ವಿಷಯಕ್ಕೆ ಹೋಗು

ಮಿಲ್ಕ್ ಶೇಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾನಿ ರಾಕೆಟ್ಸ್‌ನಿಂದ ತೀಡಿದ ಕ್ರೀಂ ಮೇಲ್ಬಾಗದಲ್ಲಿ ಮತ್ತು ಸ್ಟ್ರಾಬೆರಿ ದ್ರಾವಣದೊಂದಿಗೆ ಸ್ಟ್ರಾಬೆರಿ ಮಿಲ್ಕ್‌ಶೇಕ್.

ಮಿಲ್ಕ್‌ಶೇಕ್ (ರುಚಿಕಟ್ಟಿದ ಹಾಲಿನ ಪಾನೀಯ)ಸಿಹಿ, ತಣ್ಣನೆಯ ಪಾನೀಯವಾಗಿದ್ದು ಇದನ್ನು ಹಾಲು, ಐಸ್ ಕ್ರೀಂ, ಐಸ್ಡ್ ಮಿಲ್ಕ್ ಮತ್ತು ಹಣ್ಣಿನ ದ್ರಾವಣ ಅಥವಾ ಚಾಕೊಲೇಟ್ ಸಾಸ್ ಮುಂತಾದ ಸುವಾಸನೆಗಳು ಅಥವಾ ಸಿಹಿಗೊಳಿಸುವ ವಸ್ತುಗಳಿಂದ ತಯಾರಿಸಲಾಗುತ್ತದೆ.

ಪೂರ್ಣ ಸೇವೆಯ ಹೋಟೆಲ್‌ಗಳು, ಸೋಡಾ ಫೌಂಟೇನ್‌ಗಳು ಮತ್ತು ಡೈನರ್‌ಗಳು ಸಾಮಾನ್ಯವಾಗಿ ಸ್ಟೇನ್‌ಲೆಸ್ ಸ್ಟೀಲ್ ಕಪ್ ಬಳಸಿಕೊಂಡು ಬ್ಲೆಂಡರ್ ಅಥವಾ ಪಾನೀಯ ಮಿಶ್ರಕದಲ್ಲಿ ಐಸ್ ಕ್ರೀಮ್ ಮತ್ತು ಹಾಲಿನ ಸಟ್ಟುಗಳಿಂದ ಕೈಯಲ್ಲಿ ಮಿಲ್ಕ್‌ಶೇಕ್ ಮಿಶ್ರಣ ಮಾಡಿ ಸಾಮಾನ್ಯವಾಗಿ ತಯಾರಿಸುತ್ತಾರೆ. ಅನೇಕ ದಿಢೀರ್ ಆಹಾರದ ಅಂಗಡಿಗಳು ಮಿಲ್ಕ್‌ಶೇಕ್‌ನ್ನು ಐಸ್‌ಕ್ರೀಂನೊಂದಿಗೆ ಕೈ ಮೂಲಕ ತಯಾರಿಸುವುದಿಲ್ಲ. ಬದಲಾಗಿ, ಅವು ಮಿಲ್ಕ್‌ಶೇಕ್‌ನ್ನು ಸ್ವಯಂಚಾಲಿತ ಮಿಲ್ಕ್‌ಶೇಕ್‌ನ ಯಂತ್ರಗಳಲ್ಲಿ ತಯಾರಿಸುತ್ತವೆ. ಅದು ಘನೀಕರಿಸಿ ಹಾಲು, ಸಿಹಿ ಸುವಾಸನೆಯ ಕಾರಕ ಮತ್ತು ದಪ್ಪನಾಗಿಸುವ ಕಾರಕ ಹೊಂದಿರುವ ಪೂರ್ವತಯಾರಿ ಮಿಲ್ಕ್‌ಶೇಕ್‌ನ ಮಿಶ್ರಣವನ್ನು ಬಡಿಸುತ್ತದೆ. ಅವುಗಳಲ್ಲಿ ಕೆಲವು ಅಪವಾದಗಳಿವೆ. ಉದಾಹರಣೆಗೆ US ಸಮೂಹಗಳ ಬ್ಯಾಕ್‌ಯಾರ್ಡ್ ಬರ್ಗರ್ಸ್, ಜ್ಯಾಕ್ ಇನ್ ದಿ ಬಾಕ್ಸ್, ಲಾಂಗ್ ಜಾನ್ ಸಿಲ್ವರ್ಸ್, ಹಾರ್ಡೀಸ್, ಚಿಕ್-ಫಿಲ್-A ಮತ್ತು ಕಾರ್ಲ್ಸ್ ಜೂ. ಇವು ಐಸ್‌ಕ್ರೀಂನೊಂದಿಗೆ ಮಿಲ್ಕ್‌ಶೇಕ್‌ನ್ನು ಕೈನಿಂದ ತಯಾರಿಸುತ್ತವೆ. ಕೆಲವು ದಿಢೀರ್ ಆಹಾರದ ಹೋಟೆಲ್‌ಗಳಾದ ಡೇರಿ ಕ್ವೀನ್ ಮುಂತಾದವು ಮೃದು ಐಸ್ ಕ್ರೀಂ(ಅಥವಾ ಐಸ್ ಮಿಲ್ಕ್)ನ್ನು ಚಾಕೋಲೇಟ್ ಸಿರಪ್ ಮತ್ತು ಹಣ್ಣಿನ ಸುವಾಸನೆಯ ಸಿರಪ್ ಮುಂತಾದ ಸಿಹಿ ಸುವಾಸನೆಯ ಸಿರಪ್‌ಗಳು ಮತ್ತು ಹಾಲಿನೊಂದಿಗೆ ಮಿಶ್ರಣ ಮಾಡುವ ಮೂಲಕ ಮಿಲ್ಕ್‌ಶೇಕ್‌ನ್ನು ಬಡಿಸುತ್ತವೆ.

ವಿಧಗಳು[ಬದಲಾಯಿಸಿ]

ಕೈಯಿಂದ ಮಿಶ್ರಣ[ಬದಲಾಯಿಸಿ]

ಕೈ ಮಿಶ್ರಕ ಮಿಲ್ಕ್‌ಶೇಕ್‌ಗಳನ್ನು ಯಾವುದೇ ಐಸ್ ಕ್ರೀಂ ಸುವಾಸನೆಯೊಂದಿಗೆ ತಯಾರಿಸಬಹುದು. ಹೆಚ್ಚುವರಿ ರುಚಿಗಳಾದ ಚಾಕೊಲೇಟ್ ಸಿರಪ್ ಮತ್ತು ಮಾಲ್ಟ್‌(ಮೊಳಕೆ ಕಾಳು) ಮಿಶ್ರಣಕ್ಕೆ ಮುಂಚೆ ಸೇರಿಸಬಹುದು. ಯಂತ್ರ ತಯಾರಿತ ಮಿಲ್ಕ್‌ಶೇಕ್‌ಗಳ ಲಭ್ಯತೆಗಿಂತ ಇದು ಹೆಚ್ಚಿನ ವೈವಿಧ್ಯಗಳಿಗೆ ಅವಕಾಶ ನೀಡುತ್ತದೆ. ಅನೇಕ ಶತಮಾನಗಳ ಹಿಂದೆ, ಮಿಲ್ಕ್‌ಶೇಕ್‌ ಅನ್ನು ಐಸ್ ಕ್ರೀಂ ರಹಿತವಾಗಿ ತಯಾರಿಸಲಾಗುತ್ತಿತ್ತು[೧] ಇದು ಕೆಲವು ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಮತ್ತು ಅಮೆರಿಕದ ನ್ಯೂಇಂಗ್ಲೆಂಡ್ ಪ್ರದೇಶದಲ್ಲಿ ಈಗಲೂ ಮುಂದುವರೆದಿದೆ.[ಸೂಕ್ತ ಉಲ್ಲೇಖನ ಬೇಕು]

ಮೊಸರು, ಚೂರುಮಾಡಿದ ಐಸ್ ಮತ್ತು ತಾಜಾ ಹಣ್ಣನ್ನು ಬಳಸಿಕೊಂಡು ಐಸ್ ಕ್ರೀಂರಹಿತವಾಗಿ ತಯಾರು ಮಾಡುವ ಮಿಲ್ಕ್‌ಶೇಕ್‌ನ ರೀತಿಯ ಆಹಾರಸೂತ್ರವನ್ನು ಸ್ಮೂಥಿ‌ಗಳು ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಮೊಳಕೆಕಾಲಿನ ಹಾಲನ್ನು ಸೇರ್ಪಡೆ ಮಾಡಿದಾಗ, ಮಿಲ್ಕ್‌ಶೇಕ್‌ ಅನ್ನು ಮೊಳಕೆಕಾಳಿನ ಮಿಲ್ಕ್‌ಶೇಕ್ ಅಥವಾ ಸರಳವಾಗಿ ಮಾಲ್ಟ್ ಎಂದು ಕರೆಯಲಾಗುತ್ತದೆ. ಅವುಗಳನ್ನು ದಪ್ಪ ಮಿಲ್ಕ್‌ಶೇಕ್ ಎಂದು ಯುನೈಟೆಡ್ ಕಿಂಗ್ಡಮ್‌ನಲ್ಲಿ, ನ್ಯೂಇಂಗ್ಲೆಂಡ್ ಮತ್ತು ಕೆನಡಾದ ಭಾಗಗಳಲ್ಲಿ ಫ್ರಾಪ್ ("frap"ಎಂದು ಉಚ್ಚರಿಸಲಾಗುತ್ತದೆ)ಎಂದು ಕರೆಯಲಾಗುತ್ತದೆ.[೨] ರೋಡ್ ದ್ವೀಪ ಮತ್ತು ಆಗ್ನೇಯ ಮಸಾಚುಸೆಟ್ಸ್‌ನಲ್ಲಿ ಕಾಫೀ ಸಿರಪ್ ಅಥವಾ ಕಾಫೀ ಸುವಾಸನೆಯ ಐಸ್ ಕ್ರೀಂನ್ನು ಸ್ಥಳೀಯ ಕಾಫಿ ಫ್ರಾಪ್ ಶೇಕ್ ತಯಾರಿಸಲು ಬಳಸಲಾಗುತ್ತದೆ. ಹಣ್ಣುಗಳನ್ನು ಮಿಶ್ರಣ ಮಾಡಿದ ಮಿಲ್ಕ್‌ಶೇಕ್‌ನ್ನು ಬಾಟಿಡೊ ಎಂದು ಕರೆಯಲಾಗುತ್ತಿದ್ದು, ಇದು ಲ್ಯಾಟಿನ್ ಅಮೆರಿಕ ಮತ್ತು ಮಿಯಾಮಿಯ ಕ್ಯೂಬದ ವಲಸೆ ಸಮುದಾಯದಲ್ಲಿ ಜನಪ್ರಿಯವಾಗಿದೆ.[೩] ನಿಕಾರಾಗುವಾದಲ್ಲಿ ಮಿಲ್ಕ್‌ಶೇಕ್‌ನ್ನು ಲೆಚ್ ಮಾಲ್ಟಿಯಾಡ ಎಂದು ಕರೆಯಲಾಗುತ್ತದೆ.[೪]

