ವಿಷಯಕ್ಕೆ ಹೋಗು

ಮೀರಾ ಚಂದ್ರಶೇಖರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ. ಮೀರಾ ಚಂದ್ರಶೇಖರ್
ಜನನ
ಮೀರಾ

ಆಂಧ್ರಪ್ರದೇಶದ ಪಟ್ಟಣವೊಂದರಲ್ಲಿ ೧೯೪೯ ರಲ್ಲಿ ಜನಿಸಿದರು.
ವಿದ್ಯಾಭ್ಯಾಸಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ಪಿಎಚ್.ಡಿ
ಶಿಕ್ಷಣ ಸಂಸ್ಥೆಮದ್ರಾಸ್ ಐ.ಐ.ಟಿ. ಎಂ.ಎಸ್ಸಿ; (೧೯೭೦), ಎಮ್.ಜಿ.ಎಮ್.ವಿಶ್ವವಿದ್ಯಾಲಯ, ಉಡುಪಿ.
ವೃತ್ತಿ(ಗಳು)ಅಮೆರಿಕದ ಮಿಸ್ಸೌರಿ ವಿಶ್ವವಿದ್ಯಾಲಯದಲ್ಲಿ ಭೌತ ಮತ್ತು ಖಗೋಳಶಾಸ್ತ್ರ ವಿಭಾಗದ ಕ್ಯುರೇಟರ್ಸ್ ಪ್ರಾಧ್ಯಾಪಕಿ, ೨೦೧೪ ರ 'ಭೌತಶಾಸ್ತ್ರದಲ್ಲಿ ಮೊಟ್ಟ ಮೊದಲ ಬೇಲರ್ಸ್ ಮಹಾಪ್ರಾಧ್ಯಾಪಕಿ ಪ್ರಶಸ್ತಿ ವಿಜೇತೆ' (೨ ಲಕ್ಷ, ೫೦ ಸಾವಿರ ಡಾಲರ್ ಪ್ರಶಸ್ತಿಯ ಹಣ)
ಗಮನಾರ್ಹ ಕೆಲಸಗಳುಅತ್ಯುತ್ತಮ ವಿಶಯ ಪ್ರಸ್ತಾವನೆ, ದಣಿವರಿಯದ ಸಂಶೋಧಕಿ. 'Hands on Physics Program' ಎಂಬ ವಿಶಿಷ್ಟ ಕಾರ್ಯಕ್ರಮದ ಸ್ಥಾಪಕಿ ಮತ್ತು ನಿರ್ದೇಶಕಿ.
ಸಂಗಾತಿಡಾ.ಎಚ್.ಆರ್.ಚಂದ್ರಶೇಖರ್
ಜಾಲತಾಣweb.missouri.edu/~chandrasekharm/
ಚಿತ್ರ:Meera Chandrasekhar The best teacher awardee(2014).jpg
ರಾಬರ್ಟ್ ಫಾಸ್ಟರ್ ಚೆರ್ರಿ ಅವಾರ್ಡ್ ಕಮಿಟಿಗೆ ಛೇರ್ ಆಗಿರುವ ಮೈಖೇಲ್ ಥಾಂಸನ್, ಪಿ.ಎಚ್.ಡಿ.,ಬೇಲರ್ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್, ವರ್ಷ ೨೦೧೩ ರ ಫೈನಲಿಸ್ಟ್ , ಡಾ. ಮೀರಾ ಚಂದ್ರಶೇಖರ್ ರವರನ್ನು ಸ್ವಾಗತಿಸುತ್ತಿರುವುದು.

