ಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವ
ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸದಾಗಿ ವಿಕಿಪೀಡಿಯ ಕಲಿಯುತ್ತಿರುವವರಿಂದ ತಯಾರಾದ ಲೇಖನವಿದು. ವಿಕಿಪೀಡಿಯದ ಉತ್ತಮ ಲೇಖನದ ಎಲ್ಲ ಗುಣಮಟ್ಟಗಳನ್ನು ಇದು ಒಳಗೊಂಡಿಲ್ಲದಿರಬಹುದು. ಸಮುದಾಯದವರು ಈ ಲೇಖನವನ್ನು ಉತ್ತಮ ಲೇಖನವನ್ನಾಗಿಸಬಹುದು. ಹಾಗೆ ಮಾಡುವುದರಿಂದ ಲೇಖನ ತಯಾರಿಸಿದ ಹೊಸ ಸಂಪಾದಕರಿಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಮಾಹಿತಿಯೂ ದೊರೆಯುತ್ತದೆ. |
"ಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವ"ವು ಅರ್ಥಶಾಸ್ತ್ರದಲ್ಲಿ ಬಹಳ ಮಹತ್ವವಾದ ಆರ್ಥಿಕ ಪದಾವಲಿಯಾಗಿದೆ. ಇದು ಪ್ರಮಾಣದಲ್ಲಿ ಹಾಗೂ ಬೆಲೆಯಲ್ಲಿ ಆಗುವ ಬದಲಾವಣೆಯನ್ನು ಅಳತೆ ಮಾಡುತ್ತದೆ. ಬೇಡಿಕೆಯ ನಿಯಮದ ಪ್ರಕಾರ ವಸ್ತುವಿನ ಬೆಲೆಯಲ್ಲಿ ಬದಲಾವಣೆಯಾದರೆ ಅದರ ಬೇಡಿಕೆಯಲ್ಲಿಯೂ ಬದಲಾವಣೆಯಾಗುತ್ತದೆ. ವಸ್ತುವಿನ ಬೆಲೆ ಏರಿದರೆ ಅದರ ಬೇಡಿಕೆ ಕಡಿಮೆಯಾಗುತ್ತದೆ. ವಸ್ತುವಿನ ಬೆಲೆ ಇಳಿದರೆ ಅದರ ಬೇಡಿಕೆ ಹೆಚ್ಚಾಗುತ್ತದೆ. ಬೆಲೆಯಲ್ಲಿಯ ಬದಲಾವಣೆಯಿಂದ ಬೇಡಿಕೆಯಲ್ಲಿ ಎಷ್ಟರ ಮಟ್ಟಿಗೆ ಬದಲಾವಣೆಯಾಗುತ್ತೆದೆಂಬುದನ್ನು ಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವವು ವಿವರಿಸುತ್ತದೆ. ಬೇಡಿಕೆಯಲ್ಲಿ ವ್ಯತ್ಯಾಸವಾದಂತೆ ಬೇಡಿಕೆಯ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ. ಆದರೆ ಎಲ್ಲಾ ವಸ್ತುಗಳ ಬೇಡಿಕೆಯಲ್ಲಿನ ವ್ಯತ್ಯಾಸವು ಒಂದೇ ರೀತಿಯಾಗಿರುವದಿಲ್ಲ. ಕೆಲವು ವಸ್ತುಗಳ ಬೇಡಿಕೆಯಲ್ಲಿನ ವ್ಯತ್ಯಾಸವು ಸಣ್ಣ ಪ್ರಮಾಣದಲ್ಲಿ ಆಗಬಹುದು. ಇನ್ನು ಕೆಲವು ವಸ್ತುಗಳ ಬೇಡಿಕೆಯಲ್ಲಿನ ವ್ಯತ್ಯಾಸವು ದೊಡ್ಡ ಪ್ರಮಾಣದಲ್ಲಿ ಆಗಬಹುದು. ಇನ್ನೂ ಕೆಲವು ವಸ್ತುಗಳ ಬೆಲೆ ಏರಿದರೂಇಲ್ಲವೆ ಇಳಿದರೂ ಅವುಗಳ ಬೇಡಿಕೆಯ ಪ್ರಮಾಣದಲ್ಲಿ ಬಹಳಷ್ಟು ವ್ಯತ್ಯಾಸವು ಆಗದೆ ಇರಬಹುದು. ಅಂದರೆ ಕೆಲವು ವಸ್ತುಗಳು ಬೆಲೆಯು ಸ್ವಲ್ಪ ಏರಿದರೆ ಅವುಗಳ ಬೇಡಿಕೆಯು ಬಹಳಷ್ಟು ಹೆಚ್ಚಾಗಬಹುದು. ಆದರೆ ಇನ್ನು ಕೆಲವು ವಸ್ತುಗಳ ಬೆಲೆಯು ಏರಿದರೂ ಇಲ್ಲವೆ ಇಳಿದರೂ ಅವುಗಳ ಬೇಡಿಕೆಯ ಪ್ರಮಾಣದಲ್ಲಿ ಬಹಳಷ್ಟು ವ್ಯತ್ಯಾಸ ಕಂಡು ಬಾರದಿರಬಹುದು. ಹೀಗೆ ಬೆಲೆಯಲ್ಲಾಗುವ ಬದಲಾವಣೆಯಿಂದ ಬೇಡಿಕೆಯಲ್ಲಾಗುವ ಬದಲಾವಣೆಯ ಪ್ರಮಾಣವನ್ನು ಬೇಡಿಕೆಯ ಸ್ಥಿತಿಸ್ಥಾಪಕತ್ವವು ತೋರಿಸುತ್ತದೆ. ಬೇಡಿಕೆಯ ಸ್ಥಿತಿಸ್ಥಾಪಕತ್ವವನ್ನು ಮಾರ್ಷಲ್ ಅವರು ಈ ರೀತಿ ವಿವರಿಸಿದ್ದಾರೆ. ಒಂದು ವಸ್ತುವಿನ ಬೆಲೆ ಇಳಿದರೆ, ಅದರ ಬೇಡಿಕೆಯ ಪ್ರಮಾಣದಲ್ಲಿನ ಹೆಚ್ಚಳವು ಸ್ವಲ್ಪ ಇಲ್ಲವೆ ಬಹಳಷ್ಟು ಆಗಬಹುದು.ಇದಕ್ಕನುಗುಣವಾಗಿ ಒಂದು ಮಾರುಕಟ್ಟೆಯಲ್ಲಿ ಬೇಡಿಕೆಯ ಸ್ಥಿತಿಸ್ಥಾಪಕತ್ವವು ಅಧಿಕವಾಗಿರುತ್ತದೆ ಇಲ್ಲವೆ ಕಡಿಮೆಯಾಗಿರುತ್ತದೆ. ಆದುದರಿಂದ ಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವವು ಬೆಲೆಯಲ್ಲಾಗುವ ಬದಲಾವಣೆಯಿಂದ ಬೇಡಿಕೆಯಲ್ಲಿ ಯಾವ ಮಟ್ಟದ ಬದಲಾವಣೆಯಾಗುತ್ತದೆಂಬುದನ್ನು ತೋರಿಸುತ್ತದೆ. ಡಾ. ಮಾರ್ಷಲ್ರು ಬೇಡಿಕೆಯ ಸ್ಥಿತಿಸ್ಥಾಪಕತ್ವವನ್ನು ಅಳೆಯಲು ಈ ಸೂತ್ರವನ್ನು ನೀಡಿದ್ದಾರೆ. ಸ್ಥಿತಿಸ್ಥಾಪಕ = ಬೇಡಿಕೆಯಲ್ಲಿ ಪ್ರತಿಶತ ವ್ಯತ್ಯಾಸ / ಬೆಲೆಯಲ್ಲಿ ಪ್ರತಿಶತ ವ್ಯತ್ಯಾಸ
ಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವದ ವಿಧಿಗಳು
