ಬೋಸ್‌ ಕಾರ್ಪೊರೇಷನ್‌

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
Bose Corporation
ಸಂಸ್ಥೆಯ ಪ್ರಕಾರPrivate
ಸ್ಥಾಪನೆ1964
ಮುಖ್ಯ ಕಾರ್ಯಾಲಯFramingham, Massachusetts
ಪ್ರಮುಖ ವ್ಯಕ್ತಿ(ಗಳು)Amar Bose, Founder, Chairman
Bob Maresca, President
Thomas Froeschle, VP, Director of Research, Member of the Board
ಉದ್ಯಮConsumer electronics
ಉತ್ಪನ್ನLoudspeakers, Headphones, Audio equipment, Car audio
ಆದಾಯGreen Arrow Up.svgUS$2 billion[೧]
ಜಾಲತಾಣwww.bose.com

ಬೋಸ್‌ ಕಾರ್ಪೊರೇಷನ್‌ (pronounced /ˈboʊz/) ಎಂಬುದು ಅಮೆರಿಕಾದ, ಒಂದು ಖಾಸಗಿ-ಹಿಡಿತದಲ್ಲಿರುವ ಕಂಪನಿಯಾಗಿದ್ದು, ಮ್ಯಾಸಚೂಸೆಟ್ಸ್‌ನ ಫ್ರಾಮಿಂಗ್‌ಹ್ಯಾಂನಲ್ಲಿ ಅದು ನೆಲೆಗೊಂಡಿದೆ ಹಾಗೂ ಶ್ರವಣ ಸಾಧನಗಳ ತಯಾರಿಕೆಯಲ್ಲಿ ಅದು ಪರಿಣತಿಯನ್ನು ಸಾಧಿಸಿದೆ.[೨][೩] ಒಲಿಂಪಿಕ್ಸ್‌ ಕ್ರೀಡಾಂಗಣಗಳು,[೪] ದಿ ಬ್ರಾಡ್‌ವೇ ಥಿಯೇಟರ್‌, ಸಿಸ್ಟೀನ್‌ ಚಾಪೆಲ್ ಚರ್ಚು‌ ಹಾಗೂ ಬಾಹ್ಯಾಕಾಶ ನೌಕೆ ಇವೇ ಮೊದಲಾದ ಕಡೆಗಳಲ್ಲಿ ಬೋಸ್‌ ಉತ್ಪನ್ನಗಳನ್ನು ಕಾಣಬಹುದು.[೪][೫] ಬೋಸ್‌ ಕಂಪನಿಯು 5 ಘಟಕಗಳು, 151 ಚಿಲ್ಲರೆ ಮಳಿಗೆಗಳು (2006ರ ಅಕ್ಟೋಬರ್‌ 20ರ ವೇಳೆಗೆ ಇದ್ದಂತೆ) ಹಾಗೂ ಮ್ಯಾಸಚೂಸೆಟ್ಸ್‌ನ ಸ್ಟೌ ಎಂಬಲ್ಲಿರುವ ಮೋಟಾರು ವಾಹನಗಳಿಗೆ ಸಂಬಂಧಿಸಿದ ಒಂದು ಅಂಗಸಂಸ್ಥೆಯನ್ನು ನಿರ್ವಹಿಸುತ್ತದೆ. 901 ಸ್ಪೀಕರ್‌ ಸರಣಿಗೆ ಸಂಬಂಧಿಸಿದಂತೆ ಬೋಸ್‌ ಕಂಪನಿಯು ಪ್ರಸಿದ್ಧಿಯನ್ನು ಪಡೆದಿದೆ.

USAಯಲ್ಲಿನ ಗೃಹಬಳಕೆಯ ಶ್ರವಣ ಸಾಧನದ ಚಿಲ್ಲರೆ ವ್ಯಾಪಾರ ಹಾಗೂ ಒಯ್ಯಬಹುದಾದ ಶ್ರವಣ ಸಾಧನದ ಚಿಲ್ಲರೆ ವ್ಯಾಪಾರದಲ್ಲಿನ ಮಾರಾಟಕ್ಕೆ ಸಂಬಂಧಿಸಿದಂತೆ, ಬೋಸ್‌ ಕಂಪನಿಯು 2008ರ ನವೆಂಬರ್‌ನಿಂದ 2009ರ ಏಪ್ರಿಲ್‌ವರೆಗಿನ ಅವಧಿಗೆ ಮೂರನೇ ಸ್ಥಾನವನ್ನು ಗಳಿಸಿಕೊಂಡಿತು.[೬]

ಹಿನ್ನೆಲೆ[ಬದಲಾಯಿಸಿ]

ಶ್ರವಣ ಸಾಧನಗಳು (ಐಷಾರಾಮಿ ಕಾರುಗಳಿಗೆ [೭][೮] ಸಂಬಂಧಿಸಿರುವ ಸ್ಪೀಕರ್‌ಗಳು, ಧ್ವನಿವರ್ಧಕಗಳು, ಹೆಡ್‌ಫೋನ್‌ಗಳು, ಮೋಟಾರು ವಾಹನಗಳಿಗೆ ಸಂಬಂಧಿಸಿದ ಧ್ವನಿವ್ಯವಸ್ಥೆಗಳನ್ನು [೯] ಒಳಗೊಂಡಂತೆ) ಮೋಟಾರು ವಾಹನಗಳಿಗೆ ಸಂಬಂಧಿಸಿದ ಅಕ್ಷಾಧಾರ ವ್ಯವಸ್ಥೆಗಳನ್ನು ಬೋಸ್‌ ಕಾರ್ಪೊರೇಷನ್‌ ಅಭಿವೃದ್ಧಿಪಡಿಸುತ್ತದೆ ಮತ್ತು ತಯಾರಿಸುತ್ತದೆ, ಹಾಗೂ ಕೆಲವೊಂದು ಸಾಮಾನ್ಯ ಸಂಶೋಧನೆಯನ್ನು (ತಂಪು ಬೆಸುಗೆ[೧೦][೧೧][೧೨] ನಿಜಸ್ವರೂಪವನ್ನು ಪ್ರಕಟಿಸುವಿಕೆಯಂಥದು) ನಿರ್ವಹಿಸುತ್ತದೆ. ಮ್ಯಾಸಚೂಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಇಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಷಯದಲ್ಲಿ ಓರ್ವ ಪ್ರಾಧ್ಯಾಪಕನಾಗಿದ್ದ (2005ರಲ್ಲಿ ಈತ ನಿವೃತ್ತಿ ಹೊಂದಿದ) ಅಮರ್‌‌ G. ಬೋಸ್‌ ಎಂಬಾತನಿಂದ 1964ರಲ್ಲಿ ಕಂಪನಿಯು ಸಂಸ್ಥಾಪಿಸಲ್ಪಟ್ಟಿತು. US ಸೇನೆ (ನೌಕಾಪಡೆ,[೧೩] ವಾಯುಪಡೆ[೧೪] ಮತ್ತು ಭೂಸೇನೆ[೧೫]) ಹಾಗೂ ನಾಸಾದೊಂದಿಗೆ ಬೋಸ್‌ ಕಂಪನಿಯು ಒಡಂಬಡಿಕೆಗಳನ್ನು ಮಾಡಿಕೊಂಡಿದೆ.[೧೬] ಅಮರ್‌‌ ಬೋಸ್‌ ಈಗಲೂ ಸಹ ಕಂಪನಿಯ ಸಭಾಪತಿ ಹಾಗೂ ಪ್ರಾಥಮಿಕ ಷೇರುದಾರನಾಗಿರುವುದರ ಜೊತೆಗೆ, ತಾಂತ್ರಿಕ ನಿರ್ದೇಶಕನ ಪಟ್ಟವನ್ನೂ ಹೊಂದಿದ್ದಾನೆ.[೧೭]

ಬೋಸ್‌ ಕಾರ್ಪೊರೇಷನ್‌ನ ಅಧ್ಯಕ್ಷರುಗಳ ಇತಿಹಾಸ[ಬದಲಾಯಿಸಿ]

 1. ವಿಲಿಯಂ (ಬಿಲ್‌) ಝಾಕೋವಿಟ್ಜ್‌ (1964–66)
 2. ಚಾರ್ಲ್ಸ್‌‌ "ಚಕ್‌" ಹೀಕೆನ್‌ (1966–69)
 3. ಫ್ರಾಂಕ್‌ E. ಫರ್ಗೂಸನ್‌ (1969–76)
 4. ಅಮರ್‌‌ G. ಬೋಸ್‌ (1976–80)
 5. ಶೆರ್ವಿನ್‌ ಗ್ರೀನ್‌ಬ್ಲಾಟ್‌ (1980–2000)[೧೮]
 6. ಜಾನ್‌ ಕೋಲ್‌ಮನ್‌ (2000–2005)
 7. ಬಾಬ್‌ ಮಾರ್ಸಿಯಾ (Since 2005)

ಕನಿಷ್ಟ 100 ದಶಲಕ್ಷ $ನಷ್ಟು ಪ್ರಮಾಣದ ಒಂದು ವಾರ್ಷಿಕ RD&E ಅಂದಾಜುವೆಚ್ಚದೊಂದಿಗೆ, ಸಂಶೋಧನೆ, ಅಭಿವೃದ್ಧಿ, ಹಾಗೂ ಎಂಜಿನಿಯರಿಂಗ್‌ (RD&E) ಉದ್ದೇಶಗಳಿಗೆ ಸಂಬಂಧಿಸಿದಂತೆ ಕಂಪನಿಯು ಫ್ರಾಮಿಂಗ್‌ಹ್ಯಾಂನಲ್ಲಿ 6,500 ಚದರ ಮೀಟರ್‌ನಷ್ಟಿರುವ (70,000 ಚದರ ಅಡಿ) ಒಂದು ಕಟ್ಟಡವನ್ನು ಮೀಸಲಿಟ್ಟಿದೆ.[೧೯] ಬೆಳೆಯುತ್ತಿರುವ ಮೋಟಾರು ವಾಹನಗಳ ಹಾಗೂ ಮಾರಾಟಗಾರಿಕೆಯ ವಿಭಾಗಗಳಿಗೆ ನೆಲೆಯನ್ನು ಕಲ್ಪಿಸಲು, ಮ್ಯಾಸಚೂಸೆಟ್ಸ್‌ನ ಸ್ಟೌ ಪ್ರದೇಶದಲ್ಲಿ ಒಂದು ಹೆಚ್ಚುವರಿ ನಿವೇಶನವನ್ನು 2004ರಲ್ಲಿ HPಯಿಂದ ಬೋಸ್‌ ಖರೀದಿಸಿತು.[೨೦]

ಆರಂಭಿಕ ವರ್ಷಗಳು[ಬದಲಾಯಿಸಿ]

1956ರಲ್ಲಿ, MITಯಲ್ಲಿ ಇನ್ನೂ ಓರ್ವ ಪದವೀಧರ ವಿದ್ಯಾರ್ಥಿಯಾಗಿದ್ದಾಗ, ಒಂದು ಉನ್ನತ-ವರ್ಗದ ಸ್ಟೀರಿಯೋ ವ್ಯವಸ್ಥೆಯನ್ನು ಖರೀದಿಸಿದ ಅಮರ್‌‌ ಬೋಸ್‌, ಅದು ತನ್ನ ನಿರೀಕ್ಷೆಗಳನ್ನು ಈಡೇರಿಸಲು ವಿಫಲಗೊಂಡಾಗ ನಿರಾಶೆಗೊಳಗಾದ.[೨೧] ನಂತರದಲ್ಲಿ ಆತ, ಉನ್ನತ-ವರ್ಗದ ಶ್ರವಣ ಸಾಧನದ ವ್ಯವಸ್ಥೆಗಳಲ್ಲಿ ತಾನು ಕಂಡುಕೊಂಡ ಮೂಲಭೂತ ಕೊರತೆಗಳನ್ನು ನಿವಾರಿಸುವೆಡೆಗೆ ಗುರಿಯಿಟ್ಟುಕೊಂಡು ವ್ಯಾಪಕ ಸಂಶೋಧನೆಯನ್ನು ಶುರುಮಾಡಿದ.

