ಮ್ಯಾಕ್ಸ್‌‌ ಪೇನ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Max Payne
ಚಿತ್ರ:Maxpaynebox.jpg
ಅಭಿವರ್ಧಕ(ರು) Remedy Entertainment (WIN)
3D Realms (producer)
Rockstar Toronto (PS2)
Rockstar Vienna (Xbox)
Rockstar Leeds (GBA)
MacSoft (Mac)
ಪ್ರಕಟಣಕಾರ(ರು) Gathering of Developers (WIN)
Rockstar Games (PS2, Xbox, GBA)
Feral (Mac)
Tec Toy (BR)
Capcom (JP)
Valve Corporation (Steam)
MacSoft (Mac)
ಸರಣಿ Max Payne
ತಂತ್ರಾಂಶ ಚೌಕಟ್ಟು MAX-FX
ಕಾರ್ಯಕಾರಿ ಪರಿಸರ(ಗಳು) Windows, Xbox, PlayStation 2, Game Boy Advance, Mac OS
ಬಿಡುಗಡೆ ದಿನಾಂಕ(ಗಳು)
ಪ್ರಕಾರ(ಗಳು) Third-person shooter
ಬಗೆ(ಗಳು) Single player
ಹಂಚಿಕೆ 1 CD-ROM (WIN)
1 DVD (PS2), (Xbox)
1 cartridge (GBA)

ಮ್ಯಾಕ್ಸ್‌‌ ಪೇನ್‌ ಎಂಬುದು ಫಿನ್ನಿಷ್‌ ಸಂಸ್ಥೆ ರೆಮಿಡೀ ಎಂಟರ್‌ಟೇನ್‌ಮೆಂಟ್‌ನಿಂದ ಅಭಿವೃದ್ಧಿಪಡಿಸಲಾದ, 3D ರಿಯಲ್ಮ್‌ಸ್‌ನಿಂದ ನಿರ್ಮಿಸಲಾದ ‌ಹಾಗೂ ಗ್ಯಾದರಿಂಗ್‌ ಆಫ್‌ ಡೆವಲಪರ್ಸ್‌ನಿಂದ ಜುಲೈ 2001ರಲ್ಲಿ Windowsಗೆ ಪ್ರಕಟಿಸಲಾದ BAFTA ಪ್ರಶಸ್ತಿ ವಿಜೇತ[೧] ಪ್ರೇಕ್ಷಕ ಷೂಟರ್‌ ವಿಡಿಯೋ ಆಟವಾಗಿದೆ. ಎಕ್ಸ್‌ಬಾಕ್ಸ್‌, ಪ್ಲೇಸ್ಟೇಷನ್‌ 2 ಹಾಗೂ ಗೇಮ್‌‌ಬಾಯ್‌ ಅಡ್ವಾನ್ಸ್‌‌ಗಳ ಅವತರಣಿಕೆಗಳನ್ನು ವರ್ಷದ ನಂತರದ ಅವಧಿಯಲ್ಲಿ ರಾಕ್‌ಸ್ಟಾರ್‌ ಗೇಮ್ಸ್‌ ಸಂಸ್ಥೆಯು ಪ್ರಕಟಿಸಿತು. Macintoshನ ಅವತರಣಿಕೆಯೊಂದನ್ನು ಜುಲೈ 2002ರಲ್ಲಿ ಉತ್ತರ ಅಮೇರಿಕಾದಲ್ಲಿ [೨] ಮ್ಯಾಕ್‌ಸಾಫ್ಟ್‌‌ ಹಾಗೂ ವಿಶ್ವದ ಉಳಿದೆಡೆ ಫೆರಲ್‌‌ ಇಂಟರ್‌‌ಆಕ್ಟೀವ್‌ ಪ್ರಕಟಿಸಿದವು. ಮ್ಯಾಕ್ಸ್‌‌ ಪೇನ್‌ಡ್ರೀಮ್‌ಕ್ಯಾಸ್ಟ್‌‌ ಆವೃತ್ತಿಯನ್ನು ಪ್ರಕಟಿಸುವ ಯೋಜನೆಯಿತ್ತು, ಆದರೆ ನಂತರ ಕನ್ಸೋಲ್‌/ವಿಡಿಯೋಆಟವನ್ನೇ ಮುಂದುವರೆಸದ ಕಾರಣ ಅವುಗಳನ್ನು ರದ್ದುಪಡಿಸಲಾಯಿತು.[೩] ಮ್ಯಾಕ್ಸ್‌‌ ಪೇನ್‌ಅನ್ನು ಏಪ್ರಿಲ್‌ 29, 2009ರಂದು ಎಕ್ಸ್‌ಬಾಕ್ಸ್‌ 360ಗೆಂದು ವಿನ್ಯಾಸಿಸಿದ ಎಕ್ಸ್‌ಬಾಕ್ಸ್‌ ಒರಿಜಿನಲ್ಸ್‌‌ ಯೋಜನೆ/ಕಾರ್ಯಕ್ರಮದಡಿ ಇಳಿಸಿಕೊಳ್ಳಬಹುದಾದ ಆಟವನ್ನಾಗಿ ಮರು-ಬಿಡುಗಡೆಗೊಳಿಸಲಾಯಿತು.[೪]

ಮ್ಯಾಕ್ಸ್‌‌ ಪೇನ್‌ ಬಂದೂಕುಚಾಲನೆಯು ಗುಂಡುಗಳನ್ನು ತಪ್ಪಿಸಿಕೊಳ್ಳಲು ಸಮಯವನ್ನು ನಿಧಾನಿಸಲು ಅವಕಾಶ ಮಾಡುವುದರಿಂದ ದ ಮ್ಯಾಟ್ರಿಕ್ಸ್‌ ‌ ಕೃತಿತ್ರಯಗಳಿಂದ ಜನಪ್ರಿಯಗೊಳಿಸಲ್ಪಟ್ಟ "ಗುಂಡು ಸಮಯವನ್ನು" ತನ್ನ ಆಟದ ರೀತಿಯಲ್ಲಿ ಅಳವಡಿಸಿಕೊಂಡ, ಪ್ರಥಮ ವಿಡಿಯೋ ಆಟಗಳಲ್ಲಿ ಒಂದಾಗಿದೆ. ಆಟವು ಬಿಡಿಬಿಡಿಯಾದ ನಿರಾಶಾವಾದ ಶೈಲಿಯನ್ನು ಹಾಗೂ ಬಿಡಿ ದೃಶ್ಯಗಳ ಬದಲಿಗೆ ನವೀನ ರೀತಿಯ ಚಿತ್ರಿತ ಫಲಕ/ಪ್ಯಾನೆಲ್‌ಗಳನ್ನು ಆಟವನ್ನು ವಿವರಿಸಲು ಬಳಸುತ್ತದೆ. ಹಾಂಗ್‌ಕಾಂಗ್‌ ಸಾಹಸ ಚಿತ್ರ ಪ್ರಭೇದದಿಂದ, ನಿರ್ದಿಷ್ಟವಾಗಿ ನಿರ್ದೇಶಕ ಜಾನ್‌ ವೂರ ಕಾರ್ಯದಿಂದ,[೫] ಹಾಗೂ ಮಿಕಿ ಸ್ಪಿಲ್ಲೇನ್‌ರಂತಹಾ ಲೇಖಕರುಗಳ ರೋಮಾಂಚಕ ಪತ್ತೇದಾರಿ ಕಾದಂಬರಿಗಳಿಂದ ಮ್ಯಾಕ್ಸ್‌‌ ಪೇನ್‌ ಬಹಳ ಪ್ರಭಾವಿತವಾಗಿದೆ.[೬] ಆಟವು ನಾರ್ಸ್/ನಾರ್ವೆ ದೇಶದ ದಂತಕಥೆಗಳ ಅನೇಕ ಉಲ್ಲೇಖಗಳನ್ನೊಳಗೊಂಡಿದ್ದು, ನಿರ್ದಿಷ್ಟವಾಗಿ ಆಟದಲ್ಲಿನ ರಾಗ್ನಾರಾಕ್‌ ದಂತಕಥೆ, ಹಾಗೂ ಅದರಲ್ಲಿನ ಅನೇಕ ಹೆಸರುಗಳು ನಾರ್ಸ್‌ ದೇವತೆಗಳು ಹಾಗೂ ದಂತಕಥೆಗಳದ್ದಾಗಿವೆ.

ಮ್ಯಾಕ್ಸ್‌‌ ಪೇನ್‌ ವಿಮರ್ಶಕರುಗಳಿಂದ ಉತ್ತಮ ವಿಮರ್ಶೆ ಪಡೆಯಿತಲ್ಲದೇ ಅದರ ಆಕರ್ಷಕ/ಉತ್ತೇಜನಕಾರಿ ಬಂದೂಕುಚಾಲನೆ ಹಾಗೂ ನಿರಾಶಾವಾದ ಶೈಲಿಯ ಕಥಾವಿವರಣಾ ವಿಧಾನಗಳನ್ನು ಅವರು ಹೊಗಳಿ ಬರೆದರು. 7 ದಶಲಕ್ಷಕ್ಕೂ ಹೆಚ್ಚಿನ ಪ್ರತಿಗಳನ್ನು ಟೇಕ್‌-ಟು ಇಂಟರ್‌‌ಆಕ್ಟೀವ್‌ನ ಪ್ರಕಾರ ಮಾರ್ಚ್‌ 12, 2008ರ, ಹಾಗೆ[೭] ಮ್ಯಾಕ್ಸ್‌‌ ಪೇನ್‌ ಪ್ರಾತಿನಿಧಿಕೆಗಳು ಮಾರಿದ್ದಾರೆ.[೮]

ಆಟದ ರೀತಿ[ಬದಲಾಯಿಸಿ]

ಮ್ಯಾಕ್ಸ್‌‌ ಪೇನ್‌ ಎಂಬುದು ಪ್ರೇಕ್ಷಕ ಷೂಟರ್‌ ಆಟವಾಗಿದ್ದು, ಇದರಲ್ಲಿ ಆಟಗಾರನು ಶೀರ್ಷಿಕೆ ಪಾತ್ರವಾದ, ಮ್ಯಾಕ್ಸ್‌‌ ಪೇನ್‌ನ ಪಾತ್ರವನ್ನು ವಹಿಸುತ್ತಾನೆ. ಬಹುತೇಕ ಸಂಪೂರ್ಣ ಆಟದ ರೀತಿಯು ಆಟದ ವೈರಿಗಳನ್ನು ಸದೆಬಡಿಯಲು ಗುಂಡು ಹಾರಿಸುವ ಸಮಯ ಬಂದೂಕು-ಹೋರಾಟಗಳನ್ನು ಒಳಗೊಂಡಿದೆ. ಹಂತಗಳು ಸಾಮಾನ್ಯವಾಗಿ ಸರಳವಾಗಿದ್ದು ಕೇವಲ ಕೆಲವೇ ಹಂತಗಳು ಮಾತ್ರವೇ ಪ್ಲಾಟ್‌ಫಾರ್ಮಿಂಗ್‌ಅನ್ನು ಹಾಗೂ ಸಮಸ್ಯೆ ಪರಿಹರಣಾ ಅಂಶಗಳನ್ನು ಒಳಗೊಂಡಿರುತ್ತವೆ. ಆಟ'ದ ಕಥಾವಸ್ತುವು ಆಟಗಾರನು ಆತನ ಮುಂದಿನ ಹೆಜ್ಜೆ ಏನಿರಬೇಕೆಂದು ತಿಳಿಯಪಡಿಸುವ ಮ್ಯಾಕ್ಸ್‌‌'ನ ಆಂತರಿಕ ಸ್ವಗತವನ್ನು ಅನುಸರಿಸುತ್ತಾ ಮುಂದುವರೆಯುತ್ತದೆ. ಆಟ'ದ ಹಂತಗಳಲ್ಲಿ ಕೆಲವು ಅತಿವಾಸ್ತವವಾದಿ-ಸಾಂಕೇತಿಕ ದುಃಸ್ವಪ್ನಗಳನ್ನು ಹಾಗೂ ಪೇನ್‌ನ ಔಷಧಿ-ಸಂಬಂಧಿತ ಭ್ರಮೆಗಳನ್ನೂ ಒಳಗೊಂಡಿರುತ್ತದೆ.

ಮೊದಲಿಗೆ, ಆಟಗಾರ'ನ ಏಕೈಕ ಆಯುಧವೆಂದರೆ 9mm ಅರೆ-ಸ್ವಯಂಚಾಲಿತ ಪಿಸ್ತೂಲು. ಆಟಗಾರನು ಮುಂದುವರೆದಂತೆ, ಬೆರೆಟ್ಟಾ 92 ಹಾಗೂ ಡೆಸರ್ಟ್‌ ಈಗಲ್‌ ಕೈಬಂದೂಕುಗಳು, ಪಂಪ್‌ ಆಕ್ಷನ್‌, ನಳಿಕೆ-ಕೊಯ್ದ ಹಾಗೂ ಸ್ವಯಂಚಾಲಿತ ಪ್ಯಾಂಕರ್‌‌ ಜ್ಯಾಕ್‌ಹ್ಯಾಮರ್‌ ಷಾಟ್‌ಗನ್‌ಗಳು, ಇಂಗ್ರಮ್‌ ಹಾಗೂ ಕೋಲ್ಟ್‌‌ ಕಮಾಂಡೋ ಉಪ-ಯಾಂತ್ರಿಕಬಂದೂಕುಗಳು, M79 ಗ್ರೆನೇಡ್‌ ಲಾಂಚರ್‌, ದರ್ಶಕಸಹಿತ ಬೋಲ್ಟ್‌-ಆಕ್ಷನ್‌ ಕೋವಿ, ಹಾಗೂ ಮಾರಾಮಾರಿಯಲ್ಲಿ ಹಾಗೂ ಕೈಯಿಂದ-ಎಸೆಯುವ ಆಯುಧಗಳೂ ಸೇರಿದಂತೆ ಇತರೆ ಆಯುಧಗಳ ಬಳಕೆಗೆ ಅವಕಾಶವನ್ನು ನೀಡಲಾಗುತ್ತದೆ. ಆಟ'ದ ಕೆಲವು ಆಯುಧಗಳು ಉಭಯ ನಿಯಂತ್ರಕವನ್ನಾಗಿ ಬಳಸಬಹುದಾಗಿರುತ್ತದೆ. ಆಟಗಾರನು ಸಂಗ್ರಹಿಸುವ ನೋವುನಿವಾರಕಗಳನ್ನು ಸೇವಿಸುವ ಮೂಲಕ ಮ್ಯಾಕ್ಸ್‌‌ ಆರೋಗ್ಯವನ್ನು ಮರುಗಳಿಸಿಕೊಳ್ಳುತ್ತಾನೆ. ಆಟ'ದ AI ಪೂರ್ವ-ಲಿಖಿತ ಆದೇಶಗಳ ಮೇಲೆ ಬಹುಮಟ್ಟಿಗೆ ಅವಲಂಬಿತವಾಗಿದ್ದು : ಸ್ಪಷ್ಟವಾಗಿ ವೈರಿಗಳ ಬುದ್ಧಿವಂತ ನಡೆಗಳಾದ ರಕ್ಷಣೆ ಪಡೆಯುವುದು, ಆಟಗಾರನಿಂದ ಹಿಮ್ಮೆಟ್ಟುವುದು, ಅಥವಾ ಗ್ರೆನೇಡ್‌ಗಳನ್ನು ಎಸೆಯುವುದು ಮುಂತಾದವೆಲ್ಲಾ ಪೂರ್ವ-ಲಿಖಿತವಾದವು.

