ವಿಷಯಕ್ಕೆ ಹೋಗು

ಮಾರಿಲೆಬೊನ್‌ ಕ್ರಿಕೆಟ್ ಕ್ಲಬ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Marylebone Cricket Club
ಸ್ಥಾಪನೆ: 1787
Club house occupied since 1814
ತವರು ಮೈದಾನ: Lord's Cricket Ground
ಅಧಿಕೃತ ಜಾಲತಾಣ: lords.org/mcc

ಮಾರಿಲೆಬೊನ್‌ ಕ್ರಿಕೆಟ್ ಕ್ಲಬ್ (ಎಂಸಿಸಿ), ಇದು ೧೭೮೭ ರಲ್ಲಿ ಲಂಡನ್‌ನಲ್ಲಿ ಸ್ಥಾಪನೆಯಾದ ಒಂದು ಕ್ರಿಕೆಟ್ ಸಂಸ್ಥೆಯಾಗಿದೆ. ಇದೊಂದು ಕ್ರಿಕೆಟ್ ಆಟದ ಬೆಳವಣಿಗೆಗಾಗಿ ಖಾಸಗಿ ವ್ಯಕ್ತಿಗಳಿಂದ ರಚಿಸಿಕೊಂಡ ಸಂಸ್ಥೆಯೆಂಬುದನ್ನು ಈ ಸಂಸ್ಥೆಯ ಪ್ರಖ್ಯಾತಿ ಮತ್ತು ಸುದೀರ್ಘ ಇತಿಹಾಸ ಸಾಕ್ಷೀಕರಿಸುತ್ತದೆ. ಈ ಸಂಘವು ಲಂಡನ್‌ NW೮ನ ಸೇಂಟ್ ಜೋನ್ಸ್‌ ವುಡ್‌ನಲ್ಲಿಯ ಲಾರ್ಡ್ಸ್‌ ಕ್ರಿಕೆಟ್ ಮೈದಾನದಲ್ಲಿ ತನ್ನ ನೆಲೆಯನ್ನು ಹೊಂದಿದ್ದು, ಅದರ ಒಡೆತನ ಕೂಡಾ ಹೊಂದಿರುತ್ತದೆ. ಮಾರಿಲೆಬೊನ್‌ ಕ್ರಿಕೆಟ್ ಕ್ಲಬ್(ಎಂಸಿಸಿ) ಇದು ಇಂಗ್ಲೆಂಡ್, ವೇಲ್ಸ್‌ ಮತ್ತು ವಿಶ್ವದಾದ್ಯಂತ ಕ್ರಿಕೆಟ್ ಮಂಡಳಿಯನ್ನು ಹೊಂದಿರುತ್ತದೆ. ೧೯೯೩ ರಲ್ಲಿ ಇದರ ಹಲವಾರು ಜಾಗತೀಕ ಚಟುವಟಿಕೆಗಳು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ)ಗೆ ವರ್ಗಾವಣೆಗೊಂಡವು ಮತ್ತು ಇದರ ಇಂಗ್ಲಿಷ್ ಆಡಳಿತವು ಟೆಸ್ಟ್ ಮತ್ತು ಕೌಂಟಿ ಕ್ರಿಕೆಟ್ ಬೋರ್ಡ್(TCCB) ಗೆ ಇದೇ ಸಮಯದಲ್ಲಿ ವರ್ಗಾವಣೆಯಾಗಿ, ಎಂಸಿಸಿಯನ್ನು ನಿಯಮಗಳ ನಿಯಂತ್ರಕನಾಗಿ ಮತ್ತು ಕ್ರಿಕೆಟ್ ಕ್ರೀಡಾ ಮನೋಭಾವನ್ನು ಬೆಳೆಸಲು ನಿಯಮಿಸಲಾಯಿತು.

ಎಮ್‌ಸಿಸಿ ಯು ೧೭೮೮[೧] ರಲ್ಲಿ ಕ್ರಿಕೆಟ್‌ನ ನಿಯಮಾವಳಿಗಳನ್ನು ಪುನರ್‌ರಚಿಸಿತು ಮತ್ತು ಅವುಗಳನ್ನು ಕಾಲಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುವ ಹಕ್ಕನ್ನು ಹೊಂದಿತು, ಮತ್ತು ಆ ನಿಯಮಾವಳಿಯ ಸ್ವಾಮಿತ್ವವನ್ನು ತನ್ನಲ್ಲೇ ಉಳಿಸಿಕೊಂಡಿತು.[೨] ಈ ಸಂಸ್ಥೆಯು ತನ್ನ ಸ್ವಂತ ತಂಡವನ್ನು ರಚಿಸುತ್ತದೆ ಮತ್ತು ಈ ತಂಡವು ಉಳಿದ ವಿರುದ್ಧ ತಂಡಗಳಿಗೆ ಹೋಲಿಸಿದರೆ ಅನೇಕ ಬಾರಿ ಮೊದಲನೇ-ದರ್ಜೆಯಲ್ಲಿ ಸ್ಥಾನ ಪಡೆದಿವೆ. ಉದಾಹರಣೆಗೆ: ಪ್ರತಿಯೊಂದು ಇಂಗ್ಲಿಷ್ ವರ್ಷದ ಆರಂಭದಲ್ಲಿ (ಎಪ್ರಿಲ್) ಎಂಸಿಸಿ ಯು ಲಾರ್ಡ್ಸ್‌ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಕೌಂಟಿ ಚಾಂಪಿಯನ್ ತಂಡಗಳೊಂದಿಗೆ ಆಟವಾಡಿತು. ಎಂಸಿಸಿ ಯು ನಿಯಮಿತವಾಗಿ ಕ್ರೀಡಾ ಪ್ರವಾಸವನ್ನು ಸಾಗರದಾಚೆಗಿನ ದೇಶಗಳಿಗೂ ಆಯೋಜಿಸಿತು. ಉ.ದಾ- ೨೦೦೬ ರಲ್ಲಿ ಅಫಘಾನಿಸ್ಥಾನ ಪ್ರವಾಸ. ಮತ್ತು ಈ ಕ್ಲಬ್ ಪ್ರತಿ ಹಂಗಾಮಿನಲ್ಲಿ ಬ್ರಿಟನ್‌ದಾದ್ಯಂತ ಅದರಲ್ಲೂ ಮುಖ್ಯವಾಗಿ ಶಾಲೆಗಳಿಗೆ ಈ ಪಂದ್ಯಗಳನ್ನು ಆಯೋಜಿಸಿತು.

ಕ್ಲಬ್‌ನ ಇತಿಹಾಸ ಮತ್ತು ಪಾತ್ರ[ಬದಲಾಯಿಸಿ]

ಡಾರ್ಸೆಟ್ ಸ್ಕ್ವಯರ್‌ನಲ್ಲಿನ ಒಂದು ಫಲಕವು ಮೂಲ ಲಾರ್ಡ್ಸ್ ಮೈದಾನ ಇದೆಂದು ಸೂಚಿಸುತ್ತದೆ ಮತ್ತು ಎಂಸಿಸಿಯ ಹುಟ್ಟನ್ನು ಆಚರಿಸುತ್ತದೆ.