ಬೋಸ್‌ನ ಪ್ರಕಾರ ಅಲ್ಲಿ ಕಂಡುಬಂದ ಪ್ರಮುಖ ಕೊರತೆಯೆಂದರೆ, ಅದರ ವಿದ್ಯುನ್ಮಾನ ಶಾಸ್ತ್ರದ ಹಾಗೂ ಸ್ಪೀಕರ್‌ನ ಒಟ್ಟಾರೆ ವಿನ್ಯಾಸವು ಮನೋ-ಶ್ರವಣಗುಣಗಳಿಗೆ ಸಂಬಂಧಿಸಿದಂತೆ ಸಮಾಧಾನ ಕೊಡುವಲ್ಲಿ, ಅಂದರೆ, ಕೇಳುಗನು ಸದರಿ ವ್ಯವಸ್ಥೆಯ ಒಂದು ಭಾಗ ಎಂಬ ಅನುಭೂತಿಯನ್ನು ನೀಡುವಲ್ಲಿ ವಿಫಲಗೊಂಡಿತ್ತು. ಎಂಟು ವರ್ಷಗಳ ನಂತರ ಆತ ಕಂಪನಿಯನ್ನು ಪ್ರಾರಂಭಿಸಿದ; ಸಂಶೋಧನೆಯ ಮೂಲಕ ಉತ್ತಮ ಧ್ವನಿ ಯನ್ನು (ಬೆಟರ್‌ ಸೌಂಡ್‌ ಥ್ರೂ ರಿಸರ್ಚ್‌ ಎಂಬ ಈ ಪರಿಕಲ್ಪನೆಯು ಕಂಪನಿಯ ಘೋಷವಾಕ್ಯವೂ ಆಗಿದೆ) ಸಾಧಿಸಿ ತೋರಿಸುವ ಒಂದು ಧ್ಯೇಯದೊಂದಿಗೆ ಕಂಪನಿಗೆ ಆತ ಹುರುಪನ್ನು ತುಂಬಿದ.

ಸಂಶೋಧನೆಯ ಇತಿಹಾಸ[ಬದಲಾಯಿಸಿ]

ಕಂಪನಿಯು ವ್ಯವಹಾರದಲ್ಲಿ ತೊಡಗಿಕೊಂಡಾಗಿನ ಮೊದಲ ವರ್ಷದ ಅವಧಿಯಲ್ಲಿ, ಪ್ರಾಯೋಜಿತ ಸಂಶೋಧನೆಯಲ್ಲಿ ಬೋಸ್‌ ಕಾರ್ಪೊರೇಷನ್‌ ತನ್ನನ್ನು ತೊಡಗಿಸಿಕೊಂಡಿತು. ಮಾದರಿ 2201,[೧೮] ಎಂಬ ಇದರ ಮೊದಲ ಧ್ವನಿವರ್ಧಕ ಯಂತ್ರ ಉತ್ಪನ್ನವು, ಮಾರಾಟ ಕಾರ್ಯಕ್ಷೇತ್ರದ ಎಂಟನೇ ಒಂದುಭಾಗಕ್ಕೆ ಮಧ್ಯ-ಶ್ರೇಣಿಯ 22 ಸಣ್ಣ ಸ್ಪೀಕರ್‌ಗಳನ್ನು ವಿತರಣೆ ಮಾಡಿತು. ಕೋಣೆಯೊಂದರ ಮೂಲೆಯಲ್ಲಿ ಅಡಕಗೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಮೂಲೆಯ ಘನಾಕೃತಿಯೊಂದರಲ್ಲಿನ ಕನ್ನಡಿಯು ಬೆಳಕನ್ನು ಪ್ರತಿಫಲಿಸುವಂತೆ, ಇದು ಸ್ಪೀಕರ್‌ನ ಧ್ವನಿಯನ್ನು ಪ್ರತಿಫಲಿಸುವಂತಿತ್ತು ಮತ್ತು ವಿಶಾಲವಾಗಿ ದೊಡ್ಡದಾಗಿರುವ ಕೋಣೆಯೊಂದರಲ್ಲಿ ಒಂದು ಶ್ರವಣದ ಕ್ಷೇತ್ರವೊಂದರ ಕಲ್ಪನೆಯ ಅನುಭೂತಿಯನ್ನು ಅದು ಉಂಟುಮಾಡುವಂತಿತ್ತು. ಒಟ್ಟಾರೆಯಾಗಿ ಹರಡಲ್ಪಟ್ಟ ಮಟ್ಟಸವಾದ ಕ್ರಿಯಾಶಕ್ತಿಗೆ ಸಂಬಂಧಿಸಿದಂತೆ ಶ್ರವಣದ ಫಲಿತವನ್ನು ಸರಿಹೊಂದಿಸಲು, ಒಂದು ವಿದ್ಯುನ್ಮಾನ ಸಮಾನಕಾರಿಯನ್ನು (ಇಲೆಕ್ಟ್ರಾನಿಕ್‌ ಈಕ್ವಲೈಜರ್‌) ಅಮರ್‌‌ ಬೋಸ್‌ ಬಳಸಿದ.

ಒಂದು ಅನುಕರಿತ, ದ್ರವ್ಯರಾಶಿರಹಿತ, ಮಾದರಿ, ಗೋಳಾಕಾರದ ಪೊರೆಯ ಗುಣಲಕ್ಷಣಗಳನ್ನು ಮೇಲ್ಪಂಕ್ತಿಯಂತೆ ಈ ಸ್ಪೀಕರ್‌ ವ್ಯವಸ್ಥೆಗಳು ನಿಖರವಾಗಿ ಅನುಸರಿಸಿದವಾದರೂ, ಕೇಳುವಿಕೆಯ ಪರೀಕ್ಷಾ ಫಲಿತಾಂಶಗಳು ನಿರಾಶಾದಾಯಕವಾಗಿದ್ದವು[೧೮] (ಬೋಸ್‌ನ ಸಂಶೋಧನಾ ವಿಭಾಗದಿಂದ ನಂತರದಲ್ಲಿ ಹೊರಬಿದ್ದ ಪ್ರಕಟಣೆಯೊಂದರಲ್ಲಿ[೨೨] ಇದಕ್ಕೆ ಸಂಬಂಧಿಸಿದ ಕೆಲವೊಂದು ಕಾರಣಗಳು ವಿವರಿಸಲ್ಪಟ್ಟಿವೆ). ಮನೋ-ಶ್ರವಣಗುಣಗಳ ಕಡೆಗೆ ಹೆಚ್ಚಿನ ಸಂಶೋಧನೆಯನ್ನು ನಿರ್ವಹಿಸುವಲ್ಲಿ ಇದು ಬೋಸ್‌ ಕಂಪನಿಗೆ ಅನುವುಮಾಡಿಕೊಟ್ಟಿತು; ಪ್ರತ್ಯಕ್ಷ ಕಾರ್ಯಕ್ರಮಗಳು ಅಥವಾ ನೇರ ಪ್ರಸಾರದ ಕಾರ್ಯಕ್ರಮಗಳ ಒಂದು ವಿಶಿಷ್ಟವಾದ ಕೇಳುವಿಕೆಯ ಸ್ಥಿತಿಯಾದ, ಕೇಳುಗನ ಕಿವಿಗೆ ಬಂದುಮುಟ್ಟುವ ಪ್ರತಿಫಲಿತ ಧ್ವನಿಯ ಒಂದು ಮೇಲುಗೈ ಎಷ್ಟೊಂದು ಪ್ರಾಮುಖ್ಯತೆಯನ್ನು ಹೊಂದಿದೆ ಎಂಬುದನ್ನು ಇದು ಅಂತಿಮವಾಗಿ ಸ್ಪಷ್ಟಗೊಳಿಸಿತು. ಈ ಆವಿಷ್ಕಾರವು ಒಂದು ಪರಿಷ್ಕೃತ ಸ್ಪೀಕರ್‌ ವಿನ್ಯಾಸಕ್ಕೆ ಕಾರಣವಾಯಿತು. ಹೀಗೆ ರೂಪುಗೊಂಡ ಒಂಬತ್ತು ತದ್ರೂಪಿ ಮಧ್ಯ-ಶ್ರೇಣಿಯ ಚಿಕ್ಕ ಚಾಲಕಗಳ (ವಿದ್ಯುನ್ಮಾನ ಏಕರೂಪವಾಗಿಸುವಿಕೆಯೊಂದಿಗೆ) ಪೈಕಿ ಎಂಟು ಚಾಲಕಗಳನ್ನು ಸ್ಪೀಕರ್‌ ಹಿಂಭಾಗದ ಗೋಡೆಯೆಡೆಗೆ ತಿರುಗಿಸಿದ್ದರೆ, ಒಂದನ್ನು ಮುಂಭಾಗಕ್ಕೆ ತಿರುಗಿಸಲಾಗಿತ್ತು. ಇದರಿಂದಾಗಿ ಮನೆಯ ಕೇಳುವಿಕೆಯ ಸ್ಥಳಾವಕಾಶಗಳಲ್ಲಿನ ನೇರ ಧ್ವನಿಯ ಮೇಲಿನ ಪ್ರತಿಫಲಿತದ ಒಂದು ಪ್ರಬಲ ಪರಿಣಾಮವು ಖಾತ್ರಿಯಾಗಿ, ಪ್ರತ್ಯಕ್ಷ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಕೇಳುಗರು ಅನುಭವಕ್ಕೆ ತಂದುಕೊಳ್ಳುವ ಪ್ರಬಲವಾದ ಪ್ರತಿಫಲಿತ ಧ್ವನಿ ಕ್ಷೇತ್ರಗಳು ಪುನರಾವರ್ತಿಸುವ ಅವಕಾಶ ಸಿಕ್ಕಿದಂತಾಯಿತು.

ತನ್ನ ಹೊಸ ವಿನ್ಯಾಸವು ಕೇಳುಗನ ಕಿವಿಯ ಬಳಿ ಸುಳಿಯುವ ಪ್ರತಿಫಲಿತ ಧ್ವನಿಯ ಒಂದು ಪ್ರಬಲ ಪರಿಣಾಮವನ್ನು ಉಂಟುಮಾಡುವುದೆಂಬ ಹಾಗೂ ಇದು ಒಂದು "ಪ್ರತ್ಯಕ್ಷ" ಕೇಳುವಿಕೆಯ ಅನುಭವದ ಮಗ್ಗುಲನ್ನು ವಿಶ್ವಾಸಾರ್ಹವಾದ ರೀತಿಯಲ್ಲಿ ಪುನರಾವರ್ತಿಸುವುದೆಂಬ ಗಾಢ ಭರವಸೆಯನ್ನು ಅಮರ್‌‌ ಬೋಸ್‌ ಹೊಂದಿದ್ದರೂ ಸಹ, ಮೊದಲ ಬಾರಿಗೆ ತನ್ನ ಹೊಸ ವಿನ್ಯಾಸದ ಪರಿಣಾಮವನ್ನು ಕೇಳಿಸಿಕೊಳ್ಳುವುದಕ್ಕೆ ಮುಂಚಿತವಾಗಿ ಒಂದು ವಿಷಯವಿನ್ನೂ ಅವನಿಗೆ ಖಾತ್ರಿಯಾಗಿರಲಿಲ್ಲ; ಅಂದರೆ, ತನ್ನ ಹೊಸ "ನೇರ/ಪ್ರತಿಫಲಿತ" ವಿನ್ಯಾಸವು ಕೇವಲ ಒಂದು ಸಣ್ಣದಾದ ಶ್ರವ್ಯ ಸುಧಾರಣೆಯಾಗಿ ಹೊರಹೊಮ್ಮುವುದೇ ಅಥವಾ ತನ್ನ ಹಿಂದಿನ ವಿನ್ಯಾಸಕ್ಕಿಂತ ಮತ್ತು ವಾಣಿಜ್ಯ ಸ್ವರೂಪದಲ್ಲಿ ಲಭ್ಯವಿರುವ ಅತ್ಯುತ್ತಮ ಧ್ವನಿವರ್ಧಕ ಯಂತ್ರಗಳಿಗಿಂತ ಹೆಚ್ಚಿನದಾಗಿರುವ ದೊಡ್ಡ ಸುಧಾರಣೆಯಾಗಿ ಹೊರಹೊಮ್ಮಲಿದೆಯೇ ಎಂಬ ಬಗ್ಗೆ ಬೋಸ್‌ಗೆ ಖಾತ್ರಿಯಿರಲಿಲ್ಲ. ಮಾದರಿ 901 ಎಂಬುದಾಗಿ ಹೆಸರಿಸಲ್ಪಟ್ಟ ಈ ಹೊಸ ಪಂಚಕೋನದ ವಿನ್ಯಾಸವು, ಆ ಸಮಯದಲ್ಲಿ ಲಭ್ಯವಿದ್ದ ಸ್ಪೀಕರ್‌ಗಳಿಗೆ (ಈ ಸ್ಪೀಕರ್‌ಗಳು ಸಾಮಾನ್ಯವಾಗಿ ಸಂಪೂರ್ಣ-ಗಾತ್ರದ, ನೆಲದಮೇಲೆ ನಿಲ್ಲುವ ಘಟಕಗಳಾಗಿರುತ್ತಿದ್ದವು ಅಥವಾ ಪುಸ್ತಕದ ಕಪಾಟು ಮಾದರಿಯ ಸ್ಪೀಕರ್‌ಗಳಾಗಿರುತ್ತಿದ್ದವು; ಇವುಗಳೊಂದಿಗೆ ಇರುತ್ತಿದ್ದ ಒಂದು ಸಬ್‌ವೂಫರ್‌, ಕೇವಲ ಅತ್ಯಂತ ಕಡಿಮೆ ಮಟ್ಟದ ಕಂಪನಾಂಕಗಳನ್ನು ನಿರ್ವಹಿಸುತ್ತಿತ್ತು) ಸಂಬಂಧಿಸಿದಂತೆ ಒಂದು ಅತ್ಯಂತ, ಸಂಪ್ರದಾಯಬದ್ಧವಲ್ಲದ ವಿನ್ಯಾಸವಾಗಿತ್ತು. 1968ರಲ್ಲಿ ಮಾದರಿ 901ರ ಪ್ರಥಮ ಪ್ರದರ್ಶನವಾಯಿತು ಹಾಗೂ ಕ್ಷಿಪ್ರವಾಗಿ ಅದು ವ್ಯಾಪಾರಿ ಯಶಸ್ಸನ್ನು ಗಳಿಸಿಕೊಂಡಿತು, ಮತ್ತು 1970ರ ದಶಕದಲ್ಲಿ ಬೋಸ್‌ ಕಾರ್ಪೊರೇಷನ್‌ ಕ್ಷಿಪ್ರವಾಗಿ ಬೆಳೆಯಿತು.

