೮ನೇ ಬ್ರಿಕ್ಸ್ ಶೃಂಗಸಭೆ
ಗೋಚರ
(ಬ್ರಿಕ್ಸ್ ಶೃಂಗಸಭೆ ಇಂದ ಪುನರ್ನಿರ್ದೇಶಿತ)
BRICS (Brazil, Russia, India, China, and South Africa) |
---|
|
ಬ್ರಿಕ್ಸ್ ಗೋವಾದಲ್ಲಿ
[ಬದಲಾಯಿಸಿ]- ಬ್ರಿಕ್ಸ್ ಸಂಘಟನೆ ವಿಸ್ತೃತ ಲೇಖನ;
- ಉದಯೋನ್ಮುಖ ಆರ್ಥಿಕ ಶಕ್ತಿ ಗಳ ಕೂಟವಾಗಿರುವ "ಬ್ರಿಕ್ಸ್' ದೇಶಗಳ ಶೃಂಗಸಭೆ, ಅಕ್ಟೋಬರ್ 16, 2016, ರವಿವಾರ ಗೋವಾದ ರಾಜಧಾನಿ ಪಣಜಿಯಲ್ಲಿ ನಡೆದಿದೆ. ಬ್ರಿಕ್ಸ್‌ನ ಐದು ಸದಸ್ಯ ದೇಶಗಳಲ್ಲಿ ರಷ್ಯಾ ಕೂಡ ಒಂದಾಗಿದ್ದು, ಆ ದೇಶದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಗೋವೆಗೆ ಆಗಮಿಸಿದ್ದು ಮಹತ್ವ ಪಡೆದಿದೆ.ಬ್ರಿಕ್ಸ್ ಶೃಂಗಸಭೆಗೆ ಪೂರ್ವಭಾವಿಯಾಗಿ ಶನಿ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಪುತಿನ್ ಜತೆ ಮಾತುಕತೆ ನಡೆಸಲಿದ್ದಾರೆ.
- ಆ ವೇಳೆ ಪಾಕ್ ಭಯೋತ್ಪಾದನೆ, ಜಾಗತಿಕ ಉಗ್ರವಾದ ಹಾಗೂ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ. ಇದೇ ವೇಳೆ, ರಷ್ಯಾ ಜತೆ ಮಹತ್ವದ ಕ್ಷಿಪಣಿ ಖರೀದಿ ಒಪ್ಪಂದ, ಕೂಡಂಕುಲಂ ಅಣುವಿದ್ಯುತ್ ಉತ್ಪಾದನಾ ಯೋಜನೆ ಗಳ ಒಪ್ಪಂದಕ್ಕೆ ಭಾರತ-ರಷ್ಯಾ ಸಹಿ ಹಾಕಲಿವೆ.ಪುತಿನ್ ಅಲ್ಲದೇ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ಗೋವಾಕ್ಕೆ ಆಗಮಿಸಿದ್ದು, ಅವರ ಜತೆಗಿನ ಭೇಟಿ ವೇಳೆ ಪ್ರಧಾನಿ ಮೋದಿ ಅವರು ಪಾಕ್ ಉಗ್ರವಾದ, ಉಗ್ರ ಮೌಲಾನಾ ಮಸೂದ್ ಅಜರ್ ನಿಷೇಧಕ್ಕೆ ಹಾಗೂ ಭಾರತದ ಎನ್‌ಎಸ್‌ಜಿ ಸದಸ್ಯತ್ವ ಗಡಿ ವಿವಾದ- ಇತ್ಯಾದಿಗಳ ಬಗ್ಗೆ ಪ್ರಸ್ತಾವಿಸಿದ್ದಾರೆ ಸಾಧ್ಯತೆಗಳಿವೆ.
