ಭಾರತೀಯ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ಚಲಾವಣೆ ರದ್ದತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೋಟು ಅಮಾನ್ಯೀಕರಣ[ಬದಲಾಯಿಸಿ]

ಭಾರತದ ಪ್ರಧಾನಿ ನರೇಂದ್ರ ಮೋದಿ: ಸೆಪ್ಟೆಂಬರ್ 23, 2015.(cropped)
  • ಭಾರತ ಸರ್ಕಾರ ಬುಧವಾರ 9 ನವೆಂಬರ್ 2016 ರಿಂದ ಎಲ್ಲಾ ರೂ..500 ಮತ್ತು ರೂ. 1000 ಬ್ಯಾಂಕ್-ನೋಟುಗಳ ಅಮಾನ್ಯೀಕರಣವನ್ನು ಘೋಷಣೆ ಮಾಡಿದ್ದು, ಭಾರತದಲ್ಲಿ ಕಾನೂನು ಬದ್ಧವಾಗಿ ಮಹಾತ್ಮ ಗಾಂಧಿ ಸರಣಿಯ ರೂ.1000 ಬ್ಯಾಂಕ್ ನೋಟುಗಳ ಮೌಲ್ಯವನ್ನು (ನವೆಂಬರ್ 08,2016 ಮದ್ಯರಾತ್ರಿಯಿಂದ) ರದ್ದುಗಳಿಸುತ್ತಿರುವುದಾಗಿ 8 ನವೆಂಬರ್ 2016 ರಲ್ಲಿ ಘೋಷಿಸಲಾಯಿತು.[೧]
  • ಭಾರತ ಪ್ರಧಾನಿ ನರೇಂದ್ರ ಮೋದಿಯವರು 8:15 ರಾತ್ರಿ ಹೊಸದಿಲ್ಲಿಯಲ್ಲಿ ಈ ಪ್ರಕಟಣೆ ಮಾಡಿದರು. ಅದೇ ದಿನ ಮೋದಿಯವರಿಂದ ರಾಷ್ಟ್ರಕ್ಕೆ ಒಂದು ಅನಿಗದಿತ ನೇರ ಪ್ರಸಾರ ಭಾಷಣದಲ್ಲಿ ಮಹಾತ್ಮ ಗಾಂಧಿ ಸರಣಿಯ ಎಲ್ಲಾ ರೂ. 500 ಮತ್ತು ರೂ. 1000 ಬ್ಯಾಂಕ್ ನೋಟುಗಳ ಪರಿಚಲನೆ ಅಮಾನ್ಯವಾಗಿದೆ ಎಂದು ಘೋಷಿಸಿ ಈ ಪ್ರಕಟಣೆ ಮಾಡಲ್ಪಟ್ಟಿತು. ಹಳೆಯ ಬ್ಯಾಂಕ್‍ನೋಟುಗಳನ್ನು ಮಹಾತ್ಮ ಗಾಂಧಿ ಹೊಸ ಸರಣಿಯ, ಹೊಸ ರೂ.500 ಮತ್ತು ರೂ. 2000 ಬ್ಯಾಂಕ್ ನೋಟುಗಳ ನೀಡಿಕೆಯ ವಿನಿಮಯವನ್ನು ಘೋಷಿಸಿತು.[೨][೩].

ಅಮಾನ್ಯೀಕರಣಕ್ಕೆ ರಿಸರ್ವ್ ಬ್ಯಾಂಕಿನ ಅನುಮತಿ ಇರಲಿಲ್ಲ[ಬದಲಾಯಿಸಿ]

ಎಲ್ಲಾ ರೂ..500 ಮತ್ತು ರೂ. 1000 ಬ್ಯಾಂಕ್-ನೋಟುಗಳ ರದ್ದು ಮಾಡಲು ಅಥವಾ ಅಮಾನ್ಯೀಕರಣವನ್ನು ಘೋಷಣೆ ಮಾಡಲು ಮೋದಿಯವರು ರಿಸರ್ವ್ ಬ್ಯಾಂಕಿನ ಅನುಮತಿಗೂ ಕಾಯಲಿಲ್ಲವೆಂದು ತಿಳಿದುಬಂದಿದೆ. ಏಕ ಪಕ್ಷೀಯವಾಗಿ ಒಬ್ಬರೇ ತೀರ್ಮಾನ ತೆಗೆದುಕೊಂಡರು. ಆರ್.ಬಿ.ಐ ನಿರ್ದೇಶಕರು ಹೆಚ್ಚಿನ ಕಪ್ಪು ಹಣವನ್ನು ಚಿನ್ನದ ಅಥವಾ ರಿಯಲ್ ಎಸ್ಟೇಟ್ನಂತಹ ನೈಜ ವಲಯದ ಸ್ವತ್ತುಗಳ ರೂಪದಲ್ಲಿ ಇಡಲಾಗಿದೆಯೆಂದು ಡಮತ್ತು ಹಣದ ರೂಪದಲ್ಲಿ ಅಲ್ಲ, ಮತ್ತು ಆ ಅಮಾನ್ಯೀಕರಣ ದುರ್ಘಟನೆಯು ಆ ಸ್ವತ್ತುಗಳ ಮೇಲೆ ಯಾವುದೇ ವಸ್ತು ಪ್ರಭಾವ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ದುಷ್ಪರಿಣಾಮವು ಅಲ್ಪಾವಧಿಯಲ್ಲಿ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆಂದು ಅದು ಹೇಳಿದೆ.[೪]. ಈ ಬಗ್ಗೆ ಆರ್‌ಟಿಐ ಅನ್ವಯ ಮಾಹಿತಿ ಕೇಳಿದಾಗ ಆರ್.ಬಿ. ಐ. ವಿವರ ನೀಡಿದೆ. ಅದರ ಪ್ರಕಾರ ಆರ್‌ಬಿಐ ಅನುಮೋದನೆಗೂ ಮೊದಲೇ ನೋಟ್‌ ಬ್ಯಾನ್‌ ಘೋಷಣೆ ಆಗಿತ್ತು.[೫]

ಉದ್ದೇಶ[ಬದಲಾಯಿಸಿ]

  • ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು, ಭಯೋತ್ಪಾದನೆ ತಡೆಗೆ ಅಚ್ಚರಿಯ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದ ರೂ.500 ಮತ್ತು ರೂ.1,000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದೆ. ಇದೇ ಮೊದಲ ಬಾರಿ ಸುದ್ದಿ ವಾಹಿನಿಗಳ ಮೂಲಕ ಅನಿರೀಕ್ಷಿತವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ನಿರ್ಧಾರ ಪ್ರಕಟಿಸಿದರು.

ಜಮಾ ಮತ್ತು ಬದಲಾವಣೆಗೂ ಅವಕಾಶ[ಬದಲಾಯಿಸಿ]

ಹೌರಾ - ರೂಪಾಯಿ 100 ನೋಟ್‍ಗಳಿಗಾಗಿ ಎಟಿಎಂ ನಲ್ಲಿ ಕ್ಯೂ 2016-11-08 1773
  • ರೂ.500, ರೂ.1,000 ನೋಟುಗಳನ್ನು ಹೊಂದಿರುವವರು ಅವುಗಳನ್ನು ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಲ್ಲಿನ ಖಾತೆಗೆ ಜಮಾ ಮಾಡಬಹುದು. ನವೆಂಬರ್‌ 10ರಿಂದ ಡಿಸೆಂಬರ್‌ 30ರವರೆಗೆ ಇದಕ್ಕೆ ಅವಕಾಶ ಇತ್ತು.
  • ರೂ.100 ಮತ್ತು ಅದಕ್ಕಿಂತ ಕಡಿಮೆ ಮುಖಬೆಲೆಯ ಎಲ್ಲ ನೋಟುಗಳು ಮತ್ತು ನಾಣ್ಯಗಳು ಅಸ್ತಿತ್ವದಲ್ಲಿ ಇರುತ್ತವೆ. ರೂ.500 ಮತ್ತು ರೂ.2,000 ಮುಖಬೆಲೆಯ ಹೊಸ ನೋಟುಗಳು ಒಂದೇ ವಅರದಲ್ಲಿ ಚಾಲ್ತಿಗೆ ಬಂದವು.
ರೂಪಾಯಿ 500 ಮತ್ತು 1000 ನೋಟ್‍ಗಳ ವಿನಿಮಯಕ್ಕೆ: ಬ್ಯಾಂಕಿನಲ್ಲಿ ಕ್ಯೂ- ಸಾಲ್ಟ್ ಲೇಕ್ ಸಿಟಿ - ಕೋಲ್ಕತಾ:2016-11-10 02103
  • ಜನರು ತಮ್ಮಲ್ಲಿರುವ ರೂ.500 ಮತ್ತು ರೂ.1,000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ ಅಥವಾ ಅಂಚೆ ಕಚೇರಿ ಮೂಲಕ ಕಡಿಮೆ ಮುಖಬೆಲೆಯ ನೋಟುಗಳಿಗೆ ಬದಲಾಯಿಸಿಕೊಳ್ಳುವುದಕ್ಕೂ ಅವಕಾಶ ಇತ್ತು. ಆದರೆ ಒಬ್ಬ ವ್ಯಕ್ತಿ ದಿನಕ್ಕೆ ರೂ.4,000 ಮೌಲ್ಯದ ನೋಟುಗಳನ್ನು ಮಾತ್ರ ಬದಲಿಸಿಕೊಳ್ಳಬಹುದಾಗಿತ್ತು. ಆದರೆ, ಇದಕ್ಕಾಗಿ ಸರ್ಕಾರ ನೀಡಿರುವ ಪ್ಯಾನ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಆಧಾರ್‌ ಸಂಖ್ಯೆಯಂತಹ ದಾಖಲೆಗಳನ್ನು ನೀಡುವುದು ಕಡ್ಡಾಯವಾಗಿತ್ತು.[೬]

ಹಣ ಚಲಾವಣೆ ಇರುವ ಸ್ಥಳ[ಬದಲಾಯಿಸಿ]

ಕಾನ್ಪುರದಲ್ಲಿ ದಾರುಣ ಘಟನೆ
  • A three-year-old girl died in a bank in Uttar Pradesh on Monday as her labourer father waited in a line to withdraw money for her treatment while a college student allegedly hanged himself after returning empty-handed the fourth time, police said.
  • ಮೂರು ವರ್ಷದ ಹುಡುಗಿಯ ಕಾರ್ಮಿಕ ತಂದೆ ಅವಳ ಚಿಕಿತ್ಸೆಗಾಗಿ ಹಣ ಹಿಂತೆಗೆದುಕೊಳ್ಳಲು ಸೋಮವಾರ ಉತ್ತರ ಪ್ರದೇಶದ ಒಂದು ಬ್ಯಾಂಕ್ ಸಾಲಿನಲ್ಲಿ ಕಾಯುತ್ತಿದ್ದರು. ಆಗ ಆ ಹುಡುಗಿ ಚಿಕಿತ್ಸೆ ಇಲ್ಲದೆ ಮರಣಹೊಂದಿದಳು ಮತ್ತು ಒಬ್ಬ ಕಾಲೇಜು ವಿದ್ಯಾರ್ಥಿ ನಾಲ್ಕನೇ ಬಾರಿಗೆ ಬರಿಗೈಯಲ್ಲಿ ಬ್ಯಾಂಕಿನಿಂದ ಹಿಂದಿರುಗಿದ ನಂತರ ಸ್ವತಃ ನೇಣು ಬಿಗಿದುಕೊಂಡು ಸಾವಿಗೀಡಾದ, ಎಂದು ಪೊಲೀಸರು ತಿಳಿಸಿದರು.[೭]
.
  • ರೈಲ್ವೆ, ವಿಮಾನ, ಸರ್ಕಾರಿ ಬಸ್ ಟಿಕೆಟ್‌ ಬುಕಿಂಗ್‌ಗೆ, ಆಸ್ಪತ್ರೆಗಳಲ್ಲಿ, ಪೆಟ್ರೋಲ್‌ ಬಂಕ್‌ಗಳಲ್ಲಿ ₹ 500, ₹ 1,000 ಮುಖಬೆಲೆಯ ನೋಟುಗಳನ್ನು ನವೆಂಬರ್‌ 11ರ ಮಧ್ಯರಾತ್ರಿವರೆಗೆ ಬಳಸಬಹುದಾಗಿತ್ತು.

ಮಿತಿ ಇಲ್ಲದ ವಹಿವಾಟುಗಳು[ಬದಲಾಯಿಸಿ]

ಚೆಕ್‌, ಡಿ.ಡಿ, ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ನಡೆಯುವ ವಹಿವಾಟು, ಎಲೆಕ್ಟ್ರಾನಿಕ್‌ ಹಣ ವರ್ಗಾವಣೆಗೆ ಮಿತಿ ಇಲ್ಲ, ನಿರ್ಬಂಧವೂ ಇಲ್ಲ.

ಹೊಸ ನೋಟು[ಬದಲಾಯಿಸಿ]

ರೂ. 500 ಮತ್ತು ರೂ.2,000 ಮುಖಬೆಲೆಯ ಹೊಸ ನೋಟುಗಳು ಶೀಘ್ರದಲ್ಲೇ ಚಲಾವಣೆಗೆ ಬಂದವು.

ಬದಲಾಯಿಸುವ ಮತ್ತು ಹಣಪಡೆಯುವ ಕ್ರಮ[ಬದಲಾಯಿಸಿ]

  • ದಂಡ ವಿಧಿ->
ದಂಡ ವಿಧಿ
  • ಕಪ್ಪುಹಣ:
  • ವ್ಯಕ್ತಿಯ ಆದಾಯದ ಮೂಲಕ್ಕೆ ಸರಿಯಾದ ಪುರಾವೆ ಅಥವಾ ಆಧಾರ ಇರದಿದ್ದರೂ ಒಂದಿಷ್ಟು ಆದಾಯ ಕಪ್ಪುಹಣದ ಸಾಲಿಗೇ ಸೇರುತ್ತಿತ್ತು.
  • ಆದಾಯಕ್ಕೆ ಆಧಾರ ಬೇಕು:
  • ಸಣ್ಣ ವ್ಯಾಪಾರಿಗಳು, ಗೃಹಿಣಿಯರು, ಕಲಾವಿದರು, ಕೃಷಿಕರು ಕಾರ್ಮಿಕ ಮುಂತಾದವರು ರೂ.2.50 ಲಕ್ಷಗಳ ತನಕ ಬ್ಯಾಂಕಿನಲ್ಲಿ ಜಮೆ ಮಾಡುವುದನ್ನು ಆದಾಯತೆರಿಗೆ ಇಲಾಖೆಯ ಗಮನಕ್ಕೆ ತರಲಾಗುವುದಿಲ್ಲ ಎನ್ನುವುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.ಆದರೆ ರೂ.50 ಸಾವಿರ-ಅಥವಾ ಮೇಲೆ ಜಮಾಕಟ್ಟಿದರೆ ಪಾನ್ ಕಾರ್ಡ ನಂ.ಒದಗಿಸಬೇಕಾಗಿತ್ತು. ನಿಜವಾಗಿ ದುಡಿದು ಉಳಿಸಿ, ಮನೆಯಲ್ಲಿ ಶೇಖರಿಸಿಟ್ಟ ಹಣ ಬಳಿಯಲ್ಲಿ ಇದ್ದರೆ ಯಾರೊಬ್ಬರೂ ಭಯಪಡುವ ಅವಶ್ಯವಿಲ್ಲ ಎಂದರು. ತೆರಿಗೆ ಇಲಾಖೆ ಕೇಳಿದರೆ ಆದರೆ ಲೆಕ್ಕ ತೋರಿಸ ಬೇಕಿತ್ತು. ಒಟ್ಟಿನಲ್ಲಿ ನೀವು ಜಮಾ ಮಾಡುವ ಹಣದ ಆದಾಯದ ಮೂಲಕ್ಕೆ ಏನಾದರೂ ಆಧಾರವಿರಲಿ ಎನ್ನುವುದನ್ನು ಎಂದಿಗೂ ಮರೆಯದಿರಿ.; ಇಲ್ಲ ನಿಮ್ಮ ಒಟ್ಟಿನ ಆದಾಯ ತೆರಿಗೆ ಮಿತಿಯಲ್ಲಿದೆ ಎಂದು ತೋರಿಸಬೇಕು' ಎಂಬ ನಿಯಮ ಇತ್ತು. ಸರಳವಿರಲಿಲ್ಲ ಉಳಿಸಿದ ಹಣ ಕಟ್ಟುವುದು. ನೋಡಿ:ಆದಾಯ ತೆರಿಗೆ
  • ನಿಯಮಗಳು-:
  • ಶೇ 200 ರಷ್ಟು ದಂಡ:
  • ತುಂಬುವ ಹಣ ತೆರಿಗೆಗೆ ಅರ್ಹವಾಗಿದ್ದು, ಕೊಡದೇ ಇರುವ ಹಣವೆಂದು ಸಾಬೀತಾದಲ್ಲಿ ತೆರಿಗೆಯ ಹಣದ ಶೇ 200 ರಷ್ಟು ದಂಡ ವಿಧಿ ಸಲಾಗುವುದು. ಎಂಬ ನಿಯಮ;
  • ವ್ಯಕ್ತಿಗಳ ಆದಾಯ ತೆರಿಗೆ ಮಿತಿ ಉದಾ: ರೂ.2.50 ಲಕ್ಷ, ರೂ.30 ಲಕ್ಷ, ರೂ.50 ಲಕ್ಷ ಇದ್ದರೆ ಅನ್ವಯಿಸುವುದಿಲ್ಲ. ಇದೇ ವೇಳೆ ರೂ.500, ರೂ. 1,000 ನೋಟುಗಳನ್ನು ಇದೇ ಅವಧಿಯಲ್ಲಿ ನಗದಾಗಿ ಬ್ಯಾಂಕ್‌ಗೆ ನಿಮ್ಮ ಖಾತೆಗೆ ಕಟ್ಟಿ, ಇದು ನಿಜವಾದ ಆದಾಯ, ಕಪ್ಪುಹಣವಲ್ಲ ಎಂದು ರುಜುವಾತುಪಡಿಸಿದಲ್ಲಿ, ತೆರಿಗೆ ಮಿತಿ ಕಳೆದು ಹಿಂದಿನಂತೆ ತೆರಿಗೆ ಸಲ್ಲಿಸಬಹುದು. ಒಟ್ಟಿನಲ್ಲಿ ಶೇ 30 + 60 (200%) + ಶಿಕ್ಷಣ ಸೆಸ್‌ 3%,ಕಪ್ಪುಹಣ ಜಮಾ ಆದಲ್ಲಿ, ತೆರಿಗೆ ಸಲ್ಲಿಸಬೇಕು. ಇಲ್ಲಿ ಆದಾಯದ ಮಿತಿ ಅನ್ವಯಿಸುವುದಿಲ್ಲ.
  • ex In Rs.: 10 lakh
  • IT:@30% =3,00,000
  • edn cess @3%=9000 onTax
  • Fine 200% =6,18,000
  • Total Tax=9,27,000
  • Net saved=73,000
  • ಲೆಕ್ಕವಿಲ್ಲದ ತೆರಿಗೆಗೆ ಒಳಪಡುವ ಹಣವಾದರೆ ದಂಡ ಕಟ್ಟಿದರೆ 10 ಲಕ್ಷಕ್ಕೆ 73 ಸಾವಿರ ಉಳಿಯುವುದು=7.3%.
  • (100ರೂ.ಗೆ-7ರೂ.3೦ಪೈಸೆ ಉಳಿಯುವುದು)
  • [೮]
.
  • ಅವಕಾಶ: ನಿಯಮ:
  • ರೂ. 500, ರೂ.1,000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ ಅಥವಾ ಅಂಚೆ ಕಚೇರಿ ಖಾತೆಗೆ ಜಮಾ ಮಾಡಲು ಡಿಸೆಂಬರ್‌ 30ರವರೆಗೆ ಅವಕಾಶ. ಜಮಾ ಮೊತ್ತಕ್ಕೆ ಮಿತಿ ಇಲ್ಲ.
  • ರೂ. 500,ರೂ.1,000 ನೋಟುಗಳನ್ನು ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ ಬದಲಾಯಿಸಿಕೊಳ್ಳಲೂ ಅವಕಾಶ ಇದೆ. ಹೀಗೆ ಮಾಡುವಾಗ ಗುರುತಿನ ಚೀಟಿ ತೋರಿಸಬೇಕು.
  • ಆಧಾರ್‌, ಪ್ಯಾನ್‌, ಮತದಾರರ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು ತೋರಿಸಬಹುದು.
  • ದಿನಕ್ಕೆ ಗರಿಷ್ಠ ರೂ.4,000ವರೆಗೆ ಮಾತ್ರ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.

ಹಣ ಪಡೆಯುವುದಕ್ಕೆ ಮಿತಿ ನಿಯಮ[ಬದಲಾಯಿಸಿ]

  • ಬ್ಯಾಂಕಿನಿಂದ ದಿನವೊಂದಕ್ಕೆ ಗರಿಷ್ಠ ರೂ. 10 ಸಾವಿರ, ವಾರಕ್ಕೆ ಗರಿಷ್ಠ ರೂ.20 ಸಾವಿರ ಪಡೆಯಬಹುದು.
  • ಎಟಿಎಂ ಯಂತ್ರದಿಂದ ದಿನಕ್ಕೆ ಗರಿಷ್ಠ ರೂ. 2,000 ಮಾತ್ರ ತೆಗೆದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಇದನ್ನು ರೂ. 4,000ಕ್ಕೆ ಹೆಚ್ಚಿಸಲಾಗುವುದು.
  • ಬ್ಯಾಂಕ್‌ನಿಂದ ಹಣ ಪಡೆಯಲು ಹೇರಿರುವ ಮಿತಿಯನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲಾಗುವುದು ಎಂದು ಸರ್ಕಾರ ಹೇಳಿದೆ.
  • ಬ್ಯಾಂಕ್‌ ಸೇವೆಗಳು ಬುಧವಾರ ಸಾರ್ವಜನಿಕರಿಗೆ ಲಭ್ಯ ಇಲ್ಲ
  • ಬುಧವಾರ, ಗುರುವಾರ ಎಟಿಎಂ ತೆರೆದಿರುವುದಿಲ್ಲ.

ರಿಯಾಯತಿ[ಬದಲಾಯಿಸಿ]

ಮುಂದಿನ ವರ್ಷವೂ ಅವಕಾಶ: ರೂ.500, ರೂ.1,000 ನೋಟುಗಳನ್ನು ನಿಗದಿತ ಡಿಸೆಂಬರ್‌ 30ರೊಳಗೆ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲು ಸಾಧ್ಯವಾಗದವರು ಈ ನೋಟುಗಳನ್ನು ಮತ್ತೆಯೂ ಬ್ಯಾಂಕ್‌ಗೆ ಜಮಾ ಮಾಡುವುದಕ್ಕೆ ಅವಕಾಶ ಇದೆ. ಇವುಗಳನ್ನು ಮುಂದಿನ ಮಾರ್ಚ್‌ 31ರೊಳಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿಯೋಜಿತ ಶಾಖೆಗಳಲ್ಲಿ ಜಮಾ ಮಾಡಬಹುದು. ಆದರೆ ಆ ಸಂದರ್ಭದಲ್ಲಿ ವಿಳಂಬಕ್ಕೆ ಕಾರಣವೇನು ಎಂಬ ಪ್ರಮಾಣಪತ್ರ ಸಲ್ಲಿಸಬೇಕು. ಜತೆಗೆ ಅದಕ್ಕೆ ಅಗತ್ಯ ಪುರಾವೆಗಳನ್ನೂ ಒದಗಿಸಬೇಕು ಎಂಬ ನಿಯಮ ಇತ್ತು.[೯]

ಎ.ಟಿ.ಎಂ.ಸಮಸ್ಯೆ[ಬದಲಾಯಿಸಿ]

  • ದೇಶದಲ್ಲಿರುವ ಅಂದಾಜು 2 ಲಕ್ಷ ಎಟಿಎಂ ಕೇಂದ್ರಗಳಲ್ಲಿ ಹಣ ಸರಿಯಾಗಿ ಸಿಗುವಂತಾಗಲು ಮೂರು ವಾರ ಸಮಯ. ರೂ.100ರ ನೋಟುಗಳ ಜೊತೆ ಹೊಸ ರೂ. 2,000 ಮತ್ತು ರೂ.500 ಮುಖಬೆಲೆಯ ನೋಟುಗಳೂ ಗ್ರಾಹಕರಿಗೆ ಸಿಗುವಂತೆ ಆಗಲು ಪ್ರತಿ ಎಟಿಎಂ ಯಂತ್ರದಲ್ಲಿ ಕೆಲವು ಮಾರ್ಪಾಡುಗಳನ್ನು ತರಬೇಕಾಯಿತು. ಇದಕ್ಕೆ ತುಸು ಕಾಲ ತೆಗೆದುಕೊಂಡಿತು; ಚಲಾವಣೆಯಲ್ಲಿದ್ದ ರೂ.1,000 ಮತ್ತು ರೂ.500 ಮುಖಬೆಲೆಯ ನೋಟುಗಳ ಮೌಲ್ಯ ರೂ.14 ಲಕ್ಷ ಕೋಟಿ ಆಗಿತ್ತು. ಇಷ್ಟು ದೊಡ್ಡ ಮೌಲ್ಯದ ನೋಟುಗಳನ್ನು ಬದಲಿಸಲು ಅಗತ್ಯವಿರುವ ಹೊಸ ನೋಟುಗಳ ಸಂಗ್ರಹ ಆರ್‌ಬಿಐ ಮತ್ತು ಇತರ ಬ್ಯಾಂಕ್‌ಗಳ ಬಳಿ ಇದೆ ಎಂದು ಅವರು ತಿಳಿಸಿದರು.ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದರು.