ಅಮರ್‌‌ ಬೋಸ್‌ನ ಅಭಿಪ್ರಾಯದಲ್ಲಿ ಮನೋ-ಶ್ರವಣಗುಣಗಳ ಕುರಿತು ನಿಖರವಾದ ಅರಿವನ್ನು ಹೊಂದಿಲ್ಲದಿದ್ದರೆ, ಅದು ವಿಭಿನ್ನವಾಗಿ ಗ್ರಹಿಸಲ್ಪಟ್ಟ ಯಾವುದೇ ಎರಡು ಇಚ್ಛಾನುಸಾರವಾದ ಧ್ವನಿಗಳನ್ನು ಪರಿಮಾಣಾತ್ಮಕವಾಗಿ ಸಮರ್ಪಕವಾಗಿ ನಿರೂಪಿಸುವ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ; ಅಷ್ಟೇ ಅಲ್ಲ, ಗ್ರಹಿಸಲ್ಪಟ್ಟ ಗುಣಮಟ್ಟದ ಎಲ್ಲಾ ಅಂಶಗಳನ್ನು ಸಮರ್ಪಕವಾಗಿ ನಿರೂಪಿಸಲು ಮತ್ತು ಪರಿಮಾಣಿಸಲು ಅದು ಮಿತಿಯನ್ನೊಡ್ಡುತ್ತದೆ. ಉದಾಹರಣೆಗೆ, ಸಂಗೀತವನ್ನು ಒಳಗೊಂಡಿರುವ ಸಂಕೀರ್ಣ ಧ್ವನಿಗಳಲ್ಲಿನ ಗ್ರಹಿಸಲ್ಪಟ್ಟ ಗುಣಮಟ್ಟದಲ್ಲಿರುವ ಒಂದು ಅಂಶವಾಗಿ ಅಸ್ಪಷ್ಟತೆಗೆ ಅತೀವ ಪ್ರಾಮುಖ್ಯತೆಯನ್ನು ನೀಡಲಾಗಿದೆ; ಒಂದು ಸೈನ್‌ ಅಲೆ ಹಾಗೂ ಒಂದು ಚೌಕ ಅಲೆಗಳು (ಒಂದು ಅಗಾಧವಾದ ವಿರೂಪಗೊಂಡ ಸೈನ್‌ ಅಲೆ) 7 kHzಗಿಂತ ಮೇಲೆ ಕೇಳಿಸುವಷ್ಟು ಅಸ್ಪಷ್ಟವಾಗಿರುತ್ತವೆ ಎಂಬುದು ಅವನ ಅಭಿಪ್ರಾಯವಾಗಿದೆ. ಇದೇ ರೀತಿಯಾಗಿ, ಧ್ವನಿವರ್ಧಕ ಯಂತ್ರಗಳು ಹಾಗೂ ವಿದ್ಯುನ್ಮಾನಗಳ ಸುಲಭವಾಗಿ ಅಳೆಯಲ್ಪಟ್ಟ ಇತರ ಮಾಪನ ಲಕ್ಷಣಗಳಲ್ಲಿ ಗ್ರಹಿಸಲ್ಪಟ್ಟ ಗುಣಮಟ್ಟಕ್ಕಿರುವ ಅಳೆಯಬಹುದಾದ ಪ್ರಸ್ತುತತೆಯನ್ನು ಅವನು ಕಾಣಲಿಲ್ಲ, ಮತ್ತು ಈ ಕಾರಣದಿಂದಾಗಿ ಬೋಸ್‌ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಆ ವಿಶಿಷ್ಟ ಲಕ್ಷಣಗಳನ್ನು ಪ್ರಕಟಿಸುವುದಿಲ್ಲ. ಶ್ರವ್ಯ ಗುಣಮಟ್ಟದ (ಅಥವಾ ಅದರ ಕೊರತೆಯ) ಕುರಿತಾದ ಕೇಳುಗನ ಗ್ರಹಿಕೆ ಮತ್ತು ಅವನ ಅಥವಾ ಅವಳ ಸ್ವಂತದ ಆದ್ಯತೆಯು ಬೋಸ್‌ ಒತ್ತಾಯಿಸುವ ಅಂತಿಮ ಪರೀಕ್ಷೆಯಾಗಿದೆ.[೨೩]

ಇತರ ಪ್ರಮುಖ ಸ್ಪೀಕರ್‌ ತಯಾರಕರಿಗಿಂತ ಭಿನ್ನವಾಗಿ, ಬೋಸ್‌ ಕಂಪನಿಯು ತನ್ನ ಉತ್ಪನ್ನಗಳ ವಿದ್ಯುತ್ತಿಗೆ ಸಂಬಂಧಿಸಿದ ಹಾಗೂ ಉದ್ದೇಶಿತ ಶ್ರವಣದ ಅಳೆಯಲ್ಪಟ್ಟ ಕಾರ್ಯಕ್ಷಮತೆಗೆ ಸಂಬಂಧಿಸಿದ ವಿಶಿಷ್ಟ ಲಕ್ಷಣಗಳನ್ನು ಪ್ರಕಟಿಸುವುದಿಲ್ಲ.[೨೪][೨೫] ಮಾಹಿತಿಯನ್ನು ಪ್ರಕಟಿಸುವುದಕ್ಕೆ ಸಂಬಂಧಿಸಿದ ಈ ಇಷ್ಟವಿಲ್ಲದಿರುವಿಕೆಗೆ "ಹೆಚ್ಚು ಅರ್ಥಪೂರ್ಣವಾದ ಮಾಪನ ಹಾಗೂ ಮೌಲ್ಯಮಾಪನದ ಕಾರ್ಯವಿಧಾನಗಳ" ಪರವಾಗಿರುವ, ಈ ಮಾಪನಗಳ ಕುರಿತಾದ ಬೋಸ್‌ನ ನಿರಾಕರಣೆಯೇ ಕಾರಣ.[೨೬]

ಹೆಚ್ಚುವರಿಯಾಗಿ, ಶ್ರವಣದ ಗದ್ದಲದ ನಿವಾರಣೆಯ ಶ್ರೇಣಿಗಳ ವ್ಯಾಪ್ತಿಯಲ್ಲಿ ಕೇಂದ್ರೀಕೃತವಾಗಿರುವ, ಸುತ್ತುವರೆದಿರುವ ಸ್ವರೂಪದಿಂದ ಕೇಳಿಸಿಕೊಳ್ಳುವ ಮತ್ತು ಮೇಲುಗಡೆಯಿಂದ ಕೇಳಿಸಿಕೊಳ್ಳುವ ಹೆಡ್‌ಫೋನ್‌ಗಳ ಕ್ಷೇತ್ರಗಳೊಳಗೆ ಬರುವ ಒಯ್ಯಬಹುದಾದ ಶ್ರವಣ ಉಪಕರಣಗಳನ್ನು ಕಂಪನಿಯು ಸಂಶೋಧಿಸುತ್ತದೆ (ನೋಡಿ: ಬೋಸ್‌ ಹೆಡ್‌ಫೋನ್‌ ಶ್ರೇಣಿ).

ತಂಪು ಬೆಸುಗೆ ಸಂಶೋಧನೆ[ಬದಲಾಯಿಸಿ]

ತಂಪು ಬೆಸುಗೆಯ (ಕೋಲ್ಡ್‌ ಫ್ಯೂಷನ್‌) ಕುರಿತಾಗಿ 1991ರಲ್ಲಿ ಬೋಸ್‌ ಕಾರ್ಪೊರೇಷನ್‌ ಸಂಶೋಧನೆಯನ್ನು ಶುರುಮಾಡಿತು.[೧೦][೧೨] ಕಂಪನಿ ಎಂಜಿನಿಯರುಗಳು ಒಂದು ಪರಿಷ್ಕಾರದ ಶಾಖಮಾಪಕ‌ವನ್ನು ನಿರ್ಮಿಸಿದರು,[೧೧] ಹಿಂದಿನ ಪ್ರಯೋಗಗಳನ್ನು ಪುನರಾವರ್ತಿಸಲು ಪ್ರಾರಂಭಿಸಿದರು, ಮತ್ತು ಅಲ್ಲಿ ಯಾವುದೇ ನಿವ್ವಳ ಶಕ್ತಿ ಗಳಿಕೆಯಿಲ್ಲ ಎಂಬುದಾಗಿ ತೀರ್ಮಾನಿಸಿದರು.

ಬೋಸ್‌ ಮಳಿಗೆಗಳು[ಬದಲಾಯಿಸಿ]

ಸೆಂಚುರಿ ಸಿಟಿಯಲ್ಲಿನ ಬೋಸ್‌ ಚಿಲ್ಲರೆ ವ್ಯಾಪಾರ ಮಳಿಗೆ

1993ರಲ್ಲಿ ಮೈನೆಕಿಟ್ಟೆರಿ ಎಂಬಲ್ಲಿ ಬೋಸ್‌ ತನ್ನ ಮೊದಲ ಮಳಿಗೆಯನ್ನು ಪ್ರಾರಂಭಿಸಿತು. ಅಲ್ಲಿಂದೀಚೆಗೆ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ 160 ಮಳಿಗೆಗಳನ್ನು ಹಾಗೂ ವಿಶ್ವಾದ್ಯಂತ ಹಲವಾರು ತಾಣಗಳನ್ನು ಬೋಸ್‌ ಪ್ರಾರಂಭಿಸಿದೆ. ರೀಜೆಂಟ್‌ ಸ್ಟ್ರೀಟ್‌‌ನಲ್ಲಿರುವ ಒಂದು ಮಳಿಗೆಯೂ ಸೇರಿದಂತೆ ಬ್ರಿಟನ್‌ನಲ್ಲಿ ಬೋಸ್‌ನ 8 ಮಳಿಗೆಗಳಿವೆ. 15ರಿಂದ 25 ಅಸನಗಳ ವ್ಯವಸ್ಥೆ ಹೊಂದಿರುವ ಚಿತ್ರಮಂದಿರವನ್ನು ಬೋಸ್‌ ಮಳಿಗೆಗಳು ಒಳಗೊಂಡಿದ್ದು, ಒಂದು ಉನ್ನತ-ಸ್ಫುಟತೆಯ ಮುಂಭಾಗದ LCD ಪ್ರಕ್ಷೇಪಕವನ್ನು (ಪ್ರೊಜೆಕ್ಟರ್‌‌) ಬಳಸಿಕೊಂಡು ಒಂದು ಲೈಫ್‌ಸ್ಟೈಲ್‌ ಎಂಟರ್‌ಟೈನ್‌ಮೆಂಟ್‌ ಸಿಸ್ಟಂನ್ನು ಹೂರಣವಾಗಿ ಹೊಂದಿರುವ ಕಿರುಚಿತ್ರವೊಂದನ್ನು ಅದು ಪ್ರದರ್ಶಿಸುತ್ತದೆ. ಪ್ರದರ್ಶನದ ಒಂದು ಹಂತದಲ್ಲಿ ಮೂರು-ಮುಖಗಳ ಒಂದು ಪೆಟ್ಟಿಗೆಯನ್ನು ಮಧ್ಯಭಾಗದ ಸ್ಪೀಕರ್‌ನ ಮುಂಭಾಗದಲ್ಲಿ ಇರಿಸಲಾಗುತ್ತದೆ, ಮತ್ತು ಅಡಾಪ್ಟ್‌‌IQ ತಂತ್ರಜ್ಞಾನದ ಮೂಲಕ ಕೋಣೆಯಲ್ಲಿನ ಧ್ವನಿಯನ್ನು ಲೈಫ್‌ಸ್ಟೈಲ್‌ ಸಿಸ್ಟಂ ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ ಹಾಗೂ ಸರಿಮಾಡುತ್ತದೆ. ಕಾರ್ಖಾನೆಯ ವತಿಯಿಂದ ತೆರೆಯಲಾಗಿರುವ ಮಾರಾಟಜಾಲದಲ್ಲಿ ನೆಲೆಗೊಂಡಿರುವ ಮಳಿಗೆಗಳು ಕೆಲವೊಂದು ಉತ್ಪನ್ನಗಳ ಮೇಲೆ ರಿಯಾಯಿತಿಯನ್ನು ನೀಡುತ್ತವೆ ಮತ್ತು ಹೊಸ ಹಾಗೂ ಕಾರ್ಖಾನೆ ಪರಿಷ್ಕೃತ (ಮರುಪರೀಕ್ಷಿತ ತೆರೆದ-ಪೆಟ್ಟಿಗೆಯ) ಉತ್ಪನ್ನಗಳೆರಡನ್ನೂ ಮಾರಾಟಮಾಡುತ್ತವೆ.

