ವಿಷಯಕ್ಕೆ ಹೋಗು

ಭಾರತದಲ್ಲಿ ಪವನ ವಿದ್ಯುತ್ ಶಕ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಮಾರು 1990 ರ ವೇಳೆಗೆ ಭಾರತದಲ್ಲಿ ಪವನ ವಿದ್ಯುತ್ ಅಭಿವೃದ್ಧಿ ಕಂಡಿತು.ಅದಲ್ಲದೇ ಕಳೆದ ಕೆಲವು ವರ್ಷಗಳಿಂದ ಅದರ ಪ್ರಮಾಣವೂ ಏರಿಕೆ ಕಂಡಿದೆ. ಈ ಗಾಳಿ ವಿದ್ಯುತ್ ಉದ್ಯಮಕ್ಕೆ ಡೆನ್ಮಾರ್ಕ್ ಅಥವಾ USಹೊಸ ಪ್ರವೇಶ ಮಾಡಿದ್ದರೂ ಭಾರತವು ಇಡೀ ವಿಶ್ವದಲ್ಲಿ ಐದನೆಯ ಅತಿ ದೊಡ್ಡ ದೇಶವಾಗಿ, ಈ ಗಾಳಿ ವಿದ್ಯುತ್ ಸ್ಥಾಪನೆಯಲ್ಲಿ ತನ್ನ ಸ್ಥಾನ ಪಡೆದಿದೆ.[]

ಇತ್ತೀಚಿನ ಅಂದರೆ 31 ಅಕ್ಟೋಬರ್ 2009 ರವರೆಗೆ ಒಟ್ಟು ಸ್ಥಾಪಿತ ಭಾರತದಲ್ಲಿನ ಪವನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವೆಂದರೆ 11806.69[] MW,ಆಗಿದೆ. ಪ್ರಮುಖವಾಗಿ ಇದರ ಉತ್ಪಾದನಾ ಚಟುವಟಿಕೆಯು ಎಲ್ಲೆಡೆಗೂ ತಮಿಳುನಾಡು (4900.765 MW),[] ಮಹಾರಾಷ್ಟ್ರಾ (1945.25 MW), ಗುಜರಾತ (1580.61 MW), ಕರ್ನಾಟಕ (1350.23 MW), ರಾಜಸ್ಥಾನ (745.5 MW), ಮಧ್ಯಪ್ರದೇಶ (212.8 MW), ಆಂಧ್ರ ಪ್ರದೇಶ (132.45 MW), ಕೇರಳ (46.5 MW), ಒಡಿಶಾ (2MW),[][] ಪಶ್ಚಿಮ ಬಂಗಾಲBengal (1.1 MW) ಅದಲ್ಲದೇ ಇನ್ನುಳಿದ ರಾಜ್ಯಗಳಿಂದ (3.20 MW) [] ಮುಂಬರುವ 2012 ರ ಹೊತ್ತಿಗೆ ಭಾರತದಲ್ಲಿ ಸುಮಾರು 6,000 ಮೆಗಾವ್ಯಾಟ್ ಪವನಶಕ್ತಿ ವಿದ್ಯುತ್ ಉತ್ಪಾದನೆಗೆ ಅಂದಾಜಿಸಲಾಗಿದೆ.[][] ಈ ಪವನಶಕ್ತಿ ವಿದ್ಯುತ್ ಒಟ್ಟು 6% ರಷ್ಟು ಉತ್ಪಾದನಾ ಸಾಮರ್ಥ್ಯ ಹೊಂದಿದೆ.ಭಾರತದ ವಿದ್ಯುತ್ ಶಕ್ತಿಗೆ 1.6% ರಷ್ಟು ತನ್ನ ಕೊಡುಗೆ ನೀಡುತ್ತದೆ.[] ಭಾರತವು ಗಾಳಿ ಕುರಿತಾದ ನಕ್ಷೆಯೊಂದನ್ನು ಸಿದ್ದಪಡಿಸುತ್ತಿದೆ.[]

ಸ್ಥೂಲ ಸಮೀಕ್ಷೆ

[ಬದಲಾಯಿಸಿ]
ಇಂಡಿಯಾ ಈಸ್ ದಿ ವರ್ಲ್ಡ್ಸ್ ಫಿಫ್ತ್ ಲಾರ್ಜೆಸ್ಟ್ ವಿಂಡ್ ಪಾವರ್ ಪ್ರೊಡುಸರ್ ಉಯಿತ್ ಆನ್ಯುವಲ್ ಪ್ರೊಡಕ್ಷನ 8,896 MW.[೧೦] ತಮಿಳುನಾಡಿನ ಕಾಯಥಾರನಲ್ಲಿರುವ ವಿಂಡ್ ಫಾರ್ಮ್ ನ್ನು ಇಲ್ಲಿ ತೋರಿಸಲಾಗಿದೆ.

ವಿಶ್ವದಾದ್ಯಂತ ಸ್ಥಾಪಿತವಾಗಿರುವ ಪವನ ವಿದ್ಯುತ್ ಶಕ್ತಿಯ ಉತ್ಪಾದನಾ ಸಾಮರ್ಥ್ಯ ಸದ್ಯ 2009 ರ ಕೊನೆಯಲ್ಲಿ 157,899 MW ಗೆ ತಲುಪಿದೆ. USA (35,159 MW), ಜರ್ಮನಿ (25,777 MW), ಸ್ಪೇನ್ (19,149 MW) ಮತ್ತು ಚೀನಾ (25,104 MW) ಇವೆಲ್ಲ ಭಾರತಗಿಂತ ಮುಂದಿವೆ,ಸದ್ಯ ಐದನೆಯ ಸ್ಥಾನದಲ್ಲಿದೆ.[೧೧] ಸದ್ಯ ಸಣ್ಣ ಪ್ರಮಾಣದಲ್ಲಿರುವ ಈ ಗಾಳಿ ವಿದ್ಯುತ್ ಯೋಜನೆಯು ಗಾಳಿ ಟರ್ಬೈನ್ ಗಳ ಸ್ಥಾಪನೆ ಮಟ್ಟದಲ್ಲಿದೆ.ಭಾರತದಲ್ಲಿನ ವಿದ್ಯುತ್ ಶಕ್ತಿ ಉತ್ಪಾದನೆಯ ಸಾಮರ್ಥ್ಯ ಹೆಚ್ಚಳಕ್ಕೆ ಇದು ಉತ್ತಮ ಆಯ್ಕೆ ಎನಿಸಿದೆ.[೧೨]

ಸುಜ್ಲೊನ್ ಎಂಬ ಭಾರತೀಯ ಒಡೆತನದ ಕಂಪನಿಯು ವಿಶ್ವಾದಾದ್ಯಂತ ಕಳೆದ ದಶಕದಲ್ಲಿ ಗಾಳಿ ಟರ್ಬೈನ್ ಗಳ ಮಾರಾಟದಲ್ಲಿ ವಿಶ್ವ ಮಾರುಕಟ್ಟೆಯಲ್ಲಿ 7.7 ರಷ್ಟು ತನ್ನ ಪಾಲು ಪಡೆದಿದೆ. ಸುಜ್ಲೊನ್ ಸದ್ಯ ಭಾರತೀಯ ಟರ್ಬೈನ್ ಮಾರುಕಟ್ಟೆಯಲ್ಲಿ ಶೇಕಡಾ 52 ರಷ್ಟು ಪಾಲು ಪಡೆದಿದೆ. ಸುಜ್ಲೊನ್ ಈ ತಂತ್ರಜ್ಞಾನದ ಯಶಸ್ಸು ಭಾರತವನ್ನು ವಿಶ್ವದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿಸಿದೆ.[೧೩]

ರಾಜ್ಯ-ಮಟ್ಟದ (ಗಾಳಿ) ಪವನ ವಿದ್ಯುತ್ ಶಕ್ತಿ

[ಬದಲಾಯಿಸಿ]

ಭಾರತದ ರಾಜ್ಯಗಳು ಈ ಪವನ ವಿದ್ಯುತ್ ಶಕ್ತಿ ಉತ್ಪಾದನೆಗೆ ಹೆಚ್ಚು ಒಲವು ತೋರುತ್ತಿವೆ.