ಹಣ ವಾಪಸಾತಿ ಮಿತಿ[ಬದಲಾಯಿಸಿ]

  • ನವೆಂಬರ್ 18-2018 ರವರೆಗೆ ಎಟಿಎಂನಿಂದ ದಿನಕ್ಕೆ ರೂ.2000 ಮಾತ್ರ ವಿತ್ ಡ್ರಾ ಮಾಡಬಹುದು. ಏತನ್ಮಧ್ಯೆ, ಗ್ರಾಹಕರಿಗೆ ರೂ.100 ನೋಟುಗಳು ಎಟಿಎಂನಿಂದ ಲಭಿಸಲಿದೆ ಎಂದು ಐಸಿಐಸಿಐ ಬ್ಯಾಂಕ್ ಹೇಳಿತು. ನವೆಂಬರ್ 19 ರ ನಂತರ ಎಟಿಎಂನಿಂದ ಹಣ ವಾಪಸಾತಿ ಮಾಡುವ ಮಿತಿ ದಿನಕ್ಕೆ ರೂ.4000 ಆಯಿತು. ಹೀಗಿರುವಾಗ ಒಂದಕ್ಕಿಂತ ಹೆಚ್ಚು ಕಾರ್ಡ್ ಹೊಂದಿದ್ದರೆ ಹಣ ವಿತ್ ಡ್ರಾ ಮಾಡುವುದು ಸುಲಭವಾಗಿತ್ತು.[೧೦]

ರೂ.೨೦೦೦ ಮತ್ತು ೫೦೦ ನೋಟಿನ ಲಕ್ಷಣಗಳು[ಬದಲಾಯಿಸಿ]

  • ಹೊಸ [new notes] Rs 2000, Rs 500::[Ashiqhttp://www.hindustantimes.com/business-news/rs-500-rs-1000-notes-scrapped-here-are-21-ways-to-check-if-your-new-rs-2000-rs-500-notes-are-real/story-34kXOJ6Z7xvZedCasTi9fI.html]
  • ಎರಡು ಸಾವಿರ ರೂಪಾಯಿಯ ಹೊಸ ನೋಟುಗಳ ಮೇಲೆ ಮೌಲ್ಯವನ್ನು ಈ ಬಾರಿ ದೇವನಾಗರಿ ಅಂಕಿಗಳಲ್ಲಿ ಮುದ್ರಿಸಲಾಯಿತು.

ಜನರ ಸಂಕಷ್ಟ[ಬದಲಾಯಿಸಿ]

  • ಸರತಿಯಲ್ಲಿ ನಿಂತಿದ್ದ ನಾಲ್ವರ ಸಾವು:ಉತ್ತರ ಪ್ರದೇಶದ ವಿವಿಧೆಡೆ ಬ್ಯಾಂಕ್‌ಗಳಿಗೆ ಹಣ ಜಮಾ ಮಾಡಲು ಮತ್ತು ಎಟಿಎಂ ಘಟಕಗಳಲ್ಲಿ ಹಣ ತೆಗೆಯಲು ಸರತಿಯಲ್ಲಿ ನಿಂತಿದ್ದ ನಾಲ್ಕು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರು ಮತ್ತು ಇನ್ನಿಬ್ಬರು ವೃದ್ಧರು.
  • ವಧು ತಂದೆ ಸಾವು:ಮಗಳ ಮದುವೆ ಖರ್ಚಿಗೆ ಅಗತ್ಯವಿದ್ದ ಹಣವನ್ನು ಬ್ಯಾಂಕ್‌ನಿಂದ ಪಡೆಯಲು ವಿಫಲವಾದ ವ್ಯಕ್ತಿಯೊಬ್ಬರು ಮದುವೆ ಮನೆಯಲ್ಲೇ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಬಿಹಾರದ ವಾರಾಣಸಿಯ ಕೈಮೂರ್‌ನಲ್ಲಿ ನಡೆದಿದೆ. ‘ಮದುವೆ ಖರ್ಚಿಗೆಂದು ಕೂಡಿಟ್ಟಿದ್ದ ಹಣವನ್ನು ನನ್ನ ಪತಿ ಮೂರು ದಿನದ ಹಿಂದಷ್ಟೇ ಬ್ಯಾಂಕ್‌ಗೆ ಜಮಾ ಮಾಡಿದ್ದರು’ ಎಂದು ಮೃತ ವ್ಯಕ್ತಿಯ ಪತ್ನಿ ತಿಳಿಸಿದ್ದಾರೆ.[೧೧]

ಮಹಿಳೆ ಹೃದಯಾಘಾತದಿಂದ ಸಾವು[ಬದಲಾಯಿಸಿ]

  • ಗುಡಿಬಂಡೆಯಲ್ಲಿ ರೂ. 500 ಮತ್ತು ರೂ.1 ಸಾವಿರ ಮುಖಬೆಲೆಯ ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು ಬಂದು ಹಣ ಕಳೆದುಕೊಂಡಿದ್ದ ಚೆಂಡೂರು ಗ್ರಾಮದ ಮಹಿಳೆ ಜಂಗಾಲಪಲ್ಲಿ ಈಶ್ವರಮ್ಮ (43) ಸೋಮವಾರ ಹೃದಯಾಘಾತದಿಂದ ಮೃತಪಟ್ಟರು. ಹಣ ಕಳೆದುಕೊಂಡ ಮಾನಸಿಕ ವೇದನೆಯೇ ಸಾವಿಗೆ ಕಾರಣ ಎಂದು ಗ್ರಾಮಸ್ಥರು ತಿಳಿಸಿದರು. ಘಟನೆ ವಿವರ: ಈಶ್ವರಮ್ಮ ಅವರು ಆಶ್ರಯ ಯೋಜನೆಯ ಫಲಾನುಭವಿ. ಇತ್ತೀಚೆಗೆ ಯೋಜನೆಯ ಮೊದಲ ಕಂತಾಗಿ ರೂ. 15 ಸಾವಿರದ ಚೆಕ್ ನೀಡಲಾಗಿತ್ತು. ಚೆಕ್ ಡ್ರಾ ಮಾಡಿದ್ದ ಅವರು ಹಣವನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು. ರೂ. 500 ಮತ್ತು ರೂ. 1 ಸಾವಿರ ಮುಖ ಬೆಲೆಯ ನೋಟುಗಳು ಸ್ಥಗಿತವಾದ ಕಾರಣ ಅವುಗಳನ್ನು ಖಾತೆಗೆ ಜಮಾ ಮಾಡಲು ಶುಕ್ರವಾರ (ನ.11) ಪಟ್ಟಣದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ಗೆ ಬಂದಿದ್ದರು. ಹಣ ಜಮೆಗೆ ಚಲನ್ ಬರೆದುಕೊಡುವಂತೆ ಅಲ್ಲಿದ್ದವರಲ್ಲಿ ಒಬ್ಬರನ್ನು ಕೇಳಿದ್ದಾರೆ. ಈ ನಡುವೆಯೇ ಅವರು ಟೇಬಲ್ ಮೇಲೆ ಇಟ್ಟಿದ್ದ ಹಣದ ಗಂಟು ಕಾಣೆಯಾಗಿದೆ. ಇದರಿಂದ ನೊಂದ ಈಶ್ವರಮ್ಮ ತಮ್ಮ ಸ್ವಗ್ರಾಮಕ್ಕೆ ಮರಳಿದ್ದರು. ‘ಹಣವನ್ನು ಕಳೆದುಕೊಂಡಿದ್ದರಿಂದ ತೀವ್ರ ಮಾನಸಿಕ ವೇದನೆ ಅನುಭವಿಸುತ್ತಿದ್ದರು. 6 ತಿಂಗಳ ಹಿಂದೆ ಅವರ ಗುಡಿಸಲು ಬೆಂಕಿಗೆ ಆಹುತಿಯಾಗಿತ್ತು. ಈ ಎರಡೂ ಘಟನೆಗಳಿಂದ ನೊಂದಿದ್ದರು. ಇದರಿಂದ ಹೃದಯಾಘಾತವಾಗಿದೆ’ ಎನ್ನುವರು ಗ್ರಾಮಸ್ಥರು. ‘ಹಣ ಕಳೆದುಕೊಂಡಿರುವ ಬಗ್ಗೆ ಲಿಖಿತ ಹಾಗೂ ಮೌಖಿಕ ದೂರು ಬಂದಿಲ್ಲ. ಬ್ಯಾಂಕಿನಲ್ಲಿ ಸಿಸಿ ಟಿವಿ ಕ್ಯಾಮೆರಾ ಇಲ್ಲ’ ಎಂದು ಬ್ಯಾಂಕಿನ ಅಧಿಕಾರಿಗಳು ಉತ್ತರಿಸಿದರು.[೧೨]

ಕಪ್ಪು ಹಣ ಮೂಲೋತ್ಪಾಟನೆ ಸಾಧ್ಯವೇ?[ಬದಲಾಯಿಸಿ]

  • ಅ*ಕೇಶವ ಜಿ. ಝಿಂಗಾಡೆ;16 Nov, 2016 ರಂದು ;ನಾನುಕೂಲತೆಗಳಬಗ್ಗೆ ಹೀಗೆ ಹೇಳಿದರು:
  • "ಜನಸಾಮಾನ್ಯರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಕೈಯಲ್ಲಿ ಕಾಸಿಲ್ಲದೇ ಅಥವಾ ಗರಿಷ್ಠ ಮುಖಬೆಲೆಯ ನೋಟುಗಳು ಇದ್ದರೂ ಅವುಗಳನ್ನು ಬಳಸಲಿಕ್ಕಾಗದೆ ಜನರು ಬವಣೆ ಪಟ್ಟಿದ್ದಾರೆ. ಹೊಸ ನೋಟುಗಳನ್ನು ಪಡೆದುಕೊಳ್ಳಲು ಎಟಿಎಂ, ಬ್ಯಾಂಕ್‌ಗಳಿಗೆ ಅಲೆದು ಸುಸ್ತಾಗಿದ್ದಾರೆ. ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳ ಬಳಕೆ ಬಗ್ಗೆಯೂ ಅರಿವು ಇಲ್ಲ. ಅನಕ್ಷರಸ್ಥರು ಬಿಡಿ, ಅನೇಕ ಸುಶಿಕ್ಷಿತರಿಗೂ ಡೆಬಿಟ್‌ ಕಾರ್ಡ್‌ / ಕ್ರೆಡಿಟ್‌ ಕಾರ್ಡ್‌ ಬಳಕೆ ಜ್ಞಾನ ಇಲ್ಲ.
  • ವಿದೇಶಿ ಕರೆನ್ಸಿ, ಚಿನ್ನ, ಸ್ಥಿರಾಸ್ತಿ ಮತ್ತು ವಿದೇಶಿ ತೆರಿಗೆ ಸ್ವರ್ಗಗಳ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿರುವ ದೊಡ್ಡ ಮಿಕಗಳು ಪಾರಾಗುತ್ತವೆ. ಆದರೆ, ಸಣ್ಣ ಪುಟ್ಟ ಮೀನುಗಳು ಬಲೆಗೆ ಬೀಳಲಿವೆ. ಅಲ್ಪಾವಧಿಯಲ್ಲಿ ಹತ್ತಾರು ಸಂಕಷ್ಟಗಳಿಗೆ ಗುರಿಯಾದರೂ, ದೀರ್ಘಾವಧಿಯಲ್ಲಿ ಇದರಿಂದ ದೇಶಿ ಆರ್ಥಿಕತೆಗೆ ಒಳಿತಾಗಲಿದೆ."[೧೩]

ನೋಟು ಬದಲಾವಣೆ ಮಿತಿ ಇಳಿಕೆ[ಬದಲಾಯಿಸಿ]

  • 17 ನವೆಂ. 2016 ಶುಕ್ರವಾರದಿಂದ ಹೊಸ ಬದಲಾವಣೆಗಳು; ಖಾತೆಯಿಂದ ಹಣ ತೆಗೆಯುವ ಮಿತಿ ಹೆಚ್ಚಳ
  • ಚಲಾವಣೆಯಿಂದ ಹಿಂತೆಗೆದ ನೋಟು ಬದಲಾವಣೆಯ ಮಿತಿಯನ್ನು ನಾಳೆಯಿಂದ(ನ.18 ಶುಕ್ರವಾರ) ರೂ.4,500ರಿಂದ 2,000ಕ್ಕೆ ಇಳಿಕೆ ಮಾಡಲಾಗಿದೆ.
  • ರೈತರು ಕೃಷಿ ಸಾಲ ಖಾತೆ ಹಾಗೂ ಕಿಸಾನ್‌ ಕಾರ್ಡ್‌ ಬಳಸಿ ವಾರಕ್ಕೆ ರೂ.25 ಸಾವಿರ ಪಡೆದುಕೊಳ್ಳಬಹುದು.
  • ಕೃಷಿ ಮಾರುಕಟ್ಟೆ ವ್ಯಾಪಾರಿಗಳು ಪ್ರತಿ ವಾರಕ್ಕೆ ರೂ.50 ಸಾವಿರವನ್ನು ತೆಗೆದುಕೊಳ್ಳಬಹುದು.
  • ಕೃಷಿ ಸಾಲ ವಿಮೆ ಮೊತ್ತ ಪಾವತಿಗೆ 15 ದಿನಗಳ ಕಾಲಾವಕಾಶ ನೀಡಿ ವಿಸ್ತರಣೆ.
  • ಮದುವೆ ಸಮಾರಂಭಕ್ಕೆ ರೂ.2.5 ಲಕ್ಷವರೆಗೆ ಹಣ ತೆಗೆಯಲು ಅವಕಾಶ.[೧೪]

ಸುಪ್ರೀಂ ಕೋರ್ಟ್ ಪ್ರಶ್ನೆ[ಬದಲಾಯಿಸಿ]

  • ನೋಟು ಬದಲಾವಣೆಯ ಮಿತಿಯನ್ನು ರೂ.4,500ರಿಂದ ರೂ.2,000ಕ್ಕೆ ಇಳಿಸಿರುವ ಕೇಂದ್ರ ಸರ್ಕಾರ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ನೋಟು ಬದಲಾವಣೆಯ ಮಿತಿಯನ್ನು ರೂ.2,000ಕ್ಕೆ ಇಳಿಸಿದ್ದು ಯಾಕೆ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟೀಕರಣ ನೀಡಬೇಕು. ಈ ರೀತಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಜನರಿಗೆ ಇನ್ನಷ್ಟು ತೊಂದರೆ ನೀಡುತ್ತಿರುವುದು ಯಾಕೆ? ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ಅದೇ ವೇಳೆ ಜನರ ಸಮಸ್ಯೆಗಳನ್ನು ನಿವಾರಿಸಲು ಶೀಘ್ರವೇ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿತು.[೧೫]

ನೋಟುಗಳ ಕೊರತೆ ನಿವಾರಣೆಗೆ ಇನ್ನೂ ಆರು ತಿಂಗಳು ಬೇಕು[ಬದಲಾಯಿಸಿ]

  • 18 Nov, 2016
  • ನೋಟುಗಳ ಕೊರತೆಯ ಸಮಸ್ಯೆ ಸದ್ಯಕ್ಕೆ ಬಗೆ ಹರಿಯುವ ಸಾಧ್ಯತೆ ಇಲ್ಲ ಎಂದು ತಜ್ಞರು ಹೇಳುತ್ತಿದರು. ಎಲ್ಲಾ ನೋಟು ಮುದ್ರಣಾಲಯಗಳು ದಿನದ 24 ಗಂಟೆ ಕೆಲಸ ಮಾಡಿದರೂ ಕೊರತೆಯನ್ನು ನೀಗಿಸುವುದಕ್ಕೆ ಆರು ತಿಂಗಳು ಬೇಕಾಯಿತು,. ರೂ.500 ನೋಟಿನ ಮುದ್ರಣ ನವೆಂಬರ್ 10ರಿಂದಷ್ಟೇ ಆರಂಭವಾಯಿತು. ರೂ.2,000 ನೋಟುಗಳ ಪೂರೈಕೆ ಸಾಕಷ್ಟಿದ್ದರೂ ಚಿಲ್ಲರೆಯ ಅಲಭ್ಯತೆ ಅದರ ಬಳಕೆಗೆ ಕುತ್ತಾಗಿದೆ.ಚಿಲ್ಲರೆ ವ್ಯವಹಾರಕ್ಕೆ ಅದು ಉಪಯೋಗವಾಗಲಿಲ್ಲ.

ಕಾರ್ಮಿಕರ-ಕಟ್ಟಡ ಕಾರ್ಮಿಕರ ಕೆಲಸಕ್ಕೆ ಕುತ್ತು[ಬದಲಾಯಿಸಿ]

  • ‘ರಿಸರ್ವ್‌ ಬ್ಯಾಂಕ್‌ ದಿನಕ್ಕೊಂದು ಸುತ್ತೋಲೆ ಹೊರಡಿಸುತು. ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಆಗ ರೂ.2000 ಮಿತಿ ನಿಗದಿಪಡಿಸಿಉ. ನಗದನ್ನೇ ನಂಬಿ ವ್ಯವಹಾರ ನಡೆಸುವ ನಮ್ಮಂತಹವರು ಬದುಕುವುದಾದರೂ ಹೇಗೆ’ ಎಂದು ಕೆಲವು ಜನ ಪ್ರಶ್ನಿಸಿದರು.
  • ‘ಕಟ್ಟಡ ನಿರ್ಮಾಣದ ಬಹುತೇಕ ವ್ಯವಹಾರ ನಗದು ರೂಪದಲ್ಲೇ ನಡೆಯುತ್ತಿತ್ತು. ನೋಟು ಹಿಂದಕ್ಕೆ ಪಡೆಯುವ ನಿರ್ಧಾರ ಕಟ್ಟಡ ನಿರ್ಮಾಣವನ್ನು ನೆಚ್ಚಿಕೊಂಡು ಬದುಕುತ್ತಿರುವ ಅನೇಕರಿಗೆ ಹೊಡೆತ ನೀಡಿತು. ಸಣ್ಣಪುಟ್ಟ ಪರಿಕರಗಳನ್ನು ಖರೀದಿಸುವುದಕ್ಕೂ ದುಡ್ಡಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು.
  • ರೋಗಿಗಳು ಏನು ಮಾಡಬೇಕು
  • ಒಬ್ಬನ ತಂಗಿ ನ್ಯೂಮೋನಿಯಾದಿಂದ ಬಳಲುತ್ತಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಹೋದರೆ ರದ್ದಾದ ನೋಟುಗಳನ್ನು ಪಡೆಯಲಿಲ್ಲ. ಅವನು ಡೆಬಿಟ್‌ ಕಾರ್ಡ್‌ ಮಾಡಿಸಿಕೊಂಡಿಲ್ಲ. ಹೀಗೆ ಆಸ್ಪತ್ರೆಗಳು ಹಣ ಪಡೆಯಲು ಹಿಂದೇಟು ಹಾಕಿದರೆ ರೋಗಿಗಳು ಏನು ಮಾಡಬೇಕು ಎಂಬ ಪ್ರಶ್ನೆ ಎದ್ದಿತು.
  • ನಾಲ್ಕು ಹೋಟೆಲ್‌ಗಳನ್ನು ತಿರುಗಿದರೂ ಎಲ್ಲಿಯೂ ಊಟ ಹೊಸ ಹಣ ಇಲ್ಲದೆ ನೀಡುತ್ತಿರಲಿಲ್ಲ.[೧೬]

ನೋಟು ರದ್ದು ಮಾಡಿದ ಇತರೆ ದೇಶಗಳು[ಬದಲಾಯಿಸಿ]

  • ಭಾರತ ರೂ. 500, 1000 ನೋಟುಗಳನ್ನು ರದ್ದು ಮಾಡಿ ಹೊಸ ಮುಖಬೆಲೆಯ ನೋಟುಗಳ ಚಲಾವಣೆಯ ಹಾದಿಯಲ್ಲಿ ಸಾಗಿತು. ನೋಟುಗಳ ನಿಷೇಧ ಇದು ಮೊದಲೇನಲ್ಲ. ಹಲವು ದೇಶಗಳಲ್ಲಿ ನೋಟು ರದ್ದತಿ ಪ್ರಯತ್ನಗಳು ಹಿಂದೆಯೇ ನಡೆದಿದ್ದವು. ಆದರೆ ಹೆಚ್ಚಿನ ದೇಶಗಳು ಸೋಲನ್ನು ಅನುಭವಿಸಿದ್ದವು ಎಂಬುದು ಗಮನಾರ್ಹ ಸಂಗತಿ.ವಿವರ:
  • 1. ನೈಜೀರಿಯ
  • 1984ರಲ್ಲಿ ಮುಹಮ್ಮದು ಬುಹಾರಿ ನೇತೃತ್ವದ ಸರ್ಕಾರ ಹೊಸ ನೋಟುಗಳನ್ನು ಪರಿಚಯಿಸಿ ಹಳೆ ನೋಟುಗಳನ್ನು ನಿಷೇಧಿಸಿತು. ಆದರೆ ಇದರಿಂದಾಗಿ ಹಣದುಬ್ಬರ ಹಾಗೂ ಸಾಲದ ಹೊರೆ ಹೆಚ್ಚಾಗಿ ಆರ್ಥಿಕತೆ ಕುಸಿಯಿತು. ಅಲ್ಲದೇ ಮುಹಮ್ಮದು ಬುಹಾರಿ ಸರ್ಕಾರ ಇದನ್ನು ನಿಭಾಯಿಸುವಲ್ಲಿ ವಿಫಲವಾಯಿತು.
  • 2. ಘಾನಾ
  • 1982ರಲ್ಲಿ ತೆರಿಗೆ ವಂಚಕರನ್ನು ತಡೆಯಲು ಘಾನಾ ದೇಶದಲ್ಲಿ 50 ಸಿಡಿ ನೋಟುಗಳನ್ನು ನಿಷೇಧ ಮಾಡಲಾಯಿತು. ಅಧಿಕ ದ್ರವ್ಯತೆ ಮತ್ತು ಭ್ರಷ್ಟಾಚಾರ ತಡೆಗಟ್ಟುವ ಗುರಿಯನ್ನು ಹೋದಲಾಗಿತ್ತು. ಇದು ದೇಶದ ಜನರು ಕಪ್ಪು ಮಾರುಕಟ್ಟೆ, ವಿದೇಶಿ ಕರೆನ್ಸಿ ಬೆಂಬಲಿಸಲು ಕಾರಣವಾಯಿತು. ಕರೆನ್ಸಿಗಾಗಿ ಕಪ್ಪುಹಣದ ಮಾರುಕಟ್ಟೆ ವ್ಯಾಪಕವಾಗಿ ಬೆಳೆಯಿತು. ಈ ಎಲ್ಲ ಅಂಶಗಳು ಅರ್ಥವ್ಯವಸ್ಥೆಯನ್ನು ದುರ್ಬಲನನ್ನಾಗಿಸಿತ್ತು.
  • 3. ಉತ್ತರ ಕೋರಿಯ
  • 2010ರಲ್ಲಿ ಆಗಿನ ಸರ್ವಾಧಿಕಾರಿ ಕಿಮ್ ಜಾಂಗ್ 11 ಸುಧಾರಣಾ ಕ್ರಮವಾಗಿ ಹಳೆ ನೋಟುಗಳ ಮುಖಬೆಲೆಯಿಂದ ಎರಡು ಸೊನ್ನೆಗಳನ್ನು ತೆಗೆದರು. ಕಪ್ಪುಹಣದ ಮತ್ತು ಅರ್ಥವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸಲು ಈ ಕ್ರಮ ಕೈಗೊಳ್ಳಲಾಯಿತು. ಆದರೆ ಹಣದುಬ್ಬರ ಮತ್ತು ಆಹಾರದ ಕೊರತೆಯಿಂದಾಗಿ ದೇಶ ಸಮಸ್ಯೆ ಎದುರಿಸುವಂತಾಯಿತು.
  • 4. ಜಿಂಬಾಬ್ವೆ
  • ಜಿಂಬಾಬ್ವೆ ಒಂದು ನೂರು ಟ್ರಿಲಿಯನ್ ಡಾಲರ್ ನೋಟನ್ನು ಬಳಸಿತ್ತು. ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಹಣದುಬ್ಬರವನ್ನು ನಿಯಂತ್ರಿಸಲು ನೋಟು ಮೌಲ್ಯವನ್ನು ನಿಷೇಧಿಸಲು ಮುಂದಾದರು. ನೋಟು ನಿಷೇಧದ ನಂತರ ಟ್ರಿಲಿಯನ್ ಡಾಲರ್ ನೋಟಿನ ಮೌಲ್ಯ 0.5 ಡಾಲರ್ ಗೆ ಕುಸಿಯಿತು.
  • 5.ಸೋವಿಯತ್ ಯೂನಿಯನ್
  • ಮಿಖಾಯಿಲ್ ಗೋರ್ಬಚೆವ್ ನೇತೃತ್ವದಲ್ಲಿ 1991 ಜನೆವರಿಯಲ್ಲಿ ಸೋವಿತಯ್ ಯೂನಿಯನ್ ಒಡೆದು ಚೂರಾಗುವ ಕೆಲ ವರ್ಷಗಳ ಮುನ್ನ ರೂಬಲ್ ಬಿಲ್ ಗಳನ್ನು ಹಿಂತೆಗೆದುಕೊಂಡಿತ್ತು. ಕಪ್ಪುಹಣ ನಿಯಂತ್ರಣ ಮುಖ್ಯ ಉದ್ದೇಶ ಆಗಿತ್ತಾದರೂ ಆರ್ಥಿಕ ಸಮತೋಲನ ಹಾಗೂ ಹಣದುಬ್ಬರ ನಿಯಂತ್ರಿಸಲು ವಿಫಲವಾಯಿತು. ಆದರೆ ಗೋರ್ಬಚೆವ್ ಮೇಲಿನ ನಂಬಿಕೆ ಕಳೆದುಕೊಂಡ ಜನರು ನಾಗರಿಕ ಕ್ರಾಂತಿಗೆ ಕಾರಣರಾದರು. ರಾಜಕೀಯ ಬಿಕ್ಕಟ್ಟು ಎದುರಾಗಿ ಸೋವಿಯತ್ ಒಕ್ಕೂಟ ಮುರಿದು ಬಿದ್ದಿತ್ತು. ಆದರೆ 1998ರಲ್ಲಿ ರಷ್ಯಾ ರೂಬಲ್ ನ ರಿಡಿನೊಮಿನೇಷನ್ ಮಾಡಿ ಮೂರು ಸೊನ್ನೆಗಳನ್ನು ತೆಗೆದ ಕ್ರಮ ವ್ಯವಸ್ಥಿತವಾಗಿ ನಡೆಯಿತು.
  • 6. ಆಸ್ಟ್ರೇಲಿಯ
  • ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಬಿಡುಗಡೆಗೊಳಿಸಿದ ಮೊದಲ ದೇಶ ಆಸ್ಟ್ರೇಲಿಯ. ಇದು ಖೋಟಾ ನೋಟುಗಳನ್ನು ತಡೆಯಲು ಪಾಳಿಮರ್ ನೋಟುಗಳನನ್ಉ ಜಾರಿ ತಂದಿತ್ತು. ಆಸ್ಟ್ರೇಲಿಯಾದ ಪಾಲಿಮರ್ ನೋಟು ಜಾರಿಯಿಂದ ಆರ್ಥವ್ಯವಸ್ಥೆ ಮೇಲೆ ಯಾವುದೇ ಅಡ್ಡಪರಿಣಾಮಗಳು ಬಿದ್ದಿಲ್ಲ.