ಸರಕುಮುದ್ರೆ ಪಡೆದಿರುವ ತಂತ್ರಜ್ಞಾನಗಳು[ಬದಲಾಯಿಸಿ]

 • ಮೂರು-ಸಂಪರ್ಕದ್ವಾರದ ಇಯರ್‌ಕಪ್‌‌ ಚಾಲಕಗಳು (ಟ್ರೈ-ಪೋರ್ಟ್‌ ಇಯರ್‌ಕಪ್‌ ಡ್ರೈವರ್ಸ್‌)
 • ಶ್ರವಣದ ಗದ್ದಲದ ನಿವಾರಣೆ (ಅಕೌಸ್ಟಿಕ್‌ ನಾಯ್ಸ್‌ ಕ್ಯಾನ್ಸಲೇಷನ್‌)
 • ಶ್ರವಣದ ದ್ರವ್ಯರಾಶಿ ತಂತ್ರಜ್ಞಾನ (ಅಕೌಸ್ಟಿಮಾಸ್‌ ಟೆಕ್ನಾಲಜಿ)
 • ಶ್ರವಣದ ತರಂಗಮಾರ್ಗದರ್ಶಿ ತಂತ್ರಜ್ಞಾನ (ಅಕೌಸ್ಟಿಕ್‌ ವೇವ್‌ಗೈಡ್‌ ಟೆಕ್ನಾಲಜಿ)
 • ನೇರ/ಪ್ರತಿಫಲಿಸುವ ತಂತ್ರಜ್ಞಾನ (ಡೈರೆಕ್ಟ್‌/ರಿಫ್ಲೆಕ್ಟಿಂಗ್‌ ಟೆಕ್ನಾಲಜಿ)
 • ಮನೋಶ್ರವಣದ ಏಕರೂಪವಾಗಿಸುವಿಕೆ (ಸೈಕೋಅಕೌಸ್ಟಿಕ್‌ ಈಕ್ವಲೈಸೇಷನ್‌)
 • ಟ್ರೂಸ್ಪೇಸ್‌ ತಂತ್ರಜ್ಞಾನ (ಟ್ರೂಸ್ಪೇಸ್‌ ಟೆಕ್ನಾಲಜಿ)
 • ಮೋಟಾರು ವಾಹನಗಳಿಗೆ ಸಂಬಂಧಿಸಿದಂತಿರುವ ವಿದ್ಯುತ್ಕಾಂತೀಯ ಅಕ್ಷಾಧಾರ ವ್ಯವಸ್ಥೆ (ಇಲೆಕ್ಟ್ರೋಮ್ಯಾಗ್ನೆಟಿಕ್‌ ಸಸ್ಪೆನ್ಷನ್‌ ಸಿಸ್ಟಮ್‌ ಫಾರ್‌ ಆಟೊಮೊಬೈಲ್ಸ್‌‌)

ವಿಶಿಷ್ಟವಾಗಿಸಲ್ಪಟ್ಟ ಉತ್ಪನ್ನಶ್ರೇಣಿಗಳು[ಬದಲಾಯಿಸಿ]

ಕಾರಿನ ಶ್ರವಣ ಉಪಕರಣ[ಬದಲಾಯಿಸಿ]

ಬೋಸ್‌ ಕಾರಿನ ಶ್ರವಣ ಉಪಕರಣ

ಮೋಟಾರು ವಾಹನಗಳಲ್ಲಿನ ಬಳಕೆಗೆ ಸಂಬಂಧಿಸಿದಂತೆ ಸ್ಪೀಕರ್‌ಗಳು ಹಾಗೂ ಶ್ರವಣ ಉಪಕರಣ ಉತ್ಪನ್ನಗಳ ಒಂದು ಶ್ರೇಣಿಯನ್ನು ಬೋಸ್‌ ಉತ್ಪಾದಿಸುತ್ತದೆ. GM ಹಣೆಪಟ್ಟಿಗಳನ್ನು ಹೊಂದಿರುವ ಬಹುಪಾಲು ವಾಹನಗಳಲ್ಲಿ (ಬ್ಯೂಕ್‌, ಹೋಲ್ಡನ್‌, ಕ್ಯಾಡಿಲಾಕ್‌, ಷೆವರ್‌ಲೆಟ್‌, GMC, ಹಮ್ಮರ್‌, ಪೋಂಟಿಯಾಕ್‌ ಹಾಗೂ ಸ್ಯಾಬ್‌‌ ಮೊದಲಾದವನ್ನು ಒಳಗೊಂಡಂತೆ),[೨೭] ಹಾಗೂ ಆಲ್ಫಾ ರೋಮಿಯೋ, ಆಡಿ, ಫೆರಾರಿ, ಲ್ಯಾನ್ಸಿಯಾ, ಮಸೆರಾಟಿ, ಮೇಬ್ಯಾಕ್‌, ಮರ್ಸಿಡಿಸ್‌-ಬೆಂಝ್‌, ಪೋರ್ಷ್‌ ಹಾಗೂ ರೆನಾಲ್ಟ್‌[೨೭] ಕಂಪನಿಗಳ ವತಿಯಿಂದ ಬರುವ ಕೆಲವೊಂದು ಐರೋಪ್ಯ ಮಾದರಿಗಳಲ್ಲಿ, ಮತ್ತು ನಿಸ್ಸಾನ್‌, ಇನ್ಫಿನಿಟಿ ಹಾಗೂ ಮಜ್ಡಾದಂಥ ಜಪಾನಿಯರ-ಉತ್ಪಾದನೆಯ ಕೆಲವೊಂದು ಕಾರುಗಳಲ್ಲಿ ಬೋಸ್‌ ಕಂಪನಿಯ ವಿಭಿನ್ನ ಶ್ರವಣ ಉಪಕರಣ ವ್ಯವಸ್ಥೆಗಳು ಲಭ್ಯವಿವೆ.[೨೭] ಸೂಕ್ತ ಸಮಗ್ರೀಕರಣ ಹಾಗೂ ವಾಹನದೊಳಗಿನ ಯುಕ್ತವಾದ ಶ್ರವಣದ ಹೊಂದಿಸುವಿಕೆಯನ್ನು ಖಾತ್ರಿಪಡಿಸುವ ದೃಷ್ಟಿಯಿಂದ, ಒಂದು ಮಾರುಕಟ್ಟೆ ನಂತರದ ಆಧಾರದ ಮೇಲೆ ತನ್ನ ಕಾರಿನ ಶ್ರವಣ ಉತ್ಪನ್ನಗಳನ್ನು ಬೋಸ್‌ ಕಂಪನಿಯು ಪ್ರಸಕ್ತವಾಗಿ ನೀಡುತ್ತಿಲ್ಲ.[೨೭]

ಸ್ವಿಜರ್‌ಲೆಂಡ್‌‌ಜಿನಿವಾದಲ್ಲಿ 2007ರಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ, ಫೆರಾರಿ 612 ಸ್ಕ್ಯಾಗ್ಲಿಯೆಟಿ ವಾಹನದಲ್ಲಿ ಒಂದು ಹೊಸ ಮಾಧ್ಯಮ ವ್ಯವಸ್ಥೆಯನ್ನು ಬೋಸ್‌ ಪರಿಚಯಿಸಿತು. ಸ್ಟೀರಿಯೋ, ಪಥನಿರ್ದೇಶನ, ಮತ್ತು ಮುಕ್ತಾವಕಾಶದ ಶೈಲಿಯ ಕರೆಮಾಡುವ ವ್ಯವಸ್ಥೆ ಮೊದಲಾದ ವೈಶಿಷ್ಟ್ಯತೆಗಳು ಈ ಹೊಸ ಮಾಧ್ಯಮ ವ್ಯವಸ್ಥೆಯಲ್ಲಿ ಅಳವಡಿಸಲ್ಪಟ್ಟಿದ್ದವು.[೨೮] "ಕಾರಿನೊಳಗಿನ ಪರಿಸರಕ್ಕಾಗಿರುವ ಅತ್ಯುತ್ತಮ ಸಂಗ್ರಹ ಪರಿಹಾರೋಪಾಯ" ಎಂಬ ವರ್ಗಕ್ಕೆ ಸಂಬಂಧಿಸಿದಂತೆ ಬೋಸ್‌ ಮಾಧ್ಯಮ ವ್ಯವಸ್ಥೆಯು 2007ರಲ್ಲಿ ಅಂತರರಾಷ್ಟ್ರೀಯ ಟೆಲಿಮ್ಯಾಟಿಕ್ಸ್‌ ಪ್ರಶಸ್ತಿಯನ್ನು ಗೆದ್ದುಕೊಂಡಿತು.[೨೯]

ಮೋಟಾರು ವಾಹನಗಳ ಅಕ್ಷಾಧಾರ ವ್ಯವಸ್ಥೆ[ಬದಲಾಯಿಸಿ]

