ಮಹಾರಾಣಿ ಚಕ್ರವರ್ತಿ

ವಿಕಿಪೀಡಿಯ ಇಂದ
Jump to navigation Jump to search
ಮಹಾರಾಣಿ ಚಕ್ರವರ್ತಿ
ಜನನಜನವರಿ ೨ ,೧೯೩೭
ಭಾಗಲ್ಪುರ, ಬಿಹಾರ
ಮರಣಜನವರಿ,೨೦೧೫
ವೃತ್ತಿಆಣ್ವಿಕ ಜೀವಶಾಸ್ತ್ರಜ್ಞೆ
ರಾಷ್ಟ್ರೀಯತೆಭಾರತೀಯ
ಬಾಳ ಸಂಗಾತಿಡಾ. ಡೆಬಿ ಪ್ರಸಾದ್ ಬರ್ಮಾ

ಮಹಾರಾಣಿ ಚಕ್ರವರ್ತಿ ಭಾರತಿಯ ಆಣ್ವಿಕ ಜೀವಶಾಸ್ತ್ರಜ್ಞೆ .ಅವರು ೧೯೮೧ ರಲ್ಲಿ ಏಷ್ಯಾ ಮತ್ತು ಪೂರ್ವ ಏಷ್ಯದಲ್ಲಿ ಮೊದಲು ಬಾರಿಗೆ ರಿಕಾಂಬಿನೆಂಟ್ ಡಿ.ಎನ್.ಎ ತಂತ್ರಗಳ ಪ್ರಯೋಗಾಲಯಗಳನ್ನು ನಿರ್ದೆಶಿಸಿದರು.

ಆರಂಭಿಕ ಜೀವನ[ಬದಲಾಯಿಸಿ]

ಮಹಾರಣಿ ಚಕ್ರವರ್ತಿ ಕಲ್ಕತ್ತಾನಲ್ಲಿ ಜನವರಿ ೨ ರಂದು ಜನಿಸಿದರು. ಇವರಿಗೆ ಅಜ್ಜನ ಪ್ರಭಾವದಿಂದ ರಸಾಯನ ಶಾಸ್ತ್ರ ಮತ್ತು ವಿಜ್ಞಾನ ದಲ್ಲಿ ಆಸಕ್ತಿ ಹುಟ್ಟಿತು.೧೯೫೦ರಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿ, ಪ್ರೆಸಿಡೆನ್ಸಿ ಕಾಲೇಜ್, ಕಲ್ಕತ್ತಾದಿಂದ ಬಿ.ಎಸ್ ಸಿ ಪದವಿಯನ್ನು ಪಡೆದರು. ೧೯೫೬ ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ಎಂ.ಎಸ್ ಸಿ (ಸಸ್ಯಶಾಸ್ತ್ರ) ಯನ್ನು ಪಡೆದರು ಮತ್ತು ಬೋಸ್ ಇನ್ಸ್ಟಿಟ್ಯೂಟ್ ರಿಂದ ಪಿ.ಹೆಚ್ ಡಿಯನ್ನು ಹೊಂದಿದರು. ಮುಂದೆ ಅವರು ಜಿವಸಾಯನಶಾಸ್ತ್ರದಲ್ಲಿ ಪಿ.ಹೆಚ್ ಡಿ ಯನ್ನು ಪಡೆದರು. ನಂತರ ಅಮೇರಿಕದಲ್ಲಿ ತಮ್ಮ ಪ್ರಯೋಗಗಳನ್ನು ಮುಂದುವರಿಸಿದರು.

ಪರಿಶೋಧನೆಗಳು[ಬದಲಾಯಿಸಿ]

