ಬೆತ್ತನಗೆರೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆತ್ತನಗೆರೆ -ಮೋಹನ್ ಗೌಡ ಬೆತ್ತನಗೆರೆ ಅವರು ಬರೆದು ನಿರ್ದೇಶಿಸಿದ 2015 ರ ಕನ್ನಡ ಅಪರಾಧ ಥ್ರಿಲ್ಲರ್ ಚಲನಚಿತ್ರವಾಗಿದೆ. ಇದು ಉತ್ತರ ಬೆಂಗಳೂರು ಪ್ರದೇಶದಲ್ಲಿರುವ ಬೆತ್ತನಗೆರೆಯಲ್ಲಿನ ಬೆತ್ತನಗೆರೆ ಸೀನ ಮತ್ತು ಬೆತ್ತನಗೆರೆ ಶಂಕರ ಎಂಬ ಕಾಲ್ಪನಿಕ ಸೋದರಸಂಬಂಧಿ ಭೂಗತ ಗೂಂಡಾಗಳ ಕುರಿತಾಗಿದೆ. [೧] ಬಿಎನ್ ಸ್ವಾಮಿ ನಿರ್ಮಾಣದ ಈ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಸುಮಂತ್ ಶೈಲೇಂದ್ರ ಮತ್ತು ಅಕ್ಷಯ್ ಗೂಂಡಾ ಸಹೋದರರಾಗಿ ಮತ್ತು ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿಶೇಷ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. [೨]

ಚಿತ್ರವು ತಯಾರಿಕೆಯ ಸಮಯದಲ್ಲಿ ಅದು ಅನೇಕ ಕಾನೂನು ತೊಂದರೆಗಳನ್ನು ಎದುರಿಸಬೇಕಾಗಿ ಬಂದು ಆಗಾಗ ನಿರ್ಮಾಣವನ್ನು ನಿಲ್ಲಿಸಬೇಕಾಯಿತು. [೩] ಹೀಗಾಗಿ ಚಿತ್ರೀಕರಣ ಸ್ಥಗಿತಗೊಂಡಿದ್ದು, ಚಿತ್ರ ಕೈಬಿಡಲಾಗಿದೆ ಎಂದು ವರದಿಯಾಯಿತು. [೪] ಚಿತ್ರವು ಅಂತಿಮವಾಗಿ 2015 ರ ಶುರುವಿನಲ್ಲಿ ಪೂರ್ಣಗೊಂಡಿತು. ಆದಾಗ್ಯೂ, ಚಿತ್ರವು ಸೆನ್ಸಾರ್ ಮಂಡಳಿಯಿಂದ ದಾಖಲೆಯ 139 ಎಡಿಟ್‌ಗಳಿಗೆ ತುತ್ತಾಯಿತು, ಇದು ಅಂತಹ ದೊಡ್ಡ ಕಟ್‌ಗಳೊಂದಿಗೆ ಮೊದಲ ಕನ್ನಡ ಚಲನಚಿತ್ರವಾಗಿದೆ. [೫]

ಪಾತ್ರವರ್ಗ[ಬದಲಾಯಿಸಿ]

ಧ್ವನಿಮುದ್ರಿಕೆ[ಬದಲಾಯಿಸಿ]

ಧ್ವನಿಮುದ್ರಿಕೆಯನ್ನು ರಾಜೇಶ್ ರಾಮನಾಥ್ ಸಂಯೋಜಿಸಿದ್ದಾರೆ. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಡಿಯೋ ಬಿಡುಗಡೆ ಮಾಡಿದರು. [೬] ವರ್ಮಾ ಅವರು ತಮ್ಮ ಕಿಲ್ಲಿಂಗ್ ವೀರಪ್ಪನ್ ಚಿತ್ರದ ಚಿತ್ರೀಕರಣಕ್ಕಾಗಿ ಊರಿಗೆ ಬಂದಿದ್ದರು. "ಬಂಡಿ ಬಂಡಿ" ಹಾಡಿನ ಸಾಹಿತ್ಯ ಸೆನ್ಸಾರ್ ಮಂಡಳಿಯ ಪರಿಶೀಲನೆಗೆ ಒಳಪಟ್ಟಿದ್ದು, ಅಂತಿಮ ಅನುಮೋದನೆಗಾಗಿ ಸಂಪೂರ್ಣ ಸಾಹಿತ್ಯವನ್ನು ಬದಲಾಯಿಸಬೇಕಾಗಿ ಬಂದಿತು.

ಚಿತ್ರಗೀತೆಗಳ ಪಟ್ಟಿ[ಬದಲಾಯಿಸಿ]

ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಬಂಡಿ ಬಂಡಿ"ವಿ. ನಾಗೇಂದ್ರ ಪ್ರಸಾದ್ಮಮತಾ ಶರ್ಮ 
2."ನೀಲಿ ನೀಲಿ" ರಾಜೇಶ್ ಕೃಷ್ಣನ್, ಅನುರಾಧಾ ಭಟ್  
3."ಹರಕೆಯ ತಂದೆವಮ್ಮ" ಕೈಲಾಶ್ ಖೇರ್ 
4."ನೀಲಿ ನೀಲಿ" ಕುಣಾಲ್ ಗಾಂಜಾವಾಲಾ, ಅನುರಾಧಾ ಭಟ್ 
5."ಬೆತ್ತನಗೆರೆ ಥೀಮ್" ಸಂತೋಷ್ ವೆಂಕಿ 

ಉಲ್ಲೇಖಗಳು[ಬದಲಾಯಿಸಿ]

  1. "Bettanagere Launched". Chitraloka. 31 October 2013. Archived from the original on 5 ಮಾರ್ಚ್ 2016. Retrieved 24 August 2015.
  2. "Vinod Kambli to Act in Bettanagere!". Chitraloka. 28 October 2013. Archived from the original on 2 ಜುಲೈ 2014. Retrieved 24 August 2015.
  3. "Bettanagere gets into trouble". The New Indian Express. 19 June 2014. Retrieved 24 August 2015.[ಶಾಶ್ವತವಾಗಿ ಮಡಿದ ಕೊಂಡಿ]
  4. "Film on Bettanagere Seena dropped?". The Times of India. 18 April 2014. Retrieved 24 August 2015.
  5. "Bettanagere's 139 cuts is a record in Sandalwood". Bangalore Mirror. 30 July 2015. Retrieved 24 August 2015.
  6. "RGV Releases Bettanagere Audio". Chitraloka. 28 July 2015. Archived from the original on 30 ಜುಲೈ 2015. Retrieved 24 August 2015.

ಬಾಹ್ಯ ಕೊಂಡಿಗಳು[ಬದಲಾಯಿಸಿ]