ಎರಡು-ಹಂತದ, ರೇಖೀಯವಲ್ಲದ ವಿದ್ಯುತ್‌‌ ಸಂಸ್ಕರಣೆ ಮತ್ತು ಒಗ್ಗಿಸುವಿಕೆಯು ಬೋಸ್‌ ಕಾರ್ಪೊರೇಷನ್‌ನಲ್ಲಿ ನಡೆಯುತ್ತಿರುವ ಸಂಶೋಧನೆ ಹಾಗೂ ಅಭಿವೃದ್ಧಿಯ ಮತ್ತೊಂದು ಕ್ಷೇತ್ರವಾಗಿದೆ. ಅಮರ್‌‌ ಬೋಸ್‌ಗೆ ಹಾಗೂ ಬೋಸ್‌ನ ಇತರ ಎಂಜಿನಿಯರುಗಳಿಗೆ ಹಲವಾರು ಆರಂಭಿಕ ಸ್ವಾಮ್ಯದ ಸನ್ನದುಗಳು (ಪೇಟೆಂಟುಗಳು) ನೀಡಲ್ಪಟ್ಟಿವೆ ಮತ್ತು 20 ವರ್ಷಗಳಿಗೂ ಹೆಚ್ಚಿನ ಸಂಶೋಧನೆಯ[೩೦] ನಂತರ 2004ರಲ್ಲಿ ಕಂಪನಿಯು ಪ್ರಕಟಿಸಿದ ನಾವೀನ್ಯಕಾರಕ ಯೋಜನೆಯೊಂದರಲ್ಲಿನ ಪ್ರಮುಖ ಅಂಶಗಳ ಪೈಕಿ ಈ ತಂತ್ರಜ್ಞಾನವು ಒಂದೆನಿಸಿಕೊಂಡಿದೆ. ಇಂದು ಸಾಮಾನ್ಯವಾಗಿ ಕಂಡುಬರುವ ಹೈಡ್ರಾಲಿಕ್ಸ್‌‌ ತತ್ತ್ವಗಳಿಗೆ ಬದಲಿಗೆ ವಿದ್ಯುತ್ಕಾಂತೀಯ ತತ್ತ್ವಗಳನ್ನು ಬಳಸಿಕೊಳ್ಳುವ ಒಂದು ಮೋಟಾರು ವಾಹನಅಕ್ಷಾಧಾರ ವ್ಯವಸ್ಥೆ ಇದಾಗಿದೆ. ರಸ್ತೆಯ ಮೇಲೆ ಕಂಡುಬರುವ ಅಸಮವಾಗಿರುವ ರಸ್ತೆ ಉಬ್ಬುಗಳು ಅಥವಾ ಗುಂಡಿಗಳಿಗೆ ಪ್ರತಿಕ್ರಿಯೆಯಾಗಿ, ಮೋಟಾರು ವಾಹನವೊಂದರ ಚಕ್ರಗಳನ್ನು ಎತ್ತರಿಸಲು ಅಥವಾ ತಗ್ಗಿಸಲು ವಿದ್ಯುತ್ಕಾಂತೀಯ ರೇಖೀಯ ಮೋಟಾರುಗಳನ್ನು ಈ ವ್ಯವಸ್ಥೆಯು ಬಳಸುತ್ತದೆ.[೩೧] ಒಂದು ರಸ್ತೆ ಉಬ್ಬನ್ನು ಸಮೀಪಿಸುತ್ತಿರುವಾಗ ಕೆಲವೇ ಸೆಕೆಂಡುಗಳೊಳಗೆ ಚಕ್ರಗಳು ಎತ್ತಲ್ಪಡುತ್ತವೆ, ಅಥವಾ ಗುಂಡಿಯು ಎದುರಾದಾಗ ಅದರೊಳಗೆ ವಿಸ್ತರಿಸಲ್ಪಡುತ್ತವೆ; ಇದರಿಂದಾಗಿ ವಾಹನದ ಸ್ಥಿರತೆಯನ್ನು ಕಾಯ್ದುಕೊಂಡಂತಾಗುತ್ತದೆ. ಈ ತಂತ್ರಜ್ಞಾನವು ಸ್ಪೀಕರ್‌ಗಳು ಹಾಗೂ ಇಯರ್‌ಫೋನುಗಳಿಗೆ ಸಂಬಂಧಿಸಿದಂತೆ ಬೋಸ್‌ ಕಂಪನಿಯು ಸಾದರಪಡಿಸಿರುವ ಗದ್ದಲ ತಗ್ಗಿಸುವ ಸಕ್ರಿಯ ತಂತ್ರಜ್ಞಾನದ ಮತ್ತೊಂದು ಅನ್ವಯಿಕೆಯಾಗಿದೆ. ಇದರ ನೆರವಿನಿಂದ ರಸ್ತೆಯ ಏರುಪೇರನ್ನು ಗ್ರಹಿಸಲಾಗುತ್ತದೆ, ಮತ್ತು ಹೆಚ್ಚಿನಂಶ ಒಂದು ಧ್ವನಿ ತರಂಗದ ರೀತಿಯಲ್ಲಿ ಅದನ್ನು ಸಂಸ್ಕರಿಸಲಾಗುತ್ತದೆ. ಇದರ ಪರಿಣಾಮವಾಗಿ ರದ್ದಿಯಾತಿಯ ತರಂಗವೊಂದು ಸೃಷ್ಟಿಯಾಗಿ, ಅದು ರೇಖೀಯ ಮೋಟಾರುಗಳ ಮೂಲಕ ಚಕ್ರಗಳಿಗೆ ಪ್ರಯೋಗಿಸಲ್ಪಡುತ್ತದೆ.[೧೭] 2009ರ ವೇಳೆಗೆ ಈ ವ್ಯವಸ್ಥೆಯು ಉನ್ನತ-ವರ್ಗದ ಐಷಾರಾಮಿ ಕಾರುಗಳಲ್ಲಿ ವಾಣಿಜ್ಯ ಸ್ವರೂಪದಲ್ಲಿ ಲಭ್ಯವಾಗಬೇಕು ಎಂಬುದು ಅಮರ್‌‌ ಬೋಸ್‌ ನಿರೀಕ್ಷೆಯಾಗಿದೆ.[೩೨] ಫ್ರೆಂಚ್‌ ಸಂದರ್ಶನವೊಂದರಲ್ಲಿ ಒಂದು ತಡೆಗೋಡೆಯ ಮೇಲಿನಿಂದ ಕಾರು ಹಾರುವುದನ್ನೂ ಸಹ ಬೋಸ್‌ ತೋರಿಸಿದ್ದಾನೆ.[೩೩] ಸರಿಸುಮಾರು ಮೂರು ದಶಕಗಳ ನಂತರ, ಮತ್ತು 100 ದಶಲಕ್ಷ $ನಷ್ಟು ಮೌಲ್ಯದ ಅಭಿವೃದ್ಧಿಯನ್ನು ಕೈಗೊಂಡ ನಂತರವೂ ಈ ವ್ಯವಸ್ಥೆಯು "ಉನ್ನತ ವೆಚ್ಚ"ವನ್ನು ಹೊಂದಿದ್ದು ಭಾರಿಯಾಗಿದೆ ಎಂದು ಬೋಸ್‌ ಹೇಳುತ್ತಾನೆ.[೩೪]

ವ್ಯಾಪಾರಿ ವ್ಯವಸ್ಥೆಗಳು[ಬದಲಾಯಿಸಿ]

ಸಭಾಮಂದಿರಗಳು, ಚಿಲ್ಲರೆ ವ್ಯಾಪಾರದ ಸ್ಥಳಾವಕಾಶಗಳು, ಹೊಟೇಲುಗಳು, ಕಚೇರಿಗಳು, ಭೋಜನ ಮಂದಿರಗಳು, ಹಾಗೂ ಕ್ರೀಡಾಂಗಣಗಳಂಥ ವ್ಯಾಪಾರಿ ಸಜ್ಜಿಕೆಗಳಲ್ಲಿನ ಬಳಕೆಗೆ ಸಂಬಂಧಿಸಿದ ಶ್ರವಣ ಉಪಕರಣ ವ್ಯವಸ್ಥೆಗಳನ್ನು ಬೋಸ್‌ನ ವೃತ್ತಿಪರ ವ್ಯವಸ್ಥೆಗಳ ವಿಭಾಗವು ವಿನ್ಯಾಸಗೊಳಿಸುತ್ತದೆ ಮತ್ತು ಒದಗಿಸುತ್ತದೆ.[೩೫]

ವ್ಯಕ್ತಿ ವಿಶಿಷ್ಟವಾಗಿಸಲ್ಪಟ್ಟ ವರ್ಧನೆಯ ವ್ಯವಸ್ಥೆ[ಬದಲಾಯಿಸಿ]

ಸಂಗೀತ ಕಚೇರಿಯನ್ನು ನಡೆಸುವ ಸಂಗೀತಗಾರರಿಗೆ ಸಂಬಂಧಿಸಿದ ಧ್ವನಿ ವರ್ಧನೆಯ ವಲಯವು, 1970ರ ದಶಕದಿಂದಲೂ ಬೋಸ್‌ ಕಾರ್ಪೊರೇಷನ್‌ನಲ್ಲಿ ಸಂಶೋಧನೆ ಹಾಗೂ ಉತ್ಪನ್ನ ಅಭಿವೃದ್ಧಿಯ ಒಂದು ಕ್ಷೇತ್ರವಾಗಿ ತನ್ನ ಪಾತ್ರವನ್ನು ವಹಿಸುತ್ತಾ ಬಂದಿದೆ. ಇದರೊಡನೆ ಬರುವ ಸಹವರ್ತಿ ಅಂಶಗಳು ಸಂಕೀರ್ಣವಾಗಿದ್ದು ಅದರಲ್ಲಿ ಸಂಗೀತಗಾರನಿಗೆ ಹಾಗೂ ತಂಡದ ಒಡನಾಡಿ ಸಂಗೀತಗಾರರಿಗೆ ಸಂಬಂಧಿಸಿದ ಉಪಕರಣದ ಯುಕ್ತವಾದ ವರ್ಧನೆಯು ಸೇರಿಕೊಂಡಿದೆ; ಅಷ್ಟೇ ಅಲ್ಲ, ಪ್ರೇಕ್ಷಕರು ವಿಧಿಸುವ ಹೊಂದಿಕೊಳ್ಳದಿರುವ ಅವಶ್ಯಕತೆಗಳೂ ಸಹ ಈ ಸಂಕೀರ್ಣ ವಿಷಯಗಳಲ್ಲಿ ಸೇರಿದ್ದು, ಅದರ ಚರ್ಚೆಯು ಈ ಲೇಖನದ ವ್ಯಾಪ್ತಿಯ ಆಚೆಗಿದೆ. ವ್ಯಕ್ತಿ ವಿಶಿಷ್ಟವಾಗಿಸಲ್ಪಟ್ಟ ವರ್ಧನಾ ಉತ್ಪನ್ನವು ಬೋಸ್‌ ಕಂಪನಿಯು ಅತ್ಯಂತ ಇತ್ತೀಚಿನ ಉಪಕರಣ ವ್ಯವಸ್ಥೆಯಾಗಿದೆ.[೩೬] "L1" ಎಂಬ ಹೆಸರನ್ನಿಟ್ಟುಕೊಂಡಿರುವ ಈ ವ್ಯವಸ್ಥೆಯು ಒಂದು ಲಂಬವಾದ, ಒಯ್ಯವಿಕೆಗೆ ಅನುಸಾರವಾಗಿರುವ ಸ್ಪೀಕರ್‌ ಶ್ರೇಣಿಯಾಗಿದ್ದು ಧ್ವನಿಯ ವಿಶಾಲವಾದ ಮುಂಭಾಗದ-ಹರಡುವಿಕೆಯನ್ನು ಹೊಂದಿದೆ.

2003ರ ಅಕ್ಟೋಬರ್‌ 15ರಂದು ತನ್ನ ಆಂತರಿಕ ಮಾರಾಟ ವಿಭಾಗ ಹಾಗೂ ಆಯ್ದ ಮಾರಾಟಗಾರರ ಮೂಲಕ L1 ಮಾದರಿ I ಶ್ರೇಣಿಯ ಉತ್ಪನ್ನಗಳನ್ನು ಮಾರಾಟ ಮಾಡಲು ಬೋಸ್‌ ಕಾರ್ಪೊರೇಷನ್‌ ಪ್ರಾರಂಭಿಸಿತು. ಬೆಂಬಲಕ್ಕೆ ಸಂಬಂಧಿಸಿದಂತೆ ಒಂದು ಸಕ್ರಿಯವಾದ ಮ್ಯೂಸಿಷಿಯನ್ಸ್‌ ಕಮ್ಯುನಿಟಿ ಮೆಸೇಜ್‌ ಬೋರ್ಡ್‌‌‌‌ Archived 2011-03-09 at the Wayback Machine. ನ್ನು (ಸಂಗೀತಗಾರರ ಸಮುದಾಯದ ಸಂದೇಶ ಫಲಕ) ಬೋಸ್‌ ನಿರ್ವಹಿಸುತ್ತದೆ ಹಾಗೂ ಮಾಲೀಕ ನಿರ್ವಹಣೆಯ ಒಂದು ಅನ್‌ಅಫಿಷಿಯಲ್‌ ವಿಕಿ ಅಂಡ್‌ FAQ ವ್ಯವಸ್ಥೆಯೂ ಸಹ ಅಸ್ತಿತ್ವದಲ್ಲಿದೆ.

ಬೋಸ್‌-ಎಲೆಕ್ಟ್ರೋಫೋರ್ಸ್‌[ಬದಲಾಯಿಸಿ]

ಸಾಮಗ್ರಿಗಳನ್ನು ಪರೀಕ್ಷಿಸುವ ಸಾಧನದ ಅಭಿವೃದ್ಧಿ, ತಯಾರಿಕೆ ಹಾಗೂ ಮಾರಾಟಕ್ಕೆ ಸಂಬಂಧಿಸಿದ ಕಂಪನಿಯ ಸ್ವತ್ತುಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡ ಬೋಸ್‌, 2004ರಲ್ಲಿ ಎಲೆಕ್ಟ್ರೋಫೋರ್ಸ್‌ ಸಿಸ್ಟಮ್ಸ್‌ ಗ್ರೂಪ್‌‌‌ Archived 2007-03-29 at the Wayback Machine. ನ್ನು ಹುಟ್ಟುಹಾಕಿತು. ವಿಶ್ವಾದ್ಯಂತವಿರುವ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ವೈದ್ಯಕೀಯ ಸಾಧನ ಕಂಪನಿಗಳು ಹಾಗೂ ಎಂಜಿನಿಯರಿಂಗ್‌ ಸಂಘಟನೆಗಳಿಗೆ ಸಾಮಗ್ರಿಗಳನ್ನು ಪರೀಕ್ಷಿಸುವ ಹಾಗೂ ಬಾಳಿಕೆಯ ಅನುಕರಣದ ಉಪಕರಣಗಳನ್ನು ಎಲೆಕ್ಟ್ರೋಫೋರ್ಸ್‌ ಸಿಸ್ಟಮ್ಸ್‌ ಗ್ರೂಪ್‌ ಒದಗಿಸುತ್ತದೆ.