'ಡಾ. ಮೀರಾ ಚಂದ್ರಶೇಖರ್', ಅಮೆರಿಕದಲ್ಲಿ ವಾಸಿಸುತ್ತಿರುವ ಒಬ್ಬ ಭಾರತೀಯ ಸಂಜಾತೆ. ಅಮೆರಿಕದ ಮಿಸ್ಸೂರಿ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ, ಮತ್ತು ಖಗೋಳಶಾಸ್ತ್ರ ವಿಭಾಗದ ಕ್ಯುರೇಟರ್ಸ್ ಪ್ರಾಧ್ಯಾಪಕಿಯಾಗಿ ಸೇವೆಸಲ್ಲಿಸುತ್ತಿರುವ ಡಾ.ಮೀರಾ,'೨೦೧೪ ರ ಪ್ರತಿಷ್ಠಿತ ಬೇಲರ್ಸ್ ಮಹಾ ಶಿಕ್ಷಕಿ ಪ್ರಶಸ್ತಿ'ಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.[] ಅರೆವಾಹಕದ ಧ್ಯುತಿ ರೋಹಿತ ದರ್ಶನ, (optical spectroscopy of semiconductors), ಒತ್ತಡದಲ್ಲಿ ಅಧಿವಾಹಕಗಳು,(super conductors under pressure) ಅನುವರ್ತಿ ಪಾಲಿಮರ್ಸ್,(Conjugated polymers), ಧೃವೀಕರಣ,(polarization) ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿದ್ದಾರೆ. ಯುವ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವುದರಲ್ಲಿ ಪ್ರೊ.ಮೀರಾ ಅವರ ಕೊಡುಗೆ ಅಪಾರ. ಇದುವರೆಗೆ ೯೫ 'ರೆವ್ಯೂ ಲೇಖನ'ಗಳನ್ನು ಪ್ರಕಟಿಸಿರುವ ಡಾ. ಮೀರಾ ಚಂದ್ರಶೇಖರ್,'ಹಾಂಡ್ಸ್ ಆನ್ ಫಿಸಿಕ್ಸ್ ಪ್ರೋಗ್ರಾಮ್ಸ್' ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಮಾಧ್ಯಮಿಕ ಹಾಗೂ ಪ್ರಾಥಮಿಕ ಸ್ಥರದ ವಿದ್ಯಾರ್ಥಿಗಳಿಗೆ ಮತ್ತು ಅಲ್ಲಿ ಬೋಧಿಸುವ ಉಪಾಧ್ಯಾಯ/ಯಿನಿ ಯರಿಗೆ ರೂಪಿಸಿ, ಅವರ ವೈಜ್ಞಾನಿಕ ಅಭಿರುಚಿ ಹಾಗೂ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತಿದ್ದಾರೆ. ಡಾ.ಮೀರಾ ಅವರಿಗೆ ಎರಡು ಲಕ್ಷ ೫೦ ಸಾವಿರ ಡಾಲರ್ ಪ್ರಶಸ್ತಿ, ಶ್ರೇಷ್ಟ ಶಿಕ್ಷಕಿಗೆ ಅಮೆರಿಕಾ ದೇಶದಲ್ಲಿ ಪ್ರದಾನಮಾಡುವ ಅತ್ಯಂತ ಹೆಚ್ಚಿನ ಮೊತ್ತದ ಪಾರಿತೋಷವಾಗಿದೆ. ಇದಲ್ಲದೆ ಮೀರಾ ಕಾರ್ಯನಿರ್ವಹಿಸುವ ಫಿಸಿಕ್ಸ್ ಪ್ರಭಾಗಕ್ಕೆ ೫೦ ಸಾವಿರ ಡಾಲರ್ ಹಣವೂ ದೊರೆಯಲಿದೆ. 'ಟೆಕ್ಸಾಸ್ ಕ್ರಿಶ್ಚಿಯನ್ ಯೂನಿವರ್ಸಿಟಿ' ೨೦೧೫ ರ ಸೆಮೆಸ್ಟರ್ ನಲ್ಲಿ ಅವರು ತಮ್ಮ ಉಪನ್ಯಾಸಗಳನ್ನು ಕೊಡುವ ವ್ಯವಸ್ಥೆಯನ್ನು ಹಮ್ಮಿಕೊಂಡಿದ್ದರು. []

ಜನನ/ವಿದ್ಯಾಭ್ಯಾಸ

[ಬದಲಾಯಿಸಿ]

ಮೀರಾರವರ ತಂದೆ, ಭಾರತದ ಸೈನ್ಯದಲ್ಲಿ ಮೇಜರ್ ಆಗಿ ಸೇವೆಸಲ್ಲಿಸುತ್ತಿದ್ದ 'ಮೇಜರ್ ಚಂದ್ರಪಾಲ್', ಹಾಗೂ 'ಕುಸುಮಾ ಚಂದ್ರಪಾಲ'ರ ಮೊದಲನೆಯ ಪುತ್ರಿಯಾಗಿ ಆಂಧ್ರಪ್ರದೇಶದ ಪಟ್ಟಣವೊಂದರಲ್ಲಿ ಜನಿಸಿದರು. ಮುಂದೆ ದಕ್ಷಿಣ ಕನ್ನಡದ ಉಡುಪಿಯ 'ಕುಂಜಿಬೆಟ್ಟು ಬಡಾವಣೆ'ಯಲ್ಲಿ ನೆಲೆಸಿದರು. [] ಮೀರಾಗೆ ಒಬ್ಬ ಸೋದರ, ಇದ್ದಾನೆ. ತಾಯಿ ಕುಸುಮಾ ಸಂದ್ರಪಾಲ್ ಒಬ್ಬ ಸದ್ಗೃಹಸ್ತೆ. ಮೀರಾರವರ ಅಜ್ಜಿ, ಒಬ್ಬ ಶಿಕ್ಷಕಿ. ಶಿಸ್ತಿನ ಸಿಪಾಯಿಯಾಗಿದ್ದರು. ಅವರ ವ್ಯಕ್ತಿತ್ವದ ಪ್ರಭಾವ ಮೀರಾರವರ ಜೀವನದುದ್ದಕ್ಕೂ ಆಯಿತು. ಮೀರಾರವರ ಚಿಕ್ಕಪ್ಪ ಅಮೆರಿಕದಲ್ಲಿ 'ಬ್ರೌನ್ ವಿಶ್ವವಿದ್ಯಾಲಯ'ದ ಸಮೀಪದಲ್ಲಿ ಒಂದು ಖಾಸಗೀ ಕಂಪೆನಿಯಲ್ಲಿ ದುಡಿಯುತ್ತಿದ್ದರು. ಭೌತಶಾಸ್ತ್ರದ ವಿದ್ಯಾರ್ಥಿಯಾಗಿದ್ದ ಅವರು ಜರ್ಮನಿಯ ವಿಶ್ವವಿದ್ಯಾಲಯವೊಂದರಿಂದ ಪಿ.ಎಚ್.ಡಿ.ಗಳಿಸಿದ್ದರು. ಅವರು ಮೀರಾಗೆ ಅಮೆರಿಕಕ್ಕೆ ಬಂದು ಬ್ರೌನ್ ವಿಶ್ವವಿದ್ಯಾಲಯದಲ್ಲಿ ದಾಖಲಾಗಲು ಪ್ರೇರೇಪಿಸಿದರು.