ಎಮ್‌ಸಿಸಿ ಯು ಸರಿಸುಮಾರು ೧೭೮೭[೩] ರಲ್ಲಿ ಸ್ಥಾಪನೆಯಾಯಿತೆಂದು ನಂಬಲಾಗಿದೆ. ಥಾಮಸ್‌ ಲಾರ್ಡ್ ಅವರು ಕ್ರೀಡಾಂಗಣವನ್ನು ಉದ್ಘಾಟಿಸಿದ ನಂತರ ಅದನ್ನು ಖರೀದಿಸಿದರು. ಈಗ ಅದು ಡೋರ್‌ಸೆಟ್ ಸ್ಕೇರ್‍ ಅವರ ಒಡೆತನದಲ್ಲಿದೆ. ಇದೇ ಎಮ್‌ಸಿಸಿ ಯ ಮೂಲ ಹುಟ್ಟುಸ್ಥಾನವಾಗಿದೆ. ಆದರೆ ೧೭೮೭ ರಲ್ಲಿದ್ದ ಎಮ್‌ಸಿಸಿ ಯು ಪುನರ್‌ಸ್ಥಾಪನೆಯಾದ ಮತ್ತು ಹಿಂದಿನ ಹಳೆಯ ಕ್ಲಬ್ ಆಗಿದೆಯೆಂದೂ ಹಾಗೂ ಅದು ೧೮ ನೇ ಶತಮಾನದ ಪೂರ್ವದಲ್ಲಿ ಅಥವಾ ಅದಕ್ಕಿಂತಲೂ ಮೊದಲೇ ಇತ್ತೆಂದು ಊಹಿಸಲಾಗಿದೆ.[೪] ಪ್ರಾಚೀನ ಕ್ಲಬ್ಬನ್ನು "ನೋಬಲ್‌ಮನ್ಸ್ ಮತ್ತು ಜಂಟ್ಲಮನ್ಸ್ ಕ್ಲಬ್" ಅಥವಾ "ಕ್ರಿಕೆಟ್ ಕ್ಲಬ್" ಎಂಬ ಹೆಸರಿನಿಂದ ಕರೆಯಲಾಗಿದೆ ಮತ್ತು ಇವುಗಳು ಪಾಲ್ ಮಾಲ್‌ನಲ್ಲಿನ ಸ್ಟಾರ್‍ ಮತ್ತು ಗಾರ್ಟರ್‌ ಗಳನ್ನು ದೀರ್ಘಕಾಲದವರೆಗೆ ಅವಲಂಭಿಸಿತ್ತು. ಇದು ಆರಂಭದಲ್ಲಿ ಸಾಮಾಜಿಕ ಹಾಗೂ ಜೂಜಿನ ಕ್ಲಬ್ ಆಗಿತ್ತು. ಆದರೆ, ಮೂಲ ಲಂಡನ್ ಕ್ರಿಕೆಟ್ ಕ್ಲಬ್, ಜಾಕೀ ಕ್ಲಬ್, ಹ್ಯಾಂಬಲ್ಡನ್ ಕ್ಲಬ್, ವೈಟ್ ಕಾಂಡುಯಿಟ್‌ ಕ್ಲಬ್ ನಂತಹ ಹಲವಾರು ಪ್ರಶಸ್ತಿ ಪ್ರಧಾನ ಕ್ರೀಡಾ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿತ್ತು.

ಯಾವಾಗ ೧೭೮೦ ರಲ್ಲಿ ಸದಸ್ಯರುಗಳು ಕ್ರಿಕೆಟ್ ಸಲುವಾಗಿ ವೈಟ್ ಕೋಂಡ್ಯೂಟ್ ಕ್ಲಬ್ ರಚಿಸಿದರೋ ನಂತರ ಅವರು ಐಲಿಂಗ್ಟನ್‌ನ ವೈಟ್ ಕೋಂಡ್ಯೂಟ್ ಮೈದಾನದಲ್ಲಿ ಆಡಿದರು. ಆದರೆ ಕೆಲ ದಿನಗಳಲ್ಲೇ ಸುತ್ತಲಿನವರಿಂದ ಅತೃಪ್ತಿಗೊಂಡರು ಮತ್ತು ಕ್ರೀಡಾಂಗಣವು ಸಾರ್ವಜನಿಕರಿಗೆ ಅತಿಹೆಚ್ಚು ಮುಕ್ತವಾಗಿದೆಯೆಂದು ದೂರಿದರು. ಥಾಮಸ್ ಲಾರ್ಡ್ ಅವರು ವೈಟ್ ಕೋಂಡ್ಯೂಟ್ ನಲ್ಲಿ ವೃತ್ತಿಪರ ಬೌಲರ್ ಆಗಿದ್ದರು ಮತ್ತು ಸದಸ್ಯರುಗಳಿಂದ, ಲಂಡನ್‌ನಿಂದ ಸನಿಹಲ್ಲಿರುವ ಈ ಖಾಸಗಿ ಸ್ವತ್ತನ್ನು ರಕ್ಷಿಸಲು ಆರ್ಥಿಕ ನಷ್ಟ ಉಂಟಾದರೆ ಯಾರು ಹೊಣೆಗಾರರೆಂದು ಪ್ರಶ್ನಿಸಲ್ಪಟ್ಟರು. ಯಾವಾಗ ಲಾರ್ಡ್ ಅವರು ತಮ್ಮ ಹೊಸ ಮೈದಾನವನ್ನು ಪ್ರಾರಂಭಿಸಿದರೋ ಆಗ ಜಂಟ್ಲಮನ್ಸ್ ಕ್ಲಬ್ ಇವರೊಂದಿಗೆ ಜೊತೆಗೂಡಿ, ಆರಂಭದಲ್ಲಿ "ದ ಮಾರಿಲೆಬೊನ್‌ ಕ್ಲಬ್" ಎಂದು ನಾಮಕರಿಸಿಕೊಂಡರು.

ಇಪ್ಪತ್ತನೇ ಶತಮಾನದ ಆರಂಭದಲ್ಲಿ ಎಮ್‌ಸಿಸಿ ಯು ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ರಚಿಸಿತು ಮತ್ತು ಈ ಪ್ರವಾಸಿ ಇಂಗ್ಲೆಂಡ್ ತಂಡವು ಟೆಸ್ಟ್ ಪಂದ್ಯದ ಹೊರತಾಗಿ ಉಳಿದೆಡೆ ೧೯೭೬/೭೭ ರ ಆಸ್ಟ್ರೇಲಿಯಾ ಪ್ರವಾಸವನ್ನು ಒಳಗೊಂಡು ಅಧಿಕೃತವಾಗಿ "ಎಮ್‌ಸಿಸಿ" ಎಂಬ ಹೆಸರಿನಿಂದಲೇ ಆಡಿತು. ಕೊನೆಯ ಅವಧಿಯಲ್ಲಿ ಇಂಗ್ಲೆಂಡ್ ಪ್ರವಾಸಿ ತಂಡವು ಮಾರಿಲೆಬೊನ್‌ ಕ್ರಿಕೆಟ್ ಕ್ಲಬ್‌ನ ಕೆಂಪು ಮತ್ತು ಹಳದಿ ಬಣ್ಣದ ಸಮವಸ್ತ್ರವನ್ನು ಧರಿಸಿತ್ತು. ಈ ಬಣ್ಣದ ಸಮವಸ್ತ್ರವನ್ನು ೧೯೯೬/೯೭ ರಲ್ಲಿನ ನ್ಯೂಝಿಲ್ಯಾಂಡ್ ಪ್ರವಾಸದಲ್ಲಿ ಬಳಸಿದ್ದರು.