ಗೃಹಬಳಕೆಯ ಶ್ರವಣ ಸಾಧನ ಉತ್ಪನ್ನಗಳ ಶ್ರೇಣಿ[ಬದಲಾಯಿಸಿ]

ಬಹುಮಾಧ್ಯಮ ವ್ಯವಸ್ಥೆಗಳು[ಬದಲಾಯಿಸಿ]

ಸ್ಪೀಕರ್‌ ವ್ಯವಸ್ಥೆಗಳು[ಬದಲಾಯಿಸಿ]

ಗೃಹಬಳಕೆಯ ಮನರಂಜನಾ ವ್ಯವಸ್ಥೆಗಳು[ಬದಲಾಯಿಸಿ]

ಬೋಸ್‌ ಕುರಿತಾದ ಅಭಿಪ್ರಾಯಗಳು[ಬದಲಾಯಿಸಿ]

"ಬೋಸ್‌ ಗುಣಮಟ್ಟ"ದ ಕುರಿತಾದ ಚರ್ಚೆಯು ಕೆಲವೊಮ್ಮೆ ಬಲವಾದ, ಹಾಗೂ ಪರಸ್ಪರ ವಿರುದ್ಧದ ಅಭಿಪ್ರಾಯಗಳನ್ನು ಹೊರಸೆಳೆಯಬಹುದು. ಎರಡು ಪ್ರಮುಖ ಪಕ್ಷಗಳು ಈ ಚರ್ಚೆಯಲ್ಲಿ ಇರುವಂತೆ ತೋರುತ್ತದೆ: ಚೆನ್ನಾಗಿರುವ ಉನ್ನತ-ವರ್ಗದ ಶ್ರವಣ ಸಾಧನದ ಓರ್ವ ತಯಾರಕನಾಗಿ ಬೋಸ್‌ ಕಂಪನಿಯನ್ನು ನೋಡುವವರದು ಒಂದು ಗುಂಪಾದರೆ, ಅನ್ಯಥಾ ಸಾಧಾರಣವಾಗಿರುವ ಉತ್ಪನ್ನಗಳಿಗೆ ಸಂಬಂಧಿಸಿದಂತೆ ದುಬಾರಿಯಾದ ಸಮರ್ಥನೆಗಳನ್ನು ಮಾಡಲು ಮಾರಾಟಗಾರಿಕೆಯನ್ನು ಬಳಸಿಕೊಳ್ಳುವ ಒಂದು ಕಂಪನಿಯಾಗಿ ಬೋಸ್‌ ಕಂಪನಿಯನ್ನು ನೋಡುವ ಇತರರದು ಮತ್ತೊಂದು ಗುಂಪಾಗಿದೆ.

ಈ ಚರ್ಚೆಯ ವ್ಯಾಪ್ತಿಗೆ ಆಚೆಯಿರುವ ಬಳಕೆದಾರ-ಮಟ್ಟದ ಕೆಲವೊಂದು ಪ್ರಕಟಣೆಗಳಲ್ಲಿ, ಉನ್ನತ-ವರ್ಗದ ಶ್ರವಣ ಉಪಕರಣ ವ್ಯವಸ್ಥೆಗಳ ಓರ್ವ ತಯಾರಕನಾಗಿ ಬೋಸ್‌ ಪರಿಗಣಿಸಲ್ಪಟ್ಟಿದೆ.[೨][೩][೩೭][೩೮][೩೯][೪೦] ಫಾರಿಸ್ಟರ್‌ ರಿಸರ್ಚ್‌ ಎಂಬ ಹೆಸರಿನ ಒಂದು ಸ್ವತಂತ್ರ ಮಾರುಕಟ್ಟೆ ಸಂಶೋಧನಾ ಸಂಸ್ಥೆಯಿಂದ 2006ರ ಮಾರ್ಚ್‌ನಲ್ಲಿ ಪ್ರಕಟಿಸಲ್ಪಟ್ಟ ಒಂದು ಮಾರುಕಟ್ಟೆ ಅಧ್ಯಯನವು ವರದಿಮಾಡಿರುವಂತೆ, ಬಳಕೆದಾರ-ವಿದ್ಯುನ್ಮಾನ ಸಾಧನಗಳು ಅಥವಾ ಕಂಪ್ಯೂಟರ್‌‌ ಬ್ರಾಂಡ್‌ ಹೆಸರುಗಳ ಪೈಕಿಯ 3 ಅತ್ಯಂತ ವಿಶ್ವಾಸಾರ್ಹ ಬ್ರಾಂಡ್‌ ಹೆಸರುಗಳಲ್ಲಿ (US ಜನಸಂಖ್ಯೆಯ ಆಧಾರದ ಮೇಲೆ) ಬೋಸ್‌ನ ಬ್ರಾಂಡ್‌ ಹೆಸರು ಸ್ಥಾನವನ್ನು ಗಳಿಸಿತ್ತು.[೪೧]

1968ರಲ್ಲಿ, "ಧ್ವನಿವರ್ಧಕ ಯಂತ್ರಗಳ ವಿನ್ಯಾಸ, ಮಾಪನ ಹಾಗೂ ಮೌಲ್ಯಮಾಪನದ ಕುರಿತು" (ಆನ್‌ ದಿ ಡಿಸೈನ್‌, ಮೆಷರ್‌ಮೆಂಟ್‌ ಅಂಡ್‌ ಎವಾಲ್ಯುಯೇಷನ್‌ ಆಫ್‌ ಲೌಡ್‌ ಸ್ಪೀಕರ್ಸ್‌) ಎಂಬ ಶೀರ್ಷಿಕೆಯ ಒಂದು ಶ್ರೇಷ್ಠ ಅಧ್ಯಯನಾ ಲೇಖನವನ್ನು ಆಡಿಯೋ ಎಂಜಿನಿಯರಿಂಗ್‌ ಸೊಸೈಟಿಗೆ ಅಮರ್‌‌ ಬೋಸ್‌ ಸಲ್ಲಿಸಿದ; ಇದು AESನಿಂದ ಒಂದು ಅಲ್ಪ ವೆಚ್ಚದಲ್ಲಿ ದೊರೆಯುತ್ತದೆ.[೪೨] ಈ ಲೇಖನದಲ್ಲಿದ್ದ ತರ್ಕವನ್ನು ಅನುಸರಿಸಿ, ಸಾಧಾರಣ ಕೇಳುಗನಿಂದ ತೀರ್ಮಾನಿಸಲ್ಪಟ್ಟಂತೆ, ಉನ್ನತ ಗುಣಮಟ್ಟವನ್ನು ಒದಗಿಸಲು ವೆಚ್ಚ ಹಾಗೂ ಕಾರ್ಯಕ್ಷಮತೆಯ ನಡುವಿನ ಒಂದು ಆರ್ಥಿಕ ಸಮತೋಲನವನ್ನು ಕಂಡುಕೊಳ್ಳಲು ಬೋಸ್‌ ಕಾರ್ಪೊರೇಷನ್‌ ಪ್ರಯತ್ನಪಡುತ್ತಾ ಬಂದಿದೆ; ಸಾಧಾರಣ ಕೇಳುಗನ ಗುಣಮಟ್ಟದ ಮಾನದಂಡಗಳಲ್ಲಿ ಒಂದು ಪ್ರತ್ಯಕ್ಷ ಕಾರ್ಯಕ್ರಮದಲ್ಲಿನ ಕೇಳುಗನ ಅನುಭವದ ವಿಶ್ವಾಸಾರ್ಹ ಪುನರುತ್ಪಾದನೆಯು ಒಳಗೊಂಡಿದ್ದು, ಇದಕ್ಕೆ ಬೋಸ್‌ ಕಂಪನಿಯ ಅನುಸಾರ ಕೇಳುವ ಸ್ಥಳಾವಕಾಶದಲ್ಲಿನ (ಒಂದು ವಿಶಿಷ್ಟವಾದ ಮನೆಯ ಪರಿಸರ) ಪ್ರತಿಧ್ವನಿಸುವ ಧ್ವನಿ ಕ್ಷೇತ್ರದ ಒಂದು ಪ್ರಬಲ ಪರಿಣಾಮದ ಅಗತ್ಯವಿರುತ್ತದೆ. (ನೋಡಿ: ಆಡಿಯೋಫಿಲ್ಲೆ ಬಿಲೀಫ್ಸ್‌ ).

ಟೀಕೆಗಳು[ಬದಲಾಯಿಸಿ]

901 ಮಾದರಿಯ ವ್ಯವಸ್ಥೆಯ ಕುರಿತಾಗಿ 1979ರಲ್ಲಿ[೪೩] ಮಾಡಿದ ಒಂದು ವಿಮರ್ಶೆಯಲ್ಲಿ ಬೋಸ್‌ನ ಸಾಧನ ವ್ಯವಸ್ಥೆಗಳು ಸ್ಟೀರಿಯೋಫಿಲೆಯಿಂದ ಟೀಕಿಸಲ್ಪಟ್ಟವು; ಸದರಿ ನಿಯತಕಾಲಿಕದ ಅಭಿಪ್ರಾಯದಲ್ಲಿ ನಮೂದಿಸಲ್ಪಟ್ಟಂತೆ, ಈ ವ್ಯವಸ್ಥೆಯು ಅಸಾಧಾರಣವಲ್ಲದ ಗುಣ-ಲಕ್ಷಣವನ್ನು ಹೊಂದಿತ್ತು ಮತ್ತು ಕರಾರುವಾಕ್ಕಾದ ಮಾದರಿಯಾಗಿಸುವಿಕೆ, ವಿವರ, ಹಾಗೂ ನಾದಗುಣದಂಥ ಅಂಶಗಳಲ್ಲಿ ಒಂದು ಮುಂದುವರೆದ ಅಭಿರುಚಿಯನ್ನು ಹೊಂದಿದ್ದ ಪರಿಫೂರ್ಣತಾವಾದಿಗಳನ್ನು ಇದು ಆಕರ್ಷಿಸುವುದು ಅಸಂಭವವಾಗಿತ್ತು. ಅಷ್ಟೇ ಅಲ್ಲ, ಬೃಹತ್‌ ಪ್ರಮಾಣದ ಪ್ರತಿಫಲಿತ ಧ್ವನಿಯಿಂದ [ಅಕ್ಷದ ಮೇಲಿನ ಧ್ವನಿಗೆ] ಸೃಷ್ಟಿಸಲ್ಪಟ್ಟ ಪ್ರಭಾವ ಹಾಗೂ ಪರಿಸರದಲ್ಲಿ ಸುಧಾರಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಈ ನ್ಯೂನತೆಗಳು ಪಾವತಿಸಬೇಕಿದ್ದ ಒಂದು ಹೆಚ್ಚುವರಿ ಬೆಲೆಯಾಗಿದ್ದವು. ಆದಾಗ್ಯೂ, ಬೇರಾವುದೇ ಸ್ಪೀಕರ್‌ ವ್ಯವಸ್ಥೆಗಿಂತ ಸ್ವಾಭಾವಿಕ ಪರಿಸರದ ಒಂದು ವಾಸ್ತವಿಕ ಹೋಲಿಕೆಯನ್ನು ಈ ವ್ಯವಸ್ಥೆಯು ಸೃಷ್ಟಿಸಿತು ಎಂದೂ ಸಹ ಲೇಖಕ ತನ್ನ ಅಭಿಪ್ರಾಯವನ್ನು ಮಂಡಿಸಿದ.