ತಮಿಳುನಾಡು(4889.765 MW)

[ಬದಲಾಯಿಸಿ]
ಭಾರತವು ತನ್ನ ಪಳೆಯುಳಿಕೆ ಬಳಸಿದ ಇಂಧನ ಶಕ್ತಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.ಇದರಿಂದ ವಿದ್ಯುತ್ ಶಕ್ತಿ ಬೇಡಿಕೆಯನ್ನು ಪೂರೈಸಬಹುದಾಗಿದೆ.ತಮಿಳುನಾಡಿನ ಮುಪ್ಪಂಡಲ್ ನಲ್ಲಿರುವ ವಿಂಡ್ ಫಾರ್ಮ್ ನ್ನು ಇಲ್ಲಿ ತೋರಿಸಲಾಗಿದೆ.

ತಮಿಳುನಾಡು ರಾಜ್ಯದಲ್ಲಿ ಅತಿ ಹೆಚ್ಚು ಪವನ ವಿದ್ಯುತ್ ಶಕ್ತಿ ಉತ್ಪಾದನೆ ಮಾಡಲಾಗುತ್ತದೆ,ಇದರ ಸಾಮರ್ಥ್ಯವು ಮಾರ್ಚ್ 2010 ರ ವೇಳೆಗೆ : 4889.765 MW ಆಗಿದೆ.[] ಅರಲ್ವೈಮೊಳಿ ಹತ್ತಿರದ ಮುಪ್ಪಂಡಾಲ್ ನಲ್ಲಿರುವ ವಿಂಡ್ ಫಾರ್ಮ್ ಉಪಖಂಡದಲ್ಲೇ ಅತಿ ದೊಡ್ಡ ಗಾಳಿ ವಿದ್ಯುತ್ ಸ್ಥಾವರವೆನಿಸಿದೆ.ಒಮ್ಮೆ ಬಡತನದಿಂದ ಬಳಲುತ್ತಿದ್ದ ಮುಪ್ಪಂಡಾಲ್ ಇಂದು ಈ ಸ್ಥಾವರದಿಂದಾಗಿ ಸುತ್ತಲಿನ ಹಳ್ಳಿಗಳಿಗೆ ಕೆಲಸಗಳಿಗಾಗಿ ವಿದ್ಯುತ್ ಪೂರೈಸುತ್ತದೆ.[೧೪][೧೫] ಭಾರತದ $2 ಬಿಲಿಯನ್ ಮೊತ್ತ ಬಂಡವಾಳದ ವಿದ್ಯುತ್ ಉತ್ಪಾದನಾ ಯೋಜನೆಗೆ ಈ ಹಳ್ಳಿಯನ್ನು ಆಯ್ಕೆ ಮಾಡಲಾಯಿತು.ವಿದೇಶ ಬಂಡವಾಳುದಾರರಿಗೆ ಇದು ಈ ಕ್ಷೇತ್ರದಲ್ಲಿ ಸದವಕಾಶ ಒದಗಿಸಿದೆ. ಅಲ್ಲದೇ ಭಾರತ ಕೂಡ ತೆರಿಗೆ ರಿಯಾಯತಿಯನ್ನೂ ಇಲ್ಲಿ ಗಾಳಿ ಟರ್ಬೈನ್ ಸ್ಥಾಪಿಸುವವರಿಗಾಗಿ ನೀಡುತ್ತಿದೆ. ಕಳೆದ ಫೆಬ್ರವರಿ 2009 ರಲ್ಲಿ ಶ್ರೀರಾಮ EPC ಕಂಪನಿಯು INR 700 ಮಿಲಿಯನ್ ಒಪ್ಪಂದ ಮಾಡಿಕೊಂಡಿತು.ಈ ನಿಟ್ಟಿನಲ್ಲಿ 250 KW(ಒಟ್ಟು 15 MW) ನ 60 ಘಟಕಗಳನ್ನು ಭೂಶಿರ ಶಕ್ತಿ ವಿದ್ಯುತ್ ಉತ್ಪಾದನೆಗೆ ತಿರುನೆಲವೇಲಿ ಜಿಲ್ಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಿತು.[೧೬] ಎನೆರ್ಕಾನ್ ಕೂಡಾ ಭಾರತದಲ್ಲಿ ಪವನ ವಿದ್ಯುತ್ ಶಕ್ತಿ ಉತ್ಪಾದನಾ ಸುಧಾರಣೆಗೆ ತನ್ನ ಕೊಡುಗೆ ನೀಡುತ್ತಿದೆ. ತಮಿಳುನಾಡಿನಲ್ಲಿ,ಕೊಯಿಮತ್ತೂರು ಮತ್ತು ತಿರುಪ್ಪೂರ್ ಜಿಲ್ಲೆಗಳಲ್ಲಿ ಸುಮಾರು 2002 ರಿಂದಲೂ ಹೆಚ್ಚು ಪವನ ವಿದ್ಯುತ್ ಶಕ್ತಿ ಉತ್ಪಾದನಾ ಸ್ಥಾವರುಗಳಿವೆ.ವಿಶೇಷವಾಗಿ ಚಿತ್ತಿಪಾಲ್ಯಮ್, ಕೆತ್ನೂರ್, ಗುಡಿಮಂಗಲಮ್, ಪೂಲವಾಡಿ,ಮುರುಂಗಪಟ್ಟಿ(MGV ಸ್ಥಳ),ಸುಂಕರಮುದಕು,ಕೊಂಗಲ್ನಾಗರಮ್,ಗೊಮಂಗಲಮ್, ಅಂತಿಯುರ್ ಪ್ರದೇಶಗಳಲ್ಲಿ ಅತಿ ಹೆಚ್ಚು ಪ್ರಮಾಣದ ಗಾಳಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.ಎರಡೂ ಜಿಲ್ಲೆಗಳಲ್ಲಿ ಈ ಸ್ಥಳಗಳು ಇದಕ್ಕೆ ಪ್ರಖ್ಯಾತಿ ಪಡೆದಿವೆ.

ಮಹಾರಾಷ್ಟ್ರ(1942.25 MW)

[ಬದಲಾಯಿಸಿ]

ಮಹಾರಾಷ್ಟ್ರರಾಜ್ಯವು ತಮಿಳುನಾಡಿನ ನಂತರ ಈ ಸಾಮರ್ಥ್ಯಕ್ಕೆ ಎರಡನೆಯ ಸ್ಥಾನದಲ್ಲಿದೆ. ಸುಜ್ಲೊನ್ ಅತ್ಯಧಿಕ ಆಸಕ್ತಿಯಿಂದ ಇದರಲ್ಲಿ ತೊಡಗಿಕೊಂಡಿದೆ.[೧೨] ಏಶಿಯಾದಲ್ಲೇ ಅತಿ ದೊಡ್ಡದೆನ್ನಲಾದ(201 MW) ವಾಂಕುಸವಾಡೆ ವಿಂಡ್ ಪಾರ್ಕ್ ನ್ನು ಸುಜ್ಲೊನ್ ತನ್ನ ನಿರ್ವಹಣೆಯಲ್ಲಿಟ್ಟುಕೊಂಡಿದೆ.ಇದು ಮಹಾರಾಷ್ಟ್ರದ ಸಾತಾರ ಜಿಲ್ಲೆಯಲ್ಲಿನ ಕೊಯ್ನಾ ಜಲಸಾಗರದ ಬಳಿ ಸ್ಥಾಪಿತವಾಗಿದೆ.[೧೭]

ಗುಜರಾತ್(1782 MW)

[ಬದಲಾಯಿಸಿ]