ಕೆಲವು ಅಮೆರಿಕದ ಹೊಟೆಲು‌ಗಳು ಮಿಲ್ಕ್‌ಶೇಕ್‌ನ್ನು ಚೂರುಮಾಡಿದ ಕೂಕೀಸ್, ಕ್ಯಾಂಡಿ ಬಾರ್ ಚೂರುಗಳು ಅಥವಾ ಆಲ್ಕೋಹಾಲ್ ಪಾನೀಯಗಳೊಂದಿಗೆ ಬಡಿಸುತ್ತವೆ. ಉದಾಹರಣೆಗೆ ಗ್ರಾಸ್‌ಹೋಪರ್ ಮಿಲ್ಕ್‌ಶೇಕ್ ಚೂರುಮಾಡಿದ ಚಾಕೊಲೇಟ್ ಕುಕೀಸ್, ಕ್ರೀಮ್ ಡೆ ಮೆಂಥೆ ಲಿಕ್ವೈರ್ ಮತ್ತು ಚಾಕೊಲೇಟ್ ಮಿಂಟ್ ಐಸ್‌ಕ್ರೀಂ ಒಳಗೊಂಡಿರುತ್ತದೆ. ನ್ಯೂಯಾರ್ಕ್‌ನ BLT ಬರ್ಗರ್ ಹಾಸ್ಟೆಸ್ ಟ್ವಿಂಕಿ, ವನಿಲ್ಲಾ ಐಸ್ ಕ್ರೀಂ ಮತ್ತು ಕ್ಯಾರಮೆಲ್ ಸಿರಪ್‌ನಿಂದ ತಯಾರಿಸಿದ ಟ್ವಿಂಕಿ ಬಾಯ್ ಶೇಕ್ ಮಾರಾಟ ಮಾಡುತ್ತದೆ. BLT ರೆಸ್ಟೊರೆಂಟ್ ವಿಸ್ಕಿ ಅಥವಾ ಕಾಲ್ಹುವಾ ಪಾನೀಯಗಳನ್ನು ಹೊಂದಿದ ಚೂಪಾದ ಆಕಾರದ ಶೇಕ್‌ಗಳನ್ನು ಬಡಿಸುತ್ತದೆ. ಪರ್ಪಲ್ ಕೌವ್ ರೆಸ್ಟೊರೆಂಟ್ ಆಲ್ಕೊಹಾಲ್ ಜತೆ ಮಿಲ್ಕ್‌ಶೇಕ್‌ ಬಡಿಸುತ್ತದೆ ಮತ್ತು ಪೀನಟ್ ಬಟ್ಟರ್ ಮತ್ತು ಜೆಲ್ಲಿ ಮಿಲ್ಕ್‌ಶೇಕ್ ಮತ್ತು ಪರ್ಪಲ್ ವನಿಲ್ಲಾ ಮಿಲ್ಕ್‌ಶೇಕ್ ಮುಂತಾದ ಮಿಲ್ಕ್‌ಶೇಕ್‌ನ್ನು ಬಡಿಸುತ್ತದೆ. ಬಾಸ್ಕಿನ್ ರಾಬಿನ್ಸ್ ಕ್ಯಾಂಡಿ ಬಾರ್‌ ಚೂರುಗಳು ಅಥವಾ ಕ್ಯಾಂಡಿಯ ಸಣ್ಣ ಚೂರುಗಳನ್ನು ಹೊಂದಿರುವ ಮಿಲ್ಕ್‌ಶೇಕ್‌ಗಳನ್ನು ಮಾರಾಟ ಮಾಡುತ್ತದೆ. ಉದಾಹರಣೆಗೆ ರೀಸ್ ಪೀನಟ್ ಬಟರ್ ಕಪ್ ಶೇಕ್ ಮತ್ತು ಹೀತ್ ಬಾರ್ ಕ್ರಂಚ್ ಶೇಕ್.[೫] ಉಟಾದ ಆರ್ಕ್‌ಟಿಕ್ ಸರ್ಕಲ್ ರೆಸ್ಟೊರೆಂಟ್‌ಗಳು ಐಸ್‌‍ಕ್ರೀಂನಿಂದ ತಯಾರಾದ ಮಿಲ್ಕ್‌ಶೇಕ್‌‌ಗಳನ್ನು ಹಾಲನ್ನು ಬೆರೆಸದೇ ಮಾರಾಟ ಮಾಡುತ್ತವೆ. ಐಸ್ ಕ್ರೀಂ ಅನ್ನು ಕಡೆದು ಚಮಚದೊಂದಿಗೆ ಉದ್ದನೆಯ ಕಪ್‌ನಲ್ಲಿ ಬಡಿಸಬೇಕು. ಡೇಟ್ ಶೇಕ್ ಪಾಲ್ಮ್ ಸ್ಪ್ರಿಂಗ್ಸ್ ಪ್ರದೇಶದ ಸಾಂಪ್ರದಾಯಿಕ ಸುವಾಸನೆಯಿಂದ ಕೂಡಿರುತ್ತದೆ.

ದಿಢೀರ್ ಆಹಾರ ಮತ್ತು ಪೂರ್ವ ತಯಾರಿ[ಬದಲಾಯಿಸಿ]

ದಿಢೀರ್ ಆಹಾರದ ಶೇಕ್‌ಗಳನ್ನು ಎರಡು ವಿಧಾನಗಳಲ್ಲಿ ಒಂದನ್ನು ಬಳಸುವ ಮೂಲಕ ತಯಾರಿಸಲಾಗುತ್ತದೆ: ಸ್ವಯಂಚಾಲಿತ ಮಿಲ್ಕ್‌ಶೇಕ್‌ನ ಯಂತ್ರಗಳು ಮತ್ತು ಸುವಾಸನೆಯ ಸಿರಪ್‌ಗಳಿಂದ ಮಿಶ್ರಣ ಮಾಡಿದ ಮೃದು ಐಸ್ ಕ್ರೀಂ.

ಮಿಲ್ಕ್‌ಶೇಕ್‌ನ ಯಂತ್ರಗಳು[ಬದಲಾಯಿಸಿ]

ಮೆಕ್‌ಡೊನಾಲ್ಡ್ ಮುಂತಾದ ಅತ್ಯಂತ ನಿಬಿಡ ರೆಸ್ಟೊರೆಂಟ್‌ಗಳು ಸ್ವಯಂಚಾಲಿತ ಮಿಲ್ಕ್‌ಶೇಕ್‌ನ ಯಂತ್ರಗಳಲ್ಲಿ ತಯಾರಿಸಿದ ಪೂರ್ವ ತಯಾರಿ ಮಿಲ್ಕ್‌ಶೇಕ್‌ನ ಮಿಶ್ರಣಗಳನ್ನು ಬಳಸಲು ಸಾಮಾನ್ಯವಾಗಿ ಆರಿಸುತ್ತವೆ. ಈ ಯಂತ್ರಗಳು ಬೀಟರ್‌ಗಳೊಂದಿಗೆ ಸ್ಟೇನ್‌ಲೆಸ್ ಸ್ಟೀಲ್ ಸಿಲಿಂಡರ್‌ಗಳನ್ನು ಒಳಗೊಂಡಿದ್ದು, ಪೂರ್ವ ನಿರ್ಮಿತ ಮಿಲ್ಕ್‌ಶೇಕ್ ಮಿಶ್ರಣಗಳನ್ನು ಘನೀಕರಿಸಿ ಕುಡಿಯಲು ಯೋಗ್ಯವಾದ ಶೈಲಿಯಾಗಿ ಬದಲಿಸಲು ಶೈತ್ಯೀಕರಣ ಸುರುಳಿಗಳನ್ನು ಬಳಸುತ್ತವೆ. ಸ್ವಯಂಚಾಲಿತ ಮಿಲ್ಕ್‌ಶೇಕ್‌ನ ಯಂತ್ರಗಳೊಂದಿಗೆ ಹೋಟೆಲುಗಳು ಬಡಿಸುವ ವೈವಿಧ್ಯದ ರುಚಿಗಳು ಮಿಲ್ಕ್‌ಶೇಕ್ ಯಂತ್ರಗಳಲ್ಲಿರುವ ಭಿನ್ನ ಟ್ಯಾಂಕ್‌ಗಳ ಸಂಖ್ಯೆಯಿಂದ ಸೀಮಿತವಾಗಿದೆ. ದಿಢೀರ್ ಆಹಾರದ ಹೋಟೆಲ್‌ಗಳು ಸಾಮಾನ್ಯವಾಗಿ ಕೆಲವೇ ಮಿಲ್ಕ್‌ಶೇಕ್‌ಗಳ ರುಚಿಗಳನ್ನು ನೀಡುತ್ತವೆ.

ಅತೀ ಸಣ್ಣ ಸ್ವಯಂಚಾಲಿತ ಮಿಲ್ಕ್‌ಶೇಕ್‌ನ ಯಂತ್ರಗಳು ಐದು ಲೀಟರ್ ಸ್ಟೇನ್‌ಲೆಸ್ ಸ್ಟೀಲ್ ಟ್ಯಾಂಕ್ ಬಳಸಿಕೊಂಡು ಒಂದು ಮಿಲ್ಕ್‌ಶೇಕ್‌ನ ಸುವಾಸನೆಯನ್ನು ತಯಾರಿಸುವ ಕೌಂಟರ್‌(ಕಟ್ಟೆ) ಮೇಲೆ ಇರಿಸಬಹುದಾದ ಉಪಕರಣಗಳಾಗಿವೆ. ಬಹು ರುಚಿಗಳ ಮಿಲ್ಕ್‌ಶೇಕ್‌ನ್ನು ನೀಡಲು ಬಯಸುವ ದೊಡ್ಡ ಹೋಟೆಲುಗಳು ನೆಲದ ಮೇಲೆ ಇರಿಸಬಹುದಾದ ಬಹು ಸುವಾಸನೆಗಳ ಮಿಲ್ಕ್‌ಶೇಕ್ ಯಂತ್ರಗಳನ್ನು ಬಹು ಐದು ಲೀಟರ್ ಸ್ಟೇನ್‌ಲೆಸ್ ಸ್ಟೀಲ್ ಬ್ಯಾರೆಲ್‌ಗಳೊಂದಿಗೆ ಬಳಸಬಹುದು ಅಥವಾ ಹಂಚುವಿಕೆಯಲ್ಲಿ ಮಿಲ್ಕ್‌ಶೇಕ್ ಸುವಾಸನೆಗಳನ್ನು ಮಿಶ್ರಣ ಮಾಡುವ ಇಂಗಾಲದ ಡೈಆಕ್ಸೈಡ್ ಆಧಾರದ ಯಂತ್ರಗಳನ್ನು ಬಳಸಬಹುದು. ಕೆಲವು ದಿಢೀರ್ ಆಹಾರದ ರೆಸ್ಟೊರೆಂಟ್‌ಗಳು ದಪ್ಪನಾದ ಮಿಲ್ಕ್‌ಶೇಕ್‌ನ ಯಂತ್ರಗಳನ್ನು ಬಳಸಬಹುದು. ಅವು ಏಕ ಸುವಾಸನೆಯ ಯಂತ್ರಗಳಾಗಿದ್ದು, ೧೨ ಲೀಟರ್ ಸ್ಟೇನ್‌ಲೆಸ್ ಸ್ಟೀಲ್ ಟ್ಯಾಂಕ್‌ನೊಂದಿಗಿರುತ್ತದೆ.

