ವಿಷಯಕ್ಕೆ ಹೋಗು

ಮಸಾಲೆ ದೋಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಸಾಲಾ ದೋಸಾ ಅಥವಾ ಮಸಾಲೆ ದೋಸೆ ಎಂಬುದು ಒಂದು ಪ್ರಸಿದ್ಧ ದಕ್ಷಿಣ ಭಾರತದ ಆಹಾರ. ದೋಸೆಯಲ್ಲಿ ಸ್ವಲ್ಪ ಮಾರ್ಪಾಡು ಮತ್ತು ಇದರ ಉಗಮವು ಮಂಗಳೂರಿನ ತುಳುವರಿಂದ ಆಯಿತು. ಭಾರತದಾದ್ಯಂತ ಉಡುಪಿ ಹೋಟೆಲ್ (ಗಳು) ನವರು ಇದನ್ನು ಜನಪ್ರಿಯಗೊಳಿಸಿದರು.https://www.tripadvisor.in/ShowUserReviews-g737164-d3912326-r326731026-Mitra_Samaj-Udupi_Udupi_District_Karnataka.html ಇದನ್ನು ಅಕ್ಕಿ, ಮಸೂರ, ಆಲೂಗಡ್ಡೆ, ಮೆಂತ್ಯ, ಕರಿಬೇವುಗಳಿಂದ ತಯಾರಿಸಲಾಗುತ್ತದೆ ಮತ್ತು ಚಟ್ನಿ ಮತ್ತು ಸಾಂಬಾರ್ ನಿಂದ ಬಡಿಸಲಾಗುತ್ತದೆ. ದಕ್ಷಿಣ ಭಾರತದಲ್ಲಷ್ಟೇ ಜನಪ್ರಿಯವಾಗಿಲ್ಲದೆ, ಇದು ದೇಶದ ಇತರ ಭಾಗಗಳಲ್ಲಿಯೂ ಮತ್ತು ಸಾಗರೋತ್ತರದಲ್ಲಿಯೂ ಸಹ ಕಾಣಬಹುದು. ದಕ್ಷಿಣ ಭಾರತದಲ್ಲಿ ಮಸಾಲಾ ದೋಸೆಯ ತಯಾರಿ ನಗರದಿಂದ ನಗರಕ್ಕೇ ಬದಲಾಗುತ್ತದೆ.

ತಮಿಳರ ಮೂಲತಃ ದೋಸೆ ದಪ್ಪ ಮತ್ತು ಮೃದುವಾದದ್ದು. ಈ ದಿನಗಳಲ್ಲಿ ಕುರುಕುರು ಅಥವಾ ಗರಿಯಾದ, ತೆಳುವಾದ ದೋಸೆಗಳು ಪ್ರಸಿದ್ದ ಮತ್ತು ಇದನ್ನು ಮೊದಲು ಕರ್ನಾಟಕದಲ್ಲಿ ಮಾಡಲಾಯಿತು.

ಮಸಾಲೆ ದೋಸೆ

ಪೌಷ್ಟಿಕ ಮೌಲ್ಯ

[ಬದಲಾಯಿಸಿ]

ದೋಸೆ ಪರಿಪೂರ್ಣ ಉಪಹಾರ ಖಾದ್ಯ ಮತ್ತು ರಸ್ತೆ ಆಹಾರವಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚು ಮತ್ತು ಸ್ಯಾಚುರೇಟೆಡ್ ಕೊಬ್ಬು ಅಥವಾ ಯಾವುದೇ ಸಕ್ಕರೆ ಇಲ್ಲ. ಅದರಲ್ಲಿ ಉದ್ದಿನ ಬೇಳೆ (ವಿಗ್ನೋ ಮುಂಗೋ) ಮತ್ತು ಅಕ್ಕಿಯಂತಹ ಪದಾರ್ಥಗಳನ್ನು ಹೊಂದಿದೆ, ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದರ ತಯಾರಿಯಲ್ಲಿ ಫರ್ಮೆಂಟೇಶನ್ ಕ್ರಿಯೆ ಒಳಗೊಂಡಿದ್ದು, ಇದು ವಿಟಮಿನ್ ಸಿ ಮತ್ತು ವಿಟಮಿನ್ ಬಿ ಪ್ರಮಾಣವನ್ನು ಹೆಚ್ಚಿಸುತ್ತದೆ. ದೋಸೆಯು ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದ್ದು ಮಧುಮೇಹ ಹೊಂದಿರುವವರು ಇದನ್ನು ತಪ್ಪಿಸಬೇಕು. ಇದು ಕಡಿಮೆ ಕ್ಯಾಲೋರಿ ಆದರೆ ಹೆಚ್ಚಿನ ಕೊಬ್ಬು ಹೊಂದಿದೆ.