7. ಮಯನ್ಮಾರ್

  • ಕಪ್ಪುಹಣದ ನಿಯಂತ್ರಣಕ್ಕಾಗಿ 1987ರಲ್ಲಿ ದೇಶದ ಸೇನಾ ಆಡಳಿತ ಚಲಾವಣೆಯಲ್ಲಿ ಇಲ್ಲದ ಹಣದ ಶೇ. 80ರಷ್ಟು ಮೌಲ್ಯವನ್ನು ನಿಷೇದಿಸಿತು. ನಂತರದ ವರ್ಷಗಳಲ್ಲಿ ವಿದ್ಯಾರ್ಥಿ ಚಳುವಳಿ ಹಾಗೂ ಸಾಮೂಹಿಕ ಪ್ರತಿಭಟನೆಗಳು ತೀವ್ರವಾಗಿ ನಡೆದವು.
  • 8. ಝೈರ್
  • ಝೈರ್ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ ಕಾರಣ 1990ರಲ್ಲಿ ಸರ್ವಾಧಿಕಾರ ಮೊಬುಟು ಸೆಸೆ ಸೆಕೊ ನಿರಂತರವಾಗಿ ನೋಟು ಸುಧಾರಣೆಗಳನ್ನು ತಂದರು. ಇದು ಹಣದುಬ್ಬರಕ್ಕೆ ಕಾರಣವಾಗಿ 1993ರಲ್ಲಿ ಕರೆನ್ಸಿ ಹಿಂತೆಗೆದುಕೊಳ್ಳಬೇಕಾಯಿತು. ಡಾಲರ್ ಮುಂದೆ ವಿನಿಮಯ ದರ ಇಳಿಕೆಯಾಗಿ ನಾಗರಿಕ ಯುದ್ದಕ್ಕೆ ಕಾರಣವಾಗಿ 1997ರಲ್ಲಿ ಮೊಬಟು ಅಧಿಕಾರ ಕಳೆದುಕೊಂಡರು.
  • 9. ಪಾಕಿಸ್ತಾನ
  • ಪಾಕಿಸ್ತಾನ ಡಿಸೆಂಬರ್ 2016ರಿಂದ ಹೊಸ ವಿನ್ಯಾಸದ ನೋಟುಗಳನ್ನು ಚಲಾವಣೆಗೆ ತರಲಿದೆ. ಒಂದೂವರೆ ವರ್ಷದ ಹಿಂದೆಯೇ ಟೆಂಡರ್ ಘೋಷಿಸಿದೆ. ಸಾರ್ವಜನಿಕರಿಗೆ ಹಳೆ ನೋಟುಗಳನ್ನು ವಿನಿಮಯ ಮಾಡಲು ಅವಕಾಶ ನೀಡಲಾಗಿದೆ.[೧೭]

ವಿದೇಶದ ಆಭಿಪ್ರಾಯ[ಬದಲಾಯಿಸಿ]

  • ದ ನ್ಯೂಯಾರ್ಕ್ ಟೈಮ್ಸ್:
  • ಭಾರತದಲ್ಲಿ ನಗದು ದುಡ್ಡೇ ಮುಖ್ಯ. ಇಲ್ಲಿ ಶೇ.78ರಷ್ಟು ವ್ಯವಹಾರಗಳು ದುಡ್ಡಿನಿಂದಲೇ ನಡೆಯುತ್ತವೆ, ಇಲ್ಲಿನ ಜನರಲ್ಲಿ ಹೆಚ್ಚಿನವರಿಗೆ ಬ್ಯಾಂಕ್ ಖಾತೆಯಾಗಿಲೀ ಕ್ರೆಡಿಟ್ ಕಾರ್ಡ್ ಆಗಲೀ ಇರಲಿಲ್ಲ. ಹಣ ಪಾವತಿ ಮಾಡಲು ಇಂಥಾ ವ್ಯವಸ್ಥೆಗಳನ್ನು ಬಳಸದೇ ಇರುವ ವ್ಯವಹಾರಗಳಲ್ಲಿ ಜನರು ನಗದು ಮೂಲಕವೇ ಸದಾ ಕಾಲ ಹಣ ಪಾವತಿ ಮಾಡುತ್ತಾರೆ.
  • ಬ್ಲೂಮ್‍ಬರ್ಗ್
  • ಪ್ರಧಾನಿ ನರೇಂದ್ರ ಮೋದಿಯವರು ಯೋಜನೆಯನ್ನು ಘೋಷಿಸಿದಾಗ ಇದೊಂದು ದಿಟ್ಟ ನಡೆ ಎಂದು ಕಂಡು ಬಂದರೂ ನಂತರ ಆ ಯೋಜನೆ ತಪ್ಪು ನಿರ್ಧಾರದಂತೆ ಕಂಡಿತು. ಆ ಒಂದು ವಾರದಲ್ಲಿ ಬದಲಾಗಿದ್ದು ಏನು? ಆ ಬಗ್ಗೆ ಹೇಳುವುದಾದರೆ ಅದೊಂದು ಮುಂದಾಲೋಚನೆ ಇಲ್ಲದ ಯೋಜನೆ. ಸರ್ಕಾರದ ಈ ಯೋಜನೆಯಿಂದಾಗಿ ಭಾರತದಲ್ಲಿರುವ ಶೇ. 86 ಕರೆನ್ಸಿ ಮೌಲ್ಯ ರಹಿತವಾಯಿತು.
  • ಬಡಜನರ ಕೈಯಲ್ಲಿಯೂ 1000 ನೋಟು ಇದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳುತ್ತಿದ್ದರೆ, ನಿಜ ಸಂಗತಿ ಬೇರೆಯೇ ಇತ್ತು. ಭಾರತದ ಆರ್ಥಿಕ ವ್ಯವಸ್ಥೆ ಮುಚ್ಚಿಹೋಗುವ ಮುನ್ನ ಯಾರಾದರೂ ಈ ಸಮಸ್ಯೆಗೆ ಉತ್ತರ ಕಂಡುಹಿಡಿಯಲೇ ಬೇಕು ಎಂದರು ತಜ್ಞರು.[೧೮]

25 Nov, 2016 ರಿಂದ ಹೊಸ ನಿಯಮ[ಬದಲಾಯಿಸಿ]

  • ಡಿ. 15ರ ವರೆಗೆ ರೂ.500ರ ಹಳೆಯ ನೋಟು ಬಳಿಕೆ
  • ರೂ. 500 ಮುಖಬೆಲೆಯ ಹಳೆಯ ನೋಟುಗಳನ್ನು ಎಲ್ಲೆಲ್ಲಿ ಚಲಾವಣೆ ಮಾಡಬಹುದು ಎಂಬುದರ ಕಿರು ಮಾಹಿತಿ ಇಲ್ಲಿದೆ.
  • ವಿದ್ಯುತ್‌ ಮತ್ತು ನೀರಿನ ಬಿಲ್‌ ಪಾವತಿಗೆ ಮಾತ್ರ ಅವಕಾಶ
  • ಈಗಿನ, ಹಿಂದಿನ ಬಾಕಿ ಪಾವತಿಗೆ ಅನ್ವಯ. ಗೃಹಬಳಕೆ ಬಿಲ್‌ಗೆ ಮಾತ್ರ ಈ ಸೌಲಭ್ಯ
  • ಕೇಂದ್ರ, ರಾಜ್ಯ ಸರ್ಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳ ಅಧೀನದ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಯ ಗರಿಷ್ಠ ರೂ.2,000 ವರೆಗಿನ ಶುಲ್ಕ ಪಾವತಿ
  • ಕೇಂದ್ರ, ರಾಜ್ಯ ಸರ್ಕಾರಗಳ ಅಧೀನದ ಕಾಲೇಜುಗಳ ಶುಲ್ಕ
  • ಪ್ರೀಪೇಡ್ ಮೊಬೈಲ್‌ಗೆ ಗರಿಷ್ಠ ₹500 ವರೆಗೆ ಟಾಪ್‌ಅಪ್‌
  • ಇಂದಿನಿಂದ ರೂ.1000ದ ನೋಟುಗಳ ಬಳಕೆಗೆ ಅವಕಾಶವಿಲ್ಲ
  • ಜನತಾ ಬಜಾರ್‌ಗಳಂತಹ ಗ್ರಾಹಕರ ಸಹಕಾರಿ ಮಳಿಗೆಗಳಲ್ಲಿ ಒಮ್ಮೆಗೆ ಗರಿಷ್ಠ ರೂ.5,000 ಮೊತ್ತದ ಖರೀದಿಗೆ ಅವಕಾಶ
  • ಡಿ. 2ರ ಮಧ್ಯರಾತ್ರಿ ವರೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕ ಇಲ್ಲ
  • ಡಿ. 3ರ ನಂತರ ಡಿ. 15ರವರೆಗೆ ರೂ.500ರ ಹಳೆಯ ನೋಟುಗಳಲ್ಲಿ ಶುಲ್ಕ ಪಾವತಿಗೆ ಅವಕಾಶ
  • ವಿದೇಶಿಯರು ವಾರಕ್ಕೆ ಗರಿಷ್ಠ ರೂ.5,000 ವಿನಿಮಯ ಮಾಡಿಕೊಳ್ಳಬಹುದು. ಇದನ್ನು ಅವರ ಪಾಸ್‌ಪೋರ್ಟ್‌ನಲ್ಲಿ ನಮೂದಿಸಲಾಗುವುದು.[೧೯]

ಡಿಸೆಂಬರ್‌ ತನಕ ಹಳೆ ನೋಟು ಚಲಾವಣೆಗೆ ಯೆಚೂರಿ ಆಗ್ರಹ[ಬದಲಾಯಿಸಿ]

ಪತ್ರಕರ್ತ ರಾಮಚಂದ್ರ ಗುಹಾ ಅಭಿಪ್ರಾಯ
  • 9 Dec, 2016;
  • 1.ರೂ.500 ಮತ್ತು ರೂ.1,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದಿರುವುದನ್ನು ಘೋಷಿಸಿದ ಬಳಿಕ ಈ ನಿರ್ಧಾರವನ್ನು ಸಂಸತ್ತಿಗೆ ಯಾಕೆ ವಿವರಿಸಲಿಲ್ಲ ಮತ್ತು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲಿಲ್ಲ?
  • 2.ನಮೋ ನಡೆ ಶಿಥಿಲಗೊಳಿಸಿರುವ ಎರಡನೆಯ ಸಂಸ್ಥೆ ಸಂಪುಟ. ಭಾರತದ ಪ್ರಧಾನಿ ಸಮಾನರಲ್ಲಿ ಮೊದಲಿಗ ಮಾತ್ರ. ಸಂಪುಟ ಸಹೋದ್ಯೋಗಿಗಳ ಜತೆ ಚರ್ಚಿಸಿ ಪ್ರಧಾನಿ ನಿರ್ಧಾರ ಕೈಗೊಳ್ಳಬೇಕು ಎಂಬುದು ಕ್ರಮ.ಆದರೆ, (ಮೋದಿ ಅವರು ಹಿಂದೆ ಕೈಗೊಂಡಿರುವ ಕೆಲವು ನಿರ್ಧಾರಗಳ ಹಾಗೆಯೇ) ಈ ನಿರ್ಧಾರವನ್ನೂ ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ.
  • 3.ನಮೋ ನಡೆಯ ನಂತರ ತನ್ನ ಹೆಸರಿಗೆ ಭಾರಿ ಹಾನಿ ಮಾಡಿಕೊಂಡಿರುವ ಮೂರನೆಯ ಸಂಸ್ಥೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ). ಸಂಸತ್ತು ಅಥವಾ ಸಂಪುಟಗಳಂತಲ್ಲದೆ, ಆರ್‌ಬಿಐ ಹಿಂದೆ ಉನ್ನತ ವಿಶ್ವಾಸಾರ್ಹತೆಯನ್ನು ಹೊಂದಿತ್ತು. ವಾಸ್ತವದಲ್ಲಿ, ನ್ಯಾಯಬದ್ಧತೆ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿ ಭಾರತದ ಜನರು ಬಹುತೇಕ ಸಂಪೂರ್ಣ ವಿಶ್ವಾಸ ಹೊಂದಿದ್ದ ಎರಡು ಪ್ರಮುಖ ಸಾರ್ವಜನಿಕ ಸಂಸ್ಥೆಗಳಲ್ಲಿ ಇದು ಒಂದಾಗಿತ್ತು.
  • 4.ಕೊನೆಯದಾಗಿ, ಒಂದು ಕಾಲದಲ್ಲಿ ತನ್ನ ಸ್ವಾಯತ್ತೆ ಮತ್ತು ನಿಷ್ಪಕ್ಷಪಾತದಿಂದಾಗಿ ಅಭಿಮಾನಕ್ಕೆ ಪಾತ್ರವಾಗಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಆಡಳಿತ ಪಕ್ಷದ ಆಟದ ಗೊಂಬೆಯಾಗಿದೆ.[೨೦]
.
  • 27 Nov, 2016
  • ನೋಟು ರದ್ದತಿ ನಿರ್ಧಾರದಿಂದ ಸಾಮಾನ್ಯ ಜನರಿಗೆ ತೊಂದರೆ ಆಗಿದ್ದು, ಹಳೆ ನೋಟುಗಳ ಚಲಾವಣೆಗೆ ಕನಿಷ್ಠ ಡಿಸೆಂಬರ್‌ ಕೊನೆ ತನಕ ಅವಕಾಶ ನೀಡಬೇಕು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯ ದರ್ಶಿ ಸೀತಾರಾಂ ಯೆಚೂರಿ ಒತ್ತಾಯಿಸಿದರು.ನೋಟು ರದ್ದತಿ ನಿರ್ಧಾರ ದೇಶದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕೈಗಾರಿಕೆ ಮತ್ತು ಕೃಷಿ ವಲಯಕ್ಕೆ ಪೆಟ್ಟು ಬಿದ್ದಿದೆ. ಬದಲಿ ನೋಟುಗಳನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸಲು ರಿಸರ್ವ್ ಬ್ಯಾಂಕ್‌ಗೆ ಇನ್ನೂ ಆರು ತಿಂಗಳ ಕಾಲಾವಕಾಶ ಬೇಕು ಎಂದು ಶನಿವಾರ ಮಾಧ್ಯಮಗೋಷ್ಠಿಯಲ್ಇ ಅವರು ಹೇಳಿದರು.ಹಣ ರಹಿತ ಆರ್ಥಿಕ ವ್ಯವಸ್ಥೆ ಭಾರತದಲ್ಲಿ ಸದ್ಯಕ್ಕೆ ಕಷ್ಟ. ಶೇ 80 ರಿಂದ 90ರಷ್ಟು ವಹಿವಾಟು ಹಣದಲ್ಲೆ ನಡೆಯುತ್ತಿದೆ.ಪೂರ್ವ ತಯಾರಿ ಇಲ್ಲದೆ ನೋಟು ರದ್ದತಿ ನಿರ್ಧಾರ ಕೈಗೊಳ್ಳಲಾಯಿತು. ನಂತರ ಪರಿಸ್ಥಿತಿ ನಿಯಂತ್ರಣ ಸಾಧ್ಯವಾಗದೆ 22 ಆದೇಶಗಳನ್ನು ಹೊರಡಿಸಿದೆ. ದಿನಗೂಲಿ ಮತ್ತು ಅಂದಿನ ವ್ಯಾಪಾರದಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕಿರುವ ಜನರಿಗೆ ಇದರಿಂದ ತೀವ್ರ ತೊಂದರೆ ಆಗಿದೆ ಎಂದು ಹೇಳಿದರು.[೨೧]

ಮತ್ತೊಂದು ಆತ್ಮ ಹತ್ಯೆ[ಬದಲಾಯಿಸಿ]

  • ಹಳೆಯ ರೂ.500 ನೋಟು ಪಡೆಯಲು ನಿರಾಕರಿಸಿದ ಕಾರಣ ಇಲ್ಲಿನ ತಿಪಟೂರು ಗಾಂಧಿನಗರ ಬಡಾವಣೆ ನಿವಾಸಿ ಶಾಹಿನಾ (32) ಎಂಬುವವರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸಾಲದ ಕಂತನ್ನು ₹ 500 ಮುಖಬೆಲೆಯ ನೋಟಿನ ಮೂಲಕ ಪಾವತಿಸಲು ಮುಂದಾಗಿದ್ದಾರೆ. ಆದರೆ ಅವರಿಂದ ನೋಟು ಪಡೆಯದೆ ಕೂಟದ ಸದಸ್ಯರು ಮನೆ ಬಳಿ ಬಂದು ಅವಮಾನಿಸುವುದಾಗಿ ಬೆದರಿಕೆ ಹಾಕಿದರು. ಇದರಿಂದ ಮನನೊಂದ ಶಾಹಿನಾ ಆತ್ಮಹತ್ಯೆ ಮಾಡಿಕೊಂಡರು.[೨೨]

ನಗದು ಕೊರತೆ ಸಮಸ್ಯೆ[ಬದಲಾಯಿಸಿ]

ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್‌ ಟೀಕೆ
  • ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದತಿಯು ‘ವಿಶ್ವಾಸದ ಆಧಾರದಲ್ಲಿ ನಿಂತಿರುವ ಅರ್ಥವ್ಯವಸ್ಥೆಯ ಮೂಲಕ್ಕೆ ನೀಡಿದ ನಿರಂಕುಶ ಏಟು’ ಎಂದರು' ಅವರ ಅಭಿಪ್ರಾಯ:
  • "ಈ ಆದೇಶವು ನೋಟುಗಳನ್ನು, ಬ್ಯಾಂಕ್‌ ಖಾತೆಗಳನ್ನು ಹಾಗೂ ನಂಬಿಕೆಯ ನೆಲೆಯಲ್ಲಿ ನಿಂತಿರುವ ಅರ್ಥವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ’
  • ‘ವಿಶ್ವಾಸ ಆಧರಿಸಿ ಬೆಳೆದಿರುವ ಅರ್ಥ ವ್ಯವಸ್ಥೆಯ ಪಾಲಿಗೆ ಈ ತೀರ್ಮಾನ ಅನರ್ಥ ತರಲಿದೆ. ಕಳೆದ 20 ವರ್ಷಗಳಿಂದ ಅರ್ಥ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿತ್ತು. ಇದು ಒಬ್ಬರು ಇನ್ನೊಬ್ಬರ ಮಾತನ್ನು ಒಪ್ಪಿಕೊಳ್ಳುವ ಮೂಲಕ ನಡೆದಿತ್ತು. ನಾವೊಂದು ಭರವಸೆ ನೀಡಿದ್ದೆವು, ಆದರೆ ಆ ಭರವಸೆಯಂತೆ ನಡೆದುಕೊಳ್ಳುವುದಿಲ್ಲ ಎನ್ನುವ ಮೂಲಕ ವ್ಯವಸ್ಥೆಯ ಬುಡಕ್ಕೇ ಏಟು ನೀಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ".[೨೩].
  • 30 Nov, 2016:
  • ಡಿಸೆಂಬರ್‌ ಮೊದಲ ವಾರದಲ್ಲಿ ನೌಕರ ವರ್ಗದ ನಗದು ಬೇಡಿಕೆ ಎದುರಿಸುವುದು ಹೇಗೆಂಬ ಆತಂಕ ರಾಜ್ಯದ ಬ್ಯಾಂಕಿಂಗ್‌ ವಲಯವನ್ನು ಕಾಡುತ್ತಿತ್ತು. ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಬೆಂಗಳೂರು ಪ್ರಾದೇಶಿಕ ಕಚೇರಿಯಲ್ಲಿಯೇ ಹಣದ ಅಭಾವ ಎದುರಾಯಿತು, ಎನ್ನುವ ಅಚ್ಚರಿಯ ಸಂಗತಿಯನ್ನೂ ಬ್ಯಾಂಕಿಂಗ್‌ ವಲಯದ ವಿಶ್ವಸನೀಯ ಮೂಲಗಳು ತಿಳಿಸಿದವು. ಅದಕ್ಕೆ ಮೂರು ದಿನಗಳ ಹಿಂದೆ, ಆರ್‌ಬಿಐನ ಬೆಂಗಳೂರಿನ ಪ್ರಾದೇಶಿಕ ಕಚೇರಿಗೆ ಬಂದಿದ್ದು, ರೂ.170 ಕೋಟಿ ಮಾತ್ರ. ಆದರೆ, ಕೆನರಾ ಬ್ಯಾಂಕ್‌ ಒಂದಕ್ಕೇನೆ ಒಂದು ದಿನಕ್ಕೆ ಎಟಿಎಂಗೆ ಹಾಕಲು ರೂ.200 ಕೋಟಿ ಬೇಕಾಗಿತ್ತು. ಹೀಗಿರುವಾಗ ರಾಜ್ಯದಲ್ಲಿನ ಎಲ್ಲ ಬ್ಯಾಂಕ್‌ಗಳಿಗೆ ನಗದು ಪೂರೈಸುವ ಆರ್‌ಬಿಐನಲ್ಲಿಯೇ  ರೂ.170 ಕೋಟಿ ಮಾತ್ರ ಇತ್ತು.
  • ನಗದು ಕೊರತೆ: ನೋಟುಗಳು ರದ್ದಾಗು ವುದಕ್ಕೂ ಮುನ್ನ ಒಂದು ಬ್ಯಾಂಕ್ ಶಾಖೆಗೆ ದಿನಕ್ಕೆ ರೂ.1 ಕೋಟಿಯಷ್ಟು ಹಣ ಬರುತ್ತಿತ್ತು. ಆದರೆ ಸದ್ಯ ರೂ.5 ಲಕ್ಷದಿಂದ ರೂ.5 ಲಕ್ಷದಿಂದ ರೂ.8 ಲಕ್ಷ ಮಾತ್ರವೇ ಬರುತ್ತಿತ್ತು. ಹಾಗಾಗಿ ನಗದು ಕೊರತೆಯಾಯಿತು..
  • ಬ್ಯಾಂಕ್‌ಗಳಲ್ಲಿ ಆಗ ಲಭ್ಯವಿರುವ ಹೊಸ ರೂ.2 ಸಾವಿರ ಮುಖಬೆಲೆಯ ನೋಟುಗಳನ್ನು ಜನರು ಬಳಕೆ ಮಾಡದೇ ಕೂಡಿಡುತ್ತಿದ್ದರು. ಚಿಲ್ಲರೆ ಸಿಗದೆ ಚಲಾವನೆಗೆ ಬರದಂತಾಯಿತು. ಇದೂ ಮಾರುಕಟ್ಟೆಯಲ್ಲಿ ನಗದು ಕೊರತೆಗೆ ಕಾರಣವಾಯಿತು. ಕೆಳ ಮಧ್ಯಮ ವರ್ಗದ ಜನರೇ ರೂ.25 ಸಾವಿರ, ರೂ.50 ಸಾವಿರ ತೆಗೆದು ಮನೆಯಲ್ಲಿ ಇಡುತ್ತಿದ್ದರು. ಇದರಿಂದ ಅತಿ ಅವಶ್ಯಕತೆ ಇರುವವರಿಗೆ ಹಣ ಸಿಗದಂತಾಯಿತು ಎಂದು ಬ್ಯಾಂಕ್‌ ಮೂಲಗಳು ತಿಳಿಸಿದವು.