ಸಿರಪ್‌ನೊಂದಿಗೆ ಮಿಶ್ರಣವಾದ ಮೃದು ಐಸ್ ಕ್ರೀಂ[ಬದಲಾಯಿಸಿ]

ಡೇರಿ ಕ್ವೀನ್ ಮುಂತಾದ ಕೆಲವು ದಿಢೀರ್ ಆಹಾರದ ರೆಸ್ಟೊರೆಂಟ್‌ಗಳು ಮೃದು ಐಸ್ ಕ್ರೀಂ(ಅಥವಾ ಐಸ್ ಮಿಲ್ಕ್)ನೊಂದಿಗೆ ಚಾಕೊಲೇಟ್ ದ್ರಾವಣ ಮತ್ತು ಹಣ್ಣಿನ ಸುವಾಸನೆಯ ದ್ರಾವಣ ಮುಂತಾದ ಸಿಹಿ ಸುವಾಸನೆಯ ದ್ರಾವಣಗಳು ಮತ್ತು ಹಾಲನ್ನು ಮಿಶ್ರಣ ಮಾಡುವ ಮೂಲಕ ಸಿದ್ಧಪಡಿಸುತ್ತದೆ.

Milkshake (typical American/fast food)
Nutritional value per 100 g (3.5 oz)
Energy580 kJ (140 kcal)
18–27 g
Sugars18–27 g
3–9 g
Saturated2–5 g
Monounsaturated1–3 g
Polyunsaturated0–1 g
3.5 g
VitaminsQuantity %DV
Pantothenic acid (B5)
10%
0.5 mg
MineralsQuantity %DV
Calcium
13%
130 mg

100 g corresponds to 95 ml.
Percentages are roughly approximated using US recommendations for adults.
Source: USDA FoodData Central

ಪೂರ್ವ ನಿರ್ಮಿತ ಉತ್ಪನ್ನಗಳು[ಬದಲಾಯಿಸಿ]

ಪೂರ್ವ ನಿರ್ಮಿತ ಮಿಲ್ಕ್‌ಶೇಕ್‌ಗಳನ್ನು ಉತ್ತರ ಅಮೆರಿಕ ಮತ್ತು ಯುಕೆಯ ದಿನಸಿ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಪಾನೀಯಗಳನ್ನು ಸಿಹಿ ಸುವಾಸನೆಯ ಪುಡಿ, ಕೃತಕ ದ್ರಾವಣ ಮಿಶ್ರಿತ ಹಾಲಿನಿಂದ ತಯಾರಿಸಲಾಗುತ್ತದೆ. ಇದನ್ನು ಕೆರಾಗೀನ್ ಅಥವಾ ಇತರೆ ಉತ್ಪನ್ನಗಳಿಂದ ದಪ್ಪಗಾಗಿಸಿದಾಗ "ಫ್ಲೇವರ್ಡ್ ಮಿಲ್ಕ್"ಎಂದು ಕರೆಯಲಾಗುತ್ತದೆ. ಸಾಮಾನ್ಯ ಬ್ರಾಂಡ್‌ಗಳಲ್ಲಿ ನೆಸ್‌ಕ್ವಿಕ್, ಕ್ರಶಾ ಮತ್ತು ಡಿಂಕಂ ಯುಕೆಯ ಮೊಬೈಲ್ ಮಾರಾಟ ಮಾರುಕಟ್ಟೆಯಲ್ಲಿ ಒಳಗೊಂಡಿದೆ. ಬಾಟಲ್‌ನ ಮಿಲ್ಕ್‌ಶೇಕ್‌ಗಳನ್ನು ೩೦೦ ಎಂಎಲ್, ೫೦೦ ಎಂಎಲ್ ಅಥವಾ ಒಂದು ಲೀಟರ್ ಸೀಸೆಗಳಲ್ಲಿ ಮಾರಾಟ ಮಾಡಲಾಗುತ್ತದೆ.[೬] ಶೇಕನ್ ಅಡ್ಡರ್,ಮಿಲ್ಕ್ ಚಗ್, ಗಲ್ಪ್!, ಫ್ರಿಜಿ/೩}, ಯಾಜೂ, ಬಿಗ್ M, ಮತ್ತು ಮಾರ್ಸ್ ಬಾಟಲ್ ಮಿಲ್ಕ್‌ಶೇಕ್‌ಗಳ ಪ್ರಖ್ಯಾತ ಬ್ರಾಂಡ್‌ಗಳಾಗಿವೆ. ಬೆನ್ & ಜೆರಿಸ್ ಮೂರು ಐಸ್ ಕ್ರೀಂ ಸುವಾಸನೆಗಳಾದ ಚೆರಿ ಗಾರ್ಸಿಯ, ಚಂಕಿ ಮಂಕಿ ಮತ್ತು ಚಾಕೊಲೇಟ್ ಪಜ್ ಬ್ರೌನಿಯನ್ನು ತೆಗೆದುಕೊಂಡಿದ್ದು, ಬಾಟಲ್ ಶೇಕ್‌ಗಳ ತಯಾರಿಕೆಗೆ ಬಳಸಿದೆ.

ಇತಿಹಾಸ[ಬದಲಾಯಿಸಿ]

ಚಾಕೊಲೇಟ್ ಮಿಲ್ಕ್‌ಶೇಕ್

೧೮೮೦ರ ದಶಕದಿಂದ–೧೯೩೦ರ ದಶಕ[ಬದಲಾಯಿಸಿ]

ಮಿಲ್ಕ್‌ಶೇಕ್ ಪದವನ್ನು ೧೮೮೫ರಲ್ಲಿ ಮುದ್ರಣದಲ್ಲಿ ಮೊದಲಿಗೆ ಬಳಸಿದಾಗ, ಮಿಲ್ಕ್‌ಶೇಕ್‌ಗಳು ಆಲ್ಕೋಹಾಲಿಕ್ ವಿಸ್ಕಿ ಪಾನೀಯವಾಗಿದ್ದು, ಬಿರುಸಾದ, ಆರೋಗ್ಯಕಾರಿ ಎಗ್‌ನಾಗ್ ವಿಧದ ಪಾನೀಯವಾಗಿದ್ದು, ಮೊಟ್ಟೆಗಳು, ವಿಸ್ಕಿ ಮುಂತಾದವುಗಳಿರುತ್ತವೆ. ಇದನ್ನು ಟಾನಿಕ್ ರೀತಿಯಲ್ಲಿ ಅಥವಾ ಸತ್ಕಾರದ ರೀತಿಯಲ್ಲಿ ಪೂರೈಸಲಾಗುತ್ತದೆ.[೭] ಆದಾಗ್ಯೂ, ೧೯೦೦ರಲ್ಲಿ ಈ ಪದವನ್ನು ಚಾಕೊಲೇಟ್, ಸ್ಟ್ರಾಬೆರಿ ಅಥವಾ ವೆನಿಲ್ಲಾ ದ್ರಾವಣಗಳಿಂದ ತಯಾರಿಸಿದ ಆರೋಗ್ಯಕರ ಪಾನೀಯವೆಂದು ಉಲ್ಲೇಖಿಸಲಾಯಿತು. ೧೯೦೦ರ ದಶಕದಲ್ಲಿ, ಜನರು ಸಾಮಾನ್ಯವಾಗಿ ಐಸ್ ಕ್ರೀಂನೊಂದಿಗೆ ಹೊಸ ಉಪಚಾರಕ್ಕಾಗಿ ಕೇಳುತ್ತಿದ್ದರು. ೧೯೩೦ರ ದಶಕದಲ್ಲಿ ಮಿಲ್ಕ್‌ಶೇಕ್‌ಗಳು ಮಾಲ್ಟ್ ಶಾಪ್‌ಗಳಲ್ಲಿ ಜನಪ್ರಿಯ ಪಾನೀಯವಾಯಿತು. ಇದು ಆ ಅವಧಿಯ ಸಾಮಾನ್ಯ ಸೋಡಾ ಫೌಂಟೇನ್ ರೀತಿಯಲ್ಲಿ ಭೇಟಿಯ ಸ್ಥಳ ಅಥವಾ ಹ್ಯಾಂಗ್‌ಔಟ್ ರೀತಿಯಲ್ಲಿ ವಿದ್ಯಾರ್ಥಿಗಳು ಬಳಸಿದರು.[೭]

ಎಲೆಕ್ಟ್ರಿಕ್ ಬ್ಲೆಂಡರ್, ಮಾಲ್ಟೆಡ್ ಹಾಲಿನ ಪಾನೀಯಗಳು ಮತ್ತು ಮಿಲ್ಕ್‌ಶೇಕ್ ಒಂದಕ್ಕೊಂದು ಸಂಪರ್ಕ ಹೊಂದಿರಲಿಲ್ಲ. ಎಲೆಕ್ಟ್ರಿಕ್ ಬ್ಲೆಂಡರ್‌ಗಳ ವ್ಯಾಪಕ ಲಭ್ಯತೆಗೆ ಮುಂಚೆ, ಮಿಲ್ಕ್‌ಶೇಕ್ ವಿಧದ ಪಾನೀಯವು ಎಗ್‌ನಾಗ್ ರೀತಿಯಲ್ಲಿ ಅಥವಾ ಕೈಯಿಂದ ಕಲಕಿದ ಪುಡಿಮಾಡಿದ ಐಸ್, ಹಾಲು, ಸಕ್ಕರೆ ಮತ್ತು ಸುವಾಸನೆಗಳ ಮಿಶ್ರಣವಾಗಿತ್ತು.[೮] ಹ್ಯಾಮಿಲ್ಟನ್ ಬೀಚ್ ಪಾನೀಯ ಮಿಶ್ರಕಗಳನ್ನು ೧೯೧೧ರಲ್ಲಿ ಸೋಡಾ ಫೌಂಟೇನ್‌ಗಳಲ್ಲಿ ಬಳಸಲು ಆರಂಭಿಸಲಾಯಿತು ಮತ್ತು ಎಲೆಕ್ಟ್ರಿಕ್ ಬ್ಲೆಂಡರ್ ಅಥವಾ ಪಾನೀಯ ಮಿಶ್ರಕವನ್ನು ೧೯೯೨ರಲ್ಲಿ ಸ್ಟೀವನ್ ಪೋಪ್ಲಾವ್‌ಸ್ಕಿ ಆವಿಷ್ಕರಿಸಿದರು. ಬ್ಲೆಂಡರ್ ಆವಿಷ್ಕಾರದೊಂದಿಗೆ, ಮಿಲ್ಕ್‌ಶೇಕ್‌ಗಳು ಆಧುನಿಕ, ಅನಿಲಗೂಡಿಸಿದ ಮತ್ತು ನೊರೆಗೂಡಿದ ರೂಪವನ್ನು ಪಡೆಯಲಾರಂಭಿಸಿತು. ಮೊಳೆಕಾಳಿನ ಹಾಲಿನ ಪಾನೀಯಗಳನ್ನು ಮಾಲ್ಟೆಡ್ ಹಾಲಿನ ಪುಡಿಯಿಂದ ತಯಾರಿಸಲಾಯಿತು. ಇದು ಒಳಹಾಲು, ಮೊಳಕೆಕಾಳಿನ ಬಾರ್ಲಿ ಮತ್ತು ಗೋಧಿ ಹಿಟ್ಟನ್ನು ಒಳಗೊಂಡಿದ್ದವು. ಮೊಳಕೆಕಾಳಿನ ಹಾಲಿನ ಪುಡಿಯನ್ನು ವಿಲಿಯಂ ಹಾರ್ಲಿಕ್ ೧೮೯೭ರಲ್ಲಿ ಆವಿಷ್ಕರಿಸಿದರು. ಇದನ್ನು ಸುಲಭವಾಗಿ ಜೀರ್ಣವಾಗುವ, ಪುನಶ್ಚೈತನ್ಯಕಾರಿ ಆರೋಗ್ಯ ಪಾನೀಯವಾಗಿ ಅಂಗವಿಕಲರಿಗೆ ಮತ್ತು ಮಕ್ಕಳಿಗೆ ಹಾಗೂ ಹಸುಗೂಸುಗಳ ಆಹಾರವಾಗಿ ಬಳಸಲಾಯಿತು.