ಮ್ಯಾಕ್ಸ್‌‌ ಪೇನ್‌ ನ ಆಟದ ರೀತಿಯು ಗುಂಡು ಸಮಯದ ಸುತ್ತಲೇ ಹೆಚ್ಚು ಸುತ್ತುತ್ತದೆ, ನಿಧಾನ ಚಲನೆಯ ಒಂದು ರೂಪವಾಗಿದ್ದು — ಇದನ್ನು ತೊಡಗಿಸಿದಾಗ, ಸಮಯದ ಚಲನೆಯನ್ನು ಗುಂಡುಗಳ ಚಲನೆಯನ್ನು ಬರಿಗಣ್ಣಿಂದ ಕಾಣಬಹುದಾದಷ್ಟು ನಿಧಾನಗೊಳಿಸಬಹುದಾಗಿದ್ದು, ಇದು ಮ್ಯಾಕ್ಸ್‌‌ಗೆ ವಿಶೇಷ ಕದನ ಚಲನೆಯನ್ನು ಮಾಡಲು ಸಾಧ್ಯವಾಗಿಸುತ್ತದೆ. ಪೇನ್‌'ನ ಚಲನೆ ಕೂಡಾ ನಿಧಾನಗೊಳ್ಳುವುದಾದರೂ, ಆಟಗಾರನು ಆಗಲೂ ಕೂಡ ಜಾಲಿಕೆಯ ಮೂಲಕ ಗುರಿಯಿಟ್ಟು ವಾಸ್ತವ ಸಮಯದಲ್ಲಿ ಪ್ರತಿಕ್ರಯಿಸಲು ಸಾಧ್ಯವಿದ್ದು, ವೈರಿಗಳ ವಿರುದ್ಧ ಅದ್ವಿತೀಯ ಅನುಕೂಲವನ್ನು ಹೊಂದಿರುತ್ತಾನೆ. ಪ್ರಾಸಂಗಿಕವಾಗಿ, ವೈರಿ ತಂಡದ ಕೊನೆ ಪಾತ್ರವು ಕೊಲ್ಲಲ್ಪಟ್ಟಾಗ, ದೃಷ್ಟಿನಾಭಿಯು ಆತನ ಬೀಳುತ್ತಿರುವ ದೇಹದ ಪ್ರೇಕ್ಷಕ ಕೇಂದ್ರಿತ ನೋಟಕ್ಕೆ ಬದಲಾಗುತ್ತದೆ; ಅದೇರೀತಿ, ಕ್ಯಾಮೆರಾ/ಛಾಯಾಗ್ರಾಹಕವು ಸ್ನಿಪರ್‌ ಕೋವಿಯಿಂದ ಹಾರಿದ ಗುಂಡಿನ ಪಥವನ್ನು ಕೂಡ ಅನುಸರಿಸಬಹುದು.

ಆಟಗಾರ'ನ ಪಾತ್ರವು ಕೆಲವು ಪಿಸ್ತೂಲು ಹಾಗೂ ಕೋವಿ ಗುಂಡುಗಳ ಅಥವಾ ಒಂದು ನಿಖರ ಷಾಟ್‌ಗನ್‌‌ ಹೊಡೆತಗಳು ಬಿದ್ದ ನಂತರ ಸಾಯುತ್ತದೆ. ಬಹುತೇಕ ವೈರಿಗಳು ಆಟಗಾರನ ಪಾತ್ರಕ್ಕಿಂತ ಹೆಚ್ಚಿನ ತಾಳಿಕೆ ಸಾಮರ್ಥ್ಯವನ್ನು ಹೊಂದಿದ್ದು, ನಂತರದ ವೈರಿಗಳು ಮ್ಯಾಕ್ಸ್‌‌ ತಾಳಬಹುದಾದ ನಷ್ಟಕ್ಕಿಂತ ಎರಡರಿಂದ ಮೂರು ಪಟ್ಟಿನ ನಂತರವೂ ಉಳಿಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಬೇರೆ ರೀತಿಯಲ್ಲಿ ನೀಡಿತ ಹೊಡೆತಗಳಿಗೆ ವೈರಿಗಳು ಪ್ರತಿಕ್ರಿಯೆಯನ್ನೇ ತೋರುವುದಿಲ್ಲ. ಉನ್ನತ ಕಷ್ಟದ ಹಂತಗಳು ಬಹುಮಟ್ಟಿಗೆ ಸವಾಲಾಗಿದ್ದು; "ಡೆಡ್‌ ಆನ್‌ ಅರೈವಲ್‌ " ಆಟದ ಬಗೆಯು/ಮೋಡ್‌‌ ಆಟಗಾರನಿಗೆ ಪ್ರತಿ ಪ್ರಕರಣಕ್ಕೆ ಕೇವಲ ಏಳು ಉಳಿಕೆಗೆ ಮಾತ್ರವೇ ಅವಕಾಶ ನೀಡುವುದಾಗಿದ್ದು, "ನ್ಯೂ ಯಾರ್ಕ್‌ ಮಿನಟ್‌ "ಬಗೆಯು/ಮೋಡ್‌ ಪ್ರತಿ ಪ್ರಕರಣಕ್ಕೆ ಆಟಗಾರನಿಗೆ ನಿಗದಿಪಡಿಸಿದ ಸಮಯಕ್ಕೆ ಮುನ್ನವೇ ಮುಗಿಸುವ ಒತ್ತಡ ಹೇರುತ್ತದೆ — ವೈರಿಗಳನ್ನು ಕೊಲ್ಲುವುದರ ಮೂಲಕ ಮರುಭರ್ತಿ ಮಾಡಿಕೊಳ್ಳುವುದು — ಆಗ ಬರಿದಾಗಿರುತ್ತದೆ. "ಡೆಡ್‌ ಆನ್‌ ಅರೈವಲ್‌ "ನಲ್ಲಿ ಆಟವನ್ನು ಮುಗಿಸಿದಾಗ, ಆಟಗಾರನು ಸತತ ಗುಂಡು ಸಮಯವನ್ನು ಪ್ಯಾಂಕರ್‌‌ ಜ್ಯಾಕ್‌ಹ್ಯಾಮರ್‌ಅನ್ನು ಹೊಂದಿರುವ 20 "ಕಿಲ್ಲರ್‌ ಸೂಟ್‌ "[clarification needed] ಗುರಿಕಾರರ ವಿರುದ್ಧ ಹೋರಾಟವಿರುವ "ದ ಲಾಸ್ಟ್‌ ಚಾಲೆಂಜ್‌" ("ಎಂಡ್‌ ಕಾಂಬ್ಯಾಟ್‌" ಅಥವಾ "ಫೈನಲ್‌ ಬ್ಯಾಟಲ್‌ " ಬೇರೆ ಆವೃತ್ತಿಗಳಲ್ಲಿ) ಅನ್ನು ಸಶಕ್ತಗೊಳಿಸುತ್ತಾನೆ.

ಕಥಾವಸ್ತು[ಬದಲಾಯಿಸಿ]

ಚಿತ್ರ:May payne panels.jpg
ಬಿಡಿಬಿಡಿಯಾದ ನಿರಾಶಾವಾದ ಶೈಲಿಯನ್ನು ಹಾಗೂ ಬಿಡಿ ದೃಶ್ಯಗಳ ಬದಲಿಗೆ ನವೀನ ರೀತಿಯ ಚಿತ್ರಿತ ಫಲಕ/ಪ್ಯಾನೆಲ್‌ಗಳನ್ನು ಆಟವನ್ನು ವಿವರಿಸಲು ಬಳಸಲಾಗಿದೆ.

ಇದರ ಕಥೆಯನ್ನು ಮೀಡಿಯಾಸ್‌ ರೆಸ್‌‌ನ ಮೂಲಕ ಹೇಳಲಾಗಿದ್ದು ಮೂರು ಪ್ರಮುಖ ಪ್ರಕರಣಗಳನ್ನು ಹೊಂದಿದೆ - "ದ ಅಮೇರಿಕನ್‌ ಡ್ರೀಮ್‌", "A ಕೋಲ್ಡ್‌ ಡೇ ಇನ್‌ ಹೆಲ್‌", ಹಾಗೂ "A ಬಿಟ್‌‌ ಕ್ಲೋಸರ್‌‌ ಟು ಹೆವನ್‌". ಆಟವು ನಗರದ ಇತಿಹಾಸದಲ್ಲೇ ಕಂಡುಕೇಳರಿಯದ ಕೆಟ್ಟ ಬಿರು ಹಿಮಗಾಳಿಯನ್ನು ಅನುಭವಿಸಿದ ನ್ಯೂಯಾರ್ಕ್‌ ನಗರವು ಅದರಿಂದ ಹೊರಬರುತ್ತಿದ್ದ 2001ರ ಚಳಿಗಾಲದಲ್ಲಿ ಆರಂಭವಾಗುತ್ತದೆ. ಪರಿಚಯಿಕ ದೃಶ್ಯವು ಅತ್ಯಂತ-ಬೇಕಾಗಿರುವ ಆರಕ್ಷಕ ಘಟಕಗಳು ಬರುತ್ತಿದ್ದ ಹಾಗೆ ಗಗನಚುಂಬಿ ಕಟ್ಟಡದ ಮೇಲೆ ಮಾಜಿ ಪೋಲಿಸ್‌/ಆರಕ್ಷಕ ಅಧಿಕಾರಿಯಾದ ಕೈಯಲ್ಲಿ ಕೋವಿಯನ್ನು ಹಿಡಿದುಕೊಂಡು ನಿಂತಿರುವ ಮ್ಯಾಕ್ಸ್‌‌ ಪೇನ್‌ಅನ್ನು ತೋರಿಸುತ್ತದೆ. ಆಗ ಆತ ಮೂರು ವರ್ಷಗಳ ಹಿಂದಿನ ಕಥೆಯನ್ನು ನೆನೆಸಿಕೊಳ್ಳುತ್ತಾನೆ. ಹಿಂದೆ 1998ರಲ್ಲಿ, ಮ್ಯಾಕ್ಸ್‌‌ ಮನೆಗೆ ಮರಳುವಾಗ ಸುವ್ಯಕ್ತವಾಗಿ ವಾಲ್ಕಿರ್‌ ಎಂಬ ಸಂಚುಗಾರ ಮಾದಕವಸ್ತುವಿನ ವಿಪರೀತ ಸೇವನೆಯನ್ನು ಮಾಡಿದ ಮೂವರು ಮಾದಕವ್ಯಸನಿಗಳ ಗುಂಪೊಂದು ಆತನ ಮನೆಗೆ ನುಗ್ಗಿರುವುದನ್ನು ನೋಡುತ್ತಾನೆ. ಮ್ಯಾಕ್ಸ್‌‌ ತನ್ನ ಕುಟುಂಬವನ್ನು ರಕ್ಷಿಸಲು ಮುನ್ನುಗ್ಗುತ್ತಾನೆ, ಆದರೆ ಅದಾಗಲೇ ಸಾಕಷ್ಟು ತಡವಾಗಿರುತ್ತದೆ - ಆತನ ಪತ್ನಿ ಹಾಗೂ ಅವರ ಪುಟ್ಟ ಮಗಳನ್ನು ಆಗಲೇ ಕ್ರೂರವಾಗಿ ಕೊಲ್ಲಲಾಗಿರುತ್ತದೆ. ಆತನ ಕುಟುಂಬದವರ ಶವಸಂಸ್ಕಾರದ ನಂತರ, ಪೇನ್‌ಅನ್ನು DEAಗೆ ವರ್ಗಾಯಿಸಲಾಗಿರುತ್ತದೆ.

ಮೂರು ವರ್ಷಗಳ ನಂತರ, ಮ್ಯಾಕ್ಸ್‌‌ ಪೇನ್‌ ವಾಲ್ಕಿರ್‌ನ ವ್ಯಾಪಾರದಲ್ಲಿ ತೊಡಗಿರುವ ಪಂಚಿನೆಲ್ಲೋ ಮಾಫಿಯಾ ಕುಟುಂಬದೊಳಗೆ ಆಂತರಿಕ ಗೂಢಚರ್ಯ ವ್ಯಕ್ತಿಯಾಗಿ ನಿಯೋಜಿತರಾಗಿರುತ್ತಾನೆ. ಆತನ DEA ಸಹೋದ್ಯೋಗಿ B.B. ಮ್ಯಾಕ್ಸ್‌‌ನಿಗೆ ಒಂದು ಸಂದೇಶ ಕಳಿಸಿ ಮತ್ತೋರ್ವ DEA ಗುಪ್ತಚರ ಹಾಗೂ ಮ್ಯಾಕ್ಸ್‌‌'ನ ಅತ್ಯುತ್ತಮ ಸ್ನೇಹಿತ ಅಲೆಕ್ಸ್‌ ಬಾಲ್ಡರ್‌ನ್ನು NYC ಸಬ್‌ವೇ ನಿಲ್ದಾಣದಲ್ಲಿ ಭೇಟಿ ಮಾಡುವಂತೆ ತಿಳಿಸುತ್ತಾನೆ. ಸಬ್‌ವೇ ಮ್ಯಾಕ್ಸ್‌‌'ನ ಆಗಮನದಿಂದ ನಿಲ್ದಾಣದ ಬಳಿಯಿರುವ ಬ್ಯಾಂಕ್‌ನ ದರೋಡೆ ಮಾಡಲೆತ್ನಿಸುತ್ತಿದ್ದ ಪಂಚಿನೆಲ್ಲೋ ಪಾತಕಿ ಕುಟುಂಬದ ಓರ್ವ ಮಾಫಿಯಾ ಧಣಿ ಜಾಕ್‌ ಲೂಪಿನೋ ತಂಡದ ದರೋಡೆಕೋರರನ್ನು ಎದುರಿಸಿದ ಕಾರಣದಿಂದಾಗಿ ಭೂಗತ ಶೂಟ್‌ಔಟ್‌ ನಡೆಯುತ್ತದೆ. ನೆಲದಡಿಯಿಂದ ಮೇಲ್ಭಾಗಕ್ಕೆ ಬರುವ ದಾರಿಯಲ್ಲಿ, ಮ್ಯಾಕ್ಸ್‌‌ ಅಲೆಕ್ಸ್‌ನನ್ನು ಕಂಡಾಗ, ಓರ್ವ ಅಪರಿಚಿತ ಹಂತಕ ಆತನನ್ನು ಕೊಲ್ಲುತ್ತಾನೆ. ಮ್ಯಾಕ್ಸ್‌‌'ನ ಆಂತರಿಕ ಗೂಢಚರ್ಯೆಯ ಗುರುತು/ತಿಳಿವು ಕೇವಲ ಬಾಲ್ಡರ್‌ಗೆ ಮಾತ್ರ ತಿಳಿದಿದ್ದುದರಿಂದ, ಪೇನ್‌ ತನ್ನ NYPD ಚಹರೆಯನ್ನು ಕಳೆದುಕೊಳ್ಳುತ್ತಾನಲ್ಲದೇ ಕೊಲೆಯ ಪ್ರಮುಖ ಆಪಾದಿತನಾಗುತ್ತಾನೆ. ಇದರೊಂದಿಗೆ, ಮಾಫಿಯಾ ತಂಡಕ್ಕೆ ಕೂಡಾ ಆತನೋರ್ವ ಆರಕ್ಷಕನೆಂದು ತಿಳಿದು ಆತನನ್ನು ಕೊಲ್ಲಲಿಚ್ಛಿಸಿರುತ್ತದೆ.