ಮಾಸಿದ ನೋಟು ವಿತರಣೆ[ಬದಲಾಯಿಸಿ]

  • ನಗದು ಕೊರತೆ ಎದುರಾಗಿರುವುದರಿಂದ ಆರ್‌ ಬಿಐ ರೂ.100 ರ ಮುಖಬೆಲೆಯ ಹಳತಾದ, ಮಾಸಿದ ನೋಟುಗಳನ್ನು ಅನಿವಾರ್ಯವಾಗಿ ವಿತರಣೆ ಮಾಡಿದವು. ಬ್ಯಾಂಕ್‌ಗಳಲ್ಲಿ ಆಗ ಲಭ್ಯವಿದ್ದ ಹೊಸ ರೂ.2 ಸಾವಿರ ಮುಖಬೆಲೆಯ ನೋಟುಗಳನ್ನು ಜನರು ಬಳಕೆ ಮಾಡದೇ ಕೂಡಿಡುತ್ತಿದ್ದರು. ಇದೂ ಮಾರುಕಟ್ಟೆಯಲ್ಲಿ ನಗದು ಕೊರತೆಗೆ ಕಾರಣವಾಯಿತು.

ಕ್ಯೂ ನಿಂತಾಗ ಮತ್ತೊಂದು ಸಾವು[ಬದಲಾಯಿಸಿ]

  • 2 Dec, 2016
  • ಹೊಸಪೇಟೆಯಲ್ಲಿ ಹಣ ಜಮಾ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಬ್ಯಾಂಕ್‌ನಲ್ಲೇ ಮೃತಪಟ್ಟ ಘಟನೆ ಗುರುವಾರ ಆ ನಗರದಲ್ಲಿ ನಡೆದಿದೆ. ನೋಟುಗಳ ಚಲಾವಣೆ ರದ್ದತಿ ಕಾರಣ ಸತ್ತವರ ಸಂಖ್ಯೆ ೭೪ + ಕ್ಕೆ ಏರಿತು.
  • ನಗರದ ಟಿ.ಬಿ. ಡ್ಯಾಂ ಹಳೆ ಅಮರಾವತಿ ನಿವಾಸಿ ಅಯ್ಯನಗೌಡರ ಶೇಖರಗೌಡ (67) ಮಾರ್ಕಂಡೇಶ್ವರ ಕಲ್ಯಾಣ ಮಂಟಪದಲ್ಲಿ ವ್ಯವಸ್ಥಾಪಕರಾಗಿದ್ದರು. ಟಿ.ಬಿ. ಡ್ಯಾಂ ರಸ್ತೆಯಲ್ಲಿರುವ ಪ್ರಗತಿ ಗ್ರಾಮೀಣ ಬ್ಯಾಂಕ್‌ ಶಾಖೆಗೆ ಹಣ ಜಮಾ ಮಾಡಲು ಅವರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೋಗಿದ್ದರು. ತಿಂಗಳ ಮೊದಲ ದಿನವಾದ್ದರಿಂದ ಬ್ಯಾಂಕ್‌ನಲ್ಲಿ ಉದ್ದನೆಯ ಸಾಲು ಇತ್ತು. ಬಹಳ ಹೊತ್ತು ಸಾಲಿನಲ್ಲಿ ನಿಂತಿದ್ದರಿಂದ ಅಯಾಸಗೊಂಡ ಅವರು ಹೃದಯಾಘಾತವಾಗಿ ಸ್ಥಳದಲ್ಲೇ ಮೃತಪಟ್ಟರು.[೨೪]

ಕೊನೆಯ ಸರತಿ ಸಾಲು-ರೈತ ಕುಸಿದು ಬಿದ್ದು ಸಾವು[ಬದಲಾಯಿಸಿ]

  • 93 ನೆಯ ಸಾವು(ಪಬ್ಲಿಕ್ ನ್ಯುವ್ಸ್ ಚಾನಲ್)
  • 4 Dec, 2016 ಪ್ರಜಾವಾಣಿ ವಾರ್ತೆ
  • ತಂಜಾವೂರು ಹತ್ತಿರ ವಾಜಕೈ ಗ್ರಾಮದ ನಿವಾಸಿ 70ರ ಹರೆಯದ ರೈತರೊಬ್ಬರು ಬ್ಯಾಂಕ್‍ನಿಂದ ಹಣ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾಗ ಹೃದಯಾಘಾತದಿಂದ ಸಾವಿಗೀಡಾದರು.. ಶನಿವಾರ ಬ್ಯಾಂಕ್‍ನ ಸರತಿ ಸಾಲಿನಲ್ಲಿ ತುಂಬಾ ಹೊತ್ತು ನಿಂತಿದ್ದ ಸುಬ್ರಮಣ್ಯನ್ ಅಲ್ಲೇ ಕುಸಿದು ಬಿದ್ದಿದ್ದರು. ಕೂಡಲೇ ವೈದ್ಯರನ್ನು ಕರೆ ತಂದಿದ್ದರೂ, ವೈದ್ಯರು ಬರುವ ಮುನ್ನ ಸುಬ್ರಮಣ್ಯನ್ ಅವರ ಉಸಿರು ನಿಂತಿತ್ತು. ಸುಬ್ರಮಣ್ಯನ್ ಅವರು ಪತ್ನಿಯೊಂದಿಗೆ ಬ್ಯಾಂಕ್‍ಗೆ ಬಂದಿದ್ದರು. ಅವರ ಖಾತೆಯಲ್ಲಿ 17,000 ರೂಪಾಯಿ ಇತ್ತು. ತಮ್ಮ ಹಳ್ಳಿಯಿಂದ ದೂರವಿರುವ ಬ್ಯಾಂಕ್‍ಗೆ ಬರುವಾಗ ಬೆಳಗ್ಗಿನ ತಿಂಡಿ ಕೂಡಾ ಅವರು ಸೇವಿಸಿರಲಿಲ್ಲ. ಬ್ಯಾಂಕ್‍ ಸರತಿ ಸಾಲಿನಲ್ಲಿ ನಿಂತಿದ್ದ ರೈತ ಕುಸಿದು ಬಿದ್ದು ಸಾವು

ರಜಿಯಾರ ಕೊನೆಯ ಸರತಿ[ಬದಲಾಯಿಸಿ]

  • ೯೪ನೆಯಸಾವು
  • ಉತ್ತರಪ್ರದೇಶದ :ಅಲಿಗಡ, ಹಳೆಯ ನೋಟು ಬದಲಾಯಿಸಿಕೊಡಲು ಬ್ಯಾಂಕ್‌ ಅಧಿಕಾರಿಗಳು ನಿರಾಕರಿಸಿದಕ್ಕೆ ಬೆಂಕಿ ಹಚ್ಚಿಕೊಂಡಿದ್ದ ದಿನಗೂಲಿ ಮಹಿಳಾ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಅಲ್ಲಿ ನಡೆಯಿತು. ಮೃತ ಮಹಿಳೆಯನ್ನು ರಜಿಯಾ (45) ಎಂದು ಗುರುತಿಸಲಾಗಿತ್ತು. ರೂ.500ರ ನೋಟು ಬದಲಾಯಿಸಿ ಕೊಡುವಂತೆ ರಜಿಯಾ ಬ್ಯಾಂಕಿನ ವಿವಿಧ ವಿಭಾಗಗಳಿಗೆ ನಾಲ್ಕೈದು ದಿನ ಸುತ್ತಿದ್ದರು. ಆದರೂ ಅಧಿಕಾರಿಗಳು ನೋಟು ಬದಲಾಯಿಸಿ ಕೊಟ್ಟಿರಲಿಲ್ಲ. ಇದರಿಂದ ಮನನೊಂದು ನವೆಂಬರ್‌ 20ರ ರಾತ್ರಿ ಬೆಂಕಿ ಹಚ್ಚಿಕೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದರು.[೨೫]

ಹಣದ ರೂಪದಲ್ಲಿ ಅತಿ ಕಡಿಮೆ ಕಪ್ಪುಹಣ ಇತ್ತೇ[ಬದಲಾಯಿಸಿ]

  • 20 ದಿನದ ಸಮೀಕ್ಷೆ:
  • ಹಣದ ರೂಪದಲ್ಲಿ ಅತಿ ಕಡಿಮೆ ಕಪ್ಪುಹಣ
  • ಕಪ್ಪು ಹಣದ ಮೇಲಿನ ಸರ್ಜಿಕಲ್ ಸ್ಟ್ರೈಕ್ ವಿಫಲ
  • 1 Dec, 2016
  • ದೇಶದೊಳಗೆ ಇದ್ದ ಕಪ್ಪು ಹಣ ಅದರಲ್ಲೂ ಮುಖ್ಯವಾಗಿ ಐದು ನೂರು ಮತ್ತು ಒಂದು ಸಾವಿರ ರೂಪಾಯಿಗಳ ನೋಟುಗಳ ರೂಪದಲ್ಲಿದ್ದ ಕಪ್ಪು ಹಣ ಎಷ್ಟೆಂಬ ಖಚಿತ ಲೆಕ್ಕಾಚಾರ ಯಾರ ಬಳಿಯೂ ಇರಲಿಲ್ಲ. ಇಲ್ಲಿಯ ತನಕ ಈ ಮೊತ್ತವನ್ನು ಮೂರರಿಂದ ಐದು ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗುತ್ತಿತ್ತು. ಹಣಕಾಸು ಖಾತೆಯ ರಾಜ್ಯ ಸಚಿವ ಅರ್ಜುನ್ ರಾಮ್ ಮೆಘ್ವಾಲ್ ಅವರು 'ನವೆಂಬರ್ 8ರವರೆಗಿನ ಲೆಕ್ಕಾಚಾರದಂತೆ ದೇಶದಲ್ಲಿ ಚಲಾವಣೆಯಲ್ಲಿದ್ದ 500 ಮತ್ತು 1000 ರೂಪಾಯಿಗಳ ನೋಟುಗಳ ಮೌಲ್ಯ 15.44 ಲಕ್ಷ ಕೋಟಿ ರೂಪಾಯಿಗಳು'
  • ನವೆಂಬರ್ 27ರ ತನಕ 8.45 ಲಕ್ಷ ಕೋಟಿ ಮೌಲ್ಯದ ಹಳೆಯ ನೋಟುಗಳು ಬ್ಯಾಂಕ್‌ಗಳಿಗೆ ಠೇವಣಿಯಾಗಿ ಬಂದಿದೆ. ಇದು ಕೇವಲ 18 ದಿನಗಳ ಲೆಕ್ಕಾಚಾರ.
  • ವಿವಿಧ ವಾಣಿಜ್ಯ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್‌ನಲ್ಲಿ ಮೀಸಲು ನಿಧಿಯೊಂದನ್ನು ಇಟ್ಟಿರಬೇಕಾಗುತ್ತದೆ. ಈ ಮೀಸಲು ನಿಧಿಗೆ ಸಾಮಾನ್ಯವಾಗಿ 500 ಮತ್ತು 1000 ರೂಪಾಯಿಗಳ ನೋಟುಗಳನ್ನೇ ಬಳಸಲಾಗುತ್ತಿತ್ತು. ಈ ನಿಧಿಯ ರೂಪದಲ್ಲಿದ್ದ ಹಣ 4.06 ಲಕ್ಷ ಕೋಟಿ ರೂಪಾಯಿಗಳು.
  • ಇದರ ಹೊರತಾಗಿ ಬ್ಯಾಂಕುಗಳಲ್ಲಿ ಇದ್ದ ಹಣದ ಪ್ರಮಾಣ 70,000 ಕೋಟಿ ರೂಪಾಯಿಗಳು. ಇದರಲ್ಲಿ ಬೇರೆ ಬೇರೆ ಮುಖ ಬೆಲೆಯ ನೋಟುಗಳೂ ಇರುತ್ತವೆ ಎಂಬ ಅಂಶವನ್ನು ಪರಿಗಣಿಸಬೇಕು. ಹಾಗೆಯೇ ಒಟ್ಟಾರೆ ನೋಟುಗಳಲ್ಲಿ 1000 ಮತ್ತು 500 ರೂಪಾಯಿ ನೋಟುಗಳೇ ಶೇಕಡಾ 86 ರಷ್ಟಿದ್ದವು ಎಂಬ ಅಂಶವನ್ನೂ ಗಮನದಲ್ಲಿಟ್ಟುಕೊಂಡು ಲೆಕ್ಕ ಹಾಕಬೇಕಾಗುತ್ತದೆ. ಸುಮಾರು 50,000 ಕೋಟಿಯಷ್ಟು ಹಣ ದೊಡ್ಡ ಮೊತ್ತದ ನೋಟುಗಳಲ್ಲಿದ್ದವು ಎಂದುಕೊಳ್ಳಬಹುದು.
  • ಅಂದರೆ ನವೆಂಬರ್ 27ರ ತನಕ ಜನರು ಬ್ಯಾಂಕ್‌ಗಳಿಗೆ ತಂದುಕೊಟ್ಟ ದೊಡ್ಡ ಮೊತ್ತದ ನೋಟುಗಳು, ರಿಸರ್ವ್ ಬ್ಯಾಂಕ್‌ನಲ್ಲಿದ್ದ ಮೀಸಲು ನಿಧಿ ಮತ್ತು ಬ್ಯಾಂಕ್‌ಗಳ ಬಳಿ ಇದ್ದ ನೋಟುಗಳನ್ನೆಲ್ಲಾ ಒಟ್ಟು ಸೇರಿಸಿದರೆ 13 ಲಕ್ಷ ಕೋಟಿ ರೂಪಾಯಿಗಳಾಗಿತ್ತು.
  • ಈವರೆಗಿನ ಲೆಕ್ಕಾಚಾರಗಳಂತೆ ಎರಡು ತೀರ್ಮಾನಕ್ಕೆ ಬರಬಹುದು. ಮೊದಲನೆಯದ್ದು 500 ಮತ್ತು 1000 ರೂಪಾಯಿಗಳ ನೋಟಿನ ರೂಪದಲ್ಲಿದ್ದ ಕಪ್ಪು ಹಣದ ಪ್ರಮಾಣ ಬಹಳ ಸಣ್ಣದಾಗಿತ್ತು. ಎರಡನೆಯದ್ದು ಕಪ್ಪು ಹಣವನ್ನು ಇಟ್ಟುಕೊಂಡಿದ್ದವರು ಯಶಸ್ವಿಯಾಗಿ ಅದನ್ನು ಚಲಾವಣೆಗೆ ಅರ್ಹವಾಗಿರುವ ನೋಟುಗಳಾಗಿ ಪರಿವರ್ತಿಸಿಕೊಂಡರು.
  • ಈ ಎರಡು ತರ್ಕಗಳಲ್ಲಿ ಯಾವು ನಿಜವಾದರೂ ಸರ್ಕಾರ ಬೆಟ್ಟ ಅಗೆದು ಇಲಿಯನ್ನು ಹಿಡಿವ ಕೆಲಸ ಮಾಡಿತು ಎನ್ನುವಂತಾಯಿತು. ಪ್ರಧಾನ ಮಂತ್ರಿಯವರು ಕಪ್ಪು ಹಣದ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌‌ನಲ್ಲಿ ಗಾಯಗೊಂಡವರು ಬಡವರು ಮಾತ್ರ ಎಂಬುದು ಬಹಳ ಜನ ತಜ್ಞರ ಅಭಿಪ್ರಾಯವಾಗಿತ್ತು.[೨೬]

ಅಕ್ರಮ ಹಣ ಬಹಿರಂಗ[ಬದಲಾಯಿಸಿ]

  • ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಈ ವರೆಗೆ ರೂ.2,000 ಕೋಟಿ ಅಕ್ರಮ ಹಣ ಬಹಿರಂಗವಾಗಿದೆ ಎಂದು ವಿತ್ತ ಸಚಿವಾಲಯ ಹೇಳಿತು. ರಿಸರ್ವ್ ಬ್ಯಾಂಕಿನ ಪ್ರಕಾರ ೧೫.೭೦ ಲಕ್ಷ ಕೋಟಿ ಹಣ ಚಲಾವಣೆಯಲ್ಲಿತ್ತು ಅದರಲ್ಲಿ ೨೦೦೦ ಕೋಟಿ ಕಪ್ಪು ಹಣ ಸಿಕ್ಕಿದಂತಾಯಿತು.[೨೭]

ಚಿನ್ನಕ್ಕೆ ತೆರಿಗೆ[ಬದಲಾಯಿಸಿ]

  • 2 Dec, 2016
  • ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಪತ್ತೆಯಾದ ಚಿನ್ನಾಭರಣ ನಿಗದಿತ ಮಿತಿಯೊಳಗೆ ಇದ್ದರೆ, ಅದನ್ನು ಜಪ್ತಿ ಮಾಡುವುದಿಲ್ಲ. ಆದರೆ ವಿವಾಹಿತ ಮಹಿಳೆಯೊಬ್ಬರು ಗರಿಷ್ಠ 500 ಗ್ರಾಂ, ಅವಿವಾಹಿತ ಮಹಿಳೆ ಗರಿಷ್ಠ 250 ಗ್ರಾಂ ಮತ್ತು ಪುರುಷ ಗರಿಷ್ಠ 100 ಗ್ರಾಂ ಚಿನ್ನ ಹೊಂದಿರಬಹುದು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿತ್ತು. ತಿದ್ದುಪಡಿ ಮಾಡಲಾದ ಕಾಯ್ದೆಯ 115ಬಿಬಿಇ ಸೆಕ್ಷನ್ ಪ್ರಕಾರ ಕಪ್ಪುಹಣದ ಮೇಲೆ ಶೇ 50ರಷ್ಟು ತೆರಿಗೆ ಮತ್ತು ಶೇ 25ರಷ್ಟು ದಂಡ ವಿಧಿಸಬಹುದು. ಆದರೆ ಅಘೋಷಿತ ಆಸ್ತಿ ಅಥವಾ ಸಂಪತ್ತು ಕಪ್ಪುಹಣವೆಂದು ಸಾಬೀತಾದರೆ ಅದರ ಮೇಲೆ ಶೇ 10ರಷ್ಟು ಹೆಚ್ಚುವರಿ ದಂಡ ವಿಧಿಸಲು ಅವಕಾಶ ಕಲ್ಪಿಸುವ ಸಲುವಾಗಿ ಮತ್ತೊಂದು ಸೆಕ್ಷನ್ ಸೇರಿಸಲಾಗಿದೆ, ಎಂದು ಸಿಬಿಡಿಟಿ ತಿಳಿಸಿದೆ.
  • ಆದಾಯ ತೆರಿಗೆ ಕಾನೂನು ತಿದ್ದುಪಡಿ ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿತು. ರಾಜ್ಯಸಭೆಯ ಪರಿಶೀಲನೆ ನಂತರ ಅದಕ್ಕೆ ರಾಷ್ಟ್ರಪತಿ ಅಂಕಿತ ದೊರೆಯಬೇಕಿತ್ತು. ಅದರೆಅದು ಆಗಲಿಲ್ಲ[೨೮]

ಆಂಧ್ರದ ತುರ್ತು ನಗದು ನೆರವಿಗೆ ಕರೆ[ಬದಲಾಯಿಸಿ]

  • ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ತನ್ನ ರಾಜ್ಯದಲ್ಲೇ ನಗದು ಹಣವೇ ಇಲ್ಲ; ಕೂಡಲೇ ನಮ್ಮ ನೆರವಿಗೆ ಬನ್ನಿ ಎಂದು ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ಗೆ ಫೋನ್‌ ಮಾಡಿ 2,420 ಕೋಟಿ ರೂ. ನಗದನ್ನು ಪಡೆದಿರುವ ಘಟನೆ ವರದಿಯಾಗಿದೆ.ಊರ್ಜಿತ್‌ ಪಟೇಲ್‌ ಅವರು ನಾಯ್ಡು ಅವರ ತುರ್ತು ಕರೆಯನ್ನು ಮನ್ನಿಸಿ ವಿಶಾಖಪಟ್ಟಣ ಮತ್ತು ತಿರುಪತಿಗೆ ಬಾಡಿಗೆ ವಿಮಾನವನ್ನು ಗೊತ್ತು ಪಡಿಸಿಕೊಂಡು 2,420 ಕೋಟಿ ರೂ. ಹೊಸ ನೋಟುಗಳ ನಗದನ್ನು ಪೂರೈಸಿರುವುದಾಗಿ ವರದಿಯಾಗಿದೆ.[೨೯]

ಗ್ರಾಮೀಣ ಪ್ರದೇಶದ ಜನರ ಕಷ್ಟ ಪರಿಹಾರಕ್ಕೆ ಕೈಗೊಂಡ ಕ್ರಮಗಳೇನು:‘ಸುಪ್ರೀಂ’ ಪ್ರಶ್ನೆ[ಬದಲಾಯಿಸಿ]

ಒಂದು ಎಸ್.ಬಿ.ಐ.ಬ್ರ್ಯಾಚ್ ರಾತ್ರಿಯಲ್ಲಿಯೂ ತೆರೆದಿದ್ದು, ಮತ್ತು ಎಟಿಎಮ್ ನಲ್ಲಿ ಕೂಡಾ ಜನರ ಸರತಿ ಸಾಲು ರಾತ್ರಿಯಲ್ಲೂ ನಿಂತಿರುವುದು.
  • 3 Dec, 2016
  • ನೋಟು ರದ್ದತಿಯಿಂದಾಗಿ ಸಹಕಾರ ಬ್ಯಾಂಕ್‌ಗಳ ಮೇಲೆಯೇ ಅವಲಂಬಿತರಾಗಿರುವ ಗ್ರಾಮೀಣ ಪ್ರದೇಶದ ಜನರ ಕಷ್ಟ ಮತ್ತು ಅನನುಕೂಲಗಳನ್ನು ಕಡಿಮೆ ಮಾಡಲು ಕೈಗೊಂಡ ಕ್ರಮಗಳನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ನೋಟು ರದ್ದತಿಗೆ ಸಂಬಂಧಿಸಿ ಸಲ್ಲಿಸಲಾಗಿರುವ ವಿವಿಧ ದೂರುಗಳನ್ನು ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರ ಪೀಠ ವಿಚಾರಣೆ ನಡೆಸಿತು. ಎಲ್ಲ ದೂರುದಾರರು ಜತೆ ಕುಳಿತು ಯಾವ ದೂರನ್ನು ಹೈಕೋರ್ಟಿನಲ್ಲಿ ವಿಚಾರಣೆ ನಡೆಸಬಹುದು ಮತ್ತು ಯಾವುದನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಬೇಕು ಎಂದು ವರ್ಗೀಕರಿಸುವಂತೆ ಪೀಠ ಸೂಚಿಸಿತು.
  • ‘ಕೇಂದ್ರ ಸರ್ಕಾರ ಸಲ್ಲಿಸಿರುವ ಹೆಚ್ಚುವರಿ ಪ್ರಮಾಣಪತ್ರದಲ್ಲಿ ಇಡೀ ಒಂದು ಅಧ್ಯಾಯ ಸಹಕಾರ ಬ್ಯಾಂಕುಗಳ ಬಗ್ಗೆಯೇ ಇದೆ. ಸಹಕಾರ ಬ್ಯಾಂಕುಗಳ ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿಲ್ಲ ಎಂದಲ್ಲ. ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರ ಬ್ಯಾಂಕುಗಳಲ್ಲಿ ಅಗತ್ಯ ಸೌಲಭ್ಯಗಳು, ವ್ಯವಸ್ಥೆ ಮತ್ತು ಮೂಲಸೌಕರ್ಯದ ಕೊರತೆ ಇದೆ’ ಎಂದು ಸರ್ಕಾರದ ಪರವಾಗಿ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಹೇಳಿದರು. ಸಹಕಾರ ಬ್ಯಾಂಕುಗಳಲ್ಲಿ ನಕಲಿ ನೋಟು ಪತ್ತೆ ಮಾಡುವ ಪರಿಣತಿ ಇಲ್ಲದೇ ಇರುವುದರಿಂದ ಅವುಗಳನ್ನು ನೋಟು ರದ್ದತಿ ಅಭಿಯಾನದಿಂದ ಉದ್ದೇಶಪೂರ್ವಕವಾಗಿ ಹೊರಗೆ ಇರಿಸಲಾಗಿದೆ ಎಂದರು. ಗ್ರಾಮೀಣ ಅರ್ಥ ವ್ಯವಸ್ಥೆ ಬಹುತೇಕ ಸಹಕಾರ ಬ್ಯಾಂಕುಗಳ ಮೇಲೆಯೇ ಅವಲಂಬಿತವಾಗಿದೆ. ನೋಟು ರದ್ದತಿ ಪ್ರಕ್ರಿಯೆಯಿಂದ ಸಹಕಾರ ಬ್ಯಾಂಕುಗಳನ್ನು ಹೊರಗಿರಿಸಿದ್ದರಿಂದಾಗಿ ಗ್ರಾಮೀಣ ಜೀವನಕ್ಕೆ ಲಕ್ವ ಹೊಡೆದಂತಾಗಿದೆ ಎಂದು ಸಹಕಾರ ಬ್ಯಾಂಕುಗಳ ಪರ ಹಿರಿಯ ವಕೀಲ ಪಿ. ಚಿದಂಬರಂ ಹೇಳಿದರು.[೩೦]