ಮಹಾರಾಣಿ ಚಕ್ರವರ್ತಿ[೧] ನ್ಯೂಯಾರ್ಕ್ ಯೂನಿವರ್ಸಿತಿ ಸ್ಕೂಲ್ ಆಫ್ ಮೆಡಿಕಲ್ ನಲ್ಲಿ ಉನ್ನತ ಶಿಕ್ಷಣವನ್ನು ಹೊಂದಿದರು.ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಪ್ರಯೋಗಾಲಯ ಮತ್ತು ಇಂಟರ್ನೆಷನಲ್ ಲೆಬೋರೇಟರಿ ಆಫ್ ಜನರಲ್ ಅಂಡ್ ಬಯೋಫಿಸಿಕಲ್ (ಇಟಲಿ) ನಲ್ಲಿ ಪರಿಶೋಧನೆಗಳನ್ನು ಮುಂದುವರಿಸಿದರು. ಯೂನಿವರ್ಸಿಟಿ ಆಫ್ ಯೇಲಿ,ನ್ಯೂಹೆವನ್ ,ಅಮೆರಿಕಾ,ಡಿಪಾರ್‌ಟ್‌ಮೇಂಟ್ ಆಫ್ ಬಯೋಕೆಮಿಸ್ಟ್ರಿ ಅಂಡ್ ಮಾಲಿಕ್ಯೂಲರ್ ಬಯಾಲಜಿ, ಯೂನಿವರ್ಸಿಟಿ ಆಫ್ ಟ್‌ಕ್ಸಾಸ್ ಮಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಜೆನೆಟಿಕ್ಸಂಡ್ ಮೈಕ್ರೋಬಯಾಲಜಿ, ಯೂನಿವರ್ಸಿಟಿ ಆಫ್ ಪ್ಯಾರಿಸ್ - ಸೂದ್- ಓರ್ನೆ (ಫ್ರಾನ್ಸ್) ಇಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅವರು ಪರಿಶೋಧನೆಯನ್ನು ಮಾಡಿದರು.

ಮಹಾರಾಣಿ ಚಕ್ರವರ್ತಿ ಬನಾರಸ್ ಯೂನಿವರ್ಸಿಟಿನಲ್ಲಿ ಮಾಲಿಕ್ಯೂಲ(ಅಣು)ರ್ ಬಯಾಲಜಿ ಯೂನಿಟ್ ಅನ್ನು ಅನಿರೀಕ್ಷಿತ ಅಭಿವೃಧಿಯನ್ನು ಮಾಡಿದರು. "ಸೆಂಟರ್ ಫರ್ ಮಾಲಿಕ್ಯೂಲರ್ ಬಯಾಲಜಿ ಅಂಡ್ ಜೆನೆಟಿಕ್ಸ್ ಎಂಜಿನಿಯರಿಂಗ್" ವಿಭಾಗಗಳನ್ನು ಅಭಿವೃದ್ದಿ ಪಡಿಸಿದರು. ಜೆನೆಟಿಕಲ್ ಇಂಜಿನಿಯರಿಂಗ್‌ನಲ್ಲಿ ಇವರು ಅಪೂರ್ವವಾದ ಪರಿಶೋಧನೆಗಳನ್ನು ಮಾಡಿದ್ದಾರೆ. ಅವರ ಈ ಪರಿಶೋಧನೆಗಳು ಅಂತಾರಾಷ್ಟ್ರಿಯ ಪತ್ರಿಕೆಗಳಲ್ಲಿ ಪ್ರಕಟಣವಾಗಿವೆ. ಅವರು ದೇಶ-ವಿದೇಶಗಳಲ್ಲಿಯೂ ಉಪನ್ಯಾಸಗಳನ್ನು ಕೊಟ್ಟಿದಾರೆ.

ವೃತ್ತಿ[ಬದಲಾಯಿಸಿ]