ಲೂಪಿನೋನನ್ನು ಹುಡುಕುತ್ತಾ ಮತ್ತಷ್ಟು ತನಿಖೆ ನಡೆಸುತ್ತಾ ಹೋದಾಗ, ಮ್ಯಾಕ್ಸ್‌‌ ವಾಲ್ಕಿರ್‌ ಮಾದಕವಸ್ತು ವ್ಯವಹಾರವನ್ನು ಭಗ್ನಗೊಳಿಸಿದ ನಂತರ ರಷ್ಯನ್‌ ಪಾತಕಿ ವ್ಲಾಡಿಮಿರ್‌ ಲೆಮ್‌ ಪಂಚಿನೆಲ್ಲೋ'ನ ಜನರ ವಿರುದ್ಧ ಘನಘೋರ ಕದನದಲ್ಲಿ ತೊಡಗಿರುವುದು ತಿಳಿದುಬರುತ್ತದೆ. ಮ್ಯಾಕ್ಸ್‌‌ ಅಂತಿಮವಾಗಿ ಲೂಪಿನೋ'ನ ಬಲಗೈ ಮನುಷ್ಯನಾದ ವಿನ್ನೀ ಗಾಗ್ನಿಟ್ಟೀನನ್ನು; ಪತ್ತೆ ಹಚ್ಚಿ ಅವನನ್ನು ಗಾಯಗೊಳಿಸಿದ ನಂತರ ಗಾಗ್ನಿಟ್ಟೀಯನ್ನು ನಗರದುದ್ದಕ್ಕೂ ಅಟ್ಟಿಸಿಕೊಂಡು ಹೋಗುತ್ತಾನೆ ಹಾಗೂ ಕೊನೆಗೆ ಲೂಪಿನೋ'ನ ಅಡಗುತಾಣದ ಸ್ಥಳ ಪತ್ತೆಹಚ್ಚುತ್ತಾನೆ. ಉನ್ಮತ್ತ ಲೂಪಿನೋನನ್ನು ಗುಂಡಿಕ್ಕಿ ಕೊಂದ ನಂತರ, ಪೇನ್‌ ಓರ್ವ ಕರಾರು ಕೊಲೆಗಡುಕಿ ಮೋನಾ ಸ್ಯಾಕ್ಸ್‌ಳನ್ನು ಭೇಟಿ ಮಾಡುತ್ತಾನೆ, ಅಲ್ಲಿ ಆಕೆ ಆತನ ಮದ್ಯಕ್ಕೆ ವಾಲ್ಕಿರ್‌ಅನ್ನು ಬೆರೆಸಿರುತ್ತಾಳೆ. ಈ ಸ್ಥಿತಿಯಲ್ಲಿ ಮ್ಯಾಕ್ಸ್‌‌ನನ್ನು ನೋಡಿದ ಮಾಫಿಯಾದವರು ಆತನನ್ನು ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡುತ್ತಾರೆ.

ಮ್ಯಾಕ್ಸ್‌‌ ಮಾಫಿಯಾದಿಂದ ತಪ್ಪಿಸಿಕೊಂಡು ವ್ಲಾಡಿಮಿರ್‌ ಲೆಮ್‌ನೊಂದಿಗೆ ಕಿರು ಮೈತ್ರಿ ಮಾಡಿಕೊಳ್ಳುತ್ತಾನೆ. ಆತ ಛಾರನ್‌ ಎಂಬ ಬ್ರೂಕ್ಲಿನ್‌ ನದಿ ಸಮೀಪದಲ್ಲಿರುವ ಸರಕು ಸಾಗಣೆ ಹಡಗನ್ನು ಹತ್ತಿರುವ ವ್ಲಾಡಿಮಿರ್‌‌ ತಂಡದ ವಿಶ್ವಾಸದ್ರೋಹಿಯೊಬ್ಬನನ್ನು ಕೊಲ್ಲಲು ಒಪ್ಪಿಕೊಳ್ಳುತ್ತಾನೆ. ಈ ಸಹಾಯ ಮಾಡಿದುದರ ಪ್ರತಿಫಲವಾಗಿ ಆ ಹಡಗಿನಲ್ಲಿರುವ ರಷ್ಯನ್‌ ದರೋಡೆಕೋರರಿಗೆ ಸೇರಿದ ಶಕ್ತಿಶಾಲಿ ಮದ್ದುಗುಂಡುಗಳ ದಾಸ್ತಾನ/ಸರಕನ್ನು ಮ್ಯಾಕ್ಸ್‌‌ ಇಟ್ಟುಕೊಳ್ಳುತ್ತಾನೆ. ಮಾಫಿಯಾ ರೆಸ್ಟೋರೆಂಟ್‌ ಕಾಸಾ ಡಿ ಏಂಜೆಲೋನಲ್ಲಿ ತನ್ನ ಮೇಲೆ ನಡೆದ ಹಠಾತ್‌ ಬಾಂಬ್‌ ಆಕ್ರಮಣದಿಂದ ಉಳಿದುಕೊಂಡ ನಂತರ, ಮ್ಯಾಕ್ಸ್‌‌ ಹೊಸದಾಗಿ ಸಿಕ್ಕಿದ ರಷ್ಯನ್‌ ತಂಡ'ದ ಶಸ್ತ್ರಗಳನ್ನು ಬಳಸಿ ಡಾನ್‌/ಮುಖಂಡ ಪಂಚಿನೆಲ್ಲೋನ ಗೃಹದ ಮೇಲೆ ದಾಳಿ ಮಾಡಿದಾಗ ಅಲ್ಲಿ ಮೋನಾ'ಳ ಸಹೋದರಿ ಲೀಸಾ ಪಂಚಿನೆಲ್ಲೋಳ ಮೃತದೇಹವನ್ನು ಕಾಣುತ್ತಾನೆ. ಪೇನ್‌ನೆದುರಿಗೆ ನಿಗೂಢ ಏಸಿರ್‌ ಕಾರ್ಪೋರೇಷನ್‌ನ ಕ್ರೂರಿ CEO ನಿಕೋಲ್‌ ಹಾರ್ನೆಳ ಕಡೆಯವರು ಮಾಫಿಯಾ ಸದಸ್ಯರನ್ನು ಕೊಂದಾಗ ಮ್ಯಾಕ್ಸ್‌‌ಗೆ, ಡಾನ್‌ ವಾಲ್ಕಿರ್‌ ಮಾರುಕಟ್ಟೆಯ ಕೈಗೊಂಬೆ ಮಾತ್ರವಷ್ಟೆ ಎಂಬುದು ಮನವರಿಕೆಯಾಗುತ್ತದೆ. ಹಾರ್ನೆ ಮ್ಯಾಕ್ಸ್‌‌ನಿಗೆ ವಾಲ್ಕಿರ್‌ನ ಅತಿಪ್ರಾಷನವನ್ನು ಚುಚ್ಚುಮದ್ದಿನ ಮೂಲಕ ನೀಡಿ ಸಾಯಲು ಬಿಡುತ್ತಾಳೆ. ನಂತರ ಆತ ಮಾದಕವಸ್ತು ಪ್ರೇರಿತ ದುಃಸ್ವಪ್ನಗಳನ್ನು ಹಾಗೂ ತನ್ನ ಕುಟುಂಬವನ್ನು ಉಳಿಸಿಕೊಳ್ಳಲಾಗದ ಮಾನಸಿಕ ಹಿಂಸೆ ಹಾಗೂ ಅಪರಾಧಿಭಾವವನ್ನು ಅನುಭವಿಸುತ್ತಾನಲ್ಲದೇ ಆತನ ಮರಣಿಸಿದ ಪತ್ನಿ ಆತ ಕೇವಲ ವಿಡಿಯೋ ಆಟ ಹಾಗೂ ಚಿತ್ರಕ ಕಾದಂಬರಿಯಲ್ಲಿನ ಒಂದು ಪಾತ್ರವಷ್ಟೇ ಎಂದು ತಿಳಿಸಿದ ವಿಚಿತ್ರ ಪತ್ರ ಬರೆದಳೆಂದು ಹೇಳಲಾದುದನ್ನೂ ನೋಡುತ್ತಾನೆ.

ಅತಿಪ್ರಾಷನದಿಂದ ಕಷ್ಟಪಟ್ಟು ಉಳಿದುಕೊಂಡು ಎಚ್ಚರಗೊಂಡ ನಂತರ, ಪೇನ್‌ ತನ್ನ ಏಕೈಕ ಸುಳಿವಿನ ಜಾಡನ್ನು ಹಿಡಿದು ಗೋಪ್ಯ ಸೇನಾ ಸಂಶೋಧನಾ ಕಟ್ಟಡದ ಮೇಲಿರುವ ಉಕ್ಕಿನ ಎರಕಗೃಹ/ಫೌಂಡ್ರಿಯನ್ನು ತಲುಪುತ್ತಾನೆ. 1990ರ ದಶಕದ ಆದಿಯ U.S. ಸೇನೆಯ ಸೈನಿಕರ ಸಾಮರ್ಥ್ಯ ಹಾಗೂ ನೈತಿಕ ಬಲವನ್ನು ಸುಧಾರಿಸುವ ಪ್ರಯತ್ನವಾಗಿ ಹಿಂದಿನ ದ ಲ್ಯಾಡರ್‌ ಪ್ರಯೋಗಗಳ ನಂತರ ನಡೆಸಿದ ವಲ್‌ಹಲ್ಲಾ ಯೋಜನೆಯ ಫಲವೇ ವಾಲ್ಕಿರ್‌ ಎಂದೂ ಹಾಗೂ; ಅದು ಫಲಪ್ರದವಾಗದ ಕಾರಣ ಅದನ್ನು ತಕ್ಷಣವೇ ಸ್ಥಗಿತಗೊಳಿಸಿದರೂ ನಂತರ ಅದನ್ನು ಹಾರ್ನೆ ಹಾಗೂ ಏಸಿರ್‌ ಮುಂದುವರೆಸಿದ್ದಾರೆಂದು ಕಂಡುಕೊಳ್ಳುತ್ತಾನೆ. ಆಗ ಆತ ತನ್ನ ಪತ್ನಿ ಈ ಯೋಜನೆಯ ಬಗ್ಗೆ ಆಕಸ್ಮಿಕವಾಗಿ ಕಂಡುಕೊಂಡುದು ಹಾಗೂ ಹಾರ್ನೆ ಹುಚ್ಚು ಹಿಡಿದ ವಾಲ್ಕಿರ್‌ನ ಪರೀಕ್ಷೆಗೆ ಒಳಪಟ್ಟವರನ್ನು ಆತನ ಗೃಹದೆಡೆಗೆ ನುಗ್ಗಿಸಿದಳು ಎಂಬುದನ್ನೂ ಕಂಡುಕೊಳ್ಳುತ್ತಾನೆ. ಏಸಿರ್‌ ವಿಜ್ಞಾನಿಗಳೂ ಸೇರಿದಂತೆ ದಾಖಲೆ ಹಾಗೂ ಸಾಕ್ಷಿಗಳನ್ನು ನಾಶ ಮಾಡಲು ಭೂಗತ ಬಂಕರ್‌ನ ಸ್ವಯಂನಾಶದ "ಆಪರೇಷನ್‌ ಡೆಡ್‌ ಐಸ್‌" ಕಾರ್ಯಾಚರಣೆಗೆ ಸೂಚನೆ ನೀಡುತ್ತದೆ. ಮ್ಯಾಕ್ಸ್‌‌ ಬಂಕರ್‌ನಿಂದ ಅಂತಿಮ ಕ್ಷಣದಲ್ಲಿ ಪಾರಾಗುತ್ತಾನೆ.

ಮ್ಯಾಕ್ಸ್‌‌ಗೆ ಆಗ B.B.ನಿಂದ ಕರೆ ಬರುತ್ತದೆ, ಗ್ಯಾರೇಜ್‌ ಒಂದರಲ್ಲಿ ಭೇಟಿಯನ್ನು ಏರ್ಪಾಡು ಮಾಡಲಾಗಿರುತ್ತದೆ. B.B. ಆಗ ತಾನೇ ಅಲೆಕ್ಸ್‌ನನ್ನು ಕೊಂದಿದ್ದು ಹಾಗೂ ಆತನ ಕೊಲೆಯ ಆರೋಪ ಮ್ಯಾಕ್ಸ್‌‌ನ ಮೇಲೆ ಬರುವಂತೆ ಮಾಡಿದ್ದು ಎಂದು ಬಹಿರಂಗಪಡಿಸುತ್ತಾನೆ; ಆಗ ತುಪಾಕಿ-ಸಮರವು ಗ್ಯಾರೇಜ್‌ನ ಮೂಲಕ ಆರಂಭವಾಗಿ, ಮ್ಯಾಕ್ಸ್‌‌ ಅವನನ್ನು ಅಟ್ಟಿಸಿಕೊಂಡು ಹೋಗುತ್ತಾನೆ. ವಿಶ್ವಾಸಘಾತಕನನ್ನು ಕೊಂದ ನಂತರ, ಮ್ಯಾಕ್ಸ್‌‌ಗೆ ಅಸ್ಗರ್ಡ್‌ ಕಟ್ಟಡಕ್ಕೆ ಬರುವಂತೆ ಆಲ್‌ಫ್ರೆಡ್‌ ವೊಡೆನ್‌ ಎಂಬಾತನಿಂದ ದೂರವಾಣಿ ಕರೆ ಬರುತ್ತದೆ. ಆಲ್‌ಫ್ರೆಡ್‌ "ಇನ್ನರ್‌ ಸರ್ಕಲ್‌ " ಎಂಬ ಸರ್ಕಾರದೊಂದಿಗೆ ಸುಭದ್ರ ಬಾಂಧವ್ಯ ಹೊಂದಿರುವ ಶಕ್ತಿಶಾಲಿ ರಹಸ್ಯ ಸಂಸ್ಥೆಯ ಭಾಗವೆಂದು ತನ್ನ ಬಗ್ಗೆ ಪರಿಚಯಿಸಿಕೊಳ್ಳುತ್ತಾನೆ. ಇನ್ನರ್‌ ಸರ್ಕಲ್‌ನ ಸದಸ್ಯರು ಮ್ಯಾಕ್ಸ್‌‌ಗೆ ನಿಕೋಲ್‌ ಹಾರ್ನೆ'ಯ ಚಹರೆ/ಗುರುತು ವಿವರಗಳನ್ನು ತಿಳಿಸಿ ತಾವೇ ಆಕೆಯ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ, ಏಕೆಂದರೆ "ತಮ್ಮ ಕೈಗಳು ಕಟ್ಟಿಹಾಕಲ್ಪಟ್ಟಿವೆ" ಎಂದು ಹೇಳುತ್ತಾರೆ. ಅವರು ಮ್ಯಾಕ್ಸ್‌‌ಗೆ ಹಾರ್ನೆಯನ್ನು ತನ್ನ ಮೇಲಿರುವ ಯಾವುದೇ ಅಪರಾಧದ ಆರೋಪಗಳಿಂದ ಮುಕ್ತಗೊಳಿಸುವುದರ ಬದಲಾಗಿ ಕೊಲ್ಲುವಂತೆ ಕೇಳುತ್ತಾರೆ. ಆಸ್ಗಾರ್ಡ್‌ ಕಟ್ಟಡದ ಮೇಲೆ ಆಗ ದಾಳಿ ನಡೆಸಿದ ಏಸಿರ್‌ ತಂಡದವರು ಸಭೆಯ ಕೋಣೆಯಲ್ಲಿದ್ದ ಮ್ಯಾಕ್ಸ್‌‌ ಹಾಗೂ ಗುಂಡು ಹೊಡೆಸಿಕೊಂಡಂತೆ ನಟಿಸುತ್ತಿದ್ದ ವೊಡೆನ್‌ರನ್ನು ಬಿಟ್ಟು ಎಲ್ಲರನ್ನು ಹತ್ಯೆಗೈಯುತ್ತಾರೆ. ಮ್ಯಾಕ್ಸ್‌‌ ತಾನು ಹೊರಬರುವ ದಾರಿಗೆ ತಾನೇ ಹೋರಾಡಬೇಕಿರುತ್ತದೆ.

