ವಿಷಯಕ್ಕೆ ಹೋಗು

ಭರತ್ ಬೋಪಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭರತ್ ಬೋಪಣ್ಣ
ಜನನ (1992-09-07) ೭ ಸೆಪ್ಟೆಂಬರ್ ೧೯೯೨ (ವಯಸ್ಸು ೩೧)
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಎಸ್‌ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್, ಮಂಗಳೂರು
ವೃತ್ತಿನಟ
Years active೨೦೧೬ –

ಭರತ್ ಬೋಪಣ್ಣ (ಜನನ: ೭ ಸೆಪ್ಟೆಂಬರ್ ೧೯೯೨) ಕನ್ನಡ ಚಿತ್ರರಂಗದ ಭಾರತೀಯ ರೂಪದರ್ಶಿ ಮತ್ತು ಚಲನಚಿತ್ರ ನಟ[೧]. ಇವರು ಸ್ಪರ್ಶ ರೇಖಾ ರವರು ನಿರ್ಮಿಸಿದ ‘ಡೆಮೊ ಪೀಸ್’ ಎಂಬ ಕನ್ನಡ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.

ಜನನ[ಬದಲಾಯಿಸಿ]

ಭರತ್ ರವರು ಜನಿಸಿದ್ದು ೭ ಸೆಪ್ಟೆಂಬರ್ ೧೯೯೨ ರಂದು[೨]. ಇವರು ಕರ್ನಾಟಕದ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ಕೊಡವ ಮಾತನಾಡುವ ಸಮುದಾಯದಲ್ಲಿ ಜನಿಸಿದರು.

ವೃತ್ತಿಜೀವನ[ಬದಲಾಯಿಸಿ]

ಆರಂಭಿಕ ದಿನಗಳು[ಬದಲಾಯಿಸಿ]

ಅವರ ಶಾಲಾ ದಿನಗಳಲ್ಲಿ ಅವರು ವಾಲಿಬಾಲ್ ಮತ್ತು ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಂಟ್ವಾಳ ತಾಲೂಕನ್ನು ಪ್ರತಿನಿಧಿಸಿದರು. ಇವರು ೨೦೧೪ ರಲ್ಲಿ ಫ್ರೀಲ್ಯಾನ್ಸರ್ ಮಾದರಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಆದಿತ್ಯ ಬಿರ್ಲಾ ಮಿನಾಕ್ಸ್ ಕಂಪನಿಗೆ ಬಿಪಿಒ ನ ರೂಪದಲ್ಲಿ ಕೆಲಸ ಮಾಡುತ್ತಿದ್ದರು. ತದನಂತರ ಕ್ಯಾಪ್‌ಜೆಮಿನಿಯಲ್ಲಿ ಸೈಬರ್ ಸೆಕ್ಯೂರಿಟಿ ಅನಲಿಸ್ಟ್ ಆಗಿ ಕಾರ್ಯನಿರ್ವಹಿಸಿದರು.

೨೦೧೬ ರಿಂದ ಇಂದಿನವರೆಗೆ[ಬದಲಾಯಿಸಿ]

