ಬೇಬಿ ಬಾಟಮ್ ಬಟರ್

ಬೇಬಿ ಬಾಟಮ್ ಬಟರ್ ಎಂಬುದು ಇಂಗ್ಲಿಷ್ ಸೂಪರ್‌ಮಾರ್ಕೆಟ್ ಸರಪಳಿ ವೈಟ್ರೋಸ್‌ನಿಂದ ಮಾರಾಟವಾಗುವ ಮುಲಾಮು. ಇದನ್ನು ಶಿಶುಗಳ ನಿತಂಬದ ಮೇಲಿನ ಉರಿಯನ್ನು ತಡೆಯಲು ಬಳಸಲಾಗುತ್ತದೆ. ಇದು ಮಹಿಳೆಯರ ಜನಪ್ರಿಯ ಮುಖದ ಮುಲಾಮು ಕೂಡಾ ಹೌದು.
ಇತಿಹಾಸ
[ಬದಲಾಯಿಸಿ]ಈಗ ಇದರಲ್ಲಿರುವ ನೈಸರ್ಗಿಕ ಪದಾರ್ಥಗಳಲ್ಲಿ ಆಲಿವ್ ಎಣ್ಣೆ, ಕ್ಯಾಮೊಮೈಲ್ ಎಣ್ಣೆ ಮತ್ತು ವೆನಿಲ್ಲಾ ಸೇರಿವೆ.[೧] ಸಂರಕ್ಷಕ ಪ್ಯಾರಾಬೆನ್ಗಳು ಮತ್ತು ಇತರ ಪೆಟ್ರೋಕೆಮಿಕಲ್ಗಳನ್ನು ತೆಗೆದುಹಾಕಲು ೨೦೦೮ ರಲ್ಲಿ ಇದನ್ನು ಮರುರೂಪಿಸಲಾಯಿತು. ನಂತರ ತಾಯಂದಿರು ದುಬಾರಿ ಫೇಸ್ ಕ್ರೀಮ್‌ನ ಬದಲಿಗೆ ಇದನ್ನೇ ಬಳಸಲು ಪ್ರಾರಂಭಿಸಿದರು.[೨] ಆಗ ಮಾರಾಟವು ಗಮನಾರ್ಹವಾಗಿ ಹೆಚ್ಚಾಯಿತು.[೩] ಅನೇಕ ಮಹಿಳೆಯರು ಅದರ ಮೃದುಗೊಳಿಸುವಿಕೆ ಮತ್ತು ದೃಢತೆಯ ಪರಿಣಾಮವನ್ನು ಶ್ಲಾಘಿಸಿದರು, ಈ ಉತ್ಪನ್ನವು ಅನೇಕ ಮಳಿಗೆಗಳಲ್ಲಿ ಮಾರಾಟವಾಯಿತು.[೪] [೫] ೨೦೦೮ ರಲ್ಲಿ, ಈ ಸಂಚಲನದ ನಂತರ ಕೇವಲ ನಾಲ್ಕು ತಿಂಗಳಲ್ಲಿ ಈ ಉತ್ಪನ್ನವು ಎಂಟು ವರ್ಷಗಳ ಮೌಲ್ಯದ ದಾಸ್ತಾನುಗಳಾನ್ನೂ ಮಾರಾಟ ಮಾಡಿತು. ೨೦೧೧ ರಲ್ಲಿ, ಇದು ವೈಟ್ರೋಸ್‌ನ ಅತ್ಯುತ್ತಮ ಮಾರಾಟವಾದ ಚರ್ಮದ ಆರೈಕೆ ಉತ್ಪನ್ನವೆಂದು ಘೋಷಿಸಲಾಯಿತು.[೬] ಇದನ್ನು ಹ್ಯಾಂಪ್ಶೈರ್‌ನಲ್ಲಿ ಉತ್ಪಾದಿಸಲಾಗುತ್ತದೆ.
ನ್ಯೂಜಿಲೆಂಡ್‌ನಲ್ಲಿ ವಾಸಿಸುವ ಜನರು ಅದನ್ನು ತಮಗೆ ರವಾನಿಸಿಕೊಳ್ಳಲು ವಿಶೇಷ ವ್ಯವಸ್ಥೆ ಮಾಡಿದರು.[೭] ೨೦೧೪ ರಲ್ಲಿ, ಐಷಾರಾಮಿ ಸೂಪರ್ಮಾರ್ಕೆಟ್ ಸರಪಳಿ, ನೋಶ್ ಅದನ್ನು ಸಂಗ್ರಹಿಸಲು ಪ್ರಾರಂಭಿಸಿತು. ೨೦೧೬ ರಲ್ಲಿ, ವೈಟ್ರೋಸ್ ಈ ಉತ್ಪನ್ನವನ್ನು ಚೀನಾಕ್ಕೆ ರಫ್ತು ಮಾಡಲು ಪ್ರಾರಂಭಿಸಿತು.
ಉಲ್ಲೇಖಗಳು
[ಬದಲಾಯಿಸಿ]- ↑ Roya Nikkhah (26 July 2008), "The ugly truth about skin creams, by beauty boss Liz Earle", Daily Telegraph, archived from the original on 27 July 2008
- ↑ Charlotte Ross (2 September 2008), "Beauty: Time to face facts", The Scotsman, archived from the original on 10 September 2008
- ↑ "Supermarket stampede as women slap £2.49 baby 'bottom butter' on their faces", Evening Standard, 19 April 2008
- ↑ "The 2.49 cream wowing women", Marie Claire, 23 April 2008
- ↑ Carolyn Robertson (18 April 2016), "Waitrose begins exporting to China via e-commerce platform", The Grocer
- ↑ Max Benato (18 January 2011), "Let's face it, Baby Bottom Butter is better on your cheeks", The Guardian
- ↑ Morgan Tait (28 March 2014), "Top and bottom cult cream arrives in NZ", NZ Herald