ಮ್ಯಾಕ್ಸ್‌‌ ಏಸಿರ್‌ ಕಾರ್ಪೋರೇಷನ್‌ನ ಬರೀ ಭದ್ರತೆಯ ಆಧುನಿಕ ತಂತ್ರಜ್ಞಾನದ ಸುರಕ್ಷತೆ ಹೊಂದಿದ್ದ ಕಛೇರಿಗೆ ಬಂದು ಗಸ್ತು ತಿರುಗುತ್ತಿದ್ದ ಶಸ್ತ್ರಸಜ್ಜಿತ ಹೆಲಿಕಾಪ್ಟರ್‌ನ ಕಣ್ತಪ್ಪಿಸಿ ಕಟ್ಟಡದ ಮೇಲಕ್ಕೆ ತಲುಪುತ್ತಾನೆ. ಆತ ಮೇಲಕ್ಕೆತ್ತುವ ಯಂತ್ರ/ಲಿಫ್ಟ್‌ನಲ್ಲಿ ಮತ್ತೆ ಮೋನಾ ಸ್ಯಾಕ್ಸ್‌ಳೊಂದಿಗೆ ಮುಖಾಮುಖಿಯಾಗುತ್ತಾನೆ, ಆದರೆ ಆಕೆ ಮ್ಯಾಕ್ಸ್‌ಗೆ ಗುಂಡಿಕ್ಕಲು ನಿರಾಕರಿಸಿದ ಕಾರಣ ಆಕೆಯ ಹಣೆಗೆ ಗುಂಡು ಹಾರಿಸಿ ಹಾರ್ನೆಯ ಮಂದಿ ಕೊಲ್ಲುತ್ತಾರೆ‌. ಮ್ಯಾಕ್ಸ್‌‌ ಮೇಲಕ್ಕೆತ್ತುವ ಯಂತ್ರ/ಲಿಫ್ಟ್‌‌ಗೆ ಮರಳಿದಾಗ ಆಕೆಯ ಮೃತದೇಹವು ಮಾಯವಾಗಿರುತ್ತದೆ. ಮ್ಯಾಕ್ಸ್‌‌ ಅಂತಿಮವಾಗಿ ನಿಕೋಲ್‌ಗೆ ಅಭಿಮುಖವಾಗುತ್ತಾನೆ, ಆಕೆ ತಪ್ಪಿಸಿಕೊಂಡು ಮೇಲ್ಛಾವಣಿಗೆ ಹೋಗಿ ಅಲ್ಲಿಂದ ಹೆಲಿಕಾಪ್ಟರ್‌ಅನ್ನು ಹತ್ತುತ್ತಾಳೆ. ಮ್ಯಾಕ್ಸ್‌‌ ಕಟ್ಟಡದ ಆಂಟೆನಾದ ಸರಪಣಿಗಳಿಗೆ ಷೂಟ್‌ ಮಾಡುತ್ತಾನೆ, ಅವು ತಕ್ಷಣ ಮುರಿದು ಹೆಲಿಕಾಪ್ಟರ್‌ನ ಮೇಲೆ ಬಿದ್ದು ಹಾರ್ನೆಯನ್ನು ಕೊಲ್ಲುತ್ತವೆ. ಆಟ'ದ ಕಥಾಭಾಗವು ಅದು ಆರಂಭವಾದಲ್ಲಿಗೆ ಬಂದಿರುತ್ತದೆ. ನ್ಯೂಯಾರ್ಕ್‌ ನಗರದ ಆರಕ್ಷಕ ಇಲಾಖೆಯ ತುರ್ತು ಸೇವೆ ಘಟಕವು ಸನ್ನಿವೇಶದ ಸ್ಥಳಕ್ಕೆ ಭೇಟಿ ನೀಡಿ ಮ್ಯಾಕ್ಸ್‌‌ನನ್ನು ದಸ್ತಗಿರಿ ಮಾಡಿ ಆತನನ್ನು ಕಟ್ಟಡದಿಂದ ಹೊರತರುತ್ತದೆ, ಅಲ್ಲಿ ಆತ ಆಲ್‌ಫ್ರೆಡ್‌ ವೊಡೆನ್‌ನನ್ನು ನೋಡುತ್ತಾನೆ. ನ್ಯಾಯಿಕ ವ್ಯವಸ್ಥೆಯ ಮೂಲಕ ತನ್ನನ್ನು ವೊಡೆನ್‌ ಸುರಕ್ಷಿತವಾಗಿ ಹೊರತರುತ್ತಾನೆಂದು ಗೊತ್ತಿದ್ದ ಮ್ಯಾಕ್ಸ್‌‌ ಮುಗುಳುನಗುತ್ತಾನೆ.

ಮ್ಯಾಕ್ಸ್‌‌ ಪೇನ್‌[ಬದಲಾಯಿಸಿ]

ಮ್ಯಾಕ್ಸ್‌‌ ಪೇನ್‌ (ಜೇಮ್ಸ್‌ ಮೆಕ್‌ಕ್ಯಾಫ್ರೆರಿಂದ ಕಂಠದಾನ) ಓರ್ವ ದೇಶಭ್ರಷ್ಠ DEA ಗುಪ್ತಚರ ಹಾಗೂ ಮಾಜಿ NYPD ಪತ್ತೇದಾರನಾಗಿರುತ್ತಾನೆ, ಈತನ ಪತ್ನಿ ಮಿಷೆಲ್‌ ಹಾಗೂ ಅವರ ನವಜಾತ ಪುತ್ರಿಯನ್ನು ವಾಲ್ಕಿರ್‌ ಮಾದಕವಸ್ತು ಪ್ರಕರಣದ ನಿಮಿತ್ತ ಕೊಲ್ಲಲಾಗಿರುತ್ತದೆ. ಮ್ಯಾಕ್ಸ್‌‌ ದುಷ್ಟಕೂಟದೊಳಕ್ಕೆ ಗುಪ್ತವೇಷದಲ್ಲಿ ಪ್ರವೇಶಿಸಿ ಶಿಕ್ಷೆಗಾರನ ಪಾತ್ರಕ್ಕೆ ಸಮನಾದ ಅಂತಿಮವಾಗಿ ಏಕವ್ಯಕ್ತಿ ಶಾಂತಿಸ್ಥಾಪನಾ ಪಡೆಯಾಗುತ್ತಾನೆ.[clarification needed][ಸೂಕ್ತ ಉಲ್ಲೇಖನ ಬೇಕು] ತನ್ನ ಕುಟುಂಬದವರ ಸಾವಿಗೆ ಕಾರಣವಾದ ಎಲ್ಲರ ವಿರುದ್ಧ ಸೇಡು ತೀರಿಸಿಕೊಳ್ಳುವ ಆತನ ಉದ್ದೇಶವನ್ನು ತಡೆಗಟ್ಟಲು ಸಂಕಲ್ಪಿಸಿರುವ ಪೋಲೀಸ/ಆರಕ್ಷಕರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಆತ ನೂರಾರು ಪಾತಕಿಗಳನ್ನು ಹಾಗೂ ಸಂಚುಗಾರರನ್ನೂ[disambiguation needed] ಕೊಲ್ಲುತ್ತಾ ಹೋಗುತ್ತಾನೆ.

ಮ್ಯಾಕ್ಸ್‌‌ ತನ್ನ ಇಚ್ಛೆಗೆ ವಿರುದ್ಧವಾಗಿ ದುರದೃಷ್ಟಕರ ಪರಿಸ್ಥಿತಿಗೆ ಒಳಪಟ್ಟ ವ್ಯಕ್ತಿಯ ಸ್ಥಿತಿಯಲ್ಲಿ - ಓರ್ವ ದುರ್ದೆಶೆಗೊಳಗಾದ ವ್ಯಕ್ತಿಯ ಅದೃಷ್ಟವಾದದ ಅಭಿವ್ಯಕ್ತಿಯಾಗಿದ್ದಾನೆ. ಮ್ಯಾಕ್ಸ್‌‌ ಬಹಳವೇ ಏಕಾಕಿ ವ್ಯಕ್ತಿತ್ವದ ಹಾಗೂ ವಾಸ್ತವದ ಬಗ್ಗೆ ಹೆಚ್ಚು ಪರಿಣಾಮಕಾರಿ ಹಾಗೂ ಶೈಲೀಕೃತ ಸಂವೇದನೆಯನ್ನು ಹೊಂದಿದ್ದ ವ್ಯಕ್ತಿ. ಆತ ಅಂತರ್ಮುಖಿಯಾಗಿದ್ದು ಈ ಗುಣವನ್ನು ಅತಿರೇಕವೆನಿಸುವ ಮಟ್ಟಿಗೆ ಹೊಂದಿರುತ್ತಾನೆ - ಅರೆ-ರೂಪಕೋಕ್ತಿಗಳಿಂದ ಕೂಡಿದ ಸ್ವಗತದಲ್ಲಿ ತನ್ನ ಚರ್ಯೆಗಳು, ಪರಿಸರ ಅಥವಾ ಸಂದರ್ಭವನ್ನು ವ್ಯಕ್ತಪಡಿಸುತ್ತಿರುತ್ತಾನೆ. ಆಟದ ಮೊದಲಿನಲ್ಲಿ ಮ್ಯಾಕ್ಸ್‌‌ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾನೆ - ಓರ್ವ ಬಹಿರ್ಮುಖ ಸಂತೃಪ್ತ ವಿವಾಹಿತನಾಗಿ 'ಉಜ್ವಲ' ವ್ಯಕ್ತಿತ್ವವನ್ನುಳ್ಳ ಹಸನ್ಮುಖ ವ್ಯಕ್ತಿಯಾಗಿರುತ್ತಾನೆ. ಕೊಲೆಗಳ ನಂತರ ಮ್ಯಾಕ್ಸ್‌‌ ತನ್ನ ಜೀವನದ ಅರ್ಥವನ್ನೇ ಕಳೆದುಕೊಂಡು, ಹಿಂದೆ ಮುಂದೆ ನೋಡದೆ ಸಾಗುತ್ತಾನೆ, ಆಗಿನ ಆತನ ಏಕೈಕ ಉದ್ದೇಶ : ಪ್ರತೀಕಾರ.[೫] ಇಡೀ ಸಮಯದುದ್ದಕ್ಕೂ, ಪೇನ್‌ ಬದುಕುಳಿದ ಅಪರಾಧಿ ಮನೋಭಾವದಿಂದ ತನ್ನ ಪರಿಸ್ಥಿತಿಯಲ್ಲೇ ವಿರೋಧಾಭಾಸ ತಂದುಕೊಳ್ಳುತ್ತಾನೆ - ಆತನ ಒಳಗಿನ ಸ್ವಗತವು ಆತನು ವಿಶ್ವವು ತನ್ನ ಪಾಲಿಗೆ ಎಷ್ಟು ಅಂಧಕಾರಮಯವಾಗಿದೆ ಎಂದೂ ಹಾಗೂ ತಾನು ಸಾಯಬೇಕೆಂದು ಇಚ್ಛೆ ವ್ಯಕ್ತಪಡಿಸಿದ್ದರೂ ಆತ ತನ್ನ ಜೀವನವು "ನ್ಯೂಯಾರ್ಕ್‌ ಮಿನಟ್‌ನಲ್ಲಿ" ಕೊನೆಗೊಂಡಿದೆ ಎಂದು ಭಾವಿಸಿದ್ದರೂ, ಬದುಕುಳಿವ ದೃಢ ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ. ಸಾಯುವ ಹಾಗೂ ತನ್ಮೂಲಕ ತನ್ನ ಕುಟುಂಬವನ್ನು ಮತ್ತೆ ಭೇಟಿ ಮಾಡುವ ತೀವ್ರ ಅಭಿಲಾಷೆಯ ನಡುವೆಯೂ, ಆತನು ಬದುಕಿ ತನ್ನ ಸೇಡನ್ನು ತೀರಿಸಿಕೊಳ್ಳಲೂ ಇಚ್ಛಿಸುತ್ತಾನೆ.

ಪೇನ್‌ "ನಾನು ಅವರುಗಳಲ್ಲಿ ಒಬ್ಬನಲ್ಲ, ನಾನು ನಾಯಕ ಖಂಡಿತಾ ಅಲ್ಲ" ಎಂದು ತಾನೇ ಹೇಳುವಂತೆ ಓರ್ವ ಪ್ರತಿನಾಯಕ. ಮತ್ತೊಂದು ರೀತಿಯಲ್ಲಿ, ಮ್ಯಾಕ್ಸ್‌‌ ನೈತಿಕ ಮಹತ್ವಾಕಾಂಕ್ಷೆಯ ವೀರನಾಯಕನೂ ಅಲ್ಲ - ಆತ ಸಿಕ್ಕಿಬಿದ್ದ ವಿನ್ನೀ ಗಾಗ್ನಿಟ್ಟೀನನ್ನು ಕೊಲ್ಲಲಿಲ್ಲ, ಹಾಗೂ ಫಿನಿಟೋ ಸಹೋದರರಿಂದ "ಬೋಗರ್ಟ್‌ ತರಹದ ತಂತ್ರ"ದ ಮೂಲಕ ಮಾಹಿತಿ ಪಡೆಯಲು ಪ್ರಯತ್ನಿಸುತ್ತಾನೆಯೇ ಹೊರತು ಕೈಯಲ್ಲಿ ಬಂದೂಕುಗಳನ್ನು ಹಿಡಿದುಕೊಂಡು ಬಾಗಿಲನ್ನು ಒಡೆದು ಪ್ರವೇಶಿಸುವ ಮೂಲಕ ಅಲ್ಲ. ಮ್ಯಾಕ್ಸ್‌‌ ತನ್ನ ದೃಷ್ಟಿಯಲ್ಲಿ ಸರಿ ಎನಿಸಿದ ಒಂದೇ ಒಂದನ್ನು ಸಾಧಿಸಲು ಪ್ರಯತ್ನಿಸುತ್ತಾನೆ - ತನ್ನ ಕುಟುಂಬದವರ ಪರವಾಗಿ ಸೇಡು ತೀರಿಸಿಕೊಳ್ಳುವುದು. ಹಾಗೆಂದು ಆತ ತನ್ನ ಭಾವನೆಗಳನ್ನು ತೊಡೆದಿರಲಿಲ್ಲ ಮೊದಲು ತಾವಿಬ್ಬರೂ ಭೇಟಿಯಾದಾಗ ಮೋನಾ ಸ್ಯಾಕ್ಸ್‌ಳಿಂದ ಆಕರ್ಷಿತನಾಗುತ್ತಾನೆ ಹಾಗೂ ಸ್ನೇಹಿತರಿಲ್ಲದ ಅಪರಾಧಿ ವ್ಲಾಡಿಮಿರ್‌ ಲೆಮ್‌ನೊಡನೆ ಸ್ನೇಹ ಮಾಡುತ್ತಾನೆ. ಆದಾಗ್ಯೂ, ಈ ವಿಚಾರಗಳನ್ನು ವಿರುದ್ಧವಾಗಿಯೂ ಭಾವಿಸಬಹುದು: ಮ್ಯಾಕ್ಸ್‌‌ ಮೋನಾಳು ತನ್ನ ಜೀವ ಉಳಿಸಿದ ಕಾರಣಕ್ಕಾಗಿ ಹಾಗೂ ಇತ್ತೀಚೆಗೆ ಮರಣಿಸಿದ ತನ್ನ ಪತ್ನಿಯ ಬದಲಿಗೆ ಓರ್ವ ಸಂಗಾತಿಗಾಗಿ ಅವಳನ್ನು ಅವಲಂಬಿಸಿದ್ದು; ತನ್ನ ಶತೃಗಳ ಶತೃವಾದ್ದರಿಂದ ವ್ಲಾಡ್‌ನೊಂದಿಗೆ ಸ್ನೇಹ ಬೆಳೆಸಿರಬಹುದು ಎಂದೂ ಪರಿಭಾವಿಸಬಹುದು.