ಮೊಳಕೆಕಾಳಿನ ಹಾಲಿನ ಪುಡಿಯನ್ನು ಮಿಲ್ಕ್‌ಶೇಕ್‌ಗಳಲ್ಲಿ ಬಳಸುವುದನ್ನು ಚಿಕಾಗೊ ಔಷಧಿಅಂಗಡಿಯ ಸರಪಳಿಯಾದ ವಾಲ್‌ಗ್ರೀನ್ಸ್ ಅಮೆರಿಕದಲ್ಲಿ ಜನಪ್ರಿಯಗೊಳಿಸಿತು. ೧೯೨೨ರಲ್ಲಿ ವಾಲ್‌ಗ್ರೀನ್ಸ್ ನೌಕರ ಐವಾರ್ "ಪಾಪ್ " ಕೌಲ್ಸನ್ ವನಿಲ್ಲಾ ಐಸ್ ಕ್ರೀಂ‌ನ ಎರಡು ಸೌಟುಗಳನ್ನು ಮೊಳಕೆಕಾಳಿನ ಹಾಲಿನ ಪಾನೀಯದ ಆಹಾರಸೂತ್ರಕ್ಕೆ(ಹಾಲು, ಚಾಕೊಲೇಟ್ ದ್ರಾವಣ ಮತ್ತು ಮೊಳಕೆಕಾಳಿನ ಪುಡಿ)ಬೆರೆಸುವ ಮೂಲಕ ಮಿಲ್ಕ್‌ಶೇಕ್ ತಯಾರಿಸಿದ.[೯] ಈ ವಸ್ತು ಹಾರ್ಲಿಕ್ಸ್ ಮಾಲ್ಟೆಡ್ ಮಿಲ್ಕ್ ಎಂಬ ಹೆಸರಿನಲ್ಲಿ ವಾಲ್‌ಗ್ರೀನ್ ಔಷಧಿಅಂಗಡಿ ಸಮೂಹದಿಂದ ಚಾಕೊಲೇಟ್ ಮಿಲ್ಕ್‌ಶೇಕ್ ಹೆಸರಿನಲ್ಲಿ ಗಮನಸೆಳೆಯಿತು. ಇದು ಸ್ವಯಂ ಮಾಲ್ಟೆಡ್ ಅಥವಾ ಮಾಲ್ಟ್ ಎಂದು ಪರಿಚಿತವಾಗಿ ಜನಪ್ರಿಯ ಸೋಡಾ ಫೌಂಟೆನ್ ಪಾನೀಯಗಳಲ್ಲಿ ಒಂದೆನಿಸಿತು.[೧೦]

ಮಿಲ್ಕ್‌ಶೇಕ್‌ಗಳ ಯಂತ್ರೀಕರಣವು ೧೯೩೦ರ ದಶಕದಲ್ಲಿ ಅಭಿವೃದ್ಧಿಯಾಯಿತು. ಫ್ರಿಯೋನ್- ತಂಪಾದ ರೆಫ್ರಿಜಿರೇಟರ್‌ಗಳು ಸ್ವಯಂಚಾಲಿತವಾಗಿ ಐಸ್ ಕ್ರೀಂ ತಯಾರಿಕೆ ಮತ್ತು ವಿತರಣೆಯ ಸುರಕ್ಷಿತ, ವಿಶ್ವಾಸಾರ್ಹ ವಿಧಾನವನ್ನು ಒದಗಿಸಿತು. ೧೯೩೬ರಲ್ಲಿ ಸಂಶೋಧಕ ಅರ್ಲ್ ಪ್ರಿನ್ಸ್ ಫ್ರಿಯಾನ್ ತಂಪು, ಸ್ವಯಂಚಾಲನೆಯ ಐಸ್ ಕ್ರೀಂ ಯಂತ್ರದ ಹಿಂದಿನ ಮೂಲ ಕಲ್ಪನೆಯನ್ನು ಬಳಸಿಕೊಂಡು ಮಲ್ಟಿಮಿಕ್ಸರ್ ಅಭಿವೃದ್ಧಿಪಡಿಸಿದರು. ಐದು ತಿರುಗಚ್ಚಿನ ಮಿಕ್ಸರ್‌ನಿಂದ ಒಂದೇ ಬಾರಿಗೆ ಐದು ಮಿಲ್ಕ್‌ಶೇಕ್‌ಗಳನ್ನು ತಯಾರಿಸಲು ಸಾಧ್ಯವಾಯಿತು. ಎಲ್ಲವೂ ಸ್ವಯಂಚಾಲಿತವಾಗಿ ಸನ್ನೆಯನ್ನು ಎಳೆಯುವ ಮೂಲಕ ಪೇಪರ್ ಕಪ್‌ಗಳಲ್ಲಿ ವಿತರಣೆಯಾಗುತ್ತಿದ್ದವು.

೧೯೩೦ರ ದಶಕದಲ್ಲಿ ಅನೇಕ ಸುದ್ದಿಪತ್ರಿಕೆ ಲೇಖನಗಳು "ಫ್ರಾಸ್ಟೆಡ್" ಪದವನ್ನು ಐಸ್ ಕ್ರೀಂನಿಂದ ತಯಾರಿಸಿದ ಮಿಲ್ಕ್‌ಶೇಕ್‌ಗಳನ್ನು ಉಲ್ಲೇಖಿಸಲು ಬಳಸಲಾಯಿತು ಎಂದು ತೋರಿಸಿದವು. ೧೯೩೭ರಲ್ಲಿ ಮೆರಿಲ್ಯಾಂಡ್ ಡೆಂಟನ್ ಪತ್ರಿಕೆ ಯು ಫ್ರಾಸ್ಟೆಡ್ ಶೇಕ್‌ಗೆ ನಿಮ್ಮ ನೆಚ್ಚಿನ ಐಸ್ ಕ್ರೀಂ ತುಂಡನ್ನು ಸೇರಿಸಿ ಎಂದು ಪ್ರಕಟಿಸಿತು. ೧೯೩೯ರಲ್ಲಿ ಓಹಿಯೊದ ಮ್ಯಾನ್ಸ್‌ಫೀಲ್ಡ್ ನ್ಯೂಸ್,ದೇಶೀಯವಾಗಿ ಹೆಪ್ಪುಗಟ್ಟಿದ ಸ್ಥಿತಿಯ ಪಾನೀಯವು ಐಸ್ ಕ್ರೀಂ ಬೆರೆಸಿದರೆ ಉತ್ತಮವಾಗಿರುತ್ತದೆ ಎಂದು ಹೇಳಿತು. ಅತ್ಯುತ್ತಮ ಉದಾಹರಣೆ ಹೆಪ್ಪುಗಟ್ಟಿದ ಕಾಫೀ-ಬಿಸಿಯಾದ, ರುಚಿಯಾದ ಪಾನೀಯವನ್ನು ಐಸ್‍ನೊಂದಿಗೆ ತಣ್ಣಗಿರುವಂತೆ ಮತ್ತು ಐಸ್‌ಕ್ರೀಂನೊಂದಿಗೆ ಹೆಪ್ಪುಗಟ್ಟಿಸಲಾಗುತ್ತದೆ.[೧೧]

೧೯೪೦ರ ದಶಕ ಮತ್ತು ೧೯೫೦ರ ದಶಕ[ಬದಲಾಯಿಸಿ]

೧೯೫೦ರ ದಶಕದಲ್ಲಿ ಮಿಲ್ಕ್‌ಶೇಕ್ ಕುಡಿಯಲು ಜನಪ್ರಿಯ ತಾಣಗಳು ವೂಲ್‌ವರ್ಥ್ಸ್ "೫ & ೧೦"ಭೋಜನ ಕೌಂಟರ್‌ಗಳು, ಡೈನರ್ನ ಬರ್ಗರ್ ಜಾಯಿಂಟ್ಸ್ ಮತ್ತು ಡ್ರಗ್‌ಸ್ಟೋರ್ ಸೋಡಾ ಫೌಂಟೇನ್ಸ್. ಈ ಸಂಸ್ಥೆಗಳಿಗೆ ಸಾಮಾನ್ಯವಾಗಿ ನಿಯೋನ್ ಬೆಳಕಿನ ಚಿಹ್ನೆಗಳಿರುತ್ತವೆ, ಚದುರಂಗದ ಮಣೆ ಮಾದರಿಯ ಲಿನೋಲಿಯಂ ನೆಲ ಹಾಸುಬಿಲ್ಲೆ, ಕ್ರೋಮ್ ಬಾರ್‌ಸ್ಟೂಲ್ಸ್, ವಿನೈಲ್ ಬೂತ್ಸ್, ಫಾರ್ಮಿಕಾ ಕೌಂಟರ್ ಟಾಪ್ಸ್ ಜತೆಗೆ ನಾಣ್ಯದಿಂದ ನಿರ್ವಹಣೆಯಾಗುವ ಜ್ಯೂಕ್‌ಬಾಕ್ಸ್‌ಗಳು, ದಿನನಿತ್ಯದ ವಿಶೇಷಗಳ ಫಲಕ, ಕೌಂಟರ್ ಟಾಪ್ ಡೋನಟ್ ಪ್ರದರ್ಶನ ಕೇಸ್ ಮತ್ತು ಕೌಂಟರ್ ಹಿಂದೆ ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ. ಹೊಳೆಯುವ ಕ್ರೋಮ್ ಅಥವಾ ಸ್ಟೇನ್‌ಲೆಸ್ ಸ್ಟೀಲ್ ಮಿಲ್ಕ್‌ಶೇಕ್ ಮಿಶ್ರಣದ ಯಂತ್ರ.[೧೨]

