ಎರಡನೇ ದಿನದಂದು, ಮಣಿಪುರದ ಇಂಫಾಲ್-ಪೂರ್ವ ಜಿಲ್ಲೆಯ ಗೋವಿಂದಗಿ ದೇವಾಲಯದಲ್ಲಿ ಸ್ಥಳೀಯ ವಾದ್ಯವೃಂದಗಳ ಗುಂಪುಗಳು ಸಂಕೀರ್ತನೆಯನ್ನು ಪ್ರದರ್ಶಿಸುತ್ತವೆ. ಎರಡನೇ ಮತ್ತು ಮೂರನೇ ದಿನಗಳಲ್ಲಿ, ಹುಡುಗಿಯರು ತಮ್ಮ ಸಂಬಂಧಿಕರ ಬಳಿ ತಮ್ಮ ನಾಕಾಥೆಂಗ್ ಹೋಗುತ್ತಾರೆ ಮತ್ತು ಹಣ ಸಂಗ್ರಹಿಸಲು ಹಗ್ಗಗಳಿಂದ ರಸ್ತೆಗಳನ್ನು ನಿರ್ಬಂಧಿಸುತ್ತಾರೆ. ನಾಲ್ಕನೇ ಮತ್ತು ಐದನೇ ದಿನಗಳಲ್ಲಿ ಜನರು ಪರಸ್ಪರ ನೀರನ್ನು ಸುರಿಯುತ್ತಾರೆ ಅಥವಾ ಸಿಂಪಡಿಸುತ್ತಾರೆ. ಈ ಸಂದರ್ಭದಲ್ಲಿ ಹಗ್ಗ ಜಗ್ಗಾಟ ಮತ್ತು ಸಾಕರ್/ಫುಟಬಾಲಿನಂತಹ ಹಲವಾರು ಕ್ರೀಡಾ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗುತ್ತದೆ. ಇದಲ್ಲದೇ [೨], ಸ್ಥಳೀಯ ಭಕ್ಷ್ಯಗಳನ್ನು ಹಬ್ಬದ ಸಮಯದಲ್ಲಿ ನೆರೆಹೊರೆಯವರೊಂದಿಗೆ ಹಂಚಿಕೊಳ್ಳಲಾಗುತ್ತದೆ.
ಯೊಶಾಂಗ್ ಹಬ್ಬದ ಸಮಯದಲ್ಲಿ ಈಗ ಸಂಗೀತ ಕಚೇರಿಗಳು, ಡಿಜೆ ಮತ್ತು ತೆರೆದ ಸ್ಥಳಗಳಲ್ಲಿ ಇತರ ರೀತಿಯ ಮನರಂಜನೆಗಳನ್ನು ಆಯೋಜಿಸಲಾಗುತ್ತಿದೆ. ಅಂತಹ ಸಂಗೀತ ಕಚೇರಿಗಳಲ್ಲಿ ಸ್ಥಳೀಯ ಬ್ಯಾಂಡ್ಗಳು ಪ್ರದರ್ಶನ ನೀಡುತ್ತವೆ.
ನೃತ್ಯ
[ಬದಲಾಯಿಸಿ]ಈ ಹಬ್ಬದ ಮತ್ತೊಂದು ವೈಶಿಷ್ಟ್ಯವೆಂದರೆ ಥಾಬಲ್ ಚೊಂಗ್ಬಾ (ಚಂದ್ರನ ಬೆಳಕಿನಲ್ಲಿ ನೃತ್ಯ). ವಿವಿಧ ಸ್ಥಳಗಳಿಂದ ಪುರುಷರು ಉತ್ಸವದ ಸ್ಥಳಕ್ಕೆ ಬಂದು ಹೆಣ್ಣು ಮಕ್ಕಳ ಜೊತೆ ತಮ್ಮ ಕೈಗಳನ್ನು ಹಿಡಿದು ವೃತ್ತಾಕಾರದಲ್ಲಿ ನೃತ್ಯ ಮಾಡುತ್ತಾರೆ. 2016ರಲ್ಲಿ[೩], ಇದು 23-24 ಮಾರ್ಚ್ ನಲ್ಲಿ ಸಂಭವಿಸಿತು.