ಮ್ಯಾಕ್ಸ್‌‌ ಸನ್ನಿವೇಶ ಹಾಗೂ ತನ್ನ ಸುತ್ತಮುತ್ತಲಿನ ವಿಶ್ವವನ್ನು ವಿವರಿಸಲು ಮಾಡುವ ರೂಪಕೋಕ್ತಿಗಳ ಹಾಗೂ ಪದ ಚಮತ್ಕಾರಗಳ ತನ್ನ ಸಂಕೀರ್ಣ ಹಾಗೂ ವಿಲಕ್ಷಣ ಬಳಕೆಗಾಗಿ ಗಮನ ಸೆಳೆದರೂ, ಆತ ಅದನ್ನು ತನ್ನ ಸಹೋದ್ಯೋಗಿಗಳು ಹಾಗೂ ಇತರೆ ವ್ಯಕ್ತಿಗಳ ಮೇಲೆ ಬಳಸುವುದಿಲ್ಲ. ಆತನ ರೂಪಕೋಕ್ತಿಗಳ ಬಳಕೆಯು "ಆಂತರಿಕ"ವಾಗಿರುತ್ತದೆಯೇ ಹೊರತು ಬಾಹ್ಯವಾಗಿ ವ್ಯಕ್ತಗೊಳ್ಳುವುದಿಲ್ಲ; ಮ್ಯಾಕ್ಸ್‌‌ ವಾಸ್ತವತೆಯಲ್ಲಿ ಮಾತನಾಡುತ್ತಿರುತ್ತಾನೆ ಹಾಗೂ ಅನೇಕವೇಳೆ ಪೇನ್‌'ನ ಆಂತರಿಕ ಆಲೋಚನೆಗಳು ಆತ ಮಾತನಾಡುವ ಪಾತ್ರಗಳಿಗೆ ಆತನ ಪ್ರಕ್ರಿಯೆಯ ವಿರುದ್ಧವಾಗಿರುತ್ತವೆ. ಆಟವು ಈ ಕಥೆಯನ್ನು ಮ್ಯಾಕ್ಸ್‌‌ ತನ್ನ ದೃಷ್ಟಿಕೋನದಿಂದ ಮರುಕಥನ ಮಾಡಿದಂತೆ ಬಿಂಬಿಸುತ್ತದೆ.

ಮ್ಯಾಕ್ಸ್‌‌ ಪೇನ್‌ ಪಾತ್ರವನ್ನು ಸೃಷ್ಟಿಸಬೇಕಾದರೆ, 3D ರಿಯಲ್ಮ್‌ಸ್‌‌ "ನಾವು [3D ರಿಯಲ್ಮ್‌ಸ್‌‌] ಡ್ಯೂಕ್‌ ನ್ಯೂಕೆಮ್‌ನನ್ನು ಆಧರಿಸಿ ಕಟ್ಟಲಾದ ಫ್ರಾಂಚೈಸಿ ವ್ಯಾಪಾರದಂತೆಯೇ ಹೊಸ ಕ್ರೀಡಾ ಫ್ರಾಂಚೈಸಿಯನ್ನು ಕಟ್ಟಬಲ್ಲ ಪ್ರಬಲ ಪಾತ್ರವನ್ನು ನಿರ್ಮಿಸಲು ಇಚ್ಛಿಸಿದ್ದೆವು."[೯] ಆಟದ ಶೀರ್ಷಿಕೆ ಪಾತ್ರವನ್ನು ಆಟದ ಕರ್ತೃ ಸ್ಯಾಮ್‌ ಲೇಕ್‌ರನ್ನು ಹೋಲುವಂತೆ ನಿರ್ಮಿಸಲಾಗಿದೆ, ಚಿತ್ರಿತ ಕಾದಂಬರಿಯ ಬಿಡಿ ದೃಶ್ಯಗಳಿಗಾಗಿ ಲೇಕ್‌ ಅದರಂತೆ ಉಡುಪು ಧರಿಸಿ ಆ ಪಾತ್ರವನ್ನು ವಹಿಸಿದ್ದರು. ಮ್ಯಾಕ್ಸ್‌‌ ನಿರ್ಬಂಧಿತ ಅರೆ ಹಲ್ಲುಕಿರಿಯುವಿಕೆ, ಅರೆ ಅವಹೇಳನದ ನಗೆಯ ಮುಖಭಾವವನ್ನು ಹೊಂದಿದ್ದಾನೆ ಎಂದು ಗೇಲಿ ಮಾಡಲಾಗಿತ್ತು; ಅದರ ಉತ್ತರಭಾಗದಲ್ಲಿ ಕೂಡಾ ಈ ಗೇಲಿಯನ್ನು ಪ್ರಸ್ತಾಪಿಸಲಾಗಿದೆ. ಆದರೂ ಮ್ಯಾಕ್ಸ್‌‌ ಪೇನ್‌ 2 ಕ್ಕಾಗಿ, ಲೇಕ್‌ ಪಾತ್ರವನ್ನು ನಿರಾಕರಿಸಿದ್ದರಿಂದ, ಸಾಕಷ್ಟು ಪಾತ್ರಹಂಚಿಕೆಯ ಕಸರತ್ತಿನ ನಂತರ ತಂತ್ರಾಂಶ ಅಭಿವರ್ಧಕರು ನಟ ಟಿಮೊತಿ ಗಿಬ್ಸ್‌ರನ್ನು ಮಾದರಿಯನ್ನಾಗಿ ಇಟ್ಟುಕೊಂಡು ಮ್ಯಾಕ್ಸ್‌‌ ಪೇನ್‌ನ ರೂಪಿಸಲು ಆಯ್ಕೆ ಮಾಡಿದರು.

ಇನ್ನುಳಿದ ಪಾತ್ರಗಳು:[ಬದಲಾಯಿಸಿ]