ಬೋಸ್‌ ಕಂಪನಿಯ ಕೆಲವೊಂದು ನಿರ್ದಿಷ್ಟ ಶ್ರವಣ ಸಾಧನಗಳ ರೇಖೀಯವಲ್ಲದ ಕಂಪನಾಂಕ ಪ್ರತಿಸ್ಪಂದನೆಯ ಕುರಿತಾಗಿ ಶ್ರವಣ ಸಾಧನದ ವೇದಿಕೆಗಳು ಅಭಿಪ್ರಾಯವನ್ನು ವ್ಯಕ್ತಪಡಿಸುವೆಡೆಗೆ ಒಲವು ತೋರಿವೆ. PC ಮ್ಯಾಗಝೀನ್‌‌‌ನಲ್ಲಿನ ಓರ್ವ ವಿಮರ್ಶಕನ ಅಭಿಪ್ರಾಯದ ಪ್ರಕಾರ, ಬೋಸ್‌ ಕಂಪನಿಯು ಉನ್ನತ-ವರ್ಗದ ಶ್ರವಣ ಉಪಕರಣ ವ್ಯವಸ್ಥೆಗಳ ಓರ್ವ ತಯಾರಕನಲ್ಲ; ಏಕೆಂದರೆ ಒಂದು ಉನ್ನತ-ವರ್ಗದ ವ್ಯವಸ್ಥೆಯು ಬೀರಬೇಕಿದ್ದ ಪರಿಣಾಮದ ರೀತಿಯಲ್ಲಿ ಅದು ಅವನ ನಿರೀಕ್ಷೆಗಳನ್ನು ಈಡೇರಿಸಲಿಲ್ಲ.[೪೪] (ಶ್ರವ್ಯ ರೋಹಿತ (ಆಡಿಬಲ್‌ ಸ್ಪೆಕ್ಟ್ರಮ್‌), ಮತ್ತು ಕರಾರುವಾಕ್ಕಾದ ಆವೇಗ ಪ್ರತಿಸ್ಪಂದನೆಯ ಮೂಲಕವಿರುವ ಒಂದು ಮಟ್ಟಸವಾದ ಕಂಪನಾಂಕದ ಪ್ರತಿಸ್ಪಂದನಾ ತಿರುವನ್ನು ವ್ಯಾಪಕವಾಗಿ-ಪರಿಗಣಿಸಲ್ಪಟ್ಟ 'ಉನ್ನತ-ವರ್ಗದ' ಶ್ರವಣ ಉಪಕರಣ ವ್ಯವಸ್ಥೆಗಳ ಕಾರ್ಯಕ್ಷಮತೆಯ ಗುಣಲಕ್ಷಣಗಳು ವಿಶಿಷ್ಟವಾಗಿ ಒಳಗೊಂಡಿರುತ್ತದೆ.) ಬೋಸ್‌ ಕಂಪನಿಯು ತನ್ನ ಉತ್ಪನ್ನಗಳಿಗೆ ಹೆಚ್ಚುಬೆಲೆಯನ್ನು ನಿಗದಿಮಾಡುತ್ತದೆ ಎಂದು ಆರೋಪಿಸುವ ಹಾಗೂ ಬೋಸ್‌ ಉತ್ಪನ್ನಗಳಿಂದ ಸೃಷ್ಟಿಸಲ್ಪಡುವ ಧ್ವನಿಯ ಗುಣಮಟ್ಟವನ್ನು ಟೀಕಿಸುವ, ಶ್ರವಣ ಉಪಕರಣದ ಉತ್ಸಾಹಿಗಳ ಟೀಕೆಗಳು ಆನ್‌ಲೈನ್‌ ವೇದಿಕೆಗಳಲ್ಲಿ ಆಗಿಂದಾಗ್ಗೆ ಕಂಡುಬರುತ್ತವೆ. ಇದರ ಜೊತೆಗೆ, ನಿರ್ದಿಷ್ಟವಾದ ವಿಶಿಷ್ಟ ತಾಂತ್ರಿಕ ಲಕ್ಷಣಗಳನ್ನು ಬೋಸ್‌ ಪ್ರಕಟಿಸುವುದಿಲ್ಲ; ಮತ್ತು 2008ರ ನವೆಂಬರ್‌ 21ರ ವೇಳೆಗೆ ಇದ್ದಂತೆ ಬೋಸ್‌ನ ಉತ್ಪನ್ನಗಳ ಪೈಕಿ ಯಾವೊಂದು ಉತ್ಪನ್ನವೂ THX ಪ್ರಮಾಣಿತಗೊಂಡಿಲ್ಲ. ಕೇಳುಗನು ಏನನ್ನು ಕೇಳಿಸಿಕೊಳ್ಳುತ್ತಾನೋ ಅದು ಅತ್ಯಂತ ಮುಖ್ಯವಾದುದರಿಂದ, ವಿಶಿಷ್ಟವಾದ ತಾಂತ್ರಿಕ ಲಕ್ಷಣಗಳ ಪ್ರಕಟಣೆಯು ಅರ್ಥರಹಿತ[ಸೂಕ್ತ ಉಲ್ಲೇಖನ ಬೇಕು] ಎಂದು ಬೋಸ್‌ ಸಮರ್ಥಿಸುತ್ತದೆ.

ಕಾನೂನು ಕ್ರಮ[ಬದಲಾಯಿಸಿ]

ಮಾನನಷ್ಟದ ಹುಸಿಹೇಳಿಕೆಗೆ ಸಂಬಂಧಿಸಿದಂತೆ ಕನ್ಸ್ಯೂಮರ್‌ ರಿಪೋರ್ಟ್ಸ್‌ ಎಂಬ ನಿಯತಕಾಲಿಕದ ವಿರುದ್ಧ 1981ರಲ್ಲಿ ಬೋಸ್‌ ಕಂಪನಿಯು ಹೂಡಿದ ದಾವೆಯು ವಿಫಲಗೊಂಡಿತು. ಪತ್ರಿಕೆಯು ವಿಮರ್ಶೆಗೆ ಒಳಪಡಿಸಿದ್ದ ಶ್ರವಣ ವ್ಯವಸ್ಥೆಯೊಂದರಿಂದ ಹೊರಹೊಮ್ಮಿದ ಧ್ವನಿಯು "ಕೋಣೆಯಲ್ಲೆಲ್ಲಾ ಸುತ್ತಾಡಿ ಬರುವ ಪ್ರವೃತ್ತಿಯನ್ನು ಹೊಂದಿತ್ತು" ಎಂದು ಕನ್ಸ್ಯೂಮರ್‌ ರಿಪೋರ್ಟ್ಸ್‌ ನಿಯತಕಾಲಿಕವು ತನ್ನ ವಿಮರ್ಶೆಯಲ್ಲಿ ಉಲ್ಲೇಖಿಸಿತ್ತು. ಆರಂಭದಲ್ಲಿ, ಒಕ್ಕೂಟದ ಜಿಲ್ಲಾ ನ್ಯಾಯಾಲಯವು (ಫೆಡರಲ್‌ ಡಿಸ್ಟ್ರಿಕ್ಟ್‌ ಕೋರ್ಟ್‌) ಕಂಡುಕೊಂಡ ಪ್ರಕಾರ, ಕನ್ಸ್ಯೂಮರ್‌ ರಿಪೋರ್ಟ್ಸ್‌ ನಿಯತಕಾಲಿಕವು "ಹೇಳಿಕೆಯು ತಪ್ಪಾಗಿತ್ತು ಎಂಬ ಅರಿವಿನೊಂದಿಗೆ ಅಥವಾ, ಅದರ ಸತ್ಯ ಅಥವಾ ತಪ್ಪಾದ ಹೇಳಿಕೆಯ ಅಜಾಗರೂಕ ಉಪೇಕ್ಷೆಯೊಂದಿಗೆ ತಪ್ಪು ಹೇಳಿಕೆಯನ್ನು ಪ್ರಕಟಿಸಿತ್ತು; ಧ್ವನಿಯು "ಗೋಡೆಯ ಉದ್ದಕ್ಕೂ" ಸುತ್ತಾಡಿಕೊಂಡು ಬರುವ ಪ್ರವೃತ್ತಿಯನ್ನು ಹೊಂದಿತ್ತು ಎಂಬುದಾಗಿ ಮೂಲ ವಿಮರ್ಶಕನು ತಮ್ಮ ಪ್ರಕಟಣಾ-ಪೂರ್ವ ಕರಡುಪ್ರತಿಯಲ್ಲಿ ಸ್ಪೀಕರ್‌ಗಳ ಕುರಿತಾಗಿ ಬರೆದಿದ್ದನ್ನು ಅದು ಬದಲಾಯಿಸಿದಾಗ ಇದು ಸಂಭವಿಸಿತ್ತು. ಹೊಣೆಯ ಕುರಿತಾದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಮೇಲ್ಮನವಿಗಳ ನ್ಯಾಯಾಲಯವು ಆಗ ರದ್ದುಮಾಡಿತು; ಅಷ್ಟೇ ಅಲ್ಲ, ಬೋಸ್‌ ಕಾರ್ಪೊರೇಷನ್‌‌ vs ಕನ್ಸ್ಯೂಮರ್ಸ್‌ ಯೂನಿಯನ್‌ ಆಫ್‌ ಯುನೈಟೆಡ್‌ ಸ್ಟೇಟ್ಸ್‌‌, ಇಂಕ್‌‌. ಪ್ರಕರಣದಲ್ಲಿ, ಹೇಳಿಕೆಯು ವಾಸ್ತವಿಕ ದುರುದ್ದೇಶವಿಲ್ಲದೆ ಮಾಡಲ್ಪಟ್ಟಿರುವುದರಿಂದ ಮಾನನಷ್ಟದ ಹುಸಿಹೇಳಿಕೆಗೆ ಸಂಬಂಧಿಸಿದಂತೆ ಅಲ್ಲಿ ಯಾವುದೇ ಹೊಣೆಗಾರಿಕೆ ಕಂಡುಬರುತ್ತಿಲ್ಲ ಎಂಬುದನ್ನು ಕಂಡುಕೊಳ್ಳುವ ಮೂಲಕ, ಸದರಿ ರದ್ದಿಯಾತಿಯನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸರ್ವೋಚ್ಚ ನ್ಯಾಯಾಲಯವು ಒಂದು 6-3 ಮತದಲ್ಲಿ ಎತ್ತಿಹಿಡಿಯಿತು.[೪೫][೪೬][೪೭]

ಆಕರಗಳು[ಬದಲಾಯಿಸಿ]