ಜಾಮ್ನಗರ ಜಿಲ್ಲೆಯಲ್ಲಿನ ಸಾಮನಾ &ಸದೊದರ್ ನಲ್ಲಿ ಹೆಸರಾಂತ ವಿದ್ಯುತ್ ಕಂಪನಿಗಳಾಗಿರುವ ಚೀನಾ ಲೈಟ್ ಪಾವರ್ (CLP)ಮತ್ತು ಟಾಟಾ ಪಾವರ್ ಗಳು ಸುಮಾರು 8.15 ಬಿಲಿಯನ್ ($189.5 ಮಿಲಿಯನ್)ಮೊತ್ತವನ್ನು ಗಾಳಿ ವಿದ್ಯುತ್ ಯೋಜನೆಗಾಗಿ ಈ ಪ್ರದೇಶದಲ್ಲಿ ಬಂಡವಾಳ ಹೂಡಲು ನಿರ್ಧರಿಸಿವೆ. ಈ CLP ಕಂಪನಿಯು ತನ್ನ ಉಪಸಂಸ್ಥೆಯಾದ CLP ಇಂಡಿಯಾ ಮೂಲಕ ಸುಮಾರು 5 ಬಿಲಿಯನ್ ಮೊತ್ತವನ್ನು ಸಾಮನಾ ಪ್ರದೇಶದಲ್ಲಿ 126 ವಿಂಡ್ ಟರ್ಬೈನ್ ಗಳ ಸ್ಥಾಪಿಸಲು ಉದ್ದೇಶಿಸಿದ್ದು ಇದರ ಮೂಲಕ 100.8MW ವಿದ್ಯುತ್ ಉತ್ಪಾದನೆ ಸಾಧ್ಯ ಮಾಡಲಿದೆ. ಟಾಟಾ ಪಾವರ್ ಕೂಡಾ ಇದೇ ಸ್ಥಳದಲ್ಲಿ 3.15 ಬಿಲಿಯನ್ ರೂಪಾಯಿ ಮೊತ್ತದಾ ಬಂಡವಾಳ ಹೂಡಿ ವಿಂಡ್ ಟರ್ಬೈನ್ ಗಳ ಮೂಲಕ 50MW ವಿದ್ಯುತ್ ಉತ್ಪಾದನೆಗೆ ತೊಡಗಿದೆ. ಸರ್ಕಾರಿ ಸೂತ್ರಗಳ ಪ್ರಕಾರ ಅವು ಮುಂದಿನ ವರ್ಷ ತಮ್ಮ ಉತ್ಪಾದನೆ ಆರಂಭಿಸಲಿವೆ. ಗುಜರಾತ ರಾಜ್ಯವು ಪವನ ವಿದ್ಯುತ್ ಯೋಜನೆ ಮೇಲೆ ಹೆಚ್ಚು ಒಲವು ತೋರಿದ್ದು ಸಾಮನಾ ಪ್ರದೇಸಹ್ದಲ್ಲಿಯೇ 450 ಟರ್ಬೈನ್ ಗಳ ಸ್ಥಾಪಿಸಿ ಒಟ್ಟು 360 MW ವಿದ್ಯುತ್ ಶಕ್ತಿ ಉತ್ಪಾದನೆಗೆ ಮಾದರಿ ಸ್ಥಳವನಾರಿಸಿದೆ.ಈ ಪವನ ವಿದ್ಯುತ್ ಶಕ್ತಿ ಉತ್ಪಾದನೆಗೆ ಸರ್ಕಾರವು ಹೆಚ್ಚಿನ ತೆರಿಗೆ ವಿನಾಯತಿ ನೀಡುವುದರ ಜೊತೆಗೆ ಇನ್ನಿತರ ಕಂಪನಿಗಳಿಗೆ ಉತ್ತೇಜನ ನೀಡುತ್ತಿದೆ. ಸಾಮನಾದಲ್ಲಿ ತೀವ್ರ ಗತಿಯ ವಿದ್ಯುತ್ ಪ್ರಸರಣ ಗ್ರಿಡ್ ಇದ್ದು ಅದರಲ್ಲಿ ಗಾಳಿಯಿಂದ ಉತ್ಪಾದಿಸಿದ ವಿದ್ಯುತ್ ನ್ನು ಸಂಗ್ರಹಿಸಬಹುದು. ಇದಕ್ಕಾಗಿ ಸದೊದರದಲ್ಲಿ ಉಪಕೇಂದ್ರ ಸ್ಥಾಪಿಸಲಾಗಿದೆ. ಎರಡೂ ಯೋಜನೆಗಳನ್ನು ಎನೆರ್ಕಾನ್ ಲಿಮಿಟೆಡ್ ಕಂಪನಿಯು ಅನುಷ್ಠಾನಗಳಿಸಲಿದ್ದು ಇದು ಎನೆರ್ಕಾನ್ ಆಫ್ ಜರ್ಮನಿ ಮತ್ತು ಮುಂಬಯಿ ಮೂಲದ ಮೆಹ್ರಾ ಗ್ರುಪ್ ಇದನ್ನು ಕೈಗೆತ್ತಿಕೊಂಡಿದೆ.[೧೮]

ONGC ಲಿಮಿಟೆಡ್ ಕೂಡಾ ತನ್ನ ಮೊದಲ ಪವನ ವಿದ್ಯುತ್ ಶಕ್ತಿ ಉತ್ಪಾದನಾ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದು 51MW ಯೋಜನೆಯಾಗಿದ್ದು ಗುಜರಾತಿನ ಕಚ್ಛ ಜಿಲ್ಲೆಯ ಮೋತಿಸಿಂಧೋಳಿಯಲ್ಲಿದೆ ONGC ಕೂಡಾ EPC ಪೂರೈಕೆ ಆದೇಶವನ್ನುಸುಜ್ಲೊನ್ ಎನರ್ಜಿ ಕಂಪನಿಗೆ ಜನವರಿ 2008 ರಲ್ಲಿ ನೀಡಿದೆ,ಈ ಮೂಲಕ ಪ್ರತಿ 1.5MW ಉತ್ಪಾದನೆಯ 34 ಟರ್ಬೈನ್ ಗಳಿಗಾಗಿ ಬೇಡಿಕೆಯೊಡ್ಡಿದೆ. ಈ ಯೋಜನೆ ಮೇಲೆ ಕಳೆದ ಫೆಬ್ರವರಿ 2008 ರಲ್ಲಿ ತನ್ನ ಕೆಲಸ ಆರಂಭಿಸಿದ್ದು ,ಮೊದಲ ಮೂರು ಟರ್ಬೈನ್ ಗಳು ಆರಂಭದ 43 ದಿನಗಳಲ್ಲೇ ಕಾರ್ಯಚಟುವಟಿಕೆಗೆ ಚಾಲನೆ ನೀಡಲಿವೆ. ಸುಮಾರು 308 ಕೋಟಿ ರೂಪಾಯಿ ಮೊತ್ತದ ಈ ಗಾಳಿ ವಿದ್ಯುತ್ ಶಕ್ತಿಯನ್ನು ಗುಜರಾತ ರಾಜ್ಯದ ಗ್ರಿಡ್ ಗಳಿಗೆ ಪೂರೈಸಿ ನಂತರ ಅದನ್ನು ONGC ಯ ಇತರ ಕೇಂದ್ರಗಳಾದ ಅಂಕ್ಲೇಶ್ವರ್, ಅಹ್ಮದಾಬಾದ್, ಮೆಹಸಾನಾ ಮತ್ತು ವಡೋದರಕೇಂದ್ರಗಳಿಗೆ ಸಾಗಿಸಲಾಗುತ್ತದೆ. ತನ್ನ ಮುಂಬರುವ ಎರಡು ವರ್ಷಗಳ ಉತ್ಪಾದನಾ ಅವಧಿಯಲ್ಲಿ ONGC ಯು ಒಟ್ಟು 200 MW ಉತ್ಪಾದನಾ ಗುರಿ ಹೊಂದಿದೆ.[೧೯]

ಕರ್ನಾಟಕ(1340.23 MW)

[ಬದಲಾಯಿಸಿ]

ಕರ್ನಾಟಕದಲ್ಲಿ ಸಣ್ಣ ಪ್ರಮಾಣದ ಪವನ ವಿದ್ಯುತ್ ಶಕ್ತಿ ಉತ್ಪಾದನೆಯ ಕೇಂದ್ರಗಳಿದ್ದು ದೇಶದಲ್ಲಿಯೇ ಅದು ಅತಿ ಹೆಚ್ಚು ಸಂಖ್ಯೆಯ ವಿಂಡ್ ಮಿಲ್ ಫಾರ್ಮ್ ಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರದುರ್ಗ,ಗದಗ ಮೊದಲಾದೆಡೆ ಜಿಲ್ಲಾ ಪ್ರದೇಶಗಳಲ್ಲಿ ಅಸಂಖ್ಯಾತ ವಿಂಡ್ ಮಿಲ್ ಗಳಿವೆ. ಚಿತ್ರದುರ್ಗ ಒಂದರಲ್ಲಿಯೇ ಒಟ್ಟು 20000 ಕ್ಕಿಂತ ಅಧಿಕ ಗಾಳಿ ಟರ್ಬೈನ್ ಗಳಿವೆ.[ಸೂಕ್ತ ಉಲ್ಲೇಖನ ಬೇಕು]

