ಬೆಂಗಳೂರು ಗಾಯನ ಸಮಾಜ
ಬೆಂಗಳೂರು ಗಾಯನ ಸಮಾಜ | |
ಸ್ಥಾಪನೆ | 1905 |
---|---|
ಶೈಲಿ | ಸಭಾ |
ಸ್ಥಳ |
ಬೆಂಗಳೂರು ಗಾಯನ ಸಮಾಜ ಬೆಂಗಳೂರಿನ ಅತ್ಯಂತ ಹಳೆಯ ಸಾಂಸ್ಕೃತಿಕ ಸಂಸ್ಥೆ. ಗಾಯನ ಸಮಾಜವನ್ನು 1905 ರಲ್ಲಿ ಸ್ಥಾಪಿಸಲಾಯಿತು [೧] [೨] ಇದು ಭಾರತದಲ್ಲಿನ ಅತ್ಯಂತ ಹಳೆಯ ಮತ್ತು ಸಕ್ರಿಯ ಸಭಾ (ಆರ್ಟ್ಸ್ ಸೊಸೈಟಿ) ಆಗಿದೆ. ಈ ಸಂಸ್ಥೆಯು ಭಾರತೀಯ ಸಂಗೀತದ ವಿವಿಧ ಪ್ರಕಾರಗಳಾದ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಭಕ್ತಿ, ಲಘು ಸಂಗೀತ, ಹರಿಕಥೆ, ಜಾನಪದ ಸಂಗೀತ ಮತ್ತು ರಂಗಭೂಮಿ ಜೊತೆಗೆ ವಿವಿಧ ಭಾರತೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ, ಕೂಚಿಪುಡಿ, ಕಥಕ್, , ಚೌ, ಒಡಿಸ್ಸಿ ಮತ್ತು ಮಣಿಪುರಿಯ [೩]ಮೊದಲಾದ ಕಲಾಪ್ರಕಾರಗಳ ಕುರಿತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಇತಿಹಾಸ
[ಬದಲಾಯಿಸಿ]1905 ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯು ತನ್ನ ಶತಮಾನೋತ್ಸವವನ್ನು 2005 ರಲ್ಲಿ ಆಚರಿಸಿಕೊಂಡಿತು [೧]. ಬೆಂಗಳೂರಿನ ಲಂಡನ್ ಮಿಷನ್ ಹೈಸ್ಕೂಲ್ ಮುಖ್ಯೋಪಾಧ್ಯಾಯರಾಗಿದ್ದ ಕೆ.ರಾಮಚಂದ್ರರಾವ್ ಅವರು ಗಾಯನ ಸಮಾಜದ ರಚನೆಗೆ ಕಾರಣರಾದ ಪ್ರಮುಖರಲ್ಲಿ ಒಬ್ಬರು. ಆರಂಭಿಕ ವರ್ಷಗಳಲ್ಲಿ, ಗಾಯನ ಸಮಾಜವು ಆಯೋಜಿಸಿದ ಸಂಗೀತ ಕಛೇರಿಗಳು ಏಕಂಬಾರ ಸೌಜಿ ಹಾಲ್ ಅಥವಾ ಲಂಡನ್ ಮಿಷನ್ ಹೈಸ್ಕೂಲ್‌ನ ಸಭಾಂಗಣದಲ್ಲಿ ನಡೆಯುತ್ತಿದ್ದವು. 1920 ರ ದಶಕದ ಆರಂಭದಲ್ಲಿ, ಸ್ಥಳವನ್ನು ಹಳೆಯ ಸಂಸ್ಕೃತ ಕಾಲೇಜು ಕಟ್ಟಡಕ್ಕೆ ಬದಲಾಯಿಸಲಾಯಿತು. ಆರಂಭಿಕ ದಿನಗಳಲ್ಲಿ ಗಾಯನಸಮಾಜದ ಕಛೇರಿಯು ಚಾಮರಾಜಪೇಟೆಯ ಬಾಡಿಗೆ ಕಟ್ಟಡದಲ್ಲಿ ಇತ್ತು. [೪]
1926 ರಲ್ಲಿ, ಗಾಯನ ಸಮಾಜದ ಕಛೇರಿಯನ್ನು ಶಂಕರಯ್ಯ ಸಭಾಂಗಣಕ್ಕೆ ಸ್ಥಳಾಂತರಿಸಲಾಯಿತು, ಈ ಸಭಾಂಗಣವನ್ನು ಗಾಯನ ಸಮಾಜಕ್ಕಾಗಿ ವಿಶೇಷವಾಗಿ ನಿರ್ಮಿಸಲಾಗಿತ್ತು. ತನ್ನ ಕಚೇರಿಯನ್ನು ಪ್ರಸಕ್ತ ಕೆ.ಆರ್.ರಸ್ತೆಯಲ್ಲಿರುವ ಗಾಯನಸಮಾಜಕ್ಕೆ 1962 ಸ್ಥಳಾಂತರಗೊಂಳಿಸಲಾಯಿತು. ಎಂಎಸ್ ಸುಬ್ಬುಲಕ್ಷ್ಮಿ ಅವರ ವೈಯಕ್ತಿಕ ಕೊಡುಗೆ ಮತ್ತು ಅವರ ಸಂಗೀತ ಕಚೇರಿಗಳಿಂದ ಸಂಗ್ರಹಿಸಿದ ನಿಧಿಗಳು ಗಾಯನ ಸಮಾಜ ತನ್ನದೇ ಕಟ್ಟಡವನ್ನು ಪಡೆಯಲು ಅಪಾರ ಸಹಾಯ ಮಾಡಿದ್ದವು. ಗಾಯಾನ ಸಮಾಜವನ್ನು ಪ್ರಸ್ತುತ ಕಟ್ಟಡವನ್ನು ವಿವಿಧ ಹಂತಗಳಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತದ ನಿರ್ಮಾಣದ ಭಾಗವಾಗಿ ಮುಖ್ಯ ಸಭಾಂಗಣ ಮತ್ತು ವೇದಿಕೆಯನ್ನು ನಿರ್ಮಿಸಲಾಗಿದೆ. ಮತ್ತು ವೇದಿಕೆಯನ್ನು ನಿರ್ಮಿಸಲಾಗಿದೆ. ಕಟ್ಟಡದ ಮುಂಭಾಗ, ಸಭಾಂಗಣದಲ್ಲಿ ಇರುವ ಹೆಚ್ಚುವರಿ ಬಾಲ್ಕನಿ ಮತ್ತು ಸಿಬ್ಬಂದಿಗಳ ನಿಲಯಗಳನ್ನು ನಂತರದ ಹಂತಗಳಲ್ಲಿ ನಿರ್ಮಿಸಲಾಯಿತು. ಇತ್ತೀಚೆಗಷ್ಟೆ ಸಭಾಂಗಣ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ನವೀಕರಿಸಲಾಗಿದೆ. [೪]
