ಬುಗಾಟ್ಟಿ ಆಟೋಮೊಬೈಲ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬುಗಾಟ್ಟಿ ಆಟೋಮೊಬೈಲ್ಸ್ ಎಸ್.ಎ.ಎಸ್.
ಸಂಸ್ಥೆಯ ಪ್ರಕಾರಅಂಗಸಂಸ್ಥೆ
ಪೂರ್ವಾಧಿಕಾರಿಬುಗಾಟಿ ಆಟೋಮೊಬಿಲಿ ಎಸ್.ಪಿ.ಎ.[೧]
ಮುಖ್ಯ ಕಾರ್ಯಾಲಯಮೊಲ್ಶೈಮ್, ಫ್ರಾನ್ಸ್[೨]
ಪ್ರಮುಖ ವ್ಯಕ್ತಿ(ಗಳು)ಮೇಟ್ ರಿಮಾಕ್
(ಬುಗಾಟಿ ರಿಮಾಕ್ ನ ಸಿಇಒ)
ಉದ್ಯಮಆಟೋಮೋಟಿವ್ ಉದ್ಯಮ
ಉತ್ಪನ್ನಸ್ಪೋರ್ಟ್ಸ್ ಕಾರು
ಉತ್ಪನ್ನ ಫಲಿತಾಂಶIncrease ೭೬ ವಾಹನಗಳು (೨೦೧೮)[೩]
ಉದ್ಯೋಗಿಗಳು೨೯೭ (೨೦೧೬)
ಪೋಷಕ ಸಂಸ್ಥೆಬುಗಾಟಿ ರಿಮಾಕ್ ಡಿ.ಒ.ಒ. ಮತ್ತು ಫೋಕ್ಸ್ ವ್ಯಾಗನ್ ಗ್ರೂಪ್
ಉಪಸಂಸ್ಥೆಗಳು
 • ಬುಗಾಟ್ಟಿ ಎಂಜಿನಿಯರಿಂಗ್ ಜಿಎಂಬಿಎಚ್
 • ಬುಗಾಟ್ಟಿ ಇಂಟರ್ನ್ಯಾಷನಲ್ ಎಸ್.ಎ.[೨]
ಜಾಲತಾಣwww.bugatti.com


ಬುಗಾಟ್ಟಿ ಆಟೋಮೊಬೈಲ್ಸ್ ಎಸ್.ಎ.ಎಸ್ (ಫ್ರೆಂಚ್ ಉಚ್ಚಾರಣೆಯಲ್ಲಿ: ಬೈಗಾಟಿ)ಇದು ಫ್ರೆಂಚ್‌ನ ಐಷಾರಾಮಿ ಸ್ಪೋರ್ಟ್ಸ್ ಕಾರು ತಯಾರಕ ಸಂಸ್ಥೆಯಾಗಿದೆ. ಈ ಕಂಪನಿಯು ೧೯೯೮ ರಲ್ಲಿ ವೋಕ್ಸ್‌ವ್ಯಾಗನ್ ಗ್ರೂಪ್‌ನ ಅಂಗಸಂಸ್ಥೆಯಾಗಿ ಸ್ಥಾಪಿಸಲ್ಪಟ್ಟಿತು. ಇದು ಫ್ರಾನ್ಸ್‌ನ ಅಲ್ಸೇಸ್‌ನ ಮೊಲ್ಶೈಮ್‌ನಲ್ಲಿ ನೆಲೆಗೊಂಡಿದೆ. ಬುಗಾಟ್ಟಿ ಆಟೋಮೊಬೈಲ್ ಬ್ರಾಂಡ್ ಅನ್ನು ೧೯೦೯ ರಲ್ಲಿ ಮೊಲ್ಶೈಮ್ನಲ್ಲಿ ಎಟ್ಟೋರ್ ಬುಗಾಟ್ಟಿಯವರು (೧೮೮೧-೧೯೪೭) ಸ್ಥಾಪಿಸಿದರು. ನಂತರ ಕ್ರೀಡೆ, ರೇಸಿಂಗ್ ಮತ್ತು ಐಷಾರಾಮಿ ಕಾರುಗಳ ತಯಾರಿಕೆಗೆ ಕಾರಣರಾದರು. [೪]

ನವೆಂಬರ್ ೨೦೨೧ ರಲ್ಲಿ, ಕಂಪನಿಯು ರಿಮಾಕ್ ಗ್ರೂಪ್ ಮತ್ತು ಪೋರ್ಷೆ‌ಎಜಿ ನಡುವಿನ ಜಂಟಿ ಉದ್ಯಮವಾದ ಬುಗಾಟ್ಟಿ ರಿಮ್ಯಾಕ್‌ನ ಭಾಗವಾಯಿತು. ನವೆಂಬರ್ ೧, ೨೦೨೧ ರಿಂದ, ಬುಗಾಟ್ಟಿ ರಿಮ್ಯಾಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮೇಟ್ ರಿಮಾಕ್‌ರವರು ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ.

ಇತಿಹಾಸ[ಬದಲಾಯಿಸಿ]

ಡಿಸೆಂಬರ್ ೨೨, ೧೯೯೮ ರಂದು, ವೋಕ್ಸ್‌ವ್ಯಾಗನ್ ಎಜಿಯು, ಈಗ ಪೋರ್ಷೆ‌ಎಸ್‌ಇ ನಿಯಂತ್ರಣದಲ್ಲಿರುವ ಜರ್ಮನ್ ವಾಹನ ತಯಾರಕರಾದ, ಬುಗಾಟ್ಟಿ ಆಟೋಮೊಬೈಲ್ಸ್ ಎಸ್‌ಎಎಸ್ ಅನ್ನು ಫ್ರೆಂಚ್-ನೋಂದಾಯಿತ, ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿ ಸ್ಥಾಪಿಸಿಲಾಯಿತು. ಅದೇ ದಿನ, ಕಂಪನಿಯು ೧೯೮೭ ಮತ್ತು ೧೯೯೮ ರ ನಡುವೆ ಇಟಲಿಯಲ್ಲಿ ಬುಗಾಟ್ಟಿ ಎಸ್‌ಪಿಎಯೊಂದಿಗೆ ಸೂಪರ್ ಕಾರುಗಳನ್ನು (ಇಬಿ ೧೦ ಮತ್ತು ಇಬಿ ೧೧೨ ನಂತಹ) ನಿರ್ಮಿಸಿದ ಇಟಾಲಿಯನ್ ಉದ್ಯಮಿಯಾದ ರೊಮಾನೊ ಆರ್ಟಿಯೋಲಿ ಅವರಿಂದ ಬುಗಾಟ್ಟಿಯ ವಿನ್ಯಾಸ ಮತ್ತು ಹೆಸರಿಸುವ ಹಕ್ಕುಗಳನ್ನು ವಹಿಸಿಕೊಂಡಿತು. ೨೦೦೦ ವರ್ಷದಿಂದ, ಬುಗಾಟ್ಟಿ ಆಟೋಮೊಬೈಲ್ ಬ್ರಾಂಡ್ ಅಧಿಕೃತವಾಗಿ ಬುಗಾಟ್ಟಿ ಆಟೋಮೊಬೈಲ್ಸ್ ಎಸ್ಎಎಸ್ ಎಂಬ ಹೆಸರಿನಿಂದ ಅಸ್ತಿತ್ವದಲ್ಲಿದೆ. ಇದನ್ನು ಇನ್ನೂ ಬುಗಾಟ್ಟಿ ಎಂದು ಸಂಕ್ಷಿಪ್ತಗೊಳಿಸಲಾಗಿದೆ.

