ವಿಷಯಕ್ಕೆ ಹೋಗು

ಸ್ರಗ್ಧರಾ ವೃತ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ರಗ್ಧರಾ ವೃತ್ತದ ಪ್ರತಿಪಾದದಲ್ಲಿಯೂ ೨೧ ಅಕ್ಷರಗಳಿವೆ. ಇದರ ಗಣವಿನ್ಯಾಸದಲ್ಲಿ ಬರುವ ಗಣಗಳು "ಮರಭನಯಯಯ"
ಇದರ ಸೂತ್ರಪದ್ಯ ಹೀಗಿದೆ "ತೋರಲ್ ಮಂ ರಂಭನಂ ಮೂಯಗಣಮುಮದೆತಾಂ ಸ್ರಗ್ಧರಾ ವೃತ್ತಮಕ್ಕುಂ"

ಸ್ರಗ್ಧರಾ ವೃತ್ತ
_ _ _ _ U _ _ U U U U U U __ U _ _ U __
ತೋರಲ್ ಮಂ ರಂಭನಂ ಮೂಯಗ ಣಮುಮ ದೆತಾಂ ಸ್ರ ಗ್ಧರಾ ವೃ ತ್ತಮಕ್ಕುಂ

ಉದಾಹರಣೆ
ಆ ರುದ್ರಾಕ್ಷ್ಯಗ್ನಿ ಸಂತಪ್ತನನೆನೆ ಜನರಾ ತಾಪಮಂ ಪೆರ್ಚಿಸುತ್ತುಂ
ವಾರಸ್ತ್ರೀರಕ್ತವರ್ಣಾಧರದೊಳುರೆ ನಿಲಲ್ ಜಾರುತುಂ ಪೋದನಂ ಕಾ-
ಮಾರಿಪ್ರಾಸಪ್ರತೀಕ್ಷಾನಿರತನತಿಭಯಭ್ರಾಂತನಂ ಪೋಲ್ವವೋಲೇ
ಸೇರುತ್ತುಂ ನೀರನಾಗಳ್ ನಿರುಕಿಪರಿಗೆ ತಾಂ ಕಂಡನಾ ನೀರಜಾಪ್ತಂ||
(ಸೂರ್ಯಾಸ್ತ ವರ್ಣನೆಯ ಮುಕ್ತಕ)
ಸಂಸ್ಕೃತಕನ್ನಡಗಳೆರಡರಲ್ಲಿಯೂ ಈ ಛಂದಸ್ಸಿನ ಪದ್ಯಗಳು ವಿಪುಲವಾಗಿ ಸಿಗುತ್ತವೆ.