ಬೇವಿನ ಮರ

ವಿಕಿಪೀಡಿಯ ಇಂದ
Jump to navigation Jump to search
ಬೇವು
Neem (Azadirachta indica) in Hyderabad W IMG 6976.jpg
Azadirachta indica, flowers & leaves
Scientific classification
Kingdom:
(unranked):
(unranked):
Eudicots
(unranked):
Order:
Family:
Genus:
Species:
A. indica
Binomial name
Azadirachta indica==ಬೇವಿನ ಮರ==
Synonyms[೧][೨]
  • Azadirachta indica var. minor Valeton
  • Azadirachta indica var. siamensis Valeton
  • Azadirachta indica subsp. vartakii Kothari, Londhe & N.P.Singh
  • Melia azadirachta L.
  • Melia indica (A. Juss.) Brandis

ಬೇವಿನ ಮರವನ್ನು ಕನ್ನಡದಲ್ಲಿ ಒಳ್ಳೆ ಬೇವು, ಕಹಿಬೇವು, ಕಹಿನಿಂಬೆ ಮರ, ಕಹಿನಿಂಬ, ಇಸಬೇವು, ಬೇವು, ವಿಷಬೇವು, ಕಾಯಿಬೇವು ಎಂದು ಪ್ರಾಂತೀಯವಾರು ಗುರುತಿಸುತ್ತಾರೆ. ಬರ್ಮಾ ಮೂಲದ ಬೇವಿನ ಮರ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಬೇವಿನಮರ ಸುಮಾರು ೩೦ ರಿಂದ ೬೦ ಅಡಿ ಎತ್ತರದವರೆಗೆ ಬೆಳೆಯುತ್ತದೆ. ಬೇವಿನಮರ ಮಾರ್ಚ ಏಪ್ರಿಲ್ ತಿಂಗಳಿನಲ್ಲಿ ಗೊಂಚಲು ಗೊಂಚಲಾಗಿ ಸಣ್ಣ ಬಿಳಿಹೂಗಳನ್ನು ಬಿಡುತ್ತದೆ. ಬೇವಿನಮರದ ಹೂಗಳ ಪರಿಮಳ ಜೇನಿನ ಪರಿಮಳವನ್ನು ಹೋಲುತ್ತದೆ. ಭಾರತೀಯರಿಗೆ ಬೇವಿನಮರವು ಪೂಜನೀಯವಾಗಿ ಅವರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಭಾರತೀಯರು ಚಾಂದ್ರಮಾನ ಯುಗಾದಿ ಆಚರಣೆಯಲ್ಲಿ ಬೇವು ಬೆಲ್ಲವನ್ನು ಜೀವನದಲ್ಲಿ ಸಿಹಿ ಕಹಿಯನ್ನು ಸಮಾನವಾಗಿ ಪರಿಗಣಿಸಬೇಕೆಂದು ಸಾಂಕೇತಿಕವಾಗಿ ಬಳಸುತ್ತಾರೆ . ಭಾರತೀಯ ನಾಟೀ ವೈದ್ಯ ಪದ್ಧತಿ ಮತ್ತು ಆಯುರ್ವೇದ. ಚಿಕಿತ್ಸೆಯಲ್ಲಿ ಬೇವಿನಮರದ ಪ್ರತೀ ಭಾಗಗಳನ್ನು ಸುಮಾರು ೨೦೦೦೦ ವರ್ಷಗಳಿಗೂ ಹಿಂದಿನಿಂದ ಬಳಸುತ್ತಿದ್ದ ದಾಖಲೆಗಳು ಸಿಗುತ್ತದೆ[ಸೂಕ್ತ ಉಲ್ಲೇಖನ ಬೇಕು]. ಬೇವಿನಮರದ ಅಂಗಗಳಾದ ಎಲೆ , ತೊಗಟೆ, ಹೂ, ಹಣ್ಣು, ಕಡ್ಡಿ, ಬೀಜ, ಎಣ್ಣೆ ಹಾಗು ಬೇರುಗಳು ಔಷಧೀಯ ಗುಣಗಳನ್ನು ಮೈದುಂಬಿಕೊಂಡಿರುತ್ತವೆ[ಸೂಕ್ತ ಉಲ್ಲೇಖನ ಬೇಕು]. ವೈದ್ಯಕೀಯ ಲೋಕಕ್ಕೆ ಬೇವು ಒಂದು ಅದ್ಭುತ ಮರ. ಬೇವಿನಮರದಲ್ಲಿ ಸುಮಾರು ೧೩೫ಕ್ಕೂ ಹೆಚ್ಚು ರೋಗನಿವಾರಕ ಗುಣಗಳಿವೆ ಎಂದು ಇತ್ತೀಚಿನ ಸಂಶೋಧನೆ ತಿಳಿಸುತ್ತದೆ[ಸೂಕ್ತ ಉಲ್ಲೇಖನ ಬೇಕು]. ಬೇವಿನ ಮರದ ಉತ್ಪನಗಳನ್ನು ಪಶುವೈದ್ಯ. ಚಿಕಿತ್ಸೆಯಲ್ಲೂ ಬಳಸಲಾಗುತ್ತದೆ. ಇಷ್ಟೊಂದು ವೈವಿದ್ಯತೆಯನ್ನು ಮೈಗೂಡಿಸಿಕೊಂಡಿರುವ ಬೇವಿನಮರ ನಮ್ಮ. ಅಂಗಳದಲ್ಲಿ ಇದ್ದರೆ ಎಷ್ಟು ಚಂದ.ಮಾತ್ರವಲ್ಲ ನಾವು ವೈದ್ಯರಿಂದ ಬಹು ದೂರದಲ್ಲಿ ಹಾಯಾಗಿರಬಹುದು.