ಡಾ. ಡೆಬಿ ಪ್ರೊಸಾದ್ ಬರ್ಮ ಅವರ ಮಾರ್ಗದರ್ಶನದಲ್ಲಿ ಕೋಲ್ಕತ್ತಾದ ಬೋಸ್ ಇನ್‌ಸ್ಟಿಟ್ಯೂಟ್‌ನಿಂದ ಚಕ್ರವರ್ತಿ ಸೂಕ್ಷ್ಮಜೀವಿಯ ಪ್ರೋಟೀನ್ ಸಂಶ್ಲೇಷಣೆಯ ಕುರಿತು ಪಿಎಚ್‌ಡಿ ಮಾಡಿದರು. ತನ್ನ ಪ್ರಬಂಧ ಕಾರ್ಯದ ಒಂದು ಭಾಗವಾಗಿ, ಅಜೊಟೊಬ್ಯಾಕ್ಟರ್ ವಿನೆಲ್ಯಾಂಡಿಯಿಂದ ಕಣಗಳ ತಯಾರಿಕೆಯೊಂದಿಗೆ ಕೋಶ ಮುಕ್ತ ಪ್ರೋಟೀನ್ ಸಂಶ್ಲೇಷಣೆಯನ್ನು ಅವಳು ಪ್ರದರ್ಶಿಸಿದಳು. ಅವರು ನ್ಯೂಯಾರ್ಕ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಬಿ.ಎಲ್. ಹೊರೆಕರ್ ಅವರ ಪ್ರಯೋಗಾಲಯದಲ್ಲಿ ಕಿಣ್ವ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ನಂತರದ ತರಬೇತಿಯನ್ನು ಮಾಡಿದರು. 'ಬ್ಯಾಕ್ಟೀರಿಯಾದ ಜೆನೆಟಿಕ್ಸ್ ಮತ್ತು ವೈರಾಲಜಿ'ಯಲ್ಲಿ ಅವರ ವಿಶೇಷ ತರಬೇತಿ ಲಾಂಗ್ ಐಲ್ಯಾಂಡ್, ಯು.ಎಸ್.ಎ.ನ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೊರೇಟರಿಯಲ್ಲಿ ಪೂರ್ಣಗೊಂಡಿತು.[೨]

ಅಂತಾರಾಷ್ಟ್ರೀಯ ಖ್ಯಾತಿ[ಬದಲಾಯಿಸಿ]

 1. ಯೂನಿವರ್ಸಿಟಿ ಆಫ್ ಮಿಚಿಗನ್ (ಅಮೆರಿಕೆ)ನಲ್ಲಿ ಹ್ಯೂಮನ್ ಜೆನೆಟಿಕ್ಸ್ ವಿಭಾಗದಲ್ಲಿ ಸಂದರ್ಶಕ ಪ್ರೊಫೆಸರ್ (೧೯೬೮-೬೯),
 2. ಬನಾರಸ್ ಹಿಂದೂ ಯೂನಿವರ್ಸಿಟಿನಲ್ಲಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೆನ್ಸ್ ರಿಸರ್ಚ್ ಬಯೋಕಿವಿಸ್ಟ್ರಿ ವಿಭಾಗದಲ್ಲಿ ಉನ್ನತ ಸಂಶೋಧನೆ ಅಧಿಕಾರಿ (೧೯೬೯-೭೨)
 3. ಅಂತಾರಾಷ್ಟ್ರಿಯ ಪಠ್ಯಕಮದ "ಜೆನೆಟಿಕ್ಸ್ ಅಂಡ್ ಫಿಜಿಯಾಲಜಿ ಬ್ಯಾಕ್ಟೀರಿಯಾವೈರಸ್ "(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು),
 4. ೧೫ ವ ಇಂಟರ್ ನೆಷನಲ್ ಕಾಂಗ್ರೆಸ್ ಆಫ್ ಜೆನೆಟಿಕ್ಸ್ ನಲ್ಲಿ ನೇತೃತ್ವ

ರಾಷ್ಟ್ರೀಯ ಖ್ಯಾತಿ[ಬದಲಾಯಿಸಿ]

 1. ರಿಸರ್ಚ್ ಅಡ್‌ವೈಜರಿ ಕಮಿಟಿ (ನೆಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ,ಪೂಣೆ)
 2. ದೆಹಲಿ ಯೂನಿವರ್ಸಿಟಿ ,ಜವಾಹರ ಲಾಲ್ ನೆಹರೂ ಯೂನಿವರ್ಸಿಟಿಗಳಲ್ಲಿ ಪಠ್ಯ ಯೋಜನೆಗಳನ್ನು ಒದಗಿಸಿದರು.
 3. ಯೂ.ಜಿ.ಸಿ ಬಯೊಸೈನ್ಸ್ ಪಾನಲ್ ಅಧಿಕಾರಿಯಾಗಿ ವಿಶೇಷ ಸಮಿತಿಯನ್ನು ಏರ್ಪಡಿಸಿದ್ದಾರೆ .