ಡಿಸೆಂಬರ್ ೨೨, ೨೦೦೦ ರಂದು, ವೋಕ್ಸ್ ವ್ಯಾಗನ್ ಅಧಿಕೃತವಾಗಿ ಬುಗಾಟ್ಟಿ ಆಟೋಮೊಬೈಲ್ಸ್ ಎಸ್‌ಎಎಸ್ ಅನ್ನು ಸಂಯೋಜಿಸಿತು. ಮಾಜಿ ವಿಡಬ್ಲ್ಯೂ ಡ್ರೈವ್‌ಟ್ರೇನ್‌ನ ಮುಖ್ಯಸ್ಥರಾದ ಕಾರ್ಲ್-ಹೈಂಜ್ ನ್ಯೂಮನ್ರವರು ಅಧ್ಯಕ್ಷರಾಗಿದ್ದರು. ಕಂಪನಿಯು ೧೮೫೬ ರ ಚಾಟೌ ಸೇಂಟ್-ಜೀನ್ ಎಂಬ ಕಟ್ಟಡವನ್ನು ಖರೀದಿಸಿತು. ಇದು ಹಿಂದೆ ಮೊಲ್ಶೈಮ್ ಬಳಿಯ ಡೊರ್ಲಿಶೈಮ್‌ನಲ್ಲಿ ಎಟ್ಟೋರ್ ಬುಗಾಟ್ಟಿಯ ಅತಿಥಿ ಗೃಹವಾಗಿತ್ತು ಮತ್ತು ಕಂಪನಿಯ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸಲು ಅದನ್ನು ನವೀಕರಿಸಲು ಪ್ರಾರಂಭಿಸಿತು. ಇದರ ಮೂಲ ಕಾರ್ಖಾನೆಯು ಇನ್ನೂ ಸ್ನೆಕ್ಮಾ ಅವರ ಕೈಯಲ್ಲಿತ್ತು. ಆದರೆ, ಅವರು ಅದನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಆಗಸ್ಟ್ ೨೦೦೦ ರಲ್ಲಿ ಪೆಬಲ್ ಬೀಚ್ ಕಾನ್ಕೋರ್ಸ್ ಡಿ ಎಲಿಗನ್ಸ್‌ನಲ್ಲಿ, ವಿಡಬ್ಲ್ಯೂ ಸಂಸ್ಥೆಯವರು ಅವರ ಚಾಟೌನ ಪಕ್ಕದಲ್ಲಿ ಮತ್ತು ದಕ್ಷಿಣದಲ್ಲಿ ಹೊಸ ಆಧುನಿಕ ಅಟೆಲಿಯರ್ (ಕಾರ್ಖಾನೆ) ಅನ್ನು ನಿರ್ಮಿಸುವುದಾಗಿ ಘೋಷಿಸಿದರು. ೨೦೦೫ರ ಸೆಪ್ಟೆಂಬರ್ ೩ ರಂದು ಅಟೆಲಿಯರ್‌ ಎಂಬ ಕಾರ್ಖಾನೆಯನ್ನು ಅನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. [೫]

ಸೆಪ್ಟೆಂಬರ್ ೨೦೨೦ ರಲ್ಲಿ, ವೋಕ್ಸ್ ವ್ಯಾಗನ್ ತನ್ನ ಬುಗಾಟ್ಟಿ ಆಟೋಮೊಬೈಲ್ ಬ್ರಾಂಡ್ ಅನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿದೆ ಎಂದು ಘೋಷಿಸಲಾಯಿತು ಮತ್ತು ಕ್ರೊಯೇಷಿಯನ್ ಕಂಪನಿ ರಿಮಾಕ್ ಆಟೋಮೊಬಿಲಿಯೊಂದಿಗೆ ಮಾತುಕತೆ ಪ್ರಾರಂಭವಾಯಿತು. [೬] ೨೦೦೫ ರಿಂದ ಸುಮಾರು ೭೦೦ ಬುಗಾಟ್ಟಿ ಕಾರುಗಳು ಮಾರಾಟವಾಗಿವೆ. ಆದರೆ, ವೋಕ್ಸ್ ವ್ಯಾಗನ್ ಗ್ರೂಪ್‌ನ ಸಿಇಒ ಆದ ಹರ್ಬರ್ಟ್ ಡೈಸ್‌ರವರು ಲಾಭದಾಯಕವಲ್ಲದ ಬ್ರಾಂಡ್ ಅನ್ನು ಭರಾವಣಿ ಎಂದು ಹೇಳಿದ್ದಾರೆ ಎಂದು ಈ ಮೂಲಕ ಕಂಪನಿಯು ತಿಳಿಸಿದೆ. [೭]

ಕಲ್ಪನೆಯ ಕಾರುಗಳು[ಬದಲಾಯಿಸಿ]

ಇಟಾಲ್ ಡಿಸೈನ್ ಗಿಯುಗಿಯಾರೊ ವಿನ್ಯಾಸಗಳು[ಬದಲಾಯಿಸಿ]