ಒಟ್ಟು 13.2 MW ನ ಅರಷಿನಗುಡಿ (ARA) ಮತ್ತು 16.5 MW ನ ಅಣಬೂರ್ ನ(ANA) ವಿಂಡ್ ಫಾರ್ಮ್ ಗಳು ACCIONA ಕಂಪನಿಯ ಮೊದಲ ಪ್ರಯೋಗಗಳಾಗಿವೆ. ಇದು ದಾವಣಗೆರೆಜಿಲ್ಲೆಯಲ್ಲಿದೆ.(ಕರ್ನಾಟಕ ರಾಜ್ಯ),ಅವುಗಳು ಒಟ್ಟು ಸ್ಥಾಪಿತ 29.7 MW ಮತ್ತು ಒಟ್ಟು18 ವೆಸ್ತಾಸ್ ಗಳ 1.65MW ಸಾಮರ್ಥ್ಯದ ವಿಂಡ್ ಟರ್ಬೈನ್ಸ್ ಗಳನ್ನು ವೆಸ್ತಾಸ್ ವಿಂಡ್ ಟೆಕ್ನಾಲಜಿ ಇಂಡಿಯಾ ಕಂಪನಿಯು ಪೂರೈಕೆ ಮಾಡಿದೆ.[ಸೂಕ್ತ ಉಲ್ಲೇಖನ ಬೇಕು]

ಈ ARA ವಿಂಡ್ ಫಾರ್ಮ್ ಜೂನ್ 2008ರಲ್ಲಿ ಸ್ಥಾಪಿತವಾಗಿ ಕಾರ್ಯ ಆರಂಭಿಸಿತು. ಅದೇ ರೀತಿ ANA ವಿಂಡ್ ಫಾರ್ಮ್ 2008ರ ಸೆಪ್ಟೆಂಬರ್ ನಲ್ಲಿ ಆರಂಭಿಸಿತು. ಪ್ರತಿಯೊಂದು ಕಂಪನಿಯು 20-ವರ್ಷಗಳ ಪಾವರ್ ಪರ್ಚೇಜ್ ಅಗ್ರೀಮೆಂಟ್ (PPA)ಗೆ ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ (BESCOM)ನೊಂದಿಗೆ 100% ಇದರ ಉತ್ಪಾದನೆಯನ್ನು ಪಡೆಯಲು ಈ ಒಪ್ಪಂದಕ್ಕೆ ಸಹಿ ಮಾಡಲಾಯಿತು. ARA ಮತ್ತು ANA ಗಳು Acciona (ಆಕ್ಸಿಯೊನಾ) ಕಂಪನಿಯ ಮೊದಲ ವಿಂಡ್ ಫಾರ್ಮ್ಸ್ ಆಗಿವೆ. ಇವುಗಳು CER ಕ್ರೆಡಿಟ್ಸ್ ಗಳಿಗೆ ಪಾತ್ರವಾಗುತ್ತವೆ.ಇದನ್ನು ಕ್ಲೀನ್ ಡೆವಲಪ್ಮೆಂಟ್ ಮೆಕಾನಿಸಮ್(CDM)ನ ಮೂಲಕ ಇದಕ್ಕೆ ನೆರವು ದೊರಕಿಸಿಕೊಳ್ಳಬಹುದು.[ಸೂಕ್ತ ಉಲ್ಲೇಖನ ಬೇಕು]

ACCIONA ಕಂಪನಿಯು ವಿಶ್ವ ಬ್ಯಾಂಕಿನಿಂದ ದಿ ಸ್ಪ್ಯಾನಿಶ್ ಕಾರ್ಬನ್ ಫಂಡ್ ಮೂಲಕ ಈ ಯೋಜನೆಯ ಉತ್ಪಾದನೆಯ CER ನ ಖರೀದಿದಾರನಾಗಿ ಕೆಲಸ ಮಾಡುತ್ತದೆ.ಇದರ CERಗಳು 2010 ದಿಂದ 2012 ವರೆಗೆ ಹೊರಬೀಳಲಿವೆ.ಇದಕ್ಕಾಗಿ ಮಾತುಕತೆಗಳು ಜಾರಿಯಲ್ಲಿವೆ. ಇದಕ್ಕಾಗಿ ಅವಶ್ಯವಿರುವ ಪರಿಸರೀಯ ಮತ್ತು ಸಾಮಾಜಿಕ ವಿಷಯಗಳ ಕುರಿತು ಎಲ್ಲಾ ವಿಧಿ-ವಿಧಾನಗಳನ್ನು ಪೂರೈಸಿ ಸಂಬಂಧಿಸಿದ ಕಾಗದಪತ್ರಗಳನ್ನು ಒದಗಿಸಲಾಗಿದೆ. ಇವೆಲ್ಲವೂ ಕೆಳಗಿರುವಂತೆ ವಿಶ್ವ ಬ್ಯಾಂಕಿನ ಬಹಿರಂಗ ನೀತಿ-ಸೂತ್ರಕ್ಕನುಗುಣವಾಗಿರಬೇಕಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

ರಾಜಸ್ತಾನ್(738.5 MW)

[ಬದಲಾಯಿಸಿ]

ಗುರಗಾಂವ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಗುಜರಾತ ಫ್ಲುರೊಕೆಮಿಕಲ್ಸ್ ಲಿಮಿಟೆಡ್ ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ವಿಂಡ್ ಫಾರ್ಮ್ ನ್ನು ಸ್ಥಾಪಿಸುವ ಎಲ್ಲಾ ತಯಾರಿ ಪೂರ್ಣಗೊಳಿಸಿದೆ. ಒಬ್ಬ ಹಿರಿಯ [who?]ಅಧಿಕಾರಿ ಹೇಳಿಕೆ ಪ್ರಕಾರ ಒಟ್ಟು 31.5 mw ಸಾಮರ್ಥ್ಯದಲ್ಲಿ ಇಲ್ಲಿಯವರೆಗೆ 12mw ಉತ್ಪಾದನೆ ಕಾರ್ಯ ಪೂರ್ಣವಾಗಿದೆ. ಇನ್ನುಳಿದದ್ದು ಸದ್ಯದಲ್ಲೇ ಅನುಷ್ಠಾನಗೊಳ್ಳಲಿದೆ.