ಬಿಮ್‌ಸ್ಟೆಕ್
[ಬದಲಾಯಿಸಿ]ಬ್ರಿಕ್ಸ್ ಜತೆ 'ಬಿಮ್‌ಸ್ಟೆಕ್'ಸಭೆಯನ್ನೂ ಭಾರತ ಆಯೋಜಿಸುತ್ತಿದೆ. ಹೀಗಾಗಿ ಬಿಮ್‌ಸ್ಟೆಕ್' ದೇಶದ ಪ್ರಧಾನ ಮಂತ್ರಿಗಳು ಕೂಡ ಗೋವಾಕ್ಕೆ ಆಗಮಿಸುತ್ತಿದ್ದಾರೆ. ಭೂತಾನ್, ಬಾಂಗ್ಲಾದೇಶ, ನೇಪಾಲ, ಶ್ರೀಲಂಕಾ, ಥಾಯ್ಲೆಂಡ್ ಹಾಗೂ ಮ್ಯಾನ್ಮಾರ್ ಒಳಗೊಂಡ ಬಿಮ್‌ಸ್ಟೆಕ್' (ಬೆಂಗಾಲ್ ಇನಿಶಿಯೇಟಿವ್ ಫಾರ್ ಮಲ್ಟಿ ಸೆಕ್ಟೋರಲ್ ಟೆಕ್ನಿಕಲ್ ಆ್ಯಂಡ್ ಎಕನಾಮಿಕ್ ಕೋಆಪರೇಷನ್)ಶೃಂಗದ ವೇಳೆ ಉಗ್ರರು ದಾಳಿ ನಡೆಸುವ ಭೀತಿ ಎದುರಾಗಿರುವ ಕಾರಣ ಗೋವಾದಾದ್ಯಂತ ಹಿಂದೆಂದೂ ಕಂಡು ಕೇಳರಿಯದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. [೩]
ಭಾರತ-ಬ್ರೆಜಿಲ್
[ಬದಲಾಯಿಸಿ]- ಬಹು ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರದ(ಬಿಮ್ಸ್ಟೆಕ್) ಬಂಗಾಳಕೊಲ್ಲಿಯ ಪುನಶ್ಚೇತನಕ್ಕೂ ಕೂಡ ಭಾರತ ಎಲ್ಲಾ ರೀತಿಯ ಪ್ರಯತ್ನ ಮಾಡಲಿದೆ. ಇಂದು ಮತ್ತು ನಾಳೆ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಮುಖ ವಿಷಯಗಳ ಕುರಿತ ಚರ್ಚೆ, ಒಪ್ಪಂದ ನಡೆಯಲಿದೆ.ಕಾರ್ಯತಂತ್ರ ಸಹಭಾಗಿತ್ವದಲ್ಲಿ ಬ್ರೆಝಿಲ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿರುವ ಮೋದಿ, ಅಲ್ಲಿನ ಅಧ್ಯಕ್ಷ ಮೈಕೆಲ್ ಟೆಮರ್ ಅವರ ಭಾರತ ಭೇಟಿ ಆ ರಾಷ್ಟ್ರದ ಜೊತೆ ಹೊಸ ಸಹಕಾರಕ್ಕೆ ನಾಂದಿ ಹಾಡಲಿದೆ. ಈ ವರ್ಷ ಬ್ರಿಕ್ಸ್ ಶೃಂಗಸಭೆಯ ಆತಿಥೇಯ ವಹಿಸುತ್ತಿರುವ ಭಾರತ ವ್ಯಾಪಾರ, ಕ್ರೀಡೆ, ಶಿಕ್ಷಣ, ಚಲನಚಿತ್ರ, ಸ್ಕಾಲರ್ ಷಿಪ್ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಜನರ-ಜನರ ಮಧ್ಯೆ ಸಂಬಂಧಕ್ಕೆ ಒತ್ತು ನೀಡಲಿದೆ ಎಂದು ಹೇಳಿದ್ದಾರೆ.[೪]
ಬ್ರಿಕ್ಸ್ (BRICS)
[ಬದಲಾಯಿಸಿ]- ಭಾರತವು 2016 ಅಕ್ಟೋಬರ್ 15-16 ರಂದು ಗೋವಾದಲ್ಲಿ 8 ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಿದ್ದು, ಅದು ಅತಿಥೇಯ ರಾಷ್ಟ್ರವಾಗಿರುವುದು. ಈ ಶೃಂಗಸಭೆಯಲ್ಲಿ ಪ್ರಪಂಚದಾದ್ಯಂತ ತೀವ್ರವಾಗಿ ಆರ್ಥಿಕ ನಿದಾನ ಗತಿಗೆ ಬಂದ ಸಮಯದಲ್ಲಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ಆಶಯವಿದೆ.
