ಮರಳುದಿಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರಳುದಿಣ್ಣೆಗಳು, ಯುನೈಟೆಡ್ ಅರಬ್ ಎಮಿರೇಟ್ಸ್

ಭೌತಿಕ ಭೂಗೋಳಶಾಸ್ತ್ರದಲ್ಲಿ, ಮರಳುದಿಣ್ಣೆಯು (ಮರಳುದಿಬ್ಬ) ವಾಯು ಸಂಬಂಧಿತ ಪ್ರಕ್ರಿಯೆಗಳಿಂದ (ಗಾಳಿ) ಅಥವಾ ನೀರಿನ ಹರಿವಿನಿಂದ ರೂಪಗೊಳ್ಳುವ ಸಡಿಲವಾದ ಮರಳಿನ ಗುಡ್ಡ.[೧] ಮರಳುದಿಣ್ಣೆಗಳು ವಿಭಿನ್ನ ಆಕಾರಗಳು ಮತ್ತು ಗಾತ್ರಗಳನ್ನು ಹೊಂದಿರುತ್ತವೆ. ಇವು ಗಾಳಿ ಅಥವಾ ನೀರಿನ ಹರಿವಿನೊಂದಿಗಿನ ಪರಸ್ಪರ ಕ್ರಿಯೆಯಿಂದ ರೂಪಗೊಳ್ಳುತ್ತವೆ. ಮರಳುದಿಣ್ಣೆಗಳು ನೈಸರ್ಗಿಕವಾಗಿರಬಹುದು, ಆದರೆ ಮಾನವ ನಿರ್ಮಿತವೂ (ಕೃತಕ) ಆಗಿರಬಹುದು.[೨][೩] ಬಹುತೇಕ ಬಗೆಗಳ ಮರಳುದಿಣ್ಣೆಗಳು ಮೇಲುಹರಿವಿನ ಪಾರ್ಶ್ವದಲ್ಲಿ ಹೆಚ್ಚು ಉದ್ದವಾಗಿರುತ್ತವೆ. ಈ ಬದಿಯಲ್ಲಿ ಮರಳುದಿಣ್ಣೆಯ ಮೇಲೆ ಮರಳು ನೂಕಲ್ಪಡುತ್ತದೆ. ಮರಳುದಿಣ್ಣೆಗಳು ಗಾಳಿಮರೆ ಪಾರ್ಶ್ವದಲ್ಲಿ ಹೆಚ್ಚು ಗಿಡ್ಡನೆಯ "ಜಾರು ಮುಖ"ವನ್ನು ಹೊಂದಿರುತ್ತವೆ. ಮರಳುದಿಣ್ಣೆಗಳ ನಡುವಿನ ಕಣಿವೆ ಅಥವಾ ಕುಳಿಯನ್ನು ಸ್ಲ್ಯಾಕ್ ಎಂದು ಕರೆಯಲಾಗುತ್ತದೆ.

ಮರಳುದಿಣ್ಣೆಗಳು ಕೆಲವು ಮರುಭೂಮಿಗಳು, ಒಳನಾಡು ಮತ್ತು ಕೆಲವು ಕರಾವಳಿಗಳುದ್ದಕ್ಕೆ ಕಾಣಿಸಿಕೊಳ್ಳುತ್ತವೆ. ಕೆಲವು ಕರಾವಳಿ ಪ್ರದೇಶಗಳು ತೀರರೇಖೆಗೆ ಸಮಾನಾಂತರವಾಗಿ ಸಾಗುವ, ಕಡಲತೀರದಿಂದ ನೇರವಾಗಿ ಒಳನಾಡಿನಲ್ಲಿರುವ ಒಂದು ಅಥವಾ ಹೆಚ್ಚು ಮರಳುದಿಣ್ಣೆ ಸಮೂಹಗಳನ್ನು ಹೊಂದಿರುತ್ತವೆ. ಬಹುತೇಕ ಸಂದರ್ಭಗಳಲ್ಲಿ, ಮರಳುದಿಣ್ಣೆಗಳು ಸಮುದ್ರದಿಂದ ಬರುವ ಬಿರುಗಾಳಿ ಅಲೆಗಳಿಂದ ಸಂಭಾವ್ಯ ಹಾವಳಿಯ ವಿರುದ್ಧ ನೆಲವನ್ನು ರಕ್ಷಿಸುವಲ್ಲಿ ಮುಖ್ಯವಾಗಿವೆ.

ಉಲ್ಲೇಖಗಳು[ಬದಲಾಯಿಸಿ]

  1. Fowler, H.W. (1984). Sykes, J.B. (ed.). The Concise Oxford Dictionary of Current English (7th ed.). Oxford: Clarendon Press. ISBN 978-0-19-861132-5.
  2. "Archived copy". Archived from the original on 17 November 2019. Retrieved 17 November 2019.{{cite web}}: CS1 maint: archived copy as title (link)
  3. https://www.ctc-n.org/sites/www.ctc-n.org/files/UNFCCC_docs/ref18x43_35.pdf