'ಕುಷ್ಠ, ತೂನ್ನು, ಕಣ್ಣಿನ, ತೂಂದರೆ , ಹೊಟ್ಟೆ ಹುಳು, ಕೆಮ್ಮು, ಉಬ್ಬಸ,ಪೈಲ್ಸ್, ಮದುಮೇಹ, ಕಾಮಾಲೆ, ಪ್ಲೇಗ್, ಇಸುಬು, ಅಲ್ಸರ್ ಜ್ವರ ದೋಷನಿವಾರಣೆಗೆ ಬಳಸಲ್ಪಡುತ್ತದೆ. ಬೇವು ಆರೋಗ್ಯ ಹೌದು ಅಷ್ಟೇ ಅಲ್ಲದೆ ಅನಾದಿ ಕಾಲದಿಂದಲೂ ಬೇವಿನ ಎಣ್ಣೆಯನ್ನು ಪರಿಣಾಮಕಾರಿ ಔಷಧ ಎಂದು ಸಾಬೀತಾಗಿದೆ[ಸೂಕ್ತ ಉಲ್ಲೇಖನ ಬೇಕು]. ಏಷ್ಯಾದ. ಕೆಲವು ದೇಶಗಳಲ್ಲಿ ಬೇವಿನ ಹೂವಿನಿಂದ. ತಯಾರಾದ ಜೇನು ವಿಶೇಷ ಬೆಲೆಯಲ್ಲಿ ಮಾರಾಟವಾಗುತ್ತಿದೆ.ಬೇವನ್ನು ಕಾಪಾಡಿ ಬೆಳೆಸುವುದರಿಂದ ಅದರ ಉ

Unripe Neem fruits

ಪಯೋಗವನ್ನು ಭೂಮಂಡಲದ ಎಲ್ಲಾ ಚರಾ ಚರಗಳಿಗೆ ವಿಸ್ತರಿಸಬಹುದು.