- ಬ್ರಿಕ್ಸ್ ಮೂಲತಃ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಅಥವಾ 'ಬ್ರಿಕ್' (Brazil, Russia, India and China, or BRIC) ಎನ್ನುವ ನಾಲ್ಕು ಸದಸ್ಯರ ಗುಂಪು ಆಗಿತ್ತು. ನಾಲ್ಕೂ ದೇಶಗಳ ಮೊದಲ ಬ್ರಿಕ್ ಶೃಂಗಸಭೆಯು 2009 ರಲ್ಲಿ, ರಶಿಯಾದ ಯೆಕಟೇನ್ಬರ್ಗ್,ನಲ್ಲಿ ನಡೆಯಿತು. ಕೇವಲ ಎರಡು ವರ್ಷಗಳ ನಂತರ,2001 ರಲ್ಲಿ ಜಿಮ್ ಒ ನೀಲ್ ರವರಿಂದ ಒಂದು ಯೋಜನೆ ಪ್ರಕಟಣೆಯಾಗಿ ಉತ್ತಮ ಜಾಗತಿಕ ಆರ್ಥಿಕ ಸಹಕಾರಕ್ಕೆ ‘ಬ್ರಿಕ್ ' (BRIC)ಎಂಬ ಒಂದು ಯೋಜನೆ ಸೃಷ್ಟಿಸಲ್ಪಟ್ಟಿತ್ತು. ಇದು ಉತ್ತಮ ಜಾಗತಿಕ ಆರ್ಥಿಕ ಸಂಬಂಧ ಬೆಳೆಸುವ ಉದ್ದೇಶ ಹೊಂದಿತ್ತು.
- 2010 ರಲ್ಲಿ ದಕ್ಷಿಣ ಆಫ್ರಿಕಾ "ದ್ರಿಕ್" ಜೊತೆ ಸೇರಿತು. ದಕ್ಷಿಣ ಆಫ್ರಿಕಾ ಅಧಿಕೃತವಾಗಿ 'ಬ್ರಿಕ್' ಗುಂಪು ಸೇರಿದ್ದರಿಂದ 'ಬ್ರಿಕ್' ಗೆ ಮರುನಾಮಕರಣ ಮಾಡುವ ಅಗತ್ಯ ಉಂಟಾಯಿತು. ಅದನ್ನು 'ಬ್ರಿಕ್ಸ್' BRICS ಎಂದು BRIC ಗೆ S (South Africa) ಸೇರಿಸಿ ಹೊಸದಾಗಿ ನಾಮಕರಣ ಮಾಡಲಾಯಿತು. ಈ ಐದು ಬ್ರಿಕ್ಸ್ ದೇಶಗಳಲ್ಲಿ 360 ಕೋಟಿ ಜನರು ಇದ್ದು, ವಿಶ್ವದ ಅರ್ಧ ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ,
- ಐದು ಬ್ರಿಕ್ಸ್ ದೇಶಗಳಲ್ಲಿ ಒಟ್ಟು 16.6 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿವೆ. ಭಾರತದ 2.38 ಟ್ರಿಲಿಯನ್ ಡಾ.ಆರ್ಥಿಕ ಸಂಪತ್ತು ವಾರ್ಷಿಕವಾಗಿ 7.5 ಪ್ರತಿಶತ ಬೆಳೆಯುತ್ತಿದೆ. ಇದು ಐದು ಬ್ರಿಕ್ಸ್ ದೇಶಗಳಲ್ಲೇ ಅತಿ ವೇಗದ ಬೆಳವಣಿಗೆ.
