ಬೆಂಗಳೂರು ನೀಲಿದ್ರಾಕ್ಷಿ

ವಿಕಿಪೀಡಿಯ ಇಂದ
Jump to navigation Jump to search
'ಬೆಂಗಳೂರು ಬ್ಲೂ' ಜಾತಿಯ ದ್ರಾಕ್ಷಿ

ಬೆಂಗಳೂರು ನೀಲಿದ್ರಾಕ್ಷಿಯು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಯಲ್ಪಡುವ ದ್ರಾಕ್ಷಿಯಾಗಿದ್ದು ಬೆಂಗಳೂರು ಬ್ಲೂ ತಳಿ ಎಂದು ಕರೆಯಲಾಗುತ್ತದೆ. ಬೆಂಗಳೂರು ನಗರ, ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯಲ್ಪಡುತ್ತದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ದೇವನಹಳ್ಳಿ ಸುತ್ತಮುತ್ತ ಬೆಳೆಯುವ ಈ ದ್ರಾಕ್ಷಿ ನೀಲಿ ಬಣ್ಣ, ಆಕಾರ ಮತ್ತು ಸ್ವಾದಕ್ಕೆ ಹೆಸರುವಾಸಿ. ಕಳೆದ ನೂರೈವತ್ತು ವರ್ಷಗಳಿಂದ ಸುಮಾರು ೫೦೦೦ ಹೆಕ್ಟೇರ್ ಪ್ರದೇಶದಲ್ಲಿ ಇದರ ಕೃಷಿ ನಡೆದುಕೊಂಡು ಬಂದಿದೆ.[೧] ಇದನ್ನು ಬೆಳೆಯಲು ಮರಳು ಮಿಶ್ರಿತ ಕಳಿಮಣ್ಣು ಭೂಮಿ ಪ್ರಸಕ್ತವಾಗಿದ್ದು, ದಿನದ ಉಷ್ಣಾಂಶ ಸುಮಾರು 35-37 ಡಿಗ್ರಿ ಸೆಲ್ಶಿಯಸ್ ಹಾಗೂ ರಾತ್ರಿಯ ಉಷ್ಣಾಂಶ 12-15 ಡಿಗ್ರಿ ಸೆಲ್ಶಿಯಸ್ ಇರಬೇಕಾಗುತ್ತದೆ. ಈ ವಾತಾವರಣಕ್ಕೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳು ಸೂಕ್ತವಾಗಿವೆ.[೨] ವರ್ಷವಿಡೀ ಈ ಬೆಳೆ ಇರುತ್ತಲಾದರೂ ಫೆಬ್ರವರಿ ನಡುವಿನಿಂದ ಏಪ್ರಿಲ್‍ವರೆಗೆ ಫಸಲು ಹೆಚ್ಚಿರುತ್ತದೆ. ಇದರ ವಿಶೇಷ ರುಚಿ ಹಾಗು ಗುಣದ ವಿಶಿಷ್ಟತೆಯಿಂದಾಗಿ ಇದು ೨೦೧೧ರಲ್ಲಿ ಭಾರತದ ಭೌಗೋಳಿಕ ಸಂಕೇತಗಳ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟಿದೆ.[೩]

ಬಳಕೆ[ಬದಲಾಯಿಸಿ]

ವಾರ್ಷಿಕ ೪.೫ ಲಕ್ಷ ಟನ್‍ಗಿಂತಲೂ ಹೆಚ್ಚು ಬೆಳೆಯಲಾಗುತ್ತಿದ್ದು, ಇದರಲ್ಲಿ ಹೆಚ್ಚಿನಂಶ ನೇರವಾಗಿ ತಿನ್ನಲು, ಜಾಮ್, ಜೆಲ್ಲಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಹುಳಿಮಿಶ್ರಿತ ಸಿಹಿಯುಳ್ಳ ಈ ದ್ರಾಕ್ಷಿಯನ್ನು ಜ್ಯೂಸ್ ತಯಾರಿಸಲು ಬಳಸಲಾಗುತ್ತದೆ. ಸುಮಾರು ನಾಲ್ಕು ಸಾವಿರ ಟನ್‍ಗಳಷ್ಟು ವೈನ್ ಕಾರ್ಖಾನೆಗಳಿಂದ ಕೊಳ್ಳಲ್ಪಡುತ್ತದೆ. ಈ ತಳಿಯ ದ್ರಾಕ್ಷಿಗಳಲ್ಲಿ ಗರಿಷ್ಟ ಶೇಕಡಾ ೧೦-೧೨ ಆಲ್ಕೋಹಾಲ್ ಅಂಶವಿರುತ್ತದೆ. ಆದ್ದರಿಂದ ಇದು ವೈನ್ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುವುದಿಲ್ಲ. ಸಾಮಾನ್ಯವಾಗಿ ವೈನ್ ತಯಾರಿಕೆಗೆ ಹೆಚ್ಚು ಆಲ್ಕೋಹಾಲ್ ಅಂಶವಿರುವ ಫ್ರೆಂಚ್ ತಳಿಯ ದ್ರಾಕ್ಷಿ ಬಳಸಲಾಗುತ್ತದೆ.[೪]

ಬೆಳೆ ಕುಸಿತ[ಬದಲಾಯಿಸಿ]

ಅಂತರ್ಜಲ ಮಟ್ಟ ಕುಸಿತ, ಕೃಷಿಭೂಮಿಯ ಪರಿವರ್ತನೆ ಮುಂತಾದ ವಿವಿಧ ಕಾರಣಗಳಿಂದಾಗಿ ದ್ರಾಕ್ಷಿತೋಟಗಳ ವಿಸ್ತೀರ್ಣ ಕಡಿಮೆಯಾಗುತ್ತಿದ್ದು ಈ ದ್ರಾಕ್ಷಿಯ ಉತ್ಪಾದನೆಯಲ್ಲಿ ವರ್ಷದಿಂದ ವರ್ಷಕ್ಕೆ ಇಳಿಯಾಗುತ್ತಿರುವುದು ವರದಿಯಾಗಿದೆ. [೫]

  • ೨೦೧೧-೧೨: ೨೯೭೨ ಹೆಕ್ಟೇರ್, ೫೭೮೪೭ ಟನ್
  • ೨೦೧೨-೧೩: ೨೯೫೦ ಹೆಕ್ಟೇರ್, ೫೬೦೧೧ ಟನ್
  • ೨೦೧೩-೧೪: ೨೭೯೪ ಹೆಕ್ಟೇರ್, ೫೨೨೭೯ ಟನ್

ಉಲ್ಲೇಖಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]