ವೋಕ್ಸ್ ವ್ಯಾಗನ್ ಇಟಾಲ್ ಡಿಸೈನ್‌ನ ಜಾರ್ಗೆಟ್ಟೊ ಗಿಯುಗಿಯಾರೊ ಅವರನ್ನು ಕಲ್ಪನೆಯ ಕಾರುಗಳ ಸರಣಿಯನ್ನು ವಿನ್ಯಾಸಗೊಳಿಸಲು ನಿಯೋಜಿಸಿತು. [೮][೯] ಮೊದಲ ಉದಾಹರಣೆಯಾದ ಇಬಿ ೧೧೮, ಎರಡು-ಬಾಗಿಲುಗಳ ವಾಹನವಾಗಿದ್ದು, ಇದನ್ನು ೧೯೯೮ ರಲ್ಲಿ ಪ್ಯಾರಿಸ್ ಮೋಟಾರ್ ಶೋನಲ್ಲಿ ಪರಿಚಯಿಸಲಾಯಿತು. [೧೦] ಇದರ ನಂತರ, ೧೯೯೯ ರಲ್ಲಿ ಜಿನೀವಾ ಮೋಟಾರ್ ಶೋನಲ್ಲಿ ಪರಿಚಯಿಸಲಾದ ನಾಲ್ಕು-ಬಾಗಿಲುಗಳ ಇಬಿ ೨೧೮ ಟೂರಿಂಗ್ ಸೆಡಾನ್ ಅನ್ನು ಪರಿಚಯಿಸಲಾಯಿತು. ಅದೇ ವರ್ಷದ ನಂತರ, ಫ್ರಾಂಕ್ ಫರ್ಟ್‌ನ ಐಎಎಯಲ್ಲಿ, ೧೮/೩ ಚಿರಾನ್ ಅನ್ನು ತೋರಿಸಲಾಯಿತು. [೧೧]

ವೋಕ್ಸ್ ವ್ಯಾಗನ್‌ನ ವಿನ್ಯಾಸಗಳು[ಬದಲಾಯಿಸಿ]

ವೋಕ್ಸ್ ವ್ಯಾಗನ್ ಅಂತಿಮ ಬುಗಾಟ್ಟಿ ಕಾನ್ಸೆಪ್ಟ್ ಇಬಿ ೧೮/೪ ಜಿಟಿಯನ್ನು ಆಂತರಿಕವಾಗಿ ವಿನ್ಯಾಸಗೊಳಿಸಿದೆ. ಬುಗಾಟ್ಟಿ ೧೯೯೯ ರ ಟೋಕಿಯೊ ಮೋಟಾರ್ ಶೋನಲ್ಲಿ ಇಬಿ ೧೮/೪ ಅನ್ನು ಪರಿಚಯಿಸಿತು.

ಡಬ್ಲ್ಯೂ೧೮ ಎಂಜಿನ್[ಬದಲಾಯಿಸಿ]

ಈ ಎಲ್ಲಾ ಆರಂಭಿಕ ಪರಿಕಲ್ಪನೆಗಳು ೫೫೫ ಪಿಎಸ್ (೪೦೮ ಕಿಲೋವ್ಯಾಟ್, ೫೪೭ ಎಚ್ ಪಿ) ೧೮-ಸಿಲಿಂಡರ್ ಎಂಜಿನ್ ಅನ್ನು ಹೊಂದಿದ್ದವು. ಇದು ಪ್ರಯಾಣಿಕರ ವಾಹನದಲ್ಲಿ ಮೊದಲ ಡಬ್ಲ್ಯೂ-ಕಾನ್ಫಿಗರೇಶನ್ ಎಂಜಿನ್ ಆಗಿದ್ದು, ತಲಾ ೬ ಸಿಲಿಂಡರ್‌ಗಳ ಮೂರು ಬ್ಲಾಕ್‌ಗಳನ್ನು ಹೊಂದಿದೆ. ಇದು ವೋಕ್ಸ್ ವ್ಯಾಗನ್ ನ ನಿಯತಕಾಲಿಕವಾಗಿ ಎಂಜಿನ್ ಕುಟುಂಬದೊಂದಿಗೆ ಅನೇಕ ಘಟಕಗಳನ್ನು ಹಂಚಿಕೊಂಡಿದೆ.

೧೬ಸಿ ಗ್ಯಾಲಿಬಿಯರ್[ಬದಲಾಯಿಸಿ]

ಮೊಲ್ಶೈಮ್‌ನಲ್ಲಿ ಮಾರ್ಕ್ಯೂನ ಶತಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ ೧೬ ಸಿ ಗ್ಯಾಲಿಬಿಯರ್ ಅನ್ನು ಅನಾವರಣಗೊಳಿಸಲಾಯಿತು. ಆದರೆ, ಇದು ಪ್ರಸ್ತುತ ಬುಗಾಟ್ಟಿ ಗ್ರಾಹಕರಿಗೆ ಮಾತ್ರ. ಮೊಲ್ಶೈಮ್‌ನಲ್ಲಿ ನಡೆದ ಕಾರ್ ಶೋನಲ್ಲಿ ಕಾರನ್ನು ನೀಲಿ ಕಾರ್ಬನ್ ಫೈಬರ್ ಮತ್ತು ಅಲ್ಯೂಮಿನಿಯಂ ಭಾಗಗಳಲ್ಲಿ ತೋರಿಸಲಾಯಿತು. ಒಂದು ವರ್ಷದ ನಂತರ ಬುಗಾಟ್ಟಿ ಜಿನೀವಾ ಆಟೋ ಶೋನಲ್ಲಿ "ವಿಡಬ್ಲ್ಯೂ ಗ್ರೂಪ್ ನೈಟ್" ನಲ್ಲಿ ೧೬ ಸಿ ಗ್ಯಾಲಿಬಿಯರ್ ಕಾನ್ಸೆಪ್ಟ್ ಅನ್ನು ಹೊಸ ಕಪ್ಪು ಮತ್ತು ಅಲ್ಯೂಮಿನಿಯಂ ಬಣ್ಣದ ಸಂಯೋಜನೆಯಲ್ಲಿ ಜಗತ್ತಿಗೆ ತೋರಿಸಿತು.