[ಬದಲಾಯಿಸಿ]- ಪರಿಪೂರ್ಣ ಸ್ಥಿತಿಸ್ಥಾಪಕತ್ವದ ಬೇಡಿಕೆ: ಬೆಲೆಯಲ್ಲಿ ಸ್ವಲ್ಪ ಬದಲಾವಣೆಯಾದರೂ ಬೇಡಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆಯಾದರೆ, ಅಂತಹ ಬೇಡಿಕೆಗೆ ಪರಿಪೂರ್ಣ ಸ್ಥಿತಿಸ್ಥಾಪಕತ್ವವಿರುತ್ತದೆ. ವಸ್ತುವಿನ ಬೆಲೆ ಕೊಂಚನೇ ಮಾತ್ರ ಇದರೆ ಏರಿದರೆ ಸಾಕು, ಅದರ ಬೇಡಿಕೆಯು ಮಾತ್ರ ಗಣನೀಯ ಪ್ರಮಾಣದಲ್ಲಿ ಕುಗ್ಗುತ್ತದೆ. ಅದರಂತೆ ವಸ್ತುವಿನ ಬೆಲೆ ಕೊಂಚನೇ ಮಾತ್ರ ಇದರೆ ಇಳಿದರೆ ಸಾಕು, ಅದರ ಬೇಡಿಕೆಯು ಮಾತ್ರ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಹೀಗೆ ಪೂರ್ಣ ಸ್ಥಿತಿಸ್ಥಾಪಕತ್ವದ ಬೇಡಿಕೆಯೆಂದರೆ ಅಪಾರ ಪ್ರಮಾಣದಲ್ಲಿ ಸ್ಥಿತಿಸ್ಥಾಪಕತ್ವವನ್ನು ಹೊಂದಿದ ಬೇಡಿಕೆ ಆದರೆ ವಾಸ್ತವಿಕ ಪ್ರಪಂಚದಲ್ಲಿ ಯಾವ ವಸ್ತುಗಳಿಗೂ ಇಂತಹ ಸ್ಥಿತಿಸ್ಥಾಪಕತ್ವವಿರುವ ಬೇಡಿಕೆಯು ಕಂಡುಬರುವುದಿಲ್ಲ.
- ಸ್ಥಿತಿಸ್ಥಾಪಕತ್ವರಹಿತ ಬೇಡಿಕೆ: ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆಯಾದರೂ, ಬೇಡಿಕೆಯಲ್ಲಿ ಮಾತ್ರ ಯಾವ ಬದಲಾವಣೆಯೂ ಆಗದಿದ್ದರೆ, ಅಂತಹ ಬೇಡಿಕೆಗೆ ಸ್ಥಿತಿಸ್ಥಾಪಕತ್ವವೇ ಇರುವುದಿಲ್ಲವೆಂದು ಅರ್ಥ. ವಸ್ತುವಿನ ಬೆಲೆಯು ಗಣನೀಯ ಪ್ರಮಾಣದಲ್ಲಿ ಏರಬಹುದು. ಆದರೆ ಅದರ ಬೇಡಿಕೆಯ ಪ್ರಮಾಣದಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ ಅದು ಮೊದಲಿನಷ್ಟೇ ಇರುತ್ತದೆ. ವಸ್ತುವಿನ ಬೆಲೆಯು ಗಣನೀಯ ಪ್ರಮಾಣದಲ್ಲಿ ಇಳಿಯಬಹುದು. ಆದರೆ ಅದರ ಬೇಡಿಕೆಯು ಎಳ್ಳಷ್ಟು ಹೆಚ್ಚಾಗವುದಿಲ್ಲ. ಆದುದರಿಂದ ಇಂತಹ ಬೇಡಿಕೆಗೆ ಸ್ಥಿತಿಸ್ಥಾಪಕತ್ವರಹಿತ ಬೇಡಿಕೆ ಎಂದು ಕರೆಯುತ್ತಾರೆ. ವಾಸ್ತವಿಕ ಪ್ರಪಂಚದಲ್ಲಿ ಇಂತಹ ಬೇಡಿಕೆಯೂ ಕಂಡುಬರುವುದಿಲ್ಲ.
