ಮಹಾಲಿಂಗಪುರ

ವಿಕಿಪೀಡಿಯ ಇಂದ
Jump to navigation Jump to search

ಲುಅ ದೋಷ: bad argument #1 to 'gsub' (string is not UTF-8).


ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ಮಹಾಲಿಂಗಪುರವು ಕಲೆ,ಸಾಹಿತ್ಯ,ಅಧ್ಯಾತ್ಮ,ಶಿಕ್ಷಣ,ವಾಣಿಜ್ಯ ಕ್ಷೇತ್ರಗಳಲ್ಲಿ ತನ್ನದೆ ಕೊಡುಗೆ ನೀಡುತ್ತದೆ. ಕೃಷಿ ಮತ್ತು ನೇಕಾರಿಕೆ ಇಲ್ಲಿನ ಹೆಚ್ಚಿನ ಜನರ ಉದ್ಯೋಗ. ತಾಲೂಕು ಕೇಂದ್ರ ಮುಧೋಳದಿಂದ ಪಶ್ಚಿಮಕ್ಕೆ 20ಕಿ.ಮೀ ದೂರದಲ್ಲಿದೆ. ಜಿಲ್ಲಾ ಕೆಂದ್ರ ಬಾಗಲಕೋಟೆಯಿಂದ 80 ಕೀ.ಮೀ.

ಇಲ್ಲಿನ ಪವಾಡ ಪುರುಷ, ನಗರದ ಆರಾಧ್ಯ ದೈವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಬಹಳ ಪ್ರಸಿದ್ಧಿಯಾಗಿದ್ದು, ಮಹಾಲಿಂಗೇಶ್ವರ ದರ್ಶನಕ್ಕೆ ರಾಜ್ಯ ಅಷ್ಟೆ ಅಲ್ಲದೇ ನೆರೆಯ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಬರುತ್ತಾರೆ. ಕೆ.ಇ.ಬಿ ಗಣೇಶ ದೇವಸ್ಥಾನ ಇದು ಬಸ್ ನಿಲ್ದಾಣದ ಎದುರಿಗೆ ಇದೆ.ಊರಿನ ಪ್ರಸಿದ್ಧ ಗಣೇಶ ದೇವಸ್ಥಾನ ಇದಾಗಿದೆ.

ಇತಿಹಾಸ[ಬದಲಾಯಿಸಿ]

ಸ್ವತಂತ್ರ ಪೂರ್ವದಲ್ಲಿ ಮುಧೋಳ ಸಂಸ್ಥಾನಕ್ಕೆ ಸೇರಿತ್ತು.ಮಹಾಲಿಂಗಪೂರದ ಮೂಲ ಹೆಸರು "ನರಗಟ್ಟಿ", ಶ್ರೀ. ಮಹಾಲಿಂಗಶ್ವರ ಮಹಾಸ್ವಾಮಿಗಳ ಖ್ಯಾತಿಯಿಂದಾಗಿ "ಮಹಾಲಿಂಗಪೂರ"ವಾಯಿತು. ಮಹಾಲಿಂಗಪುರ ಚನ್ನಪ್ಪ ಹುದ್ದಾರ ಇವರು ಸ ರಿ ಗ ಮ ಪ ಜೀ ಟಿವಿ ಕನ್ನಡ ಸಿಜನ್ 11 ರಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಜನಜೀವನ[ಬದಲಾಯಿಸಿ]

ನಗರದ ಜನಸಂಖ್ಯೆ ೨೦೧೧ರ ಜನಗಣತಿಯ ಪ್ರಕಾರ 56865[೧]

ಮಹಾಲಿಂಗಪುರವು ಸರ್ವಧರ್ಮ ಸಾಮರಸ್ಯದ ನೇಲೆಬೀಡಾಗಿದೆ.ಸುಸಜ್ಜಿತ ಬೆಲ್ಲದ ಮಾರುಕಟ್ಟೆಯನ್ನು ಹೊಂದಿರುವ ಮಹಾಲಿಂಗಪುರ ನಾಡಿನಲ್ಲೆಡೆ ಬೆಲ್ಲದ ಸೊಬಗಿನ ಪ್ರದೇಶವೆಂದೇ ಖ್ಯಾತಿ ಪಡೆದಿದೆ.

ಸಾರಿಗೆ ವ್ಯವಸ್ಥೆ[ಬದಲಾಯಿಸಿ]

ಬಸ್ : ವಾ.ಕ.ರಾ.ರ.ಸಾ.ನಿ. ಅಡಿಯಲ್ಲಿ ಬರುವ ಪ್ರಮುಖ ಬಸ್ ನಿಲ್ದಾಣವಾಗಿದೆ. ಉತ್ತಮ ಬಸ್ ಸೌಕರ್ಯಗಳಿವೆ.

ರೈಲು : ಸಮೀಪದ ರೈಲು ನಿಲ್ದಾಣ ಕುಡಚಿ - 45 ಕೀ.ಮೀ ದೂರ

ವಿಮಾನ : ಸಮೀಪದ ವಿಮಾನ ನಿಲ್ದಾಣಗಳು - ಹುಬ್ಬಳ್ಳಿ ಹಾಗೂ ಬೆಳಗಾಂವ - ಸುಮಾರು 130 ಕೀ.ಮೀ ದೂರ

ಉಲ್ಲೇಖಗಳು[ಬದಲಾಯಿಸಿ]

<References>

  1. http://www.mahalingapuratown.gov.in/