ಈ ಸಂಸ್ಥೆಗಳು ಹ್ಯಾಮಿಲ್ಟನ್ ಬೀಚ್ ಅಥವಾ ಇದೇ ಶೈಲಿಯ ಪಾನೀಯ ಮಿಶ್ರಕಗಳಲ್ಲಿ ಮಿಲ್ಕ್‌ಶೇಕ್ ತಯಾರಿಸುತ್ತವೆ. ಇವಕ್ಕೆ ತಿರುಗಚ್ಚು ಮತ್ತು ಕಡೆಗೋಲುಗಳಿದ್ದು, ಗಾಳಿಯನ್ನು ಪಾನೀಯಗಳಿಗೆ ತಿರುಗಿಸಿ, ಮೃದು, ಲಘು ಫಲಿತಾಂಶಗಳನ್ನು ನೀಡುತ್ತದೆ ಮತ್ತು ೧೨½-ಒನ್ಸ್ ಉದ್ದದ, "y"-ಆಕಾರದ ಗ್ಲಾಸ್‌ಗಳಲ್ಲಿ ಬಡಿಸಲಾಗುತ್ತದೆ. ಸೋಡಾ ಫೌಂಟೇನ್ ಸಿಬ್ಬಂದಿ ಸ್ವಂತ ನುಡಿಯನ್ನು ಬಳಸುತ್ತಾರೆ. ಉದಾಹರಣೆಗೆ "ಬರ್ನ್ ಒನ್ ಆಲ್ ದಿ ವೇ"(ಚಾಕೋಲೇಟ್ ಮೊಳಕೆಕಾಳಿನ ಜತೆ ಚಾಕೊಲೇಟ್ ಐಸ್ ಕ್ರೀಂ) "ಟ್ವಿಸ್ಟ್ ಇಟ್, ಚೋಕ್ ಇಟ್ ಎಂಡ್ ಮೇಕ್ ಇಟ್ ಕ್ಯಾಕಲ್"(ಚಾಕೊಲೇಟ್ ಮೊಳಕೆಕಾಳಿನ ಜತೆ ಮೊಟ್ಟೆ)"ಶೇಕ್ ಒನ್ ಇನ್ ದಿ ಹೇ"(ಸ್ಟ್ರಾಬೆರಿ ಶೇಕ್) ಮತ್ತು "ವೈಟ್ ಕೌ"(ವೆನಿಲ್ಲಾ ಮಿಲ್ಕ್‌ಶೇಕ್).[೧೩] ೧೯೫೦ರ ದಶಕದಲ್ಲಿ ರೇ ಕ್ರಾಕ್ ಎಂಬ ಹೆಸರಿನ ಮಿಲ್ಕ್‌ಶೇಕ್ ಯಂತ್ರದ ಮಾರಾಟಗಾರ ಸಂಶೋಧಕ ಅರ್ಲ್ ಪ್ರಿನ್ಸ್ ಅವರಿಂದ ೧೯೩೦ರ ಯುಗದ ಮಲ್ಟಿಮಿಕ್ಸರ್ ಮಿಲ್ಕ್‌ಶೇಕ್ ತಯಾರಿಕೆಯ ವಿಶೇಷ ಹಕ್ಕನ್ನು ಖರೀದಿಸಿದರು ಮತ್ತು ಮೆಕ್‌‌ಡೋನಾಲ್ಡ್ ಹೋಟೆಲ್‌ಗಳಲ್ಲಿ ಉತ್ಪಾದನೆಯನ್ನು ತ್ವರಿತಗೊಳಿಸಲು ಸ್ವಯಂಚಾಲಿತ ಮಿಲ್ಕ್‌ಶೇಕ್ ಯಂತ್ರಗಳನ್ನು ಬಳಸಲಾರಂಭಿಸಿದರು.[೧೪]

೧೯೫೦ರ ದಶಕದಲ್ಲಿ ಮಿಲ್ಕ್‌ಶೇಕ್‌ಗಳನ್ನು ಅಮೆರಿಕದ ವಿವಿಧ ಭಾಗಗಳಲ್ಲಿ "ಫ್ರೇಪ್ಸ್", "ವೆಲ್ವೆಟ್ಸ್", "ಫ್ರಾಸ್ಟೆಡ್(ಪಾನೀಯಗಳು)" ಅಥವಾ ಕ್ಯಾಬಿನೆಟ್ಸ್ ಎಂದು ಕರೆಯಲಾಯಿತು. ಮಿಲ್ಕ್‌ಶೇಕ್‌ನ ವಿಶೇಷ ಶೈಲಿ ಕಾಂಕ್ರೀಟ್ ಅತೀ ದಪ್ಪನಾಗಿದ್ದು, ಸರ್ವರ್ ಅದನ್ನು ಆದೇಶ ನೀಡುವ ಕಿಟಕಿಯ ಹೊರಗೆ ತಲೆಕೆಳಗಾಗಿ ಹಿಡಿದರೂ, ಒಂದೇ ಒಂದು ಹನಿ ತೊಟ್ಟಿಕ್ಕದಿರುವುದನ್ನು ಪ್ರದರ್ಶಿಸುತ್ತಾನೆ. ೧೯೫೨ರಲ್ಲಿ ರೋಡ್ ಐಲೆಂಡ್‌ನ ನ್ಯೂಪೋರ್ಟ್ ಡೇಲಿ ನ್ಯೂಸ್ "ಗೈಡ್ ಫಾರ್ ಟಾಪ್ ಕ್ವಾಲಿಟಿ ICE CREAM SODAS CABINETS MILK SHAKES" ಹೊಂದಿತ್ತು. ಅದು ಮುದ್ರಣದಲ್ಲಿ "ಕ್ಯಾಬಿನೆಟ್" ಪದದ ಬಳಕೆಯನ್ನು ತೋರಿಸಿತ್ತು. ೧೯೫೩ರಲ್ಲಿ ಸ್ಯಾಲಿಸ್‌ಬರಿ ಟೈಮ್ಸ್‌ನ ಲೇಖನವು (ಮೆರಿಲ್ಯಾಂಡ್ ರಾಜ್ಯದಲ್ಲಿ) ಜಾಡಿಯಲ್ಲಿ ಚೆನ್ನಾಗಿ ಕುಲುಕುವ ಮೂಲಕ ಶೇಕ್‌ಗಳನ್ನು ಮಾಡಬಹುದೆಂದು ಸೂಚಿಸಿತು. ನಾಲ್ಕು ದೊಡ್ಡ ಚಮಚೆ ಐಸ್ ಕ್ರೀಂ ಸೇರಿಸುವ ಮೂಲಕ ಈ ಪಾನೀಯವು "ಫ್ರಾಸ್ಟೆಡ್ ಶೇಕ್"(ಗಡ್ಡೆಗಟ್ಟಿದ ಶೇಕ್)ಆಗುತ್ತೆಂದು ಲೇಖನವು ತಿಳಿಸಿತು.[೧೫]

ಇಂದಿನ ಮಿಲ್ಕ್‌ಶೇಕ್‌ಗಳು[ಬದಲಾಯಿಸಿ]

೨೦೦೬ರಲ್ಲಿ US ಕೃಷಿ ಸಂಶೋಧನೆ ಸೇವೆ ತಗ್ಗಿದ ಸಕ್ಕರೆಯ ಕಡಿಮೆ ಕೊಬ್ಬಿನ ಮಿಲ್ಕ್ ಶೇಕ್‌ಗಳನ್ನು, ಶಾಲೆಯ ಭೋಜನ ಕಾರ್ಯಕ್ರಮಗಳಿಗೆ ಅಭಿವೃದ್ಧಿಪಡಿಸಿತು. ಶೇಕ್‌ಗಳು ವಾಣಿಜ್ಯ ವೇಗದ ಆಹಾರದ ಶೇಕ್‌ಗಳ ಶೇಕಡ ೧೦ರಷ್ಟು ಕೊಬ್ಬು ಮತ್ತು ಅರ್ಧದಷ್ಟು ಪ್ರಮಾಣದ ಸಕ್ಕರೆಯನ್ನು ಒಳಗೊಂಡಿತ್ತು. ಶಾಲೆಗಳಿಗೆ ಮಿಲ್ಕ್ ಶೇಕ್ ಯಂತ್ರ ಅಥವಾ ಮೃದು ಐಸ್ ಕ್ರೀಂ ಯಂತ್ರವನ್ನು ಮಿಲ್ಕ್ ಶೇಕ್ ಬಡಿಸುವುದಕ್ಕಾಗಿ ಅಗತ್ಯವಾಗಿತ್ತು. ಮಿಲ್ಕ್‌ಶೇಕ್‌ಗಳು ಹೆಚ್ಚುವರಿ ನಾರು ಮತ್ತು ಇತರೆ ಪೌಷ್ಟಿಕಾಂಶಗಳನ್ನು ಒಳಗೊಂಡಿತ್ತು ಮತ್ತು ಅತೀ ಕಡಿಮೆ ಲ್ಯಾಕ್ಟೋಸ್ ಹೊಂದಿದ್ದು, ಲ್ಯಾಕ್ಟೋಸ್ ಸಹಿಸದ ಕೆಲವು ಜನರಿಗೆ ಶೇಕ್‌ಗಳು ಸೂಕ್ತವಾಗಿತ್ತು.[೧೬]

೨೦೦೦ದ ದಶಕದಲ್ಲಿ ಮಿಲ್ಕ್‌ಶೇಕ್‌ಗಳನ್ನು "ಸ್ಪಾ ಡೆಂಟಿಸ್ಟ್ರಿ"ಯ ಬೌಟಿಕ್ ಶೈಲಿಯ ಹೊಸ ಪ್ರವೃತ್ತಿಯ ಭಾಗವಾಗಿ ಬಳಸಲು ಆರಂಭಿಸಲಾಯಿತು. ಇದು ದಂತ ರೋಗಿಗಳಿಗೆ ಆರಾಮ ಉಂಟುಮಾಡುವ ಮತ್ತು ಅವರ ಆತಂಕವನ್ನು ಕಡಿಮೆ ಮಾಡುವ ಗುರಿ ಹೊಂದಿತ್ತು. ಸ್ಪಾ ದಂತಚಿಕಿತ್ಸಾಲಯವು ಆರೋಮಾಥೆರಪಿ, ಅಂಗಮರ್ಧನಗಳು, ರೋಗಿಗಳ ಉದ್ವೇಗವನ್ನು ತಗ್ಗಿಸಲು ಹೆಡ್‌ಫೋನ್‌ಗಳ ಮೂಲಕ ಸಂಗೀತವನ್ನು ಬಳಸಲಾರಂಭಿಸಿತು. ಸ್ಪಾ ದಂತಚಿಕಿತ್ಸಾಲಯದ ಚಿಕಿತ್ಸೆಯಲ್ಲಿ ಫಿಲ್ಲಿಂಗ್(ಹುಳುಕನ್ನು ತುಂಬುವುದು) ಅಥವಾ ರೂಟ್ ಕೆನಾಲ್ ಚಿಕಿತ್ಸೆಯ ಕೊನೆಯಲ್ಲಿ ರೋಗಿಗಳಿಗೆ ಐಸಿ ಮಿಲ್ಕ್‌ಶೇಕ್ ನೀಡಲಾಗುತ್ತದೆ- ಬಾಯಿಯ ನೋವನ್ನು ಶಮನಗೊಳಿಸಲು ಮತ್ತು ಗಟ್ಟಿ ಆಹಾರಗಳ ಬಯಕೆಯನ್ನು ವಿಳಂಬಿಸಲು ಮತ್ತು ಅರಿವಳಿಕೆಯ ಪರಿಣಾಮಗಳನ್ನು ಇಲ್ಲವಾಗಿಸಲು ಇದನ್ನು ನೀಡಲಾಗುತ್ತದೆ.[೧೭]