ಎಮ್‌ಸಿಸಿ ಯು ಈಗಿನ ಸಮವಸ್ತ್ರದ ಬಣ್ಣವು ತಿಳಿದಿರುವುದಿಲ್ಲ. ಬಹುಶಃ ಮೊದಲಿನದೇ ಆಗಿರಬಹುದು. ಆದರೆ ಇದರ ಆಟಗಾರರು ೧೯ ನೇ ಶತಮಾನದಲ್ಲಿ ಆಗಾಗ ಆಕಾಶ ನೀಲಿ ಬಣ್ಣದ ಬಟ್ಟೆಗೆ ಬದಲಾಯಿಸಿಕೊಂಡಿದ್ದು ಕಂಡುಬಂದಿದೆ.(ಘಟನಾತ್ಮಕವಾಗಿ ಈಟನ್ ಕಾಲೇಜ್ ಮತ್ತು ಕ್ಯಾಂಬ್ರಿಡ್ಜ್ ಯುನಿವರ್ಸಿಟಿಗಳ ತಂಡದ ಸದಸ್ಯರು ಧರಿಸಿದ್ದರೆಂದು ಹೇಳಬಹುದು). ಕ್ಲಬ್ಬು ಪ್ರಸ್ತುತ ಚೆನ್ನಾಗಿ ಗುರುತಿಸಬಹುದಾದ ಕೆಂಪು ಮತ್ತು ಹಳದಿ (ಅಂದರೆ ಹಂದಿ ಮಾಂಸದ ಕೆಂಪು ಮತ್ತು ಮೊಟ್ಟೆಯೊಳಗಿನ ಹಳದಿ) ಬಣ್ಣದ ಬಟ್ಟೆಯನ್ನು ಅಳವಡಿಸಿಕೊಂಡಿದೆ. ಒಂದು ಸಿದ್ದಾಂತದ ಪ್ರಕಾರ ಎಮ್‌ಸಿಸಿ ಯು ಈ ಬಣ್ಣಗಳನ್ನು, ಜೆ&ಡಬ್ಲು ನಿಕೋಲ್ಸನ್ & ಕಂಪನಿಯ ಜಿನ್ ನಿಂದ ಸೂಚಿಸಲ್ಪಟ್ಟಿದೆಯೆಂದು ಅಂದಾಜಿಸಲಾಗಿದೆ. ಈ ಕಂಪನಿಯ ಅಧ್ಯಕ್ಷರಾಗಿದ್ದ ವ್ಹಿಲಿಯಮ್ ನಿಕೋಲ್ಸನ್ ಅವರು ಎಮ್‌ಸಿಸಿ ಯ ಪೋಷಕ ಸದಸ್ಯರಾಗಿದ್ದರು ಮತ್ತು ಲಾರ್ಡ್ಸ್‌ನಲ್ಲಿ ಹಣಕಾಸಿನ ಸಾಲ ಒದಗಿಸಿ ಕ್ಲಬ್‌ನ ಸ್ಥಿತಿಗತಿಗಳನ್ನು ಭಧ್ರಪಡಿಸಿದ್ದರು.[೫] ಇನ್ನೊಂದು ಸಿದ್ದಾಂತದ ಪ್ರಕಾರ, ಕ್ಲಬ್‌ನ ಜನ್ಮದ ಬಗ್ಗೆ ಯಾವ ಮಾತುಗಳು ಕೇಳಿ ಬರುತ್ತಿದ್ದವೊ ಅದೇ ರೀತಿ ಕ್ಲಬ್ಬು ತನ್ನ ಬಣ್ಣವನ್ನು ಗುಡ್‌ವುಡ್ ಪ್ರಖ್ಯಾತಿಯ ಪ್ರವರ್ತಕ ರಿಚ್‌ಮಂಡ್ ಪ್ರಾಂತದ ದೊರೆ ಎರಡನೇ ಚಾರ್ಲ್ಸ್ ಅವರಿಂದ ವಿಶೇಷ ಬಣ್ಣಗಳನ್ನು ಆರಿಸಿಕೊಂಡಿತೆಂದು ಊಹಿಸಲಾಗಿದೆ.

ಕ್ರಿಕೆಟ್‌ನ ನಿಯಮಾವಳಿಗಳು[ಬದಲಾಯಿಸಿ]

ಎಮ್‌ಸಿಸಿ ಯು ಕ್ರಿಕೆಟ್ ಕಾನೂನುಗಳ ನಿರ್ಮಾತೃ ಹಾಗೂ ಹಕ್ಕುಸ್ವಾಮ್ಯ ಹೊಂದಿದ್ದರೂ, ಈ ಸ್ಥಾನಮಾನವು ಕ್ರಮೇಣ ಐಸಿಸಿ ಯು ವಿಶ್ವದಾದ್ಯಂತ ಕ್ರಿಕೆಟ್ ಆಟದ ಎಲ್ಲಾ ಸಂಗತಿಗಳ ಮೇಲೆ ನಿಯಂತ್ರಣ ಸಾಧಿಸಿದ್ದರಿಂದ ಕುಂದತೊಡಗಿತು. ಇತ್ತಿಚಿನ ದಿನಗಳಲ್ಲಿ ಐಸಿಸಿ ಯು ಪಂದ್ಯ ನಿಯಮಾವಳಿಗಳನ್ನು ಎಮ್‌ಸಿಸಿ ಯ ಯಾವುದೇ ಹೆಚ್ಚಿನ ಸಲಹೆ ಕೇಳದೇ ಪರಾಮರ್ಶಿಸುತ್ತಿದೆ.(ಉದಾ-ಒಂದು ದಿನದ ಅಂತರಾಷ್ಟ್ರೀಯ ಪಂದ್ಯ). ಲಾರ್ಡ್ಸ್‌ನಿಂದ ದುಬೈಗೆ ಸ್ಥಳಾಂತರ ಹೊಂದಿದರೂ, ಐಸಿಸಿ ಯು, ಯುಕೆ ಸರ್ಕಾರ ತೆರಿಗೆ ವಿನಾಯಿತಿಯನ್ನು ಹಿಂಪಡೆದರೂ ಕೂಡಾ ಈ ಹಿಂದಿನ ಹಾಗೂ ಇನ್ನು ಮುಂದೆ ಎಮ್‌ಸಿಸಿ ಯೊಂದಿಗೆ ಸಂಪರ್ಕ ರದ್ದುಪಡಿಸುವ ಸೂಚನೆ ನೀಡಿತು. ಕ್ರಿಕೆಟ್ ನಿಯಮಾವಳಿಗಳಿಗೆ ಈಗಲೂ ಎಮ್‌ಸಿಸಿ ಯು ತಿದ್ದುಪಡಿ ಮಾಡಬಹುದಾಗಿದೆ. ಆದರೆ ಐಸಿಸಿ ಯ ಸಲಹೆ ಪಡೆದ ನಂತರವಷ್ಟೇ ಇದನ್ನು ಮಾಡುತ್ತದೆ. ಅದೇನೇ ಇದ್ದರೂ ಈಗಲೂ ಕ್ರಿಕೆಟ್ ಕಾನೂನಿಗೆ ಯಾವುದೇ ತಿದ್ದುಪಡಿ ಮಾಡಬೇಕಾದರೆ ಎಮ್‌ಸಿಸಿ ಯ ಎಲ್ಲಾ ಸದಸ್ಯರ ಮೂರನೇ ಎರಡು ಬಹುಮತದ ಅವಶ್ಯಕತೆಯಿರುತ್ತದೆ.

