ಮೋಜೋ (ಚಲನಚಿತ್ರ)
ಮೋಜೋ 2017 ರ ಕನ್ನಡ ಚಲನಚಿತ್ರವಾಗಿದ್ದು ಶ್ರೀಶಾ ಬೆಳಕವಾಡಿ ಬರೆದು ನಿರ್ದೇಶಿಸಿದ್ದಾರೆ. [೧]
ಕಥಾವಸ್ತು
[ಬದಲಾಯಿಸಿ]ನಾಯಕ ಮೋಹನ್ ತನ್ನ ಸುಪ್ತಪ್ರಜ್ಞೆಯ ಶಕ್ತಿಯಿಂದಾಗಿ ಭವಿಷ್ಯವನ್ನು ನೋಡುವ ಸಾಮರ್ಥ್ಯ ಹೊಂದಿದ್ದಾನೆ. ಮೋಹನ್ ತನ್ನ ಮಾನಸಿಕ ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ವಿವಿಧ ಮನೋವೈದ್ಯರನ್ನು ಕಾಣುತ್ತ ಕೊನೆಗೆ ಅವನ ಕಾಲೇಜು ಸಹವರ್ತಿ ಮಾಯಾಳನ್ನು ಭೇಟಿಯಾಗುತ್ತಾನೆ . ಮಾಯಾ ವ್ಯತಿರಿಕ್ತವಾಗಿ ಹೇಳಿದರೂ, ಮೋಹನ್ ತನ್ನ ಅನುಭವಗಳನ್ನು ನಿಜವೆಂದು ನಂಬುತ್ತಾನೆ. ಮೋಹನ್‌ನ ಆರನೇ ಇಂದ್ರಿಯವು ಅವನನ್ನು ಕೊಲೆ, ಅಪರಾಧ, ಶಂಕಿತ, ಪ್ರೀತಿಯಂತಹ ವಿಲಕ್ಷಣ ಜಟಿಲ ಸಮಸ್ಯೆಗಳ ಬಲೆಯಲ್ಲಿ ಸಿಲುಕಿಸುತ್ತದೆ . ಕೊಲೆಯು ನಿಜವಾಗಿಯೂ ನಡೆದಿದೆಯೇ ?, ಮೋಹನನ ಆರನೇ ಇಂದ್ರಿಯ ನಿಜವೇ ಅಥವಾ ಕಾಲ್ಪನಿಕವೇ , ಮಾಯಾ ಪಾತ್ರವು ಅಸ್ತಿತ್ವದಲ್ಲಿದೆಯೇ ಅಥವಾ ಅದೂ ಒಂದು ಭ್ರಮೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ದಿಗ್ಭ್ರಮೆಗೊಳಿಸುವ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿದ್ದು ಪ್ರೇಕ್ಷಕರನ್ನು ಚಿತ್ರವನ್ನು "ಎರಡನೇ ಬಾರಿ ನೋಡಲು ಬಯಸುವಂತೆ" ಮಾಡುತ್ತದೆ. [೨]
ಪಾತ್ರವರ್ಗ
[ಬದಲಾಯಿಸಿ]ನಿರ್ಮಾಣ
[ಬದಲಾಯಿಸಿ]ಮೋಜೋ ಪೂರ್ವಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ಸಿನಿಮಾದ ಬಹುತೇಕ ಭಾಗಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ, ಮಂಗಳೂರು, ಉಡುಪಿ ಮತ್ತು ಚಿಕ್ಕಮಗಳೂರು ಭಾಗಗಳಲ್ಲಿ ಕೆಲವು ಸಂಕ್ಷಿಪ್ತ ಚಿತ್ರೀಕರಣಗಳನ್ನು ನಡೆಸಿತು. ಮೋಜೋನ ತಾಂತ್ರಿಕ ವಿಭಾಗವು ಅನುಭವಿ ಗಳನ್ನು ಹೊಂದಿತ್ತು. ಬಿ ಅಜನೀಶ್ ಲೋಕನಾಥ್ ಅವರು ಮೋಜೋ ಗೆ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಅಜನೀಶ್ ರಂಗಿತರಂಗ, ಉಳಿದವರು ಕಂಡಂತೆ ಮತ್ತು ಇತ್ತೀಚಿನ ಯಶಸ್ವೀ ಚಿತ್ರ ಕಿರಿಕ್ ಪಾರ್ಟಿ ಯಲ್ಲಿ ತನ್ನ ಕೃತಿಗಳ ಫಿಲ್ಮ್ಫೇರ್, ಐಐಎಫ್ಎ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮೋಜೋಗೆ ಎಸ್‌ಡಿ ಅರವಿಂದ್ ಸಂಗೀತ ಸಂಯೋಜಿಸಿದ್ದಾರೆ. SD ಅರವಿಂದ್ ಅವರು ತಮ್ಮ ಲಾಸ್ಟ್ ಬಸ್ ನ ದೂರಿ ಹಾಡಿಗೆ ಪ್ರಸಿದ್ಧರಾಗಿದ್ದಾರೆ, ಇದನ್ನು ಅಂತರರಾಷ್ಟ್ರೀಯ BBC ಯಲ್ಲಿ ನುಡಿಸಲಾಯಿತು - ಇದು ಕನ್ನಡ ಚಲನಚಿತ್ರೋದ್ಯಮದಿಂದ ಮೊದಲ ಬಾರಿಗೆ ಸಾಧನೆಯಾಗಿದೆ. ರಾಜ್ಯ ಪ್ರಶಸ್ತಿ ವಿಜೇತ ಅನಂತ್ ಅರಸ್ ಅವರು ಛಾಯಾಗ್ರಹಣವನ್ನು ನಿರ್ದೇಶಿಸಿದ್ದಾರೆ [೫] ರಾಜ್ಯ ಪ್ರಶಸ್ತಿ ವಿಜೇತ ಚಿಂತನ್ ವಿಕಾಸ್, ಝೀ ಟೀವಿಯ ಸರೆಗಮಪ ಚಾಂಪಿಯನ್ ಅಂಕಿತಾ ಕುಂದು ಮತ್ತು ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಪ್ರಸಿದ್ಧ ಗಾಯಕ ರಾಜೇಶ್ ಕೃಷ್ಣನ್ ಅವರು ಮೋಜೋಗಾಗಿ ಹಾಡುಗಳನ್ನು ಹಾಡಿದ್ದಾರೆ. [೬]
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
[ಬದಲಾಯಿಸಿ]ಮೋಜೋ 8 ಆಗಸ್ಟ್ 2017 ರಂದು ಫ್ರೀಮಾಂಟ್ USA FOG ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು, ಅಲ್ಲಿ ಅದು ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. [೭]