೨೦೦೫ರಲ್ಲಿ ಮಿಲ್ಕ್‌ಶೇಕ್ ಸಾಂಪ್ರದಾಯಿಕ ಮನೆಯಾದ ಕುಟುಂಬದ ರೆಸ್ಟೊರೆಂಟ್‌ಗಳು ಮತ್ತು ೨೪ ಗಂಟೆಯ ಡೈನರ್ ಶೈಲಿಯ ರೆಸ್ಟೊರೆಂಟ್‌ಗಳಾದ ಅಮೆರಿಕದ ೧೯೫೦ರ ದಶಕ ಮತ್ತು ೧೯೬೦ರ ದಶಕದ ಮುಖ್ಯವಸ್ತುಗಳಾಗಿದ್ದ ಡೆನ್ನೀಸ್, ಬಿಗ್ ಬಾಯ್ ಮತ್ತು ಇಂಟರ್‌ನ್ಯಾಷನಲ್ ಹೌಸ್ ಆಫ್ ಪ್ಯಾನ್‌ಕೇಕ್ಸ್‌ಗಳು ಮುಂತಾದವು ಅಮೆರಿಕದ ಜನಗಣತಿ ೧೯೭೦ರ ದಶಕದಲ್ಲಿ ಇದನ್ನು ಅಳತೆ ಮಾಡಲು ಆರಂಭಿಸಿದ ನಂತರ ಆದಾಯಕ್ಕೆ ಸಂಬಂಧಿಸಿದಂತೆ ಸ್ಥಾನವನ್ನು ಆಕ್ರಮಿಸಿದೆ. ಈ ಸ್ಥಳಾಂತರದ ಅರ್ಥವೇನೆಂದರೆ, ಸಿಟ್ಕಾಂ ಹ್ಯಾಪಿ ಡೇಸ್ ‌ನಿಂದ ಪ್ರಚೋದಿತವಾದ ಬರ್ಗರ್, ಫ್ರೈಸ್ ಮತ್ತು ಮಿಲ್ಕ್‌ಶೇಕ್ ಮಾದರಿಯು ಅಮೆರಿಕದ ಹಸಿವಿನ ಮೇಲೆ ತನ್ನ ಹಿಡಿತವನ್ನು ಕಳೆದುಕೊಂಡಿತು. ಬದಲಾಗಿ, USಗ್ರಾಹಕರು ಸಾಮಾನ್ಯ ಊಟದ ಹೊಟೆಲುಗಳಾದ ರೂಬಿ ಟ್ಯೂಸ್‌ಡೆ, ಆಲೀವ್ ಗಾರ್ಡನ್ ಮತ್ತು ಔಟ್‌ಬ್ಯಾಕ್ ಸ್ಟೀಕ್‌ಹೌಸ್‌ಗಳಿಗೆ ಭೇಟಿ ನೀಡಲಾರಂಭಿಸಿದರು.[೧೮]

ಕುಟುಂಬದ ರೆಸ್ಟೊರೆಂಟ್ ವ್ಯವಹಾರದಲ್ಲಿ ಕುಸಿತದ ನಡುವೆಯೂ ೨೦೦೬ರಲ್ಲಿ ಮಿಲ್ಕ್‌ಶೇಕ್‌ಗಳು, ಮಾಲ್ಟ್ಸ್ ಮತ್ತು ಫ್ಲೋಟ್ಸ್ ಮಾರಾಟವು ಶೇಕಡ ೧೧ರಷ್ಟು ಹೆಚ್ಚಾಯಿತು ಎಂದು ಕೈಗಾರಿಕೆ ಸಂಶೋಧನೆ ಸಂಸ್ಥೆ NPDಗ್ರೂಪ್ ತಿಳಿಸಿದೆ. ಸೆಂಟ್ರಲ್ ಫ್ಲೋರಿಡಾದ ಓರ್ಲಾಂಡೊ ವಿಶ್ವವಿದ್ಯಾನಿಲಯದ ಬಹುಘಟಕ ಹೋಟೆಲ್ ವ್ಯವಸ್ಥಾಪನೆ ಕೇಂದ್ರದ ನಿರ್ದೇಶಕ ಕ್ರಿಸ್ಟೋಫರ್ ಮುಲ್ಲರ್, ಮಿಲ್ಕ್‌ಶೇಕ್‌ಗಳು ಬೇಸಿಗೆ, ಯೌವನ-ಮತ್ತು ಲೋಲುಪತೆಯನ್ನು ನೆನಪಿಸುತ್ತದೆ ಮತ್ತು ಅವು ಕಳೆದುಹೋದ ಕಾಲವನ್ನು ಮರುಕಳಿಸುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.[೫] ಮಿಲ್ಕ್‌ಶೇಕ್‌ಗಳು ಹೋಟೆಲ್‌ಗಳಿಗೆ ಅಪಾರ ಲಾಭದಾಯಕ ವಸ್ತುವಾಗಿದ್ದು, ನಯವಾದ ಪಾನೀಯಗಳು ಅತೀ ಹೆಚ್ಚು ಗಾಳಿಯನ್ನು ಹೊಂದಿರುತ್ತದೆ. ಮಾರುಕಟ್ಟೆ ಸಂಶೋಧನೆ ಸಂಸ್ಥೆ ಟೆಕ್ನೊಮಿಕ್ ೨೦೦೬ರಲ್ಲಿ ಸರಾಸರಿ ದರದ $೩.೩೮ರೆಸ್ಟೊರೆಂಟ್ ಶೇಕ್ ಲಾಭದಾಯಕವಾಗಿತ್ತು ಎಂದು ಹೇಳಿಕೊಂಡಿದೆ. ೧೯೫೦ರ ಶೈಲಿಯ ಡೈನರ್ ರೆಸ್ಟೊರೆಂಟ್‌ಗಳ ಅಮೆರಿಕ ಸಮೂಹದ ಸೋನಿಕ್ ಡ್ರೈವ್-ಇನ್ ಕಾರ್ಯನಿರ್ವಾಹಕರೊಬ್ಬರು, ಶೇಕ್‌ಗಳನ್ನು ಅತ್ಯಂತ ಗಾತ್ರದ, ಆದಾಯ ಉತ್ಪಾದಿತ ಕ್ಷೇತ್ರವೆಂದು ಕರೆದಿದ್ದಾರೆ.[೫]

೨೦೦೬ರಲ್ಲಿ ವರದಿಯಾದ ಮಿಲ್ಕ್‌ಶೇಕ್ ಮಾರಾಟಗಳ ಆಂಶಿಕ ಹೆಚ್ಚಳವು ನಾವೀನ್ಯದ ಬಾಣಸಿಗ ವಿನ್ಯಾಸದ ಮಿಲ್ಕ್‌ಶೇಕ್‌ಗಳು ಉತ್ತಮ ಗುಣಮಟ್ಟದ ಹೋಟೆಲ್‌ಗಳಲ್ಲಿ ಹೆಚ್ಚೆಚ್ಚು ಲಭ್ಯವಾಗಿದ್ದು ಕಾರಣವಾಗಿತ್ತು. ೨೦೦೬ರಲ್ಲಿ ಲಾಸ್ ಏಂಜಲ್ಸ್ ಟೈಮ್ಸ್ ವರದಿ ಮಾಡುತ್ತಾ, "ಹಿಪ್‌ಸ್ಟರ್ ಹ್ಯಾಂಗ್‌ಔಟ್‌ಗಳು ಮತ್ತು ರೆಟ್ರೊ ಶೈಲಿಯ ಹೆಗ್ಗುರುತುಗಳ" ಬಾಣಸಿಗರು ರೈತರ ಮಾರುಕಟ್ಟೆಯ ಮಿದುಗೊಳಿಸಿದ ಸ್ಟ್ರಾಬೆರಿಗಳು, ವಲ್ರೋನಾ ಚಾಕೊಲೇಟ್ ಮತ್ತು ಮಡಗಾಸ್ಕರ್ ಬೌರ್ಬನ್ ವೆನಿಲ್ಲಾಗಳನ್ನು ಹೊಸ ಮಿಲ್ಕ್‌ಶೇಕ್ ಸುವಾಸನೆಗಳನ್ನು ತಯಾರಿಸುವುದಕ್ಕಾಗಿ ಬಳಸಲಾರಂಭಿಸಿದರು.

LA-ಪ್ರದೇಶದ ಹೋಟೆಲ್‌ಗಳಲ್ಲಿ ನೀಡುವ ಇತರ ನವೀನ ಕಲ್ಪನೆಗಳಲ್ಲಿ ಸುಟ್ಟ ಪೀಕನ್‌ಗಳು, ಸ್ಯಾಫ್ರೋನ್ ಪನ್ನೀರು ಅಥವಾ ಕಿತ್ತಲೆ-ಅರಳುವ ಐಸ್ ಕ್ರೀಂ, ಟಾರೊ ಬೇರು, ರಮ್‌ನಲ್ಲಿ ಅದ್ದಿದ ವೆನಿಲ್ಲಾ ಬೀನ್‌ಗಳು, ವಲ್ರೋನಾ ಚಾಕೊಲೇಟ್ ಮತ್ತು ಗ್ರೇ ಗೂಸ್ ವೋಡ್ಕಾ ಮತ್ತು ರಷ್ಯನ್ ಇಂಪೀರಿಯಲ್ ಸ್ಟೌಟ್ ಬಿಯರ್ ಜತೆ ಮಿಶ್ರಣ ಮಾಡಿದ ವನಿಲ್ಲಾ ಮೊಟ್ಟೆಭಕ್ಷ್ಯ.[೧೯]

ಮಾರುಕಟ್ಟೆ ಸಂಶೋಧನೆ[ಬದಲಾಯಿಸಿ]

೨೦೦೩ರಲ್ಲಿ ದಿಢೀರ್ ಆಹಾರದ ಸಮೂಹವು ಮಿಲ್ಕ್‌ಶೇಕ್ ಮಾರಾಟ ಮತ್ತು ಲಾಭಗಳಲ್ಲಿ ಸುಧಾರಣೆ ಬಯಸಿ, ಮಿಲ್ಕ್‌ಶೇಕ್‌ಗಳಲ್ಲಿ ಯಾವ ಅಂಶಗಳು ಗ್ರಾಹಕರನ್ನು ಸೆಳೆಯುತ್ತದೆಂದು ಕಂಡುಕೊಳ್ಳಲು ಆರಂಭದಲ್ಲಿ ಕೇಂದ್ರೀಕೃತ ಗುಂಪುಗಳನ್ನು ಬಳಸಲು ಪ್ರಯತ್ನಿಸಿತು. ಆದರೆ ಲಾಭಗಳು ಹೆಚ್ಚಾಗಲಿಲ್ಲ. ರೆಸ್ಟೊರೆಂಟ್ ಸಂಶೋಧಕರನ್ನು ನೇಮಿಸಿ ಗ್ರಾಹಕರು ದಿಢೀರ್ ಆಹಾರದ ಮಿಲ್ಕ್‌ಶೇಕ್‌ಗಳನ್ನು ಏಕೆ ಖರೀದಿಸಿದ್ದಾರೆಂದು ಅಧ್ಯಯನ ಮಾಡಿತು. ಹೋಟೆಲ್‌ಗಳು ಮಾರಾಟಗಳನ್ನು ಹೆಚ್ಚಿಸಲು ಯಾವ ಅಂಶಗಳು ನೆರವಾಗುತ್ತವೆಂದು ಪತ್ತೆ ಮಾಡುವ ಮಾರ್ಗವು ಇದಾಗಿತ್ತು.

ಸಂಶೋಧಕರು ಪತ್ತೆಮಾಡಿದ್ದೇನೆಂದರೆ ಅವರ ನಿರೀಕ್ಷೆಗಳಿಗೆ ವಿರುದ್ಧವಾಗಿ, "...ಎಲ್ಲ ಮಿಲ್ಕ್‌ಶೇಕ್‌ಗಳಲ್ಲಿ ಅರ್ಧದಷ್ಟನ್ನು ಮುಂಜಾನೆ ಖರೀದಿಸಲಾಗಿರುತ್ತದೆ ಮತ್ತು ಸಾಮಾನ್ಯವಾಗಿ ಶೇಕ್ ಮಾತ್ರ ಖರೀದಿಸಿದ ವಸ್ತುವಾಗಿರುತ್ತದೆ ಮತ್ತು ಇದನ್ನು ಹೋಟೆಲ್‌‌ಗಳಲ್ಲಿ ಅಪರೂಪವಾಗಿ ಸೇವಿಸಲಾಗುತ್ತದೆ.." ಬಹುಮಟ್ಟಿನ ಗ್ರಾಹಕರು ಅವರ ಸುದೀರ್ಘ, ಬೇಜಾರಿನ ಪ್ರಯಾಣದಲ್ಲಿ ನಿಧಾನವಾಗಿ ಹೀರಲು ಮಿಲ್ಕ್‌ಶೇಕ್ ಖರೀದಿಸುತ್ತಿದ್ದಾರೆಂದು ಸಂಶೋಧಕರು ನಿರ್ಧರಿಸಿದರು. ಅವರ ಕೈಗಳಿಗೆ ಅಥವಾ ಉದ್ಯೋಗಕ್ಕೆ ಧರಿಸುವ ಬಟ್ಟೆಗಳನ್ನು ಕೊಳಕಾಗಿಸುವ ಅಪಾಯವನ್ನುಂಟು ಮಾಡದ ಒಂದು ಕೈಯಲ್ಲಿ ಸೇವಿಸಬಹುದಾದ ಆಹಾರ ಉತ್ಪನ್ನವನ್ನು ಅವರು ಬಯಸಿದರು(ಟೋಸ್ಟ್ ಮತ್ತು ಜಾಮ್ ಅಥವಾ ಸಾಸೇಜ್ ಮತ್ತು ಮೊಟ್ಟೆ ಬ್ಯಾಗೆಲ್‌ವಿಚ್‌ಗಳಿಂದ ಈ ಅಪಾಯ).

