ವಿಷಯಕ್ಕೆ ಹೋಗು

ಪತ್ತೇದಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪತ್ತೇದಾರನು ಸಾಮಾನ್ಯವಾಗಿ ಒಂದು ಕಾನೂನು ಜಾರಿ ಸಂಸ್ಥೆಯ ಸದಸ್ಯನಾಗಿರುವ ತನಿಖೆದಾರನಾಗಿರುತ್ತಾನೆ. ಇವರು ಹಲವುವೇಳೆ ಅಪರಾಧವನ್ನು ಬಗೆಹರಿಸಲು ಸಾಕ್ಷಿಗಳು ಹಾಗೂ ಮಾಹಿತಿದಾರರೊಂದಿಗೆ ಮಾತನಾಡುವುದು, ಭೌತಿಕ ಸಾಕ್ಷ್ಯವನ್ನು ಸಂಗ್ರಹಿಸುವುದು, ಅಥವಾ ದತ್ತಸಂಚಯಗಳಲ್ಲಿ ದಾಖಲೆಗಳನ್ನು ಹುಡುಕುವ ಮೂಲಕ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಇದು ಅಪರಾಧಿಗಳನ್ನು ಬಂಧಿಸುವುದಕ್ಕೆ ದಾರಿಯಾಗುತ್ತದೆ ಮತ್ತು ಅವರನ್ನು ನ್ಯಾಯಾಲಯದಲ್ಲಿ ತಪ್ಪಿತಸ್ಥರೆಂದು ನಿರ್ಣಯಿಸಲು ಅವಕಾಶವಾಗುತ್ತದೆ.[೧] ಪತ್ತೇದಾರನು ಪೋಲಿಸರಿಗಾಗಿ ಅಥವಾ ಖಾಸಗಿಯಾಗಿ ಕೆಲಸ ಮಾಡಬಹುದು.

ಅವಲೋಕನ[ಬದಲಾಯಿಸಿ]

ಅನೌಪಚಾರಿಕವಾಗಿ, ಮತ್ತು ಪ್ರಧಾನವಾಗಿ ಕಲ್ಪಿತ ಕಥನದಲ್ಲಿ, ಪತ್ತೇದಾರನು ಅಪರಾಧಿಯ ಗುರುತು ಹಾಗೂ/ಅಥವಾ ಸ್ಥಳವನ್ನು ಬಹಿರಂಗಪಡಿಸುವ ಸಲುವಾಗಿ, ಸುಳಿವುಗಳು ಹಾಗೂ ವೈಯಕ್ತಿಕ ದಾಖಲೆಗಳನ್ನು ಪರೀಕ್ಷಿಸಿ ಮೌಲ್ಯಮಾಪಿಸುವ ಮೂಲಕ, ಐತಿಹಾಸಿಕ ಅಪರಾಧಗಳು ಸೇರಿದಂತೆ, ಅಪರಾಧಗಳನ್ನು ಬಗೆಹರಿಸುವ, ಪರವಾನಗಿ ಪಡೆದ ಅಥವಾ ಪಡೆದಿರದ ವ್ಯಕ್ತಿಯಾಗಿರುತ್ತಾನೆ.

ಉಲ್ಲೇಖಗಳು[ಬದಲಾಯಿಸಿ]

  1. Bryce, Robert. "Detective (Bureaus) - NYPDS". New York Police Department. City of New York. Retrieved 25 January 2018. Detective work is highly specialized, usually encompassing the examination and evaluation of evidence to apprehend suspects and to build solid cases against them.