ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಪಡುಬಿದ್ರಿ ದೇವಸ್ಥಾನವು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಎಂದು ಜನಪ್ರಿಯವಾಗಿದೆ. ಈ ದೇವಾಲಯವು ಶಿವ ಮತ್ತು ಗಣೇಶನಿಗೆ ಸಮರ್ಪಿತವಾಗಿದೆ. ಪಡುಬಿದ್ರಿ ದೇವಸ್ಥಾನವು ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿ ೧೭ ರಲ್ಲಿದೆ ಮತ್ತು ಉಡುಪಿಯಿಂದ ೨೪ ಕಿಮೀ ಮತ್ತು ಮಂಗಳೂರಿನಿಂದ ೩೫ ಕಿಮೀ ದೂರದಲ್ಲಿದೆ.ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಶಿವಲಿಂಗವನ್ನು ಭೃಗು ಋಷಿ ಸ್ಥಾಪಿಸಿದನೆಂದು ನಂಬಲಾಗಿದೆ. ರುದ್ರಾಕ್ಷಿ ಕಲ್ಲಿನ ಮೇಲೆ ಕೆತ್ತಿದ ಗಣೇಶ ಮೂರ್ತಿಯನ್ನು ಪರಶುರಾಮರು ಪ್ರತಿಷ್ಠಾಪಿಸಿದರು.ಗಣೇಶನ ಮೂರ್ತಿಯು ೨.೫ ಅಡಿ ಎತ್ತರವಿದೆ. ದೇವಾಲಯದಲ್ಲಿರುವ ಉತ್ಸವ ಮೂರ್ತಿ ಅಥವಾ ಮೆರವಣಿಗೆಯ ದೇವತೆಯೂ ಸಹ ೧೦೦೦ ವರ್ಷಗಳಿಗಿಂತ ಹಳೆಯದು. ಇಲ್ಲಿ ಪೂಜಿಸಲ್ಪಡುವ ಗಣಪತಿಯು ತನ್ನ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಕಾರಣದಿಂದ ಇಷ್ಟಸಿದ್ಧಿ ಮಹಾ ಗಣಪತಿ ಎಂದು ಕರೆಯಲಾಗುತ್ತದೆ. ಇಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳೆಂದರೆ ಶಿವರಾತ್ರಿ, ಗಣೇಶ ಚತುರ್ಥಿ ಮತ್ತು ಮೀನಾ ಸಂಕ್ರಾಂತಿ ದೇವಸ್ಥಾನದ ಹಬ್ಬ.ದೇವಾಲಯದ ರಥವು ದೊಡ್ಡದಾಗಿದೆ[೧].

ಪಡುಬಿದ್ರಿ ದೇವಸ್ಥಾನದ ದರ್ಶನ ಮತ್ತು ಪೂಜೆಯ ಸಮಯ[ಬದಲಾಯಿಸಿ]

ಬೆಳಿಗ್ಗೆ ೬:೦೦ ರಿಂದ ಮಧ್ಯಾಹ್ನ ೧೨:೦೦ ರವರೆಗೆ,ಸಂಜೆ ೫:೦೦ ರಿಂದ ರಾತ್ರಿ ೮:೦೦ ರವರೆಗೆ ಮೂರು ಮಹಾಪೂಜೆಗಳನ್ನು ಪ್ರತಿದಿನ ಬೆಳಿಗ್ಗೆ ೭:೦೦, ಮಧ್ಯಾಹ್ನ ೧೨:೦೦ ಮತ್ತು ಸಂಜೆ ೭:೩೦ ಕ್ಕೆ ಮಾಡಲಾಗುತ್ತದೆ.