ಆಚರಣೆಗಳು
[ಬದಲಾಯಿಸಿ]ಈ ಉಲ್ಲಾಸದ ಹಬ್ಬವನ್ನು ಆಚರಿಸಲು ಸ್ಥಳೀಯರು ಔತಣದಲ್ಲಿ ತೊಡಗುತ್ತಾರೆ. [೪] ಇತ್ತೀಚಿನ ದಿನಗಳಲ್ಲಿ ಕ್ರೀಡಾ ಕಾರ್ಯಕ್ರಮಗಳ ಆಯೋಜನೆಯು ತಳಹಂತದಲ್ಲಿನ ಅನೇಕ ಪ್ರತಿಭೆಗಳನ್ನು ಗುರುತಿಸಲು ಕಾರಣವಾಗಿದೆ. ಇದು ಮೈಟೈಗಳ ಶ್ರೀಮಂತ ಕ್ರೀಡಾ ಮನೋಭಾವಕ್ಕೂ ಕಾರಣವಾಗಿದೆ.
ಮುಕ್ನಾ
[ಬದಲಾಯಿಸಿ]ಇದು ಯೋಶಾಂಗ್ ಹಬ್ಬದ ಸಂದರ್ಭದಲ್ಲಿ ನಡೆಸಲಾಗುವೆ ಕ್ರೀಡಾಕೂಟದಲ್ಲಿ ನಡೆಯುವ ಒಂದು ಕುಸ್ತಿ ಸ್ಪರ್ಧೆ. ಇದರಲ್ಲಿ ಸಾಮಾನ್ಯವಾಗಿ ವಯಸ್ಸಾದ ವ್ಯಕ್ತಿಗಳು ಭಾಗವಹಿಸುತ್ತಾರೆ. ಹೆಚ್ಚಿನ ಮಾಹಿತಿಗೆ ಗ್ಯಾಲರಿಯಲ್ಲಿನ ಚಿತ್ರವನ್ನು ನೋಡಿ.
ಗ್ಯಾಲರಿ
[ಬದಲಾಯಿಸಿ]-
ಗೋವಿಂದನಾಜೆ ದೇವಸ್ಥಾನದಲ್ಲಿ ಹೋಳಿ ಆಡುತ್ತಿರುವ ಮೈಟೆಯಿ ಸಮುದಾಯದ ಜನರು. ಇದು ಯೋಸಾಂಗಿನ ಎರಡನೆಯ ದಿನದ ಆಚರಣೆ.
-
೮೦ ವರ್ಷಕ್ಕಿಂತ ಹೆಚ್ಚು ವಯಸ್ಸಾದ ಹಿರಿಯರು "ಮುಕ್ನಾ" ಎಂದು ಕರೆಯಲ್ಪಡುವ ಸ್ಥಳೀಯ ಕುಸ್ತಿ ಸ್ಪರ್ಧೆಯಲ್ಲಿ ತೊಡಗಿರುವುದು. ಇದು ಯೋಸಾಂಗ್ ಸ್ಪರ್ಧೆಯ ಭಾಗವಾಗಿದೆ.
-
ಕುದುರೆ ಸವಾರರು ಕಾಂಗ್ಲಾ ಕೋಟೆಯ ಕಡೆಗೆ ತೆರಳುತ್ತಿರುವುದು. ಮೈಟಾಯಿ ಮುಖ್ಯಸ್ಥ ಕ್ರೀಡಾ ಸಮಾರಂಭವನ್ನು ಉದ್ಘಾಟಿಸಲು ಜ್ಯೋತಿಯನ್ನು ಹಿಡಿದಿರುವುದು
ಉಲ್ಲೇಖಗಳು
[ಬದಲಾಯಿಸಿ]- ↑ Singh, Ksh Imokanta (2008). Religion and Development in North-east India: A sociological understanding (PDF). University of Birmingham. p. 76. ISBN 978-0-7044-2655-9. Archived from the original (PDF) on 19 ಜೂನ್ 2015. Retrieved 18 June 2015.
However, rather than starting a completely new religious system, their efforts have focused on establishing a parallel culture to counter the Vaishnavite forces, for example observance of Yaosang (Meitei version of Holi) during the same period as the Hindu Dol jatra festival. This movement may try to create a political fissure within the society, but it is very difficult to sort out which elements are purely Hindu and which indigenous, because people have long internalized both elements in their way of life.
{{cite book}}
:|work=
ignored (help) - ↑ "Yaoshang festival". tourmyindia.com. Retrieved 2020-08-29.
- ↑ General Holidays for 2016
- ↑ "five-day-yaoshang-festival-begins-in-manipur". easternmirrornagaland.com. Retrieved 2020-08-29.
- Sanajaoba, Naorem (1988). Manipur, Past and Present: The Heritage and Ordeals of a Civilization, Volume 4. New Delhi: Mittal Publications. ISBN 9788170998532.