ಅನೇಕ ವರ್ಷಗಳ ಅವಧಿಯಲ್ಲಿ ಎಂಸಿಸಿ ತರಬೇತಿ ಪುಸ್ತಕಗಳು

ತರಬೇತಿ[ಬದಲಾಯಿಸಿ]

ಎಮ್‌ಸಿಸಿ ಯು ಯಾವಾಗಲೂ ಅತಿಹೆಚ್ಚಾಗಿ ಕ್ರಿಕೆಟ್ ಆಟದ ಕೋಚಿಂಗ್‌ನಲ್ಲಿ ನಿರತವಾಗಿರುತ್ತದೆ. ಇದರ ಈಗಿನ ಮುಖ್ಯ ಕೋಚ್ ಮಾರ್ಕ್ ಅಲೈನೇ ಅವರು ಶಾಲೆಗಳ ಒಳಾಂಗಣ ಕ್ರಿಕೆಟ್ ಓಟ ಮತ್ತು ಇಂಗ್ಲೆಂಡ್ ಹಾಗೂ ವಿಶ್ವದ ಇನ್ನಿತರ ದೇಶಗಳ ಕೋಚಿಂಗ್ ತಂಡಗಳ ನೇತೃತ್ವ ವಹಿಸಿದ್ದಾರೆ. ಎಮ್‌ಸಿಸಿ ಯು ತನ್ನ ಕೋಚಿಂಗ್ ಕೈಪಿಡಿಯಾದ "ಎಮ್‌ಸಿಸಿ ಕ್ರಿಕೆಟ್ ಕೋಚಿಂಗ್ ಪುಸ್ತಕ "ಕ್ಕೆ ಪ್ರಸಿದ್ದಿಯಾಗಿದೆ. ಈ ಪುಸ್ತಕವು ಆಗಾಗ ಕ್ರಿಕೆಟ್ ಕೋಚಿಂಗ್‌ನ ಬೈಬಲ್ ಎಂದೇ ಪರಿಗಣಿಸಲ್ಪಡುತ್ತದೆ.

ಸದಸ್ಯತ್ವ[ಬದಲಾಯಿಸಿ]

ವಿಶಿಷ್ಟ ಎಂಸಿಸಿ ಬಣ್ಣಗಳಲ್ಲಿ ಎಂಸಿಸಿ ಸದಸ್ಯ

ಎಂ.ಸಿ.ಸಿಯು ೧೮,೦೦೦ ಪೂರ್ಣ ಪ್ರಮಾಣದ ಸದಸ್ಯರನ್ನು ಮತ್ತು ೪,೦೦೦ ಪಾಲುದಾರ ಸದಸ್ಯರನ್ನು ಹೊಂದಿದೆ. ಪಾಲುದಾರ ಸದಸ್ಯರಾದವರು ಲಾರ್ಡ್ಸ್‌ ಮೈದಾನದಲ್ಲಿ ನಡೆಯುವ ಯಾವುದೇ ಕ್ರಿಕೇಟ್‌ ಪಂದ್ಯಗಳಲ್ಲಿ ಪೆವಿಲಿಯನ್‌ನಲ್ಲಿ ಕುಳಿತು ವೀಕ್ಷಿಸುವ ಮತ್ತು ಇತರ ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಸದಸ್ಯತ್ವವನ್ನು ಪಡೆಯಲು ಇಚ್ಛಿಸುವವರು (ಪ್ರತಿಯೊಂದು ಪೂರ್ಣ ಪ್ರಮಾಣದ ಸದಸ್ಯರು ವರ್ಷಕ್ಕೆ ಒಂದು ಮತವನ್ನು ಹೊಂದಿರುತ್ತಾರೆ) ಕನಿಷ್ಟಪಕ್ಷ ಮೂರು ಸದಸ್ಯರ ಸಹಿಯನ್ನು ಪಡೆದುಕೊಳ್ಳಬೇಕು.ಮತ್ತು ಎಂ.ಸಿ.ಸಿ.ಯ ಒಬ್ಬರಾದರೂ ಪ್ರಾಯೋಜಕರ(ಎಲ್ಲ ಎಂ.ಸಿ.ಸಿ.ಯ ಉಪ ಸಮಿತಿ, ಎಂ.ಸಿ.ಸಿ. ಸಮಿತಿ, ಎಂ.ಸಿ.ಸಿ.ಯ ಹೊರ ಆಟಗಳ ಮುಂದಾಳುಗಳು ಮತ್ತು ಈಗಿನ, ಹಳೆಯ ಮತ್ತು ಮುಂದೆ ಆಗಲಿರುವ(ನಿಯುಕ್ತಿಗೊಂಡ) ಅಧ್ಯಕ್ಷರುಗಳನ್ನು ಒಳಗೊಂಡಿರುತ್ತದೆ.) ಜಾಮಿನನ್ನು ಪಡೆದುಕೊಳ್ಳಬೇಕು. ಮಿತಿ ಮೀರಿದ ಬೇಡಿಕೆಯಿಂದಾಗಿ ಪ್ರತಿವರ್ಷವೂ ಸದಸ್ಯತ್ವ ಪಡೆಯಲು ಇಚ್ಛಿಸಿ ಬರುವ ಅರ್ಜಿಗಳು ಮಿತಿಮೀರುತ್ತಿವೆ (೨೦೦೫ರಲ್ಲಿ ಕೇವಲ ೪೦೦ಸ್ಥಳಾವಕಾಶಗಳಿದ್ದವು). ಇದರಿಂದಾಗಿ ಸಾಮಾನ್ಯ ಸದಸ್ಯತ್ವಕ್ಕಾಗಿಯೂ ಪಾಳಿಯಲ್ಲಿರುವುದು ಸಾಮಾನ್ಯವಾಗಿದೆ. ಕಾಯುವ ಕಾಲಾವಧಿಯು ಸುಮಾರು ೨೦ವರ್ಷಗಳು (೧೯೨೦ರ ದಶಕದಲ್ಲಿನ ೩೦ ವರ್ಷಗಳ ಕಾಯುವಿಕೆಯ ಕಾಲಾವಧಿಗೆ ಹೋಲಿಸಿದರೆ ಇದು ಕಡಿಮೆಯಾಗಿದೆ) ಆಗಿರುವ ಸಾದ್ಯತೆಗಳು ಇರುತ್ತವೆ. ಪೂರ್ಣಾವಧಿ ಸದಸ್ಯರಾಗುವ ಜನರನ್ನು ಕಡಿಮೆ ಮಾಡಲು ಇದೂ ಒಂದು ವಿಧಾನವಾಗಿದ್ದು, ಸದ್ಯಕ್ಕೆ ಇರುವ ಆಟಗಾರ ಸದಸ್ಯನಾಗಿ ಅರ್ಹನಾಗಬಹುದು ಅಥವಾ ಆಟದಿಂದ ಹೊರಗುಳಿದ ಸದಸ್ಯರಾಗಿರಬೇಕು (ಆದಾಗ್ಯೂ ಸಂಸ್ಥೆಯ ಪರವಾಗಿ ಆಟವಾಡುವುದರ ಬದಲಾಗಿ ಇವು ಸದಸ್ಯತ್ವದಲ್ಲಿ ಯಾವುದೇ ಪ್ರಾಮುಖ್ಯತೆಯನ್ನು ಗಳಿಸಿಕೊಡುವುದಿಲ್ಲ).