ಹೆಚ್ಚಿನ ಶಿಕ್ಷಣಕ್ಕೆ ಅಮೆರಿಕ

[ಬದಲಾಯಿಸಿ]

೨೯೬೦-೭೦ ರಲ್ಲಿ ವಿದ್ಯಾರ್ಥಿ ಮಹಿಳೆಯರು ಆಗತಾನೆ (ಎಸ್.ಎಂ.ಇ) ಸೈನ್ಸ್ ಮತ್ತು ಇಂಜಿನಿಯರಿಂಗ್ ಸ್ಥಾನಗಳನ್ನು ಅರಸಿಕೊಂಡು ವಿದ್ಯಾಭ್ಯಾಸ ಮಾಡಲು ಆರಂಭಿಸಿದ್ದರು. ಬ್ರೌನ್ ವಿಶ್ವವಿದ್ಯಾಲಯದಲ್ಲೂ ಕೆಲವೇ ಮಹಿಳೆಯರು ಇದ್ದರು. ೧೦೦/೩ ರಸ್ಟು ಮಾತ್ರ. ಮೀರಾ, ಒಂದು ವರ್ಷ ಟೀಚಿಂಗ್ ಸಹಾಯಕಿಯಾಗಿ ಕೆಲಸಮಾಡಿದರು. ಸಂಶೋಧಕಿಯಾಗಿದ್ದ ಮೀರಾ, ತಮಗೆ ಸರಿಹೊಂದುವ ಥೀಸಿಸ್ ಅಡ್ವೈಸರ್ ನ್ನು ಹುಡುಕ ಬೇಕಿತ್ತು. ಮಹಿಳಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯ ಸಿಕ್ಕುತ್ತಿರಲಿಲ್ಲ. ಕೊನೆಗೆ 'ಫ್ರೆಡ್ ಪೊಲ್ಲಾಕ್' ಎಂಬ ಥೀಸಿಸ್ ಅಡ್ವೈಸರ್ ಸಿಕ್ಕರು. ಅವರೊಬ್ಬ ಧನಾತ್ಮಕ ಮನೋಭಾವದ ವ್ಯಕ್ತಿ. ಯಾವಾಗಲು ಸಹಾಯ ಹಸ್ತನೀಡಲು ಸಿದ್ಧರಾದವರು. ಮೀರಾ ೧೯೭೬ ರಲ್ಲಿ ಪಿ.ಎಚ್.ಡಿಯ ನಂತರ 'ಪೋಸ್ಟ್ ಡಾಕ್ಟರಲ್ ಓದಿ'ಗೆ ಜರ್ಮನಿಯ 'ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿ ಟ್ಯೂಟ್ ಗೆ ಸೇರಿದರು. ಆಗ ಮೀರಾರವರ ಪತಿ, ಡಾ.ಚಂದ್ರಶೇಖ ರ್ಅಮೆರಿಕದ ಯೂನಿವರ್ಸಿಟಿ ಆಫ್ ಮಿಸ್ಸೂರಿ'ಯಲ್ಲಿ ಟೀಚಿಂಗ್ ಫ್ಯಾಕಲ್ಟಿಯಲ್ಲಿ ನಿಯುಕ್ತರಾದರು.[] ಅವರ ಜೊತೆ ಮೀರಾ ಅಮೆರಿಕಕ್ಕೆ ತೆರಳಿದರು. ಫಿಸಿಕ್ಸ್ ವಿಭಾಗದ ವಿದ್ಯಾರ್ಥಿನಿಯಾದ ಪ್ರಯುಕ್ತ ೫ ವರ್ಷಗಳ ಕಾಲ ತಾತ್ಕಾಲಿಕ ರಿಸರ್ಚ್ ಅಸೋಸಿಯೇಟ್, ವಿಸಿಟಿಂಗ್ ಪ್ರೊಫೆಸರ್, ಹೀಗೆ ಹಲವು ಹುದ್ದೆಗಳಲ್ಲಿ ಕೆಲವು ವರ್ಷಗಳು ದುಡಿದರು. ೧೯೮೩ ರಲ್ಲಿ ಅಫಿಶಿಯಲ್ ಅಸಿಸ್ಟಂಟ್ ಪ್ರೊಫೆಸರ್, ಎಂದು ನೇಮಕಾತಿಯಾಯಿತು. ಕೆಲವು ವರ್ಷಗಳ ನಂತರ, 'ಅಸೋಸಿಯೇಟ್ ಪ್ರೊಫೆಸರ್' ಆದರು. ೧೯೮೬ ಬಡ್ತಿ ಸಿಕ್ಕು, ೧೯೮೮ ಪೂರ್ಣ ಪ್ರಮಾಣದ ಪ್ರೊಫೆಸರ್ ಆಗಿ ನಿಯುಕ್ತರಾದರು. ಮಿರಾರವರಿಗೆ ಉಪನ್ಯಾಸಕಿಯಾಗಿ ಕೆಲಸಮಾಡಲು ಬಹಳ ಇಷ್ಟ. ಅದರಲ್ಲಿ ಬಹಳ ಸಂಭ್ರಮವನ್ನು ಕಾಣುತ್ತಿದ್ದರು ಬ್ರೌನ್ ವಿಶ್ವವಿದ್ಯಾಲಯದಲ್ಲೂ ೧ ವರ್ಷ ಟೀಚಿಂಗ್ ಅಸಿಸ್ಟಂಟ್ ಆಗಿ ದುಡಿದರು. ಸೈನ್ಸ್ ಮಾತ್ತು ಇಂಜಿನಿಯರಿಂಗ್ ವಿಷಯಗಳನ್ನು ಸಮನ್ವಯ ಗೊಳಿಸಿದ್ದಕ್ಕೆ ೧೯೯೯ ರಲ್ಲಿ 'ರಾಷ್ಟ್ರದ ಅಧ್ಯಕ್ಷರ ಅವಾರ್ಡ್' ಬಂತು. ಮೀರಾರವರ ಆದ್ಯತೆ, ಕೆ-೨ ವಿದ್ಯಾರ್ಥಿಗಳಿಗೆ ಹಾಗೂ ಯುವ ಮಹಿಳೆಯರಿಗೆ ಫಿಸಿಕ್ಸ್ ಬೋಧಿಸುವ ಆಶೆ. ೧೯೯೨ ರಲ್ಲಿ 'ಬೆಕ್ಕಿ ಲಿದರ್ ಲ್ಯಾಂಡ್' ಜೊತೆ ಸೇರಿ, ಕೊಲಂಬಿಯ ಮಿಸ್ಸೌರಿ ಸ್ಕೂಲ್ ನಲ್ಲಿ ಬೋಧಿಸುವ ಕೆಲಸ ಆರಿಸಿಕೊಂಡರು. ಇದಕ್ಕೆ ನ್ಯಾಷನಲ್ ಸೈನ್ಸ್ ಫೌಂಡೇಶನ್ ಸಂಸ್ಥೆಯಿಂದ ಧನಸಹಾಯವಾಗುತ್ತಿತ್ತು. []