- 11.4 ಟ್ರಿಲಿಯನ್ ಡಾ.ನ ಸಂಪತ್ತಿನ ಚೀನಾ ಬ್ರಿಕ್ಸ್ ದೇಶಗಳಲ್ಲಿ ಅತ್ಯಂತ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. 2015 ರಲ್ಲಿ $ 327 ಬಿಲಿಯನ್ ನ ದಕ್ಷಿಣ ಆಫ್ರಿಕಾದ ಆರ್ಥಿಕ ಸಂಪತ್ತು, ಬ್ರಿಕ್ಸ್ ರಾಷ್ಟ್ರಗಳಲ್ಲಿ ಅತಿ ಕಡಿಮೆಯ ಆರ್ಥಿಕ ಸಂಪತ್ತು.
- ಬ್ರಿಕ್ಸ್ ಸದಸ್ಯ ರಾಷ್ಟ್ರಗಳಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಧನಸಹಾಯಕ್ಕಾಗಿ, 2015 ರಲ್ಲಿ ತನ್ನದೇ ಆದ ಬ್ಯಾಂಕ್ ನ್ನು ಸ್ಥಾಪಿಸಲಾಗಿದೆ. ಬ್ರಿಕ್ಸ್ ಬ್ಯಾಂಕ್‍ನ್ನು ಅಧಿಕೃತವಾಗಿ ‘ಹೊಸ ಅಭಿವೃದ್ಧಿ ಬ್ಯಾಂಕ್’ (ಎನ್.ಡಿ.ಬಿ.New Development Bank:NDB), ಎಂದು ನಾಮಕರಣ ಮಾಡಲಾಗಿದೆ.[೫]
ಗೋವಾ ಬ್ರಿಕ್ಸ್‍ನ ಫಲಿತಾಂಶ
[ಬದಲಾಯಿಸಿ]- 15 Oct, 2016
- ಭಯೋತ್ಪಾನೆ ನಿರ್ಮೂಲನೆಗಾಗಿ ‘ಶೂನ್ಯ ಸೈರಣ ನೀತಿ’ಗೆ ಭಾರತ ಮತ್ತು ರಷ್ಯಾ ಸಹಿ ಮಾಡಿವೆ. ಇದೇ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಭಾರತದ ‘ಹಳೆಯ ಗೆಳೆಯ’ ಎಂದಿದ್ದಾರೆ.
- ಭಾರತ ರಷ್ಯಾ ನಡುವಿನ ಪ್ರಮುಖ ಒಪ್ಪಂದಗಳು
- ಕಾಮೋವ್ –ಕೆಎ226 ಹೆಲಿಕಾಪ್ಟರ್ ಉತ್ಪಾದನಾ ಒಪ್ಪಂದ
- ಎಸ್400 ಕ್ಷಿಪಣಿ ವ್ಯವಸ್ಥೆ ಒಪ್ಪಂದ
- ಭಯೋತ್ಪಾದನ ಚಟುವಟಿಕೆಗಳಿಗೆ ತಕ್ಕ ಉತ್ತರ ನೀಡಲು ‘ಜೀರೋ ಟಾಲರೆನ್ಸ್ ಪಾಲಿಸಿ’(ಶೂನ್ಯ ಸೈರಣ ನೀತಿ)
- ಕೂಡುಕುಳಂ ಅಣುಸ್ಥಾವರದ 3 ಮತ್ತು 4ನೇ ಘಟಕಗಳ ಕಾಮಗಾರಿಗೆ ಚಾಲನೆ. ಕೂಡುಕುಳಂ ಅಣುಸ್ಥಾವರದ 2ನೇ ಘಟಕದಲ್ಲಿ ಶಕ್ತಿ ಉತ್ಪಾದನೆ ಆರಂಭ
- ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗ ರಚನೆ ಸ್ಥಾಪನೆ
- ಆಂಧ್ರ ಪ್ರದೇಶದಲ್ಲಿ ಹಡಗು ನಿರ್ಮಾಣ ಮತ್ತು ಪರಿಣತ ತರಬೇತಿ
- ಹರಿಯಾಣ ಸ್ಮಾರ್ಟ್ ಸಿಟಿ ಯೋಜನೆ
- ರಾಸ್ನೆಫ್ಟ್ ಮತ್ತು ಎಸ್ಸಾರ್ ತೈಲ ಶುದ್ಧೀಕರಣ ಮೂಲಸೌಕರ್ಯ ಅಭಿವೃದ್ಧಿ
- ರಾಸ್ನೆಫ್ಟ್ ಮತ್ತು ಒವಿಎಲ್ ಇಂಧನ
- ನಾಗ್ಪುರ–ಸಿಕಂದರಾಬಾದ್ ಹೈದರಾಬಾದ್ ಹೈ ಸ್ಪೀಡ್ ರೈಲು ಯೋಜನೆ
- ಇಂಧನ ಸಹಕಾರ ಒಪ್ಪಂದ 2016 ಮತ್ತು 2017
- ಭಾರತ ಮತ್ತು ರಷ್ಯಾ ನಡುವಿನ ಸಚಿವಾಲಯಗಳ ನಡುವಿನ ಸಮಾಲೋಚನೆಗೆ ಶಿಷ್ಟಾಚಾರ ಸಂಹಿತೆ
- ಸೈಬರ್ ರಕ್ಷಣೆ
- ಜಾಗತಿಕ ರಕ್ಷಣೆ ಕುರಿತಂತೆ ಭಾರತ ಮತ್ತು ರಷ್ಯಾ ಜಂಟಿ ಒಪ್ಪಂದ
- ರಷ್ಯಾದಿಂದ ಯುದ್ಧನೌಕೆ ಖರೀದಿ ಕುರಿತು ಸರ್ಕಾರದ ಆಂತರಿಕ ಒಪ್ಪಂದ.
- ಎಸ್400 ಕ್ಷಿಪಣಿ ವ್ಯವಸ್ಥೆ ಒಪ್ಪಂದ ಅಂತಿಮಗೊಂಡರೆ ಭಾರತವು ಚೀನಾ ಬಳಿಕ ಈ ರಕ್ಷಣಾ ಖರೀದಿ ವ್ಯವಹಾರಕ್ಕೆ ಸಹಿ ಹಾಕಿದ ಎರಡನೇ ದೇಶವಾಗಲಿದೆ. ಒಂದೇ ಸಮಯದಲ್ಲಿ 36 ಕಡೆ ಗುರಿ ಇಡುವ ಸಾಮರ್ಥ್ಯವನ್ನು ಇದು ಹೊಂದಿದೆ.ಟೆಂಪ್ಲೇಟು:Dead link date=ಆಗಸ್ಟ್ 2021 bot=InternetArchiveBot fix-attempted=yes
ಇತರೆ
[ಬದಲಾಯಿಸಿ]- ಬೆನೋಲಿಂ,ಗೋವಾದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿಸುವ ಭಾರತದ ಪ್ರಯತ್ನಕ್ಕೆ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಶೃಂಗ ಸಭೆ ಮತ್ತಷ್ಟು ಬಲ ತುಂಬಿದೆ.