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಕೇಳಿದ ಕೆಲವು ಪ್ರಶ್ನೆಗಳು[ಬದಲಾಯಿಸಿ]

  • ನೋಟು ರದ್ದತಿ ಆದೇಶದಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ ಕಾಯ್ದೆಯ ಸೆಕ್ಷನ್‌ 26(2)ನ ಉಲ್ಲಂಘನೆ ಆಗಿದೆಯೇ?
  • ಯಾವುದೇ ವ್ಯಕ್ತಿಯ ಆಸ್ತಿಯನ್ನು ಕಿತ್ತುಕೊಳ್ಳಬಾರದು ಎನ್ನುವ ಸಂವಿಧಾನದ 300(ಎ) ವಿಧಿಗೆ ನೋಟು ರದ್ದತಿ ಆದೇಶವು ವಿರುದ್ಧವಾಗಿದೆಯೇ?
  • ಸಮಾನತೆ ಹಾಗೂ ವೃತ್ತಿ ಆಯ್ಕೆಯ ಸ್ವಾತಂತ್ರ್ಯಕ್ಕೆ ಈ ಆದೇಶ ವಿರುದ್ಧವೇ?
  • ಸಕ್ರಮ ಆಗಿರುವ, ತೆರಿಗೆ ಪಾವತಿಸಿರುವ ಹಣವನ್ನು ನಗದು ರೂಪದಲ್ಲಿ ಹಿಂಪಡೆಯಲು ಮಿತಿ ಹೇರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯೇ?
  • ಹಳೆಯ ನೋಟುಗಳನ್ನು ಠೇವಣಿ ರೂಪದಲ್ಲಿ ಸ್ವೀಕರಿಸುವಂತಿಲ್ಲ ಎಂಬ ನಿರ್ಬಂಧ ಹೇರಿ, ಡಿಸಿಸಿ ಬ್ಯಾಂಕ್‌ಗಳಿಗೆ ತಾರತಮ್ಯ ಎಸಗಲಾಗಿದೆಯೇ?
  • ನೋಟು ರದ್ದತಿ ವಿಚಾರವನ್ನು ಐವರು ನ್ಯಾಯಮೂರ್ತಿಗಳಿರುವ ಸಂವಿಧಾನ ಪೀಠಕ್ಕೆ ವರ್ಗಾಯಿಸಬಹುದೇ?[೩೧]

ಶೇಖರಗುಪ್ತ ಪತ್ರಕರ್ತ-ಸಂಪಾದಕ[ಬದಲಾಯಿಸಿ]

  • ನ್ಯಾಯಯುತವಾಗಿ ಹೇಳುವುದಾದರೆ, ಪ್ರಧಾನಿ ಕೈಗೊಂಡ ದಿಟ್ಟ ನಿರ್ಧಾರಕ್ಕೆ ದೇಶದಾದ್ಯಂತ ಈಗಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕೆಳ ಹಂತದ ಮಧ್ಯಮ ವರ್ಗದವರು ಮತ್ತು ಬಡವರು ಅಥವಾ ವಿಶೇಷವಾಗಿ ಹೇಳುವುದಾದರೆ, ಬ್ಯಾಂಕ್‌ ಮತ್ತು ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ನಿಂತವರು ಮೋದಿ ನಿರ್ಧಾರವನ್ನು ಹೊಗಳುತ್ತಿದ್ದಾರೆ. ಒಂದು ತಿಂಗಳ ನಂತರ ಅವರೆಲ್ಲ ಗಲಿಬಿಲಿಗೊಂಡಿದ್ದಾರೆ. ಈ ಕರೆನ್ಸಿ ಸಮರಕ್ಕೆ ನಾಂದಿ ಹಾಡಿರುವುದಕ್ಕೆ ಏನೋ ಬಲವಾದ ಕಾರಣ ಇರಲೇಬೇಕು ಎಂದು ಅವರು ಈಗಲೂ ನಂಬಿದ್ದಾರೆ, ಎಂದು ಶೇಖರಗುಪ್ತ ಪತ್ರಕರ್ತ ಹೇಳಿದ್ದರು[೩೨]

ಎಟಿಎಂ ಮುಂದೆ ಇದ್ದ ಜನರ ಸಾಲು ನೋಡಿ, ಮೋದಿಯನ್ನು ಬೈದಿದ್ದಕ್ಕೆ ಹಿಗ್ಗಾಮುಗ್ಗ ಥಳಿತ[ಬದಲಾಯಿಸಿ]

  • 20 Dec, 2016
  • ಆಗ್ನೇಯ ದೆಹಲಿಯ ಜೈತ್‍ಪುರ್‌ ಪ್ರದೇಶದಲ್ಲಿ, 45ರ ಹರೆಯದ ಲಲ್ಲನ್ ಸಿಂಗ್ ಕುಶ್ವಾಹ ಎಂಬ ವ್ಯಕ್ತಿ ಇಸ್ಮಾಯಿಲ್‍ಪುರ್ ನಲ್ಲಿರುವ ಅಂಗಡಿಯೊಂದಕ್ಕೆ ಟೀವಿ ಖರೀದಿಸಲೆಂದು ಹೋದಾಗ ಆ ಅಂಗಡಿಯ ಪಕ್ಕದಲ್ಲಿದ್ದ ಎಟಿಎಂ ಮುಂದೆ ಜನ ಸಾಲು ಹಟ್ಟಿ ನಿಂತಿದ್ದರು. ಎಟಿಎಂ ಮುಂದೆ ಇದ್ದ ಸಾಲು ನೋಡಿ ಕುಶ್ವಾಹಾ, 'ಮೋದಿಯವರು ನೋಟು ರದ್ದು ಮಾಡಿದ್ದರಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ', ಎಂದು ಹೇಳಿ ಮೋದಿಯವರಿಗೆ ಬೈದರೆ, ಪ್ರಧಾನಿ ಮೋದಿಯವರನ್ನು ಬೈದ ವ್ಯಕ್ತಿಗೆ ಕ್ರಿಕೆಟ್ ಸ್ಟಂಪಿನಿಂದ ಹಿಗ್ಗಾಮುಗ್ಗ ಥಳಿಸಿದ್ದ, ನಂತರ ಕ್ರಿಕೆಟ್ ಸ್ಟಂಪ್‍ನಿಂದ ತಲೆಗೆ ಹೊಡೆದಿದ್ದ. ಅವನು ಕುಶ್ವಾಹ ಜೇಬಿನ ರೂ. 6,000 ನಗದು ತೆಗೆದುಕೊಂಡಿದ್ದಾನೆಂದು ಕುಶ್ವಾಹ ಹೇಳಿದ್ದ. ಆತನ ಹೊಡೆತದಿಂದ ತಲೆಗೆ ಗಂಭೀರ ಗಾಯವಾಗಿದ್ದು, ಮೂರು ಹೊಲಿಗೆ ಹಾಕಲಾಯಿತು.[೩೩][೩೪]

ಕರೆನ್ಸಿ ಕೊರತೆಗೆ ಕಾರಣ[ಬದಲಾಯಿಸಿ]

  • 20 Dec, 2016;
  • ಚಲಾವಣೆಗೆ ಕೊಟ್ಟ ಮೊತ್ತ:ರೂ.4.49 ಲಕ್ಷ ಕೋಟಿ
  • ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ರೂ.1000 ಮತ್ತು ರೂ.500 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಳಿಸುವ ನಿರ್ಧಾರ ಘೋಷಿಸುವಾಗ ಆರ್‌ಬಿಐ ಬಳಿಯಲ್ಲಿ ಚಲಾವಣೆಗೆ ಹೊಸ ನೋಟು ಇದ್ದಿದ್ದು ರೂ.2 ಸಾವಿರ ಮುಖಬೆಲೆಯ ರೂ.4.49 ಲಕ್ಷ ಕೋಟಿ ಮೌಲ್ಯದ ನೋಟುಗಳು ಮಾತ್ರ!
  • 8ಕ್ಕೆ ಹಿಂದೆ ದೇಶದಲ್ಲಿ ಚಲಾವಣೆಯಲ್ಲಿದ್ದದ್ದು ಈಗ ರದ್ದಾಗಿರುವ :ರೂ.20.51 ಲಕ್ಷ ಕೋಟಿ
  • ನವೆಂಬರ್‌ 8ರವರೆಗೆ ದೇಶದಲ್ಲಿ ಈಗ ರದ್ದಾಗಿರುವ ರೂ.9.13 ಲಕ್ಷ ಕೋಟಿ ಮೌಲ್ಯದ ರೂ.1,000 ಮುಖಬೆಲೆಯ ನೋಟುಗಳು ಮತ್ತು ರೂ.500 ಮುಖಬೆಲೆಯ ನೋಟುಗಳಲ್ಲಿ ರೂ.11.38 ಲಕ್ಷ ಕೋಟಿ ಚಲಾವಣೆಯಲ್ಲಿತ್ತು ಎಂದು ಆರ್‌ಬಿಐ ತಿಳಿಸಿದೆ.
  • ಅಚ್ಚರಿಯ ಸಂಗತಿ ಎಂದರೆ, ನವೆಂಬರ್‌ 9ರಿಂದ 19ರ ಅವಧಿಯಲ್ಲಿ ಬ್ಯಾಂಕುಗಳಿಗೆ ಎಷ್ಟು ನೋಟುಗಳನ್ನು ವಿತರಣೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಆರ್‌ಬಿಐ ಪ್ರತಿಕ್ರಿಯಿಸಿಲ್ಲ. ಆರ್‌ಟಿಐ ಕಾಯ್ದೆಯ ಸೆಕ್ಷನ್‌ 8(1)(ಜಿ) ಉಲ್ಲೇಖಿಸಿ, ಈ ಮಾಹಿತಿ ನೀಡಲು ನಿರಾಕರಿಸಿದೆ.[೩೫]

ನಿಯಮ ಬದಲು - ಹೊಸ ಆದೇಶ[ಬದಲಾಯಿಸಿ]

  • 21 Dec, 2016
  • ದಿ.19-12-2016 ರಿಂದ ರದ್ದಾದ ನೋಟುಗಳಲ್ಲಿ ಒಂದು ಖಾತೆಗೆ ರೂ.5,000 ಕ್ಕಿಂತ ಹೆಚ್ಚು ಮೊತ್ತ ಒಮ್ಮೆ ಮಾತ್ರ ಜಮೆ ಮಾಡಬಹುದು ಎಂದು ಆರ್‌ಬಿಐ ಹೇಳಿದ್ದರೂ, ಕೆಲವೊಂದು ಬ್ಯಾಂಕ್‍ಗಳು ರೂ.5,000 ಕ್ಕಿಂತ ಹೆಚ್ಚು ಹಣ ಸ್ವೀಕರಿಸಲು ನಿರಾಕರಿಸಿದವು.
  • ರದ್ದು ಮಾಡಲ್ಪಟ್ಟ ರೂ.500 ಮತ್ತು ರೂ.1000 ನೋಟುಗಳು ನಿಮ್ಮ ಬಳಿಯಲ್ಲಿದ್ದರೆ ಡಿಸೆಂಬರ್ 30ರೊಳಗೆ ಒಂದು ಖಾತೆಗೆ ರೂ.5,000 ಕ್ಕಿಂತ ಹೆಚ್ಚು ಮೊತ್ತ ಒಮ್ಮೆ ಮಾತ್ರ ಜಮೆ ಮಾಡಬಹುದು. ಅದೇ ವೇಳೆ ಹೀಗೆ ಜಮೆ ಮಾಡುವಾಗ ಈವರೆಗೆ ಯಾಕೆ ಜಮೆ ಮಾಡಿಲ್ಲ ಎಂಬುದಕ್ಕೆ ಬ್ಯಾಂಕ್‌‍ನ ಇಬ್ಬರು ಅಧಿಕಾರಿಗಳಿಗೆ ವಿವರಣೆ ನೀಡಬೇಕು ಎಂದು ಆರ್‌ಬಿಐ ಹೊಸ ಆದೇಶ ನೀಡಿತ್ತು.[೩೬]

ವಿರೋಧಾಭಾಸ[ಬದಲಾಯಿಸಿ]

  • ಹಣಕಾಸು ರಾಜ್ಯಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಕಳೆದ ನವೆಂಬರ್ 29 ರಂದು ರಾಜ್ಯಸಭೆಗೆ ತಿಳಿಸಿದ ಪ್ರಕಾರ ನವೆಂಬರ್ ಎಂಟರ ಮಧ್ಯರಾತ್ರಿ ರದ್ದಾದ ನೋಟುಗಳ ಸಂಖ್ಯೆ 171.65 ಕೋಟಿ. ಇವುಗಳ ಒಟ್ಟು ಮೌಲ್ಯ ರೂ.15.44 ಲಕ್ಷ ಕೋಟಿ.ಮೂರೇ ವಾರಗಳ ಅವಧಿಯಲ್ಲಿ ರೂ.15.44 ಲಕ್ಷ ಕೋಟಿ ಪೈಕಿ ರೂ.13.01 ಲಕ್ಷ ಕೋಟಿ ರುಪಾಯಿ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸು ಬಂದು ಸೇರಿದ್ದವು. ಅಂದರೆ 15.44 ಲಕ್ಷ ಕೋಟಿ ರುಪಾಯಿಗಳ ಶೇ 84.26ರಷ್ಟು ಮೊತ್ತ ಗಡುವು ತೀರಲು 25 ದಿನಗಳು ಬಾಕಿ ಇರುವಂತೆಯೇ ಮರಳಿತ್ತು. ಹೀಗಾಗಿ ಕಪ್ಪು ಹಣ ನಿವಾರಣೆಯ ಗುರಿ ದೂರವೇ ಉಳಿದ ಬೆಳವಣಿಗೆ ಕೇಂದ್ರ ಸರ್ಕಾರವನ್ನು ನಿರಾಶೆಗೆ ನೂಕಿರುವ ಸೂಚನೆಗಳು ಕಂಡವು.
  • ಇನ್ನಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿ ಬಾರದಂತೆ ತಡೆಯುವ ‘ನಿರುತ್ತೇಜಕ’ ಕ್ರಮಗಳಿಗೆ ಕೈಹಾಕತೊಡಗಿದೆ. ಗುರಿ ಕಂಬಗಳನ್ನು ಬದಲಿಸತೊಡಗಿದೆ. ಕಪ್ಪುಹಣದ ಮಾತು ಬಿಟ್ಟು ನಗದುರಹಿತ ಸಮಾಜ ನಿರ್ಮಾಣದ ಮಾತಾಡತೊಡಗಿದ್ದು ಈ ದಿಸೆಯಲ್ಲಿ ಗೋಚರಿಸಿದ ಬಹುಮುಖ್ಯ ಸಂಕೇತ. ಜೊತೆಗೆ ಮಾಹಿತಿ ಹಕ್ಕು ಕಾಯಿದೆ ಪ್ರಕಾರ ಸಲ್ಲಿಸಲಾಗಿದ್ದ ಪ್ರಶ್ನೆಯೊಂದಕ್ಕೆ ನೀಡಲಾಗಿರುವ ಉತ್ತರವೊಂದು ರದ್ದು ಮಾಡಲಾಗಿರುವ ನೋಟುಗಳ ಒಟ್ಟು ಮೌಲ್ಯವನ್ನು ರೂ.20 ಲಕ್ಷ ಕೋಟಿ ಎಂದು ವಿವರಿಸಿದೆ. ರೂ.15 ಲಕ್ಷ ಕೋಟಿ ಮೊತ್ತದ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಹರಿದು ಬಂದರೂ ಇನ್ನೂ ರೂ. ಐದು ಲಕ್ಷ ಕೋಟಿ ಹೊರಗೇ ಉಳಿದಿದೆ. ಅದು ಕಪ್ಪು ಹಣಲ್ಲದೆ ಇನ್ನೇನೂ ಅಲ್ಲ ಎಂದು ಬಣ್ಣಿಸಿ, ನೋಟು ರದ್ದು ಕ್ರಮ ಯಶಸ್ವಿಯಾಯಿತೆಂದು ತಪ್ಪಾಗಿ/ ಸುಳ್ಳು ಸಾರುವ ಉದ್ದೇಶ ಸರ್ಕಾರದ್ದು ಎಂಬುದಾಗಿ ಅರ್ಥವೇತ್ತರು ವ್ಯಾಖ್ಯಾನಿಸಿದ್ದರು.[೩೭]

ನೋಟು ಬಿಡುಗಡೆ- ವಿವರಣೆ[ಬದಲಾಯಿಸಿ]

  • Dec 21, 2016
  • ಬುಧವಾರ 2016 ನವೆಂಬರ್ 10 ರಿಂದ ಡಿಸೆಂಬರ್ 19-ವರೆಗೆ ರಿಸರ್ವ್ ಬ್ಯಾಂಕ್ ಈ ಅವಧಿಯಲ್ಲಿ 2.2 ಶತಕೋಟಿ (ರೂ 220 ಕೋಟಿ ನೋಟುಗಳನ್ನು); ಹೊಸ 500 ಮತ್ತು ರೂ 2,000 ನೋಟುಗಳನ್ನು ಹೊರಡಿಸಿದೆ ಎಂದು ಹೇಳಿದೆ.
  • ಕೇಂದ್ರ ಬ್ಯಾಂಕ್ ವಿವರ ನೀಡಿ ,ಬ್ಯಾಂಕುಗಳು ಅಂತಿಮವಾಗಿ ತಿಂಗಳ ಹೆಚ್ಚಿನ ಮೌಲ್ಯದ ನೋಟುಗಳ ಅನಾಣ್ಯೀಕರಣದ ನಂತರ ಸಾರ್ವಜನಿಕರಿಗೆ ರೂ 5,92 ಲಕ್ಷ ಕೋಟಿ ಮೌಲ್ಯದ ಕರೆನ್ಸಿ ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ. ಡಿಸೆಂಬರ್ 10 ಕ್ಕೆ ಅದೇ ಹೆಚ್ಚಿನ ಮೌಲ್ಯದ ಅನಾಣ್ಯೀಕರಣದ 12.44 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನು ವಾಪಾಸು ಪಡೆದಿದೆ.[೩೮]

ಕಪ್ಪುಹಣ ಸಿಕ್ಕಿದ್ದು[ಬದಲಾಯಿಸಿ]

  • ನವೆಂಬರ್‌ 9ರ ಬಳಿಕ ದೇಶದ 734 ಕಡೆಗಳಲ್ಲಿ ಐಟಿ ದಾಳಿ ನಡೆದಿದೆ. ಈ ದಾಳಿಗಳಲ್ಲಿ ದಾಖಲೆ ಇಲ್ಲದ ಒಟ್ಟು ರೂ.3,300 ಕೋಟಿ ಮೌಲ್ಯದ ನಗದು, ಚಿನ್ನಾಭರಣ ಹಾಗೂ ಆಸ್ತಿ ಪತ್ತೆಯಾಗಿದೆ. ಈ ಪೈಕಿ ರೂ.92 ಕೋಟಿ ಮೌಲ್ಯದ ಹೊಸ ನೋಟುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.(ಅಂದಾಜು 4 ಲಕ್ಷ ಕೋಟಿಯಲ್ಲಿ).[೩೯]

ನಗದುರಹಿತ ವಹಿವಾಟಿಗೆ ಧಾವಂತ ಏಕೆ?[ಬದಲಾಯಿಸಿ]

  • 23 Dec, 2016;ಪ್ರಕಾಶ ನಡಹಳ್ಳಿ;
  • ಅವಶ್ಯ ಮೂಲ ಸೌಕರ್ಯಗಳನ್ನು ಒದಗಿಸದೆ ನಗದುರಹಿತ ವಹಿವಾಟಿಗೆ ಹೊರಳಿಕೊಳ್ಳಿ ಎಂದು ಒತ್ತಡ ಹೇರುವುದು ಸರಿಯಲ್ಲ. ನೋಟು ರದ್ದತಿಯ ತನ್ನ ದುಡುಕು ನಿರ್ಧಾರದಿಂದ ಆಗಿರುವ ಅವಾಂತರದಿಂದ ಪಾರಾಗಲು, ಜನರನ್ನು ಬಲವಂತದಿಂದ ಇನ್ನೊಂದು ಅಪಾಯಕ್ಕೆ ದೂಡಿದಂತೆ ಅನ್ನಿಸುತ್ತಿಲ್ಲವೇ?ಆದ್ದರಿಂದ ನಗದುರಹಿತ ಎನ್ನುವುದರ ಬದಲು, ಕಡಿಮೆ ನಗದು ವ್ಯವಸ್ಥೆ ಎನ್ನಬಹುದು. ನಗದುರಹಿತ ವಹಿವಾಟಿಗೆ ಉತ್ತೇ ಜನ, ಕಪ್ಪು ಹಣ ಹಾಗೂ ನಕಲಿ ನೋಟುಗಳ ವಿರುದ್ಧದ ಸಮರದ ಬಗ್ಗೆ ತಕರಾರು ಇಲ್ಲ. ಆದರೆ ಸರ್ಕಾರದ ಧಾವಂತ ಏಕೆ ಎಂಬುದು ಅರ್ಥವಾಗುತ್ತಿಲ್ಲ. ಈ ಅವಸರದ ತೀರ್ಮಾನಕ್ಕೆ ಆರ್ಥಿಕ ಅಗತ್ಯತೆಯೇ ಏಕೈಕ ಕಾರಣ ಆಗಿತ್ತೆಂದು ನಂಬುವುದು ಕಷ್ಟ.[೪೦]

ಹಳೆ ನೋಟಿಗೆ ದಂಡ[ಬದಲಾಯಿಸಿ]

  • ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ29 ಡಿಸೆಂ,2016:
  • ಮಾನ್ಯತೆ ಕಳೆದುಕೊಂಡಿರುವ ಹಳೆಯ ₹ 500 ಹಾಗೂ ₹ 1,000 ಮುಖಬೆಲೆಯ ನೋಟುಗಳನ್ನು ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚು ಇಟ್ಟುಕೊಳ್ಳುವವರಿಗೆ ದಂಡ ವಿಧಿಸಲು ಅವಕಾಶ ನೀಡುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹಳೆ ನೋಟು ಇಟ್ಟುಕೊಂಡವರಿಗೆ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಇದರಲ್ಲಿ ಇರುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಈ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿದೆ.
  • ಜನವರಿ 1ರಿಂದ ಮಾರ್ಚ್‌ 31ರ ನಡುವಣ ಅವಧಿಯಲ್ಲಿ ಹಳೆ ನೋಟುಗಳನ್ನು ಜಮಾ ಮಾಡುವಾಗ ತಪ್ಪು ಮಾಹಿತಿ ಕೊಟ್ಟಿರುವುದು ಗೊತ್ತಾದರೆ, ರೂ.5 ಸಾವಿರ ಅಥವಾ ಜಮಾ ಮಾಡಿದ ಮೊತ್ತದ ಐದು ಪಟ್ಟು ದಂಡ ವಿಧಿಸಲಾಗುತ್ತದೆ ಎಂದು ಸಂಪುಟ ಸಭೆಯಲ್ಲಿ ಪಾಲ್ಗೊಂಡವರೊಬ್ಬರು ತಿಳಿಸಿದರು. ಸುಗ್ರೀವಾಜ್ಞೆಗೆ ರಾಷ್ಟ್ರಪತಿಯವರ ಒಪ್ಪಿಗೆ ದೊರೆತ ನಂತರ, ಹಳೆಯ ನೋಟುಗಳನ್ನು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಡಿಸೆಂಬರ್ 31ರ ನಂತರವೂ ಇಟ್ಟುಕೊಳ್ಳಲು ಸಾಧ್ಯವಾಗಬಹುದು ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.
  • ತಿದ್ದುಪಡಿಗೆ ಒಪ್ಪಿಗೆ:ಮುಂದಿನ ದಿನಗಳಲ್ಲಿ ಕಾನೂನು ಸಮಸ್ಯೆಗಳು ಎದುರಾಗಬಾರದು ಎಂಬ ಉದ್ದೇಶದಿಂದ, ಮಾನ್ಯತೆ ಕಳೆದುಕೊಂಡ ನೋಟುಗಳ ಮೇಲೆ ಸರ್ಕಾರ ಹಾಗೂ ಆರ್‌ಬಿಐ ಹೊಂದಿರುವ ಬಾಧ್ಯತೆ ಇಲ್ಲವಾಗಿಸಲು ‘ಆರ್‌ಬಿಐ ಕಾಯ್ದೆ’ಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೂ ಕೇಂದ್ರ ಸಂಪುಟ ಅಸ್ತು ಎಂದಿದೆ. ಗರಿಷ್ಠ ಮುಖಬೆಲೆಯ ನೋಟುಗಳನ್ನು ಸರ್ಕಾರ ನವೆಂಬರ್ 8 ರಿಂದ ಅನ್ವಯವಾಗುವಂತೆ ರದ್ದು ಮಾಡಿದೆ.