ಉತ್ಪಾದನಾ ಕಾರುಗಳು[ಬದಲಾಯಿಸಿ]

ಬುಗಾಟಿ ಇಬಿ ೧೧೦

೧೯೮೦ ರ ದಶಕದಲ್ಲಿ, ಬುಗಾಟ್ಟಿ ಬ್ರಾಂಡ್ ಅನ್ನು ಬುಗಾಟ್ಟಿ ಆಟೋಮೊಬಿಲಿ ಎಸ್.ಪಿ.ಎ ಎಂದು ಇಟಲಿಯಲ್ಲಿ ಮರಳಿ ತರಲಾಯಿತು. ಹಾಗೂ ಕಂಪನಿಯು ಬುಗಾಟ್ಟಿ ಇಬಿ ೧೧೦ ಅನ್ನು ಉತ್ಪಾದಿಸಿತು. ೧೯೯೦ ರ ದಶಕದಲ್ಲಿ, ಇಬಿ ೧೧೦ ಹೆಸರಿನ ಕಾರು ಬುಗಾಟ್ಟಿಯನ್ನು ಆಧುನಿಕ ಸೂಪರ್-ಕಾರ್ ದೃಶ್ಯಕ್ಕೆ ಮರಳಿ ತಂದಿತು. ನಂತರ ಈ ಕಂಪನಿಯನ್ನು ೨೦ ನೇ ಶತಮಾನದ ಕೊನೆಯಲ್ಲಿ ವೋಕ್ಸ್ ವ್ಯಾಗನ್ ಖರೀದಿಸಿತು.

ವೆಯ್ರಾನ್[ಬದಲಾಯಿಸಿ]

ಬುಗಾಟ್ಟಿ ವೆಯ್ರಾನ್

೨೦೦೦ ರಲ್ಲಿ, ಕಂಪನಿಯು ಹೊಸ ಎಂಜಿನ್ ಪರಿಕಲ್ಪನೆಯನ್ನು ಪರಿಚಯಿಸಿತು. ಪ್ಯಾರಿಸ್, ಜಿನಿವಾ ಮತ್ತು ಡೆಟ್ರಾಯಿಟ್ ಆಟೋ ಪ್ರದರ್ಶನಗಳಲ್ಲಿ, ಬುಗಾಟ್ಟಿ ಇಬಿ ೧೬/೪ ವೆಯ್ರಾನ್ ಕಾನ್ಸೆಪ್ಟ್ ಕಾರು, ಆಲ್-ವೀಲ್ ಡ್ರೈವ್ ೧೬-ಸಿಲಿಂಡರ್ ಕಾರು, ೧,೦೦೧ ಪಿಎಸ್ (೭೩೬ ಕಿಲೋವ್ಯಾಟ್, ೯೮೭ ಎಚ್‌ಪಿ) ಎಂಜಿನ್ ಉತ್ಪತ್ತಿ ಹೊಂದಿರುವ ಆಲ್-ವೀಲ್ ಡ್ರೈವ್ ೧೬-ಸಿಲಿಂಡರ್ ಕಾರನ್ನು ಪ್ರಸ್ತುತಪಡಿಸಿತು. [೧೨] ಇಬಿ ೧೬/೪ ವೆಯ್ರಾನ್ ನಾಲ್ಕು ಟರ್ಬೋಚಾರ್ಜರ್‌ಗಳೊಂದಿಗೆ ೮.೦-ಲೀಟರ್ ಎಂಜಿನ್ ಅನ್ನು ಹೊಂದಿದೆ. ಇದು ಗಂಟೆಗೆ ೪೦೭ ಕಿ.ಮೀ (೨೫೩ ಮೈಲಿ) ಗರಿಷ್ಠ ವೇಗವನ್ನು ತಲುಪುತ್ತದೆ. ಆ ಸಮಯದಲ್ಲಿ, ವೆಯ್ರಾನ್ ಇದುವರೆಗೆ ನಿರ್ಮಿಸಲಾದ ಅತ್ಯಂತ ಶಕ್ತಿಶಾಲಿ ಮತ್ತು ವೇಗದ ಸೂಪರ್ ಕಾರ್ ಆಗಿತ್ತು. ವೇಗೋತ್ಕರ್ಷ ಪರೀಕ್ಷೆಗಳಲ್ಲಿ, ಇದು ೨.೫ ಸೆಕೆಂಡುಗಳ ನಂತರ ೧೦೦ ಕಿಮೀ. ಗಂ. (೬೨ ಮೈಲಿ), ೭.೩ ಸೆಕೆಂಡುಗಳ ನಂತರ ೨೦೦ ಕಿಮೀ. ಗಂ. (೧೨೪ ಮೈಲಿ) ಮತ್ತು ೧೬.೮ ಸೆಕೆಂಡುಗಳ ನಂತರ, ೩೦೦ ಕಿಮೀ. ಗಂ. (೧೮೬ ಮೈಲಿ) ವೇಗವನ್ನು ತಲುಪುತ್ತದೆ. [೧೩]

ಅಭಿವೃದ್ಧಿಯು ಆರಂಭದಲ್ಲಿ ೨೦೦೧ ರವರೆಗೆ ಮುಂದುವರೆಯಿತು. ಇಬಿ ೧೬/೪ ವೆಯ್ರಾನ್‌ಗೆ ಜಾಹೀರಾತಿನಲ್ಲಿ "ಸುಧಾರಿತ ಪರಿಕಲ್ಪನೆಯ" ಸ್ಥಾನಮಾನವನ್ನು ನೀಡಲಾಯಿತು. ೨೦೦೧ ರ ಕೊನೆಯಲ್ಲಿ, ಬುಗಾಟ್ಟಿ ಈ ಕಾರನ್ನು ಈಗ ಅಧಿಕೃತವಾಗಿ ಬುಗಾಟ್ಟಿ ವೆಯ್ರಾನ್ ೧೬.೪ ಎಂದು ಕರೆಯಲಾಗುತ್ತದೆ ಎಂದು ಘೋಷಿಸಿತು. [೧೪] ಸಂಖ್ಯೆಗಳ ಸಂಯೋಜನೆ ಎಂದರೆ ೧೬ ಸಿಲಿಂಡರ್‌ಗಳು ಮತ್ತು ನಾಲ್ಕನೇ ವಿನ್ಯಾಸ ಅಧ್ಯಯನವಾಗಿದೆ. ಆರಂಭದಲ್ಲಿ, ಉತ್ಪಾದನೆಯನ್ನು ೨೦೦೩ ರಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಡ್ಯುಯಲ್-ಕ್ಲಚ್ ಟ್ರಾನ್ಸ್ಮಿಷನ್ನೊಂದಿಗಿನ ತಾಂತ್ರಿಕ ತೊಂದರೆಗಳು ಮತ್ತು ಗಂಟೆಗೆ ೩೦೦ ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಅಸಾಮಾನ್ಯ, ವಿಪರೀತ ಅವಶ್ಯಕತೆಗಳು ಹಲವಾರು ವಿಳಂಬಗಳಿಗೆ ಕಾರಣವಾಯಿತು. ಅಂತಿಮವಾಗಿ, ಸೆಪ್ಟೆಂಬರ್ ೨೦೦೫ ರಲ್ಲಿ ಉತ್ಪಾದನೆ ಪ್ರಾರಂಭವಾಯಿತು ಮತ್ತು ದೀರ್ಘ ಕಾಯುವಿಕೆಯ ಸಮಯದಿಂದಾಗಿ ವಾರ್ಷಿಕ ಉತ್ಪಾದನೆಯನ್ನು ೭೦ ಘಟಕಗಳಿಗೆ ಹೆಚ್ಚಿಸಲಾಯಿತು. [೧೫]