ಇದಕ್ಕೆ ಪ್ರತಿಯಾಗಿ, ಗೌರವಾರ್ಥವಾಗಿ ಕೆಲವರು ಆಜೀವ ಸದಸ್ಯತ್ವವನ್ನು ಹೊಂದಿದ್ದಾರೆ, ಆದಾಗ್ಯೂ ಇಂತಹ ಸದಸ್ಯತ್ವವನ್ನು ಬಹಳ ವಿರಳವಾಗಿ ನೀಡಲಾಗುತ್ತದೆ. ಈಗ ಗೌರವಪೂರ್ವಕವಾಗಿ ಸದಸ್ಯತ್ವವನ್ನು ಹೊಂದಿರುವವರಲ್ಲಿ ಡಿಕಿ ಬರ್ಡ್‌, ಸರ್‌ ಇಯಾನ್‌ ಬಾಥಮ್‌, ಅರವಿಂದ ಡಿ ಸಿಲ್ವಾ, ಎಂಡಿ ಪ್ಲವರ್‌, ಸುನಿಲ್‌ ಗವಾಸ್ಕರ್‌, ಆ‍ಯ್‌ಡಮ್‌ ಗಿಲ್‌ಕ್ರಿಸ್ಟ್‌, ಡೆವಿಡ್‌ ಗೊವರ್‌, ಇಂಜಮಾಮ್‌ ಉಲ್‌ ಹಕ್‌, ರಾಚೀಲ್‌ ಲೆಡಿ ಹಿಯೊ ಪ್ಲಿಂಟ್‌, ಗ್ಲೆನ್‌ ಮೆಕ್‌ಗ್ರಾಥ್‌, ಸರ್‌ ರಿಚರ್ಡ್‌ ಹ್ಯಾಡ್ಲಿ, ಸರ್‌ ಜಾನ್‌ ಮೇಜರ್‌, ಹೆನ್ರಿ ಒಲಂಗಾ, ಬ್ಯಾರಿ ರಿಚರ್ಡ್ಸ್‌, ಸರ್ ವಿವಿಯನ್ ರಿಚರ್ಡ್ಸ್, ಸರ್ ಗ್ಯಾರ್‌ಫೀಲ್ಡ್ ಸೋಬರ್ಸ್, ಹಸನ್ ತಿಲಕರತ್ನೆ, ಮೈಖೆಲ್ ವಾನ್, ಶೇನ್‌ ವಾರ್ನ್‌, ವಾಸಿಮ್‌ ಅಕ್ರಮ್‌, ಶಹಿದ್‌ ಆಫ್ರಿದಿ, ಸಲ್ಮಾನ್‌ ಭಟ್‌, ಮೊಹಮ್ಮದ್‌ ಆಮಿರ್‌, ಮೊಹಮ್ಮದ್‌ ಆಸಿಫ್‌, ಮತ್ತು ವಕಾರ್‌ ಯುನಿಸ್‌ ಸೇರಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ವಿವಾದಗಳು[ಬದಲಾಯಿಸಿ]

ಸಂಘದ ಸದಸ್ಯರು ಮಹಿಳೆಯರಾಗಬಾರದೆಂಬ ಕಾನೂನನ್ನು ೧೯೯೦ರ ದಶಕದಲ್ಲಿ ಕಾನೂನನ್ನು ಜಾರಿಗೊಳಿಸಲು ಅತ್ಯವಶ್ಯವಿರುವ ಮೂರರಲ್ಲಿ ಎರಡರಷ್ಟು ಪ್ರತಿಶತ ಮತದಾನದೊಂದಿಗೆ ಮಹಿಳಾ ಸದಸ್ಯರನ್ನು ಹೊಂದಿರಬಹುದೆಂದು ಮಾರ್ಪಡಿಸಲಾಯಿತು.[೬] ಬಹುತೇಕ ಸದಸ್ಯರು ಅಂದರೆ ಶೇ.೭೦% ಸದಸ್ಯರು ಮಹಿಳಾ ಸದಸ್ಯರನ್ನು ಹೊಂದಿರಬಹುದೆಂದು ಮತ ಚಲಾಯಿಸುವುದರೊಂದಿಗೆ ೨೧೨ ವರ್ಷಗಳ ಪುರುಷರಿಗಾಗಿ ಮಾತ್ರ ಜಾರಿಯಿದ್ದ ಸದಸ್ಯತ್ವದ ಅರ್ಹತೆಯಲ್ಲಿ ಮಾರ್ಪಾಡು ಮಾಡಲಾಯಿತು. ಅಲ್ಲಿಯವರೆಗೂ ಆಟದ ಸಂದರ್ಭದಲ್ಲಿ ಪೆವಿಲಿಯನ್‌ಗೆ ಆಗಮಿಸಲು ಪರವಾನಿಗೆ ಹೊಂದಿದವರಲ್ಲಿ ಮಹಾರಾಣಿ ಮಾತ್ರ ಸಂಘದ ಪೋಷಕಳಾಗಿದ್ದಳು (ಸ್ಥಳೀಯ ನೌಕರರ ಹೊರತಾಗಿ).[೭] ನಂತರ ಐದು ಜನ ಮಹಿಳೆಯರನ್ನು ಆಟಗಾರ ಸದಸ್ಯರಾಗಿ ಭಾಗವಹಿಸಲು ಆಹ್ವಾನಿಸಲಾಯಿತು.[೮]

ನಂತರ ೨೦೦೫ರಲ್ಲಿ ಪತ್ರಗಳ ಮೂಲಕ ನಿರ್ಣಯವೊಂದನ್ನು ಕೈಗೊಂಡು ಇಂಗ್ಲೆಂಡ್‌ ಮತ್ತು ವಾಲ್ಸ್‌ ಕ್ರಿಕೆಟ್‌ ಬೋರ್ಡ್ (ECB)ಯನ್ನು ನಿರ್ಲಕ್ಷಿಸಿ ಬ್ರಿಟಿಷ್‌ ಸ್ಕೈ ಬ್ರಾಡ್‌ಕಾಸ್ಟಿಂಗ್‌ಗೆ ಟೆಸ್ಟ್ ಕ್ರಿಕೆಟ್ ಆಟದ ವೀಕ್ಷಕ ವಿವರಣೆಯನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲು ಅನುಮತಿ ನೀಡಿದ ಸಲುವಾಗಿ ವಿವಾದವೊಂದು ಎದುರಾಯಿತು (ಸಂಸ್ಥೆಯ ಸ್ವಂತ ಸದಸ್ಯರಿಂದಲೂ ದೂಷಣೆಗೆ ಗುರಿಯಾಯಿತು).[೯] ಆ ಸಂದರ್ಭದಲ್ಲಿ ECBಯ ಮುಖ್ಯಕಾರ್ಯನಿರ್ವಾಹಕ ಮತ್ತು ಮುಖ್ಯಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರೋಜರ್‌ ನೈಟ್‌, ಈ ರೀತಿಯ ನಿರ್ಣಯಕ್ಕಾಗಿ ಮತ್ತು ಆದ ವಿವಾದಕ್ಕಾಗಿ ನಿಂದನೆಗೆ ಒಳಗಾದರು.