ವಿದ್ಯಾರ್ಹತೆಗಳು

[ಬದಲಾಯಿಸಿ]
  • ಫಿಸಿಕ್ಸ್ ಮತ್ತು ಮ್ಯಾಥೆಮೆಟಿಕ್ಸ್ ನಲ್ಲಿ ಬಿ.ಎಸ್ಸಿ. ಪದವಿಯನ್ನು ಉಡುಪಿಯ ಎಮ್.ಜಿ.ಎಮ್. ಕಾಲೇಜ್ ೧೯೬೮ (ಮೈಸೂರು ವಿಶ್ವವಿದ್ಯಾಲಯದಿಂದ)
  • ೧೯೭೦ ರಲ್ಲಿ ಮದ್ರಾಸ್ ಐ ಐ ಟಿ ಯಿಂದ ಫಿಸಿಕ್ಸ್ ನಲ್ಲಿ ೨ ವರ್ಷದ ಮಾಸ್ಟರ್ಸ್ ಪದವಿಗಳಿಸಿದರು.
  • ೧೯೭೬.ರಲ್ಲಿ ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಗಳಿಸಿದರು. ಅವರು ತಮ್ಮ ಪಿ.ಎಚ್.ಡಿಗೆ ಆರಿಸಿಕೊಂಡ ವಿಷಯ : “The Effects of Uniaxial Stress on the Electroreflectance Spectrum of Ge and GaAs,”
  • ಜರ್ಮನಿಯ ಸ್ಟುಟ್ಗರ್ಟ್ ನ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ನಲ್ಲಿ ಪೋಸ್ಟ್ ಡಾಕ್ಟರ್ಲ್ ಫೆಲೋಶಿಪ್ ಗಳಿಸಿ ಅಲ್ಲಿ ತಮ್ಮ ಸಂಶೋಧನೆಯನ್ನು ಮುಂದುವರೆಸಿದರು. ಇಲ್ಲಿ ಸಂಶೋಧನೆಯಲ್ಲಿ ವ್ಯಸ್ತರಾಗಿರುವ ಸಮಯದಲ್ಲಿ ಭೌತಶಾಸ್ತ್ರದಲ್ಲಿ ನಿಷ್ಣಾತರಾಗಿ, ತಮ್ಮ ಕಾಲೇಜಿನ ವಿದ್ಯಾಭ್ಯಾಸದುದ್ದಕ್ಕೂ ಬಂಗಾರ ಪದಕಗಳಿಂದ ಶೋಭಿತರಾಗಿದ್ದ, ಡಾ.ಎಚ್.ಆರ್.ಚಂದ್ರಶೇಖರ್ ಎಂಬ ಯುವಕನ ಪರಿಚಯವಾಯಿತು. ಹೀಗೆ ಮುಂದುವರಿದ ಪರಿಚಯ ಪ್ರೀತಿಯಲ್ಲಿ ಕೊನೆಗೊಂಡು ಇಬ್ಬರೂ ಭಾರತಕ್ಕೆ ಬಂದು ಅವರ ತಂದೆತಾಯಿಗಳ ಸಮ್ಮತಿ ಪಡೆದು ೧೯೭೬ ರಲ್ಲಿ ಉಡುಪಿಯಲ್ಲಿ ಮದುವೆಯಾದರು. ೧೯೭೮ ರಲ್ಲಿ ಯೂನಿವರ್ಸಿಟಿ ಆಫ್ ಮಿಸ್ಸೌರಿ ಫ್ಯಾಕಲ್ಟಿಗೆ ತಮ್ಮ ಪತಿ, ಡಾ.ಎಚ್.ಆರ್.ಚಂದ್ರಶೇಖರ್ ಜೊತೆ ಪಾದಾರ್ಪಣೆ ಮಾಡಿದರು.[]