ರದ್ದುನೋಟು ಇದ್ದರೆ ದಂಡ[ಬದಲಾಯಿಸಿ]

  • 10 ಸಾವಿರ ಅಥವಾ ಪತ್ತೆಯಾದ ಹಳೆಯ ನೋಟುಗಳ ಮೌಲ್ಯದ ಐದು ಪಟ್ಟು (ಇವೆರಡರಲ್ಲಿ ಯಾವುದು ಹೆಚ್ಚೋ, ಅದು).
  • ಸಾಲ ಮರುಪಾವತಿ ಅವಧಿ ವಿಸ್ತರಣೆ:: ರೂ.1 ಕೋಟಿವರೆಗಿನ ಕಾರು, ಗೃಹ, ಕೃಷಿ ಮತ್ತು ಇತರ ಸಾಲಗಳ ಮರುಪಾವತಿಗೆ ಆರ್‌ಬಿಐ ಮತ್ತೆ 30 ದಿನಗಳ ಕಾಲಾವಕಾಶ ನೀಡಿದೆ. ಈ ಸಾಲಗಳ ಮರುಪಾವತಿಗೆ ಆರ್‌ಬಿಐ ಈಗಾಗಲೇ 60 ದಿನಗಳ ಹೆಚ್ಚುವರಿ ಅವಧಿ ನೀಡಿತ್ತು. ಹೀಗಾಗಿ, ತಮ್ಮ ಸಾಲವು ‘ವಸೂಲಾಗದ ಸಾಲ’ದ (ಎನ್‌ಪಿಎ) ಪಟ್ಟಿ ಸೇರದಂತೆ ನೋಡಿಕೊಳ್ಳಲು ಗ್ರಾಹಕರಿಗೆ ಒಟ್ಟು 90 ದಿನಗಳ ಕಾಲಾವಕಾಶ ಸಿಕ್ಕಂತೆ ಆಗಿದೆ. ಈ ಅವಕಾಶವು ನವೆಂಬರ್ 1ರಿಂದ ಡಿಸೆಂಬರ್ 31ರ ನಡುವೆ ಪಾವತಿಸಬೇಕಿರುವ ಮೊತ್ತಕ್ಕೆ ಮಾತ್ರ ಅನ್ವಯ ಆಗುತ್ತದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.[೪೧]
  • ರದ್ದು ಪಡಿಸಿರುವ ರೂ.500 ಮತ್ತು ರೂ.1000 ಹಳೆಯ ನೋಟು ಗಳ ಬಳಕೆ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. 2017ರ ಮಾರ್ಚ್‌ 31ರ ನಂತರ ₹10 ಸಾವಿರಕ್ಕಿಂತ ಹೆಚ್ಚು ಹಳೇ ನೋಟು ಸಂಗ್ರಹಿಸಿದ್ದರೆ ಹತ್ತು ಪಟ್ಟು ದಂಡ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ.[೪೨]
  • ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನವೆಂಬರ್‌ 8 ರಿಂದಲೇ ರದ್ದು ಮಾಡಿದೆ. ಜನಸಾಮಾನ್ಯರು ಅವುಗಳನ್ನು ಬ್ಯಾಂಕ್‌ಗಳಿಗೆ ಜಮಾ ಮಾಡುವ ಅವಧಿ ಕೂಡ ನಿನ್ನೆಗೆ ಮುಗಿದಿದೆ. ಇವೇನಿದ್ದರೂ ರದ್ದಿ ಕಾಗದಕ್ಕೆ ಸಮಾನ. ಆದರೂ ಜನಸಾಮಾನ್ಯರ ಬಳಿ 10ಕ್ಕಿಂತ ಹೆಚ್ಚು ಮತ್ತು ನಾಣ್ಯ– ನೋಟು ಸಂಗ್ರಹಕಾರರ ಬಳಿ 25ಕ್ಕಿಂತ ಹೆಚ್ಚು ರದ್ದಾದ ಈ ಹಳೆಯ ನೋಟುಗಳಿದ್ದರೆ ಅದು ದಂಡನಾರ್ಹ ಅಪರಾಧ ಎಂದು ಪರಿಗಣಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿರುವುದು ಆಶ್ಚರ್ಯದ ಸಂಗತಿ. ಅಷ್ಟೇ ಅಲ್ಲ; ಇದು ತರ್ಕಹೀನ ಮತ್ತು ತೀರಾ ಅಸಂಬದ್ಧ ಎಂದೇ ಹೇಳಬಹುದು. ಬೆಲೆಯೇ ಇಲ್ಲದ ನೋಟು ಇದ್ದರೆಷ್ಟು, ಬಿಟ್ಟರೆಷ್ಟು? ಅದನ್ನೇನಾದರೂ ಚಲಾವಣೆಗೆ ತರಲು ಸಾಧ್ಯ ಇದೆಯೇ? ಖಂಡಿತ ಇಲ್ಲ. ಹೀಗಿರುವಾಗ ಸರ್ಕಾರ ಏಕೆ ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕು ಎಂಬುದೇ ಅರ್ಥವಾಗದ ಸಂಗತಿ.[೪೩]

ರದ್ದಾದ ಶೇ. 97ರಷ್ಟು ನೋಟುಗಳು ವಾಪಸ್‌[ಬದಲಾಯಿಸಿ]

  • Jan 05, 2017
  • ರದ್ದುಪಡಿಸಲಾದ 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಪೈಕಿ ಶೇ. 97 ರಷ್ಟು ನೋಟುಗಳು ಬ್ಯಾಂಕ್‌ಗಳ ಮೂಲಕ ವಾಪಸ್ಸಾಗಿವೆ ಎಂದು ಮೂಲಗಳು ತಿಳಿಸಿವೆ.
  • ನ.9 ರಿಂದ ಡಿ.30 ರವರೆಗೂ 14.97 ಲಕ್ಷ ಕೋಟಿ ರೂ. ಮೌಲ್ಯದ ರದ್ದಾದ ನೋಟುಗಳನ್ನು ಬದಲಾಯಿಸಿಕೊಂಡಿದ್ದಾರೆ. ಚಲಾವಣೆ ಕಳೆದುಕೊಂಡ 15.4 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳ ಪೈಕಿ 5 ಲಕ್ಷ ರೂ. ಕೋಟಿಯಷ್ಟು ಕಪ್ಪುಹಣ ಇದ್ದು, ಅದು ಬ್ಯಾಂಕ್‌ಗೆ ಮರಳುವ ಸಾಧ್ಯತೆ ಕಡಿಮೆ ಎಂದು ಸರ್ಕಾರ ಅಂದಾಜಿಸಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ ಎನ್ನಲಾಗಿದೆ.[೪೪]

ಅಂತಿಮ ಫಲಿತಾಂಶ[ಬದಲಾಯಿಸಿ]

  • ಕೊನೆಯಲ್ಲಿ, ರೂ.15.6 ಲಕ್ಷ ಕೋಟಿ ಕರೆನ್ಸಿಯಲ್ಲಿ ರೂ.14.97 ಲಕ್ಷ ಕೋಟಿ ಬ್ಯಾಂಕುಗಳ ಮೌಲ್ಯಾಂಕನ ಪಡೆದವು ಅಥವಾ ಬ್ಯಾಂಕುಗಳಿಗೆ ಹಿಂತಿರುಗಿಸಲ್ಪಟ್ಟವು ಮತ್ತು ಇನ್ನು ಉಳಿದದ್ದು ಕಪ್ಪು ಹಣವೆಂದು ಭಾವಿಸಿದೆ. ಆದರೆ ಅರ್ಥಶಾಸ್ತ್ರಜ್ಞರು ಉಳಿದ 3% (೨.೩೭ ಲಕ್ಷ ಕೋಟಿ) ಮುಖ್ಯವಾಗಿ ಪ್ರಾಮಾಣಿಕ ಜನರು ಬ್ಯಾಂಕ್‍ನಿಂದ ನಗದು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಅಥವಾ/ಮತ್ತು ನೇಪಾಳದಲ್ಲಿ ಚಲಾವಣೆಯಲ್ಲಿದ್ದ ಕೋಟಿ ಕೋಟಿ ನಗದು ಬದಲಿಸಲಾರದೆ ವ್ಯರ್ಥವಾಗಿದೆ ಎಂದು ಹೇಳುತ್ತಾರೆ (ಅಲ್ಲಿಯೂ ಭಾರತದ ಈ ನೋಟುಗಳು ಹೇರಳವಾಗಿ ಚಲಾವಣೆಯಲ್ಲಿತ್ತು). ಇದರ ಪರಿಣಾಮ ಕೇವಲ ಸಾಮಾನ್ಯ ಬಡ ಭಾರತೀಯರು ಬ್ಯಾಂಕುಗಳಲ್ಲಿ ನಗದು ಬಿಡಿಸಲಾಗದೆ ಮತ್ತು ಕೆಲಸ ಇಲ್ಲದೆ ಬಲವಂತವಾಗಿ ಸಾಲುಳಲ್ಲಿ ನಿಲ್ಲುವಂತೆ ಮಾಡಲಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ.[೪೫]
  • 2017ರಲ್ಲಿ ಭಾರತದ 5 ರಾಜ್ಯಗಳಾದ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಫೆಬ್ರವರಿ 4 ರಿಂದ ಮಾರ್ಚ್ 11ರ ತನಕ ಚುನಾವಣೆ ನಡೆಯಲಿದೆ. ಇದರಲ್ಲಿ ಹಳೆಯ ನೋಟುಗಳಲ್ಲಿದ್ದ ಕಪ್ಪುಹಣದ ಚಲಾವಣೆಗೆ ಪಕ್ಷಗಳಿಗೆ/ಅಭ್ಯರ್ಥಿಗಳಿಗೆ ಅವಕಾಶವಿಲ್ಲದಂತಾಗಿದೆ.

ಠೇವಣಿ ರೂ 3-4 ಲಕ್ಷ ಕೋಟಿ ಅಕ್ರಮ ಆದಾಯ ಇರಬಹುದು[ಬದಲಾಯಿಸಿ]

ಜನವರಿ 10, 2017

  • ನೋಟು ನಿಷೇಧದ ನಂತರ ಬ್ಯಾಂಕುಗಳು ಠೇವಣಿ ರೂ 3-4 ಲಕ್ಷ ಕೋಟಿ ಅಕ್ರಮ ಆದಾಯ ಇರಬಹುದು ಎಂದು ಆದಾಯ ತೆರಿಗೆಯವರ ಊಹೆ.ನಾವು ಈಗ ರೂ 2 ಲಕ್ಷಕ್ಕೂ ಹೆಚ್ಚು ಜಮಾಮಾಡಿದ 60 ಲಕ್ಷ ಬ್ಯಾಂಕ್‍ ಖಾತೆಗಳನ್ನು ವಿಶ್ಲೇಷಣೆಯಲ್ಲಿ ಕಂಡಿದೆ. ಅನಾಣ್ಯೀಕರಣ ನಂತರ ಸಂಗ್ರಹವನ್ನು ತೋರಿಸುವ ಟ್ರಂಕ್ ಲೋಡ್ ದಾಖಲೆಗಳು ಪರಿಶೀಲನೆಗೆ ಇವೆ ಎಂದಿದ್ದಾರೆ ಐ.ಟಿ.ಯವರು.ಆದರೆ ವರ್ಷದಲ್ಲಿ ರೂ 2 ಲಕ್ಷ /ಎರಡೂವರೆಲಕ್ಷ ಜಮಾ ಐಟಿಗೆ ಒಳಪಡುವುದಿಲ್ಲ.[೪೬]

2,13,860 ಕೋಟಿ ರೂ ಮೊತ್ತದ ಎರಡು ಘೋಷಣೆಗಳನ್ನು ತಿರಸ್ಕರಿಸಿದ್ದಾರೆ[ಬದಲಾಯಿಸಿ]

ಡಿಸೆಂಬರ್ 04, 2016 ತೆರಿಗೆ ಅಧಿಕಾರಿಗಳು 2,13,860 ಕೋಟಿ ರೂ ಮೊತ್ತದ ಎರಡು ಘೋಷಣೆಗಳನ್ನು ಹಲೆಯ ನೋಟುಗಳಿಗೆ ಹೊಸದಕ್ಕೆ ಬದಲಾಯಿಸಲು ತಿರಸ್ಕರಿಸಿದ್ದಾರೆ.ಆದಾಯ ತೆರಿಗೆ ಇಲಾಖೆಯು ಘೋಷಣೆಗಾರರ ವಿರುದ್ಧ ತನಿಖೆಗೆ ಆದೇಶ ಮಾಡಿದೆ.ಇದರಬಗ್ಗೆ ವಿಚಾರನೆ ನಡೆಯುತ್ತಿದೆ. (ಇದನ್ನು ತೆಗೆದುಕೊಂಡಿದ್ದರೆ ಸರ್ಕಾರ ಅಚ್ಚು ಹಾಕಿದ ಎಲ್ಲಾ ನೋಟುಗಳೂ ವಾಪಾಸು ಬಂದಂತೆ ಆಗುತ್ತಿತ್ತು. ಕಪ್ಪು ಹಣದ ನೋಟುಗಳೇ ಇಲ್ಲ ಎಂದಾಗುತ್ತಿತ್ತು)!ಸರ್ಕಾರ ಈ ವಿಷಯದಲ್ಲಿ ಸೋಲು ಒಪ್ಪಲು ತಯಾರಿಲ್ಲ.[೪೭]

ವಿವರಣೆ ನೀಡಲು ಉರ್ಜಿತ್‌ಗೆ ಸೂಚನೆ[ಬದಲಾಯಿಸಿ]

  • 9 Jan, 2017
  • ನೋಟು ರದ್ದತಿ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಭಾರತೀಯ ರಿಸರ್ವ್ ಬ್ಯಾಂಕ್‌ ಗವರ್ನರ್‌ ಉರ್ಜಿತ್ ಪಟೇಲ್‌ ಅವರಿಗೆ ನೋಟಿಸ್ ನೀಡಿದ್ದು, ಇದೇ 28ರಂದು ತನ್ನ ಮುಂದೆ ಹಾಜರಾಗುವಂತೆ ಸೂಚಿಸಿದೆ. ನೋಟು ರದ್ದತಿ ನಿರ್ಧಾರ ಪ್ರಕ್ರಿಯೆ ಮತ್ತು ಅದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಕಾಂಗ್ರೆಸ್‌ ಸಂಸದ ಕೆ.ವಿ. ಥಾಮಸ್ ನೇತೃತ್ವದ ಸಮಿತಿ ವಿವರ ಕೇಳಲಿದೆ. ಸಮಿತಿಯ ಪ್ರಶ್ನೆಗಳಿಗೆ ಉತ್ತರಿಸಲು ಉರ್ಜಿತ್ ಪಟೇಲ್ ಈಗಾಗಲೇ ತಯಾರಿ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಣಕಾಸು ನಿಯಮಾವಳಿಗಳ ಸಂಸದೀಯ ಸಮಿತಿಯೂ ಈ ಸಂಬಂಧ ಉರ್ಜಿತ್ ಅವರಿಗೆ ನೋಟಿಸ್ ನೀಡಿತ್ತು.

ಸಮಿತಿ ಕೇಳಬಹುದಾದ ಪ್ರಶ್ನೆಗಳು[ಬದಲಾಯಿಸಿ]

  1. * ನೋಟು ರದ್ದತಿ ವಿಚಾರದಲ್ಲಿ ಆರ್‌ಬಿಐ ಆಡಳಿತ ಮಂಡಳಿಯು ಸರ್ಕಾರ ಹೇಳಿದಂತೆ ಕೇಳಿದೆ ಎಂಬ ಆರೋಪಗಳಿವೆ. ಈ ಬಗ್ಗೆ ವಿವರಣೆ ನೀಡಿ.
  2. * ನೋಟು ರದ್ದತಿ ಕ್ರಮವನ್ನು ತರಾತುರಿಯಲ್ಲಿ ಜಾರಿಗೆ ತಂದಿದ್ದು ಏಕೆ?
  3. * ಕ್ರಮ ಜಾರಿಗೂ ಮುನ್ನ ಆರ್‌ಬಿಐ ಮಂಡಳಿ ಸಭೆ ಸೇರಿತ್ತೆ? ಸಭೆ ಸೇರಿದ್ದರೆ, ಸಭೆ ನಡೆದದ್ದು ಯಾವಾಗ?
  4. * ಚಲಾವಣೆಯಿಂದ ಹಿಂದಕ್ಕೆ ಪಡೆದ ಹಣದ ಮೊತ್ತದ ಮಾಹಿತಿ ನೀಡಿ. ರದ್ದಾದ ನೋಟುಗಳೆಷ್ಟು? ಈವರೆಗೆ ಹಳೆಯ ನೋಟುಗಳಲ್ಲಿ ಬ್ಯಾಂಕ್‌ಗಳಲ್ಲಿ ಜಮೆಯಾದ ಹಣ ಎಷ್ಟು?
  5. * ಇಡೀ ಪ್ರಕ್ರಿಯೆ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ನೀಡಲು ಆರ್‌ಬಿಐ ನಿರಾಕರಿಸುತ್ತಿರುವುದು ಏಕೆ?
  6. * ಬ್ಯಾಂಕ್‌ಗಳಿಂದ ಹಣ ಪಡೆಯಲು ಮಿತಿ ಹೇರುವ ಅಧಿಕಾರ ಆರ್‌ಬಿಐಗೆ ಬಂದಿದ್ದು ಎಲ್ಲಿಂದ? ಈ ಬಗ್ಗೆ ಯಾವುದೇ ಕಾನೂನುಗಳಿಲ್ಲ. ಹೀಗಿದ್ದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡ ಆರೋಪದಲ್ಲಿ ನಿಮ್ಮನ್ನು ವಿಚಾರಣೆಗೆ ಏಕೆ ಒಳಪಡಿಸಬಾರದು? ನಿಮ್ಮನ್ನು ವಜಾ ಮಾಡಬಾರದೇಕೆ?
  7. * ಆರ್‌ಬಿಐ ಪ್ರತಿದಿನ ಒಂದೊಂದು ನಿಯಮಗಳನ್ನು ಜಾರಿ ಮಾಡಿದ್ದೇಕೆ?
  8. * ಜನರ ಬೆರಳಿಗೆ ಅಳಿಸಲಾಗದ ಶಾಯಿಯಿಂದ ಗುರುತು ಮಾಡುವ ಮತ್ತು ಮದುವೆಗೆ ಹಣ ಪಡೆದುಕೊಳ್ಳಲು ಮಿತಿ ಹೇರುವ ಉಪಾಯಗಳನ್ನು ಕೊಟ್ಟ ಅಧಿಕಾರಿಗಳು ಯಾರು?[೪೮]

ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮೋದಿಯವರು ವಿವರಣೆ ನೀಡಬೇಕಾದೀತು[ಬದಲಾಯಿಸಿ]

  • 9 Jan, 2017
  • ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಅಧ್ಯಕ್ಷ, ಕಾಂಗ್ರೆಸ್ ಹಿರಿಯ ನಾಯಕ ಕೆವಿ ಥಾಮಸ್, ಒಂದು ವೇಳೆ ಉರ್ಜಿತ್ ಅವರು ನೀಡಿರುವ ವಿವರಣೆ ತೃಪ್ತಿಕರವಲ್ಲದೇ ಇದ್ದರೆ, ಪ್ರಧಾನಿ ಮೋದಿಯವರಿಗೆ ನೋಟಿಸ್ ನೀಡಲಾಗುವುದೇ? ಎಂಬ ಪ್ರಶ್ನೆಗೆ ನೋಟು ರದ್ದತಿ ವಿಷಯಕ್ಕೆ ಸಂಬಂಧಪಟ್ಟ ಯಾವುದೇ ವ್ಯಕ್ತಿಯಲ್ಲಿ ವಿವರಣೆ ಕೇಳಬಹುದು. ಆದರೆ ಜನವರಿ 20ರಂದು ನಡೆಯಲಿರುವ ಸಭೆಯ ನಂತರವೇ ಈ ಬಗ್ಗೆ ಯೋಚಿಸಲಾಗುವುದು. ಒಂದು ವೇಳೆ ನಮ್ಮ ಸದಸ್ಯರು ತೀರ್ಮಾನಿಸುವುದಾದರೆ ಪ್ರಧಾನಿಯವರಲ್ಲಿಯೂ ವಿವರಣೆ ಕೇಳಲಾಗುವುದು ಎಂದಿದ್ದಾರೆ. ಆದರೆ ಬಿಜೆಪಿ ಸದಸ್ಯರು ವಿರೋಧಿಸಿದ್ದಾರೆ.[೪೯]

ಜನವರಿ ೬ಕ್ಕೆ ಶೇ50ರಷ್ಟು ನೋಟು ಕೊರತೆ[ಬದಲಾಯಿಸಿ]

  • 15 Jan, 2017;
  • 2016ರ ನವೆಂಬರ್‌ 4ರಂದು ದೇಶದಲ್ಲಿ ಒಟ್ಟು ರೂ.17.742 ಲಕ್ಷ ಕೋಟಿ ಚಲಾವಣೆಯಲ್ಲಿತ್ತು. ಜನವರಿ 6ರಂದು ಚಲಾವಣೆಯಲ್ಲಿದ್ದ ನಗದಿನ ಮೊತ್ತ ರೂ.8.734 ಲಕ್ಷ ಕೋಟಿ ಮಾತ್ರ ಎಂದು ಆರ್‌ಬಿಐ ನೀಡಿರುವ ಅಂಕಿಗಳು ತಿಳಿಸುತ್ತವೆ.
  • ಈಗಿನ ಪರಿಸ್ಥಿತಿಯೇ ಮುಂದುವರೆದರೆ ನಗದು ಲಭ್ಯತೆ ಪ್ರಮಾಣ ಸಹಜ ಸ್ಥಿತಿಗೆ ಬರಲು ಇನ್ನೂ ಎಂಟರಿಂದ ಹತ್ತು ವಾರ ಬೇಕು ಎಂದು ತಜ್ಞರು ಅಂದಾಜಿಸಿದ್ದಾರೆ. ನೋಟು ರದ್ದತಿ ನಂತರ ಮಂದವಾಗಿರುವ ಅರ್ಥ ವ್ಯವಸ್ಥೆಯು, ನಗದು ಲಭ್ಯತೆ ಸರಿಹೋಗದ ಹೊರತು ಸುಧಾರಿಸುವುದಿಲ್ಲ ಎಂದು ಹೇಳಿದರು. ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರ ಈ ಬಾರಿ ಕಡಿಮೆಯಾಗಲಿದೆ ಎಂದು ಸರ್ಕಾರ ಹಾಗೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಈಗಾಗಲೇ ಹೇಳಿವೆ.[೫೦]

ವಿವರಗಳನ್ನು ಹಂಚಿಕೊಳ್ಳಲು ನಿರಾಕರಣೆ[ಬದಲಾಯಿಸಿ]