ಕರಿಬೇವಿನ ಚಿತ್ರಗಳು[ಬದಲಾಯಿಸಿ]

ಕಹಿಬೇವಿನ ಚಿತ್ರಗಳು[ಬದಲಾಯಿಸಿ]

ಸಂ: ನಿಂಬಾ

ಹಿಂ: ನೀಮ್

ಮ: ಲಿಂಬ

ಗು: ಲಿಂಬಾಡೋ

ತೆ: ವಿಂಬು

ತ: ನಿಂಬಾಮು

ವರ್ಣನೆ[ಬದಲಾಯಿಸಿ]

ದೊಡ್ಡಮರ. ಹಳ್ಳಿಗಳ ಊರ ಮುಂದಿನ ಕಟ್ಟೆಗಳಲ್ಲಿ ಸಾಮಾನ್ಯವಾಗಿ ಬೆಳೆಸುತ್ತಾರೆ. ಫೆಬ್ರವರಿ, ಎಪ್ರಿಲ್ ತಿಂಗಳಲ್ಲಿ ಹೂ ಬಿಡುತ್ತದೆ. ಸಾಲು ಮರಗಳಾಗಿ ಬೆಳೆಸುತ್ತಾರೆ. ಎಲೆಗಳು ಹಸಿರು ಮತ್ತು ಎದುರು ಬದಿರಾಗಿ ಇರುವುವು. ಹೂಗಳು ಚಿಕ್ಕವು ಮತ್ತು ಬೆಳ್ಳಗಿರುತ್ತವೆ. ಕಾಯಿಗಳು ಹಸಿರಾಗಿದ್ದು ಹಣ್ಣಾದಾಗ ಹಳದಿ ಬಣ್ಣವನ್ನು ಹೊಂದುತ್ತವೆ. ಹಣ್ಣನ್ನು ಹಿಚುಕಿದಾಗ ಬಿಳಿ ಅಂಟಾದ ದ್ರವವು ಹೊರಡುವುದು. ಮರದ ಗೋಂದು ಬೆಳ್ಳಗಿರುವುದು. ಇದರಲ್ಲಿ ಕಹಿಯಾದ “ಮಾರ್ಗೊಸೈನ್” ಅನ್ನುವ ಕಟು ಕ್ಷಾರವಿರುವುದು. ಬೇವು-ಬೆಲ್ಲ ಸೇವನೆ, ಜೀವನದ ಸಿಹಿ-ಕಹಿಗಳ ಸಂಗಮ.

ಸರಳ ಚಿಕಿತ್ಸೆಗಳು[ಬದಲಾಯಿಸಿ]

ಬೇವಿನಲ್ಲಿ ಕ್ರಿಮಿನಾಶಕ ಗುಣವಿದೆ. ಆದುದರಿಂದ ಹಲ್ಲುಜ್ಜಲು ಉಪಯುಕ್ತ. ಕಡ್ಡಿಯಲ್ಲಿ ಹಲ್ಲುಜ್ಜುವುದರಿಂದ ಬಾಯಿಯ ದುರ್ಗಂಧ ಹೋಗುವುದು.

ಅನಿದ್ರೆಯಲ್ಲಿ[ಬದಲಾಯಿಸಿ]

ಒಂದು ಹಿಡಿ ಹಸಿ ಬೇವಿನ ಸೊಪ್ಪನ್ನು ತಂದು ಕಲ್ಪತ್ತಿನಲ್ಲಿ ಹಾಕಿ ಹಾಲು ಸೇರಿಸಿ ನುಣ್ಣಗೆ ಅರೆಯಿರಿ ಮತ್ತು ಮಲಗುವುದಕ್ಕೆ ಮುಂಚೆ ಎರಡೂ ಅಂಗಾಲುಗಳಿಗೆ ಲೇಪಿಸಿ ತಿಕ್ಕಿರಿ.

ತಾಯಂದಿರ ಎದೆಹಾಲು ಇಂಗಲು[ಬದಲಾಯಿಸಿ]

ಒಂದು ಹಿಡಿ ಬೇವಿನ ಸೊಪ್ಪನ್ನು ನೀರು ಸೇರಿಸಿ ನುಣ್ಣಗೆ ಅರೆದು ಸ್ತನಗಳಿಗೆ(ತೊಟ್ಟನ್ನು ಬಿಟ್ಟು) ಪಟ್ಟು ಹಾಕಿರಿ.