INOX ಗ್ರುಪ್ ಸಮೂಹದ ಕಂಪನಿಗೆ ಇದು ಅತಿದೊಡ್ಡ ವಿಂಡ್ ಫಾರ್ಮ್ ಎನಿಸಿದೆ. ಅದೇ ತೆರನಾಗಿ 2006-07ರಲ್ಲಿ GFL ಕಂಪನಿಯುa 23.1-mw ಸಾಮರ್ಥ್ಯದ ಪವನ ವಿದ್ಯುತ್ ಶಕ್ತಿ ಉತ್ಪಾದನಾ ಯೋಜನೆಯನ್ನು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಪಂಚಗಣಿ ಹತ್ತಿರ ಆರಂಭಿಸಲು ಯೋಜಿಸಿದೆ.. ಇವೆರಡೂ ವಿಂಡ್ ಫಾರ್ಮ್ ಗಳು ಗ್ರಿಡ್ ಸಂಪರ್ಕ ಹೊಂದಿದ್ದು ಕಂಪನಿಗಾಗಿ ಕಾರ್ಬನ್ ಕ್ರೆಡಿಟ್ಸ್ (ವಿಶ್ವಬ್ಯಾಂಕಿನಲ್ಲಿ ಪರಿಸರಿ ಸ್ನೇಹಿ ಸ್ಥಾವರಗಳಿಗೆ ನೀಡುವ ಧನ ಸಹಾಯ)ಹೊಂದಲು ಸಮರ್ಥವಾಗಿವೆ.[ಸೂಕ್ತ ಉಲ್ಲೇಖನ ಬೇಕು] ಒಂದು ವೈಯಕ್ತಿಕ ಅಭಿವೃದ್ಧಿ ಸಾಮರ್ಥ್ಯದ ಮೇಲೆ ಸಿಮೆಂಟ್ ವಲಯದ ದೊಡ್ಡ ಕಂಪನಿ ACC ಲಿಮಿಟೆಡ್ ಕೂಡಾ ರಾಜಸ್ಥಾನದಲ್ಲಿ ಸುಮಾರು 11mw ಸಾಮರ್ಥ್ಯದ ಸ್ಥಾವರ ಆರಂಭಿಸಲು ಯೋಜಿಸಿದೆ. ಇದರ ಸುಮಾರು 60 ಕೋಟಿ ರೂಪಾಯಿ ವೆಚ್ಚದ ಈ ವಿಂಡ್ ಫಾರ್ಮ್ ಕಂಪನಿಯ ಲೆಖರಿ ಸಿಮೆಂಟ್ ಘಟಕದ ಬೇಡಿಕೆಯನ್ನು 0.9 ದಶಲಕ್ಷ tpa ದಿಂದ 1.5 ದಶಲಕ್ಷ tpa ವರೆಗೆ ಹೆಚ್ಚಿಸುವ ಆಧುನಿಕರಣದ ಯೋಜನೆ ಹಾಕಿಕೊಂಡಿತು. ಇದು ACC ಗೆ ಎರಡನೆಯ ವಿಂಡ್ ಪಾವರ್ ಯೋಜನೆಯಾಗಿದ್ದು ಮೊದಲನೆಯದು 9-mw ಸಾಮರ್ಥ್ಯದ ಸ್ಥಾವರವು ತಮಿಳುನಾಡಿನ ತಿರುನೆಲ್ವೆಲ್ಲಿ ಜಿಲ್ಲೆಯಲ್ಲಿದೆ.[ಸೂಕ್ತ ಉಲ್ಲೇಖನ ಬೇಕು] ರಾಜಸ್ಥಾನ ಸದ್ಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹತ್ವದ ನೂತನ ವಿಂಡ್ ಫಾರ್ಮ್ ಗಳಿಗೆ ನೆಲೆಯಾಗಿದೆ.ಇದು ಇತರ ರಾಜ್ಯಗಳಂತೆ ಹೆಚ್ಚು ಸಾಮರ್ಥ್ಯದ ಸ್ಥಾವರಗಳನ್ನು ಹೊಂದದಿದ್ದರೂ ಮುಂಬುವ ದಿನಗಳಲ್ಲಿ ಮಹತ್ವ ಪಡೆಯಲಾಗಿದೆ. ಆದರೂ ಕೂಡಾ ಈ ಉತ್ತರದ ಅಂಚಿನಲ್ಲಿರುವ ರಾಜ್ಯವು 2009 ರಲ್ಲಿ ಒಟ್ಟು 496 mw ಗಾಳಿ ವಿದ್ಯುತ್ ಉತ್ಪಾದಿಸಿ ಭಾರತದ ಒಟ್ಟು ಉತ್ಪಾದನೆಯಲ್ಲಿ ಶೇಕಡಾ 6.3 ರಷ್ಟು ತನ್ನ ಪಾಲು ಪಡೆದಿದೆ.[ಸೂಕ್ತ ಉಲ್ಲೇಖನ ಬೇಕು]

ಮಧ್ಯಪ್ರದೇಶ (212.8 MW)

[ಬದಲಾಯಿಸಿ]

ಈ ಅಪರೂಪದ ಯೋಜನೆಗಾಗಿ ಮಧ್ಯಪ್ರದೇಶ ಸರ್ಕಾರವು ಮತ್ತೊಂದು 15 MW ಯೋಜನೆಯ ಉತ್ಪಾದನೆಗಾಗಿ ದೆವಾಸ್ ನಲ್ಲಿರುವ ಹಿಲ್ಸ್ ಪ್ರದೇಶದ ನಗದಾ ಬಳಿ ಘಟಕ ಪ್ರಾರಂಭಿಸಲು MPWL ಕಂಪನಿಗೆ ವಹಿಸಿಕೊಟ್ಟಿದೆ. ಹೀಗೆ ಎಲ್ಲ 25 WEG ಗಳನ್ನು 31.03.2008 ರಂದು ಯಶಸ್ವಿ ಕಾರ್ಯಾಚರಣೆಗಾಗಿ ವಹಿಸಿಕೊಡಲಾಯಿತು.[೨೦]

ಕೇರಳ(26.5 MW)

[ಬದಲಾಯಿಸಿ]

ರಾಜ್ಯದ ಮೊದಲ ವಿಂಡ್ ಫಾರ್ಮ್ ನ್ನು ಪಾಲಕ್ಕಾಡ್ ಜಿಲ್ಲೆಯ ಕಾಂಜಿಕೊಡೆಯಲ್ಲಿ ಆರಂಭಿಸಲಾಯಿತು. ಇದು ಒಟ್ಟು 23.00 MW.ರಷ್ಟು ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಶಕ್ತಿ ಹೊಂದಿದೆ. ಹೊಸ ಪವನ ವಿದ್ಯುತ್ ಶಕ್ತಿ ಉತ್ಪಾದನೆಗಾಗಿ ಹೊಸದಾಗಿ ವಿಂಡ್ ಫಾರ್ಮ್ ಯೋಜನೆಯೊಂದನ್ನು ಖಾಸಗಿ ಪಾಲುದಾರಿಕೆಯೊಂದಿಗೆ ಇಡುಕ್ಕಿ ಜಿಲ್ಲೆಯಲ್ಲಿನ ರಾಮಕ್ಕಾಲ್ ಮೆಡುವಿನಲ್ಲಿ ಆರಂಭಿಸಲಾಯಿತು. ಈ ಯೋಜನೆಯನ್ನು ಮುಖ್ಯಮಂತ್ರಿ ವಿ. ಎಸ್. ಅಚ್ಯುತಾನಂದನ್ 2008 ರ ಏಪ್ರಿಲ್ ನಲ್ಲಿ ಉದ್ಘಾಟಿಸಿದರು.ಇದು 10.5 MW ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.[ಸೂಕ್ತ ಉಲ್ಲೇಖನ ಬೇಕು]

ದಿ ಏಜೆನ್ಸಿ ಫಾರ್ ನಾನ್ -ಕನ್ವೆನಶನಲ್ ಎನರ್ಜಿ ಅಂಡ್ ರೂರಲ್ ಟೆಕ್ನಾಲಜಿ (ANERT)ಎಂಬ ಸ್ವಾಯತ್ತ ಕಂಪನಿಯು ಕೇರಳ ರಾಜ್ಯಾ ಇಂಧನ ಇಲಾಖೆ ನೆರವಿನಿಂದ ಖಾಸಗಿ ಒಡೆತನದ ಭೂಪ್ರದೇಶದ ಮೇಲೆ ಸುಮಾರು 600 mw ಪವನ ವಿದ್ಯುತ್ ಶಕ್ತಿ ಉತ್ಪಾದಿಸಲು ವಿವಿಧೆಡೆ ವಿಂಡ್ ಫಾರ್ಮ್ ಗಳ ಸ್ಥಾಪಿಸಿ ಕ್ರಮ ಕೈಗೊಳ್ಳಲಿದೆ. ಈ ಏಜೆನ್ಸಿಯು ಒಟ್ಟು 16 ವಲಯಗಳನ್ನು ಗುರುತಿಸಿದ್ದು ಅದರಲ್ಲಿ ಖಾಸಗಿ ಅಭಿವೃದ್ಧಿ ಸಂಸ್ಥೆಗಳ ಮೂಲಕ ವಿಂಡ್ ಫಾರ್ಮ್ ಗಳ ಸ್ಥಾಪಿಸಲು ಮುಂದಾಗಿದೆ. ಇದನ್ನು ಇಡುಕ್ಕಿ ಜಿಲ್ಲೆಯ ರಾಮಕ್ಕಾಲ್ ಮೆಡುವಿನಲ್ಲಿ ANERT ಮಾದರಿಯಾಗಿ 2 mw ವಿದ್ಯುತ್ ಉತ್ಪಾದಿಸಿ ಪ್ರಯೋಗ ನಡೆಸಲು ಕೇರಳ ರಾಜ್ಯ ಎಲೆಕ್ಟ್ರಿಸಿಟಿ ಬೋರ್ಡ್ ನ ನೆರವಿನೊಂದಿಗೆ ಈ ಯೋಜನೆ ಜಾರಿಗೊಳ್ಳಲಿದೆ. ಇದು ಅಂದಾಜು 21 ಕೋಟಿ ರೂಪಾಯಿ ವೆಚ್ಚದ್ದಾಗಿದೆ. ಇನ್ನುಳಿದ ವಿಂಡ್ ಫಾರ್ಮ್ ಸೈಟ್ ಗಳೆಂದರೆ ಪಾಲಕ್ಕಾಡ್ ಮತ್ತು ತುರುವನಂತಪುರಮ್ ಜಿಲ್ಲೆಗಳಲ್ಲಿವೆ. ರಾಜ್ಯದ ಅಸಂಪ್ರದಾಯಿಕ ವಿದ್ಯುತ್ ಶಕ್ತಿ ಉತ್ಪಾದನೆಯಲ್ಲಿ ಒಟ್ಟು 6,095 mw ನ್ನು ಉತ್ಪಾದಿಸುತ್ತದೆ,ಇದು ಒಟ್ಟು ಸಾಮರ್ಥ್ಯದ ಶೇಕಡಾ 5.5 ರಷ್ಟಿದೆ.ಕೇರಳ ರಾಜ್ಯವು ಅದನ್ನು 30% ಕ್ಕೇರಿಸುವ ಉದ್ದೇಶೇಸಿದೆ. ANERT ಸಂಸ್ಥೆಯು ಕೇರಳದಲ್ಲಿ ಮರುಪಡೆಯಬಹುದಾದ ವಿದ್ಯುತ್ ಶಕ್ತಿ ಉತ್ಪಾದಿಸುವ ಮೂಲಗಳನ್ನು ಶೋಧಿಸುವ ಯೋಜನೆಯ ಅಭಿವೃದ್ಧಿ ಮತ್ತು ಉತ್ತೇಜನ ಕಾರ್ಯದಲ್ಲಿ ತೊಡಗಿದೆ. ಇದು ಕೇಂದ್ರ ಅಸಂಪ್ರದಾಯಿಕ ವಿದ್ಯುತ್ ಶಕ್ತಿ ಮೂಲದ ಉತ್ಪಾದನಾ ಸಚಿವಾಲಯದ ಯೋಜನೆಗಳ ಅನುಷ್ಠಾನದಲ್ಲಿಯೂ ಇದು ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಪಶ್ಚಿಮ ಬೆಂಗಾಲ್(1.10MW)