ಚಿರಾನ್[ಬದಲಾಯಿಸಿ]

ಬುಗಾಟ್ಟಿ ಚಿರಾನ್

ನವೆಂಬರ್ ೩೦, ೨೦೧೫ ರಂದು, ಬುಗಾಟ್ಟಿ ವೆಯ್ರಾನ್‌ನ ಉತ್ತರಾಧಿಕಾರಿಯನ್ನು ಚಿರಾನ್ ಎಂದು ಕರೆಯಲಾಗುವುದು ಎಂದು ಘೋಷಿಸಿದರು. ಬುಗಾಟ್ಟಿ ಟೈಪ್ ೩೫ ನಲ್ಲಿ ತನ್ನ ರೇಸಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿತು ಮತ್ತು ಹಲವಾರು ಗ್ರ್ಯಾಂಡ್ ಪ್ರಿಕ್ಸ್‌ರೇಸ್‌ಗಳನ್ನು ಗೆದ್ದ ಮೊನೆಗಾಸ್ಕ್ ರೇಸಿಂಗ್ ಚಾಲಕ ಲೂಯಿಸ್ ಚಿರಾನ್‌ರವರಿಗೆ ಈ ಹೆಸರನ್ನು ಅರ್ಪಿಸಲಾಗಿದೆ. [೧೬] ಫೆಬ್ರವರಿ ೨೯, ೨೦೧೬ ರಂದು, ಬುಗಾಟ್ಟಿ ತನ್ನ ಹೊಸ ಚಿರಾನ್ ಹೈಪರ್ ಕಾರ್ ಅನ್ನು ಜಿನೀವಾ ಮೋಟಾರ್ ಶೋನಲ್ಲಿ ಅನಾವರಣಗೊಳಿಸಿತು. ಇದು ನಾಲ್ಕು ಟರ್ಬೋಚಾರ್ಜರ್ ಗಳೊಂದಿಗೆ ೮.೦-ಲೀಟರ್, ೧೬-ಸಿಲಿಂಡರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಆದರೆ, ಈಗ ೧,೫೦೦ ಪಿಎಸ್ (೧,೧೦೩ ಕಿಲೋವ್ಯಾಟ್, ೧,೪೭೯ ಎಚ್‌ಪಿ) ಮತ್ತು ೧,೬೦೦ ನ್ಯೂಟನ್ ಮೀಟರ್ ಟಾರ್ಕ್ ನೊಂದಿಗೆ ಹೆಸರಿಸಲಾಗಿದೆ. ಚಿರಾನ್ ೨.೪ ಸೆಕೆಂಡುಗಳಲ್ಲಿ ೧೦೦ ಕಿಮೀ. ಗಂ. (೬೨ ಮೈಲಿ) ವೇಗವನ್ನು ಹೆಚ್ಚಿಸುತ್ತದೆ. ೬.೧ ಸೆಕೆಂಡುಗಳಲ್ಲಿ ೨೦೦ ಕಿಮೀ. ಗಂ. (೧೨೪ ಮೈಲಿ) ಮತ್ತು ೧೩.೧ ಸೆಕೆಂಡುಗಳಲ್ಲಿ ೩೦೦ ಕಿಮೀ. ಗಂ. (೧೮೬ ಮೈಲಿ) ತಲುಪುತ್ತದೆ. ಇದರ ಟಾಪ್ ಸ್ಪೀಡ್ ಪ್ರತಿ ಗಂಟೆಗೆ ೪೨೦ ಕಿ.ಮೀ. ಬುಗಾಟ್ಟಿ ೧,೫೦೦ ಬಿಹೆಚ್‌ಪಿ ಉತ್ಪಾದಿಸುವ ಡಬ್ಲ್ಯೂ ೧೬ ಎಂಜಿನ್ ಅನ್ನು ನಿರ್ಮಿಸಿದ ಏಕೈಕ ವಾಹನ ತಯಾರಕ ಕಂಪನಿಯಾಗಿದೆ. ೨೦೧೬ ರಿಂದ, ಚಿರಾನ್ ಮೊದಲ ಸಾಮೂಹಿಕವಾಗಿ ಉತ್ಪಾದಿಸಿದ ೩-ಡಿ ಮುದ್ರಿತ ಘಟಕಕ್ಕೆ ನೆಲೆಯಾಗಿದೆ. ಇದು ಪ್ರಸರಣ ತೈಲ ನಾಳದ ಮೇಲೆ ಸಣ್ಣ ಆಧಾರವಾಗಿ ಕೆಲಸ ಮಾಡುತ್ತದೆ. [೧೭]

ಡಿವೊ[ಬದಲಾಯಿಸಿ]