  • Jan 13, 2017
  • ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ದೇಶದ ಸಾರ್ವಭೌಮತ್ವ, ಸಮಗ್ರತೆ ಮತ್ತು ಭದ್ರತೆ, ಜೀವಕ್ಕೆ ಅಪಾಯ ಜೊತೆಗೆ ಬೆದರಿಕೆಗಳನ್ನು ಉದಾಹರಿಸಿ, ಹೆಚ್ಚಿನ ಮೌಲ್ಯದ ಬ್ಯಾಂಕ್ನೋಟುಗಳ ಮರುಪಡೆಯಲು ಸರ್ಕಾರದ ನಿರ್ಧಾರವನ್ನು ಕುರಿತ "ನಿರ್ದಿಷ್ಟ ವಿವರಗಳನ್ನು" ಹಂಚಿಕೊಳ್ಳಲು ನಿರಾಕರಿಸಿದ್ದಾರೆ;, (ಬ್ಲೂಮ್ಬರ್ಗ್ ನ್ಯೂಸ್ ವರದಿ)[೫೧]

ಅರುಣ್ ಶೌರಿ[ಬದಲಾಯಿಸಿ]

  • 18 Jan, 2017
  • ‘ನೋಟು ರದ್ದತಿ ಕ್ರಮ ಸೊಳ್ಳೆ ಕೊಲ್ಲಲು ಕೊಡಲಿ ಎತ್ತಿದಂತಾಗಿದ್ದು, ಇದು ಸ್ವತಂತ್ರ ಭಾರತದ ವಿತ್ತೀಯ ಮಹಾ ಪ್ರಮಾದ’ ಎಂದು ಹಿರಿಯ ಪತ್ರಕರ್ತ ಅರುಣ್ ಶೌರಿ ವ್ಯಾಖ್ಯಾನಿಸಿದ್ದಾರೆ.ನೋಟು ರದ್ದು: ಸೊಳ್ಳೆ ಕೊಲ್ಲಲು ಕೊಡಲಿ ಬಳಸಿದಂತೆ’;ನಗರದ ನಿಯಾಸ್‌ನಲ್ಲಿ ಮಂಗಳವಾರ ‘ಅಭಿವೃದ್ಧಿಯ ರಾಜಕಾರಣ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ‘ನೋಟು ರದ್ದತಿಯ ಹೊಡೆತದ ಪರಿಣಾಮದಿಂದ ದೇಶವು ಸಾಮಾನ್ಯ ಸ್ಥಿತಿಗೆ ಬರಲು ಕನಿಷ್ಠ ಎರಡು ವರ್ಷವಾದರೂ ಬೇಕು’ ಎಂದರು. ಈ ಕ್ರಮವು ಸಾಮಾನ್ಯ ಜನರ ಮತ್ತು ಹೂಡಿಕೆದಾರರ ಮನೋಸ್ಥೈರ್ಯವನ್ನೇ ಅಲುಗಾಡಿಸಿದೆ. ಅವರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು.ನೋಟು ರದ್ದತಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ಹುಂಬ ಚಕ್ರವರ್ತಿಯೊಬ್ಬನ (ಬಾದ್‌ಷಾ) ಅಪಕ್ವ ನಡವಳಿಕೆಗೆ ಹೋಲಿಸಿದರು.[೫೨]

ಖೋಟಾ ನೋಟುಗಳು ಪತ್ತೆಯಾಗಿಲ್ಲ[ಬದಲಾಯಿಸಿ]

  • 21 Jan, 2017;
  • ಕಾಳಧನ, ಖೋಟಾನೋಟು, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ಚಟುವಟಿಕೆ ನಿಗ್ರಹಗಳಿಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿತ್ತು. ಆದರೆ ನವೆಂಬರ್ 8 ಅಂದರೆ ನೋಟು ರದ್ದು ತೀರ್ಮಾನ ಜಾರಿಗೆ ಬಂದ ದಿನದಂದಿನಿಂದ ಡಿಸೆಂಬರ್ 30ರವರೆಗೆ ನಡೆದ ಐಟಿ ದಾಳಿಗಳಲ್ಲಿ ಖೋಟಾ ನೋಟುಗಳು ಪತ್ತೆಯಾಗಿಲ್ಲ ಎಂದು ವಿತ್ತ ಸಚಿವಾಲಯ ಹೇಳಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ (ಪಿಎಸಿ) ಸಲ್ಲಿಸಿದ ವರದಿಯಲ್ಲಿ ವಿತ್ತ ಸಚಿವಾಲಯ ಈ ವಿಷಯವನ್ನು ಹೇಳಿದೆ. ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ನವೆಂಬರ್ 9ರಿಂದ ಜನವರಿ 4ರ ವರೆಗಿನ ಕಾಲಾವಧಿಯಲ್ಲಿ ಆದಾಯ ತೆರಿಗೆ ಇಲಾಖೆ ಒಟ್ಟು ರೂ.474.37 ಕೋಟಿ ಮೊತ್ತದ ಹಳೆಯ ನೋಟು ಮತ್ತು ಹೊಸ ನೋಟುಗಳ ಕಾಳಧನವನ್ನು ವಶಪಡಿಸಿಕೊಂಡಿದೆ. ಆದರೆ ಕಾಳಧನ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿರುವ ವ್ಯಕ್ತಿಗಳು ಉಗ್ರ ಸಂಘಟನೆ ಅಥವಾ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ವಿತ್ತ ಸಚಿವಾಲಯ ತಮ್ಮ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.[೫೩]

ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವಿಚಾರಣೆ[ಬದಲಾಯಿಸಿ]

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಕೇಂದ್ರ ಮಂಡಳಿಯ ಹತ್ತು ನಿರ್ದೇಶಕರ ಪೈಕಿ ಎಂಟು ಮಂದಿಯ ಶಿಫಾರಸಿನಂತೆ ಗರಿಷ್ಠ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಗಿದೆ ಎಂದು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಮಾಹಿತಿ ನೀಡಿದ್ದಾರೆ.[೫೪]

ರೂ.500ರ ನೋಟು ಮುದ್ರಣಕ್ಕೆ ರೂ.4 ವೆಚ್ಚ[ಬದಲಾಯಿಸಿ]

  • 21 Jan, 2017
  • ಮುಂಬಯಿಯಲ್ಲಿ ಐನೂರು ರೂಪಾಯಿಯ ಹೊಸ ನೋಟೊಂದನ್ನು ಮುದ್ರಿಸಲು ತಗಲುವ ವೆಚ್ಚ 3 ರೂಪಾಯಿ 90 ಪೈಸೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾದ ಪ್ರಶ್ನೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಈ ಮಾಹಿತಿ ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಹೊಸ ನೋಟುಗಳನ್ನು ಮುದ್ರಣ ಮಾಡುತ್ತಿದೆ. ರೂ.500 ಮುಖಬೆಲೆಯ ಪ್ರತಿ ನೋಟಿಗೆ ಆರ್‌ಬಿಐಯಿಂದ ರೂ.3.9 ಪಡೆಯುತ್ತಿದೆ ಎಂದು ಆರ್‌ಬಿಐ ಉಪ ಪ್ರಧಾನ ವ್ಯವಸ್ಥಾಪಕ ಪಿ. ವಿಲ್ಸನ್ ಅವರು ಮಾಹಿತಿ ಹಕ್ಕು ಕಾರ್ಯಕರ್ತ ಅನಿಲ್‌ ಗಲಗಲಿ ಅವರಿಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.[೫೫]

ಹೊಸ ವಿನ್ಯಾಸದ ರೂ.1,000 ಮುಖಬೆಲೆಯ ನೋಟುಗಳ ಮುದ್ರಣ[ಬದಲಾಯಿಸಿ]

  • 27 Jan, 2017;
  • ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಶೀಘ್ರವೇ ಚಲಾವಣೆಗೆ ತರಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸಿದ್ಧತೆ ನಡೆಸಿದೆ. ಹೊಸ ವಿನ್ಯಾಸದ₹1,000 ಮುಖಬೆಲೆಯ ನೋಟುಗಳ ಮುದ್ರಣದ ಕೆಲಸವನ್ನು ಆರ್‌ಬಿಐ ತ್ವರಿತಗೊಳಿಸಿದೆ. ಹಳೆಯ ರೋ.1,000 ಮುಖಬೆಲೆಯ ನೋಟುಗಳಿಗಿಂತ ಹೊಸ ನೋಟು ಗಾತ್ರದಲ್ಲಿ ಚಿಕ್ಕದಾಗಿರಲಿದ್ದು, ಸುರಕ್ಷತೆಗೆ ಸಂಬಂಧಿಸಿ ಹೆಚ್ಚು ಅಂಶಗಳನ್ನು ಹೊಂದಿರಲಿದೆ. ಬಣ್ಣದಲ್ಲಿಯೂ ವ್ಯತ್ಯಾಸ ಇರಲಿದೆ ಎಂದು ಮೂಲಗಳು ತಿಳಿಸಿವೆ. ಅಂಧರಿಗೆ ಗುರುತಿಸಲು ಸಾಧ್ಯವಾಗುವಂತೆ ಹೊಸ ನೋಟುಗಳು ಬ್ರೈಲ್‌ಸ್ನೇಹಿ ಆಗಿರಲಿವೆ.
  • ರೂ.2,000 ಮುಖಬೆಲೆಯ ನೋಟುಗಳನ್ನು ಕ್ರಮೇಣ ಚಲಾವಣೆಯಿಂದ ಹಿಂದಕ್ಕೆ ಪಡೆಯುವ ಚಿಂತನೆ ಇದೆ ಎಂದು ಮೂಲಗಳು ತಿಳಿಸಿವೆ.
  • ‘ಹೆಚ್ಚು ಮುಖಬೆಲೆಯ ನೋಟುಗಳು ಕಪ್ಪುಹಣ ಸಂಗ್ರಹವನ್ನು ಸುಲಭವಾಗಿಸುತ್ತದೆ ಎಂಬುದು ಈ ನೋಟುಗಳನ್ನು ವಾಪಸ್‌ ಪಡೆಯಲು ಕಾರಣ. ನಗದು ಕೊರತೆ ಸಮಸ್ಯೆ ಪರಿಹಾರವಾದ ಬಳಿಕ ಈ ಕ್ರಮ ಕಾರ್ಯರೂಪಕ್ಕೆ ಬರಬಹುದು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
  • ಅಂಕಿಅಂಶ:ರೂ.9.2 ಲಕ್ಷ ಕೋಟಿ– ಈ ತನಕ ಪೂರೈಕೆ ಮಾಡಲಾದ ಹೊಸ ನೋಟುಗಳ ಮೊತ್ತ
  • ರೂ.15.44 ಲಕ್ಷ ಕೋಟಿ –ಕಳೆದ ನ.8ರಂದು ಚಲಾವಣೆಯಿಂದ ಹಿಂದಕ್ಕೆ ಪಡೆಯಲಾದ ನೋಟುಗಳ ಮೊತ್ತ.[೫೬]

ಬ್ಯಾಂಕಿನಿಂದ ಹಣ ತೆಗೆಯಲು ಮಿತಿ ಮತ್ತು ಚುನಾವಣೆ ಆಯೋಗ[ಬದಲಾಯಿಸಿ]

  • 30 Jan, 2017
  • ೨೦೧೭ ಫೆಬ್ರವರಿಯಲ್ಲಿ ನಡೆಯುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳಿಗೆ ಬ್ಯಾಂಕ್‌ ಖಾತೆಯಿಂದ ವಾರಕ್ಕೆ ₹ 2 ಲಕ್ಷ ನಗದು ಹಿಂಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಚುನಾವಣಾ ಆಯೋಗ ಮಾಡಿರುವ ಮನವಿಯನ್ನು ಆರ್‌ಬಿಐ ತಿರಸ್ಕರಿಸಿದೆ. ಇದು ಆಯೋಗ ಮತ್ತು ಆರ್‌ಬಿಐ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.
  • ನೋಟು ರದ್ದತಿ ನಂತರ ಹೇರಲಾಗಿರುವ ಹಣ ತೆಗೆಯುವ ಮಿತಿಯನ್ನು ಅಭ್ಯರ್ಥಿಗಳಿಗೆ ಮಾತ್ರ ಸಡಿಲಿಸುವಂತೆ ಚುನಾವಣಾ ಆಯೋಗ ಆರ್‌ಬಿಐಗೆ ಕೋರಿಕೆ ಸಲ್ಲಿಸಿತ್ತು. ಈ ಸಂಬಂಧ ಚುನಾವಣಾ ಆಯೋಗ ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರಿಗೆ ಪತ್ರ ಬರೆದಿತ್ತು. ಆದರೆ, ಈ ಬೇಡಿಕೆಯನ್ನು ಆರ್‌ಬಿಐ ತಳ್ಳಿ ಹಾಕಿದೆ. ಇದು ಚುನಾವಣಾ ಆಯೋಗದ ಅಸಮಾಧಾನಕ್ಕೆ ಕಾರಣವಾಗಿದೆ.
  • ಆಯೋಗದ ಚುನಾವಣಾ ವೆಚ್ಚ ವಿಭಾಗದ ಮಹಾ ನಿರ್ದೇಶಕ ದಿಲೀಪ್‌ ಶರ್ಮಾ ಅವರು ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರಿಗೆ ಪತ್ರ ಬರೆದಿದ್ದು, ಪ್ರಸ್ತಾವವನ್ನು ಮತ್ತೊಮ್ಮೆ ಪರಿಗಣಿಸುವಂತೆ ಕೋರಿದ್ದಾರೆ. ‘ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು ಆಯೋಗದ ಸಂವಿಧಾನಬದ್ಧ ಹಕ್ಕು’ ಎಂದು ಪತ್ರದಲ್ಲಿ ಹೇಳಿರುವ ಶರ್ಮಾ, ‘ಆಯೋಗವು ನೀಡುವ ನಿರ್ದೇಶನಗಳನ್ನು ಪಾಲಿಸಲೇ ಬೇಕು’ ಎಂದಿದ್ದಾರೆ.
  • ‘ವಿಷಯದ ಗಾಂಭೀರ್ಯ ಆರ್‌ಬಿಐಗೆ ಅರ್ಥವಾದಂತೆ ಕಾಣುತ್ತಿಲ್ಲ. ಎಲ್ಲ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವುದು ಮತ್ತು ನ್ಯಾಯಯುತವಾಗಿ ಚುನಾವಣೆ ನಡೆಸುವುದು ಆಯೋಗದ ಸಾಂವಿಧಾನಿಕ ಕರ್ತವ್ಯ ಎಂದು ಮತ್ತೆ ಹೇಳಬೇಕಾಗಿದೆ’ ಎಂದು ಶರ್ಮಾ ಕಟು ಶಬ್ದಗಳಲ್ಲಿ ಬರೆದಿದ್ದಾರೆ.

[೫೭]

ನೋಟುಬಂದಿ ಮತ್ತದರ ಪ್ರಭಾವ[ಬದಲಾಯಿಸಿ]

  • ಈಚೆಗೆ ನಡೆದ ನೋಟುಬಂದಿ ಮತ್ತು ಕಪ್ಪುಧನದ ಬಗ್ಗೆ ಸ್ಕ್ರೋಲ್ ಪತ್ರಿಕೆಯ ಓದುಗರ ಸಂಪಾದಕ ರಾಮ್ ಮನೋಹರ್ ರೆಡ್ಡಿ ಅವರು ಒಂದು ಪುಸ್ತಕ ಬರೆದಿದ್ದಾರೆ. ಅದಕ್ಕೆ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ವೈವಿ ರೆಡ್ಡಿ ಅವರು ಒಂದು ದೀರ್ಘ ಮುನ್ನುಡಿಯನ್ನೂ ಬರೆದಿದ್ದಾರೆ. ನೋಟುಬಂದಿಯ ಹಿಂದಿನ ಆಲೋಚನೆ ಏನಿದ್ದಿರಬಹುದು, ಅದರ ಪ್ರಭಾವವೇನು, ಕಪ್ಪು ಧನದ ಆಯಾಮಗಳೇನು – ಹಾಗೂ ಕಪ್ಪುಧನಕ್ಕೂ ನೋಟುಬಂದಿಗೂ ಇರುವ ಸಂಬಂಧವೇನು ಎನ್ನುವುದನ್ನು ಈ ಪುಸ್ತಕ ಪದರ ಪದರವಾಗಿ ಬಿಡಿಸಿ ಹೇಳುತ್ತದೆ. ನೋಟುಬಂದಿಯ ಉದ್ದೇಶವೇನಿತ್ತು. ಮೊದಲಿಗೆ ಆ ಉದ್ದೇಶವನ್ನು ಪ್ರಧಾನ ಮಂತ್ರಿಗಳು ಹೇಗೆ ವ್ಯಾಖ್ಯಾನಿಸಿದರು, ಆ ವ್ಯಾಖ್ಯಾನ ಹೇಗೆ ಬದಲಾಯಿತು, ವ್ಯಾಖ್ಯಾನಕ್ಕೂ ನೋಟುಬಂದಿಗೂ ಇರುವ ಸಂಬಂಧದ ಪದರಗಳೇನು ಎನ್ನುವುದನ್ನು ರಾಮ್ ಬಿಡಿಸುತ್ತಾ ಹೋಗುತ್ತಾರೆ. ಆ ಕಥೆಯನ್ನು ವ್ಯಾಖ್ಯಾನಿಸಲು ಅವರು ಮಾಹಿತಿಯನ್ನು ಸಮರ್ಪಕವಾಗಿ ಉಪಯೋಗಿಸುತ್ತಾರೆ. ನಡೆದ ಘಟನಾವಳಿಯನ್ನು ಸರಳವಾಗಿ ವಿವರಿಸುತ್ತಾ ಹೋಗುತ್ತಾರೆ ವಿನಾ ತಮ್ಮ ನಿಲುವನ್ನು ಎಲ್ಲಿಯೂ ಸ್ಪಷ್ಟವಾಗಿ ಹೇಳುವುದಿಲ್ಲ. ನೋಟುಬಂದಿಯನ್ನು ಟೀಕಿಸುವುದೂ ಇಲ್ಲ, ಅದರಿಂದ ಒಳಿತಾಯಿತೆಂದು ಹೊಗಳುವುದೂ ಇಲ್ಲ.
  • ಕಪ್ಪುಧನ ಎಷ್ಟು ಸಂಕೀರ್ಣವಾದ ಆರ್ಥಿಕ ವಿಚಾರ ಎನ್ನುವುದನ್ನು ನಿರೂಪಿಸಿ – ಅದರ ಮೇಲೆ ಸಮರ ಸಾರಲು ಇದ್ದ ಇತರ ಪರಿಕರಗಳನ್ನು ಚರ್ಚಿಸುತ್ತಾರೆ. ಕಪ್ಪುಧನದ ವಿರುದ್ಧ ಸಮರ ಕೈಗೊಳ್ಳಲು ಇದ್ದ ಪರಿಕರಗಳಲ್ಲಿ ನೋಟುಬಂದಿಯೇನೂ ಪ್ರಭಾವೀ ಪರಿಕರವಾಗಿರಲಿಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಜಾಲೀ ನೋಟುಗಳ ಸಮಸ್ಯೆಯನ್ನು, ನೋಟು ಮುದ್ರಣದ ತಂತ್ರಜ್ಞಾನದಿಂದ ಹಿಡಿದು, ಅದಕ್ಕೆ ಆಮದು ಮಾಡುವ ಯಂತ್ರಾಂಗ, ಕಾಗದ, ಶಾಯಿಯ ಬಗ್ಗೆ ರಾಮ್‌ ಚರ್ಚಿಸುತ್ತಾರೆ. ಎಲ್ಲೆಲ್ಲಿ ಜಾಲಿ ನೋಟುಗಳು ತಯಾರಿಸಬಹುದು ಎನ್ನುವುದರ ವಿವರವನ್ನೂ ಕೊಡುವುದಲ್ಲದೇ, ನೋಟು ಬಂದಿಯಿಂದ ದಾಸ್ತಾನಿದ್ದ ಜಾಲೀ ನೋಟುಗಳನ್ನು ಚಲಾವಣೆಯಿಂದ ತೆಗೆಯಬಹುದಾಗಲೀ ಹೊಸ ಜಾಲೀನೋಟುಗಳ ತಯಾರಿಕೆಗೆ ಈ ಕಾರ್ಯಕ್ರಮ ಯಾವ ಅಡ್ಡಿಯನ್ನೂ ಒದಗಿಸುವುದಿಲ್ಲ ಎಂದು ವಾದಿಸುತ್ತಾರೆ.[೫೮]

ಭಾರತ ದೇಶದಲ್ಲಿ ಕಾಳಧನವೇ ಇರಲಿಲ್ಲವೇ?[ಬದಲಾಯಿಸಿ]

  • ನೋಟು ರದ್ಧತಿ ಬಳಿಕ ರೂ.1000 ಮುಖಬೆಲೆಯ ಶೇ 98.7 ರಷ್ಟು ನೋಟುಗಳು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ )ಮರಳಿವೆ ಎಂದು ಆರ್‌ಬಿಐ ವೆಬ್‌ಸೈಟ್‌ನಲ್ಲಿ (27 Aug, 2017) ಪ್ರಕಟಿಸಲಾಗಿದೆ. ಇದರಿಂದ ದೇಶದಲ್ಲಿ ಕಾಳಧನವೇ ಇಲ್ಲ ಎಂಬುದು ವೇದ್ಯವಾದಂತಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬ್ಯಾಂಕಿಂಗ್‌, ಖಜಾನೆ ಮತ್ತು ಸಾರ್ವಜನಿಕರ ಬಳಿಯಿಂದ 8,925 ಕೋಟಿಯಷ್ಟು ರೂ.1000 ಮುಖ ಬೆಲೆಯ ನೋಟುಗಳು ಆರ್‌ಬಿಐಗೆ ಮರಳಿವೆ. ಇನ್ನು ಶೇ 1.3 ರಷ್ಟು ನೋಟುಗಳು ಮಾತ್ರ ಆರ್‌ಬಿಐ ಕೈಸೇರಿಲ್ಲ ಎಂದು ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ವರದಿ ಮಾಡಿದೆ. ಆರ್‌ಬಿಐ ವೆಬ್‌ಸೈಟ್‌ ನಲ್ಲಿ ರೂ.500 ಮುಖ ಬೆಲೆಯ ನೋಟುಗಳ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರಕಟಿಸಿಲ್ಲ. ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾಳಧನವಿದೆ ಎಂದು ಹೇಳುತ್ತಿದ್ದ ಬಿಜೆಪಿ ಸರ್ಕಾರಕ್ಕೆ ಈ ಮಾಹಿತಿಯಿಂದ ದಿಘ್ಬ್ರಮೆಯಾದಂತಾಗಿದೆ. ಶೇ 99 ರಷ್ಟು ₹1000 ಮುಖಬೆಲೆಯ ನೋಟುಗಳ ಮರಳಿರುವುದರಿಂದ ಕಾಳಧನ ಅತಿ ಕಡಿಮೆ ಪ್ರಮಾಣದಲ್ಲಿ ಇರುವುದನ್ನು ಊಹಿಸಬಹುದು ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಈ 1.3 ರಷ್ಟು ನೋಟುಗಳು ನೇಪಾಳದಲ್ಲಿ ಚಲಾವಣೆಯಲ್ಲಿದ್ದ ಮತ್ತು ವಿದೇಶದಲ್ಲಿದ್ದವರ ಬಳಿ ಇದ್ದ ನೋಟುಗಳನ್ನೂ ಸಹಕಾರಿ ಬ್ಯಾಂಕಗಳ ಬಳಿ ಇದ್ದ ಪರಿವರ್ತನೆಗೆ ಅವಕಾಶ ಕೊಡದ ಈ ನೋಟುಗಳನ್ನು ಲೆಕ್ಕಹಿಡಿದರೆ 100 ಕ್ಕೆ 100 ಭಾಗವೂ ಲೆಕ್ಕಸಿಕ್ಕಿದಂತೆ ಆಗಿವುದು. ಕಪ್ಪುಹಣ ಹೊರತರುವ ಯೋಜನೆ ವಿಫಲವೆಂದು ತಜ್ಞರ ಮತ. [೫೯]

ದೇಶದ ಆರ್ಥಿಕ ಅಭಿವೃದ್ಧಿ -ಜಿಡಿಪಿ ಕುಸಿತ[ಬದಲಾಯಿಸಿ]

  • ೨೦೧೭-೧೮ ರ ಹಣಕಾಸು ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ಅಂದರೆ ಏಪ್ರಿಲ್‌– ಜೂನ್‌ ನಡುವೆ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 5.7ಕ್ಕೆ ಇಳಿದಿದೆ. ಇದರ ಹಿಂದಿನ ತ್ರೈಮಾಸಿಕದಲ್ಲಿ ಅದು ಶೇ 6.1 ಇತ್ತು. ಅಂದರೆ ಆರು ತಿಂಗಳಿಂದ ನಮ್ಮ ಜಿಡಿಪಿ ದರ ಚೀನಾದ ಜಿಡಿಪಿ ದರಕ್ಕಿಂತ ಕಡಿಮೆ ಇದೆ. ನೋಟು ರದ್ದತಿಗಿಂತ ಹಿಂದೆ ಜಿಡಿಪಿ ದರ 7 ರಲ್ಲಿ ಇತ್ತು. ನಮ್ಮ ಆರ್ಥಿಕ ಪ್ರಗತಿ ಮಂದಗತಿಯಲ್ಲಿದೆ ಎಂಬುದನ್ನು ಇದು ಸಾರಿ ಹೇಳುತ್ತಿದೆ. ಇದು ಕಳವಳಕಾರಿ ವಿದ್ಯಮಾನ. ಆದರೆ ಜಿಡಿಪಿ ದರ ಕುಸಿತದ ಹಿಂದೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯ ಜಾರಿ ಮತ್ತು ನೋಟುಗಳ ರದ್ದತಿಯ ಪ್ರಭಾವವೂ ದೊಡ್ಡದು ಎನ್ನುವುದು ತಜ್ಞರ ಹೇಳಿಕೆ.[೬೦][೬೧]