ಪ್ರಶಸ್ತಿಗಳು

[ಬದಲಾಯಿಸಿ]
  • ೧೯೯೮. ಪ್ರೆಸಿಡೆಂಟ್ ಪ್ರಶಸ್ತಿ ಸೈನ್ಸ್ ಮ್ಯಾಥೆಮೇಟಿಕ್ಸ್ ಮತ್ತು ಇಂಜಿನಿಯರಿಂಗ್ ವಲಯಗಳಲ್ಲಿ ಮಾಡಿದ ಗಮನಾರ್ಗ ಸೇವೆಗಳಿಗಾಗಿ
  • ೧೯೯೯ ರಲ್ಲಿ ಪ್ರಸಿಡೆಂಟ್ಸ್ ನ್ಯಾಶನಲ್ ಸೈನ್ಸ್ ಫೌಂಡೇಶನ್ ವತಿಯಿಂದ ಸೈನ್ಸ್ ಮ್ಯಾಥೆಮಾಟಿಕ್ಸ್ ಮತ್ತು ಇಂಜಿನಿಯರಿಂಗ್ ನಲ್ಲಿ ಅಪಾರ ಸಾಧನೆಗಾಗಿ
  • ೧೯೮೫ ರಲ್ಲಿ ಮೀರ ಪ್ರತಿಷ್ಠಿತ ಆಲ್ಫ್ರೆಡ್ ಪಿ. ಸ್ಲೋನ್ ಫೆಲೋಶಿಪ್ ಗಳಿಸಿದರು.
  • ೧೯೯೨ ರಲ್ಲಿ ಅವರು ಅಮೆರಿಕನ್ ಫಿಸಿಕಲ್ ಸೊಸೈಟಿಗೆ ಚುನಾಯಿತರಾದರು.
  • ೨೦೦೨ ರಲ್ಲಿ ಮದ್ರಾಸ್ ಐಐಟಿಯ ಅತಿ ಪ್ರತಿಭಾವಂತ ವಿದ್ಯಾರ್ಥಿನಿಯ ಪ್ರಶಸ್ತಿಗಳಿಸಿದರು.[]
  • ೨೦೦೬ ಪ್ರೆಸಿಡೆಂಟ್ ಪ್ರಶಸ್ತಿ.

೨೦೧೪ ರ ಸಾಲಿನ ಪ್ರತಿಷ್ಠಿತ ರಾಬರ್ಟ್ ಫಾಸ್ಟರ್ ಚೆರ್ರಿ ಪ್ರಶಸ್ತಿ

[ಬದಲಾಯಿಸಿ]

ಏಪ್ರಿಲ್ ೨೦೧೩ ರಲ್ಲಿ ಫೈನಲಿಸ್ಟ್ ಗಳ ಹೆಸರಿನ ಪಟ್ಟಿಯಲ್ಲಿ ಡಾ. ಮೀರಾ ಚಂದ್ರಶೇಖರ್ ರವರ ಹೆಸರನ್ನು ನಮೂದಿಸಲಾಗಿತ್ತು. ನ್ಯಾಷನಲ್ ಸೈನ್ಸ್ ಫೌಂಡೇಶನ್ ವತಿಯಿಂದ ಬೇಲರ್ ಕ್ಯಾಂಪಸ್ ಗೆ ೨೦೧೩ ರ ಅಕ್ಟೋಬರ್ ನಲ್ಲಿ ಭೆಟ್ಟಿನೀಡಿ ತಮ್ಮ ಬೇಲರ್ ಫೈನಲ್ ಪ್ರತಿಯೋಗಿತೆಯ ಚೆರ್ರಿ ಫನಲಿಸ್ಟ್ ಲೆಕ್ಚರ್ ಕೊಡಲು, “Blind to Polarization: What Humans Cannot See.” ಎಂಬ ಲೆಕ್ಚರ್ ತುಂಬಿದ ಆಹ್ವಾನಿತ ಸಭಿಕರ ಮುಂದೆ ಪ್ರಸ್ತುತಪಡಿಸಿ ಎಲ್ಲರ ಮನ್ನಣೆಗೆ ಪಾತ್ರರಾದರು. ಆ ಸಂದರ್ಭದಲ್ಲಿ ಅಲ್ಲಿನ ವಿದ್ಯಾರ್ಥಿಗಳನ್ನು ಸ್ಟಾಫ್ ಮುಂದೆ ದೈನಂದಿನ ಚಟುವಟಿಕೆಗಳನ್ನು ಸಮರ್ಪಕವಾಗಿ ಉದಾಹರಿಸುತ್ತ, ಸಮಯೋಚಿತವಾಗಿ, ಅತ್ಯಾಧುನಿಕ ಗ್ಯಾಡ್ಜೆಟ್ ಗಳ ಬಳಕೆಮಾಡಿ (೩ಡಿ ಮೂವಿ ತಂತ್ರ, ಇಂಜಿನಿಯರಿಂಗ್ ಮಾಡೆಲ್ ಗಳು ಮೊದಲಾದ) ಅಲ್ಲಿನ ಪ್ರತಿಷ್ಠಿತ ಶ್ರೋತೃವರ್ಗವನ್ನು ತಮ್ಮ ಅತ್ಯಂತ ಪ್ರತಿಭಾನ್ವಿತ ಭಾಷಣದಿಂದ ಸ್ತಬ್ದರನ್ನಾಗಿಸಿದರು.