- ಐದು ರಾಷ್ಟ್ರಗಳ ಗುಂಪು ಉರಿ ಮತ್ತು ಪಠಾಣ್‌ಕೋಟ್ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿದ್ದಲ್ಲದೆ ಉಗ್ರವಾದಕ್ಕೆ ರಾಜಕೀಯ ಅಥವಾ ಧಾರ್ಮಿಕ ನೆಲೆಯಲ್ಲಿ ಯಾವುದೇ ಸಮರ್ಥನೆ ಇರುವುದು ಸಾಧ್ಯವಿಲ್ಲ ಎಂದು ಹೇಳಿದೆ. ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯ ತಾಯಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ. ತಮ್ಮ ಭೂ ಪ್ರದೇಶದೊಳಗೆ ಭಯೋತ್ಪಾದನೆ ಚಟುವಟಿಕೆಯನ್ನು ತಡೆಗಟ್ಟುವುದು ಆಯಾ ದೇಶದ ಜವಾಬ್ದಾರಿ ಎಂದು ಐದು ದೇಶಗಳ ಮುಖಂಡರು ಘೋಷಿಸಿದರು.[೭]
ಗೋವಾ ಬ್ರಿಕ್ಸ್‍ನಲ್ಲಿ ತೀರ್ಮಾನಗಳು
[ಬದಲಾಯಿಸಿ]- ಮೂರು ಒಪ್ಪಂದಗಳು:
- ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆ ಸ್ಥಾಪನೆ
- ಸದಸ್ಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಹಕಾರ
- ಸೀಮಾ ಸುಂಕ ಸಂಗ್ರಹ ವಿಚಾರದಲ್ಲಿ ಪರಸ್ಪರ ಸಹಕಾರಕ್ಕೆ ಸಮ್ಮತಿ
- ಘೋಷಣೆ ತಿರುಳು:
- ‘ಭಾರತವೂ ಸೇರಿದಂತೆ ಬ್ರಿಕ್ಸ್‌ನ ಕೆಲ ದೇಶಗಳ ವಿರುದ್ಧ ಇತ್ತೀಚೆಗೆ ನಡೆದ ಹಲವು ದಾಳಿಗಳನ್ನು ವಿರೋ ಧಿಸುತ್ತೇವೆ. ಯಾವುದೇ ರೂಪದಲ್ಲಿ ವ್ಯಕ್ತವಾಗುವ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುತ್ತೇವೆ.
- ‘ಸಿದ್ಧಾಂತ, ಧರ್ಮ, ರಾಜಕೀಯ, ಜನಾಂಗ ಅಥವಾ ಮತ್ತಾವುದೇ ಹೆಸರಿನಲ್ಲಿ ಉಗ್ರವಾದಕ್ಕೆ ಸಮರ್ಥನೆ ನೀಡುವುದು ಸಾಧ್ಯವಿಲ್ಲ.
- ‘ದ್ವಿಪಕ್ಷೀಯ ಮಟ್ಟದಲ್ಲಿ ಮತ್ತು ಅಂತರರಾಷ್ಟ್ರೀಯ ನೆಲೆಯಲ್ಲಿ ಭಯೋತ್ಪಾದನೆ ತಡೆಗೆ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸಲು ಒಪ್ಪಿದ್ದೇವೆ’ ಎಂದು 102 ಪ್ಯಾರಾಗಳ ಘೋಷಣೆಯಲ್ಲಿ ಹೇಳಲಾಗಿದೆ.
- ಆರ್ಥಿಕ ಸಹಕಾರ ಇನ್ನಷ್ಟು ಬಲಪಡಿಸಲು ಜಿ20 ಸದಸ್ಯ ರಾಷ್ಟ್ರ ಗಳ ಜತೆ ನಿಕಟ ಕಾರ್ಯಾಚರಣೆ.
- ಜಾಗತಿಕ ಪ್ರಗತಿಗೆ ವೇಗ ತುಂಬಲು ಸುಸ್ಥಿರ ವ್ಯಾಪಾರ ಮತ್ತು ಅಭಿವೃದ್ಧಿಗೆ ಒತ್ತು.
- ಮೋದಿ ಸ್ಪಷ್ಟ ದಿಕ್ಕು ಹಾಕಿ ಕೊಟ್ಟರು:
- ಪಾಕ್ ಭಯೋತ್ಪಾದನೆ ಪೋಷಿ ಸುತ್ತಿದೆ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಶೃಂಗಸಭೆ ಘೋಷಣೆಗೆ ಮೋದಿ ಸ್ಪಷ್ಟ ದಿಕ್ಕು ಹಾಕಿ ಕೊಟ್ಟರು.