 1. "Spotlight: Amar Bose, the guru of sound design", International Herald Tribune, May 11, 2007
 2. ೨.೦ ೨.೧ C|ನೆಟ್‌ "ಕ್ಲಾಸಿ ಕಾಂಪ್ಯಾಕ್ಟ್ಸ್‌: ಹೈ-ಎಂಡ್‌ CD ರೇಡಿಯೋಸ್‌"
 3. ೩.೦ ೩.೧ ದಿ ರಿಜಿಸ್ಟರ್‌ "ಬೋಸ್‌ ಸೌಂಡ್‌ಡಾಕ್‌ ಐಪಾಡ್‌ ಸ್ಪೀಕರ್ಸ್‌"
 4. ೪.೦ ೪.೧ MIT "ಇನ್ವೆಂಟರ್‌ ಆಫ್‌ ದಿ ವೀಕ್‌ ಆರ್ಕೀವ್‌"
 5. ಸಿಸ್ಕೊ ನಾಸಾ ಪ್ರಕಟಣೆ
 6. "Twice.com PoS ಲೇಖನ". Archived from the original on 2011-07-17. Retrieved 2010-07-09.
 7. ಒಂದು ಉನ್ನತ-ವರ್ಗದ ಮೋಟಾರು ವಾಹನಗಳಲ್ಲಿ ಬೋಸ್‌ ತನ್ನ ಶ್ರವಣ ಸಾಧನ ವ್ಯವಸ್ಥೆಗಳನ್ನು ಅಳವಡಿಸುತ್ತದೆ ಎಂಬುದನ್ನು ಉಲ್ಲೇಖಿಸಿರುವ ಫೋರ್ಬ್ಸ್‌ ಲೇಖನ
 8. "ತನ್ನ ಶ್ರವಣ ಸಾಧನ ವ್ಯವಸ್ಥೆಗಳನ್ನು ಲಗತ್ತಿಸುವ ಉನ್ನತ-ವರ್ಗದ ಮೋಟಾರು ವಾಹನಗಳ ಒಂದು ಪಟ್ಟಿಯನ್ನು ನೀಡುವ, ಮೋಟಾರು ವಾಹನಗಳಿಗೆ ಸಂಬಂಧಿಸಿದ ಬೋಸ್‌ ತಾಣಕ್ಕೆ ಕೊಂಡಿ". Archived from the original on 2010-02-10. Retrieved 2010-07-09.
 9. ಬೋಸ್‌ ಮೋಟಾರು ವಾಹನಗಳಿಗೆ ಸಂಬಂಧಿಸಿದ ತಾಣ
 10. ೧೦.೦ ೧೦.೧ "ಅಮರ್‌‌ ಬೋಸ್‌ನ "ತಂಪು ಬೆಸುಗೆ ಸಂಶೋಧನೆ"ಗೆ ಸಂಬಂಧಿಸಿದಂತೆ ಇರುವ ಡಿಸ್ಕವರ್‌ ನಿಯತಕಾಲಿಕದ ಸಂದರ್ಶನ". Archived from the original on 2012-10-10. Retrieved 2021-08-29.
 11. ೧೧.೦ ೧೧.೧ "ವಿಲಿಯಂ M. ಬಲ್ಕೆಲಿ, ದಿ ವಾಲ್‌ ಸ್ಟ್ರೀಟ್‌ ಜರ್ನಲ್‌, 31ನೇ ಡಿಸೆಂಬರ್‌ 1996" (PDF). Archived from the original (PDF) on 2011-07-16. Retrieved 2010-07-09.
 12. ೧೨.೦ ೧೨.೧ ಅಂತ್ಯದಲ್ಲಿ ತಂಪು ಬೆಸುಗೆ ಸಂಶೋಧನೆಯ ಕುರಿತಾದ ಉಲ್ಲೇಖಗಳನ್ನು ಮಾಡುವ ಅಕ್ಷಾಧಾರದ ಕುರಿತಾದ ಲೇಖನ Archived 2010-04-15 at the Wayback Machine. ತಂಪು ಬೆಸುಗೆ ಸಂಶೋಧನೆಯ ಕುರಿತಾದ ಉಲ್ಲೇಖಗಳನ್ನು ಅಂತ್ಯದಲ್ಲಿ ಮಾಡುವ ಅಕ್ಷಾಧಾರದ ಕುರಿತಾದ ಲೇಖನ Archived 2010-04-15 at the Wayback Machine.
 13. "Bose Headsets used by Sonar Operators". Archived from the original on 2006-08-30. Retrieved 2006-08-30.
 14. "ಏರೋಸ್ಪೇಸ್‌ ನ್ಯೂಸ್‌". Archived from the original on 2012-08-30. Retrieved 2010-07-09.
 15. US ಸೇನೆಯಿಂದ ಬಳಸಲ್ಪಡುವ ಬೋಸ್‌ ಕ್ರ್ಯೂಮನ್‌ ಹೆಡ್‌ಫೋನ್‌ಗಳು
 16. ಫೋರ್ಬ್ಸ್‌ ನಿಯತಕಾಲಿಕದಲ್ಲಿನ ಅಮರ್‌‌ ಬೋಸ್ ಜೀವನಚರಿತ್ರೆ‌
 17. ೧೭.೦ ೧೭.೧ "MSNBC "ಎ ಕಾರ್‌ ದಟ್‌ ಕೆನ್‌ ಜಂಪ್‌ ಓವರ್‌ ಅಬ್ಸ್ಟಕಲ್ಸ್‌"". Archived from the original on 2010-04-15. Retrieved 2010-07-09.
 18. ೧೮.೦ ೧೮.೧ ೧೮.೨ "ಯೂನಿವರ್ಸಿಟಿ ಆಫ್‌ ಮ್ಯಾಸಚೂಸೆಟ್ಸ್‌: ಪಯನೀರ್ಸ್‌ ಆಫ್‌ ಇನ್ನೊವೇಷನ್‌ - ಶೆರ್ವಿನ್‌ ಗ್ರೀನ್‌ಬ್ಲಾಟ್‌ ಕಾನ್ವರ್ಸೇಷನ್‌". Archived from the original on 2012-12-02. Retrieved 2010-07-09.
 19. ಬೋಸ್‌ ಕೇಂದ್ರ ಕಾರ್ಯಾಲಯದ ಉಪಗ್ರಹ ನೋಟ
 20. bizjournals.com-ಬೋಸ್‌ ನಿಕ್ಸಸ್‌ N.Y. ಎಕ್ಸ್‌ಪ್ಯಾನ್ಷನ್‌, ಚೂಸಸ್‌ ಸ್ಟೌ ಇನ್‌ಸ್ಟೆಡ್‌
 21. ಅಮರ್‌‌ ಬೋಸ್‌ ಸಂದರ್ಶನ
 22. "ಬೋಸ್‌ ಪ್ಯಾನರರಿ MA12 ಟೆಕ್ನಿಕಲ್‌ ಪೇಪರ್ಸ್‌" (PDF). Archived from the original (PDF) on 2012-02-29. Retrieved 2010-07-09.
 23. "ಧ್ವನಿವರ್ಧಕ ಯಂತ್ರಗಳ ವಿನ್ಯಾಸ, ಮಾಪನ, ಮತ್ತು ಮೌಲ್ಯಮಾಪನದ ಕುರಿತಾದ" ಅಮರ್‌‌ ಬೋಸ್‌ನ 1968ರ AES ಅಧ್ಯಯನ ಲೇಖನ
 24. "ಬೋಸ್‌ ಸಂಗೀತಗಾರರ ವೇದಿಕೆ". Archived from the original on 2011-07-06. Retrieved 2010-07-09.
 25. "ಬೋಸ್‌ನ ತರಂಗ ಸಂಗೀತ ವ್ಯವಸ್ಥೆಯ ಕುರಿತಾದ ಗ್ಯಾಡ್ಜೆಟ್‌ ಗೈ ವಿಮರ್ಶೆ". Archived from the original on 2007-09-28. Retrieved 2010-07-09.
 26. AES ಅಧ್ಯಯನ ಲೇಖನ
 27. ೨೭.೦ ೨೭.೧ ೨೭.೨ ೨೭.೩ ಬೋಸ್‌ ಮೋಟಾರು ವಾಹನದ ವ್ಯವಸ್ಥೆಗಳ ವಿಭಾಗ
 28. Frank Filipponio (2007-03-08). "Bose Media System debuts in Ferrari 612 Scaglietti". Retrieved 2007-06-07.
 29. ವರ್ಲ್ಡ್‌ ನ್ಯೂಸ್‌: ಫೈನಲಿಸ್ಟ್ಸ್‌ ರಿವೀಲ್ಡ್‌ ಫಾರ್‌ ದಿ 2007 ಟೆಲಿಮ್ಯಾಟಿಕ್ಸ್‌ ಅವಾರ್ಡ್ಸ್‌
 30. "ಆಟೋ ಟೆಕ್‌ "ಬೆಟರ್‌ ಲಿವಿಂಗ್‌ ಥ್ರೂ ಕ್ಯೂರಿಯಾಸಿಟಿ"". Archived from the original on 2007-12-29. Retrieved 2010-07-09.
 31. Bose bumps on YouTube
 32. ಇನ್‌‌ಸೈಡ್‌ ಲೈನ್‌ "ಬೋಸ್‌ ಸಸ್ಪೆನ್ಷನ್‌"
 33. French Interview "Suspension BOSE" on YouTube ಗೋ 3 ಮಿನಿಟ್ಸ್‌ ಅಂಡ್‌ 20 ಸೆಕೆಂಡ್ಸ್‌ ಇನ್‌ಟು ಇಟ್‌ ಟು ವ್ಯೂ ದಿ ಕಾರ್‌ ಜಂಪಿಂಗ್‌ ವಿತ್‌ ಬೋಸ್‌ ಸಸ್ಪೆನ್ಷನ್‌
 34. "ಬೋಸ್‌ ಸೇಸ್‌ ಸಸ್ಪೆನ್ಷನ್‌ ಡ್ರಾಯಿಂಗ್‌ ಇಂಟರೆಸ್ಟ್‌ ಫ್ರಂ OEMಸ್‌". Archived from the original on 2010-07-08. Retrieved 2010-07-09.
 35. "Case Stories - Bose Professional Products". Pro.bose.com. Archived from the original on 2009-04-20. Retrieved 2009-09-18.
 36. "L1 ವ್ಯವಸ್ಥೆಗಳಿಗೆ ಸಂಬಂಧಿಸಿದ Bose‌.com ವೆಬ್‌ಸೈಟ್‌". Archived from the original on 2010-12-22. Retrieved 2010-07-09.
 37. ಫೋರ್ಬ್ಸ್‌ ನಿಯತಕಾಲಿಕ – ಬೋಸ್‌ ಕಂಪನಿಯನ್ನು ಉನ್ನತ-ವರ್ಗದ ಉತ್ಪನ್ನಗಳ ಒಂದು ತಯಾರಕನಾಗಿ ವಿವರಿಸಿರುವುದು
 38. "ಪಾಪ್ಯುಲರ್‌ ಸೈನ್ಸ್‌ – ಬೋಸ್‌ ಕಂಪನಿಯನ್ನು ಉನ್ನತ-ವರ್ಗದ ಉತ್ಪನ್ನಗಳ ಒಂದು ತಯಾರಕನಾಗಿ ವಿವರಿಸಿರುವುದು". Archived from the original on 2007-12-29. Retrieved 2010-07-09.
 39. "PCMag.com -ಬೋಸ್‌ ಕಂಪನಿಯನ್ನು ಉನ್ನತ-ವರ್ಗದ ಉತ್ಪನ್ನಗಳ ಒಂದು ತಯಾರಕನಾಗಿ ವಿವರಿಸಿರುವುದು". Archived from the original on 2008-09-02. Retrieved 2010-07-09.
 40. "ಫ್ಲೈಯಿಂಗ್‌ಮ್ಯಾಗ್‌‌ ವಿಮರ್ಶೆ – ಬೋಸ್‌ ಕಂಪನಿಯನ್ನು ಉನ್ನತ-ವರ್ಗದ ಉತ್ಪನ್ನಗಳ ಒಂದು ತಯಾರಕನಾಗಿ ವಿವರಿಸಿರುವುದು". Archived from the original on 2008-09-04. Retrieved 2021-08-29.
 41. "ಫಾರಿಸ್ಟರ್‌‌ ರಿಸರ್ಚ್‌ – "ದಿ 2005 ಟೆಕ್ನಾಲಜಿ ಬ್ರಾಂಡ್‌ ಸ್ಕೋರ್‌ಕಾರ್ಡ್‌"". Archived from the original on 2015-01-29. Retrieved 2010-07-09.
 42. "ಧ್ವನಿವರ್ಧಕ ಯಂತ್ರಗಳ ವಿನ್ಯಾಸ, ಮಾಪನ ಹಾಗೂ ಮೌಲ್ಯಮಾಪನದ ಕುರಿತಾದ" AES
 43. ಸ್ಟೀರಿಯೋಫಿಲೆ ವಿಮರ್ಶೆ
 44. "PCMag.com – ಓರ್ವ ವಿಮರ್ಶಕನ ಅನುಸಾರ ಕೆಲವೊಂದು ಜನರು ಬೋಸ್‌ನ್ನು ಉನ್ನತ-ವರ್ಗದ ಉತ್ಪನ್ನಗಳ ಓರ್ವ ತಯಾರಕನಾಗಿ ನೋಡಿದರೆ, ಮತ್ತೆ ಕೆಲವು ಮಂದಿ ಬೋಸ್‌ನ್ನು ಉನ್ನತ-ವರ್ಗದ ಶ್ರವಣ ಉಪಕರಣ ವ್ಯವಸ್ಥೆಗಳ ಓರ್ವ ತಯಾರಕನಾಗಿ ಪರಿಗಣಿಸುವುದಿಲ್ಲ". Archived from the original on 2009-04-29. Retrieved 2010-07-09.
 45. "ಬೋಸ್‌ ಕಾರ್ಪೊರೇಷನ್‌ vs ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಬಳಕೆದಾರ ಸಂಘ ದ ಒಂದು ನಿರ್ದಿಷ್ಟ ಉದಾಹರಣೆಯನ್ನು ಸಾಮಾನ್ಯವಾಗಿ ನೀಡುವ ಮಾನನಷ್ಟದ ಹುಸಿಹೇಳಿಕೆಯ ಪ್ರಕರಣಗಳ ಮೇಲಿನ ವ್ಯಾಖ್ಯಾನ". Archived from the original on 2009-02-15. Retrieved 2010-07-09.
 46. ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯ
 47. "ಸರ್ವೋಚ್ಚ ನ್ಯಾಯಾಲಯದ ಅಧಿಕೃತ ತೀರ್ಪಿನ ಕುರಿತಾದ NY ಟೈಮ್ಸ್‌ ಸಂಪಾದಕೀಯ". Archived from the original on 2009-02-11. Retrieved 2021-08-29.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Bose