೨೦೧೮ ಪ್ಯಾರಿಸ್ ಮೋಟಾರ್ ಶೋ

ಜುಲೈ ೨೦೧೮ ರಲ್ಲಿ, ಬುಗಾಟ್ಟಿ ಚಿರಾನ್ ಆಧಾರಿತ ಟ್ರ್ಯಾಕ್-ಕೇಂದ್ರಿತ ವಾಹನವಾದ ಡಿವೊ ಹೈಪರ್ಕಾರ್ನ ೪೦ ಘಟಕಗಳನ್ನು ನಿರ್ಮಿಸುವುದಾಗಿ ಘೋಷಿಸಿತು. ೫ ಮಿಲಿಯನ್ ನಿವ್ವಳ ಯೂನಿಟ್ ಬೆಲೆಯಲ್ಲಿದ್ದ ಕಾರುಗಳು ಕೆಲವೇ ದಿನಗಳಲ್ಲಿ ಮಾರಾಟವಾದವು. [೧೮][೧೯] ಆಗಸ್ಟ್ ೨೦೧೮ ರಲ್ಲಿ, ಮಾಂಟೆರೆ ಕಾರ್ ವೀಕ್‌ನ ಭಾಗವಾಗಿ "ದಿ ಕ್ವಿಲ್: ಎ ಮೋಟಾರ್ ಸ್ಪೋರ್ಟ್ಸ್ ಕೂಟ" ದಲ್ಲಿ ಡಿವೊವನ್ನು ಮೊದಲ ಬಾರಿಗೆ ಸಾರ್ವಜನಿಕರಿಗೆ ತೋರಿಸಲಾಯಿತು. [೨೦] ಡಿವೊದೊಂದಿಗೆ, ಬುಗಾಟ್ಟಿ ಆಧುನಿಕ ಕೋಚ್ ನಿರ್ಮಾಣವನ್ನು ಪ್ರಾರಂಭಿಸಿತು. [೨೧][೨೨]

ಲಾ ವೊಯಿಚರ್ ನೊಯಿರ್[ಬದಲಾಯಿಸಿ]

ಬುಗಾಟ್ಟಿ ಲಾ ವೊಯಿಚರ್ ನೊಯಿರ್

ಲಾ ವೊಯಿಚರ್ ನೊಯಿರ್ (ಕಪ್ಪು ಕಾರು) ಇದು ೨೦೧೯ ರಲ್ಲಿ, ಬುಗಾಟ್ಟಿ ನಿರ್ಮಿಸಿದ ಮತ್ತು ಮಾರಾಟ ಮಾಡಿದ ವಿಶೇಷ ಆವೃತ್ತಿಯ ಕಾರಾಗಿದೆ. ಇದನ್ನು ೨೦೧೯ ರ ಜಿನೀವಾ ಮೋಟಾರ್ ಶೋನಲ್ಲಿ ಪ್ರಸ್ತುತಪಡಿಸಲಾಯಿತು. ಈ ಕಾರು ಜೀನ್ ಬುಗಾಟ್ಟಿಯ ಪ್ರಸಿದ್ಧ 'ಕಾಣೆಯಾದ' ಬುಗಾಟ್ಟಿ ಟೈಪ್ ೫೭ ಎಸ್‌ಸಿ ಅಟ್ಲಾಂಟಿಕ್‌ಗೆ ಗೌರವ ಸಲ್ಲಿಸುತ್ತದೆ. [೨೩][೨೪]

ಬೊಲೈಡ್[ಬದಲಾಯಿಸಿ]

ಮಿಲನೊ ಮೋಟಾರ್ ಶೋ ೨೦೨೧ ರಲ್ಲಿ ಬುಗಾಟ್ಟಿ ಬೊಲೈಡ್

ಬೊಲೈಡ್ ಬುಗಾಟ್ಟಿಯ ಮೊದಲ ಟ್ರ್ಯಾಕ್-ಮಾತ್ರ ಹೈಪರ್-ಕಾರ್ ಆಗಿದ್ದು. ಅಕ್ಟೋಬರ್ ೨೦೨೦ ರಲ್ಲಿ, ಡಿಜಿಟಲ್ ಆಗಿ ಅನಾವರಣಗೊಂಡಿತು. ಬುಗಾಟ್ಟಿಯ ಅಸ್ತಿತ್ವದಲ್ಲಿರುವ ೮.೦-ಲೀಟರ್ ಬುಗಾಟ್ಟಿ ಡಬ್ಲ್ಯೂ ೧೬ ಎಂಜಿನ್ ಸುತ್ತಲೂ ನಿರ್ಮಿಸಲಾದ ಎಂಜಿನಿಯರ್‌ಗಳು ಕನಿಷ್ಠ ಬಾಡಿವರ್ಕ್ ಅನ್ನು ಮಾತ್ರ ವಿನ್ಯಾಸಗೊಳಿಸಿದರು. ಇದರ ಫಲಿತಾಂಶವು ಸಾಧ್ಯವಿರುವ ಅತ್ಯಂತ ಚಿಕ್ಕ ಶೆಲ್ ಆಗಿದೆ. ಕಾನ್ಸೆಪ್ಟ್ ಆವೃತ್ತಿಯು ೧,೩೬೧ ಕಿಲೋವ್ಯಾಟ್ (೧,೮೨೫ ಎಚ್ ಪಿ, ೧,೮೫೦ ಪಿಎಸ್) ಪವರ್ ಉತ್ಪತ್ತಿ ಅನ್ನು ಹೊಂದಿದ್ದರೂ, ಇದನ್ನು ೧೧೦-ಆಕ್ಟೇನ್ ರೇಸಿಂಗ್ ಇಂಧನವನ್ನು ಬಳಸಿಕೊಂಡು ಸಾಧಿಸಲಾಯಿತು. [೨೫][೨೬] ಇದರ ಉತ್ಪಾದನಾ ಆವೃತ್ತಿಯು ೧,೧೭೭ ಕಿಲೋವ್ಯಾಟ್ (೧,೫೭೮ ಎಚ್‌ಪಿ, ೧,೬೦೦ ಪಿಎಸ್) ಪವರ್ ಉತ್ಪತ್ತಿ ಅನ್ನು ಹೊಂದಿರುತ್ತದೆ ಮತ್ತು ೯೮ ರಾನ್ ಅನಿಲವನ್ನು ಬಳಸಿಕೊಂಡು ೨,೨೫೦ ಆರ್‌ಪಿಎಂನಲ್ಲಿ ೧,೬೦೦ ಎನ್ಎಂ (೧,೧೮೦) ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಗರಿಷ್ಠ ವೇಗವು ಗಂಟೆಗೆ ೫೦೦ ಕಿ.ಮೀ (೩೧೧ ಮೈಲಿ) ಗಿಂತ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. [೨೭] ಮಾಂಟೆರೆ ಕಾರ್ ವೀಕ್ ಪ್ರಕಟಣೆಯ ಭಾಗವಾಗಿ, ಬುಗಾಟ್ಟಿಯು ೪೦ ಪ್ರೊಡಕ್ಷನ್-ಸ್ಪೆಕ್ ಬೊಲೈಡ್ ಮಾದರಿಗಳನ್ನು ನಿರ್ಮಿಸುವುದಾಗಿ ಹೇಳಿದೆ. ಪ್ರಸ್ತುತ, ಹೈಪರ್‌ಕಾರ್ ಅನ್ನು ತನ್ನ ಅಭಿವೃದ್ಧಿ ಕಾರ್ಯಕ್ರಮದ ಅಂತಿಮ ಹಂತಗಳ ಮೂಲಕ ತಳ್ಳಲಾಗುತ್ತಿದೆ. ಆದರೆ, ಬುಗಾಟ್ಟಿ ೨೦೨೪ ರಲ್ಲಿ ವಿತರಣೆಯನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ. ಇದರ ಬೆಲೆಗಳು €೪ ಮಿಲಿಯನ್ (ಸುಮಾರು £೩.೩ ಮಿಲಿಯನ್) ನಿಂದ ಪ್ರಾರಂಭವಾಗುತ್ತವೆ.

