ಭೀಮಾ ದೇವಿ ದೇವಾಲಯ ತಾಣದ ಸಂಗ್ರಹಾಲಯ
ತನ್ನ ಕಾಮಪ್ರಚೋದಕ ಶಿಲ್ಪಕಲೆಗಳಿಗೆ ಉತ್ತರ ಭಾರತದ ಖಜುರಾಹೊ ಎಂಬ ಅಡ್ಡಹೆಸರು ಪಡೆದಿರುವ ಭೀಮಾ ದೇವಿ ದೇವಾಲಯ ಸಂಕೀರ್ಣವು ಭಾರತದ ಹರಿಯಾಣ ರಾಜ್ಯದ ಪಂಚಕುಲ ಜಿಲ್ಲೆಯ ಪಿಂಜೋರ್ ಪಟ್ಟಣದಲ್ಲಿದ್ದು ಕ್ರಿ.ಶ 8 ರಿಂದ 11 ನೇ ಶತಮಾನದ ನಡುವಿನದ್ದೆಂದು ಕಾಲನಿರ್ಧಾರ ಮಾಡಲಾಗಿರುವ ಒಂದು ಪ್ರಾಚೀನ ಹಿಂದೂ ದೇವಾಲಯದ ಪುನಃಸ್ಥಾಪಿತ ಅವಶೇಷಗಳನ್ನು ಒಳಗೊಂಡಿದೆ. ಜೊತೆಗೆ ಪಕ್ಕದಲ್ಲಿ 17 ನೇ ಶತಮಾನದ ಪಿಂಜೋರ್ ಉದ್ಯಾನವನಗಳು (ಮುಘಲ್ ಉದ್ಯಾನಗಳ ಒಂದು ರೂಪಾಂತರ) ಇವೆ.[೧][೨][೩] ಹಳೆಯ ದೇವಾಲಯವನ್ನು ಇಸ್ಲಾಮೀ ಆಕ್ರಮಣಕಾರರು ನಾಶಪಡಿಸಿದರು ಮತ್ತು ಈಗಿನ ಕ್ರಿ.ಶ. 8-11 ನೇ ಶತಮಾನದ ದೇವಾಲಯವನ್ನು ಸಂಭಾವ್ಯವಾಗಿ ಅದೇ ಸ್ಥಳದಲ್ಲಿ ಹಳೆಯ ಹೆಸರಿನಲ್ಲಿ ನಿರ್ಮಿಸಲಾಗಿದೆ, ಮತ್ತು ಹತ್ತಿರದ ಪ್ರಾಚೀನ ಮೆಟ್ಟಿಲುಬಾವಿಯಲ್ಲಿ ಈಗಲೂ ಹಳೆಯ ಹಿಂದೂ ಸ್ತಂಭಗಳಿವೆ.[೪] ಭೀಮಾದೇವಿ ಬೌದ್ಧ ತಾಂತ್ರಿಕ ದೇವತೆಯಿಂದ ಹುಟ್ಟಿಕೊಂಡ ಶಕ್ತಿ ಸಂಪ್ರದಾಯಕ್ಕೆ ಸೇರಿದವಳು. ಇದಲ್ಲದೆ, ದೇವಿ ಮಾಹಾತ್ಮ್ಯದಲ್ಲಿ, ಹಿಮಾಚಲ ಪ್ರದೇಶದ ಪಶ್ಚಿಮ ಹಿಮಾಲಯದಲ್ಲಿ (ಪಿಂಜೋರ್ ಪ್ರದೇಶವು ಹಿಮಾಚಲ ಹಿಮಾಲಯಕ್ಕೆ ಹೊಂದಿಕೊಂಡಿದೆ), ಭೀಮಾದೇವಿ ಭೀಮಾರೂಪ ( ಭೀಮನ ರೂಪ) ದ ಅಗಾಧ ರೂಪದಲ್ಲಿ ಕಾಣಿಸಿಕೊಂಡಳು ಮತ್ತು ಋಷಿಮುನಿಗಳಿಗೆ ರಕ್ಷಣೆ ನೀಡಿದಳು ಎಂದು ಹೇಳಲಾಗಿದೆ.[೫]
ಭೀಮಾ ದೇವಿ ದೇವಾಲಯವನ್ನು ಗುರ್ಜರ-ಪ್ರತಿಹಾರರ ಆಳ್ವಿಕೆಯ ಅವಧಿಯಲ್ಲಿ ಕೆತ್ತಲಾಗಿದೆ. ಇರುವ ಬಹುತೇಕ ಶಿಲ್ಪಗಳು ಮತ್ತು ವಾಸ್ತುಕಲೆಯನ್ನು ಮೊಘಲ್ ಅವಧಿಯಲ್ಲಿ ಔರಂಗಜೇಬ್‍ನ ಕೆಳಗೆ ನಾಶಮಾಡಲಾಯಿತು. ಇವು ಗುರ್ಜರ-ಪ್ರತಿಹಾರರ ಕಾಲದ್ದಾಗಿವೆ.[೬] ಅಗೆದು ತೆಗೆದ ಆವಿಷ್ಕಾರಗಳು 100 ಕ್ಕೂ ಹೆಚ್ಚು ಪುರಾವಸ್ತು ಶೋಧನಾ ಶಿಲ್ಪಗಳನ್ನು ಒಳಗೊಂಡಿವೆ.
ಛಾಯಾಂಕಣ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Bhima Devi Temple". Government of Haryana Tourism Department. Archived from the original on 25 September 2010. Retrieved 2009-08-29.
- ↑ "Haryana CM asks to develop Bhima Devi temple". Punjab Newsline. 2007-07-05. Archived from the original on 26 May 2009. Retrieved 2009-08-29.
- ↑ "Bhima Devi Museum Opens to Public on 13th July". Press release by Government of Haryana, Tourism Department. Retrieved 2009-08-29.
- ↑ Haryana Gazateer, Revennue Dept of Haryana, Capter-V.
- ↑ Hāṇḍā, Omacanda (2001). Temple architecture of the western Himalaya: wooden temples. Indus Publishing. p. 237. ISBN 978-81-7387-115-3. Retrieved 2009-08-29.
{{cite book}}
:|work=
ignored (help) - ↑ Archaeological Survey of India (1978). Indian archaeology, a review. Archaeological Survey of India. p. 113.