ಮಹಾಪದ್ಮ ನಂದ
ಮಹಾಪದ್ಮ ನಂದ | |
---|---|
ನಂದ ರಾಜವಂಶದ ರಾಜ | |
ಆಳ್ವಿಕೆ | ಸು. ಕ್ರಿ.ಶ. 345 - 329 |
ಪೂರ್ವಾಧಿಕಾರಿ | ಮಹಾನಂದಿನ್ |
ಉತ್ತರಾಧಿಕಾರಿ | ಧನ ನಂದ |
ಸಂತಾನ | |
ಧನ ನಂದ | |
ತಂದೆ | ಮಹಾನಂದಿನ್ |
ಜನನ | ಕ್ರಿ.ಪೂ. 400 |
ಮರಣ | ಕ್ರಿ.ಪೂ. 329 |
ಮಹಾಪದ್ಮ ನಂದ (ಸು. ಕ್ರಿ.ಶ. 400 - 329) ನಂದ ರಾಜವಂಶದ ಮೊದಲ ರಾಜನಾಗಿದ್ದನು. ಇವನು ಶಿಶುನಾಗ ರಾಜವಂಶದ ರಾಜ ಮಹಾನಂದಿನ್ ಮತ್ತು ಒಬ್ಬ ಶೂದ್ರ ತಾಯಿಯ ಮಗನಾಗಿದ್ದನು. ಮಹಾನಂದಿನ್‍ನ ಇತರ ಹೆಂಡತಿಯರಿಂದ ಹುಟ್ಟಿದ ಪುತ್ರರು ಮಹಾಪದ್ಮ ನಂದನ ಏಳಿಗೆಯನ್ನು ವಿರೋಧಿಸಿದರು. ಇದಕ್ಕೆ ಪ್ರತಿಯಾಗಿ ಮಹಾಪದ್ಮನಂದನು ಅವರೆಲ್ಲರನ್ನೂ ತೊಡೆದುಹಾಕಿ ಸಿಂಹಾಸನವೇರಿದನು.
ಹೆಸರುಗಳು
[ಬದಲಾಯಿಸಿ]ಪುರಾಣಗಳ ಪ್ರಕಾರ ಮೊದಲ ನಂದನು ಮಹಾಪದ್ಮ ಅಥವಾ ಮಹಾಪದ್ಮಪತಿ ಎಂದು ಮತ್ತು ಬೋಧಿವಂಶದ ಪ್ರಕಾರ ಉಗ್ರಸೇನ ಎಂಬ ಹೆಸರನ್ನು ಹೊಂದಿದನು.[೧] ಪುರಾಣಗಳು ಇವನನ್ನು ಎಲ್ಲ ಕ್ಷತ್ರಿಯರ ವಿನಾಶಕ ಎಂದು ವರ್ಣಿಸಿದವು.[೨]
ಜೀವನ
[ಬದಲಾಯಿಸಿ]ಪರಿಶಿಷ್ಟಪರ್ವನ್ ಮತ್ತು ಆವಶ್ಯಕ ಸೂತ್ರದಂತಹ ಜೈನ ಕೃತಿಗಳು ಇವನನ್ನು ಒಬ್ಬ ಗಣಿಕೆ ಮತ್ತು ಒಬ್ಬ ಕ್ಷೌರಿಕನ ಮಗನೆಂದು ವರ್ಣಿಸುತ್ತವೆ.[೩][೧]
ವಾಸ್ತವವಾಗಿ ಅವನ ತಂದೆ ಒಬ್ಬ ಕ್ಷೌರಿಕನಾಗಿದ್ದನು, ಮತ್ತು ತನ್ನ ದಿನದ ವರಮಾನದಿಂದ ಕಷ್ಟದಿಂದ ಹಸಿವನ್ನು ನಿವಾರಿಸಿಕೊಳ್ಳುತ್ತಿದ್ದನು. ಆದರೆ, ವ್ಯಕ್ತಿತ್ವದಲ್ಲಿ ಯೋಗ್ಯನಿದ್ದ ಕಾರಣ ರಾಣಿಯ ಅಕ್ಕರೆಯನ್ನು ಗಳಿಸಿದ್ದನು ಮತ್ತು ಅವಳ ಪ್ರಭಾವದಿಂದ ಆಳುತ್ತಿದ್ದ ರಾಜನ ವಿಶ್ವಾಸ ಪಡೆದುಕೊಂಡನು. ಆದರೆ ನಂತರ, ಅವನು ತನ್ನ ಸಾರ್ವಭೌಮನನ್ನು ಮೋಸದಿಂದ ಕೊಲೆ ಮಾಡಿದನು, ಮತ್ತು ರಾಜನ ಮಕ್ಕಳಿಗೆ ಪೋಷಕನಾಗಿ ಕಾರ್ಯನಿರ್ವಹಿಸುವ ಸೋಗಿನಲ್ಲಿ ಸರ್ವೋಚ್ಚ ಅಧಿಕಾರವನ್ನು ಆಕ್ರಮಿಸಿಕೊಂಡನು, ಮತ್ತು ಯುವ ರಾಜಕುಮಾರನನ್ನು ಸಾಯಿಸಿ ಪ್ರಸಕ್ತ ರಾಜನಿಗೆ ಜನ್ಮವಿತ್ತನು.[೪]
— ಕರ್ಟಿಯಸ್
ಎಂದು ರೋಮನ್ ಇತಿಹಾಸಕಾರ ಕರ್ಟಿಯಸ್ ತಿಳಿಸುತ್ತಾನೆ.