- ಹೆಚ್ಚು ಸ್ಥಿತಿಸ್ಥಾಪಕತ್ವದ ಬೇಡಿಕೆ: ಬೇಡಿಕೆಯಲ್ಲಿನ ವ್ಯತ್ಯಾಸದ ಪ್ರಮಾಣವು ಬೆಲೆಯಲ್ಲಿನ ವ್ಯತ್ಯಾಸದ ಪ್ರಮಾಣಕ್ಕಿಂತ ಅಧಿಕವಾಗಿದ್ದರೆ, ಅಂತಹ ಬೇಡಿಕೆಯು ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ಹೊಂದಿರುತ್ತದೆ. ಉದಾಹರಣೆಗೆ- ವಸ್ತುವಿನ ಬೆಲೆಯು ಶೇಕಡಾ ೧೦ರಂತೆ ಏರಿದಾಗ, ಬೇಡಿಕೆಯು ಶೇಕಡಾ ೧೦ಕ್ಕಿಂತಲೂ ಹೆಚ್ಚು ಅಂದರೆ ೧೫ ಇಲ್ಲವೆ ೨೦ರಷ್ಟು ಇಲ್ಲವೆ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇಳಿಯುತ್ತದೆ. ಅದರಂತೆ ಬೆಲೆಯು ಶೇಕಡಾ ೧೦ರಷ್ಟು ಇಳಿದಾಗ ಬೇಡಿಕೆಯು ಶೇಕಡಾ ೧೦ಕ್ಕಿಂತಲೂ ಹೆಚ್ಚು ಅಂದರೆ ಶೇಕಡಾ ೧೨ ಇಲ್ಲವೆ, ೧೫ ಇಲ್ಲವೆ, ೨೦ರಷ್ಟು ಇಲ್ಲವೆ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಿಗ್ಗುತ್ತದೆ. ಅಂದರೆ ಇಂತಹ ಬೇಡಿಕೆಯ ಸ್ಥಿತಿಸ್ಥಾಪಕತ್ವವು ಒಂದಕ್ಕಿಂತಲೂ ಹೆಚ್ಚು ಇರುತ್ತದೆ. ಸುಖದಾಯಕ ಮತ್ತು ವಿಲಾಸೀ ವಸ್ತುಗಳಿಗೆ ಹೆಚ್ಚು ಸ್ಥಿತಿಸ್ಥಾಪಕತ್ವವಿರುವ ಬೇಡಿಕೆ ಇರುತ್ತದೆ.
- ಕಡಿಮೆ ಸ್ಥಿತಿಸ್ಥಾಪಕತ್ವದ ಬೇಡಿಕೆ: ಬೇಡಿಕೆಯಲ್ಲಿನ ವ್ಯತ್ಯಾಸದ ಪ್ರಮಾಣವು ಬೆಲೆಯಲ್ಲಿನ ವ್ಯತ್ಯಾಸದ ಪ್ರಮಾಣಕ್ಕಿಂತ ಕಡಿಮೆಯಾಗಿದ್ದರೆ, ಅಂತಹ ಬೇಡಿಕೆಯು ಕಡಿಮೆ ಸ್ಥಿತಿಸ್ಥಾಪಕತ್ವವನ್ನು ಹೊಂದಿರುತ್ತದೆ. ಉದಾಹರಣೆಗೆ- ವಸ್ತುವಿನ ಬೆಲೆಯು ಶೇಕಡಾ ೧೦ರಂತೆ ಏರಿದಾಗ, ಬೇಡಿಕೆಯು ಶೇಕಡಾ ೧೦ಕ್ಕಿಂತಲೂ ಕಡಿಮೆ ಅಂದರೆ ಶೇಕಡಾ ೮ ಇಲ್ಲವೆ ೫ ಇಲ್ಲವೆ ಅದಕ್ಕೂ ಕಡಿಮೆ ಪ್ರಮಾಣದಲ್ಲಿ ಕುಗ್ಗುತ್ತದೆ. ಅದರಂತೆ ಬೆಲೆಯು ಶೇಕಡಾ ೧೦ರಷ್ಟು ಇಳಿದಾಗ, ಬೇಡಿಕೆಯು ಶೇಕಡಾ ೮ ಇಲ್ಲವೆ ೫ ಇಲ್ಲವೆ ಅದಕ್ಕೂ ಕಡಿಮೆ ಪ್ರಮಾಣದಲ್ಲಿ ಹಿಗ್ಗುತ್ತದೆ. ಒಟ್ಟಿನಲ್ಲಿ ಅದು ಶೇಕಡಾ ೧೦ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹಿಗ್ಗುತ್ತದೆ. ಇಂತಹ ಬೇಡಿಕೆಯ ಸ್ಥಿತಿಸ್ಥಾಪಕತ್ವವು ಒಂದಕ್ಕಿಂತ ಕಡಿಮೆ ಇರುತ್ತದೆ. ಸಾಮನ್ಯವಾಗಿ ಜೀವ ನಾವಶ್ಯಕ ಮತ್ತು ಇತರ ಅಗತ್ಯದ ವಸ್ತುಗಳು ಬೇಡಿಕೆಗೆ ಕಡಿಮೆ ಸ್ಥಿತಿಸ್ಥಾಪಕತ್ವವಿರುತ್ತದೆ.