ಎಂ.ಸಿ.ಸಿ.ಯ ಇನ್ನೊಂದು ವಿವಾದವೆಂದರೆ ಸದಸ್ಯರು ಮತ್ತು ಇತರ ವೀಕ್ಷಕರು ಸ್ವಲ್ಪ ಪ್ರಮಾಣದ ಮಧ್ಯಸಾರವನ್ನು ಕ್ರಿಡಾಂಗಣದೊಳಕ್ಕೆ ಎಲ್ಲ ಆಟಗಳಲ್ಲೂ ತರಬಹುದು ಎಂಬ ನಿರ್ಣಯವಾಗಿತ್ತು. ಎಲ್ಲ ಅಂತರಾಷ್ಟ್ರೀಯ ಪಂದ್ಯಗಳಲ್ಲೂ ಮಧ್ಯಸಾರವನ್ನು ನಿಷೇಧಿಸಲು ಪ್ರಯತ್ನಿಸುತ್ತಿರುವ ಐಸಿಸಿ ಈ ನಿರ್ಣಯವನ್ನು ಖಂಡಿಸಿ ಪ್ರಶ್ನಿಸಿತು. ಎಂ.ಸಿ.ಸಿ.ಯು ನಂತರ ಲಾರ್ಡ್ಸ್‌ ಕ್ರಿಕೆಟ್ ಮೈದಾನದಲ್ಲಿ, ವಾರ್ಷಿಕ ಒಪ್ಪಂದದ ಮೇರೆಗೆ ಸದಸ್ಯರಿಗೆ ಮತ್ತು ಇತರ ಪ್ರೇಕ್ಷಕರಿಗೆ ಸ್ವಲ್ಪಪ್ರಮಾಣದ ಮಧ್ಯಸಾರವನ್ನು ತರಲು ಅನುಮತಿಯನ್ನು ಕೋರಿ ಬರೆಯಿತು. ಆದರೆ ಸದಸ್ಯರು ಮತ್ತು ಇತರ ವೀಕ್ಷಕರು ಸ್ವಲ್ಪ ಪ್ರಮಾಣದ ಮಧ್ಯಸಾರವನ್ನು ಕ್ರಿಡಾಂಗಣದೊಳಕ್ಕೆ ಎಲ್ಲ ಆಟಗಳಲ್ಲೂ ತರಬಹುದು ಎಂಬ ವಾದವನ್ನು ಪುಪ್ಟಿಕರಿಸಲು ಮತ್ತು ಐಸಿಸಿಯಿಂದ ಅನುಮತಿಯನ್ನು ಪಡೆಯಲು ಹಣಗಳಿಸುವ ಉದ್ದೇಶವನ್ನು ಹೊರತುಪಡಿಸಿ ಯಾವುದೇ ಆಧಾರಗಳಿರಲಿಲ್ಲ.

ತನ್ನ ಪಿತ್ರಾರ್ಜಿತವಾದ ಸಂಸ್ಕ್ರತಿಯನ್ನು ಬಿಟ್ಟು ಎಂ.ಸಿ.ಸಿ. ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯಲ್ಲಿ ಅಧಿಕಾರದಲ್ಲಿ ಪಾಲ್ಗೊಳ್ಳುವಿಕೆಯನ್ನು ಮುಂದುವರೆಸಿತು, ಮತ್ತು ಐಸಿಸಿಯಿಂದ ತೀರ್ಮಾನಿಸಲ್ಪಟ್ಟ ೨೦೧೦ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನಿಯರಿಗೆ, ಪಾಕಿಸ್ತಾನವು ಸ್ವಂತ ತಾಯ್ನಾಡಲ್ಲಿ ಆಡಬೇಕಾದ ಪಂದ್ಯದಲ್ಲಿ ಇಲ್ಲಿಯೇ ಆಡುವಂತೆ ಸೂಚಿಸಿ ತಾಯ್ನಾಡಿನ ಪಿಚ್‌ ಅನ್ನಿಸುವಷ್ಟು ನೈಜವಾಗಿ ವರ್ತಿಸಿತು. ಮತ್ತು ಭಯೋತ್ಪಾದಕ ದೇಶವೆಂದು ಹೆಸರುಗಳಿಸಿ ಅಂತರಾಷ್ಟ್ರೀಯ ಪಂದ್ಯಗಳಿಗೆ ಅನರ್ಹತೆಯನ್ನು ಗಳಿಸಿದ ದೇಶವಾದ ಪಾಕಿಸ್ತಾನದ ತಂಡಕ್ಕೆ ತನ್ನ ನೆಲದಲ್ಲಿ ಆಟವಾಡಲು ಅವಕಾಶ ನೀಡಿದ್ದಕ್ಕಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ ವಲಯದಲ್ಲಿ ನಿಂದನೆಗೆ ಗುರಿಯಾಯಿತು. ಮತ್ತು ಪಾಕಿಸ್ತಾನವು ಅಂತರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು ನಡೆಯದ ದೇಶವಾಗಿ ಮುಂದುವರೆದಿದ್ದನ್ನು ಈ ಆಟವು ಸಾಭೀತುಪಡಿಸಿದಂತಾಯಿತು. ಸಂಘದ ಕಾರ್ಯದರ್ಶಿ ಮತ್ತು ಮುಖ್ಯಕಾರ್ಯನಿರ್ವಾಹಕರು ಬೋರ್ಡ್‌ ಆಫ್‌ ಇಂಗ್ಲೆಂಡ್‌ನ ಮತ್ತು ವಾಲ್ಸ್‌ ಕ್ರಿಕೆಟ್‌ ಬೋರ್ಡ್‌ನ ನಿರ್ದೇಶಕ ಮಂಡಳಿಯಲ್ಲಿ ಸ್ಥಾನಮಾನವನ್ನು ಹೊಂದಿದ್ದು, ಒಂದು ವರದಿಯ ಪ್ರಕಾರ ಕೀತ್‌ ಬ್ರಾಡ್‌ಷಾ (ಈಗಿನ ಕಾರ್ಯದರ್ಶಿ ಮತ್ತು ಮುಖ್ಯಕಾರ್ಯನಿರ್ವಾಹಕರು) ಎಪ್ರಿಲ್‌ ೨೦೦೭ರಲ್ಲಿ ಇಂಗ್ಲೆಂಡ್‌ನ ಆಟಗಾರರ ತರಬೇತುದಾರರಾದ ಡಂಕನ್‌ ಪ್ಲೆಚರ್‌ ಇವರನ್ನು ಕಛೇರಿಯಿಂದ ವಜಾಗೊಳಿಸಲು ಪ್ರಭಾವ ಬೀರಿರಬಹುದೆಂದು ಅಂದಾಜಿಸಲಾಗಿದೆ.[೧೦]

ಎಂ.ಸಿ.ಸಿ.ಯ ಈಗಿನ ಸ್ಥಿತಿಗತಿ.[ಬದಲಾಯಿಸಿ]

ಎಂ.ಸಿ.ಸಿ.ಯ ತಂಡವು ತನ್ನ ಆಟವನ್ನು ಎಂದಿನಂತೆ ಮುಂದುವರಿಸಿಕೊಂಡು ಹೋಗುತ್ತಿದೆ, ಅಪರೂಪಕ್ಕೊಮ್ಮೆ ಮೊದಲ ದರ್ಜೆಯ ಉತ್ತಮ ಪ್ರದರ್ಶನವನ್ನು ನೀಡುತ್ತಿದೆ. ಈ ಸಂಸ್ಥೆಯು ಸಾಂಪ್ರದಾಯಿಕವಾಗಿ ಎಂ.ಸಿ.ಸಿ.ಯ ತರಬೇತಿ ಕೈಪಿಡಿ ಯನ್ನು ಹೊಂದಿದೆ ಇದೊಂದು ಕ್ರಿಕಟ್‌ ನೈಪೂಣ್ಯತೆಯನ್ನು ಹೆಚ್ಚಿಸುವ ’ಬೈಬಲ್” ಎಂಬ ಪ್ರಕ್ಯಾತಿಯನ್ನು ಹೊಂದಿದೆ. ಸಂಘವು ಲಾರ್ಡ್ಸ್‌ ಒಳಮೈದಾನದ ತರಬೇತಿಯನ್ನೂ ಸೇರಿದಂತೆ ಯುವ ಆಟಗಾರರಿಗೆ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ.