[ಬದಲಾಯಿಸಿ]

ಒಟ್ಟು ಪಶ್ಚಿಮ ಬಂಗಾಲದ ಸ್ಥಾಪಿತ ಸಾಮರ್ಥ್ಯವು ಕೇವಲ 1.10 MW ಆಗಿದ್ದು ಅದರಲ್ಲಿ 2006-2007 ಮತ್ತು 2008-2000 ರಲ್ಲಿ ಕೇವಲ 0.5 MW ನಷ್ಟು ಮಾತ್ರ ಏರಿಕೆಯಾಗಿದೆ

ಬಂಗಾಲ್- ಮೆಗಾ 50 MW ಪವನ ವಿದ್ಯುತ್ ಶಕ್ತಿ ಯೋಜನೆಯು ಸದ್ಯದಲ್ಲೇ ದೇಶದಲ್ಲಿ ಬರಲಿದೆ.[ಸೂಕ್ತ ಉಲ್ಲೇಖನ ಬೇಕು]

ಸುಜ್ಲೊನ್ ಎನರ್ಜಿ ಲಿಮಿಟೆಡ್ ಕೂಡಾ ಪಶ್ಚಿಮ ಬಂಗಾಲ ರಾಜ್ಯದಲ್ಲಿ ಅತಿ ದೊಡ್ಡ ಪವನ-ವಿದ್ಯುತ್ ಶಕ್ತಿ ಉತ್ಪಾದನಾ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ಸುಜ್ಲೊನ್ ಎನರ್ಜಿ ಲಿಮಿಟೆಡ್ ಕೂಡಾ ಪಶ್ಚಿಮ ಬಂಗಾಲ ರಾಜ್ಯದಲ್ಲಿ ಕರಾವಳಿಯ ಮಿಡ್ನಾಪುರ್ ಮತ್ತು ದಕ್ಷಿಣ 24-ಪರಗ್ನಾ ಜಿಲ್ಲೆಗಳಲ್ಲಿ ಜಾಗಕ್ಕಾಗಿ ಶೋಧ ನಡೆಸಿದೆ. ವೆಸ್ಟ್ ಬೆಂಗಾಲ್ ರಿನೆವೆಬಲ್ ಎನರ್ಜಿ ಡೆವಲ್ಪಮೆಂಟ್ ಏಜೆನ್ಸಿಯ ಅಧ್ಯಕ್ಷ ಗೊನ್ ಚೌಧರಿ ಅವರ ಪ್ರಕಾರ ಇದರಿಂದ ಸುಮಾರು 50 MW ಯೋಜನೆಯು ಗ್ರಿಡ್ ಗುಣಮಟ್ಟದ ವಿದ್ಯುತ್ ನ್ನು ನೀಡಲು ಸಮರ್ಥವಾಗಿದೆ ಎಂದು ಹೇಳಿದ್ದಾರೆ. ಗೊನ್ ಚೌಧರಿ ಅವರು ವಿದ್ಯುತ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.ಈ ಯೋಜನೆಯು ಅತಿ ದೊಡ್ಡ ಉತ್ಪಾದನಾ ಸ್ಥಾವರಾಗಿ ಅಭಿವೃದ್ಧಿ ಕಾಣಲಿದೆ ಎಂದು ಹೇಳಿದ್ದಾರೆ. ಸದ್ಯ ಸುಜ್ಲೊನ್ ಪರಿಣತರು ಉತ್ತಮ ಸೈಟ್ ಶೋಧದಲ್ಲಿದ್ದಾರೆ. ಸುಜ್ಲೊನ್ ಕೇವಲ ವಾಣಿಜ್ಯಿಕವಾಗಿ ವಿದ್ಯುತ್ ಶಕ್ತಿ ಉತ್ಪಾದನೆ ಗುರಿ ಹೊಂದಿದೆ.ಇನ್ನುಳಿದದನ್ನು ಸ್ಥಳೀಯ ವೆಸ್ಟ್ ಬಂಗಾಲ್ ಸ್ಟೇಟ್ ಎಲೆಕ್ಟ್ರಿಸಿಟಿ ಬೋರ್ಡ್(WBSEB) ಗೆ ನೀಡಲು ನಿರ್ಧರಿಸಿದೆ.[ಸೂಕ್ತ ಉಲ್ಲೇಖನ ಬೇಕು]

ಆರಂಭದಲ್ಲಿ ಸುಜ್ಲೊನ್ 250 ಕೋಟಿ ರೂಪಾಯಿ ಬಂಡವಾಳ ಹೂಡಲಿದ್ದು ಅದು ಇಂಡಿಯನ್ ರಿನೆವೇಬಲ್ ಎನರ್ಜಿ ಡೆವಲ್ಪಮೆಂಟ್ ಏಜೆನ್ಸಿ (Ireda)ಯಿಂದ ಯಾವುದೇ ನೆರವು ಪಡೆಯದಿರಲು ನಿರ್ಧರಿಸಿದೆ ಎಂದು ಚೌಧರಿ ಹೇಳುತ್ತಾರೆ. ಪಶ್ಚಿಮಬಂಗಾಲದಲ್ಲಿ ಸದ್ಯ ಫ್ರೇಜರ್ ಗಂಜನಲ್ಲಿ ಐದು ವಿಂಡ್ -ಪಾವರ್ ಘಟಕಗಳಿದ್ದು ಒಟ್ಟು 1 MW ವಿದ್ಯುತ್ ಶಕ್ತಿ ಉತ್ಪಾದಿಸುತ್ತವೆ.ಅದೇ ರೀತಿ ಸಾಗರ ದ್ವೀಪದಲ್ಲಿ ವಿಂಡ್ -ಡಿಸೈಲ್ ಸ್ಥಾವರ 1 MW ರಷ್ಟು ವಿದ್ಯುತ್ ಉತ್ಪಾದಿಸುತ್ತದೆ.ಇದು ಮರು ಉತ್ಪಾದಿಸುವ ವಿದ್ಯುತ್ ಯೋಜನೆಗಳಲ್ಲಿ ಹೀಗೆ ಸುತ್ತಮುತ್ತಲಿನ ಕಂಪನಿಗಳು ವಿಂಡ್ ಪಾವರ್ ಈ ವಿದ್ಯುತ್ ಶಕ್ತಿ ಬಳಸುವಂತೆ ಉತ್ತೇಜಿಸಲಾಗುತ್ತಿದೆ. ಈ ಉತ್ಪಾದನಾ ಘಟಕಗಳಿಗೆ ವಿಶೇಷ ದರಗಳನ್ನು ನಿಗದಿ ಮಾಡಲಾಗುತ್ತದೆ. ಇಂಧನ ಸಚಿವರ ಖಾಸಗಿ ಕಾರ್ಯ್ದರ್ಶಿ ಎಸ್ ಬ್ಯಾನರ್ಜಿ ಅವರ ಪ್ರಕಾರ ಈ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲಾಗುತ್ತದೆ ಎಂದು ಹೇಳುತ್ತಾರೆ.[ಸೂಕ್ತ ಉಲ್ಲೇಖನ ಬೇಕು]