ತಯಾರಿ

[ಬದಲಾಯಿಸಿ]

ಮಸಾಲಾ ದೋಸೆಯು ತುಂಬಿಸಲಾದ ದೋಸೆ. ಇದರಲ್ಲಿ ಎರಡು ಭಾಗಗಳಿವೆ: ದೋಸೆ ಮತ್ತು ತುಂಬುವುದು. ದೋಸೆಯನ್ನು

ಸಾಮಾನ್ಯವಾಗಿ ಅಕ್ಕಿ ಮತ್ತು ಮಸೂರವನ್ನು ರಾತ್ರಿ ನೀರಿನಲ್ಲಿ ನೆನೆಸಿ ಮತ್ತು ರುಬ್ಬಿ ಹಿಟ್ಟನ್ನು ಮಾಡಲಾಗುತ್ತದೆ. ಹುದುಗಿಸಿದ ಮಿಶ್ರಣವನ್ನು ದೋಸೆಯನ್ನು ಮಾಡಲು ಬಳಸಲಾಗುತ್ತದೆ.http://www.pbs.org/food/recipes/masala-dosa-south-indian-crepes/ ತುಂಬುವುದನ್ನು ಬೇಯಿಸಲಾದ ಆಲೂಗಡ್ಡೆ ಹಾಗೂ ಈರುಳ್ಳ್ಳಿಯಿಂದ ಮಾಡಲಾಗುತ್ತದೆ ಸಾಸಿವೆ ಬೀಜಗಳಿಂದ ಒಗ್ಗರಣೆ ಮತ್ತು ತುರಿದ ತೆಂಗಿನಕಾಯಿ, ಕೊತ್ತಂಬರಿ ಮತ್ತು ನಿಂಬೆ ರಸದಿಂದ ಅಲಂಕರಿಸಲಾಗುತ್ತದೆ.

ಮೈಸೂರು ಮಸಾಲೆ ದೋಸೆಯು ಕೆಂಪು ಚಟ್ನಿ ಹೊಂದಿದ್ದು ಕೆಂಪು ಮೆಣಸು, ಈರುಳ್ಳಿಯಿಂದ ಮಾಡಲಾಗುತ್ತದೆ ಮತ್ತು ಆಲೂಗಡ್ಡೆ ತುಂಬುವ ಮೊದಲು ಬೆಳ್ಳುಳ್ಳಿಯನ್ನು ದೋಸೆಯ ಒಳಗಡೆ ಹಚ್ಚಬೇಕು.

ಇದನ್ನು ಸಂಪೂರ್ಣ ಊಟ ಮಾಡಲು, ದೋಸೆ ಹೆಚ್ಚಾಗಿ ತರಕಾರಿಗಳು ಮತ್ತು ಸಾಸ್ ನಿಂದ ತುಂಬಿರುವುದು. ಸಾಮಾನ್ಯವಾಗಿ ಸಸ್ಯಾಹಾರಿ ಪದಾರ್ಥ ದೋಸೆಯೊಂದಿಗೆ ಬಡಿಸಲಾಗುತ್ತದೆ.

ಪದಾರ್ಥಗಳು

[ಬದಲಾಯಿಸಿ]

ಅಕ್ಕಿ, ಉದ್ದಿನಬೇಳೆ, ಸಾಸಿವೆ, ಮೆಂತ್ಯ ಬೀಜಗಳು, ಉಪ್ಪು, ಸಸ್ಯಜನ್ಯ ಎಣ್ಣೆ, ಆಲೂಗಡ್ಡೆ, ಈರುಳ್ಳಿ, ಹಸಿರು ಮೆಣಸು, ಕರಿಬೇವಿನ ಸೊಪ್ಪು, ಅರಶಿನ.

ಬದಲಾವಣೆಗಳು

[ಬದಲಾಯಿಸಿ]

ಮೈಸೂರು ಮಸಾಲೆ ದೋಸೆ, ರವಾ ಮಸಾಲೆ ದೋಸೆ, ಈರುಳ್ಳಿ ಮಸಾಲೆ ದೋಸೆ, ಕಾಗದದ ಮಸಾಲೆ ದೋಸೆ, ಮಿನಿ ಸೋಯಾ ದೋಸೆ, ಪೆಸರಟ್ಟು, ಬೆಣ್ಣೆ ದೋಸೆ.https://www.vegrecipesofindia.com/dosa-recipes/

ಉಲ್ಲೇಖಗಳು

[ಬದಲಾಯಿಸಿ]