ರಿಸರ್ವ್ ಬ್ಯಾಂಕಿನ ಅಂತಿಮ ವರದಿಯಂತೆ - ನೋಟುರದ್ದಿನ ವಿಫಲತೆ[ಬದಲಾಯಿಸಿ]

  • ಕೇಂದ್ರ ಸರ್ಕಾರವು 2016ರಲ್ಲಿ ರದ್ದು ಮಾಡಿದ ರೂ.500 ಮತ್ತು ರೂ.1,000 ಮುಖಬೆಲೆಯ ನೋಟುಗಳ ಪೈಕಿ ಶೇ 99.3ರಷ್ಟು ಬ್ಯಾಂಕುಗಳಿಗೆ ವಾಪಸಾಗಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ದಿ.೨೯-೮-೨೦೧೮ರಂದು ಹೇಳಿಕೆ ನೀಡಿತು.
  • ಕಪ್ಪುಹಣ ಮತ್ತು ಭ್ರಷ್ಟಾಚಾರಗಳನ್ನು ತಡೆಯುವ ಉದ್ದೇಶದಿಂದ ನೋಟು ರದ್ದತಿಯ ನಿರ್ಧಾರವನ್ನು ಮೋದಿಯವರು ಕೈಗೊಂಡಿದ್ದಾಗಿ ಹೇಳಿದ್ದರು. ಆದರೆ, ಸ್ವಲ್ಪ ಪ್ರಮಾಣದ ನೋಟುಗಳು ಮಾತ್ರ ಬ್ಯಾಂಕುಗಳಿಗೆ ಹಿಂತಿರುಗಿಲ್ಲೆಂದು ಕಂಡುಬಂದಿದೆ. ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ ರೂ.13 ಸಾವಿರ ಕೋಟಿ ಮಾತ್ರ ಬ್ಯಾಂಕಿಗೆ ಬಂದಿಲ್ಲ. ಆದರೆ, ಇದಕ್ಕೆ ದೇಶ ಭಾರಿ ಬೆಲೆ ತೆರಬೇಕಾಯಿತು. ಜನರು ಉದ್ಯೋಗ ಕಳೆದುಕೊಂಡರು, ಉದ್ಯಮಗಳು ಮುಚ್ಚಿದವು ಮತ್ತು ಒಟ್ಟು ದೇಶಿ ಉತ್ಪನ್ನ ಇಳಿಕೆಯಾಯಿತು ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ‘ನೋಟು ರದ್ದತಿಯಿಂದಾಗಿ ಭಾರತದ ಜಿಡಿಪಿ ಶೇ 1.5ರಷ್ಟು ಕುಸಿತ ಕಂಡಿತು. ಇದರ ಮೌಲ್ಯವೇ ರೂ.2.25 ಲಕ್ಷ ಕೋಟಿ. ಸುಮಾರು ನೂರು ಜನರು ಪ್ರಾಣ ಕಳೆದುಕೊಂಡರು. 15 ಕೋಟಿಯಷ್ಟು ದಿನಗೂಲಿ ನೌಕರರಿಗೆ ಹಲವು ವಾರ ಕೆಲಸವೇ ಇರಲಿಲ್ಲ. ಸಣ್ಣ ಮತ್ತು ಮಧ್ಯಮ ಗಾತ್ರದ ಸಾವಿರಾರು ಘಟಕಗಳು ಬಾಗಿಲು ಮುಚ್ಚಿದವು. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರು’ ಎಂದು ಹಿಂದಿನ ಹಣಕಾಸು ಮಂತ್ರಿ ಚಿದಂಬರಂ ಅವರು ಹೇಳಿದ್ದಾರೆ.
  • ಬ್ಯಾಂಕಿಗೆ ಹಿಂದಕ್ಕೆ ಬಾರದೇ ಇರುವ ರೂ.13 ಸಾವಿರ ಕೋಟಿಯಲ್ಲಿ ಬಹಳಷ್ಟು ನೋಟುಗಳು ನೇಪಾಳ ಮತ್ತು ಭೂತಾನ್‌ಗಳಲ್ಲಿ ಇರಬಹುದು. ಸ್ವಲ್ಪ ಪ್ರಮಾಣದ ನೋಟುಗಳು ಹಾಳಾಗಿ ಹೋಗಿರಬಹುದು, ಎಂದು ಅವರು ಅಂದಾಜಿಸಿದ್ದಾರೆ. ನೇಪಾಳ ಮತ್ತು ಭೂತಾನ್‌ಗಳಲ್ಲಿ ಭಾರತದ ನೋಟುಗಳ ಚಲಾವಣೆ ಇತ್ತು ಆದರೆ ಅವರಿಗೆ ಬದಲಾಯಿಸಲು ಅವಕಾಶ ಮತ್ತು ಅನುಮತಿ ಕೊಡಲಿಲ್ಲ.
  • ನೋಟುಗಳ ಲೆಕ್ಕ:
  • 2016ರ ನವೆಂಬರ್‌ 8ರಂದು ನೋಟು ರದ್ದತಿ;
  • ರದ್ದಾದ ನೋಟುಗಳನ್ನು ಬ್ಯಾಂಕುಗಳಿಗೆ ಹಿಂದಿರುಗಿಸಲು ಆ ವರ್ಷ ಡಿಸೆಂಬರ್‌ 30ರವರೆಗೆ ಅವಕಾಶ ನೀಡಲಾಗಿತ್ತು.
  • ರದ್ದತಿ ನಿರ್ಧಾರ ಘೋಷಿಸಿದಾಗ ಚಲಾವಣೆಯಲ್ಲಿದ್ದ ರೂ.500 ಮತ್ತು ರೂ.1,000 ಮುಖಬೆಲೆಯ ನೋಟುಗಳ ಮೌಲ್ಯ :- ರೂ.15.41 ಲಕ್ಷ ಕೋಟಿ;
  • ಬ್ಯಾಂಕುಗಳಿಗೆ ವಾಪಸಾಗಿರುವ ನೋಟುಗಳ ಮೌಲ್ಯ ರೂ.15.31 ಲಕ್ಷ ಕೋಟಿ;
  • ಬ್ಯಾಂಕುಗಳಿಗೆ ವಾಪಸಾಗದ ನೋಟುಗಳ ಮೌಲ್ಯ ರೂ.10,720 ಕೋಟಿ;
  • ರೂ.500 ಮತ್ತು ರೂ.2,000 ಮುಖಬೆಲೆಯ ಹೊಸ ನೋಟುಗಳ ಮುದ್ರಣಕ್ಕೆ ಆರ್‌ಬಿಐ ವೆಚ್ಚ ಮಾಡಿದ ಮೊತ್ತ (2016–17ರಲ್ಲಿ) ರೂ.7,965 ಕೋಟಿ;
  • 2017ರ ಜುಲೈಯಿಂದ 2018ರ ಜೂನ್‌ ವರೆಗೆ ನೋಟು ಮುದ್ರಣಕ್ಕೆ ವೆಚ್ಚವಾದ ಮೊತ್ತರೂ.4,912 ಕೋಟಿ. ಒಟ್ಟು = 12877 ರೂ. ಬ್ಯಾಂಕುಗಳಿಗೆ ಹಂಚುವ ವೆಚ್ಚ ಬೇರೆ;
  • ಹೊಸ ನೋಟುಗಳಲ್ಲೇ ಖೋಟಾ ನೋಟು:2017–18ರಲ್ಲಿ ರೂ.500 ಮುಖಬೆಲೆಯ ರೂ.9,892 ಮತ್ತು ರೂ.2,000 ಮುಖಬೆಲೆಯ ರೂ.17,929 ಖೋಟಾ ನೋಟುಗಳು ಪತ್ತೆಯಾಗಿವೆ ಎಂದು ಆರ್‌ಬಿಐ ವರದಿಯಲ್ಲಿ ಹೇಳಲಾಗಿದೆ.
  • ಸರ್ಕಾರದ ಲಾಭದ ಅಂದಾಜು:ರೂ.3 ಲಕ್ಷ ಕೋಟಿ ಮೌಲ್ಯದ ನೋಟುಗಳು ಬ್ಯಾಂಕುಗಳಿಗೆ ವಾಪಸ್‌ ಬರುವುದಿಲ್ಲ. ಅದು ಸರ್ಕಾರಕ್ಕೆ ಆಗುವ ಲಾಭ ಎಂದು ಸರ್ಕಾರ ಭಾವಿಸಿತ್ತು. ಕಪ್ಪು ಹಣ ಸಿಗಲಿಲ್ಲ. ಆದರೆ ಬಹುತೇಕ ಎಲ್ಲಾ ಹಣವೂ ವಾಪಾಸು ಬಂದಿರುವುದರಿಂದ ನೋಟು ರದ್ದು ವಿಫಲವಾಯಿತು ಎಂಬುದು ತಜ್ಞರ ಅಭಿಪ್ರಾಯ.[೬೨]

ನೋಟು ರದ್ದತಿಯಿಂದ ಕಪ್ಪುಹಣ ಕಡಿಮೆಯಾಗಿಲ್ಲ[ಬದಲಾಯಿಸಿ]

  • "ನೋಟು ರದ್ದತಿ ನಂತರ ನಡೆದ ಚುನಾವಣೆಯ ವೇಳೆ ಅತೀ ಹೆಚ್ಚು ಕಪ್ಪುಹಣವನ್ನು ನಾವು(ಚುನಾವಣಾ ಆಯುಕ್ತರು) ವಶಪಡಿಸಿಕೊಂಡಿದ್ದೆವು. ಹಾಗಾಗಿ ನೋಟು ರದ್ದತಿಯಿಂದಾಗಿ ಕಪ್ಪು ಹಣದ ನಿಯಂತ್ರಣ ಸಾಧ್ಯವಾಗಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿದೆ." ಐದು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ವೇಳೆ ಚುನಾವಣಾ ಆಯೋಗ ರೂ.200 ಕೋಟಿಗಿಂತಲೂ ಹೆಚ್ಚು ಕಪ್ಪು ಹಣ ವಶ ಪಡಿಸಿಕೊಂಡಿದೆ. ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ ರಾವತ್ ಹೇಳಿದ್ದಾರೆ.[೬೩]

ನೋಡಿ[ಬದಲಾಯಿಸಿ]

ಹೆಚ್ಚಿನ ಓದಿಗೆ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. Withdrawal of Legal Tender Status for ₹ 500 and ₹ 1000 Notes: RBI Notice;Date : Nov 08, 2016
  2. Demonetisation of Rs. 500 and Rs. 1000 notes: RBI explains
  3. scrapped currency notes and the entire exchange process
  4. Demonetisation: Modi didn't wait for RBI's decision Annapurna Singh, DH News Service, New Delhi, MAR 10 2019, 17:34PM IST UPDATED: MAR 11 2019
  5. ಆರ್‌ಬಿಐ ಅನುಮೋದನೆಗೂ ಮೊದಲೇ ನೋಟ್‌ ಬ್ಯಾನ್‌ ಘೋಷಣೆ: ಆರ್‌ಟಿಐ ಮಾಹಿತಿ
  6. Entire Speech On Discontinuing 500, 1000 Rupee Notes
  7. 3-yr-old dies as father waits at bank; no cash for fee, student commits suicide;Kanpur |Nov 23, 2016;HT 
  8. "ಪರ್ಯಾಯ ಆರ್ಥಿಕತೆಗೆ ಕಡಿವಾಣ;ಯು.ಪಿ.ಪುರಾಣಿಕ್ .;16 Nov, 2016". Archived from the original on 2016-11-16. Retrieved 2016-11-19.
  9. ₹500, ₹ 2000 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ
  10. ಎಟಿಎಂನಿಂದ ಹಣ ವಿತ್‍ಡ್ರಾ
  11. ಎಟಿಎಂ: ವಿಳಂಬಕ್ಕೆ ಎಲ್ಲೆಡೆಯೂ ಅಸಮಾಧಾನ;14 Nov, 2016
  12. ₹ 15 ಸಾವಿರ ಕಳೆದುಕೊಂಡ ಮಹಿಳೆ ಹೃದಯಾಘಾತದಿಂದ ಸಾವು;15 Nov, 2016
  13. "ಆತಂಕ; ಕಪ್ಪು ಹಣ ಮೂಲೋತ್ಪಾಟನೆ ಸಾಧ್ಯವೇ?". Archived from the original on 2016-11-21. Retrieved 2016-11-16.
  14. ನಾಳೆಯಿಂದ ನೋಟು ಬದಲಾವಣೆ ಮಿತಿ
  15. ನೋಟು ಬದಲಾವಣೆ ಮಿತಿಯನ್ನು ₹2000ಕ್ಕೆ ಇಳಿಸಿ ಜನರಿಗೆ ತೊಂದರೆ ನೀಡುತ್ತಿರುವುದೇಕೆ?;ಪ್ರಜಾವಾಣಿ ವಾರ್ತೆ;18 Nov, 2016
  16. ನೋಟು ರದ್ದು: ಕಟ್ಟಡ ಕಾರ್ಮಿಕರ ಕೆಲಸಕ್ಕೆ ಕುತ್ತು;ಪ್ರಜಾವಾಣಿ ವಾರ್ತೆ;19 Nov, 2016
  17. ನೋಟು ರದ್ದು ಮಾಡಿದ ಹೆಚ್ಚಿನ ದೇಶಗಳು ವಿಫಲ?
  18. ನೋಟು ರದ್ದತಿ: ಮೋದಿಯವರ ನಿರ್ಧಾರದ ಬಗ್ಗೆ ವಿದೇಶಿ ಮಾಧ್ಯಮ
  19. ಹಳೇ ನೋಟು ಎಲ್ಲಿ ಬಳಸಬಹುದು
  20. "ನಮೋ ನಿರಂಕುಶ ನಡೆಯ ಸಾಂಸ್ಥಿಕ ಬೆಲೆ;ರಾಮಚಂದ್ರ ಗುಹಾ;9 Dec, 2016". Archived from the original on 2016-12-09. Retrieved 2016-12-09.
  21. "ಡಿಸೆಂಬರ್‌ ತನಕ ಹಳೆ ನೋಟು-ಮುಖ್ಯಮಂತ್ರಿ ಆಗಿದ್ದಾಗ ಬಿರ್ಲಾ, ಸಹಾರ ಗ್ರೂಪ್‌ನಿಂದ ₹ 60 ಕೋಟಿ ಲಂಚ;ಪ್ರಜಾವಾಣಿ ವಾರ್ತೆ". Archived from the original on 2016-11-27. Retrieved 2016-11-27.
  22. ಮತ್ತೊಂದು ಆತ್ಮ ಹತ್ಯೆ
  23. ಅರ್ಥವ್ಯವಸ್ಥೆಗೆ ಬಿದ್ದ ಏಟು: ಅಮರ್ತ್ಯ ಸೇನ್‌ ಟೀಕೆ;1 Dec, 2016
  24. ಬ್ಯಾಂಕ್‌ನಲ್ಲೇ ಸಾವು;2 Dec, 2016
  25. ಅಲಿಗಡ: ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು;ಪಿಟಿಐ;6 Dec, 2016
  26. ಕಪ್ಪು ಹಣ ಎಲ್ಲಿದೆ? ಇದ್ದದ್ದೆಲ್ಲಾ ಬಿಳಿಯಾಯಿತೇ?;1 Dec, 2016
  27. ಬಹಿರಂಗವಾಗಿದ್ದು ₹2,000 ಕೋಟಿ ಅಕ್ರಮ ಹಣ!;ಪ್ರಜಾವಾಣಿ ವಾರ್ತೆ;6 Dec, 2016
  28. ಮಿತ ಚಿನ್ನ ತೆರಿಗೆ ಮುಕ್ತ
  29. "ಆರ್‌ಬಿಐ ಗವರ್ನರ್‌ಗೆ ತುರ್ತು ಕರೆ: 2,420 ಕೋ. ತರಿಸಿಕೊಂಡ ನಾಯ್ಡು;ಉದಯವಾಣಿ, Dec 03, 2016, 4:29 PM IST". Archived from the original on ಡಿಸೆಂಬರ್ 3, 2016. Retrieved ಡಿಸೆಂಬರ್ 3, 2016.
  30. "ಜನರ ಕಷ್ಟ ಪರಿಹಾರಕ್ಕೆ ಕೈಗೊಂಡ ಕ್ರಮಗಳೇನು:'ಸುಪ್ರೀಂ' ಪ್ರಶ್ನೆ". Archived from the original on 2016-12-06. Retrieved 2016-12-03.
  31. ಜನರಿಗೆ ಹಣವೇಕೆ ಸಿಗುತ್ತಿಲ್ಲ;ಪಿಟಿಐ;10 Dec, 2016
  32. "ಡಿಜಿಟಲ್‌ ಪಾವತಿಯೂ,;11 Dec, 2016". Archived from the original on 2016-12-11. Retrieved 2016-12-11.
  33. says he said what he felt
  34. ಎಟಿಎಂ ಮುಂದೆ ಇದ್ದ ಜನರ ಸಾಲು ನೋಡಿ ಮೋದಿಯನ್ನು ಬೈದಿದ್ದಕ್ಕೆ ಹಿಗ್ಗಾಮುಗ್ಗ ಥಳಿತ;ಪ್ರಜಾವಾಣಿ ;20 Dec, 2016
  35. ಇದ್ದದ್ದು ₹4.49 ಲಕ್ಷ ಕೋಟಿ ಹೊಸ ನೋಟು
  36. ರೂ.5,000 ಕ್ಕಿಂತ ಹೆಚ್ಚು ಮೊತ್ತ ಸ್ವೀಕರಿಸಲು ನಿರಾಕರಿಸುತ್ತಿರುವ ಬ್ಯಾಂಕ್‍ಗಳು;
  37. ಹೊಸ ನೋಟು: ನಲಿವಿಲ್ಲ,ನೋವೇ ಎಲ್ಲ!;ಡಿ.ಉಮಾಪತಿ;21 Dec, 2016
  38. 2.2 bn new notes distributed in first 40 days
  39. ರೂ.92 ಕೋಟಿ ಮೌಲ್ಯದ ಹೊಸ ನೋಟುಗಳ ವಶ;22 Dec, 2016
  40. "ನಗದುರಹಿತ ವಹಿವಾಟಿಗೆ ಧಾವಂತ ಏಕೆ?;ಪ್ರಕಾಶ ನಡಹಳ್ಳಿ". Archived from the original on 2016-12-23. Retrieved 2016-12-23.
  41. ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ;ಹಳೆ ನೋಟಿಗೆ ದಂಡ;ಪ್ರಜಾವಾಣಿ ವಾರ್ತೆ;29 Dec, 2016
  42. ಮಾರ್ಚ್‌ 31ರ ನಂತರ ರದ್ದುಗೊಂಡಿರುವ ಹಳೆಯ ನೋಟು ಸಂಗ್ರಹ ಅಪರಾದ;28 Dec, 2016
  43. ಸಂಪಾದಕೀಯ;ಹಳೆ ನೋಟಿಗೆ ದಂಡ ಅಸಂಗತ ಸುಗ್ರೀವಾಜ್ಞೆ ಮಾರ್ಗ ಸರಿಯಲ್ಲ;31 Dec, 2016
  44. ರದ್ದಾದ ಶೇ. 97ರಷ್ಟು ನೋಟುಗಳು ವಾಪಸ್‌;ಉದಯವಾಣಿ
  45. political worshippers of black money
  46. Rs 3-4 lakh crore deposited in banks after note ban might be illicit income;Jan 10, 2017
  47. ಆದಾಯ ಘೋಷಣೆ ಯೋಜನೆ (ಐಡಿಎಸ್‌) ಅಡಿ ಮುಂಬಯಿ ಕುಟುಂಬವೊಂದು ₹ 2 ಲಕ್ಷ ಕೋಟಿ ಅಕ್ರಮ ಸಂಪತ್ತು ಘೋಷಣೆಮಾಡಿದೆ.;5 Dec, 2016
  48. "ನೋಟು ರದ್ದತಿ ಬಗ್ಗೆ ವಿವರಣೆ ನೀಡಲು ಉರ್ಜಿತ್‌ಗೆ ಸೂಚನೆ;ಪಿಟಿಐ;9 Jan, 2017". Archived from the original on 2017-01-09. Retrieved 2017-01-09.
  49. ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮೋದಿಯವರು ವಿವರಣೆ ನೀಡಬೇಕಾದೀತು;ಪಿಟಿಐ;9 Jan, 2017
  50. ಶೇ50ರಷ್ಟು ನೋಟು ಕೊರತೆ;ಪ್ರಜಾವಾಣಿ ವಾರ್ತೆ;15 Jan, 2017
  51. Demonetisation: RBI refuses to give information, cites threat to life;Jan 13, 2017 13:26 ISTThe Reserve Bank of India (RBI) has refused to share “specific details” on the government’s decision to recall high-value banknotes, citing threat to the country’s sovereignty, integrity and security besides danger to life, Bloomberg News reported.
  52. ಪ್ರಜಾವಾಣಿ ವಾರ್ತೆ;18 Jan, 2017
  53. ನವೆಂಬರ್ 8 ರಿಂದ ಡಿಸೆಂಬರ್ 30ರವರೆಗಿನ ಅವಧಿಯಲ್ಲಿ ಖೋಟಾ ನೋಟುಗಳು ಪತ್ತೆಯಾಗಿಲ್ಲ;ಪ್ರಜಾವಾಣಿ ವಾರ್ತೆ;21 Jan, 2017
  54. 10ರಲ್ಲಿ 8 ಸದಸ್ಯರ ಒಪ್ಪಿಗೆ;21 Jan, 2017
  55. ₹500ರ ನೋಟು ಮುದ್ರಣಕ್ಕೆ ರೂ.4 ವೆಚ್ಚ;21 Jan, 2017
  56. "ಹೊಸ ₹1000 ನೋಟು ಶೀಘ್ರದಲ್ಲೇ ಚಲಾವಣೆಗೆ;ಪ್ರಜಾವಾಣಿ ವಾರ್ತೆ;27 Jan, 2017". Archived from the original on 2017-01-27. Retrieved 2017-01-27.
  57. "ಆರ್‌ಬಿಐ– ಆಯೋಗ ಕದನಪಿಟಿಐ;30 Jan, 2017". Archived from the original on 2017-01-29. Retrieved 2017-01-31.
  58. "ನೋಟುಬಂದಿ ಮತ್ತದರ ಪ್ರಭಾವ;ಎಂ.ಎಸ್. ಶ್ರೀರಾಮ್;17 May, 2017". Archived from the original on 2017-05-17. Retrieved 2017-05-17.
  59. ಆರ್‌ಬಿಐಗೆ ಮರಳಿದ ಶೇ 99 ರಷ್ಟು ₹1000 ಮುಖಬೆಲೆಯ ನೋಟುಗಳು: ದೇಶದಲ್ಲಿ ಕಾಳಧನವೇ ಇಲ್ಲ!;ಏಜೆನ್ಸಿಸ್‌;27 Aug, 2017
  60. "ಸಂಪಾದಕೀಯ;ಜಿಡಿಪಿ ಕುಸಿತ ಆತಂಕದ ಸಂಗತಿ ಅರ್ಥವ್ಯವಸ್ಥೆಗೆ ಬೇಕು ಕಾಯಕಲ್ಪಪ್ರಜಾವಾಣಿ ವಾರ್ತೆ;2 Sep, 2017". Archived from the original on 2017-09-02. Retrieved 2017-09-02.
  61. "ಆರ್ಥಿಕ ಪ್ರಗತಿ ಇಳಿಮುಖ;ಜಿಡಿಪಿ ಇಳಿಕೆಗೆ ನೋಟು ರದ್ದತಿ ಕಾರಣ;ಪಿಟಿಐ;3 Sep, 2017". Archived from the original on 2017-09-02. Retrieved 2017-09-03.
  62. ಶೇ 99.3ರಷ್ಟು ನೋಟು ಬ್ಯಾಂಕಿಗೆ ವಾಪಸ್‌;;ಪಿಟಿಐ;;30 ಆಗಸ್ಟ್ 2018,
  63. ನೋಟು ರದ್ದತಿಯಿಂದಾಗಿ ಕಪ್ಪು ಹಣದ ಮೇಲೆ ಕಡಿವಾಣ ಬಿದ್ದಿಲ್ಲ: ಒ.ಪಿ. ರಾವತ್ಪ್ರ;ಜಾವಾಣಿ ;03 ಡಿಸೆಂಬರ್ 2018,