ಬೆಳಗುಣಿಕೆ ಸೊಪ್ಪು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಳೆಗಾಲದಲ್ಲಿ ತಾನೇ ತಾನಾಗಿ ಭಾರತಾದಾದ್ಯಂತ ಬೆಳೆಯುತ್ತದೆ. ಅಲ್ಲದೆ ಇದಕ್ಕೆ ಆಹಾರ ಮತ್ತು ಔಷಧಿಯ ಮಹತ್ವವಿರುವುದರಿಂದ ಇದನ್ನು ಬೇಸಾಯ ಮಾಡುತ್ತಾರೆ.ಈ ಗಿಡದ ಬಣ್ಣ ಒಂದೇ ಆದರೂ ಇದು ಬಿಡುವಂತಹ ಹಣ್ಣಿನ ಬಣ್ಣಗಳು ಕಪ್ಪು ಮತ್ತು ಕೆಂಪು. ಈ ಎರಡೂ ವಿಧಗಳ ಸೊಪ್ಪನ್ನು ಆಹಾರದಲ್ಲಿ ಬಳಸಬಹುದು.

ಔಷಧೀಯ ಗುಣಗಳು[ಬದಲಾಯಿಸಿ]

ಆಹಾರದಲ್ಲಿ ಈ ಸೊಪ್ಪನ್ನು ವಿಶೇಷವಾಗಿ ಉಪಯೋಗ ಮಾಡುವುದರಿಂದ ಬಾಯಿಹುಣ್ಣು ಮತ್ತು ಮಲಬದ್ಧತೆಯನ್ನು ತಡೆದು ಪಿತ್ತಶಾಮಕವಾಗಿ ಕೆಲಸ ಮಾಡುತ್ತದೆ. ಈ ಸೊಪ್ಪಿನ ಬಳಕೆಯು ಅತಿಯಾದ ರಕ್ತಸ್ರಾವ,ಮೂಲವ್ಯಾಧಿ,ಬಿಸಿಲಿನ ತಾಪದಿಂದ ಮೂಗಿನಲ್ಲಿ ರಕ್ತ ಸೋರುವಿಕೆ ಮುಂತಾದವುಗಳನ್ನು ತಡೆಟ್ಟುತ್ತದೆ.ಇದಕ್ಕೆ ತಾಜಾಪತ್ರ ರಸ 4 ಔನ್ಸ್ ಮತ್ತು 2 ಅಂಜೂರವನ್ನು 2 ರಿಂದ 3 ಬಾರಿ ತೆಗೆದುಕೊಳ್ಳಬೇಕಾಗುತ್ತದೆ.ಗರ್ಭಿಣಿಯರು ಸೊಪ್ಪಿನ ಪಲ್ಯವನ್ನು ಸೇವಿಸುವುದರಿಂದ ಬಾಯಿಹುಣ್ಣು ನಿವಾರಣೆಯಾಗುತ್ತದೆ. ಬೆಳಗಿನ ವಾಕರಿಕೆ ನಿಲ್ಲುತ್ತದೆ ಮತ್ತು ಎದೆ ಹೊಡೆದುಕೊಳ್ಳುವಿಕೆ ಕಡಿಮೆಯಾಗುತ್ತದೆ. ಎಲೆಗಳ ರಸ ನವೆಯನ್ನು ನಿವಾರಣೆ ಮಾಡುವುದರಿಂದ ಹುಳಕಡ್ಡಿ,ಕಜ್ಜಿ ಮತ್ತು ಸೋರಿಯಾಸಿಸ್ನಲ್ಲಿ ಉಪಯೋಗಿಸುತ್ತಾರೆ. ಎಲೆಗಳೊಂದಿಗೆ ಅರಿಸಿನ ಸೇರಿಸಿ ಅರೆದು ಹುಣ್ಣುಗಳಲ್ಲಿ,ಕುರು,ಸರ್ಪಸುತ್ತಿನಲ್ಲಿ ಹೊರಭಾಗಕ್ಕೆ ಹಚ್ಚಲು ಉಪಯೋಗಿಸುತ್ತಾರೆ. ಇದನ್ನೇ ಬಿಸಿ ಮಾಡಿ ನೋವಿರುವ ಭಾಗಗಳಿಗೆ ಹಚ್ಚುವುದರಿಂದ ಊತ ಮತ್ತು ನೋವು ನಿವಾರಣೆಯಾಗುತ್ತದೆ.ಗೋಧಿ ಹಿಟ್ಟಿನ ಸೊಪ್ಪನ್ನು ಸೇರಿಸಿ ಬಿಸಿಮಾಡಿ ಲೇಪ ಮಾಡುವುದರಿಂದ ವೇದನೆ ಕಡಿಮೆಯಾಗುತ್ತದೆ. ಇದರ ಹಣ್ಣುಗಳಲ್ಲಿ ಸ್ವಲ್ಪ ವಿಷದ ಅಂಶವಿರುವುದರಿಂದ ಹಣ್ಣುಗಳು ಅತಿಸೇವನೆಯು ಒಳ್ಳೆಯದಲ್ಲ. ಬಹಳ ಸೇವನೆಯು ತಲೆಸುತ್ತಿ ವಾಂತಿ ಉಂಟಾಗಲು ಕಾರಣವಾಗುತ್ತದೆ. ತಿನ್ನಬಲ್ಲ 100 ಗ್ರಾಂ. ಸೊಪ್ಪಿನಲ್ಲಡಗಿರುವ ಪೋಷಕಾಂಶಗಳೆಂದರೆ:

ಪೋಷಕಾಂಶ ಪ್ರಮಾಣ
ತೇವಾಂಶ ೮೧.೧ ಗ್ರಾಂ.
ಸಸಾರಜನಕ ೫.೯ ಗ್ರಾಂ.
ಕೊಬ್ಬು ೧.೦ ಗ್ರಾಂ.
ಖನಿಜಾಂಶ ೨.೧ ಗ್ರಾಂ.
ಪಿಷ್ಠ ೮.೯ ಗ್ರಾಂ.
ಸುಣ್ಣ ೪೧೦ ಮಿ.ಗ್ರಾಂ.
ರಂಜಕ ೭೦ ಮಿ.ಗ್ರಾಂ.
ಕಬ್ಬಿಣ ೨೦.೫ ಮಿ.ಗ್ರಾಂ.
ರೈಭೋಪ್ಲೇವಿನ್ ೦.೫೯ ಮಿ.ಗ್ರಾಂ.
ನಯಾಸಿನ್ ೦.೯ ಮಿ.ಗ್ರಾಂ
'ಎ'ಜೀವಸತ್ವ ೧೦೦ ಐ.ಯು.
'ಬಿ'ಜೀವಸತ್ವ ೧೦.ಎಂ.ಸಿ.ಜಿ.

ತಿಂಡಿ ತಿನಿಸುಗಳು[ಬದಲಾಯಿಸಿ]

  • ಸೊಪ್ಪಿನ ಪಲ್ಯ
  • ಸೊಪ್ಪಿನ ಬಜ್ಜಿ

ಉಲ್ಲೇಖ[ಬದಲಾಯಿಸಿ]

[೧]

  1. ಸೊಪ್ಪು ತರಕಾರಿಗಳು, ಡಾ.ಕೆ.ಕೆಂಪೇಗೌಡ, ನವಕರ್ನಾಟಕ ಪ್ರಕಾಶನ,೮ನೇ ಮುದ್ರಣ , ಪುಟ ಸಂಖೈ ೯೦