- ಹಿಂಸೆ ಮತ್ತು ಭಯೋತ್ಪಾದನೆಗೆ ಆಶ್ರಯ, ಪೋಷಣೆ, ಪ್ರಾಯೋಜಕತ್ವ ಒದಗಿಸುವವರು ಭಯೋತ್ಪಾದಕರಷ್ಟೇ ಅಪಾಯಕಾರಿ ಎಂಬುದನ್ನು ನಾವೆಲ್ಲರೂ ಒಪ್ಪಿದ್ದೇವೆ.[೮]
ಪಾಕ್ ಪರ ನಿಂತ ಚೀನಾ:ಕ್ಸಿ ಜಿನ್‌ಪಿಂಗ್
[ಬದಲಾಯಿಸಿ]- ಗೋವಾದ ಬೆನೋಲಿಂನಲ್ಲಿ ಭಯೋತ್ಪಾದನೆ ವಿರುದ್ಧ ಸಮಗ್ರವಾದ ಕ್ರಮಕ್ಕೆ ಎಲ್ಲ ದೇಶಗಳು ಮುಂದಾಗಬೇಕು ಎಂಬ ನಿಲುವಿಗೆ ಬ್ರಿಕ್ಸ್ ಮುಖಂಡರು ಬಂದರೂ ಗಡಿಯಾಚೆಗಿನ ಉಗ್ರವಾದವನ್ನು ನಿರ್ದಿಷ್ಟವಾಗಿ ಹೆಸರಿಸಲು ಹಿಂದೇಟು ಹಾಕಿದ್ದಾರೆ.
- ಭಯೋತ್ಪಾದನೆಯ ಲಕ್ಷಣಗಳು ಮತ್ತು ಅದರ ಮೂಲ ಕಾರಣಗಳನ್ನು ಪರಿಹರಿಸಲು ಬಹು ಆಯಾಮಗಳ ಧೋರಣೆಯನ್ನು ಅನುಸರಿಸುವ ಅಗತ್ಯ ಇದೆ ಎಂದು ಹೇಳುವ ಮೂಲಕ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎಚ್ಚರಿಕೆಯ ಹೆಜ್ಜೆ ಇರಿಸಿದ್ದಾರೆ.
- ಜಗತ್ತಿನ ಪ್ರಮುಖ ಸಂಘರ್ಷಗಳಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಬ್ರಿಕ್ಸ್ ದೇಶಗಳು ಸಂಯೋಜಿತ ಕ್ರಮ ಕೈಗೊಳ್ಳಬೇಕು ಎಂದು ಕ್ಸಿ ಪ್ರತಿಪಾದಿಸಿದ್ದಾರೆ. ಕ್ಸಿ ಅವರ ಹೇಳಿಕೆ ಬಹುತೇಕ ಪಾಕಿಸ್ತಾನದ ವಾದವನ್ನೇ ಪ್ರತಿಧ್ವನಿಸುತ್ತಿದೆ. ಭಾರತ ಎದುರಿಸುತ್ತಿರುವ ಭಯೋತ್ಪಾದನೆಯ ಮೂಲ ಕಾರಣ ಕಾಶ್ಮೀರ ವಿವಾದ ಎಂದು ಪಾಕಿಸ್ತಾನ ಹೇಳುತ್ತಿದೆ.[೯]
9ನೇ ಬ್ರಿಕ್ಸ್ ಶೃಂಗಸಭೆ 2017
[ಬದಲಾಯಿಸಿ]- 9ನೇ ಬ್ರಿಕ್ಸ್ ಶೃಂಗಸಭೆಯು ಚೀನಾದ ಕ್ಸಿಯಾಮೆನ್ ನಲ್ಲಿ ದಿ.3 ರಿಂದ 5 ಸೆಪ್ಟಂ. 2017 ಮೂರುದಿನ ನಡೆಯಿತು. ದಿ.04,ಸೆಪ್ಟಂಬರ್ 2017 ರಂದು ನಡೆದ ಬ್ರಿಕ್ಸ್ ರಾಷ್ಟ್ರಗಳ ಸಮಾವೇಶದಲ್ಲಿ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು(ಲಷ್ಕರ್ ಎ ತಯಬ, ಜೈಷ್ ಎ ಮೊಹಮ್ಮದ್, ಐಎಸ್) ಸೇರಿದಂತೆ ವಿವಿಧ ಉಗ್ರ ಸಂಘಟನೆಗಳ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ಉಗ್ರ ಸಂಘಟನೆಗಳಿಂದ ಅಶಾಂತಿ ಹೆಚ್ಚಾಗುತ್ತಿದ್ದು, ಇದು ಬ್ರಿಕ್ಸ್ ರಾಷ್ಟ್ರಗಳ ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗುತ್ತಿದೆ ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಐದೂ ರಾಷ್ಟ್ರಗಳ ಮುಖ್ಯಸ್ಥರು ಭಾಗವಸಿದ್ದರು.[೧೦]