ಆವಿಷ್ಕಾರಗಳು[ಬದಲಾಯಿಸಿ]

೨೦೧೯ ರಲ್ಲಿ, ಫ್ರೆಂಚ್ ತಯಾರಕರಾದ ಟೈಟಾನಿಯಂ ಬ್ರೇಕ್ ಕ್ಯಾಲಿಪರ್ ಅನ್ನು ಅನಾವರಣಗೊಳಿಸಿದರು. ಇದು ವಿಶ್ವದ ಅತಿದೊಡ್ಡ ಮುದ್ರಿತ ಟೈಟಾನಿಯಂ ಘಟಕವಾಗಿದೆ. [೨೮][೨೯][೩೦]

ಪ್ರಶಸ್ತಿಗಳು[ಬದಲಾಯಿಸಿ]

ಬುಗಾಟ್ಟಿಯು ೨೦೧೯ ರ ಡಿಸೆಂಬರ್‌ನಲ್ಲಿ ಜಿನೀವಾದಲ್ಲಿ ತನ್ನ ಪ್ರದರ್ಶನದಿಂದಾಗಿ ಮೂರು ವಿನ್ಯಾಸ ಪ್ರಶಸ್ತಿಗಳನ್ನು ಪಡೆಯಿತು: ಆಟೋಮೋಟಿವ್ ಬ್ರಾಂಡ್ ಸ್ಪರ್ಧೆ ಮತ್ತು ಐಕಾನಿಕ್ ಪ್ರಶಸ್ತಿಗಳು. ಜರ್ಮನ್ ವಿನ್ಯಾಸ ಪ್ರಶಸ್ತಿಯಲ್ಲಿ, ಬುಗಾಟ್ಟಿ "ಅತ್ಯುತ್ತಮ ವಾಸ್ತುಶಿಲ್ಪ - ನ್ಯಾಯೋಚಿತ ಮತ್ತು ಪ್ರದರ್ಶನ" ವಿಭಾಗದಲ್ಲಿ ವಿಜೇತ ಆಯಿತು. [೩೧][೩೨] ಟಾಪ್ ಗೇರ್ ಪ್ರಶಸ್ತಿಯಲ್ಲಿ, ಬುಗಾಟ್ಟಿ ಸೂಪರ್ ಸ್ಪೋರ್ಟ್ ೩೦೦+ ೨೦೧೯ ರ ವರ್ಷದ ಭೌತಶಾಸ್ತ್ರ ಪಾಠ ವಿಭಾಗವನ್ನು ಗೆದ್ದುಕೊಂಡಿತು. [೩೩] ಅದೇ ವರ್ಷ ಆಟೋ ಬಿಲ್ಡ್ ಸ್ಪೋರ್ಟ್ಸ್ ಕಾರ್ಸ್ ಪ್ರಶಸ್ತಿಯಲ್ಲಿ, ಈ ಕಾರನ್ನು "ಸೂಪರ್ ಸ್ಪೋರ್ಟ್ಸ್ ಕಾರ್ ಆಮದು" ವಿಭಾಗದಲ್ಲಿ ವರ್ಷದ ಅತ್ಯುತ್ತಮ ಸ್ಪೋರ್ಟ್ಸ್ ಕಾರು ಎಂದು ನಿರ್ಣಯಿಸಲಾಯಿತು. [೩೪]

ಬುಗಾಟ್ಟಿಯು ಫೆಬ್ರವರಿ ೨೦೨೦ ರಲ್ಲಿ, ತನ್ನ ಕಾರ್ಪೊರೇಟ್ ವಿನ್ಯಾಸವನ್ನು ಬದಲಾಯಿಸಿತು. ಹೊಸ ನೋಟದೊಂದಿಗೆ ಮೊದಲ ಶೋರೂಂ ಅನ್ನು ಪ್ಯಾರಿಸ್‌ನಲ್ಲಿ ತೆರೆಯಲಾಯಿತು. [೩೫] ಇದರ ಪಾಲುದಾರರಾದ ಗ್ರೂಪ್ ಶೂಮಾಕರ್, ಇದನ್ನು ೧೯೪೭ ರಲ್ಲಿ ಸ್ಥಾಪಿಸಿತು ಮತ್ತು ಸೂಪರ್‌ಕಾರುಗಳು ಮತ್ತು ಹೈಪರ್‌ಕಾರ್ ಗಳಲ್ಲಿ ಪರಿಣತಿ ಹೊಂದಿತ್ತು. ಅದೇ ತಿಂಗಳಲ್ಲಿ, ಚಿರಾನ್‌ನ ೨೫೦ ವಾಹನಗಳನ್ನು ಈಗ ನಿರ್ಮಿಸಲಾಗಿದೆ ಎಂದು ಬುಗಾಟ್ಟಿ ವರದಿ ಮಾಡಿತು. [೩೬]