2016ರಲ್ಲಿ ಕೆ.ಆರ್.ರಸ್ತೆಯಲ್ಲಿರುವ ಬೆಂಗಳೂರು ಗಾಯನ ಸಮಾಜ ಕಟ್ಟಡವನ್ನು ₹ 1.5 ಕೋಟಿ ವೆಚ್ಚದಲ್ಲಿ ನವೀಕರಿಸಲಾಗಿತ್ತು. ಎಂಟು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡು 15 ಜನವರಿ 2017 ರಂದು ಅಧಿಕೃತವಾಗಿ ಉದ್ಘಾಟನೆಗೊಂಡಿತು [೫] [೬]
ಕಾರ್ಯಕ್ರಮಗಳು
[ಬದಲಾಯಿಸಿ]ಬೆಂಗಳೂರು ಗಾಯನ ಸಮಾಜವು ಸದಸ್ಯರ ವಾರ್ಷಿಕ ಸಮ್ಮೇಳನ, ಸಂಗೀತ ಪ್ರದರ್ಶನಗಳು, ಉಪನ್ಯಾಸಗಳು ಮತ್ತು ಸಂಗೀತ ಕಚೇರಿಗಳಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ವಾರ್ಷಿಕ ಸಮ್ಮೇಳನದಲ್ಲಿ ಹೆಸರಾಂತ ಸಂಗೀತಗಾರರಿಗೆ ಸಂಗೀತ ಕಲಾರತ್ನ ಬಿರುದು ನೀಡಿ ಗೌರವಿಸಲಾಗುತ್ತದೆ. ಕರ್ನಾಟಕ ಸಂಗೀತದ ಹೆಸರಾಂತ ಸಂಯೋಜಕರಿಗೆ ಗೌರವ ಸಲ್ಲಿಸಲು ಸಂಯೋಜಕರ ದಿನದ ಕಾರ್ಯಕ್ರಮವೂ ಇದೆ. [೩]
ಪ್ರಕಟಣೆಗಳು
[ಬದಲಾಯಿಸಿ]ಗಾಯನ ಸಮಾಜವು ಸಂಸ್ಥೆಯ ವಿವಿಧ ಚಟುವಟಿಕೆಗಳ ವರದಿಗಳನ್ನು ಒಳಗೊಂಡಿರುವ ಗಾಯನ ಸಾಮ್ರಾಜ್ಯ ಎಂಬ ಮಾಸಿಕ ನಿಯತಕಾಲಿಕವನ್ನು ಪ್ರಕಟಿಸುತ್ತದೆ. ಗಾಯನ ಸಮಾಜದ ಇತಿಹಾಸದ ಪುಸ್ತಕವೂ ಪ್ರಕಟವಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತದ ವಿವಿಧ ಸಂಯೋಜಕರ ಕೊಡುಗೆಗಳ ಸಂಕಲನವನ್ನು ಪ್ರಕಟಿಸುವ ಕಾರ್ಯವನ್ನೂ ಇತ್ತೀಚೆಗೆ ಕೈಗೆತ್ತಿಕೊಳ್ಳಲಾಗಿದೆ. [೩]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "Mute testimony to Citys [sic] history". Online Edition of Deccan Herald, dated 2007-07-05. Archived from the original on 6 ಏಪ್ರಿಲ್ 2012. Retrieved 7 ನವೆಂಬರ್ 2007.
- ↑ "Bangalore Gayana Samaja award for Pattammal, Lalgudi Jayaraman". The Hindu. Chennai, India. 23 ನವೆಂಬರ್ 2005. Archived from the original on 2 ಮಾರ್ಚ್ 2006. Retrieved 9 ನವೆಂಬರ್ 2007.
- ↑ ೩.೦ ೩.೧ ೩.೨ "Gayana Samaja launches centenary celebrations". The Hindu. Chennai, India. 25 ಆಗಸ್ಟ್ 2004. Archived from the original on 27 ಸೆಪ್ಟೆಂಬರ್ 2004. Retrieved 7 ನವೆಂಬರ್ 2007.
- ↑ ೪.೦ ೪.೧ "In the service of music, dance". Online Edition of Deccan Herald, dated 2004-06-14. Archived from the original on 17 ನವೆಂಬರ್ 2007. Retrieved 7 ನವೆಂಬರ್ 2007.
- ↑ Govind, Ranjani. "Oldest running sabha in country gets a makeover". The Hindu. Retrieved 13 ಜನವರಿ 2017.
- ↑ Govind, Ranjani. "Oldest running sabha gets a makeover". The Hindu. Retrieved 13 ಜನವರಿ 2017.