ಈ ಗುರಿ ಮಾರುಕಟ್ಟೆಯ ಮಾರಾಟಗಳನ್ನು ಹೆಚ್ಚಿಸುವ ಉತ್ತಮ ಕಾರ್ಯತಂತ್ರಗಳಲ್ಲಿ ಮಿಲ್ಕ್‌ಶೇಕ್‌ಗಳನ್ನು ದಪ್ಪಗಾಗಿಸಿ, ಸುದೀರ್ಘ ಬಾಳಿಕೆ ಬರುವಂತೆ ಮಾಡುವುದು, ಹಣ್ಣಿನ ಚೂರುಗಳನ್ನು ಸೇರಿಸುವುದು(ಇದನ್ನು ಹೆಚ್ಚು ಆಸಕ್ತಿಯಿಂದ ಕುಡಿಯುಂತೆ ಮಾಡಲು)ಅಥವಾ ಮಿಲ್ಕ್‌ಶೇಕ್ ಗ್ರಾಹಕರಿಗೆ ಎಕ್ಸ್‌ಪ್ರೆಸ್ ಸ್ವಯಂ ಸೇವೆಯ ಮಾರ್ಗವನ್ನು ಸೇರಿಸುವುದಾಗಿದೆ ಎಂದು ಸಂಶೋಧಕರು ತೀರ್ಮಾನಿಸಿದರು.[೨೦]

ಜನಪ್ರಿಯ ಸಂಸ್ಕೃತಿಯಲ್ಲಿ[ಬದಲಾಯಿಸಿ]

ಮಿಲ್ಕ್‌ಶೇಕ್ ೨೦೦೩ R&B–ಎಲೆಕ್ಟ್ರೋ ಗೀತೆಯ ಹೆಸರಾಗಿದೆ. ಇದನ್ನು ಅಮೆರಿಕದ ಹಾಡುಗಾರ ಕೆಲಿಸ್ ಮೂರನೇ ಸ್ಟುಡಿಯೊ ಆಲ್ಬಂ ಟೇಸ್ಟಿ ಸಲುವಾಗಿ ದಿ ನೆಪ್ಚೂನ್ಸ್ ಬರೆದು ತಯಾರಿಸಿದೆ. ಹಾಡನ್ನು ಆಲ್ಬಂನ ಮುಖ್ಯ ಹಾಡಾಗಿ ಬಿಡುಗಡೆ ಮಾಡಲಾಯಿತು. ಇದು ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ಅಗ್ರ ೧೦ ಸ್ಥಾನಗಳನ್ನು ಮುಟ್ಟಿತು. ಅಮೆರಿಕದಲ್ಲಿ ಹಾಡು ಕೆಲಿಸ್ ಅವರ ಅತೀ ದೊಡ್ಡ ಯಶಸ್ಸಾಯಿತು ಮತ್ತು ಬಿಲ್‌ಬೋರ್ಡ್ ಹಾಟ್ ೧೦೦ ಪಟ್ಟಿಯಲ್ಲಿ ಸ್ಥಾನ ಪಡೆದು ಮೂರನೇ ಸ್ಥಾನ ಮುಟ್ಟಿತು. ೨೦೦೬ರಲ್ಲಿ CKE ರೆಸ್ಟೊರೆಂಟ್ಸ್ ಹಾಡಿನ ಪರಿಷ್ಕೃತ ಆವೃತ್ತಿಯನ್ನು ಹಾರ್ಡೀಸ್ ಮತ್ತು ಕಾರ್ಲ್ಸ್ ಜೂ. ಮಿಲ್ಕ್‌ಶೇಕ್‌ಗಳ ಜಾಹೀರಾತುಗಳಲ್ಲಿ ಬಳಸಿಕೊಂಡಿತು. ಪಾಲ್ ಥಾಮಸ್ ಆಂಡರ್‌ಸನ್ ೨೦೦೭ನೇ ಚಿತ್ರ ದೇರ್ ವಿಲ್ ಬಿ ಬ್ಲಡ್ ನಂತರ ಹಾಡು ಇಂಟರ್‌ನೆಟ್ ಕಲ್ಪನೆಯಾಯಿತು. ಚಲನಚಿತ್ರದ ದೃಶ್ಯಗಳನ್ನು(ಬಹುಮಟ್ಟಿಗೆ ಅದರ ಪ್ರಖ್ಯಾತ "ಐ ಡ್ರಿಂಕ್ ಯುವರ್ ಮಿಲ್ಕ್‌ಶೇಕ್"ದೃಶ್ಯ) ಹಾಡಿನಲ್ಲಿ ಪರಿಷ್ಕರಿಸಲಾಯಿತು. ಕಾಮೆಡಿ ಕಥೆ ಅಗ್ಲಿ ಬೆಟ್ಟಿ ಯಲ್ಲಿ ಅಮಂಡಾ ಪೈಪ್ ವಾದ್ಯದೊಂದಿಗೆ ಈ ಹಾಡನ್ನು ಹಾಡಲು ಪ್ರೇರಣೆಯಾಯಿತು.

೨೦೦೭ನೇ ಚಿತ್ರ ದೇರ್ ವಿಲ್ ಬಿ ಬ್ಲಡ್ ‌ನಲ್ಲಿ ತೈಲ ವ್ಯಕ್ತಿಯಾಗಿ ಪರಿವರ್ತನೆಯಾದ ಬೆಳ್ಳಿ ಗಣಿಗಾರ ದಕ್ಷಿಣ ಕ್ಯಾಲಿಫೋರ್ನಿಯದ ತೈಲದ ಉತ್ಕರ್ಷ ಕಾಲದಲ್ಲಿ ಸಂಪತ್ತಿಗಾಗಿ ನಿರ್ದಯ ಅನ್ವೇಷಣೆ ಮಾಡುವ ಕಥೆಯಾಗಿದೆ. ಚಲನಚಿತ್ರದ ಮುಖ್ಯ ಪಾತ್ರಧಾರಿ ಡೇನಿಯಲ್ ಪ್ಲೇನ್‌ವ್ಯೂ ತೈಲ ಕೊರೆಯುವ ಪ್ರಕ್ರಿಯೆಯನ್ನು ಬಣ್ಣಿಸಲು ಈ ಅಮೆರಿಕದ ಸತ್ಕಾರದ ಬಗ್ಗೆ ಉಲ್ಲೇಖಿಸುತ್ತಾರೆ. ಎಲಿ ಸಂಡೆಯ ತೈಲ ಸಮೃದ್ಧ ಭೂಮಿಯನ್ನು ಖರೀದಿಸಿದ ಪ್ಲೇನ್‌ವಿವ್ಯೂ ಎಲಿ ಸಂಡೆಗೆ , ಇಲ್ಲಿ ನಿಮ್ಮಲ್ಲಿ ಮಿಲ್ಕ್‌ಶೇಕ್ ಇದ್ದರೆ ನನ್ನ ಬಳಿ ಮಿಲ್ಕ್‌ಶೇಕ್ ಮತ್ತು ನಳಿಕೆಯಿದೆ ಎಂದು ಹೇಳುತ್ತಾರೆ. ಅಲ್ಲಿದೆ ಅದು ನಳಿಕೆ,ನೀವು ನೋಡುತ್ತಿದ್ದೀರಾ? ನೀವು ಗಮನಿಸುತ್ತಿದ್ದೀರಾ? ನನ್ನ ನಳಿಕೆ ಕೋಣೆಯಾಚೆ ಮುಟ್ಟಿ ನಿಮ್ಮ ಮಿಲ್ಕ್‌ಶೇಕ್ ಕುಡಿಯಲಾರಂಬಿಸುತ್ತದೆ, ನಾನು ನಿಮ್ಮ ಮಿಲ್ಕ್‌ಶೇಕ್ ಕುಡಿಯುತ್ತೇನೆ! ನಾನು ಅದನ್ನು ಕುಡಿಯುತ್ತೇನೆ!" ಈ ಸಾಲು ಸೆನೆಟ್ ಸದಸ್ಯ ಆಲ್ಬರ್ಟ್ ಫಾಲ್ ಅವರ ೧೯೨೪ರ ಟೀಪಾಟ್ ಡೋಮ್ ತೈಲ ಕೊರೆಯುವ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿನ ಸಾಕ್ಷ್ಯವನ್ನು ಉಲ್ಲೇಖಿಸುತ್ತದೆ.[೨೧][೨೨] ಈ ಸಾಲು ಚಲನಚಿತ್ರದ ಜನಪ್ರಿಯ ನುಡಿಗಟ್ಟು ಆಯಿತು ಮತ್ತು ಚಲನಚಿತ್ರದ ಬಿಡುಗಡೆ ನಂತರ ಜನಪ್ರಿಯ ಸಂಸ್ಕೃತಿಯಲ್ಲಿ ಸಾಧಾರಣ ಮನ್ನಣೆಯನ್ನು ಗಳಿಸಿತು.[೨೩]

ಆನಿಮೇಟೆಡ್ ಟಿವಿ ಸರಣಿ ಆಕ್ವಾ ಟೀನ್ ಹಂಗರ್ ಫೋರ್ಸ್ ಮಾಸ್ಟರ್ ಶೇಕ್ ಎಂಬ ಹೆಸರಿನ ಮಾತನಾಡುವ ಮಿಲ್ಕ್‌ಶೇಕ್ ಒಳಗೊಂಡಿತ್ತು. ಟಿವಿ ಪ್ರದರ್ಶನ ಗ್ರಿಮ್ ಅಡ್ವೆಂಚರ್ಸ್ ಆಫ್ ಬಿಲ್ಲಿ ಎಂಡ್ ಮ್ಯಾಂಡಿಯಲ್ಲಿ ಬಿಲ್ಲಿಯ ಬೆಕ್ಕಿಗೆ ಮಿಲ್ಕ್‌ಶೇಕ್ ಎಂದು ಹೆಸರಿಡಲಾಗಿತ್ತು.