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. Volkswagen AG 2012, p. 68.
 2. ೨.೦ ೨.೧ Volkswagen AG 2012, p. 50.
 3. Wagner, I (2019-03-25). "Worldwide deliveries of Bugatti from FY 2013 to FY 2018 (in units)". Statistica.
 4. "Bugatti and Rimac begin cooperation". www.bugatti.com (in ಇಂಗ್ಲಿಷ್). Archived from the original on 6 November 2021. Retrieved 2022-01-27.
 5. "BUGATTI to form part of a new joint company". www.bugatti.com (in ಇಂಗ್ಲಿಷ್). Archived from the original on 6 July 2021. Retrieved 2021-07-07.
 6. "VW will weltbekannte Marke verkaufen - weil sie nicht zum neuen Elektro-Image passt?". Merkur (in ಜರ್ಮನ್). 2020-09-27. Archived from the original on 27 September 2020. Retrieved 2021-05-02.
 7. magazin, manager (16 March 2021). "Volkswagen: Herbert Diess will Bugatti an Rimac verkaufen". www.manager-magazin.de (in ಜರ್ಮನ್). Retrieved 2021-05-02.
 8. "Vergessene Studien: Bugatti ID 90, EB 112, EB 118 und EB 218". Motor1.com (in ಜರ್ಮನ್). Retrieved 2021-05-02.
 9. "EB 118 by Italdesign with typical Art Deco Style interior". Italdesign (in ಇಂಗ್ಲಿಷ್). Retrieved 2021-05-02.
 10. "Vergessene Studien: Bugatti 18.3 Chiron (1999)". Motorsport-Total.com (in ಜರ್ಮನ್). Retrieved 2021-05-02.
 11. "Bugatti Veyron: Fast hätte der Veyron einen W18-Motor bekommen". autobild.de. 5 February 2020. Retrieved 2021-05-02.
 12. Autosieger.de. "Bugatti auf der Shanghai Motor Show". Autosieger.de - Das Automagazin (in ಜರ್ಮನ್). Retrieved 2021-05-02.
 13. "Special Edition Bugatti Veyron Grand Sport Vitesse At Pebble Beach". Motor Authority (in ಇಂಗ್ಲಿಷ್). Retrieved 2021-05-02.
 14. "Bugatti Chiron: Gran-Turismo-Modell verkauft". autozeitung.de (in ಜರ್ಮನ್). Retrieved 2021-05-02.
 15. "Bugatti Veyron 16.4". autobild.de (in ಜರ್ಮನ್). Archived from the original on 28 April 2021. Retrieved 2021-05-02.
 16. "Louis Chiron beim Grand Prix Monaco 1931". Secret Classics (in ಜರ್ಮನ್). 2021-04-16. Retrieved 2021-05-02.
 17. "Bugatti Bolide: Titanlegierungen aus dem 3D-Drucker". additive (in ಜರ್ಮನ್). 2020-11-16. Retrieved 2021-05-02.
 18. "Bugatti Divo: So großartig sehen die ersten Fahrzeuge aus". Motorsport-Total.com (in ಜರ್ಮನ್). Retrieved 2021-05-02.
 19. "Bugatti Divo: Die agile Schwester des Hypersportwagens Chiron". WAZ/AZ-online.de (in ಜರ್ಮನ್). Retrieved 2021-05-02.
 20. "Neue Hypercars (2019 und 2020)". autobild.de (in ಜರ್ಮನ್). Archived from the original on 2021-04-30. Retrieved 2021-05-02.
 21. "World Premiere For The Divo". Bugatti Automobiles S.A.S. 24 August 2018. Archived from the original on 4 ಏಪ್ರಿಲ್ 2023. Retrieved 20 ಮಾರ್ಚ್ 2024.
 22. "Bugatti to unveil new special edition during 2019 Monterey Car Week". Motor Authority (in ಇಂಗ್ಲಿಷ್). Retrieved 2021-05-02.
 23. "La Voiture Noire". www.bugatti.com (in ಇಂಗ್ಲಿಷ್). Archived from the original on 3 August 2019. Retrieved 2021-01-01.
 24. "Les Légendes de Bugatti - Magazine | Classic Driver". www.classicdriver.com (in ಅಮೆರಿಕನ್ ಇಂಗ್ಲಿಷ್). Retrieved 2021-01-01.
 25. "Bugatti Bolide: Von null auf 300 km/h in dieser unfassbaren Zeit". Ruhr24 (in ಜರ್ಮನ್). 2020-10-28. Archived from the original on 3 November 2020. Retrieved 2021-05-02.
 26. "Bugatti Bolide Hypersportler: Gleicht dem Ritt auf einer Kanonenkugel!". FOCUS Online (in ಜರ್ಮನ್). Retrieved 2021-05-02.
 27. "BUGATTI Developing Production Version of the Bolide". www.bugatti.com (in ಇಂಗ್ಲಿಷ್). Archived from the original on 16 May 2022. Retrieved 2022-01-07.
 28. "Bugatti-Bremssattel aus dem 3D-Drucker entwickelt vom Laser Zentrum Nord". hamburg.de (in ಜರ್ಮನ್). Retrieved 2021-05-02.
 29. Baumann,uba, Uli (2018-01-23). "Bugatti druckt Bremssattel: XXL-Titanbremse aus dem 3D-Drucker". auto motor und sport (in ಜರ್ಮನ್). Retrieved 2021-05-02.
 30. Pfeiffer, Juliana (7 January 2019). "Bugatti lässt Titan-Bremssattel 3D-drucken". www.konstruktionspraxis.vogel.de (in ಜರ್ಮನ್). Retrieved 2021-05-02.
 31. "Automotive Brand Contest: Bugatti-Händlerdesign ausgezeichnet". autohaus.de (in ಜರ್ಮನ್). Retrieved 2021-05-02.
 32. "Bugatti: Three design awards for Bugatti's Exhibition Stand at GIMS 2019". Geneva International Motor Show (in ಇಂಗ್ಲಿಷ್). Retrieved 2021-05-02.
 33. Migliozzi, MIGZ-Christopher (2019-12-13). "Top Gear awards Bugatti for Speed Record". DriveTribe (in ಇಂಗ್ಲಿಷ್). Archived from the original on 13 May 2021. Retrieved 2021-05-02.
 34. "Bugatti awards – hyper sports car wins readers' polls". www.bugatti.com (in ಇಂಗ್ಲಿಷ್). Archived from the original on 2021-04-30. Retrieved 2021-05-02.
 35. "Bugatti eröffnet Showroom in Paris - Auto". www.fnweb.de (in ಜರ್ಮನ್). 10 February 2020. Retrieved 2021-05-02.
 36. Infos, Auto (2020-02-06). "Edouard Schumacher inaugure Bugatti Paris". www.auto-infos.fr. Retrieved 2021-05-02.