ಎಂ.ಸಿ.ಸಿಯು ಇಂಗ್ಲೆಂಡಿನಾದ್ಯಂತ ಬೇರೆ ಬೇರೆ ರಾಜ್ಯಗಳೊಂದಿಗೆ ಮತ್ತು ಇತರ ತರಬೇತಿ ಶಾಲೆಗಳ ವಿರುದ್ದ ಪಂದ್ಯಗಳನ್ನು ಆಡುತ್ತಾ ತನ್ನ ಪ್ರವಾಸವನ್ನು ಮುಂದುವರಿಸಿದೆ. ಈ ಸಂಪ್ರದಾಯವು ೧೯ನೇ ಶತಮಾನದಿಂದಲೂ ನಡೆದುಕೊಂಡು ಬಂದಿದೆ. ಮತ್ತು ಸಂಘವು ರಿಯಲ್‌ ಟೆನ್ನಿಸ್‌ ಮತ್ತು ಸ್ಕ್ವ್ಯಾಶ್ ಮೈದಾನಗಳು ಮತ್ತು ಚಾಲ್ತಿಯಲ್ಲಿರುವ ಗಾಲ್ಫ್ ಮೈದಾನಗಳು, ಬ್ರಿಜ್, ಮತ್ತು ಪಗಡೆಯಾಟದ ಕೇಂದ್ರಗಳನ್ನೂ ಕೂಡ ಹೊಂದಿದೆ.

ಆಗಾಗ ಸಂಘವು ಚರ್ಚ್‌‌ಗಳ ವಿಧಿಗ್ರಂಥವನ್ನು ಪಾಲಿಸುತ್ತಾ ಬಂದಿರುವುದರಿಂದಮಾಧ್ಯಮಗಳ ಮತ್ತು ಸಾರ್ವಜನಿಕ ವಲಯಗಳಲ್ಲಿ ಪ್ರಗತಿಯನ್ನು ಸ್ವಲ್ಪ ತಡವಾಗಿ ಹೊಂದಿತು. ಅದು ತನ್ನ ಹಳೆಯ ಸಂಪ್ರದಾಯಗಳನ್ನು ಮತ್ತು ಅಂತಹುದೇ ಅಸ್ಥಿತ್ವವನ್ನು ಕಾಪಾಡಿಕೊಳ್ಳಲು ಏಕಾಗ್ರತೆವಹಿಸುತ್ತಿದೆ. ಈ ಕಾರಣದಿಂದಲೇ ಇದು ಹಿಂದಿನ ಸಾಂಪ್ರದಾಯಿಕ ಕ್ರಿಕೆಟನ್ನು ಭೂದೃಶ್ಯವಾಗಿಸಿದೆ. "ಎಂ.ಸಿ.ಸಿ.ಯು ಸಂಪೂರ್ಣತೆಯನ್ನು ಹೊಂದಿದೆಯೆಂಬುದು ಅತಿಶಯೋಕ್ತಿಯಾಗುತ್ತದೆ" ಎಂದು ೨೦೦೮ ಅಕ್ಟೊಬರ್‌ ಪ್ರಾರಂಭದಲ್ಲಿ ಆಂಡ್ರೂ ಮುಲ್ಲರ್‌ ಅಭಿಪ್ರಾಯ ಪಟ್ಟಿದ್ದಾರೆ. "ಆದರೆ ಸಾಂದ್ರವಾದ ಅಂತರಾಷ್ಟ್ರೀಯ ಕ್ರಿಕೆಟ್‌ ಕ್ರಾಂತಿಯ ಸಂದರ್ಭದಲ್ಲಿ NW೮ರ ವರ್ಣವು ಕ್ರಿಕೆಟ್‌ನಲ್ಲಿರುವ ಎಲ್ಲ ನ್ಯೂನತೆಗಳನ್ನು ಹೊರಗೆಡವಿದೆ ಮತ್ತು ಎಲ್ಲಿ ಹಳೆಯ ಕ್ರಿಕೆಟ್‌ ಸಂಪ್ರದಾಯಗಳು ಮುರಿದುಹೊಗುತ್ತವೆಯೋ ಎಂದು ಆತಂಕಕ್ಕೊಳಗಾದವರಿಗೆ ಸಾಂತ್ವನವನ್ನು ಹೇಳಿದೆ."[೧೧]

ಮುಂಬೈದಲ್ಲಿ ೨೦೦೮ ಎಪ್ರಿಲ್‌ನಲ್ಲಿ, ಇಂಡಿಯನ್‌ ಪ್ರಿಮಿಯರ್‌ ಲೀಗ್‌ ನಲ್ಲಿ ಎಂ.ಸಿ.ಸಿಯ ಕಾನೂನುಗಳನ್ನು ಉಲ್ಲಂಘಿಸುವುದನ್ನು ಗಮನಿಸಿದ ಸಂಘವು ಸಂಘದ ಕ್ರಿಡಾ ಉತ್ಸಾಹವನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ T೨೦ ಪಂದ್ಯಗಳನ್ನು ಲಾರ್ಡ್ಸ್‌ ಮೈದಾನದಲ್ಲಿಯೇ ಆಯೋಜಿಸಲು ಪ್ರಾರಂಭಿಸಿತು.

ಸಂಘದ ಅಧಿಕಾರಿವರ್ಗ[ಬದಲಾಯಿಸಿ]

ಅಧ್ಯಕ್ಷರು ಹನ್ನೆರಡು ತಿಂಗಳವರೆಗೆ ತಮ್ಮ ಸೇವೆಯನ್ನು ಸಲ್ಲಿಸಬಹುದಾಗಿದೆ (ಎಚ್‌ಆರ್‌ಎಚ್ ದಿ ಡ್ಯೂಕ್‌ ಎಡಿನ್‌ಬರ್ಗ್‌ ಅವರು ಎರಡು ಅವಧಿಗೆ ಕಾರ್ಯನಿರ್ವಹಿಸಿದ್ದಾರೆ), ಮತ್ತು ಪ್ರತಿಯೊಬ್ಬ ಅಧ್ಯಕ್ಷರೂ ತನ್ನ ಉತ್ತರಾಧಿಕಾರಿಯನ್ನು ಆಯ್ಕೆಮಾಡುವ ಅಧಿಕಾರವನ್ನು ಹೊಂದಿದ್ದಾರೆ.