- ಸರಿಸಮ ಸ್ಥಿತಿಸ್ಥಾಪಕತ್ವದ ಬೇಡಿಕೆ: ಬೆಲೆಯಲ್ಲಿನ ವ್ಯತ್ಯಾಸದ ಪ್ರಮಾಣದಷ್ಟೇ ಬೇಡಿಕೆಯಲ್ಲಿನ ವ್ಯತ್ಯಾಸದ ಪ್ರಮಾಣವು ಇದ್ದರೆ, ಅಂತಹ ಬೇಡಿಕೆಯು ಸರಿಸಮ ಸ್ಥಿತಿಸ್ಥಾಪಕತ್ವವನ್ನು ಹೊಂದಿರುತ್ತದೆ. ಉದಾಹರಣೆಗೆ-ಒಂದು ವಸ್ತುವಿನ ಬೆಲೆಯು ಶೇಕಡಾ ೧೦ರಷ್ಟು ಇಳಿಯುತ್ತದೆ. ಅದರಂತೆ ಅದರ ಬೆಲೆಯು ಶೇಕಡಾ ೧೦ರಷ್ಟು ಇಳಿದಾಗ, ಅದರ ಬೇಡಿಕೆಯು ಶೇಕಡಾ ೧೦ರಷ್ಟು ಹಿಗ್ಗುತ್ತದೆ. ಇಂತಹ ಬೇಡಿಕೆಯ ಸ್ಥಿತಿಸ್ಥಾಪಕತ್ವವು ಸರಿಸಮವಾಗಿರುತ್ತದೆ.[೧]
ಬೇಡಿಕೆಯ
[ಬದಲಾಯಿಸಿ]ಸ್ಥಿತಿಸ್ಥಾಪಕತ್ವವನ್ನು ನಿರ್ಧರಿಸುವ ಅಂಶಗಳು
[ಬದಲಾಯಿಸಿ]ಎಲ್ಲ ವಸ್ತುಗಳ ಬೇಡಿಕೆಯ ಸ್ಥಿತಿಸ್ಥಾಪಕತ್ವವು ಒಂದೇ ವಿಧನಾಗಿರುವುದಿಲ್ಲ. ಅಲ್ಲದೆ ಅದೇ ವಸ್ತುವಿಗೆ ಅದು ಎಲ್ಲ ಕಾಲಕ್ಕೂ ಒಂದೇ ಸಮನಾವಾಗಿರುವುದಿಲ್ಲ. ಏಕೆಂದರೆ ಬೇಡಿಕೆಯ ಸ್ಥಿತಿಸ್ಥಾಪಕತ್ವವು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಈ ಅಂಶಗಳನ್ನು ಕೆಳಗೆ ವಿವರಿಸಿದೆ.
