ಭಕ್ತ ಧ್ರುವ (ಚಲನಚಿತ್ರ)
ಭಕ್ತ ಧ್ರುವ |
---|
"ಭಕ್ತ ಧ್ರುವ" ೧೯೩೪ರಲ್ಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ.[೧] ಪಾರ್ಶ್ವನಾಥ ಆಲ್ಟೆಕರ್‌ರವರ ನಿರ್ದೇಶನದ ಈ ಚಿತ್ರವನ್ನು ಜಯವಾಣಿ ಟಾಕೀಸ್ ಲಾಂಛನದಲ್ಲಿ ಡಾ.ಯು.ಎಲ್. ನಾರಾಯಣ ರಾವ್ ನಿರ್ಮಿಸಿದ್ದಾರೆ. ಚಿತ್ರದ ಚಿತ್ರಿಕರಣವನ್ನು ಮುಂಬೈ ಆಜಂತ ಸ್ಟೂಡಿಯೊದಲ್ಲಿ ನಡೆಸಲಾಗಿದೆ. [೨]
ಕಥಾ ಸಾರಾಂಶ
[ಬದಲಾಯಿಸಿ]ಭಾರತೀಯ ಪುರಾಣ ಕತೆಯೊಂದರ ಆಧಾರದಲ್ಲಿ ಚಿತ್ರಕತೆಯನ್ನು ರಚಿಸಲಾಗಿದೆ. ಉತ್ತಾನಪಾದ ರಾಜನ ಹಿರಿಯ ಹೆಂಡತಿ ಸುನೀತಿಯ ಮಗ ಧ್ರುವ. ರಾಜನ ಪಟ್ಟದರಸಿ ಸುರುಚಿಯ ಮಗ ಉತ್ತಮನು ರಾಜನ ತೊಡೆಯ ಮೇಲೆ ಕುಳಿತಿದ್ದಾಗ ಧ್ರುವನು ಆತನ ತೊಡೆ ಏರಲು ಹೋಗುವನು. ಆಗ ಸುರುಚಿ ʼಕಾಡಿಗೆ ಹೋಗಿ ತಪಸ್ಸು ಮಾಡಿ, ತನ್ನ ಬಸಿರಲ್ಲಿ ಜನಿಸಿ ಬಂದರೆ ಮಾತ್ರ ಸಿಂಹಾಸನ ಏರುವ ಭಾಗ್ಯ ನಿನಗೆ ಬರುವುದು.ʼ ಎಂದಳು.ಧ್ರುವ ಅಳುತ್ತಾ ತನ್ನ ತಾಯಿಯ ಬಳಿ ವಿಷಯ ತಿಳಿಸಿ,ಯಮುನಾ ನದಿ ತೀರಕ್ಕೆ ಬಂದು ಸಪ್ತರ್ಷಿಗಳಿಂದ ಮಂತ್ರೋಪದೇಶ ಪಡೆದು ಘೋರ ತಪಸ್ಸು ಮಾಡಿ ಶ್ರೀ ಮಹಾವಿಷ್ಣುವನ್ನು ಒಲಿಸಿಕೊಂಡು,ಭೂಮಿಯ ಏಕಚಕ್ರಧಿಪತ್ಯವನ್ನು, ಧೀರ್ಘಾಯುಷ್ಯವನ್ನು ಪಡೆದ. ಪರಲೋಕದಲ್ಲಿ ಧ್ರುವ ನಕ್ಷತ್ರದ ರೂಪದಲ್ಲಿ ಶಾಶ್ವತ ಸ್ಥಾನವನ್ನು ಪಡೆದ, ಎಂಬುದೇ ಈ ಚಿತ್ರದ ಕತೆಯಾಗಿದೆ.
ನಿರ್ಮಾಣ ಮತ್ತು ಬಿಡುಗಡೆ
[ಬದಲಾಯಿಸಿ]ಮುಂಬೈ, ಅಜಂತಾ ಸಿನಿಟೋನ್ ಸ್ಟುಡಿಯೋದಲ್ಲಿ ಚಿತ್ರೀಕೃತವಾದ ಈ ಚಲನಚಿತ್ರ, ಬ್ರಿಟೀಷ್ ಫಿಲಂ ಸೆನ್ಸಾರ್ ಬೋರ್ಡಿನಿಂದ ಪ್ರಮಾಣ ಪತ್ರ ಪಡೆದಾಗ ೧೨,೮೦೦ ಅಡಿ ಉದ್ದವಿತ್ತು. ಮೂರು ತಿಂಗಳಲ್ಲಿ ಈ ಚಿತ್ರ ಸಂಪೂರ್ಣವಾಗಿ ತಯಾರಾಯಿತು. ಮೊದಲು ತಯಾರಾದ ಕನ್ನಡ ವಾಕ್ಚಿತ್ರ "ಭಕ್ತ ಧ್ರುವ" ಆದರೂ ಬಿಡುಗಡೆಯಾಗಿದ್ದು "ಸತಿ ಸುಲೋಚನ"