  • ಮೋನಾ ಸ್ಯಾಕ್ಸ್‌ (ಜ್ಯೂಲಿಯಾ ಮುರ್ನೆರಿಂದ ಕಂಠದಾನ): ಲೀಸಾ ಪಂಚಿನೆಲ್ಲೋಳ ಅವಳಿ ಸಹೋದರಿ ಹಾಗೂ ಓರ್ವ ಕರಾರು ಕೊಲೆಗಡುಕಿಯಾದ, ಮೋನಾಳು ಆಟದ ಖಳನಾಯಕಿ. ಅವಳು ತನ್ನ ಸಹೋದರಿ ಲೀಸಾ'ಳ ದುಷ್ಟ ಪತಿ, ಮಾಫಿಯಾ ನಾಯಕ ಏಂಜೆಲೋ ಪಂಚಿನೆಲ್ಲೋವಿನ ಮೇಲೆ, ಹಗೆತನವನ್ನಿಟ್ಟುಕೊಂಡಿರುವ ಆಕೆಗೆ ಆತನನ್ನು ಕೊಲ್ಲುವ ಇಚ್ಛೆಯಿರುತ್ತದೆ. ಪಂಚಿನೆಲ್ಲೋನ ಕೊಲೆಯಾದ ನಂತರ, ಆಕೆ ಮ್ಯಾಕ್ಸ್‌‌ನನ್ನು ಕೊಲ್ಲಲು ತನ್ನನ್ನು ನೇಮಿಸುವ ನಿಕೋಲ್‌ ಹಾರ್ನೆಯೊಂದಿಗೆ ಸೇರುತ್ತಾಳೆ. ಆಕೆಗೆ ಮಾಡಲು ಸಾಧ್ಯವಾಗದಿರುವುದನ್ನು ಕಂಡು, ಹಾರ್ನೆ'ಯ ಅನುಚರರು ಆಕೆಯ ಹಣೆಗೆ ಗುಂಡಿಕ್ಕಿದ ನಂತರ ಮೇಲಕ್ಕೆತ್ತುವ ಯಂತ್ರ/ಲಿಫ್ಟ್‌‌ದೊಳಗೆ ಕುಸಿದು ಬೀಳುತ್ತಾಳೆ. ಆಕೆ ಉತ್ತರಭಾಗದಲ್ಲಿ ಆಡಬಲ್ಲ ಪಾತ್ರವಾಗಿ ಕಾಣಿಸಿಕೊಳ್ಳುತ್ತಾಳೆ.
  • ನಿಕೋಲ್‌ ಹಾರ್ನೆ (ಜೇನ್‌ ಗೆನ್ನಾರೋರಿಂದ ಕಂಠದಾನ): ವಲ್‌ಹಲ್ಲಾ ಎಂಬ ಸಂಕೇತ-ನಾಮದ ರಹಸ್ಯ ಸೇನಾ ಕಾರ್ಯಾಚರಣೆಯ ಮುಂದಾಳತ್ವ ವಹಿಸಿದ್ದ ಈಕೆ ಆಟ'ದ ಪ್ರಧಾನ ಖಳನಾಯಕಿ. ಯೋಜನೆಯನ್ನು ಸ್ಥಗಿತಗೊಳಿಸಿದರೂ ಹಾರ್ನೆ ವಾಲ್ಕಿರ್‌ ಮಾದಕವಸ್ತುವನ್ನು ಉತ್ಪಾದಿಸುವುದನ್ನು ಮುಂದುವರೆಸುತ್ತಿರುವುದಾಗಿ ತೋರಿಸುವ ದಾಖಲೆಯೊಂದನ್ನು ತಾನು ನೋಡಿದ ನಂತರ ಮಿಷೆಲ್‌ ಪೇನ್‌ಳನ್ನು ಕೊಲ್ಲಿಸಿರುತ್ತಾಳೆ. ಆಟದ ಕೊನೆಯಲ್ಲಿ ಹಾರ್ನೆ ಮ್ಯಾಕ್ಸ್‌‌ನಿಂದ ಹತಳಾಗುತ್ತಾಳೆ.
  • ಆಲ್‌ಫ್ರೆಡ್‌ ವೊಡೆನ್‌ (ಜಾನ್‌‌ ರಂಡಾಲ್ಫ್‌‌ ಜೋನ್ಸ್‌‌ರಿಂದ ಕಂಠದಾನ): ಆಟದ ಬಹಳಷ್ಟು ಸಮಯದಲ್ಲಿ ಆತ ಮ್ಯಾಕ್ಸ್‌‌ನೊಡನೆ ದೂರವಾಣಿ ಕರೆಗಳ ಮೂಲಕ ಸಂಪರ್ಕವನ್ನಿಟ್ಟುಕೊಂಡು ಬರಲಿರುವ ಅಪಾಯದ ಬಗ್ಗೆ ಎಚ್ಚರಿಸುತ್ತಾ ಅಥವಾ ಮಾಹಿತಿ ನೀಡುತ್ತಾ ಕಾಣದ ಪಾತ್ರವಾಗಿಯೇ ಉಳಿದುಕೊಂಡಿರುತ್ತಾನೆ. ಆಟದ ಕೊನೆಯ ಹೊತ್ತಿಗೆ ಆತ ಮ್ಯಾಕ್ಸ್‌‌ನನ್ನು ಮುಖಾಮುಖಿ ಭೇಟಿ ಮಾಡಿ ಇನ್ನರ್‌ ಸರ್ಕಲ್‌ ಎಂಬ ಹೆಸರಿನ ಇಲ್ಯುಮಿನಾಟಿ-ತರಹದ ಗುಪ್ತಸಂಘಕ್ಕೆ ಪರಿಚಯಿಸುತ್ತಾನೆ. ವೊಡೆನ್‌ ಪೇನ್‌ಗೆ ಹಾರ್ನೆಯು ಆತನ ನಿಜವಾದ ಶತೃ ಹಾಗೂ ಪೇನ್‌ ಆಕೆಯನ್ನು ಕೊಂದರೆ ಉಚಿತವೆಂಬ ತನ್ನ ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ. ಹಾರ್ನೆ'ಳ ಅನುಚರರು ಮ್ಯಾಕ್ಸ್‌‌ನೊಂದಿಗಿನ ಸಭೆಯಲ್ಲಿ ಆತನನ್ನು ಗುಂಡಿಕ್ಕಿದ ಹಾಗೆ ಭಾಸವಾದರೂ, ನಂತರ ಸುರಕ್ಷಾ ಕೇಂದ್ರದಲ್ಲಿ ತನ್ನ ಮೃತ ಸಂಗಡಿಗರನ್ನು ಬಿಟ್ಟು ಎದ್ದು ಬರುವುದನ್ನು ತೋರಿಸಲಾಗುತ್ತದೆ. ಉತ್ತರಭಾಗದಲ್ಲಿ ಆತ U.S. ಸೆನೆಟ್‌ ಸದಸ್ಯನಾಗಿ ಮತ್ತೆ ಕಾಣಿಸಿಕೊಳ್ಳುತ್ತಾನೆ.
  • ಏಂಜೆಲೋ ಪಂಚಿನೆಲ್ಲೋ (ಜೋ ರಾಗ್ನೋರಿಂದ ಕಂಠದಾನ) : ಈತ ರಷ್ಯನ್ನರೊಂದಿಗೆ ಗ್ಯಾಂಗ್‌ವಾರ್‌ನಲ್ಲಿ ತೊಡಗಿರುವ ಹಾಗೂ ವಾಲ್ಕಿರ್‌ ಮಾದಕದ್ರವ್ಯವನ್ನು ವಿತರಿಸುವ ಓರ್ವ ಇಟಲಿಯ ಪಾತಕಿಗಳ ನಾಯಕ. ಹಾರ್ನೆಳಿಂದ ನಿಯಂತ್ರಿತಗೊಳ್ಳುತ್ತಿದ್ದಾನೆಂದು ತಿಳಿದುಬರುವವರೆವಿಗೂ ಬಹುಪಾಲು ಆಟದುದ್ದಕ್ಕೂ ಆತ ಪ್ರಮುಖ ಖಳನಾಯಕನಾಗಿಯೇ ಮುಂದುವರೆಯುತ್ತಾನೆ. ಮ್ಯಾಕ್ಸ್‌‌ಗೆ ತಾನು ವಿಪರೀತ ಮಾಹಿತಿಯನ್ನು ನೀಡುವ ಮುಂಚೆ ನಂತರ ಆತನು ಹಾರ್ನೆ'ಳ ಕಡೆಯ ಗೂಂಡಾಗಳಿಂದ ಸಾವಿಗೀಡಾಗುತ್ತಾನೆ.
  • ವಿನ್ನೀ ಗಾಗ್ನಿಟ್ಟೀ (ಜೋ ಡಾಲ್ಲೋರಿಂದ ಕಂಠದಾನ): ಲೂಪಿನೋ'ನ ವಾಲ್ಕಿರ್‌-ಪ್ರೇರಿತ ಮನೋವಿಕಾರತೆಯಿಂದಾಗಿ ತನ್ನ ಯಜಮಾನ ತನ್ನನ್ನು ಸಾಯಿಸುವನೆಂದು ಭಯಭೀತನಾಗಿರುವ ಲೂಪಿನೋನ ಪರವಾಗಿ ಕೆಲಸ ಮಾಡುವ ಓರ್ವ ತೀವ್ರ ಉದ್ವಿಗ್ನತೆಯ ಪಾತಕಿ. ಲೂಪಿನೋನ ಸ್ಥಾನ ಪತ್ತೆ ಮಾಡಲು ಆತನನ್ನು ಮ್ಯಾಕ್ಸ್‌‌ ಎದುರಿಸಿದರ ಪರಿಣಾಮವಾಗಿ, ಪೇನ್‌ ಗಾಗ್ನಿಟ್ಟೀನನ್ನು ಕರುಳಿಗೆ ಗುಂಡಿಕ್ಕಿ ನಂತರ ಆತನನ್ನು ನಗರದ ಕಟ್ಟಡಗಳು ಹಾಗೂ ಛಾವಣಿಗಳ ಮೂಲಕ ಅಟ್ಟಿಸಿಕೊಂಡು ಹೋಗುವ ಸಂದರ್ಭ ಎದುರಾಗುತ್ತದೆ. ಮ್ಯಾಕ್ಸ್‌‌ ಆತನನ್ನು ಬೆನ್ನಟ್ಟಿ ಹಿಡಿದಾಗ ಗಾಗ್ನಿಟ್ಟೀಯಿಂದ ಒತ್ತಾಯಪೂರ್ವಕವಾಗಿ ಮಾಹಿತಿಯನ್ನು ಹೊರಗೆಳೆದು ಗಲ್ಲಿಯೊಂದರಲ್ಲಿ ರಕ್ತಸ್ರಾವವಾಗುತ್ತಿರುವಂತೆ ಬಿಟ್ಟು ಹೋಗುತ್ತಾನೆ. ಆತ ಉತ್ತರಭಾಗದಲ್ಲಿ ಮಾಫಿಯಾ ಉಪನಾಯಕನಾಗಿ ಕಾಣಿಸಿಕೊಳ್ಳುತ್ತಾನೆ.
  • ವ್ಲಾಡಿಮಿರ್‌ ಲೆಮ್‌ (ಡಾಮಿನಿಕ್‌ ಹಾಕ್ಸ್‌ಲೇರಿಂದ ಕಂಠದಾನ): ಪ್ರಸ್ತುತ ಏಂಜೆಲೋ ಪಂಚಿನೆಲ್ಲೋನೊಂದಿಗೆ ಹೋರಾಟ ನಡೆಸುತ್ತಿರುವ ಓರ್ವ ರಷ್ಯನ್‌ ಪಾತಕ ತಂಡದ ನಾಯಕ ಹಾಗೂ ಪ್ರಮುಖ ಬಂದೂಕು ಕಳ್ಳಸಾಗಾಣಿಕೆದಾರ. ಆತ ಆಟದ ಒಂದು ಹಂತದಲ್ಲಿ ಮ್ಯಾಕ್ಸ್‌‌ನಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಾ ಹಾಗೂ ಪ್ರಾಸಂಗಿಕವಾಗಿ ಆತನನ್ನು ಪ್ರಮುಖ ಸ್ಥಳಗಳಿಗೆ ಆತನನ್ನು ಕರೆದುಕೊಂಡು ಹೋಗುವುದು ಅಥವಾ ದಾರಿ ತೋರುವುದು ಮುಂತಾದ ಸಹಾಯ ಮಾಡುತ್ತಾ ಆತನೊಂದಿಗೆ ಜೊತೆಗೂಡುತ್ತಾನೆ. ಆತ ಉತ್ತರಭಾಗದಲ್ಲಿ ಸುಸಜ್ಜಿತ ಅಪರಾಧಿ ವ್ಯವಸ್ಥೆಯೊಂದಿಗೆ ಮರೆಮಾಚಿದ ಸಂಪರ್ಕವನ್ನು ಹೊಂದಿರುವ ಪ್ರಭಾವೀ ರೆಸ್ಟೋರೆಂಟ್‌ ಮಾಲಿಕನಾಗಿ ಕಾಣಿಸಿಕೊಳ್ಳುತ್ತಾನೆ.
  • ಜಾಕ್‌ ಲೂಪಿನೋ (ಜೆಫ್‌‌ ಗರ್ನರ್‌‌ರಿಂದ ಕಂಠದಾನ): ಪಂಚಿನೆಲ್ಲೋನ ಅಪರಾಧಿ ಸಂಸ್ಥೆಯ ವಾಲ್ಕಿರ್‌ ವಿತರಣೆಯನ್ನು ನೋಡಿಕೊಳ್ಳುವ ಮಾಫಿಯಾ ಉಪನಾಯಕ ಹಾಗೂ ಓರ್ವ ಮಾಂತ್ರಿಕ. ತನ್ನ ವಾಲ್ಕಿರ್‌ ವ್ಯಸನದಿಂದ ಹುಚ್ಚನಾದ ಆತ ಸೈತಾನನ ಆರಾಧಕನಾಗಿ ಮಾರ್ಪಟ್ಟು, ದೆವ್ವದೊಂದಿಗೆ ಫಾಸ್ಟಿಯನ್‌ ತರಹದ ಒಡಂಬಡಿಕೆ ಮಾಡಿಕೊಳ್ಳುವ ಗೀಳಿಗೆ ಒಳಗಾಗಿರುತ್ತಾನೆ. ಮ್ಯಾಕ್ಸ್‌‌ನನ್ನು ಎದುರಿಸುವ ಸಂದರ್ಭದಲ್ಲಿ ಆತ ಸೈತಾನನ ಪೂಜೆಯ ಮಧ್ಯದಲ್ಲಿರುತ್ತಾನೆ; ಆಗ ಬಂದೂಕಿನ ಹೋರಾಟ ಏರ್ಪಟ್ಟು ಲೂಪಿನೋನನ್ನು ಪೇನ್‌ ಕೊಲ್ಲುತ್ತಾನೆ.
  • B.B. ಹೆನ್ಸ್‌ಲೆ (ಆಡಮ್‌ ಗ್ರಪ್ಪರ್‌ರಿಂದ ಕಂಠದಾನ): ಓರ್ವ ಭ್ರಷ್ಟ DEA ಗುಪ್ತಚರ ಹಾಗೂ ಮ್ಯಾಕ್ಸ್‌‌ನ ಸ್ನೇಹಿತ. ಹಾರ್ನೆಳಿಂದ ಹಣ ಪಡೆದು ಆತ, ಮ್ಯಾಕ್ಸ್‌‌ಗೆ ಕರೆ ಮಾಡಿ ರೈಲು ನಿಲ್ದಾಣದಲ್ಲಿ ಅಲೆಕ್ಸ್‌ ಬಾಲ್ಡರ್‌ನನ್ನು ಭೇಟಿ ಮಾಡಲು ಹೇಳಿ ಅಲ್ಲಿ ಬಾಲ್ಡರ್‌ನನ್ನು ಗುಂಡಿಕ್ಕಿ ಕೊಂದು ಆತನ ಕೊಲೆಯಲ್ಲಿ ಮ್ಯಾಕ್ಸ್‌‌ನನ್ನು ಸಿಕ್ಕಿಹಾಕಿಸುತ್ತಾನೆ. ಆಟದ ಕೊನೆಗೆ ಆತ ಮ್ಯಾಕ್ಸ್‌‌ನನ್ನು ಭೇಟಿ ಮಾಡಿದಾಗ ಹಾರ್ನೆಳಿಗಾಗಿ ಕೆಲಸ ಮಾಡುತ್ತಿರುವ ಓರ್ವ ವಿಶ್ವಾಸಘಾತಕ ಎಂಬುದು ತಿಳಿದುಬರುತ್ತದೆ. ಪೇನ್‌ ಆತನನ್ನು ಬಂದೂಕು ಹೋರಾಟದಲ್ಲಿ ಕೊಲ್ಲುತ್ತಾನೆ.
  • ಡೆಪ್ಯೂಟಿ ಚೀಫ್‌/ಪ್ರಮುಖ ನಿಯೋಗಿ ಜಿಮ್‌ ಬ್ರಾವುರಾ (ಪೀಟರ್‌ ಆಪೆಲ್‌ರಿಂದ ಕಂಠದಾನ): ಈತ ಬಹುಪಾಲು ಆಟದುದ್ದಕ್ಕೂ ಮ್ಯಾಕ್ಸ್‌‌ನನ್ನು ಅಟ್ಟಿಸಿಕೊಂಡು ಹೋಗುತ್ತಿದ್ದರೂ, ಪಾತಕಿಗಳು ಮಾತ್ರವೇ ನಿಜವಾದ ಬಲಿಪಶುವಾದ್ದರಿಂದ ಹಿಂಸೆಯನ್ನು ತಪ್ಪಾಗಿ ಕೆಲವು ಟೀಕಾಕಾರರು ಭಾವಿಸದಿದ್ದರೂ ಆತನನ್ನು ಬಂಧಿಸಲೇಬೇಕೆಂಬ ಉದ್ದೇಶವನ್ನೇನೂ ಇಟ್ಟುಕೊಂಡಿರಲಿಲ್ಲ. ಕೊನೆಯಲ್ಲಿ ಅಂತಿಮವಾಗಿ ಮ್ಯಾಕ್ಸ್‌‌ನನ್ನು ಬಂಧಿಸುತ್ತಾನೆ. ಆಟ'ದ ಉತ್ತರಭಾಗದಲ್ಲಿ ಆತ ಮ್ಯಾಕ್ಸ್‌‌'ನ ಮೇಲಧಿಕಾರಿಯಾಗುತ್ತಾನೆ.
  • ಮಿಷೆಲ್‌ ಪೇನ್‌ (ಹ್ಯಾವಿಲ್ಯಾಂಡ್‌ ಮಾರ್ರಿಸ್‌ರಿಂದ ಕಂಠದಾನ): ಹಾರ್ನೆಳ ಮೇಲೆ ಅಪರಾಧದ ಆಪಾದನೆಯನ್ನು ಹೊರಿಸಿದ ದಾಖಲೆಯು ಜಿಲ್ಲಾ ವಕೀಲರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಮಿಷೆಲ್‌ಳ ಕಣ್ಣಿಗೆ ಬೀಳುತ್ತದೆ, ಇದು ನಂತರ ಆಕೆಯ ಹಾಗೂ ಆಕೆಯ ಮಗುವಿನ ಕೊಲೆಗೆ ಕಾರಣವಾಗುತ್ತದೆ. ಆಕೆ ಆಟದುದ್ದಕ್ಕೂ ಹಿಂದಿನ ಕಥಾಹಂದರದ ನೆನಕೆಯಲ್ಲಿ ಹಾಗೂ ದುಸ್ವಪ್ನಗಳ ಸರಣಿಗಳಲ್ಲಿ ಆಗ್ಗಾಗ್ಗೆ ಕಂಡುಬರುತ್ತಾಳೆ.

ನಾರ್ವೆಯ ದಂತಕಥಾ/ಪುರಾಣ ಉಲ್ಲೇಖಗಳು[ಬದಲಾಯಿಸಿ]

ಆಟದಲ್ಲಿನ ಬಹುತೇಕ ಅಂಶಗಳನ್ನು ನಾರ್ವೆಯ ದಂತಕಥೆ/ಪುರಾಣಗಳಲ್ಲಿನ ವ್ಯಕ್ತಿಗಳ ಹೆಸರುಗಳಿಂದ ಕರೆಯಲಾಗಿದೆ. ಇದನ್ನು ಅನೇಕವೇಳೆ ಆಟ'ದ ಫಿನ್ನಿಷ್‌ ಅಭಿವರ್ಧಕ ಕಂಪೆನಿ, ರೆಮಿಡೀ ಎಂಟರ್‌ಟೇನ್‌ಮೆಂಟ್‌ ನ, ಸ್ಕಾಂಡಿನೇವಿಯಾ ಪರಂಪರೆಗೆ ಸಲ್ಲಿಸುವ ನಮನವೆಂದು ಇದನ್ನು ಭಾವಿಸಿದರೂ, ಇದು ಒಂದು ತರಹದ ತಪ್ಪುಗ್ರಹಿಕೆಯಾಗಿದೆ; ಫಿನ್‌ಲೆಂಡ್‌ಅನ್ನು ಅನೇಕ ವೇಳೆ ಇತರೆ ನಾರ್ಡಿಕ್‌ ರಾಷ್ಟ್ರಗಳೊಂದಿಗೆ ಒಡಗೂಡಿಸುವರಾದರೂ, ಫಿನ್ನಿಷ್‌ ದಂತಕಥೆ/ಪುರಾಣಗಳು ತನ್ನ ನಾರ್ಡಿಕ್‌ ಸಹವರ್ತಿಗಳಿಗಿಂತ ವಾಸ್ತವವಾಗಿ ಗಮನಾರ್ಹ ಬದಲಾವಣೆಗಳನ್ನು ಹೊಂದಿದೆ. ಅವುಗಳಿಗೆ ಇರುವ ಪ್ರತಿಮಾರೂಪಿ ಸ್ಥಾನಗಳಿಗೆ ನೀಡುವ ಗೌರವವಾಗಿ ಅವುಗಳನ್ನು ಆಟದಲ್ಲಿ ಈ ಸನ್ನಿವೇಶ ಹಾಗೂ ಸಜ್ಜಿಕೆಗಳನ್ನು ಆಟದಲ್ಲಿ ಅಳವಡಿಸಿಕೊಂಡಿರುವ ಸಾಧ್ಯತೆ ಹೆಚ್ಚಿದೆ.

