ವಿಷಯಕ್ಕೆ ಹೋಗು

ಭೂಮನ್ಯು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೂಮನ್ಯು
ಮಕ್ಕಳುದಿವಿರತ, ಸುಹೋತ್ರ, ಸುಹೋತ, ಸುಕವಿ, ಸುಯಜು ಮತ್ತು ಷಿಕ
ಗ್ರಂಥಗಳುಮಹಾಭಾರತ
ತಂದೆತಾಯಿಯರುಭರತ (ತಂದೆ), ಸುನಂದಾ (ತಾಯಿ)
ಪೂರ್ವಾಧಿಕಾರಿಭರತ
ಉತ್ತರಾಧಿಕಾರಿಸುಹೋತ್ರ

ಭೂಮನ್ಯು ಹಿಂದೂ ಸಾಹಿತ್ಯದಲ್ಲಿ ಚಂದ್ರವಂಶವೆಂಬ ರಾಜವಂಶದ ರಾಜ. ಭೂಮನ್ಯುವು ಭರತನ ಮಗ ಹಾಗೆಯೇ ದುಷ್ಯಂತನ ಮೊಮ್ಮಗ. ಭೂಮನ್ಯುವಿನ ವಂಶವು ಮಹಾಭಾರತದಲ್ಲಿ ಕಾಣಿಸಿಕೊಂಡಿದೆ. [೧]

ದಂತಕಥೆ[ಬದಲಾಯಿಸಿ]

ಮಹಾಭಾರತವು ಭೂಮನ್ಯುವಿನ ಜನ್ಮದ ಎರಡು ವಿಭಿನ್ನ ಮೂಲಗಳನ್ನು ನೀಡುತ್ತದೆ: ಮೊದಲ ದಂತಕಥೆಯು ಭರತನು ಕಾಶಿ ಸಾಮ್ರಾಜ್ಯದ ರಾಜ ಸರ್ವಸೇನನ ಮಗಳು ಸುನಂದಾಳನ್ನು ವಿವಾಹವಾದನು ಮತ್ತು ಅವಳಿಂದ ಭೂಮನ್ಯು ಎಂಬ ಮಗನನ್ನು ಪಡೆದನು ಎಂದು ಹೇಳುತ್ತದೆ. ಇನ್ನೊಂದು ದಂತಕಥೆಯ ಪ್ರಕಾರ, ಭರದ್ವಾಜ ಋಷಿಯ ಸೂಚನೆಯ ಮೇರೆಗೆ ಭರತನು ಮಾಡಿದ ಯಜ್ಞದಿಂದ ಭೂಮನ್ಯು ಜನಿಸಿದನು. [೨]

ಮಹಾಕಾವ್ಯದಲ್ಲಿ ಭೂಮನ್ಯು ಪ್ರಬುದ್ಧ ವಯಸನ್ನು ತಲುಪಿದ ನಂತರ ಅವನ ತಂದೆ ಭರತನು ಅವನ ರಾಜ್ಯದ ವ್ಯವಹಾರಗಳನ್ನು ಅವನಿಗೆ ವಹಿಸಿದನು. ಭೂಮನ್ಯು ಮತ್ತು ಹೆಂಡತಿ ಪುಷ್ಕರಿಣಿ ಇವರಿಗೆ ಆರು ಗಂಡು ಮಕ್ಕಳಿದ್ದರು. ಅವರೆಂದರೆ - ದಿವಿರತ, ಸುಹೋತ್ರ, ಸುಹೋತ, ಸುಕವಿ, ಸುಯಜು, ಮತ್ತು ಷಿಕ. [೩] ಭೂಮನ್ಯುವಿನ ನಂತರ ಅವನ ಮಗ ಸುಹೋತ್ರನು ಪಟ್ಟಾಭಿಷಿಕ್ತನಾದನು. [೪]

ಉಲ್ಲೇಖಗಳು[ಬದಲಾಯಿಸಿ]

  1. Ganguli, Kisari Mohan. "The Mahabharata of Krishna-Dwaipayana". Internet Sacred Text Archive. Vyasa.
  2. Bhúmanyu.
  3. www.wisdomlib.org (2012-06-29). "Bhumanyu, Bhūmanyu: 6 definitions". www.wisdomlib.org (in ಇಂಗ್ಲಿಷ್). Retrieved 2022-11-27.
  4. www.wisdomlib.org (2019-01-28). "Story of Suhotra". www.wisdomlib.org (in ಇಂಗ್ಲಿಷ್). Retrieved 2022-11-27.
"https://kn.wikipedia.org/w/index.php?title=ಭೂಮನ್ಯು&oldid=1229578" ಇಂದ ಪಡೆಯಲ್ಪಟ್ಟಿದೆ