ಕಟ್ಟದಪ್ಪ ಸೇವೆ[ಬದಲಾಯಿಸಿ]

ಪಡುಬಿದ್ರಿಯ ಪುರಾಣ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಿಶೇಷ ಕಟ್ಟದಪ್ಪ ಸೇವೆ ಜರಗಿತು.ಅವಿಭಜಿತ ಜಿಲ್ಲೆಯಲ್ಲದೆ ದೇಶ ವಿದೇಶಗಳ ಭಕ್ತರು ಇಲ್ಲಿ ನಡೆಯುವ ವಿಶೇಷ ಕಟ್ಟದಪ್ಪ ಸೇವೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷತೆ. ಶ್ರೀಕ್ಷೇತ್ರದಲ್ಲಿ ನಿರಂತರ ನಡೆಯುವ ಬೆಲ್ಲದಪ್ಪ ಮತ್ತು ಪೆÇಟ್ಟಪ್ಪ ಸೇವೆಗಳು ಇಲ್ಲಿನ ವಿಶೇಷ ಸೇವೆ. ಈ ದಿನ ನಡೆಯುವುದು ಸಾರ್ವಜನಿಕ ಕಟ್ಟದಪ್ಪ(ಕಟಾಹಪೂಪ)ಸೇವೆ.ಪಡುಬಿದ್ರಿ ಗ್ರಾಮದ ಕಲ್ಲಟ್ಟೆ ಎಂಬ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸುವ ಕೃಷಿಕರು ಜನರು ಎಷ್ಟೇ ಪ್ರಯತ್ನ ಪಟ್ಟರೂ, ಕಾಮಿನಿ ಹೊಳೆಗೆ ಕಟ್ಟಿದ ಕಟ್ಟ(ದಂಡೆ) ನಿಲ್ಲದೆ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಕಾಲಘಟ್ಟದಲ್ಲಿ ಗ್ರಾಮ ದೇವರಿಗೆ ಕಟ್ಟ ನಿಲ್ಲುವಂತೆ ಹರಕೆ ಹೇಳಿರುವುದೇ ” ಕಟ್ಟದಪ್ಪ” ಹರಕೆ.ಈ ಹರಕೆಯ ಬಳಿಕ ಯಾವುದೇ ಸಮಸ್ಯೆ ಇಲ್ಲದಂತೆ ಹಾಕಲಾದ ತಡೆ ನಿಲ್ಲುತ್ತಿದ್ದು, ಈಗಲೂ ಆ ಆಚರಣೆ ರೂಢಿಯಲ್ಲಿದೆ. ಅಂದು ೫-೬ ಸೇರು ಅಕ್ಕಿ ಹಿಟ್ಟು ಮೂಲಕ ಮಧ್ಯಾಹ್ನ ನಡೆಯುತ್ತಿದ್ದ ಸೇವೆ ಇಂದು ಜಗದಗಲ ಹರಡಿ ೧೦೦ ಮುಡಿ ಅಕ್ಕಿ ಬಳಕೆಯಾಗುವವರೆಗೆ ಬಂದು ತಲುಪಿದೆ[೨].

ಜಾತ್ರಾ ಉತ್ಸವ[ಬದಲಾಯಿಸಿ]

ಜಾತ್ರಾ ಉತ್ಸವದ ಸಮಯದಲ್ಲಿ ನಿತ್ಯಪೂಜೆ, ನಿತ್ಯಬಲಿ, ಪಲ್ಲಪೂಜೆ, ರಥಶುದ್ಧಿಗಳ ಬಳಿಕ ರಥಾರೋಹಣ ನಡೆಯುತ್ತದೆ.ರಾತ್ರಿ ಶ್ರೀಮನ್ಮಹಾರಥೋತ್ಸವ, ಭೂತಬಲಿ, ಕವಾಟಬಂಧನ ಇತ್ಯಾದಿಗಳು ನೆರವೇರುತ್ತವೆ[೩].

ಉಲ್ಲೇಖಗಳು[ಬದಲಾಯಿಸಿ]

  1. https://www.hindu-blog.com/2016/03/padubidri-temple-shri-mahalingeshwara.html
  2. https://v4news.com/padubidri-3/
  3. https://www.udayavani.com/district-news/udupi-news/padubidri-sri-mahalingeshwara-temple