ವರ್ಷ | ಪ್ರಶಸ್ತಿ | ವರ್ಗ | ಸ್ವೀಕರಿಸುವವರು | ಫಲಿತಾಂಶ |
---|---|---|---|---|
2017 | FOG ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳು [೮] | ಅತ್ಯುತ್ತಮ ಪ್ರಾದೇಶಿಕ ಚಿತ್ರ | ಪೂರ್ವಿ ಆರ್ಟ್ಸ್ <br /> ಗಜಾನನ ಭಟ್ |
ಗೆಲುವು |
ಗೋಲ್ಡನ್ ಗೇಟ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ [೯] | ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರ | ಪೂರ್ವಿ ಆರ್ಟ್ಸ್ <br /> ಗಜಾನನ ಭಟ್ |
ಗೆಲುವು | |
ಕಲ್ಕತ್ತಾ ಅಂತರಾಷ್ಟ್ರೀಯ CULT ಚಲನಚಿತ್ರೋತ್ಸವ [೯] | ಅತ್ಯುತ್ತಮ ಸಾಧನೆ ಪ್ರಶಸ್ತಿ | ಶ್ರೀಶ ಬೆಳಕವಾಡಿ | ಗೆಲುವು | |
ಯುರೇಷಿಯಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ [೯] | ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರ | ಶ್ರೀಶ ಬೆಳಕವಾಡಿ | ಗೆಲುವು | |
ಗ್ಲೆಂಡೇಲ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ [೯] | ಅತ್ಯುತ್ತಮ ಪ್ರಯೋಗಾತ್ಮಕ ಚಿತ್ರ | ಶ್ರೀಶ ಬೆಳಕವಾಡಿ | ನಾಮನಿರ್ದೇಶನ | |
ಗೋಲ್ಡನ್ ಗೇಟ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ [೯] | ಅತ್ಯುತ್ತಮ ವಿಷುಯಲ್ ಎಫೆಕ್ಟ್ಸ್ | ಗಜಾನನ ಭಟ್ | ನಾಮನಿರ್ದೇಶನ | |
ಗೋಲ್ಡನ್ ಗೇಟ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ [೯] | ಅತ್ಯುತ್ತಮ ವಿದೇಶಿ ಚಿತ್ರ | ಶ್ರೀಶ ಬೆಳಕವಾಡಿ | ನಾಮನಿರ್ದೇಶನ |
ಉಲ್ಲೇಖಗಳು
[ಬದಲಾಯಿಸಿ]- ↑ "MOJO director Sreesha Belakvaadi on awards and more". 24 October 2017. Retrieved 30 March 2017.
- ↑ "Mojo Movie Review". 27 October 2017. Retrieved 28 October 2017.
- ↑ "Composing songs for Mojo was gratifying for me". 20 October 2017. Retrieved 21 October 2017.
- ↑ "Into the maze of the mind". 16 August 2017. Retrieved 17 August 2017.
- ↑ "'Mojo features some of the best technicians in the industry'". 17 October 2017. Retrieved 17 October 2017.
- ↑ "After 'Thithi', it's now 'Mojo' creating ripples in film circuit". 13 October 2017. Retrieved 13 October 2017.
- ↑ "'Mojo wins the best regional films'". 31 August 2017. Retrieved 31 August 2017.
- ↑ "'Mojo thrilled the audience'". 10 August 2017. Retrieved 10 August 2017.
- ↑ ೯.೦ ೯.೧ ೯.೨ ೯.೩ ೯.೪ ೯.೫ Desai, Dhwani (27 October 2017). "Mojo introduces a new genre in Kannada cinema". The Times of India. Retrieved 12 September 2018.