ವಿಷಯಕ್ಕೆ ಹೋಗು

ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1972

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈಸೂರು ರಾಜ್ಯ ವಿಧಾನ ಸಭೆ ಚುನಾವಣೆ
1972
ಭಾರತ
19671978
216 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ
ಬಹುಮತ ಪಡೆದ ಪಕ್ಷಪ್ರಮುಖ ವಿರೋಧ ಪಕ್ಷ
ನಾಯಕಡಿ. ದೇವರಾಜ ಅರಸ್
ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ)ಕಾಂಗ್ರೆಸ್ (ಒ)
ಈಗ ಗೆದ್ದ ಸ್ಥಾನಗಳು16524
ಹಿಂದಿನ ಮುಖ್ಯಮಂತ್ರಿಚುನಾಯಿತ ಮುಖ್ಯಮಂತ್ರಿ
ವೀರೇಂದ್ರ ಪಾಟೀಲ್
ಕಾಂಗ್ರೆಸ್ (ಒ)*
ಡಿ. ದೇವರಾಜ ಅರಸ್ ಕಾಂಗ್ರೆಸ್*
* ಎಲೆಕ್ಶನ್‌ ಕಮಿಶನ್‌ ಬಳಸಿದ ಹೆಸರು

ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1972 – ಇದು ಮೈಸೂರು ರಾಜ್ಯದ ಐದನೆಯ ವಿಧಾನಸಭೆಗೆ ಚುನಾವಣೆಗಳು (ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನವೆಂಬರ್ 1 1973ರಲ್ಲಿ ಮರುಹೆಸರಿಸಲಾಯಿತು). 1969ರ ಕಾಂಗ್ರೆಸ್ ವಿಭಜನೆಯ ನಂತರದ ರಾಜ್ಯದ ಮೊದಲ ವಿಧಾನಸಭೆ ಚುನಾವಣೆ. ಈ ವಿಭಜನೆಗೂ ತುಸು ಮುಂಚಿನಿಂದ (29 ಮೇ 1968ರಿಂದ) ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್‌ರು ಕಾಂಗ್ರೆಸ್ (ಒ) ಅಥವಾ ಸಂಸ್ಥಾ ಕಾಂಗ್ರೆಸ್‌ ಸೇರಿದರೆ ಡಿ. ದೇವರಾಜ ಅರಸ್‌ರನ್ನೂ ಒಳಗೊಂಡು ಇತರರು ಇಂದಿರಾ ಗಾಂಧಿ ಬಣದ ಕಾಂಗ್ರೆಸ್‌ಗೆ ಸೇರಿದರು. ವಿಭಜನೆಯ ನಂತರ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿ ಮುಂದುವರೆದರು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇಂದಿರಾ ಬಣ ಗೆಲುವು ಪಡೆಯಿತು ಮತ್ತು ದೇವರಾಜ ಅರಸ್‌ ಮುಖ್ಯಮಂತ್ರಿಯಾದರು. ವಿಧಾನಸಭೆಯು 24 ಮಾರ್ಚ್ 1972 ರಿಂದ 8 ಜೂನ್ 31 ಡಿಸೆಂಬರ್ 1977ರ ವರೆಗೂ ಆಸ್ತಿತ್ವದಲ್ಲಿದ್ದು ವಿಸರ್ಜಿಸಲ್ಪಟ್ಟಿತು. ಈ ಅವಧಿಯಲ್ಲಿ ಕಾಂಗ್ರೆಸ್‌ನ ಕೆ. ಎಸ್. ನಾಗರತ್ನಮ್ಮ ಅವರು ಸ್ಪೀಕರ್ ಆಗಿದ್ದರು.

ಪಲಿತಾಂಶ

[ಬದಲಾಯಿಸಿ]
ಮೈಸೂರು ವಿಧಾನಸಭೆ ಚುನಾವಣೆ, 1972[]
ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳುಸ್ಪರ್ದಿಸಿದ
ಸ್ಥಾನಗಳು
ಗೆಲುವುಠೇವಣಿ ನಷ್ಟಒಟ್ಟಾರೆ ಮತಗಳುಶೇಕಡವಾರು
ಮತಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್212165046,98,82452.17
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಒ)176243223,61,30826.22
ಸಂಯುಕ್ತ ಸಮಾಜವಾದಿ ಪಕ್ಷ293191,52,5561.69
ಭಾರತೀಯ ಕಮ್ಯುನಿಷ್ಟ್ ಪಕ್ಷ43088,9780.99
ಜನತಾ ಪಕ್ಷ21014,3900.16
ಭಾರತೀಯ ಜನ ಸಂಘ1020803,87,4984.30
ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್‌ವಾದಿ)1701392,5081.03
ಇತರ ಪಕ್ಷಗಳು280261,17,5530.93
ಪಕ್ಷೇತರರು2502018911,59,38312.87
ಮೊತ್ತ82021635990,07,006100.00
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.

ಆಧಾರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. STATISTICAL REPORT ON GENERAL ELECTION, 1972 TO THE LEGISLATIVE ASSEMBLY OF MYSORE ELECTION Archived 2016-10-19 ವೇಬ್ಯಾಕ್ ಮೆಷಿನ್ ನಲ್ಲಿ. Election Commission of India, New Delhi, Page 12, Retrieved on 2016-12-02