ಅರಿಸಿನ ಕಾಮಾಲೆ[ಬದಲಾಯಿಸಿ]

ಒಂದು ಹಿಡಿ ಬೇವಿನ ಸೊಪ್ಪನ್ನು ಕಲ್ಪತ್ತಿನಲ್ಲಿ ಹಾಕಿ ನೀರು ಸೇರಿಸಿ ನುಣ್ಣಗೆ ಅರೆದು ಬಟ್ಟೆಯಲ್ಲಿ ಶೋಧಿಸಿ ರಸ ತೆಗೆದು ಸ್ವಲ್ಪ ಕೆಂಪು ಕಲ್ಲುಸಕ್ಕರೆ ಸೇರಿಸಿ, ಸೇವಿಸಿರಿ. ಹೊತ್ತಿಗೆ ಎರಡು ಟೀ ಚಮಚ ರಸ ಸಾಕು, ದಿವಸಕ್ಕೆ ಒಂದೇ ವೇಳೆ.

ಕುಷ್ಠ ರೋಗದಲ್ಲಿ[ಬದಲಾಯಿಸಿ]

ನಿಂಬಾದಿ ಲೇಹವನ್ನು ಕ್ರಮವಾಗಿ ಆರು ತಿಂಗಳು ಸೇವಿಸುವುದು.

ತೆಲೆಯಲ್ಲಿ ಹೇನು ಸೀರು ನವೆ[ಬದಲಾಯಿಸಿ]

ಹಸಿ ಬೇವಿನ ಬೀಜಗಳನ್ನು(ಒಣಗಿದ್ದಾದರೂ ಆಗಬಹುದು) ಶುಭ್ರವಾದ ಕಲ್ಲಿನ ಮೇಲೆ ಸ್ವಲ್ಪ ನೀರು ಹಾಕಿ ನುಣ್ಣಗೆ ಅರೆದು ತಲೆಗೆ ಮಂದವಾಗಿ ಲೇಪಿಸಿ, ಚೆನ್ನಾಗಿ ತಿಕ್ಕಿರಿ. ನಾಲ್ಕು ತಾಸುಗಳ ತರುವಾಯ ತಲೆ ತೊಳೆಯಿರಿ. ಏಳು ದಿವಸ ತಲೆಗೆ ಸಾಬೂನು ಹಚ್ಚಬೇಡಿ. ಸೀಗೆಕಾಯಿ ಪುಡಿ ಬಳಸಿರಿ. ಬೇವಿನ ಎಣ್ಣೆಯನ್ನು ಸಹ ಹಚ್ಚಬಹುದು.

ಕಿವಿ ನೋವಿನಲ್ಲಿ[ಬದಲಾಯಿಸಿ]

ಬೇವಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಒಂದೆರಡು ತೊಟ್ಟು ಎಣ್ಣೆಯನ್ನು ನೋವಿರುವ ಕಿವಿಗೆ ಹಾಕುವುದು.

ಸಕ್ಕರೆ ಖಾಯಿಲೆಯಲ್ಲಿ[ಬದಲಾಯಿಸಿ]

ಬೇವಿನ ಚಿಗುರೆಲೆಗಳನ್ನು ನುಣ್ಣಗೆ ಅರೆದು ಗಜ್ಜುಗದ ಗಾತ್ರದ ಗುಳಿಗೆ ಮಾಡಿ ಒಂದೊಂದು ಗುಳಿಯನ್ನು ಸೇವಿಸುವುದು.

ಕೈಕಾಲುಗಳ ಸೆಳೆತ ಮತ್ತು ತಣ್ಣಗಾಗುವಿಕೆ[ಬದಲಾಯಿಸಿ]

ಬೇವಿನ ಎಣ್ಣೆಯನ್ನು ಕೈಕಾಲುಗಳಿಗೆ ಹಚ್ಚಿ ಚೆನ್ನಾಗಿ ತಿಕ್ಕಿರಿ. ಕೈಕಾಲು ತಣ್ಣಗಿರುವಾಗ ಈ ಚಿಕಿತ್ಸೆಯನ್ನು ಒಂದೆರಡು ತಾಸು ಮುಂದುವರೆಸುವುದು. ಬೇವಿನ ಎಣ್ಣೆಯನ್ನು ವೀಳ್ಯದೆಲೆಗೆ ಹಚ್ಚಿ ತಿನ್ನುವುದರಿಂದ ಸಹ ಅನುಕೂಲವಾಗುವುದು.

