ಮಾರ್ಜನ

ವಿಕಿಪೀಡಿಯ ಇಂದ
Jump to navigation Jump to search
ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳುತಿರುವ ಮಹಿಳೆ

ಮಾರ್ಜನವು (ಕ್ಷಾಳನ) ಸಾಮಾನ್ಯವಾಗಿ ನೀರಿನಿಂದ ಮತ್ತು ಹಲವುವೇಳೆ ಯಾವುದೋ ಬಗೆಯ ಸಾಬೂನು ಅಥವಾ ಮಾರ್ಜಕದಿಂದ ಸ್ವಚ್ಛಗೊಳಿಸುವ ವಿಧಾನ. ಶರೀರ ಮತ್ತು ಬಟ್ಟೆಗಳು ಎರಡನ್ನೂ ತೊಳೆಯುವುದು (ಮತ್ತು ನಂತರ ಜಾಲಾಡುವುದು) ಉತ್ತಮ ಆರೋಗ್ಯ ಮತ್ತು ನೈರ್ಮಲ್ಯದ ಅತ್ಯಗತ್ಯ ಭಾಗವಾಗಿದೆ.

ಹೆಚ್ಚು ಮಾಮೂಲಾದದ್ದೆಂದರೆ ಕೇವಲ ಕೈಗಳನ್ನು ತೊಳೆದುಕೊಳ್ಳುವುದು, ಉದಾ. ಅಡುಗೆ ಮಾಡುವ ಮತ್ತು ತಿನ್ನುವ ಮೊದಲು ಹಾಗೂ ನಂತರ, ಶೌಚಾಲಯವನ್ನು ಬಳಸಿದ ನಂತರ, ಏನಾದರೂ ಕೊಳೆಯಾಗಿದ್ದನ್ನು ಮುಟ್ಟಿದ ನಂತರ, ಇತ್ಯಾದಿ. ರೋಗಾಣುಗಳು ಹರಡುವುದನ್ನು ಕಡಿಮೆಮಾಡಲು ಕೈಗಳನ್ನು ತೊಳೆದುಕೊಳ್ಳುವುದು ಮುಖ್ಯವಾಗಿದೆ.[೧][೨][೩] ಮುಖವನ್ನು ತೊಳೆದುಕೊಳ್ಳುವುದು ಕೂಡ ಸಾಮಾನ್ಯವಾಗಿದೆ. ಇದನ್ನು ಎದ್ದ ನಂತರ ಮಾಡಲಾಗುತ್ತದೆ, ಅಥವಾ ದಿನದ ಅವಧಿಯಲ್ಲಿ ತಮ್ಮನ್ನು ತಂಪಾಗಿರಿಸಿಕೊಳ್ಳಲು ಮಾಡಲಾಗುತ್ತದೆ. ಹಲ್ಲುಗಳನ್ನು ಉಜ್ಜಿಕೊಳ್ಳುವುದು ಸ್ವಚ್ಛತೆಗೆ ಅತ್ಯಗತ್ಯವಾಗಿದೆ ಮತ್ತು ಮಾರ್ಜನದ ಭಾಗವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಮಾರ್ಜನ&oldid=915266" ಇಂದ ಪಡೆಯಲ್ಪಟ್ಟಿದೆ