ಭಾರತದಲ್ಲಿನ ಯೋಜನೆಗಳು

[ಬದಲಾಯಿಸಿ]

ಭಾರತದಲ್ಲಿನ ಅತಿ ದೊಡ್ಡ ಪವನ ವಿದ್ಯುತ್ ಉತ್ಪಾದನಾ ಸೌಕರ್ಯಗಳು 10 MW ಮತ್ತು ಇದಕ್ಕಿಂತ ದೊಡ್ಡದು)[೨೧]

ವಿದ್ಯುತ್ ಸ್ಥಾವರ ನಿರ್ಮಾಪಕ ಸ್ಥಳ ರಾಜ್ಯ ಒಟ್ಟು ಸಾಮರ್ಥ್ಯ (MWe)
ವಾಂಕುಸವಾಡೆ ವಿಂಡ್ ಪಾರ್ಕ್V ಸುಜ್ಲೊನ್ ಎನರ್ಜಿ ನಿಯಮಿತ. ಸಾತಾರಾ ಜಿಲ್ಲೆ. ಮಹಾರಾಷ್ಟ್ರ 259
ಕೇಪ್ ಕೊಮೊರಿನ್ ಅಬಾನ್ ಲೊಯ್ಡ್ ಚಿಲ್ಲಿಸ್ ಆಫ್ ಶೋರ್ ನಿಯಮಿತ ಕನ್ಯಾಕುಮಾರಿ ತಮಿಳುನಾಡು 33
ಕಾಯಥಾರ್ ಸುಭಾಶ್ ಸುಭಾಶ್ ನಿಯಮಿತ. ಕಾಯಥಾರ್ ತಮಿಳುನಾಡು 30
ರಾಮಕ್ಕಾಲಮೆಡು ಸುಭಾಶ್ ನಿಯಮಿತ. ರಾಮಕ್ಕಾಲಮೆಡು ಕೇರಳ 25
ಮುಪ್ಪಂಡಾಲ್ ವಿಂಡ್ ಮುಪ್ಪಂಡಾಲ್ ವಿಂಡ್ ಫಾರ್ಮ್ ಮುಪ್ಪಂಡಾಲ್ ತಮಿಳುನಾಡು 513[ಸೂಕ್ತ ಉಲ್ಲೇಖನ ಬೇಕು]
ಗುಡಿಮಂಗಲಮ್ ಗುಡಿಮಂಗಲಮ್ ವಿಂಡ್ ಫಾರ್ಮ್ ಗುಡಿಮಂಗಲಮ್ ತಮಿಳುನಾಡು 21
ಪುತ್ಲೂರ್ RCI ವೆಸ್ಕೆರ್ (ಇಂಡಿಯ)ನಿಯಮಿತ. ಪುತ್ಲೂರ್ ಆಂಧ್ರ ಪ್ರದೇಶ 20
ಲಮ್ದ ದನಿದ ದನಿದಇಂಡಿಯನಿಯಮಿತ ಲಾಂಬ್ಡಾ ಗುಜರಾತ್‌‌ 15
ಚೆನೈಮೋಹ ಮೋಹನ್ ಬ್ರೇವರೀಸ್ &ಡಿಸ್ಟಲ್ಲರಿಸ್ ನಿಯಮಿತ ಚೆನ್ನೈ ತಮಿಳುನಾಡು 15
ಜಾಮ್ ಗುದ್ರಾಣಿ MP MPವಿಂಡ್ ಫಾರ್ಮ್ಸ್ ನಿಯಮಿತ ದೇವಸ್‌ ಮಧ್ಯ ಪ್ರದೇಶ 14
ಜೋಗ ಮಟ್ಟಿಬಿಎಸ್ಇಎಸ್ ಬಿಎಸ್ಇಎಸ್ Ltd. ಚಿತ್ರದುರ್ಗಜಿಲ್ಲೆ ಕರ್ನಾಟಕ 14
ಪೆರುನ್ಗುಡಿನೆವಮ್ ನೆವಾಮ್ ಪವರ್ ಕಂಪನಿ ನಿಯಮಿತ(Ltd.) ಪೆರುನ್ಗುಡಿ ತಮಿಳುನಾಡು 12
ಕೇತನೂರ್ ವಿಂಡ್ ಪವರ್ ಕೇತನೂರ್ ವಿಂಡ್ ಫಾರ್ಮ್ ಕೇತನೂರ್ ತಮಿಳುನಾಡು 11
ಹೈದ್ರಾಬಾದ್ APSRTC ಆಂದ್ರಪ್ರದೇಶ ಸ್ಟೇಟ್ ರಾಪಿಡ್ ಟ್ರಾನ್ಸಿಟ್ ಕಾರ್ಪ( Corp.) ಹೈದರಾಬಾದ್‌ ಆಂಧ್ರ ಪ್ರದೇಶ 10
ಮುಪ್ಪನ್ ದಾಲ್ ಮದ್ರಾಸ್ ಮದ್ರಾಸ್ ಸಿಮೆಂಟ್ಸ್ ನಿಯಮಿತ(Ltd.) ಮುಪನ್ದಲ್ ತಮಿಳುನಾಡು 10
ಪೂಲಾವಾಡಿಚೆತ್ತಿನಾಡ್ ಕೆಟ್ಟಿನಾಡ್ ಸಿಮೆಂಟ್ ಕಾರ್ಪ್ ನಿಯಮಿತ (Ltd.) ಪೂಲವಾಡಿ ತಮಿಳುನಾಡು 10

ಕಟ್ಟಪ್ಪಣೆಗಳು

[ಬದಲಾಯಿಸಿ]

ಆರಂಭಿಕವಾಗಿ ಗಾಳಿ ಟರ್ಬೈನ್ಸ್ ಗಳ ಬೆಲೆ ಹೆಚ್ಚಾಗಿತ್ತು,ಆಗ ಸಾಂಪ್ರದಾಯಿಕ ಇಂಧನ ಉತ್ಪಾದನಾ ಪ್ರತಿ MW ಗೆ ವೆಚ್ಚವೂ ಅಧಿಕವಾಗಿತ್ತು. ಗಾಳಿಯ ಯಂತ್ರದ ಬೃಹತ್ ರೆಕ್ಕೆಗಳು ಅತಿಯಾದ ಶಬ್ದ ಬಿಡುಗಡೆಮಾಡುತ್ತದೆ. ಇದು ಸಾಮಾನ್ಯವಾಗಿ ದೂರಿನ ವಿಷಯವಲ್ಲ.ಆದರೆ ಸ್ಯಾಲ್ ಫೊರ್ಡ್ [೨೨] ಯುನ್ವರ್ಸಿಟಿ ವಿದ್ಯಾರ್ಥಿಗಳ ಅಧ್ಯಯನದ ಪ್ರಕಾರ UK ನಲ್ಲಿ ಈ ಶಬ್ದ ಮಾಲಿನ್ಯವು ಇಂದು ಕಾಣೆಯಾಗಿದೆ.