೨೦೧೬ ರಲ್ಲಿ ಭರತ್ ಇವರು ಕಿರುತೆರೆಗೆ "ರಾಜವರ್ಧನ" ಎಂಬ ಪಾತ್ರವನ್ನಾಧಾರಿಸಿ , ನವೀನ್ ಕೃಷ್ಣ ನಿರ್ದೇಶನದ ಮತ್ತು ಅರ್ಕಾ ಮೀಡಿಯಾ ವರ್ಕ್ಸ್ ನಿರ್ಮಿಸಿದ ಬಾಹುಬಲಿ: ದಿ ಬಿಗಿನಿಂಗ್ ಮತ್ತು ಬಾಹುಬಲಿ 2: ದಿ ಕನ್‌ಕ್ಲೂಷನ್ , ಸಾಮಾಜಿಕ-ಪೌರಾಣಿಕ ಕನ್ನಡ ಧಾರಾವಾಹಿ ಗಿರಿಜಾ ಕಲ್ಯಾಣದಲ್ಲಿ[೩] ನಟಿಸುವ ಮೂಲಕ ತಮ್ಮ ನಟನಾ ಜೀವನಕ್ಕೆ ಪಾದಾರ್ಪಣೆ ಮಾಡಿದರು . ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಎಂಬ ಜನಪ್ರಿಯ ಕನ್ನಡ ಧಾರಾವಾಹಿಯಲ್ಲಿ ಕಿರು ಪಾತ್ರದಲ್ಲಿ ಕಾಣಿಸಿಕೊಂಡರು .ಜೀ ಟಿವಿಯ ಬ್ರಹ್ಮಗಂಟು[೪] ಎಂಬ ಧಾರವಾಹಿಯಲ್ಲಿ ಕಬಡ್ಡಿ ಚಾಂಪಿಯನ್ ಆಗಿ "ಲಕ್ಕಿ" ಎಂಬ ಮುಖ್ಯ ಪಾತ್ರವನ್ನು ನಿರ್ವಹಿಸುವುದಕ್ಕಾಗಿ ಇವರು ಜನಪ್ರಿಯರಾಗಿದ್ದಾರೆ. ಸ್ಟಾರ್ ಮಾದಲ್ಲಿ ಪ್ರಸಾರವಾಗುತ್ತಿದ್ದ "ಜ್ಯೋತಿ" ಎಂಬ ತೆಲುಗು ಧಾರಾವಾಹಿಯಲ್ಲಿ ಇವರು "ರಾಕಿ" ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾದ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್" ಎಂಬ ಪ್ರಸಿದ್ಧ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಇವರು ಭಾಗವಹಿಸಿದ್ದರು. ಸ್ಪರ್ಶ ರೇಖಾ ರವರು ನಿರ್ಮಿಸಿದ "ಡೆಮೊ ಪೀಸ್"[೫] ಎಂಬ ಕನ್ನಡ ಚಿತ್ರದ ಮೂಲಕ ಇವರು ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದರು.

ನಟಿಸಿದ ಸಿನಿಮಾಗಳು[ಬದಲಾಯಿಸಿ]

ಶೀರ್ಷಿಕೆ ವರ್ಷ ಪಾತ್ರ ನಿರ್ದೇಶಕ(ರು) ಭಾಷೆ
ಡೆಮೊ ಪೀಸ್ ೨೦೨೦ ಹರ್ಷ ವಿವೇಕ್ ಎ ಗೌಡ ಕನ್ನಡ

ದೂರದರ್ಶನ[ಬದಲಾಯಿಸಿ]

ವರ್ಷ ಶೀರ್ಷಿಕೆ ಪಾತ್ರ ಭಾಷೆ
೨೦೧೬ ಗಿರಿಜಾ ಕಲ್ಯಾಣ[೬] ರಾಜವರ್ಧನ ಕನ್ನಡ
೨೦೧೭ ರಾಧಾ ರಮಣ[೭] ಕಿರು ಪಾತ್ರ ಕನ್ನಡ
೨೦೧೭ ಬ್ರಹ್ಮಗಂಟು ಲಕ್ಕಿ ಕನ್ನಡ
೨೦೧೮ ಜ್ಯೋತಿ ರಾಕಿ ತೆಲುಗು

ಉಲ್ಲೇಖಗಳು[ಬದಲಾಯಿಸಿ]

  1. "All you want to know about #BharathBopanna". FilmiBeat (in ಇಂಗ್ಲಿಷ್). Retrieved 26 April 2021.
  2. "7 Interesting Facts About BIRTHDAY BOY Bharath Bopanna Aka Bramhagantu's Lucky". ZEE5 News (in ಇಂಗ್ಲಿಷ್). 7 September 2019. Retrieved 26 April 2021.
  3. SM, Shashiprasad (27 July 2017). "Coorg lad's knotty affair". Deccan Chronicle (in ಇಂಗ್ಲಿಷ್). Retrieved 26 April 2021.
  4. "TV actor Bharath Bopanna shares his culinary skills - Times of India". The Times of India (in ಇಂಗ್ಲಿಷ್). Retrieved 26 April 2021.
  5. "Bharath Bopanna: I want to explore films which create an impact and inspire people". Hindustan Times (in ಇಂಗ್ಲಿಷ್). 22 February 2021. Retrieved 26 April 2021.
  6. "Kannada Tv Actor Bharath Bopanna Biography, News, Photos, Videos". nettv4u (in ಇಂಗ್ಲಿಷ್). Retrieved 26 April 2021.
  7. "Bharath Bopanna looks unrecognisable in this throwback pic; See the post... - Times of India". The Times of India (in ಇಂಗ್ಲಿಷ್). Retrieved 26 April 2021.