ವರ್ಷ ೨೦೧೪ ರ ಸಾಲಿನ ಪ್ರತಿಷ್ಠಿತ ರಾಬರ್ಟ್ ಫಾಸ್ಟರ್ ಚೆರ್ರಿ ಪ್ರಶಸ್ತಿ ವಿಜೇತೆ ಡಾ. ಮೀರಾ ಚಂದ್ರಶೇಖರ್, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಖ್ಯಾತಿಯ ಶಿಕ್ಷಕಿರಾಗಿ ತಮ್ಮ ಪ್ರತಿಭೆಯನ್ನು ತಾವು ನಡೆದುಬಂದ ದಾರಿಯುದ್ದಕ್ಕೂ ಪ್ರದರ್ಶಿಸಿರುವುದನ್ನು 'ಎಲಿಜಬೆತ್ ಡೇವಿಸ್' ಐಕ್ಸಿಕ್ಯುಟೀವ್ ವೈಸ್ ಪ್ರೆಸಿಡೆಂಟ್ ಹೇಳಿದರು. ಬೆಲಾರ್ ವಿಶ್ವವಿದ್ಯಾಲಯದಿಂದ ತಮ್ಮ ಫಿಸಿಕ್ಸ್ ಪ್ರಭಾಗಕ್ಕೆ ೨೫,೦೦೦ ಡಾಲರ್ ನಿಧಿಯನ್ನು ಗಳಿಸಿದ್ದಾರೆ.

ಡಾ.ಮೀರಾರವರ ವೈಶಿಷ್ಟ್ಯತೆ

[ಬದಲಾಯಿಸಿ]

ಅತ್ಯಂತ ಪ್ರತಿಭಾನ್ವಿತ ಹೆಸರಾಂತ ಸ್ಕಾಲರ್ ಗಳಾಗಿದ್ದವರ ಮಧ್ಯೆ ಮಿಂಚಿ, ಮೀರಾ ತಮ್ಮ ವೈಶಿಷ್ಟ್ಯತೆಯನ್ನು ಪ್ರದರ್ಶಿಸಿದರು. ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ನಡೆಸಿದ ಪ್ರತಿಯೋಗಿತೆಯಲ್ಲಿ ೩ ಜನ ಫೈನಲಿಸ್ಟ್ ಗಳನ್ನು ಆರಿಸಲಾಯಿತು. ಅವರುಗಳ ಹೆಸರುಗಳು ಕೆಳಗೆ ಕಂಡಂತಿವೆ :

  • ಜಾನ್ ಬ್ರೆಟನ್ ಕಾನ್ನಿ,, ನ್ಯೂಯಾರ್ಕ್ ನ ಪ್ರೊಫೆಸರ್ ಆಫ್ ಕ್ಲಾಸಿಕ್ಸ್ ಮತ್ತು ಆರ್ಟ್ ಹಿಸ್ಟರಿ,
  • ಮೈಖೆಲ್ ಕೆ ಸಲೇಮಿ, ಪ್ರೊಫೆಸರ್ ಎಮಿರಿಟಿಅಸ್ ಆಫ್ ಎಕೊನಾಮಿಕ್ಸ್ ನಾರ್ತ್ ಕೆರೋಲಿನ ವಿಶ್ವವಿದ್ಯಾಲಯ, ಚಾಪೆಲ್ ಹಿಲ್,
  • ಡಾ. ಮೀರಾ, ಫಿಸಿಕ್ಸ್ ಮತ್ತು ಆಸ್ಟ್ರೋನೊಮಿ ಪ್ರೊಫೆಸರ್, ಮಿಸ್ಸೌರಿ ವಿಶ್ವವಿಶ್ವವಿದ್ಯಾಲಯದ ಫಿಸಿಕ್ಸ್ ವಿಭಾಗದ ಕ್ಯುರೇಟರ್ಸ್ ಟೀಚಿಂಗ್ ಪ್ರೊಫೆಸರ್,

ಮೇಲೆ ನಮೂದಿಸಿದ ಹೆಸರಾಂತ ನುರಿತ ಅಮೆರಿಕನ್ ಶಿಕ್ಷಣ ತಜ್ಞರ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಪಡೆಯಲು ಡಾ.ಮೀರಾಚಂದ್ರಶೇಖರ್ []ರವರ ವೈಶಿಷ್ಟ್ಯ ಪೂರ್ಣ ವಿಶಯ ಪ್ರತಿಪಾದನೆ, ಹಾಗೂ ಆಳವಾದ ಜ್ಞಾನಾರ್ಜನೆಯೇ ಸಾಧ್ಯವಾಗಿದೆಯೆಂದು ಎಲ್ಲ ನಿರ್ಣಾಯಕ ವರ್ಗದ ಸದಸ್ಯರೂ ಮುಕ್ತ ಕಂಠದಿಂದ ಶ್ಲಾಘಿಸಿದರು. ಪ್ರತಿನಿಧಿಸಿದ್ದ ೬೦೦ ಜನ ಅಭ್ಯರ್ಥಿಗಳು ಈ ಆಯ್ಕೆಯನ್ನು ಅತಿ ಆದರ ಹರ್ಷಗಳಿಂದ ಸ್ವಾಗತಿಸಿದರು. ವಿದ್ಯಾರ್ಥಿಗಳು, ಹಾಗೂ ಮೀರಾರ ಸಹೋದ್ಯೋಗಿಗಳ ಆನಂದಕ್ಕೆ ಪಾರವೇ ಇರಲಿಲ್ಲ.[[೧]]

ಬೆಲಾರ್ ವಿಶ್ವವಿದ್ಯಾಲಯದ ಐತಿಹ್ಯ

[ಬದಲಾಯಿಸಿ]