ಉಪಯೋಗ(ಬಳಕೆ)

[ಬದಲಾಯಿಸಿ]

ಭಾರತದಲ್ಲಿ ಉನ್ನತ ದಕ್ಷತೆಯ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದ್ದರೂ ಅವುಗಳುನ್ ಸರಕಾರಿ ನೀತಿ ಮತ್ತು ಸೂಕ್ತ ಕಾರ್ಯಾಚಾರಣೆಯಿಂದ ಅವು ಮಂದಗತಿಯಲ್ಲಿ ಸಾಗಿವೆ.ಅವುಗಳ ಸ್ಥಾಪನೆಗೆ ನೀಡಿದಷ್ಟು ಗಮನವನ್ನು ಅವುಗಳ ಅನುಷ್ಠಾನದ ಬಗ್ಗೆಯೂ ಸರ್ಕಾರ ವಹಿಸಬೇಕಾಗುತ್ತದೆ. ಭಾರತದಲ್ಲಿ ಕೇವಲ 1.6% ರಷ್ಟು ಮಾತ್ರ ಉತ್ಪಾದನೆಯಾಗುತ್ತಿದ್ದು ಆದರೆ ನಿಜವಾಗಿ ಉತ್ಪಾದನಾ ಸಾಮರ್ಥ್ಯವು 6% ಇರಬೇಕಾಗಿತ್ತು. ಸದ್ಯ ಸರ್ಕಾರವು ಅಸ್ತಿತ್ವದಲ್ಲಿರುವ ಸ್ಥಾವರಗಳಿಗೆ ಹೆಚ್ಚಿನ ಪ್ರೊತ್ಸಾಹ ನೀಡುತ್ತಿದೆ.[]

ಭವಿಷ್ಯ

[ಬದಲಾಯಿಸಿ]

ಆದರೆ ಮಿನಿಸ್ಟ್ರಿ ಆಫ್ ನಿವ್ ಅಂಡ್ ರಿನ್ವೆಬೇಲ್ ಎನರ್ಜಿof (MNRE)ಒಟ್ಟು 10,500 MW ಉತ್ಪಾದನೆಯನ್ನು 2007–12 ರ ಅವಧಿಯಲ್ಲಿ ಮಾಡಲು ಗುರಿ ಹೊಂದಿದೆ.ಅದಲ್ಲದೇ ವಾಣಿಜ್ಯಕವಾಗಿ 2012 ರೊಳಗೆ ಹೆಚ್ಚುವರಿ 6,000 MW ಉತ್ಪಾದನಾ ಗುರಿ ಹೊಂದಿದೆ.[]

ಇವನ್ನೂ ಗಮನಿಸಿ

[ಬದಲಾಯಿಸಿ]

ಟೆಂಪ್ಲೇಟು:Portal

  • ಎನರ್ಜಿ ಪಾಲಸಿ ಆಫ್ ಇಂಡಿಯಾ
  • ಸೊಲಾರ್ ಪಾವರ್ ಇನ್ ಇಂಡಿಯಾ
  • ಲಿಸ್ಟ್ ಆಫ್ ಲಾರ್ಜ್ ವಿಂಡ್ ಫಾರ್ಮ್ಸ್

ಉಲ್ಲೇಖಗಳು

[ಬದಲಾಯಿಸಿ]
  1. "ವರ್ಲ್ಡ್ ವಿಂಡ್ ಎನರ್ಜಿ ರಿಪೊರ್ಟ್ 2008". ವರದಿ "ವರ್ಲ್ಡ್ ವಿಂಡ್ ಎನರ್ಜಿ ರಿಪೊರ್ಟ್ 2008" Archived 2009-02-19 ವೇಬ್ಯಾಕ್ ಮೆಷಿನ್ ನಲ್ಲಿ.
  2. "ಆರ್ಕೈವ್ ನಕಲು". Archived from the original on 2010-04-05. Retrieved 2010-10-18.
  3. ೩.೦ ೩.೧ "ಆರ್ಕೈವ್ ನಕಲು" (PDF). Archived from the original (PDF) on 2012-05-23. Retrieved 2010-10-18.
  4. http://www.projectsmonitor.com/detailnews.asp?newsid=15318
  5. http://www.azocleantech.com/details.asp?newsID=9397
  6. "ಆರ್ಕೈವ್ ನಕಲು". Archived from the original on 2010-10-27. Retrieved 2010-10-18.
  7. ೭.೦ ೭.೧ ಭಾರತವು to add 6,000 mw ಹೆಚ್ಚಿನ ಪವನ ವಿದ್ಯುತ್ ಶಕ್ತಿಯನ್ನು 2012 ರೊಳಗಾಗಿ ಅಧಿಕಗೊಳಿಸಲಿದೆ; ಆದರೂ ಇದು ಗುರಿಗಿಂತ ಕಡಿಮೆ ಮಟ್ಟ
  8. ೮.೦ ೮.೧ ೮.೨ http://www.peopleandplanet.net/doc.php?id=3357 Archived 2009-02-03 ವೇಬ್ಯಾಕ್ ಮೆಷಿನ್ ನಲ್ಲಿ.
  9. http://cleanpowerdrive.blogspot.com/2010/05/wind-atlas-harnessing-wind-power-in.html
  10. http://www.business-standard.com/india/storypage.php?tp=on&autono=44562
  11. "ಗ್ಲೊಬಲ್ ವಿಂಡ್ ರಿಪೊರ್ಟ್ 2008" (PDF). Archived from the original (PDF) on 2011-04-07. Retrieved 2010-10-18.
  12. ೧೨.೦ ೧೨.೧ "ಸುಜ್ಲೊನ್ ಪಾರ್ಟ್ನರ್ಸ್ ಉಯಿತ್ ಮಹಾರಾಷ್ಟ್ರ ಇನ್ ರೆಕಾರ್ಡ್ ಇಯರ್ ಫಾರ್ ವಿಂಡ್ ಪಾವರ್" (PDF). Archived from the original (PDF) on 2007-09-27. Retrieved 2010-10-18.
  13. ಲೆವಿಸ್, ಜೊಸ್ಸಾI. (2007). ಎ ಕಂಪ್ಯಾರಿಜನ್ ಆಫ್ ವಿಂಡ್ ಪಾವರ್ ಇಂಡಾಸ್ಟ್ರಿ ಡೆವೆಲ್ಪಮೆಂಟ್ ಸ್ಟ್ರ್ಯಾಟರ್ಜೀಸ್ ಇನ್ ಸ್ಪೇನ್ ,ಇಂಡಿಯಾ ಅಂಡ್ ಚೀನಾ Archived 2008-05-28 ವೇಬ್ಯಾಕ್ ಮೆಷಿನ್ ನಲ್ಲಿ.
  14. "Tapping the Wind - India". 2005. Archived from the original on 2007-02-21. Retrieved 2006-10-28. {{cite web}}: Unknown parameter |month= ignored (help)
  15. Watts, Himangshu (2003MGV will provide more information). "Clean Energy Brings Windfall to Indian Village". Reuters News Service. Retrieved 2006-10-28. {{cite web}}: Check date values in: |year= (help); Unknown parameter |month= ignored (help)CS1 maint: year (link)
  16. http://economictimes.indiatimes.com/News/News-By-Industry/Energy/Power/Shriram-EPC-bags-70-cr-contract/articleshow/4199499.cms
  17. "ಆರ್ಕೈವ್ ನಕಲು". Archived from the original on 2007-10-26. Retrieved 2010-10-18.
  18. "ಗುಜರಾತ್ಸ್ ಸಾಮನಾ ಸೆಟ್ ಟು ಬಿಕಮ್ ವಿಂಡ್ ಪಾವರ್ ಹಬ್". Archived from the original on 2009-02-03. Retrieved 2010-10-18.
  19. ONGC ಸ್ಟಾರ್ಟ್ಸ್ ಮೇದನ್ ವಿಂಡ್ ಫಾರ್ಮ್ ಪ್ರೊಜೆಕ್ಟ್
  20. "ಆರ್ಕೈವ್ ನಕಲು". Archived from the original on 2009-12-07. Retrieved 2010-10-18.
  21. http://www.eai.in/ref/ae/win/win.html
  22. ಸ್ಯಾಲ್ ಫೊರ್ಡ್ ಯುನ್ವರ್ಸಿಟಿ Archived 2010-04-24 ವೇಬ್ಯಾಕ್ ಮೆಷಿನ್ ನಲ್ಲಿ., ಮೂರ್ ಹೌಸ್, AT, ಹೇಯ್ಸ್, M, von ಹುನೆರ್ ಬೆನ್, S, ಪೈಪರ್, BJ ಅಂಡ್ ಆಡಮ್ಸ್, MD 2007.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Economy of India related topics