ಇವನ್ನೂ ಗಮನಿಸಿ‌[ಬದಲಾಯಿಸಿ]

 • ಬ್ಲೆಂಡರ್ (

ಉಪಕರಣ)

 • ಸ್ಮೂಥಿ
 • ಮಾಲ್ಟೆಡ್ ಹಾಲು
 • ಚಾಕೊಲೇಟ್ ಹಾಲು
 • ಬಿಸಿ ಚಾಕೊಲೇಟ್
 • ನೆಸ್‌ಕ್ವಿಕ್
 • ಓವಲ್ಟೈನ್
 • ದ್ರಾವಣ
 • ಸೋಯಿ ಹಾಲು
 • ಅಕ್ಕಿ ಹಾಲು
 • ಗ್ರೀಕ್ ಫ್ರಾಫೆ ಕಾಫಿ
 • ನ್ಯೂ ಇಂಗ್ಲೆಂಡ್ ತಿನಿಸು
 • ಮಿಲ್ಕ್‌ಶೇಕ್ (ಸಾಂಗ್)

ಉಲ್ಲೇಖಗಳು‌‌[ಬದಲಾಯಿಸಿ]

 1. "ಎ ಮಿಲ್ಕ್‌ಶೇಕ್ ಮೈಟ್ ಬಿ ಮಿಲ್ಕ್ ಶೇಕನ್ ಅಪ್ ವಿತ್ ಆರ್ ವಿತೌಟ್ ಫ್ಲೇವರಿಂಗ್ಸ್, (p.೬೬೮-೬೬೯) - ಹೌ ಟು ಕುಕ್ ಎವೆರಿಥಿಂಗ್ . ಮಾರ್ಕ್ ಬಿಟ್‌ಮ್ಯಾನ್ ವೈಲಿ ಪಬ್ಲಿಷಿಂಗ್ ಇಂಕ್. ೧೯೯೮ ISBN ೯೭೮-೦-೪೭೧-೭೮೯೧೮-೫
 2. ಮಿಲ್ಕ್ ಶೇಕ್ [1] ದಿ ಅಮೇರಿಕನ್ ಹೆರಿಟೇಜ್ ಡಿಕ್ಷನರಿ ಆಫ್ ದಿ ಇಂಗ್ಲೀಷ್ ಲಾಂಗ್ವೇಜ್‌‌, ನಾಲ್ಕನೆಯ ಆವೃತ್ತಿ. 2000 Archived 2009-03-20 ವೇಬ್ಯಾಕ್ ಮೆಷಿನ್ ನಲ್ಲಿ.
 3. ಮಿಲ್ಕ್‌ಸೇಕ್ ಟ್ರಿವಿಯಾ: ಮೋರ್ ದ್ಯಾನ್ ಜಸ್ಟ್ ಐಸ್‌ಕ್ರೀಂ
 4. ಬ್ಲೂಫೀಲ್ಡ್ಸ್ ಟ್ರಾವಲ್ ಗೈಡ್ (ಬ್ಲೂಫೀಲ್ಡ್ಸ್ ನಿಕಾರಾಗುವಾ, )
 5. ೫.೦ ೫.೧ ೫.೨ ಫ್ಯಾನ್ಸಿಯರ್ ವೇ ಟು ಗೆಟ್ ಬ್ರೈನ್ ಫ್ರೀಜ್. ಬ್ರೂಸ್ ಹೋರೊವಿಟ್ಜ್ ಅವರಿಂದ, USA TODAY
 6. "Dinkum Products". Dinkum.net. Archived from the original on 2018-03-19. Retrieved 2009-10-01.
 7. ೭.೦ ೭.೧ ಲಿಸನಿಂಗ್ ಟು ಅಮೆರಿಕ, ಸ್ಟಾರ್ಟ್ ಬರ್ಗ್ ಫ್ಲೆಕ್ಸನರ್[ಸೈಮನ್ & ಸ್ಕಸ್ಟರ್:ನ್ಯೂಯಾರ್ಕ್] ೧೯೮೨ (p. ೧೭೮)
 8. "ಸೆಕೆಂಡ್ ಎಡಿಷನ್ ಆಫ್ ದಿ ನೈಬರ್‌ಹುಡ್ ಕುಕ್‌ಬುಕ್‌"ನಿಂದ ವನಿಲ್ಲಾ ಮಿಲ್ಕ್‌ಶೇಕ್ ಪಾಕಸೂತ್ರ. ೧೯೧೪ರಲ್ಲಿ ಪೋರ್ಟ್‌ಲ್ಯಾಂಡ್ ಯಹೂದಿ ಮಹಿಳೆಯರ ಮಂಡಳಿಯಿಂದ ಪ್ರಕಟವಾಯಿತು. ಲೋಟದಲ್ಲಿ ಮೂರನೇ ಎರಡರಷ್ಟು ಹಾಲನ್ನು ಹಾಕಿ, ಯಾವುದೇ ಹಣ್ಣಿನ ದ್ರಾವಣ ಅಥವಾ ಸಕ್ಕರೆಯಿಂದ ಅದರ ರುಚಿಗೆ ಸಿಹಿಯುಂಟು ಮಾಡಿ ಮತ್ತು ವನಿಲ್ಲಾದಿಂದ ಅದಕ್ಕೆ ಸುವಾಸನೆ ಉಂಟುಮಾಡಿ. ಲೋಟವನ್ನು ಚೂರುಮಾಡಿದ ಐಸ್(ಮಂಜುಗಡ್ಡೆ)ನಿಂದ ತುಂಬಿ ಮತ್ತು ಆಮೂಲಾಗ್ರವಾಗಿ ಅದು ಮಿಶ್ರಣವಾಗುವ ತನಕ ಅದನ್ನು ಚೆನ್ನಾಗಿ ಕುಲುಕಿಸಿ. http://www.homemade-dessert-recipes.com/milk-shake-recipes.html
 9. "Walgreen's history". Walgreens.com. Archived from the original on 2008-05-01. Retrieved 2009-10-01.
 10. ದಿ ಎನ್‌ಸೈಕ್ಲೋಪೀಡಿಯ ಆಫ್ ಅಮೆರಿಕನ್ ಫುಡ್ ಎಂಡ್ ಡ್ರಿಂಕ್, ಜಾನ್F. ಮಾರಿಯಾನಿ [ಲೆಬ್‌ಹಾರ್-ಫ್ರೈಡ್‌ಮ್ಯಾನ್:ನ್ಯೂಯಾರ್ಕ್] ೧೯೯೯ (p. ೧೯೬–೧೯೭)
 11. ಅಮೆರಿಕನ್ ಡಯಾಲೆಕ್ಟ್ ಸೊಸೈಟಿ CABINET, CONCRETE, FROSTED, VELVET
 12. "ಡೈನರ್ ಸ್ಟೈಲ್". Archived from the original on 2013-06-22. Retrieved 2013-08-22.
 13. ಶೇಕ್ ಒನ್ ಇನ್ ದಿ ಹೇ. ನ್ಯೂಯಾರ್ಕ್ ಫಸ್ಟ್
 14. ಹ್ಯಾಪಿ ಮೀಲ್ಸ್ ಇನ್ ಕಿಟ್ಟಿ ಹಾಕ್: ಹೌವ್ ದಿ ರೈಟ್ ಬ್ರದರ್ಸ್ ಸ್ಪಾನಡ್ ಎ ಬರ್ಗರ್ ನೇಷನ್
 15. ಅಮೆರಿಕನ್ ಡಯಾಲೆಕ್ಟ್ ಸೊಸೈಟಿ CABINET, CONCRETE, FROSTED, VELVET ಹೂಡ್ಸ್ ಐಸ್ ಕ್ರೀಮ್ ಜಾಹೀರಾತಿನ ಪೋಸ್ಟರ್‌ನಲ್ಲಿ ವಿವರಣೆಯಿಂದ ಕೂಡಿದ ಪಠ್ಯ (ಹ್ಯಾನಕ್ ಫಾರ್ಮಸಿ, ಸ್ಟೇಟ್ ಎಂಡ್ ಹ್ಯಾನಕ್ ಸ್ಟೇಟ್ಸ್, ಸ್ಪ್ರಿಂಗ್‌ಫೀಲ್ಡ್, ಮಾಸ್‌ನಲ್ಲಿ ವೀಕ್ಷಿಸಲಾಗಿದೆ. ೧೯೫೨ರ ಸೆಪ್ಟೆಂಬರ್ ೩೦)
 16. "ಶೇಕಿಂಗ್ ಅಪ್ ದಿ ಫ್ಯೂಚರ್" ಕೃಷಿ ಸಂಶೋಧನೆ ನಿಯತಕಾಲಿಕದ ೨೦೦೦ದ ಮೇ ಸಂಚಿಕೆಯಲ್ಲಿ ಪ್ರಕಟವಾಗಿದೆ.http://archive.is/20121214092357/http://www.ars.usda.gov/is/AR/archive/may00/shake0500.htm
 17. ದಿ ಸ್ಪಾ ಟ್ರೀಟ್‌ಮೆಂಟ್-—ಪ್ಲಸ್ ಫಿಲ್ಲಿಂಗ್ಸ್ ಮಹಿಳಾ ಅಂಗಮರ್ದಕಿಯರು ಮತ್ತು ಲ್ಯಾವಿಂಡರ್ ಸುವಾಸನೆಯ ನಡುವೆ ಸ್ಪಾ ದಂತವೈದ್ಯಚಿಕಿತ್ಸಾಲಯದಲ್ಲಿ ಅನುಭವವು ನೀವು ದಂತವೈದ್ಯನನ್ನು ಮೊದಲಿಗೆ ದ್ವೇಷಿಸುವುದು ಏಕೆಂದು ಆಶ್ಚರ್ಯಪಡುವಂತೆ ಮಾಡುತ್ತದೆ.
  ಕೇಟಿ ಗಿಲ್ಬರ್ಟ್ ಅವರಿಂದ
  https://web.archive.org/web/20070914180843/http://psychologytoday.com/articles/pto-20060609-000001.html
 18. http://archive.is/20121209182254/http://webcache.googleusercontent.com/search?q=cache:Q-mazsEOqFYJ:economistsview.typepad.com/economistsview/2005/12/the_decline_of_.html+milkshake+1970s&hl=en&ct=clnk&cd=91
 19. ಶೇಕ್ ಇಟ್ ಅಪ್, ಬೇಬಿ! Archived 2011-05-11 ವೇಬ್ಯಾಕ್ ಮೆಷಿನ್ ನಲ್ಲಿ.ಬೈ ಆಮಿ ಸ್ಕಾಟರ್‌ಗುಡ್, ಸ್ಪೆಷಲ್ ಟು ದಿ ಟೈಮ್ಸ್ Archived 2011-05-11 ವೇಬ್ಯಾಕ್ ಮೆಷಿನ್ ನಲ್ಲಿ. ಜೂನ್ ೧೪, ೨೦೦೬
 20. ಕ್ರಿಯೇಟಿಂಗ್ ಎ ಕಿಲ್ಲರ್ ಪ್ರಾಡಕ್ಟ್ ಕ್ಲೇಟನ್ M. ಕ್ರಿಸ್ಟನ್‌ಸನ್ ಮೈಕೇಲ್ E. ರೇಯ್ನರ್, ೧೦.೧೩.೦೩ http://www.forbes.com/forbes/2003/1013/082_print.html Archived 2011-04-20 ವೇಬ್ಯಾಕ್ ಮೆಷಿನ್ ನಲ್ಲಿ.
 21. "LA Weekly — Film+TV — Paul Thomas Anderson: Blood, Sweat and Tears — Scott Foundas — The Essential Online Resource for Los Angeles". LA Weekly. Archived from the original on 2008-01-23. Retrieved 2009-07-07.
 22. Bowles, Scott (February 3, 2008). "'Blood' fans drink up milkshake catchphrase". USA Today. Retrieved 2008-02-24.
 23. Mudhar, Raju (February 23, 2008). "It's bottoms up to our Oscars drinking game". The Toronto Star. Retrieved 2008-02-24.

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]