ಕಾಲಿನ ಹಿಮ್ಮಡಿಗಳ ಬಿರುಕು ಅಥವಾ ಸೀಳುವಿಕೆ[ಬದಲಾಯಿಸಿ]

20 ಬೇವಿನ ಹಸಿ ಎಲೆಗಳನ್ನು ಸ್ವಲ್ಪ ತುಪ್ಪದೊಂದಿಗೆ ಕಪ್ಪಾಗುವವರೆಗೂ ಹುರಿಯಿರಿ ಮತ್ತು ಹುರಿದ ಬೇವಿನೆಲೆಗಳನ್ನು ನುಣ್ಣಗೆ ಅರೆದು ಸ್ವಲ್ಪ ಬಿಸಿಯಾಗಿರುವ ಜೇನು ಮೇಣದಲ್ಲಿ ಸೇರಿಸಿರಿ. ತಣ್ಣಗಾದ ಮೇಲೆ, ಹಿಮ್ಮಡಿಗಳಿಗೆ ಲೇಪಿಸುವುದು.

ಮಲೇರಿಯಾ ಜ್ವರದಲ್ಲಿ[ಬದಲಾಯಿಸಿ]

ಬೇವಿನ ಚೆಕ್ಕೆಯ ಕಷಾಯದಲ್ಲಿ ಶಾಜೀರಿಗೆ(ಕಹಿ ಜೀರಿಗೆ) ಚೂರ್ಣ ¼ ಟೀ ಚಮಚ ಸೇರಿಸಿ ಸ್ವಲ್ಪ ಜೇನು ಸೇರಿಸಿ ಕುಡಿಸುವುದು. ಬೇವಿನ ಎಣ್ಣೆಯನ್ನು ಹಳ್ಳಗಳಲ್ಲಿ ನಿಂತಿರುವ ನೀರಿಗೆ ಹಾಕುವುದು. ಸೊಳ್ಳೆಗಳು ಸಾಯುವುವು. ಸೊಳ್ಳೆಗಳ ಮೊಟ್ಟೆ ಮರಿಗಳು ನಾಶವಾಗುವುವು.

ರೋಗ ನಿರೋಧ( ಶಕ್ತ ಹೆಚ್ಚಿಸಲು)[ಬದಲಾಯಿಸಿ]

ಪ್ರತಿನಿತ್ಯ ಐದು ಬೇವಿನ ಎಲೆಗಳನ್ನು ತಿನ್ನುವುದು. ರಕ್ತ ಶುದ್ಧಿಯಾಗುವುದು, ಚರ್ಮ ವಾಧಿಗಳಿಂದ ರಕ್ಷಣೆ ಸಿಗುವುದು.

ಮೈ ಉರಿ, ಕಜ್ಜಿ, ತುರಿ[ಬದಲಾಯಿಸಿ]

ಹಸಿ ಅಥವಾ ಒಣಗಿದ ಬೀಜಗಳನ್ನು ಚೆನ್ನಾಗಿ ಜಜ್ಜಿ ಸ್ವಲ್ಪ ಎಳ್ಳೆಣ್ಣೆಯಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಿ ಎರಡು ಬಿಲ್ಲೆ ಕರ್ಪೂರ ಹಾಕಿ, ಪಾತ್ರೆಯನ್ನು ಕೆಳಗಿಳಿಸಿರಿ. ಈ ಮುಲಾಮನ್ನು ಹಚ್ಚಿರಿ.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "The Plant List: A Working List of All Plant Species".
  2. "USDA GRIN Taxonomy".
"https://kn.wikipedia.org/w/index.php?title=ಬೇವಿನ_ಮರ&oldid=914702" ಇಂದ ಪಡೆಯಲ್ಪಟ್ಟಿದೆ