ಆಟದಲ್ಲಿ ಆಗ್ಗಾಗ್ಗೆ ಪ್ರಸ್ತಾಪಿಸಲಾಗುವ ಏಸಿರ್‌ ಕಾರ್ಪೋರೇಷನ್‌, ಹಾಗೂ ವಾಲ್ಕಿರ್‌ ಮಾದಕವಸ್ತುವಿನ ಪ್ರಮುಖ ಮೂಲಗಳನ್ನು ನಾರ್ಡಿಕ್‌ ದೇವತೆಗಳ ಪ್ರಮುಖ ಮಹಾಪುರುಷ, ಏಸಿರ್‌ನ ಹೆಸರಿನಿಂದ ಕರೆಯಲಾಗಿದೆ. ಏಸಿರ್‌ ಕಾರ್ಪೋರೇಷನ್‌ನ ಮುಖ್ಯಸ್ಥೆ ನಿಕೋಲ್‌ ಹಾರ್ನೆಯ ಹೆಸರು; ರಾಗ್ನಾರಾಕ್‌ ದಂತಕಥೆಯಲ್ಲಿ ರಾಗ್ನಾರಾಕ್‌ನ ಆರಂಭವನ್ನು ಸೂಚಿಸಲು ಊದ/ಬಾರಿಸಲಾಗುತ್ತಿದ್ದ ಗ್‌ಜಾಲರ್‌ಹಾರ್ನ್‌ಅನ್ನು ನೆನಪಿಸುತ್ತದೆ. ಆಟದ ಘಟನೆಗಳಲ್ಲಿ ಸಂಭವಿಸುವ ಬೃಹತ್‌ ಹಿಮಗಾಳಿಯು ರಾಗ್ನಾರಾಕ್‌ನ ಹಿಂದೆ ಸಂಭವಿಸಿದ್ದ ಕಾಲ್ಪನಿಕ ಘೋರ ಚಳಿಗಾಲವಾದ ಫಿಮ್‌ಬುಲ್ವೆಟರ್‌ಅನ್ನು ಪ್ರತಿನಿಧಿಸುತ್ತದೆ.[೫] ವಾಲ್ಕಿರ್‌ ಮಾದಕ ದ್ರವ್ಯವು ಕಾಲ್ಪನಿಕ ಸೇನಾ ಸಾಮರ್ಥ್ಯ ವೃದ್ಧಿಕಾರಕವಾಗಿದ್ದು ತನ್ನ ಬಳಕೆದಾರರನ್ನು ಅದು ಸಾವಿನ ಭ್ರಮಾಪೂರಿತ ಮಾನಸಿಕ ಚಿತ್ರಣವನ್ನು ಹೊಂದಿದ್ದ ಅಡ್ರಿನಾಲಿನ್‌-ಪೂರಿತ ಹಂತಕರನ್ನಾಗಿ ಮಾರ್ಪಡಿಸುತ್ತಿತ್ತು. ನಾರ್ವೇಯ ದಂತಕಥೆ/ಪುರಾಣಗಳಲ್ಲಿನ ವಾಲ್ಕಿರೀಯರೆಂದರೆ 'ಆರಿಸಿ ವಧಿಸುವವರು/ಚೂಸರ್ಸ್‌ ಆಫ್‌ ಸ್ಲೇನ್‌' ಎಂಬ ಶೌರ್ಯದಿಂದ ಮರಣವನ್ನಪ್ಪಿದ್ದವರ ದೇಹವನ್ನು ಕೊಂಡೊಯ್ಯುತ್ತಿದ್ದ ಹಾಗೂ ಯುದ್ಧಭೂಮಿಯನ್ನು ನೋಡಿಕೊಳ್ಳುತ್ತಿದ್ದ ಯೋಧೆಯರಾಗಿದ್ದರು. ಮ್ಯಾಕ್ಸ್‌‌ ಪೇನ್‌ ನಲ್ಲಿ, ವಲ್‌ಹಲ್ಲಾ ಯೋಜನೆಯು ಕೊಲ್ಲಿ ಯುದ್ಧದ ಸಮಯದಲ್ಲಿ U.S. ಸೈನಿಕರ ಹೋರಾಟದ ಸಾಮರ್ಥ್ಯವನ್ನು ವೃದ್ಧಿಸಲು ವಾಲ್ಕಿರ್‌ ಅನ್ನು ಅಭಿವೃದ್ಧಿಪಡಿಸಿದ ಸರಕಾರಿ-ಪ್ರಾಯೋಜಿತ ಗುಪ್ತ ಯೋಜನೆಯಾಗಿತ್ತು. ನಾರ್ವೆಯ ಪುರಾಣಗಳಲ್ಲಿ, ವಲ್‌ಹಲ್ಲಾ ವಾಲ್ಕಿರೀಗಳಿಂದ ಆಯ್ಕೆಗೊಂಡವರ ಸತ್ತನಂತರ ಜೀವನವಾಗಿತ್ತು; ವಲ್‌ಹಲ್ಲಾಗೆ ಹೋಗುವವರು ನಾರ್ಡಿಕ್‌ ದೇವರುಗಳ ಪರವಾಗಿ ಅವರ ಯುದ್ಧಗಳಲ್ಲಿ ಹೋರಾಡುತ್ತಿದ್ದರು. ವಲ್‌ಹಲ್ಲಾ ನೆಲೆಯಲ್ಲಿ ಗಣಕ ಜಾಲವನ್ನು ಯಗ್‌ಡ್ರಸಿಲ್‌ ಎಂದು ಹೆಸರಿಸಿದ್ದು, ನಾರ್ವೆಯ ವಿಶ್ವವಿಜ್ಞಾನದಲ್ಲಿ ಒಂಬತ್ತು ವಿಶ್ವಗಳನ್ನು ಸಂಪರ್ಕಿಸುವ ಒಂದು ಮರದ ಹೆಸರಾಗಿತ್ತು.

ಜಾಕ್‌ ಲೂಪಿನೋ'ನ ಗಾಥಿಕ್‌ ನೈಟ್‌ಕ್ಲಬ್‌ ರಾಗ್ನಾ ರಾಕ್‌ ಎಂಬುದು ಅನೇಕ ದೇವತೆಗಳ ಸಾವು ಹಾಗೂ ವಿಶ್ವದ ಮರುಹುಟ್ಟಿಗೆ ಕಾರಣವಾಗುವ ಏಸಿರ್‌ ಹಾಗೂ ದೈತ್ಯರ ನಡುವಿನ ಕಾಳಗವಾದ ನಾರ್ವೇಯ ದಂತಕಥಾ ಮಹಾಘಟನೆಯಾದ ರಾಗ್ನಾರಾಕ್‌ನ ಪದ ಚಮತ್ಕಾರವಾಗಿದೆ. ಲೂಪಿನೋ'ನ ಮೂಲನಾಮವು ಫೆನ್ರಿಸ್‌ ತೋಳವನ್ನು ಹೆಸರಿಸುತ್ತಲ್ಲದೇ, ಲೂಪಿನೋ ಎಂಬುದು ತೋಳದ ಲ್ಯಾಟಿನ್ ರೂಪ ಲ್ಯೂಪಸ್‌ ಅನ್ನು ಹೋಲುತ್ತದೆ. ನಾರ್ವೆಯ ದಂತಕಥಾ/ಪುರಾಣಗಳಲ್ಲಿ ಫೆನ್ರಿಸ್‌ ತೋಳವು ದೇವತೆಗಳಿಂದ ಕಟ್ಟಿಹಾಕಲ್ಪಟ್ಟ ಬೃಹತ್‌ ತೋಳವಾಗಿದ್ದು ರಾಗ್ನಾರಾಕ್‌ನ ಅವಧಿಯಲ್ಲಿ ಅಂತಿಮವಾಗಿ ಅದರ ಕಟ್ಟುಗಳಿಗಿಂತಲೂ ಬೃಹತ್ತಾಗಿ ಬೆಳೆದು ತಪ್ಪಿಸಿಕೊಂಡು ಹೋಗುತ್ತದೆ. ಆಲ್‌ಫ್ರೆಡ್‌ ವೊಡೆನ್‌'ನ ಮೂಲನಾವು, ಓರ್ವ ಪ್ರಮುಖ ನಾರ್ವೆಯ ದಂತಕಥಾ/ಪುರಾಣ ಮಹಾದೈವವಾದ ಓಡಿನ್‌ನ ಆಂಗ್ಲೋ-ಸ್ಯಾಕ್ಸನ್‌ ಆವೃತ್ತಿಯಾದ ವೊಡೆನ್‌ನ ಉಲ್ಲೇಖವಾಗಿದ್ದು; ವೊಡೆನ್‌'ನ ಕಣ್ಣುಪಟ್ಟಿಯೂ ಕೂಡಾ ಬುದ್ಧಿವಂತಿಕೆ ಹಾಗೂ ಜ್ಞಾನಗಳಿಗೋಸ್ಕರ ತನ್ನ ಕಣ್ಣನ್ನೇ ಬಲಿಗೊಟ್ಟ ಓಡಿನ್‌ನ ಉಲ್ಲೇಖವಾಗಿದೆ. ಮ್ಯಾಕ್ಸ್‌‌ ವೊಡೆನ್‌ ಹಾಗೂ ಇನ್ನರ್‌ ಸರ್ಕಲ್‌ ಗುಂಪನ್ನು ಅಸ್ಗರ್ಡ್‌ ಕಟ್ಟಡದಲ್ಲಿ ಭೇಟಿಯಾಗುತ್ತಾನೆ: ಅಸ್ಗರ್ಡ್‌ ಎಂಬುದು ನಾರ್ವೆಯ ದಂತಕಥಾ/ಪುರಾಣಗಳಲ್ಲಿ ದೇವತೆಗಳು ವಾಸಿಸುವ ಕ್ಷೇತ್ರ. ಮ್ಯಾಕ್ಸ್‌‌'ನ ಜೊತೆಗಾರನಾದ DEA ಗುಪ್ತಚರ ಅಲೆಕ್ಸ್‌ ಬಾಲ್ಡರ್ ಆತನ ಜೊತೆಗಾರ B.Bನಿಂದ ಕೊಲ್ಲಲ್ಪಡುತ್ತಾನೆ. ನಾರ್ವೆಯ ದಂತಕಥಾ/ಪುರಾಣಗಳಲ್ಲಿ, ಬಾಲ್ಡರ್‌ (ಅಥವಾ ಬಾಲ್ಡುರ್‌) ಮಿಸ್ಟಲ್‌ಟೋನ ಚಿಗುರು ಅಥವಾ ಬಾಣದಿಂದ ಹೊಡೆದಾಗ ಇಲ್ಲವೇ ಆತನ ಎದೆಗೆ ಗುರಿಯಿಟ್ಟು ಎಸೆದಾಗ ಮರಣಿಸುತ್ತಾನೆ. ಬಾಲ್ಡರ್‌'ನ ಸಾವನ್ನು ಅಲೆಕ್ಸ್‌‌ ಹಾಗೂ ಮ್ಯಾಕ್ಸ್‌‌ರನ್ನು B.B. ವಂಚಿಸಿದ ಹಾಗೆಯೇ ಕಪಟ ಹಾಗೂ ಅವ್ಯವಸ್ಥೆಯ ದೇವತೆ ಲೋಕಿಯು ನಿರ್ಧರಿಸಿರುತ್ತಾನೆ, . ಮ್ಯಾಕ್ಸ್‌‌'ನ ಗುಂಡು ಸಮಯದ ಸಾಮರ್ಥ್ಯಗಳು ನಾರ್ವೆಯ ದಂತಕಥಾ/ಪುರಾಣದ (ಅಥವಾ ವೈಕಿಂಗ್‌) ಯೋಧರು ಯುದ್ಧಕ್ಕೆ ತೊಡಗಿದಾಗ ತಮ್ಮನ್ನು ವಿಪರೀತ ಶಕ್ತಿಶಾಲಿ, ಚುರುಕು ದಣಿವಾಗದ ಹಾಗೂ ನೋವಾಗದ ವ್ಯಕ್ತಿಗಳು ಎಂಬ ಭ್ರಮೆಯಿಂದ ಕಾದಾಡುವ ನಾರ್ವೇಯ ಉಗ್ರಯೋಧರ ಸಾಮರ್ಥ್ಯಗಳನ್ನು ಬಿಂಬಿಸುವಂತಿದೆ; ಆತನ ಕಂಠೀಹಾರದ ಮೇಲಿರುವ ಚಿತ್ರವು ವೈಕಿಂಗ್‌ ಲಾಂಗ್‌ಶಿಪ್‌ನದ್ದು.

ಗೇಮ್‌ಬಾಯ್‌ ಅಡ್ವಾನ್ಸ್‌ ಆವೃತ್ತಿ[ಬದಲಾಯಿಸಿ]

ಆಟದ GBA ಆವೃತ್ತಿಯನ್ನು 2003ರಲ್ಲಿ ಮೋಬಿಯಸ್‌ ಎಂಟರ್‌ಟೇನ್‌ಮೆಂಟ್‌ Ltd (ಈಗ ರಾಕ್‌ಸ್ಟಾರ್‌ ಲೀಡ್ಸ್‌‌ ಎಂದು ಹೆಸರಾಗಿರುವ) ಅಭಿವೃದ್ಧಿಪಡಿಸಿತು. ಇದನ್ನು ಗಮನಾರ್ಹ ಮಟ್ಟದ ಅಲ್ಪಸಾಮರ್ಥ್ಯದ ಸಾಧನಕ್ಕೆಂದು ಅಭಿವೃದ್ಧಿಪಡಿಸಿರುವುದರಿಂದ, ಈ ಆವೃತ್ತಿಯು PC ಆವೃತ್ತಿಗಳು ಹಾಗೂ ಅದರ ಎಕ್ಸ್‌ಬಾಕ್ಸ್‌ ಹಾಗೂ ಪ್ಲೇಸ್ಟೇಷನ್‌ 2 ಅವತರಣಿಕೆಗಳಿಂದ ಗಮನಾರ್ಹ ಭಿನ್ನತೆಯನ್ನು ಹೊಂದಿದೆ: 3D ಷೂಟರ್‌ರ ಬದಲಿಗೆ ಷೂಟರ್‌, ಆಟವು ಸ್ಪ್ರೈಟ್‌ ಗ್ರಾಫಿಕ್ಸ್‌ನ ಮೇಲೆ ಆಧಾರಿತವಾಗಿದ್ದು ಸಮಮಾಪನ ದೃಶ್ಯಮಾಪನವನ್ನು ಹೊಂದಿದೆ. ದೃಶ್ಯಮಾಪನದ ಬದಲಾವಣೆಯಲ್ಲದೇ ಆಟದ ರೀತಿಯ ಸೌಲಭ್ಯಗಳು ಪಾತ್ರಗಳ ಚಿತ್ರಿಕೆಯಲ್ಲಿ ಬಹುಭುಜೀಯ ಗ್ರಾಫಿಕ್ಸ್‌ನ ಬಳಕೆಯೂ ಸೇರಿದಂತೆ ಮೂಲ ಆಟಕ್ಕೆ ಬಹುಸಾಮ್ಯತೆ ಹೊಂದಿದೆ. PC ಹಾಗೂ ಕನ್ಸೋಲ್‌ ಆವೃತ್ತಿಗಳ ಕಥೆಯನ್ನೇ ಉಳಿಸಿಕೊಳ್ಳಲಾಗಿದ್ದರೂ, ಮೂಲದಿಂದ ಕೆಲ ಹಂತಗಳನ್ನು ಕೈಬಿಡಲಾಗಿದೆ, ಅಷ್ಟೇ ಅಲ್ಲದೇ ಈ ಆಟದಲ್ಲೂ ಕೆಲ ವಾಯ್ಸ್‌-ಓವರ್‌ಗಳ ಸಂಪೂರ್ಣತೆಯೊಂದಿಗೆ ಮೂಲದ ಚಿತ್ರಿತ ಕಥಾಭಾಗಗಳನ್ನು ನೀಡಲಾಗಿದೆ.