- ಅಗತ್ಯವಾದ ವಸ್ತುಗಳು: ಉಪಜೀವನಕ್ಕೆ ಅಗತ್ಯವಾದ ವಸ್ತುಗಳಿಗೆ ಬೇಡಿಕೆಯ ಸ್ಥಿತಿಸ್ಥಾಪಕತ್ವವು ಬಹಳ ಕಡಿಮೆ ಇರುತ್ತದೆ. ಏಕೆಂದರೆ ಜನರ ಆಹಾರ, ಬಟ್ಟೆ, ಔಷಧಿ ಮೊದಲಾದ ಪದಾರ್ಥಗಳನ್ನು ಅವುಗಳ ಬೆಲೆ ಎಷ್ಟೇ ಇದ್ದರೂ ಕೊಂಡುಕೊಳ್ಳಲೇಬೇಕಾಗುತ್ತದೆ.
- ಬೆಲೆಗಳ ಮಟ್ಟ: ಅತಿ ಹೆಚ್ಚು ಇಲ್ಲವೆ, ಅತಿ ಕಡಿಮೆ ಬೆಲೆ ಇರುವ ವಸ್ತುಗಳ ಬೇಡಿಕೆಗೆ ಸ್ಥಿತಿಸ್ಥಾಪಕತ್ವವು ಕಡಿಮೆ ಇರುತ್ತದೆ. ಉದಾಹರಣೆಗೆ-ವಜ್ರದ ಬೆಲೆ ಇಲ್ಲವೆ ಚಿನ್ನದ ಬೆಲೆ ಅತಿ ಹೆಚ್ಚು ಇರುತ್ತದೆ. ಅದರ ಬೆಲೆ ಇನ್ನೂ ಏರಿದರೆ ಅದು ಘನತೆಯ ವಸ್ತುವಾಗಿರುವುದರಿಂದ ಶ್ರೀಮಂತರು ಅದನ್ನು ಕೊಳ್ಳವುದನ್ನು ಬಿಟ್ಟುಕೊಡುವುದಿಲ್ಲ. ಆದುದರಿಂದ ಅದರ ಬೇಡಿಕೆ ಅಷ್ಟು ಕುಗ್ಗುವುದಿಲ್ಲ. ಅದರಂತೆ ಉಪ್ಪಿನ ಬೆಲೆ ಇಲ್ಲವೆ ಬೆಂಕಿಪೊಟ್ಟಣದ ಬೆಲೆ ಬಹಳ ಕಡಿಮೆ ಇದೆ. ಅದರ ಬೆಲೆ ಏರಿದರೆ ಇಲ್ಲವೆ ಇಳಿದರೆ ಅದರ ಬೇಡಿಕೆಯಲ್ಲಿ ವ್ಯತ್ಯಾಸವಾಗುವುದಿಲ್ಲ.
- ಬದಲೀ ವಸ್ತುಗಳ ಲಭ್ಯತೆ: ಚಹ ಮತ್ತು ಕಾಫಿ, ಅದರಂತೆ ಡಾಲ್ಡಾ ಮತ್ತು ಶುದ್ಧ ತುಪ್ಪ ಇವು ಒಂದಕ್ಕೊಂದು ಬದಲೀ ವಸ್ತುಗಳಾಗಿವೆ. ಕಾಫಿಯ ಬೆಲೆ ಅಷ್ಟೇ ಇದ್ದು ಚಹದ ಬೆಲೆ ಏರಿದರೆ, ಜನರು ಚಹ ಕುಡಿಯುವುದನ್ನು ಕಡಿಮೆ ಮಾಡಿ, ಕಾಫಿ ಕುಡಿಯುವುದನ್ನು ಪ್ರಾರಂಭಿಸಬಹುದು. ಆಗ ಚಹದ ಬೇಡಿಕೆ ಕುಗ್ಗುತ್ತದೆ ಮತ್ತು ಕಾಫಿ ಬೇಡಿಕೆ ಹೆಚ್ಚಾಗುತ್ತದೆ. ಅದರಂತೆ ಬೆಣ್ಣೆಯ ಬೆಲೆ ಅಷ್ಟೇ ಇದ್ದು ಡಾಲ್ಡಾದ ಏರಿದರೆ, ಜನರು ಡಾಲ್ಡಾದ ಬೆಲೆ ಏರಿದರೆ, ಜನರು ಡಾಲ್ಡಾಕ್ಕೆ ಬದಲಾಗಿ ಬೆಣ್ಣೆಯನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ. ಆಗ ಬೆಣ್ಣೆಯ ಬೇಡಿಕೆ ಹಿಗ್ಗುತ್ತದೆ ಮತ್ತು ಡಾಲ್ಡಾದ ಬೇಡಿಕೆ ಕುಗ್ಗುತ್ತದೆ. ಹೀಗೆ ಒಂದು ವಸ್ತುವಿಗೆ ಬದಲೀ ವಸ್ತುಗಳು ಸಿಗುತ್ತಿದ್ದರೆ, ಆ ವಸ್ತುವಿನ ಬೇಡಿಕೆಗೆ ಸ್ಥಿತಿಸ್ಥಾಪಕತ್ವವಿರುತ್ತದೆ.