 • ಅಧ್ಯಕ್ಷರು: ಕ್ರಿಸ್ಟೋಫರ್ ಮಾರ್ಟಿನ್-ಜೆನ್ಕಿನ್ಸ್
 • ಕ್ಲಬ್‌ ಚೇರ್ಮನ್: ಆಲಿವರ್ ಸ್ಟಾಕೆನ್
 • ಖಜಾಂಶಿ: ಜಸ್ಟಿನ್ ಡೌಲೀ
 • ಕಾರ್ಯದರ್ಶಿ & ಮುಖ್ಯ ನಿರ್ವಹಣಾಧಿಕಾರಿ: ಕೀತ್ ಬ್ರ್ಯಾಡ್‌ಷಾ
 • ಎಂಸಿಸಿ ಸಮಿತಿ

ಇವನ್ನೂ ಗಮನಿಸಿ‌[ಬದಲಾಯಿಸಿ]

 • ಲಾರ್ಡ್ಸ್ ಕ್ರಿಕೆಟ್ ಮೈದಾನ
 • ಮಿಡಲ್‌ಸೆಕ್ಸ್‌ ಕೌಂಟಿ ಕ್ರಿಕೆಟ್ ಕ್ಲಬ್‌
 • ಲಾರ್ಡ್ ಹ್ಯಾರಿಸ್‌
 • ಲಂಡನ್ನಿನ ಪುರುಷರ ಕ್ಲಬ್‌ಗಳ ಪಟ್ಟಿ

ಉಲ್ಲೇಖಗಳು‌[ಬದಲಾಯಿಸಿ]

 1. ಕ್ರಿಸ್ ರಾಬರ್ಟ್ಸ್, ಹೆವಿ ವುಡ್ಸ್ ಲೈಟ್ಲಿ ಥ್ರೋನ್: ದ ರೀಸನ್ ಬಿಹೈಂಡ್ ರೈಮ್, ಥಾರ್ನ್‌ಡೈಕ್ ಪ್ರೆಸ್,೨೦೦೬ (ISBN ೦-೭೮೬೨-೮೫೧೭-೬).
 2. "Preface". Laws of Cricket. MCC. Archived from the original on 11 ಮಾರ್ಚ್ 2013. Retrieved 14 ಏಪ್ರಿಲ್ 2011.
 3. ಎಂಸಿಸಿಯ ಸುವರ್ಣ ಮಹೋತ್ಸವವನ್ನು ಘೋಷಿಸುತ್ತಿರುವ ೧೮೩೭ರ ಆಟದ ಒಂದು ಪೋಸ್ಟರ್ ಇದಕ್ಕೆ ಇರುವ ಏಕೈಕ ಸಾಕ್ಷಿಯಾಗಿದೆ.
 4. "ಫ್ರಮ್ ಲ್ಯಾಡ್ಸ್ ಟು ಲಾರ್ಡ್ಸ್‌ – 1787". Archived from the original on 4 ಸೆಪ್ಟೆಂಬರ್ 2012. Retrieved 14 ಏಪ್ರಿಲ್ 2011.. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು
 5. Williams, Glenys. "The colours of MCC". About MCC. Marylebone Cricket Club. Archived from the original on 2 ಜೂನ್ 2009. Retrieved 19 ಜುಲೈ 2009. William Nicholson continued to loan the Club substantial amounts for numerous projects over the next 30 years and was President of MCC in 1879. William Nicholson was the owner of the Nicholson's Gin Company, the colours of which were red and yellow. Although no written proof has yet been found there is a strong family tradition that the adoption of the red and gold was MCC's personal thank you to William Nicholson for his services to the club - sport's first corporate sponsorship deal perhaps! {{cite web}}: Cite has empty unknown parameter: |coauthors= (help); line feed character in |quote= at position 250 (help)
 6. "MCC set to accept women". BBC. 27 ಸೆಪ್ಟೆಂಬರ್ 1998.
 7. "MCC delivers first 10 maidens". BBC. 16 ಮಾರ್ಚ್ 1999.
 8. "Five maidens join Lord's". BBC. 11 ಫೆಬ್ರವರಿ 1999.
 9. Kelso, Paul (23 ಡಿಸೆಂಬರ್ 2005). "ECB in Knott over TV deal". London: The Guardian. Retrieved 12 ಮೇ 2010.
 10. "England to limit coach's powers". BBC. 30 ಏಪ್ರಿಲ್ 2007.
 11. Miller, Andrew (1 ಅಕ್ಟೋಬರ್ 2008). "We're riding the crest of a cricket revolution". Cricinfo. Retrieved 19 ಫೆಬ್ರವರಿ 2010.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

 • [57] ^ ಹ್ಯಾರಿ ಆಲ್ಥೆಮ್, ಎ ಹಿಸ್ಟರಿ ಆಫ್‌ ಕ್ರಿಕೆಟ್, ಸಂಪುಟ ೧ (೧೯೧೪) , ಜಾರ್ಜ್ ಆ‍ಯ್‌ಲೆನ್ & ಅನ್‌ವಿನ್, ೧೯೬೨
 • ಡೆರೆಕ್‌ ಬರ್ಲೀ, ಎ ಸೋಷಿಯಲ್‌ ಹಿಸ್ಟರಿ ಆಫ್‌ ಇಂಗ್ಲೀಷ್‌ ಕ್ರಿಕೆಟ್‌ , ಆರುಮ್‌, ೧೯೯೯
 • ರೊಲ್ಯಾಂಡ್‌ ಬೊವೆನ್‌, ಕ್ರಿಕೆಟ್‌: ಎ ಹಿಸ್ಟರಿ ಆಫ್‌ ಇಟ್ಸ್‌ ಗ್ರೊಥ್‌ ಆ‍ಯ್‌೦ಡ್‌ ಡೆವಲಪ್‌ಮೆಂಟ್‌ , ಐರೆ & ಸ್ಪೊಟ್ಟಿಸ್‌ವುಡೆ, ೧೯೭೦.
 • ಜಿ. ಬಿ. ಬಕ್‌ಲೀ
  • ಫ್ರೆಶ್ ಲೈಟ್ ಆನ್ ೧೮ಥ್ ಸೆಂಚುರಿ ಕ್ರಿಕೆಟ್ , ಕಾಟ್ಟೆರೆಲ್‌, ೧೯೩೫.
  • ಫ್ರೆಶ್ ಲೈಟ್ ಆನ್ ಪ್ರೀ-ವಿಕ್ಟೋರಿಯನ್ ಕ್ರಿಕೆಟ್ , ಕಾಟ್ಟೆರೆಲ್‌, ೧೯೩೭.
 • ಡೇವಿಡ್ ಫ್ರಿಥ್‌, ದ ಗೋಲ್ಡನ್ ಏಜ್ ಆಫ್ ಕ್ರಿಕೆಟ್ ೧೮೯೦-೧೯೧೪ , ಲಟ್ಟರ್‌ವರ್ಥ್‌, ೧೯೭೮.
 • [27] ^ ಆರ್ಥರ್‌ ಹೇಗರ್ಥ್‌, ಸ್ಕೋರ್ಸ್‌ & ಬಯೋಗ್ರಫಿಸ್‌, ಸಂಪುಟ ೧ (೧೭೪೪-೧೮೨೬) , ಲಿಲ್ಲಿವೈಟ್‌, ೧೮೬೨
 • [46] ^ ಜಾನ್ ಮೇಜರ್, ಮೋರ್ ದ್ಯಾನ್ ಅ ಗೇಮ್ , ಹಾರ್ಪರ್ ಕೊಲ್ಲಿನ್ಸ್, ೨೦೦೭
 • ಗ್ರೇಮ್‌ ರೈಟ್‌, ವಿಸ್ಡೆನ್‌ ಎಟ್ ಲಾರ್ಡ್ಸ್ , ವಿಸ್ಡೆನ್‌, ೨೦೦೫.
 • ಸ್ಟಿಫನ್ ಗ್ರೀನ್‌, ಲಾರ್ಡ್ಸ್‌, ಕ್ಯಾಥೆಡ್ರಲ್ ಆಫ್ ಕ್ರಿಕೆಟ್ ದ ಹಿಸ್ಟರಿ ಆಫ್ ಪ್ರೆಸ್ ಲಿಮಿಟೆಡ್., ೨೦೦೩.

ಬಾಹ್ಯ ಕೊಂಡಿಗಳು‌[ಬದಲಾಯಿಸಿ]

ಟೆಂಪ್ಲೇಟು:English cricket teams in the 18th century