ಭಾಗವಸಿದ ನಾಯಕರು
[ಬದಲಾಯಿಸಿ]-
ಬ್ರೆಜಿಲ್
, ಮಿಚೆಲ್ ಟೆಂಮರ್, ಅಧ್ಯಕ್ಷರು -
ರಷ್ಯಾ
ವ್ಲಾದಿಮಿರ್ ಪುಟಿನ್, ಅಧ್ಯಕ್ಷರು: ರಷ್ಯಾ -
ಚೀನಾ
ಕ್ಸಿ ಜಿಂಪಿಂಗ್, ಅಧ್ಯಕ್ಷ (ಹೋಸ್ಟ್),ಚೀನಾ -
ದಕ್ಷಿಣ ಆಫ್ರಿಕಾ
ಜಾಕೋಬ್ ಜುಮಾ, ಅಧ್ಯಕ್ಷರು,
ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2014-02-09. Retrieved 2016-10-15.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ http://esa.un.org/unpd/wpp/DVD/
- ↑ "ನಾಳೆಯಿಂದ ಬ್ರಿಕ್ಸ್ ಶೃಂಗಸಭೆ; ಇಂದು ಮೋದಿ- ಪುತಿನ್ ಮಾತುಕತೆ". Archived from the original on 2016-10-19. Retrieved 2016-10-15.
- ↑ ಮೂಲಕ ಹೊಸ ಸಂಬಂಧ ಸೇತುವೆ[permanent dead link]
- ↑ BRICS summit: 10 things to know
- ↑ ಭಾರತ ರಷ್ಯಾ ನಡುವಿನ ಪ್ರಮುಖ ಒಪ್ಪಂದಗಳು
- ↑ ಪಾಕ್ ತಾಯಿ;17 Oct, 2016[permanent dead link]
- ↑ "ಉಗ್ರವಾದಕ್ಕೆ ಪಾಕ್ ತಾಯಿ". Archived from the original on 2016-10-18. Retrieved 2016-10-17.
- ↑ ಪಾಕ್ ಪರ ನಿಂತ ಚೀನಾ;17 Oct, 2016
- ↑ Brics 2017: Summit declaration names Pak-based Lashkar, Jaish as terror concerns;Sep 04, 2017
ಉಲ್ಲೇಖ
[ಬದಲಾಯಿಸಿ]ವರ್ಗಗಳು:
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using the JsonConfig extension
- CS1 errors: redundant parameter
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- Pages using div col with unknown parameters
- ಶೃಂಗಸಭೆಗಳು
- ಭಾರತ
- ಅಂತರರಾಷ್ಟ್ರೀಯ ಸಂಘಟನೆಗಳು