ಮೇರಿ ಡಿಸೋಜ ಸಿಕ್ವೇರ
ಗೋಚರ
ಮೇರಿ ಡಿಸೋಜರವರು ಭಾರತೀಯ ಮಹಿಳಾ ಹಾಕಿ ಆಟಗಾರ್ತಿ. ಇವರು ಜುಲೈ ೧೮ ೧೯೩೧ ರಂದು ಜನಿಸಿದರು. ೧೯೫೨ರ ಬೇಸಿಗೆ ಕಾಲದ ಒಲಂಪಿಕ್ಸ್ ನಲ್ಲಿ ಮಹಿಳೆಯರ ೧೦೦ ಮೀಟರ್ ಓಟದಲ್ಲಿ ಭಾಗವಹಿಸಿದ್ದರು.[೧] ೨೦೦ ಮೀಟರ್ ಓಟದಲ್ಲಿ ಕಂಚಿನ ಪದಕ ಹಾಗೂ ೪×೧೦೦ ರಿಲೆಯಲ್ಲಿ ಬೆಳ್ಳಿ ಪದಕಗಳನ್ನು ತಮ್ಮ ಸಹೋದರಿಯೊಂದಿಗೆ ೧೯೫೧ರ ಏಷ್ಯನ್ ಕ್ರೀಡಾಕೂಟದಲ್ಲಿ ಜಯಿಸಿದ್ದರು.
ಕ್ರೀಡಾ ಜೀವನ
[ಬದಲಾಯಿಸಿ]ಇವರು ಏಷ್ಯನ್ ಕ್ರೀಡಾಕೂಟ, ಬೇಸಿಗೆ ಒಲಿಂಪಿಕ್ಸ್ ಹಾಗು ಹಲವಾರು ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿದ್ದರು.
ಸಾಧನೆಗಳು
[ಬದಲಾಯಿಸಿ]- ಡಿಸೋಜ ರವರು ೧೯೫೪ರ ಏಷ್ಯನ್ ಕ್ರೀಡಾಕೂಟದಲ್ಲಿ ೪×೧೦೦ ರಿಲೇಯಲ್ಲಿ ಸ್ವರ್ಣ ಪದಕ ಜಯಿಸಿದ್ದರು. ಇವರು ತೆಗೆದುಕೊಂಡ ಸಮಯ ೪೯.೫ ಸೆಕೆಂಡುಗಳು.ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ.
- ೧೯೫೬ರ ಏಷ್ಯನ್ ಕ್ರೀಡಾಕೂಟದಲ್ಲಿ ದಲ್ಲಿ ೨೦೦ ಮೀಟರ್ ಓಟದಲ್ಲಿ ದಾಖಲೆ ನಿರ್ಮಿಸಿ, ಮುಂದೆ ಮೆಲ್ಬೋರ್ನ್ ಒಲಂಪಿಕ್ಸ್ ಗೆ ಆಯ್ಕೆಯಾಗಿದ್ದರು.
- ಇವರು ೧೯೫೧ರ ದೆಹಲಿಯಲ್ಲಿ ನೆಡೆದ ಅಂತರ್ ರಾಷ್ಟ್ರೀಯ ಮಟ್ಟದ ಏಷ್ಯನ್ ಕ್ರೀಡಾಕೂಟದಲ್ಲಿ ೪×೧೦೦ ಮೀಟರ್ ನಲ್ಲಿ ಬೆಳ್ಳಿಯ ಪದಕವನ್ನು ಪಡೆದಿದ್ದರು. ಇದರೊಂದಿಗೆ ೨೦೦ ಮೀಟರ್ ಓಟದಲ್ಲಿ ಕಂಚಿನ ಪದಕವನ್ನು ಪಡೆದಿದ್ದರು. ಈ ಪಂದ್ಯದಲ್ಲಿ ಭಾಗವಹಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದರು.
- ಎರಡನೇ ಏಷ್ಯನ್ ಕ್ರೀಡಾಕೂಟವು ೧೯೫೪ ರಲ್ಲಿ ಮನಿಲಾದಲ್ಲಿ ನೆಡೆದಿತ್ತು. ೪×೧೦೦ ಮೀಟರ್ ನ ರಿಲೆಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.
- ೧೦೦ ಮೀಟರ್ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ೧೯೫೧ ರಿಂದ ೧೯೫೭ ರವರೆಗೆ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ.
- ಏಷ್ಯಾ ಮಟ್ಟದಲ್ಲಿ ೧೨.೩ ಸೆಕೆಂಡ್‌ಗಳ ದಾಖಲೆಯನ್ನು ೧೦೦ ಮೀಟರ್ ಹಾಗೂ ೧೨.೫ ಸೆಕೆಂಡ್‌ಗಳ ದಾಖಲೆಯನ್ನು ೨೦೦ ಮೀಟರ್ ನಲ್ಲಿ ಮಾಡಿದ್ದರು.
- ಭಾರತದ ಮೊದಲ ಫೀಲ್ಡ್ ಹಾಕಿ ತಂಡದ ಆಟಗಾರ್ತಿ ಹಾಗೂ ೧೯೬೩ ರಲ್ಲಿ ಯುಕೆ ಯಲ್ಲಿ ನೆಡೆದ ಅಂತರ್ ರಾಷ್ಟ್ರೀಯ ಮಹಿಳಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
- ಆಸ್ಟ್ರೇಲಿಯದಲ್ಲಿ ನೆಡೆದ ಅಂತರ್ ರಾಷ್ಟ್ರೀಯ ಮಹಿಳಾ ಹಾಕಿ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
- ಭಾರತ ಸರ್ಕಾರದವು ೨೦೧೩ರಲ್ಲಿ ದ್ಯಾನ್ ಚಂದ್ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.[೨]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2020-04-18. Retrieved 2019-08-29.
- ↑ https://www.dnaindia.com/lifestyle/report-hail-mary-hockey-player-mary-d-souza-being-honoured-with-dhyan-chand-award-1882611