ಬೇಲಾರ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಿಗೆ ಗೌರವಿಸುವ ಪದ್ಧತಿಯನ್ನು ಆರಂಭಮಾಡಿದ್ದು ರಾಬರ್ಟ್ ಫಾಸ್ಟರ್ ಚೆರ್ರಿ ಎಂಬ ವಿಜ್ಞಾನಾಸಕ್ತ ಅಧಿಕಾರಿಯಿಂದ. ರಾಬರ್ಟ್ ಫಾಸ್ಟರ್ ಚೆರ್ರಿಯವರು ೧೯೨೯ ಎ ಬಿ ಪದವಿ ಹಾಸಿಲ್ ಮಾಡಿದರು. ೧೯೩೨ ರಲ್ಲಿ ಬೆಲರ್ ಲಾ ಸ್ಕೂಲ್ ಗೆ ಭರ್ತಿಯಾದರು ಮಾರನೆಯ ವರ್ಷವೇ ಟೆಕ್ಸಾಸ್ ಸ್ಟೇಟ್ ಬಾರ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಆ ಸಮಯದಲ್ಲಿ ಅವರಿಗೆ ಮಾರ್ಗದರ್ಶ ಮಾಡಿದ ಗುರುಗಳು ಅವರಿಗೆ ಬಲು ಪ್ರಿಯರಾದರು. ತಮ್ಮ ಜೀವನದಲ್ಲಿ ಪರಿವರ್ತನೆಯನ್ನು ತಂದ ಸುಂದರ ವರ್ಷಗಳವು. ಅವರಿಗೆ ಬಹಳ ಸಂತಸ ತಂದಿತು ಆ ಖುಷಿಯಿಂದ ಅವರು ಒಂದು ದೊಡ್ಡ ಎಸ್ಟೇಟ್ ನಲ್ಲಿ ಚೆರ್ರಿ ಅವಾರ್ಡ್ ಪ್ರೊಗ್ರಾಮ್ ಶುರುಮಾಡಿದರು. ಒಳ್ಳೆಯ ಉತ್ಕೃಷ್ಟ ಬೋಧಕರನ್ನು ಗುರುತಿಸಿ, ಅವರಿಂದ ಬೇಲರ್ ನಲ್ಲಿ ಓದುವ ಛಾತ್ರರಿಗೆ ಪಾಠ ಹೇಳಿಕೊಡುವ ಏರ್ಪಾಡು ಮಾಡುವ ಮನಸ್ಸಾಯಿತು. ಹೀಗೆ ಚಿಕ್ಕದಾಗಿ ೧೯೯೧ ರಲ್ಲಿ ಪ್ರಾರಂಭಿಕ ಇನಾಗ್ಯುರಲ್ ಅವಾರ್ಡ್ ಆರಂಭವಾಗಿ ಈಗ ಅದು ಎರಡು ವರ್ಷಕ್ಕೊಮ್ಮೆ ಜರುಗುತ್ತಿದೆ. ಬೇಲಾರ್ ಒಂದು ಸುಪ್ರಸಿದ್ಧ ಖಾಸಗಿ ಕ್ರಿಶ್ಚಿಯನ್ ವಿಶ್ವವಿದ್ಯಾಲಯ. ಒಟ್ಟಾರೆ ೧೫ ಸಾವಿರ ವಿದ್ಯಾರ್ಥಿಗಳಿಗೆ ಅಂತರರಾಷ್ಟೀಯಮಟ್ಟದ ವಿದ್ಯಾಸಂಸ್ಥೆಯೆಂದು ಹೆಸರಾಗಿದೆ. ಇಲ್ಲಿ ಇಂಟರ್ ಡಿಸಿಪ್ಲಿನರಿ ಸಂಶೋಧನೆಗಳಿಗೆ ವಿಪುಲವಾದ ಅವಕಾಶಗಳಿವೆ. ಇದಲ್ಲದೆ ಒಳ್ಳೆಯ ಹೆಸರುವಾಸಿಯಾದ ಶಿಕ್ಷಣ ಸಂಸ್ಥೆಯಾಗಿದೆ. ಇಲ್ಲಿನ ಬೋಧಕವರ್ಗ ಬಹಳ ಉನ್ನತಮಟ್ಟದ್ದೆಂದು ರಾಷ್ಟ್ರದಾದ್ಯಂತ ದಾಖಲಾಗಿದೆ. []

ಹಲವು ಕ್ಷೇತ್ರಗಳಲ್ಲಿ ಆಸಕ್ತೆ

[ಬದಲಾಯಿಸಿ]

ಅಡುಗೆಯಲ್ಲಿ ಹೊಸ ರುಚಿಯ ಬಳಕೆ

[ಬದಲಾಯಿಸಿ]

ವಿಶೇಷವಾಗಿ ಭಾರತೀಯ, ಹಾಗೂ ಹಲವು ಪದ್ಧತಿಗಳ ಸ್ವಾದಿಷ್ಟ ಖಾಧ್ಯಗಳ ಬಗ್ಗೆ ಮೀರಾ ಮತ್ತು ಗೆಳತಿಯರು ವಿಶೇಷ ಅಧ್ಯಯನ ನಡೆಸಿ ಹಲವಾರು ಹೊಸಹೊಸ ಪಕ್ವಾನ್ನಗಳನ್ನು ತಯಾರಿಸಲು ಪ್ರಾರಂಭಮಾಡಿ ಅವುಗಳ ಬಗ್ಗೆ ವಿವರವಾಗಿ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಇಂಗ್ಲೀಷ್ ಭಾಷೆಯಲ್ಲಿ ಇವು ಎಲ್ಲರಿಗೂ ಉಪಲಭ್ದವಿವೆ.

