ಮಹಾಸ್ರಗ್ಧರಾ ವೃತ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಾಸ್ರಗ್ಧರಾ ವೃತ್ತದ ಪ್ರತಿಪಾದದಲ್ಲಿಯೂ ೨೨ ಅಕ್ಷರಗಳಿವೆ. ಇದರ ಗಣವಿನ್ಯಾಸದಲ್ಲಿ ಬರುವ ಗಣಗಳು "ಸತತನಸರರಗು" (ಗು-ಗುರು)
ಇದರ ಸೂತ್ರಪದ್ಯ ಹೀಗಿದೆ "ಸತತಂನಂಸಂರರಂಗಂ ನೆರೆದೆಸೆಯೆ ಮಹಾ ಸ್ರಗ್ಧರಾ ವೃತ್ತಮಕ್ಕುಂ"
ಇದರ ಪ್ರಸ್ತಾರ ವಿನ್ಯಾಸ ಹೀಗಿದೆ
UU_| __U| _ _ U|U UU| U U _| _U_| _U_| _
ಸತತಂ|ನಂಸಂರ|ರಂಗಂ ನೆ|ರೆದೆಸೆ|ಯೆ ಮಹಾ| ಸ್ರಗ್ಧರಾ |ವೃತ್ತಮ|ಕ್ಕುಂ
ಸಂಸ್ಕೃತ-ಕನ್ನಡಗಳೆರಡರಲ್ಲಿಯೂ ಈ ಛಂದಸ್ಸಿನ ಪದ್ಯಗಳು ವಿಫುಲವಾಗಿ ಸಿಗುತ್ತವೆ.
ಇದು ಸ್ರಗ್ಧರೆಯ ಮೊದಲ ಗುರುವನ್ನು ಲಘುಗಳೆರಡರಿಂದ ಬದಲಾಯಿಸಿದಾಗ ಸಿಗುತ್ತದೆ
ಉದಾಹರಣೆ:-
ಇದು ಲಾಕ್ಷಾಗೇಹದಾಹಕ್ಕಿದುವಿಷಮವಿಷಾನ್ನಕ್ಕಿದಾನಾಡಜೂದಿಂ-
ಗಿದು ಪಾಂಚಾಲೀ ಪ್ರಪಂಚಕ್ಕಿದು ಕೃತಕ ಸಭಾಲೋಚನಭ್ರಾಂತಿಗೆಂದೋ-
ವದೆ ಪೊಯ್ದಂ ಕಾಲ್ಗಳಂ ತೋಳ್ಗಳನಗಲುರಮಂ ಕೆನ್ನೆಯಂ ನೆತ್ತಿಯಂ ಕೋ-
ಪದಿನಯ್ದುಂ ದುರ್ನಯಕ್ಕಯ್ದೆಡೆಯನುರುಗದಾದಂಡದಿಂ ಭೀಮಸೇನಂ||
(ರನ್ನಗದಾಯುದ್ಧ ೮-೧೩)

ನೋಡಿ[ಬದಲಾಯಿಸಿ]

ಛಂದಸ್ಸು

ಉಲ್ಲೇಖ[ಬದಲಾಯಿಸಿ]

  • ರನ್ನನ ಗದಾಯುದ್ಧ