- ಬೇಡಿಕೆಯ ಸ್ಥಿತಿಸ್ಥಾಪಕತ್ವವು ಗ್ರಾಹಕರು ಉತ್ಪನ್ನದ ಹೊಸ ಬೆಲೆಗಳೊಂದಿಗೆ ತಮ್ಮನ್ನು ಸರಿಹೊಂದಿಕೊಳ್ಳಲು ತೆಗೆದುಕೊಳ್ಳುವ ಸಮಯದ ಮೇಲೆ ಅವಲಂಬಿಸಿರುತ್ತದೆ. ಗ್ರಾಹಕರು ಹೊಸ ಬೆಲೆಗಳೊಂದಿಗೆ ತಮ್ಮನ್ನು ಸರಿಹೊಂದಿಕೊಳ್ಳಲು ಹೆಚ್ಚು ಸಮಯವನ್ನು ತಗೆದುಕೊಂಡರೆ ಬೇಡಿಕೆಯ ಸ್ಥಿತಿಸ್ಥಾಪಕತ್ವವು ಹೆಚ್ಚಾಗಿರುತ್ತದೆ.[೨]
ಬೇಡಿಕೆಯ ಬೆಲೆಯ ಸ್ಥಿತಿಸ್ಥಾಪಕತ್ವದ ಮಹತ್ವ
[ಬದಲಾಯಿಸಿ]ಇದು ಉತ್ಪಾದಕರಿಗೆ ಮತ್ತು ವ್ಯಾಪಾರಸ್ಥರಿಗೆ ತಮ್ಮ ಸರಕುಗಳ ಬೆಲೆಯನ್ನು ನಿರ್ಧರಿಸಲು ಮಾರ್ಗದರ್ಶನ ನೀಡುತ್ತದೆ. ಬೇಡಿಕೆಯ ಬೆಲೆಯ ಸ್ಥಿತಿಸ್ಥಾಪಕತ್ವ ಕಡಿಮೆ ಇದ್ದರೆ, ಉತ್ಪಾದಕರಿಗೆ ಮತ್ತು ವ್ಯಾಪಾರಸ್ಥರಿಗೆ ಬೆಲೆಯನ್ನು ಸುಲಭವಾಗಿ ಏರಿಸಬಹುದಾಗಿದೆ. ಆದ್ದರಿಂದ ಬೇಡಿಕೆಯಲ್ಲಿ ಯಾವ ವ್ಯತ್ಯಾಸವು ಉಂಟಾಗದು. ಆದರೆ ಬೇಡಿಕೆಯ ಸ್ಥಿತಿಸ್ಥಾಪಕತ್ವ ಹೆಚ್ಚಿದ್ದರೆ ಅವರು ಕಡಿಮೆ ಬೆಲೆಯನ್ನು ನಿಗದಿ ಮಾಡಿ ಇಲ್ಲವೆ ಬೆಲೆಯನ್ನು ಇಳಿಸಿ, ಹೆಚ್ಚು ಮಾರಟ ಮಾಡಿ, ಹೆಚ್ಚು ಲಾಭವನ್ನು ಗಳಿಸಬಹುದಾಗಿದೆ.[೩]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2015-11-19. Retrieved 2015-12-16.
- ↑ http://www.economicsdiscussion.net/elasticity-of-demand/9-factors-that-influence-price-elasticity-of-demand/3493
- ↑ http://www.ehow.com/info_12132333_advantages-elasticity-demand.html