ಭೌತಶಾಸ್ತ್ರದ ಹಲವು ವಿಸ್ಮಯಗಳನ್ನು ಸೈಬರ್ ನಲ್ಲಿ ಕಲಿಸುವಿಕೆ

[ಬದಲಾಯಿಸಿ]

ಈ ಕಲಿಕಾ ಪ್ರಯೋಗದ ತರಗತಿಗಳು ಎಳೆಯರಿಗೆ ಬಹಳ ಕುತೂಹಲಕಾರಿಯಾಗಿವೆ.[೧೦]

ಭರತನಾಟ್ಯದ ರಂಗಪ್ರವೇಶ ಸಮಾರಂಭಕ್ಕೆ ಸಿದ್ಧಪಡಿಸುವಿಕೆ

[ಬದಲಾಯಿಸಿ]

ಭರತನಾಟ್ಯದ [[https://web.archive.org/web/20100819144051/http://web.missouri.edu/~chandrasekharm/arangetram.html Archived 2010-08-19 ವೇಬ್ಯಾಕ್ ಮೆಷಿನ್ ನಲ್ಲಿ.]] ಕಲಿಕೆಯ ಬಳಿಕ, 'ಅರಂಗೆಟ್ರಂ', 'ರಂಗಪ್ರವೇಶದ ಸಿದ್ಧತೆ'ಗಳ ಬಗ್ಗೆ, ಪ್ರಾರಂಭದ ಹಂತದಿಂದ ಕೊನೆಯವರೆಗೆ ನಡೆಸುವ ಸಿದ್ಧತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುವ ಪುಸ್ತಕಗಳನ್ನು ರಚಿಸಿದ್ದಾರೆ. ಇದರಿಂದ ಹೊಸದಾಗಿ ಭರತನಾಟ್ಯ, ಕಥಕ್ ಮೊದಲಾದ ನೃತ್ಯಗಳನ್ನು ಕಲಿಯುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಬಹಳ ಉಪಯೋಗವಾಗುತ್ತಿದೆ.

ಕ್ವಿಲ್ಟ್ಸ್ ಮಾಡುವ ಕಲೆಯಲ್ಲಿ ನಿಷ್ಣಾತೆ

[ಬದಲಾಯಿಸಿ]

ಸುಮಾರು ಒಂದು ದಶಕದಿಂದ ಮನೆಯಲ್ಲಿ ಬಳಸುತ್ತಿದ್ದ ಬಟ್ಟೆಬರೆಗಳು ಹಾಗೂ ಹೆಚ್ಚಿಗೆ ಉಡುಗೆಯ ಪದಾರ್ಥಗಳನ್ನು ಉಪಯೋಗಿಸಿ ವೈವಿಧ್ಯಮಯ ಕ್ವಿಲ್ಟ್ಸ್ ತಯಾರಿಸುವ ಕಲೆಯನ್ನು ಕಲಿತರು. ಅವು ಮನೆಯಲ್ಲಿ ಎಲ್ಲರಿಗೂ ಮೆಚ್ಚುಗೆಯಾಯಿತು.[೧೧]

ಕೊಲಂಬಿಯ ನಗರದ ಶಾಂತಿಮಂದಿರ

[ಬದಲಾಯಿಸಿ]

[೧೨] ಅಮೆರಿಕದ ಮಿಸ್ಸೂರಿ ರಾಜ್ಯದ ಶಾಂತಿ ಮಂದಿರ್ ನ ಸ್ಥಾಪನೆಯಲ್ಲಿ ಡಾ.ಎಚ್.ಆರ್.ಚಂದ್ರಶೇಖರ್ ಮತ್ತು ಡಾ.ಮೀರಾ ಚಂದ್ರಶೇಖರ್ ದಂಪತಿಗಳು, ಸಕ್ರಿಯವಾಗಿ ಭಾಗವಹಿಸಿದ್ದರು.

ಬಾಹ್ಯ ಸಂಪರ್ಕ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖನ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2014-01-22. Retrieved 2014-01-28.
  2. http://www.udayavanienglish.com/news/421779L14-Meera-Chandrasekhar-wins-Robert-Foster-Cherry-Award.html
  3. "'Kunjibettu,' Udupi District, Karnataka Pincode 576102". Archived from the original on 2015-04-21. Retrieved 2015-02-23.
  4. "ಆರ್ಕೈವ್ ನಕಲು". Archived from the original on 2014-01-22. Retrieved 2014-02-11.
  5. "ಆರ್ಕೈವ್ ನಕಲು". Archived from the original on 2013-11-29. Retrieved 2014-01-28.
  6. http://syndicatemizzou.org/media/278
  7. http://alumni.iitm.ac.in/daa/list.php?yr=2002
  8. http://news.missouri.edu/2014/we-are-fierce/
  9. "ಆರ್ಕೈವ್ ನಕಲು". Archived from the original on 2014-02-27. Retrieved 2014-01-30.
  10. "ಆರ್ಕೈವ್ ನಕಲು". Archived from the original on 2014-04-12. Retrieved 2014-02-18.
  11. "ಎರಡು ದಶಕಗಳ ತರಹಾವರಿ ಕ್ವಿಲ್ಟ್ಸ್ ವಿನ್ಯಾಸಮಾಡಿದ ಅನುಭವ". Archived from the original on 2015-06-28. Retrieved 2014-02-18.
  12. ಅಮೆರಿಕದ ಮಿಸ್ಸೂರಿ ರಾಜ್ಯದ ಶಾಂತಿ ಮಂದಿರ್ ನ ಸ್ಥಾಪನೆಯಲ್ಲಿ ಡಾ.ಎಚ್.ಆರ್.ಚಂದ್ರಶೇಖರ್ ಮತ್ತು ಡಾ.ಮೀರಾ ಚಂದ್ರಶೇಖರ್ ದಂಪತಿಗಳು, ಸಕ್ರಿಯವಾಗಿ ಭಾಗವಹಿಸಿದ್ದರು