ಒಬ್ಬ ಭಾರತಾದ್ಯಯನಕಾರನು ನಂದನ ಪಟ್ಟಾಭಿಷೇಕ ಕ್ರಿ.ಪೂ. ೩೮೨ ಎಂದು ಕಾಲನಿರ್ಣಯ ಮಾಡಿದನು, ಮತ್ತೊಬ್ಬರು ಇದನ್ನು ಕ್ರಿ.ಪೂ. ೩೬೪ ಎಂದು ಕಾಲನಿರ್ಣಯ ಮಾಡಿದರು.[೫] ಆದರೆ, ರಾಯ್‍ಚೌಧರಿ ಈ ಘಟನೆಯನ್ನು ಸು. ಕ್ರಿ.ಪೂ. ೩೪೫ ಎಂದು ನಿಗದಿ ಮಾಡುತ್ತಾರೆ.[೬]
ಪುರಾಣಗಳ ಪ್ರಕಾರ, ಮಹಾಪದ್ಮನಿಗೆ ಎಂಟು ಪುತ್ರರಿದ್ದರು.[೨] ಇವನು ಪಾಂಚಾಲ, ಕಾಸಿ, ಹೈಹಯ, ಕಲಿಂಗ[lower-alpha ೧], ಅಶ್ಮಕ, ಕುರು, ವಿದೇಹ, ಶೂರಸೇನ, ವಿತಿಹೋತ್ರ ಸೇರಿದಂತೆ ಅನೇಕ ರಾಜ್ಯಗಳನ್ನು ಪರಾಜಿತಗೊಳಿಸಿದನು.[೯]
ಟಿಪ್ಪಣಿಗಳು
[ಬದಲಾಯಿಸಿ]ಆಧಾರಗಳು
[ಬದಲಾಯಿಸಿ]- ↑ ೧.೦ ೧.೧ Sastri 1988, p. 13.
- ↑ ೨.೦ ೨.೧ Mookerji 1988, p. 8.
- ↑ Mookerji 1988, p. 14.
- ↑ Sastri 1988, p. 14.
- ↑ Sethna 2000.
- ↑ Panda 2007, p. 28.
- ↑ Raychaudhuri & Mukherjee 1996, pp. 204–209.
- ↑ Raychaudhuri & Mukherjee 1996, pp. 270–271.
- ↑ Sastri 1988, p. 17.
ಉಲ್ಲೇಖಗಳು
[ಬದಲಾಯಿಸಿ]- Mookerji, Radha Kumud (1988) [first published in 1966], Chandragupta Maurya and his times (4th ed.), Motilal Banarsidass, ISBN 81-208-0433-3
- Panda, Harihar (2007), Prof. H.C. Raychaudhuri, as a Historian, Northern Book Centre, ISBN 81-7211-210-6
- Raychaudhuri, H. C.; Mukherjee, B. N. (1996), Political History of Ancient India: From the Accession of Parikshit to the Extinction of the Gupta Dynasty, Oxford University Press
- Sastri, K. A. Nilakanta, ed. (1988) [1967], Age of the Nandas and Mauryas (Second ed.), Delhi: Motilal Banarsidass, ISBN 81-208-0465-1
{{citation}}
: Unknown parameter|editorlink=
ignored (help) - Sethna, K. D. (2000), Problems of Ancient India, ನವ ದೆಹಲಿ: Aditya Prakashan, ISBN 81-7742-026-7
- Smith, Vincent A. (1999), The Early History of India (third ed.), Atlantic Publishers and distributors, ISBN 978-81-7156-618-1
- Smith, Vincent A. (2008) [1906], Jackson, A. V. Williams (ed.), History of India, in Nine Volumes, vol. II - From the Sixth Century B.C. to the Mohammedan Conquest, Including the Invasion of Alexander the Great, Cosimo Classics, ISBN 978-1-60520-492-5