ಸೇವೆಗಳು[ಬದಲಾಯಿಸಿ]

ಡಾ|| ಮಹಾರಾಣಿಯವರು ಬನಾರಸ್ ಹಿಂದೂ ವಿಶ್ವವಿದ್ಯಾಲಯ,ಬಯೋಕೆಮಿಸ್ಟ್ರಿ ಇಲಾಖೆಯಲ್ಲಿ ಫ್ರೊಫೆಸರ್ ಹಾಗು ಮಾಲಿಕ್ಯೂಲರ್ ಬಯಾಲಜಿ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೀವರಾಸಾಯನ ಶಾಸ್ತ್ರ ರಂಗದಲ್ಲಿ,ಅಣು ಜೀವಶಾಸ್ತ್ರ ಕ್ಷೇತ್ರದಲ್ಲಿ, ಪ್ರತಿಭೆಯನ್ನು ಹೊಂದಿದ್ದರು.

ಅವರು ಲೈಸೊಗೆಣಿ ಒಳಗಾಗುತ್ತಿರುವ ಜೀವಕೋಶಗಳನ್ನು ಮತ್ತು ಆ ಒಳಪಡುವ ಲೈಸಿಸ್ ನಡುವೆ ಜೀವರಾಸಾಯನಿಕ ವ್ಯತ್ಯಾಸವನ್ನು ಅರಿತುಕೊಳ್ಳುವ ಸಂಶೋಧನೆ ಕೈಗೊಂಡರು. ಅವರು ವೈರಸ್ ಸೋಂಕು ಪ್ರೋಟೀನ್ ಸಿನ್‌‌ಥಸಿಸ್ ಕೆಳಗಿನ ಅನುವಾದ ಮಟ್ಟದಲ್ಲಿ ನಿಯಂತ್ರಿಸಲ್ಪಡುತ್ತದೆ ಎಂದು ಹೇಳಿದರು.

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

 1. ಸರ್ಟಿಫಿಕೆಟ್ ಆಫ್ ಮೆರಿಟ್ ಆಫ್ ಇನ್ಸ್ಟಿಟ್ಯೂಟ್ ಆಫ್ ಮೇಡಿಕಲ್ ಸೈನ್ಸ್ , ಬಿ.ಹೆಚ್.ಯು (೧೯೭೫-೭೬)
 2. ಅತ್ಯುತ್ತಮ ಸಂಶೋಧನಾ ಪ್ರಶಸ್ತಿ, ಇನ್ಸ್ಟಿಟ್ಯೂಟ್ ಆಫ್ ಮೇಡಿಕಲ್ ಸೈನ್ಸ್ , ಬಿ.ಹೆಚ್.ಯು (೧೯೭೯)
 3. ಕ್ಷನೀಕ ಉಪನ್ಯಾಸ ಪ್ರಶಸ್ತಿ (೧೯೭೯), ಐಸಿಎಂಆರ್ [೩]
 4. ವೈ.ಎಸ್, ನಾರಾಯಣ್ ರಾವ್ ಪ್ರಶಸ್ತಿ (೧೯೮೧),ಐಸಿಎಂಆರ್
 5. ಹರಿ ಓಂ ಆಶ್ರಮ ಅಲೆಂಬಿಕ್ ಸಂಶೋಧನಾ ಪ್ರಶಸ್ತಿ (೧೯೮೧),ಭಾರತೀಯ ವೈದ್ಯ ಮಂಡಳಿ
 6. ಜೆ.ಸಿ. ಸೇನ್ ಮೆಮೊರಿಯಲ್ ಪ್ರಶಸ್ತಿ
 7. ಪ್ರೊಫೆಸರ್ ದರ್ಶನ್ ರಂಗನಾಥನ್ ಮೆಮೊರಿಯಲ್ ಪ್ರಶಸ್ತಿ (೨೦೦೭),ಐಎನ್ ಎಸ್ ಸಿ

ಉಲ್ಲೇಖಗಳು[ಬದಲಾಯಿಸಿ]

 1. "ಮಹಾರಾಣಿ ಚಕ್ರವರ್ತಿ".
 2. "HugeDomains.com - VrvBookshop.com is for sale (Vrv Bookshop)". www.hugedomains.com. Retrieved 21 March 2020.
 3. "ಐಸಿಎಂಆರ್".