ತಂತ್ರಾಂಶ ಅಭಿವೃದ್ಧಿ[ಬದಲಾಯಿಸಿ]

ರೆಮಿಡಿ ಎಂಟರ್‌ಟೇನ್‌ಮೆಂಟ್‌ ಸಂಸ್ಥೆಯು ಮೊದಲಿಗೆ ಲೋಡೆಡ್‌ ಹಾಗೂ ನಂತರ ಟೂಂಬ್‌ ರೈಡರ್‌ ಗಳ ಯಶಸ್ಸಿನ ನಂತರ (ಅದರ "ಘೋರ ಕ್ಯಾಮೆರಾ ವ್ಯವಸ್ಥೆ"ಯಿಂದ ಹೊರಬರಬೇಕೆಂದು ಸಂಕಲ್ಪಿಸಿದ್ದರೂ) ಡೆತ್‌ ರ್ರ್ಯಾಲಿ ಯನ್ನು (ಅವರ ಪ್ರಥಮ ಆಟ) ಪೂರೈಸಿದ ನಂತರ "3ನೇ ವ್ಯಕ್ತಿ ಸಾಹಸೀ ಆಟಗಳ ಕಲ್ಪನೆಯನ್ನು" 1996ರ ಉತ್ತರಭಾಗದಲ್ಲಿ ಅಭಿವೃದ್ಧಿಪಡಿಸಿತ್ತು.[೯] ಆಟ'ದ ಕಥೆಯ ಪ್ರಕಾರ ಹಾಗೂ ಲೇಖಕ ಸ್ಯಾಮ್‌ ಲೇಕ್‌ರ ಪ್ರಕಾರ, "ಖಾಸಗಿ ಕಣ್ಣು ಹಾಗೂ ನಿರ್ದಯಿ ಆರಕ್ಷಕರ ಮೂಲಮಾದರಿಯೇ ಆರಂಭಿಕ ಬಿಂದುವಾಗಿತ್ತು" ಈ ಮಾದರಿಯನ್ನು ನಂತರ ಆಟದಲ್ಲಿ "ಹೆಚ್ಚು ಮಾನಸಿಕವಾದ ಹಾಗೂ ಆಳವಾದ ಶೈಲಿಯಲ್ಲಿ" ಕಥಾಭಾಗವಾಗಿ ಬಳಸಲಾಗಿದೆ.[೫] ಆಟದ ಮೂಲಮಾದರಿ ಹಾಗೂ ಯೋಜನಾವಿನ್ಯಾಸ ದಾಖಲೆ ಡಾರ್ಕ್‌ ಜಸ್ಟೀಸ್‌ ಹಾಗೂ ಮ್ಯಾಕ್ಸ್‌‌ ಹೀಟ್‌ (ಮ್ಯಾಕ್ಸ್‌‌ ಪೇನ್‌ 2 ನಲ್ಲಿ ಸೇರಿಸಲಾಗಿರುವ ಡಿಕ್‌ ಜಸ್ಟೀಸ್‌ ಎಂದು ಕರೆಯಲಾದ TV ಕಾರ್ಯಕ್ರಮ/ಷೋ ಹಾಗೂ ಕಾಮಪ್ರಚೋದಕ ಚಿತ್ರ ಮ್ಯಾಕ್ಸ್‌‌ ಹೀಟ್‌ ಗಳ ಪದ ಚಮತ್ಕಾರ) ಎಂಬ ಶೀರ್ಷಿಕೆಗಳೊಂದಿಗೆ, ರಚಿಸಿ ಅಲ್ಪ ಸಮಯದಲ್ಲೇ 3D ರಿಯಲ್ಮ್‌ಸ್‌‌ಗೆ ತೋರಿಸಲಾಯಿತು, ಆ ಸಂಸ್ಥೆಯು ಒಂದು ತಂತ್ರಾಂಶ ಅಭಿವೃದ್ಧಿ ವ್ಯವಹಾರಕ್ಕೆ ಸಹಿ ಮಾಡಿದ ನಂತರ ಉತ್ಪಾದನೆ/ನಿರ್ಮಾಣ ಆರಂಭಗೊಂಡಿತು.[೧೦]

ರೆಮಿಡೀ ಮ್ಯಾಕ್ಸ್‌FX (ಅಥವಾ MAX-FX)ಎಂದು ಕರೆಯಲಾಗುತ್ತಿದ್ದ ತಮ್ಮದೇ ಸ್ವಂತ ಗೇಮ್‌ ಎಂಜಿನ್‌ಅನ್ನು ಬಳಸುತ್ತಿದ್ದು, ಮ್ಯಾಕ್ಸ್‌‌ ಪೇನ್‌ ಹಾಗೂ ಅದರ ಉತ್ತರಭಾಗದಲ್ಲಿ ಮಾತ್ರವೇ ಬಳಸಲಾಗಿತ್ತು; ಆವೃತ್ತಿಯ ಬಿಡುಗಡೆಯೊಡನೆ ಮ್ಯಾಕ್ಸ್‌‌ FX ಹಂತ ಸಂಪಾದಕವನ್ನು ಕೂಡಾ ನೀಡಲಾಗಿತ್ತು. ಆಟ'ದ ಕಥೆ ಹಾಗೂ ಆಟದ ರೀತಿಗಳ ಮುಂಚಿನ ಆವೃತ್ತಿಯನ್ನು ಪ್ರದರ್ಶಿಸುವ ಪ್ರಥಮ ಸಾರ್ವಜನಿಕ ತುಣುಕು ಪ್ರದರ್ಶನ ವನ್ನು 1998ರ E3 ಭಾಗದಲ್ಲಿ ಏರ್ಪಡಿಸಲಾಗಿತ್ತು, ಅದರ ನವೀನ ಅಂಶಗಳು ಹಾಗೂ ವಿಶೇಷ ಚಾಕಚಕ್ಯತೆಗಳಿಂದಾಗಿ ಹೆಚ್ಚು ಗಮನ ಸೆಳೆದರೂ, ನಂತರ 3D ರಿಯಲ್ಮ್‌ಸ್‌‌ ನಿರ್ಮಾಪಕರು ತಾವು ಉದ್ದೇಶಪೂರ್ವಕವಾಗಿ ಆಟದ ವಿಪರೀತ ಪ್ರಚಾರವನ್ನು ತಡೆಹಿಡಿದುದಾಗಿ ಹೇಳಿಕೊಂಡರು.[೧೧] ಮ್ಯಾಕ್ಸ್‌‌ ಪೇನ್‌ ಅನ್ನು ಮೂಲತಃ 1999ರ ಬೇಸಿಗೆಯಲ್ಲಿ ಬಿಡುಗಡೆ ಮಾಡಲುದ್ದೇಶಿಸಿತ್ತಾದರೂ, ಅದು ಪದೇ ಪದೇ ಮುಂದೆ ಹೋಗಿ 2000ರಲ್ಲಿ ಬಹಳಷ್ಟು ನವೀಕೃತಗೊಂಡಿತು (ಪ್ರಮುಖವಾಗಿ ಆಟ'ದ ಗ್ರಾಫಿಕ್ಸ್‌ಅನ್ನು ಮತ್ತಷ್ಟು ಹೆಚ್ಚಿನ ವಾಸ್ತವಿಕ ಸಂರಚನೆಗಳನ್ನು ಸೇರಿಸಲಾಯಿತು). ಆಟವನ್ನು ಅಂತಿಮವಾಗಿ Windowsನ ಆವೃತ್ತಿಯಾಗಿ ಜುಲೈ 23, 2001ರಂದು ಬಿಡುಗಡೆ ಮಾಡಲಾಯಿತು.

ಪ್ರತಿಕ್ರಿಯೆ[ಬದಲಾಯಿಸಿ]

 Reception
Aggregate scores
Aggregator Score
GameRankings 89.24%[೧೨]
Review scores
Publication Score
GamePro 4.5/5 stars[೧೩]
GameSpot 9.2[೧೪]
GameZone 9.2[೧೫]
IGN 9.5[೧೬]
JustRPG 70%[೧೭]
Awards
Entity Award
BAFTA Best PC Game of 2001[೧]

ಮ್ಯಾಕ್ಸ್‌‌ ಪೇನ್‌ PC ಹಾಗೂ ಎಕ್ಸ್‌ಬಾಕ್ಸ್‌ ಆವೃತ್ತಿಗಳು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದವಲ್ಲದೇ ಎರಡೂ ಮೆಟಾಕ್ರಿಟಿಕ್‌ನಲ್ಲಿ 89%ರಷ್ಟು ಅಂಕ ಗಳಿಸಿದವು.[೧೮][೧೯]

BBCಯ ವಿಮರ್ಶೆಯೊಂದರ ಪ್ರಕಾರ ಆಟವು "ಒಂದು ಸನ್ನಿವೇಶದ ಪ್ರಕಾರ ಪ್ರೇಕ್ಷಕ ಷೂಟರ್‌ ಆಟವಾಗಿದ್ದು ಸ್ಪಷ್ಟವಾಗಿ ಕಾಣುವಂತೆ ಜಾನ್‌ ವೂರ ಚಿತ್ರಗಳ ಚಲನಚಿತ್ರಕಲೆ ಹಾಗೂ ದ ಮ್ಯಾಟ್ರಿಕ್ಸ್‌ ಗಳಿಂದ ಪ್ರಭಾವಿತವಾಗಿದ್ದು, ಗಮನ ಸೆಳೆಯುವಂತಹಾ ಗ್ರಾಫಿಕ್ಸ್‌ ಹಾಗೂ ಸ್ಫುಟವಾದ ಸಾಹಸ ಸನ್ನಿವೇಶಗಳಿಂದ ಕೂಡಿದೆ," ಯಲ್ಲದೇ ಆಟದ ಗ್ರಾಫಿಕ್ಸ್‌, ಆಟದ ರೀತಿ ಹಾಗೂ ವಿವರಗಳನ್ನು ಕೊಂಡಾಡಿದೆ.[೨೦]

ಪರಂಪರೆ[ಬದಲಾಯಿಸಿ]

ಮ್ಯಾಕ್ಸ್‌ ಪೇನ್‌ 2: ದ ಫಾಲ್‌‌ ಆಫ್‌ ಮ್ಯಾಕ್ಸ್‌‌ ಪೇನ್‌ ಎಂಬ ಹೆಸರಿನ ಉತ್ತರಭಾಗವನ್ನು 2003ರಲ್ಲಿ ಬಿಡುಗಡೆ ಮಾಡಲಾಯಿತು.[೨೧] ಮಾರ್ಚ್‌ 2009ರಲ್ಲಿ, ರಾಕ್‌ಸ್ಟಾರ್‌ ಗೇಮ್ಸ್‌‌ ಸಂಸ್ಥೆಯು ಮ್ಯಾಕ್ಸ್‌ ಪೇನ್‌ 3 ಅನ್ನು, PC, ಪ್ಲೇಸ್ಟೇಷನ್‌‌ 3 ಹಾಗೂ ಎಕ್ಸ್‌ಬಾಕ್ಸ್‌‌ 360ಗಳಿಗೆ ಲಭ್ಯವಾಗುವಂತೆ 2010ರಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಘೋಷಿಸಿತು. ವಿಡಿಯೋ ಆಟದ ಮೇಲೆ ಲಘುವಾಗಿ ಆಧಾರಿತವಾದ ಮ್ಯಾಕ್ಸ್‌ ಪೇನ್‌ ಎಂಬ ಚಿತ್ರವನ್ನು 2008ರಲ್ಲಿ ಬಿಡುಗಡೆ ಮಾಡಲಾಯಿತು, ಇದರಲ್ಲಿ ಮಾರ್ಕ್‌‌ ವಾಹ್ಲ್‌ಬರ್ಗ್‌ ಮ್ಯಾಕ್ಸ್‌‌ ಆಗಿ ಹಾಗೂ ಮಿಲಾ ಕುನಿಸ್‌‌ ಮೋನಾಳಾಗಿ ಅಭಿನಯಿಸಿದ್ದರು.

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. ೧.೦ ೧.೧ 3D Realms (October 28, 2001). "Max Payne wins prestigious BAFTA Award!". Archived from the original on 2012-12-06. Retrieved 2008-12-23.{{cite web}}: CS1 maint: numeric names: authors list (link)
  2. Rick Sanchez (June 14, 2002). "Max Payne Ships to Stores July 16th". Archived from the original on 2012-05-17. Retrieved 2007-06-07.
  3. IGN (July 27, 1999). "Max Payne Dreamcast details". Archived from the original on 2007-10-26. Retrieved 2007-06-07.
  4. Treit, Ryan (2009-04-24). "Max Payne is an Xbox Original". Xbox.com. Retrieved 2009-08-26.
  5. ೫.೦ ೫.೧ ೫.೨ ೫.೩ ದ ಮೇಕಿಂಗ್‌ ಆಫ್‌ ಮ್ಯಾಕ್ಸ್‌‌ ಪೇನ್‌ , ಎಡ್ಜ್‌ , ನವೆಂಬರ್‌r 2, 2008
  6. "The noir of Max Payne". Examiner.com. Retrieved 2008-12-10.[ಶಾಶ್ವತವಾಗಿ ಮಡಿದ ಕೊಂಡಿ]
  7. Matt Martin (2008-03-12). "Grand Theft Auto series has sold 66 million units to date". GamesIndustry.biz. Retrieved 2008-04-01.
  8. "Recommendation of the Board of Directors to Reject Electronic Arts Inc.'s Tender Offer" (PDF). Take-Two Interactive Software, Inc. 2008-03-26. p. 15. Archived from the original (PDF) on 2008-04-08. Retrieved 2008-04-01.
  9. ೯.೦ ೯.೧ ದ ಅಪೋಜೀ FAQ: ಮ್ಯಾಕ್ಸ್‌‌ ಪೇನ್‌ ಅಂಡ್‌ ಮ್ಯಾಕ್ಸ್‌‌ ಪೇನ್‌ 2
  10. "ರೆಮಿಡೀ ಎಂಟರ್‌ಟೇನ್‌ಮೆಂಟ್‌ - ಕಂಪೆನಿ ಇತಿಹಾಸ". Archived from the original on 2008-07-05. Retrieved 2010-05-26.
  11. "ಗೇಮ್‌ ಮ್ಯಾಟರ್ಸ್‌: ಮ್ಯಾಕ್ಸ್‌‌ ಪೇನ್‌: ದ ಮೇಕಿಂಗ್‌ ಆಫ್‌ ಎ ಫ್ರಾಂಚೈಸ್‌‌". Archived from the original on 2013-10-07. Retrieved 2010-05-26.
  12. "Max Payne". GameRankings. Archived from the original on 15 ಏಪ್ರಿಲ್ 2010. Retrieved 25 March 2010.
  13. "Max Payne Review". GamePro. Archived from the original on 7 ಜೂನ್ 2011. Retrieved 25 March 2010.
  14. Kasavin, Greg (July 28, 2001). "Max Payne Review". GameSpot. Retrieved 25 March 2010.[ಶಾಶ್ವತವಾಗಿ ಮಡಿದ ಕೊಂಡಿ]
  15. "Max Payne Review". GameZone. December 16, 2003. Archived from the original on 2 ಮೇ 2009. Retrieved 25 March 2010.
  16. "Max Payne - PC Review". IGN. July 27, 2001. Retrieved 25 March 2010.
  17. Dubey, Nimish (July 25, 2001). "Max Payne Review". JustRPG. Archived from the original on 4 ನವೆಂಬರ್ 2010. Retrieved 25 March 2010.
  18. "Max Payne (PC) on Metacritic". Metacritic. Archived from the original on 2010-05-01. Retrieved 2007-10-12.
  19. "Max Payne (Xbox) on Metacritic". Metacritic. Archived from the original on 2010-05-03. Retrieved 2007-10-12.
  20. Hermida, Alfred (2001-09-21). "Dark, gritty world of Max Payne". BBC News. BBC. Retrieved 2007-10-12.
  21. Ivan Sulic (May 22, 2002). "E3 2002: Max Payne 2 announced". Archived from the original on 2012-05-17. Retrieved 2007-06-07.

ಬಾಹ್ಯ ಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಮ್ಯಾಕ್ಸ್‌‌ ಪೇನ್‌]]
  1. REDIRECT Template:MobyGames
  1. REDIRECT Template:Max Payne