ವಿಷಯಕ್ಕೆ ಹೋಗು

ಮಿರ್ಜಾ ಮುಳ್ಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Alternanthera pungens
Scientific classification e
ಸಾಮ್ರಾಜ್ಯ: Plantae
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: Eudicots
ಗಣ: ಕ್ಯಾರ್ಯೋಫಿಲಾಲೀಸ್
ಕುಟುಂಬ: ಅಮರ್‍ಯಾಂತೇಸೀ
ಕುಲ: ಆಲ್ಟರ್‌ನ್ಯಾಂತೆರಾ
ಪ್ರಜಾತಿ:
A. pungens
Binomial name
Alternanthera pungens
Synonyms

Alternanthera achyrantha R.Br. ex Sweet

ಮಿರ್ಜಾ ಮುಳ್ಳು ಅಮರ‍್ಯಾಂತೇಸೀ ಕುಟುಂಬಕ್ಕೆ ಸೇರಿದ ಕಳೆಗಿಡ (ಖಾಕಿವೀಡ್).[][] ಮುಳ್ಳು ಹೊನಗೊನ್ನೆ ಸೊಪ್ಪು ಪರ್ಯಾಯನಾಮ. ಆಲ್ಟರ್‌ನ್ಯಾಂತೆರ ಪಂಜೆನ್ಸ್ ಇದರ ಸಸ್ಯ ವೈಜ್ಞಾನಿಕ ಹೆಸರು. ಇದು ಭಾರತದ ಸ್ಥಾನಿಕ ಸಸ್ಯವಲ್ಲ. ಉಷ್ಣವಲಯ ಅಮೆರಿಕ ಇದರ ತವರು ಎನ್ನಲಾಗಿದ್ದು ಈ ಶತಮಾನದ ಆದಿಯಲ್ಲಿ ಭಾರತಕ್ಕೆ ಬಂದಿರಬೇಕು ಎಂದು ಬರೆಯಲಾಗಿದೆ. ಪಾಳು ನೆಲಗಳಲ್ಲಿ, ಆಟದ ಮೈದಾನಗಳಲ್ಲಿ, ರಸ್ತೆ ಅಂಚುಗಳಲ್ಲಿ, ಮನೆಹಿತ್ತಲುಗಳಲ್ಲಿ ಕಳೆಗಿಡವಾಗಿ ಬೆಳೆಯುತ್ತದೆ.

ಬೆಳವಣಿಗೆ

[ಬದಲಾಯಿಸಿ]

ಇದೊಂದು ದ್ವೈವಾರ್ಷಿಕ ಸಸ್ಯ. ನೆಲದ ಮೇಲೆ ಹಬ್ಬಿಕೊಂಡು ಬೆಳೆಯುತ್ತದೆ. ರೆಂಬೆಗಳು ಸುಮಾರು 0.70ಮೀ ಉದ್ದ ಇರುವುವು. ಗೆಣ್ಣುಗಳ ಬಳಿ ಬೇರೊಡೆಯುತ್ತ ಬಲುಬೇಗ ವಿಸ್ತರಿಸಿ ಬೆಳೆಯುವ ಈ ಗಿಡಕ್ಕೆ ಎಂಥ ಮಣ್ಣಾದರೂ ಸರಿಯೆ. ನೀರಿನ ಬರ ಇದ್ದರೂ ಅಥವಾ ನೀರು ಹೆಚ್ಚಾದರೂ ಇದರ ಬೆಳೆವಣಿಗೆ ಕುಂಠಿತವಾಗದು. ಬೇರು ಸಮೂಹ ಹೆಚ್ಚು ಆಳಕ್ಕೆ ಇಳಿಯುವುದಿಲ್ಲ.

ಸಸ್ಯ ವಿವರಣೆ

[ಬದಲಾಯಿಸಿ]

ಕಾಂಡ ಉರುಳೆಯಂತಿದೆ. ಅದರ ಮೇಲೆ ಮೃದು ರೋಮಗಳುಂಟು. ಎಲೆಗಳು ಸರಳ ರೀತಿಯವು. ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿದೆ. ಅನನುಪರ್ಣಿ ಮಾದರಿಯವು. ಹೂಗಳು ಚಿಕ್ಕಗಾತ್ರದವು; ಎಲೆಗಳ ಕಕ್ಷಗಳಲ್ಲಿ ಸ್ಥಿರವಾಗಿರುವ ಅಸೀಮಾಕ್ಷಿ ರೀತಿಯ ಸ್ಪೈಕ್ ಹೂಗೊಂಚಲುಗಳಲ್ಲಿ ಅರಳುವುವು. ಪ್ರತಿಯೊಂದು ಹೂವಿನಲ್ಲಿ 5 ಪೇರಿಯಾಂತ್ ಹಾಲೆಗಳೂ 5 ಪುಂಕೇಸರಗಳೂ ಒಂಟಿ ಕಾರ್ಪೆಲಿನ ಅಂಡಾಶಯವೂ ಇದೆ. ಪ್ರತಿಯೊಂದು ಪೆರಿಯಾಂತ್ ಹಾಲೆಯ ತುದಿಯಲ್ಲೂ ಚೂಪಾದ ಮುಳ್ಳಿದೆ. ಕಾಯಿ ರೂಪುಗೊಂಡಾಗಲೂ ಈ ಹಾಲೆಗಳು ಉಳಿದಿದ್ದು ಫಲ ಪ್ರಸಾರಕ್ಕೆ ನೆರವಾಗುತ್ತದೆ. ಚಪ್ಪಟೆ ಅಟ್ಟೆಗಳಿಗೆ ಗಾಡಿಗಳ ರಬ್ಬರ್ ಚಕ್ರಗಳಿಗೆ ಅಂಟಿಕೊಂಡು ಬೀಜ ದೂರದೂರ ಪ್ರಸರಿಸಲು ಸಹಾಯಕವಾಗಿದೆ.

ಕಳೆ ನಿರ್ಮೂಲನೆ

[ಬದಲಾಯಿಸಿ]

ಕಳೆಗಿಡವಾಗಿ ಬೆಳೆಯುವ ಮಿರ್ಜಾಮುಳ್ಳನ್ನು ತಡೆಗಟ್ಟುವ ಉಪಾಯವೆಂದರೆ ಗಿಡಗಳನ್ನು ಸಮೂಲವಾಗಿ ಕಿತ್ತೆಸೆದು, ಬೀಜಗಳು ಪಸರಿಸದಂತೆ ನೋಡಿಕೊಳ್ಳುವುದು.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: