ಬಿ ಎನ್. ಸುರೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿ.ಎನ್.ಸುರೇಶ್
ಜನನ (1943-11-12) ೧೨ ನವೆಂಬರ್ ೧೯೪೩ (ವಯಸ್ಸು ೮೦)
ಕರ್ನಾಟಕ, ಭಾರತ
ವಾಸಸ್ಥಳಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಯಾಂತ್ರಿಕ ಶಿಲ್ಪಶಾಸ್ತ್ರ ಮತ್ತು ರಾಕೆಟ್ ತಂತ್ರಜ್ಞಾನ
ಸಂಸ್ಥೆಗಳುವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ,
ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ
ಅಭ್ಯಸಿಸಿದ ವಿದ್ಯಾಪೀಠಎಮ್ ಟೆಕ್ (ಐಐಟಿ ಮಡ್ರಾಸ್),
ಪಿಎಚ್‍ಡಿ (ಸಾಲ್‍ಫ಼ರ್ಡ್ ವಿಶ್ವವಿದ್ಯಾಲಯ, ಯುಕೆ)
ಪ್ರಸಿದ್ಧಿಗೆ ಕಾರಣಉಪಗ್ರಹ ಉಡಾವಣಾ ವಾಹನ ವಿನ್ಯಾಸ
ಗಮನಾರ್ಹ ಪ್ರಶಸ್ತಿಗಳು

ಡಾ.ಬಿ.ಎನ್.ಸುರೇಶ್[ಬದಲಾಯಿಸಿ]

ಬೈರಣ ನಾಗಪ್ಪ ಸುರೇಶ್ (ಜನನ 12 ನವೆಂಬರ್ 1943) ಭಾರತೀಯ ವೈಮಾನಿಕ ವಿಜ್ಞಾನಿ ಅವಧಿಗೆ 2003-2007. ರ ಸಮಯದಲ್ಲಿ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ (ವಿಎಸ್.ಎಸ್.ಸಿ), ತಿರುವನಂತಪುರಂ ನಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಭಾರತೀಯ ಉಡಾವಣಾ ವಾಹನಗಳು ಮತ್ತು ಸ್ಪೇಸ್ ಕ್ಯಾಪ್ಸುಲ್ ರಿಕವರಿ ಪ್ರಯೋಗಗಳು (ಎಸ್ಆರ್ಇ) ಅಭಿವೃದ್ಧಿಗೆ ಇವರ ಕೊಡುಗೆ ಹೆಸರುವಾಸಿಯಾಗಿದೆ. ಡಾ ಸುರೇಶ್ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ (ಐಐಎಸಟಿ) ತಿರುವನಂತಪುರಂನ ಸಂಸ್ಥಾಪಕ ನಿರ್ದೇಶಕರಾಗಿ ಸಹ ಸೇವೆ ಸಲ್ಲಿಸಿದರು. ನವೆಂಬರ್ 2010 ರಲ್ಲಿ ಐಐಎಸಟಿ ಯಲ್ಲಿ ನಿವೃತ್ತಿ ಹೊಂದಿದರು. ಪ್ರಸ್ತುತ ಅವರು ದಹಲಿ, ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ (ಐಎನೆಇ), ನಲ್ಲಿ ಅಧ್ಯಕ್ಷರು. ಅದು ಇದೆ ದೇಶದಲ್ಲಿ .ಜನವರಿ 2015 ರಿಂದ ನಡೆಯತ್ತಿರುವ ಏಕ ಮಾತ್ರ ಪ್ರಧಾನ ಎಂಜಿನಿಯರಿಂಗ್ ಅಕಾಡೆಮಿಯಾಗಿದೆ. ಅವರು ಇಸ್ರೋ ಕೇಂದ್ರಕಚೇರಿ ನಲ್ಲಿ ಗೌರವ ಪ್ರಾಧ್ಯಾಪಕ ಸೇವೆ ಸಲ್ಲಿಸುತ್ತಿದ್ದಾರೆ. ಅವರು ನವೆಂಬರ್ 2010 ರಿಂದ 5 ವರ್ಷಗಳ ಕಾಲ ವಿಕ್ರಮ್ ಸಾರಾಭಾಯಿ ಯಲ್ಲಿ ಡಿಸ್ಟಿಂಗ್ವಿಶ್ಡ್ ಪ್ರೊಫೆಸರ್ ಆಗಿದ್ದರು. ಇಸ್ರೋ ಕೇಂದ್ರಕಚೇರಿ ಮತ್ತು ಐಐಟಿ ಮುಂಬಯಿ ಮತ್ತು ಎಮಐಟಿ ಮಣಿಪಾಲ ದಲ್ಲಿ ಸಹ 3 ವರ್ಷಗಳ ಕಾಲ ಪ್ರಾಧ್ಯಾಪಕರಾಗಿದ್ದರು. , ಮದ್ರಾಸ್ ಐಐಟಿ,ಗೌರ್ನರ್ಗಳ ಮಂಡಳಿಯ ಸದಸ್ಯರಾಗಿದ್ದರು. ಅವರು ಏರೊನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್, ಡಿಆರ್ಡಿಒ, ಬೆಂಗಳೂರಿನಲ್ಲಿ ಎಂವಿಜೆ ಮಹಾವಿದ್ಯಾಲಯ ಬೆಂಗಳೂರು ಇದರ ಕೌನ್ಸಿಲ್ ಅಧ್ಯಕ್ಷರಾಗಿದ್ದರು. ಮತ್ತು ರಿಸರ್ಚ್ ಬೋರ್ಡ್ ಆಫ್ ಏರೋನಾಟಿಕಲ್ ಡೆವಲೊಪಮೆಂಟ್ ಎಸತಬ್ಲಿಶ್’ಮೆಂಟ್ (ಆಡಳಿತ).(ಡಿಆರ್’ಡಿಚಿm) ನ ಛೇರ್ಮನ್ ಆಗಿದ್ದರು. ‘ರೆಡ್ ಪ್ಲಾನೆಟ್ ಗೆ ಮೀನುಗಾರಿಕೆ ಹ್ಯಾಮ್ಲೆಟ್’’ - - ಅವರು ಪುಸ್ತಕಕ್ಕೆ ಸಹಾಯಕ ಸಂಪಾದಕರು. ಈ ಗ್ರಂಥ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇತಿಹಾಸವನ್ನು ನಿರೂಪಿಸುತ್ತದೆ.[೧]

ಬಾಲ್ಯ[ಬದಲಾಯಿಸಿ]

  • ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು 50ರ ದಶಕದ ಆಸುಪಾಸಿನಲ್ಲಿ ‘ಮಲೇರಿಯಾ ಕೊಂಪೆ’ ಎನಿಸಿಕೊಂಡಿತ್ತು. ಸುರೇಶ್ ಕೊಪ್ಪ ಸಮೀಪದ ಹಳ್ಳಿ ಅಂದಗಾರಿನಲ್ಲಿ ಹುಟ್ಟಿ–ಬೆಳೆದದ್ದು. ಅಪ್ಪಟ ಕೃಷಿಕ ತಂದೆಯ ಪ್ರೋತ್ಸಾಹದಿಂದ ಶಾಲೆಯ ಮೆಟ್ಟಿಲು ಹತ್ತಿದ ಬಿ.ಎನ್‌.ಸುರೇಶ್‌ ಕೊಪ್ಪದ ‘ಲೋಕಸೇವಾ ನಿರತ ದೇವೇಗೌಡರ ಸರ್ಕಾರಿ ಪ್ರೌಢಶಾಲೆ’ಯಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ್ದು.
  • ಬಾಲ್ಯದಲ್ಲೇ ದೊಡ್ಡಪ್ಪನಿಂದ ಸಣ್ಣಪುಟ್ಟ ಮೆಕ್ಯಾನಿಕ್‌ ಕೆಲಸಗಳನ್ನು ಕಲಿತಿದ್ದರು. ಎಂಜಿನಿಯರಿಂಗ್‌ ಬಗ್ಗೆ ಆಸಕ್ತಿಯ ಚಿಗುರು ಮೂಡಿದ್ದೂ ಅವರಿಂದಲೆ. ಚಿಕ್ಕಂದಿನಲ್ಲಿ ಪಡೆದ ಪ್ರೇರಣೆಯೇ ಸ್ಕ್ರಾಮ್‌ಜೆಟ್‌, ಮ್ಯಾನ್ಡ್‌ ಮಿಷನ್‌ನ ಕ್ಯಾಪ್ಸೂಲ್‌ ನಿರ್ಮಾಣ, ರಾಕೆಟ್‌ ವಿನ್ಯಾಸದಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯಲು ಸಾಧ್ಯವಾಯಿತು.
  • ‘ಚಿಕ್ಕಂದಿನಲ್ಲಿ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಇತ್ತು. ಆದರೆ, ವಿಜ್ಞಾನಿ ಆಗಬೇಕು ಎಂಬಿತ್ಯಾದಿ ಕಲ್ಪನೆಯೇ ಇರಲಿಲ್ಲ. ನನ್ನ ಮೆಕ್ಯಾನಿಕ್‌ ಕಸರತ್ತು ನೋಡಿ ಮಗ ಎಂಜಿನಿಯರ್‌ ಆಗಲಿ ಎಂಬ ಆಸೆ ತಂದೆಯವರಿಗಿತ್ತು. ಹೈಸ್ಕೂಲ್‌ ಮುಗಿದ ಮೇಲೆ ಮುಂದೆ ಏನು ಓದಬೇಕು ಎಂಬ ತಿಳಿವಳಿಕೆಯೂ ಇರಲಿಲ್ಲ’ ಎಂದು ಸುರೇಶ್ ಹೇಳುತ್ತಾರೆ.
  • ‘ಅಂದಗಾರಿನಿಂದ ಕೊಪ್ಪದ ಸರ್ಕಾರಿ ಹೈಸ್ಕೂಲ್‌ಗೆ ನಡೆದುಕೊಂಡೇ ಹೋಗುತ್ತಿದ್ದೆ. ಅಂದಿನ ವಿಪರೀತ ಮಳೆಯ ಬಗ್ಗೆ ಈಗ ಊಹಿಸುವುದೂ ಕಷ್ಟ. ದೊಡ್ಡಪ್ಪ ನನಗೆ ಸ್ಫೂರ್ತಿ ಆಗಿದ್ದರು. ಅವರು ಓದಿದವರಲ್ಲ. ಆದರೆ, ಮನೆಯಲ್ಲಿ ಪಂಪ್‌ಸೆಟ್‌, ಎಲೆಕ್ಟ್ರಿಕಲ್‌ ಕೆಲಸ, ಇನ್ನಿತರ ಯಾವುದೇ ಮೆಕ್ಯಾನಿಕ್‌ ಕೆಲಸಗಳನ್ನು ಸುಲಲಿತವಾಗಿ ಮಾಡುತ್ತಿದ್ದರು. ನನ್ನ ಕೈಗೂ ಟೂಲ್‌ ಕೊಟ್ಟು ಮಾಡಿಸುತ್ತಿದ್ದರು.
  • ಆಗ ನನಗೇ ಗೊತ್ತಿಲ್ಲದೆ ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೊಳೆಯಿತು. ಬಡಗಿ ಕೆಲಸ ಮಾಡುವುದೆಂದರೆ ಎಲ್ಲಿಲ್ಲದ ಉತ್ಸಾಹ. ಈಗಲೂ ಮನೆಯಲ್ಲಿ ಎಲೆಕ್ಟ್ರಿಕ್‌, ಪ್ಲಂಬಿಂಗ್‌ ಸೇರಿದಂತೆ ಹಲವು ಕೆಲಸಗಳನ್ನು ನಾನೇ ಮಾಡಿಕೊಳ್ಳುತ್ತೇನೆ. ಸಣ್ಣವನಿದ್ದಾಗ ಅಮ್ಮನ ಊರು ಮಂಗಳೂರು ಬಿಟ್ಟು ಬೇರೆ ಎಲ್ಲಿಗೂ ಹೋಗಿದ್ದಿಲ್ಲ. ಹೊರ ಪ್ರಪಂಚದ ಜ್ಞಾನವೇ ಇರಲಿಲ್ಲ’.ಎನ್ನುವರು ಸುರೇಶ್.

ಸ್ಕ್ರಾಮ್‌ಜೆಟ್‌ ಪ್ರೊಪೆಲ್ಷನ್‌ ಅಥವಾ ನೋದನಾ ತಂತ್ರಜ್ಞಾನ[ಬದಲಾಯಿಸಿ]

  • ಪ್ರಬಲ ಚಂಡಮಾರುತವನ್ನು ಎದುರಿಸಿ ಬೆಂಕಿಯ ಕಿಡಿ ಪ್ರಜ್ವಲಿಸಿ, ಸುಸ್ಥಿರಗೊಳ್ಳುವಂತೆ ಮಾಡಿ ಮುನ್ನುಗ್ಗುವ ತಂತ್ರಜ್ಞಾನವೇ ‘ಸ್ಕ್ರಾಮ್‌ಜೆಟ್‌’. ಪ್ರಚಂಡ ವೇಗದಲ್ಲಿ ಉಸಿರು ಎಳೆದುಕೊಳ್ಳುತ್ತಾ, ಇಂಧನವನ್ನು ದಹಿಸಿ, ಚೈತನ್ಯವನ್ನು ತುಂಬಿ ಬಾಹ್ಯಾಕಾಶ ನೌಕೆಯನ್ನು ಮುನ್ನುಗ್ಗುವಂತೆ ಮಾಡುವ ‘ಶ್ವಾಸಕೋಶ’ವಿದು ಎನ್ನಬಹುದು.
  • ಶಬ್ದದ ವೇಗಕ್ಕಿಂತ ಹಲವು ಪಟ್ಟು ವೇಗದಲ್ಲಿ ರಾಕೆಟ್‌ ಸಾಗುವಂತೆ ಮಾಡುವ ಎಂಜಿನ್‌ ಇದು. ಸರಳ ಎನಿಸಿದರೂ ಅತ್ಯಂತ ಸಂಕೀರ್ಣ ತಂತ್ರಜ್ಞಾನ. ಸ್ಕ್ರಾಮ್‌ಜೆಟ್‌ ಪ್ರೊಪೆಲ್ಷನ್‌ ಅಥವಾ ನೋದನಾ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದ ಸೇನಾ ಬತ್ತಳಿಕೆಯ ಕ್ರೂಸ್‌ ಮಿಸೈಲ್‌ ಎಂಬ ‘ಬ್ರಹ್ಮಾಸ್ತ್ರ’ವನ್ನು ತಯಾರಿಸಬಹುದು. ಅಲ್ಲದೆ, ಭವಿಷ್ಯದಲ್ಲಿ ರಾಕೆಟ್‌ಗಳು ಬೆಳಿಗ್ಗೆ ಉಡಾವಣೆಗೊಂಡು ಭೂಸ್ಥಾಯಿ ಕಕ್ಷೆಗೆ ತೆರಳಿ, ಕಕ್ಷೆಯಲ್ಲಿ ಉಪಗ್ರಹ ಕೂರಿಸಿ ಸಂಜೆಗೆ ಮರಳಿ ಬಂದು, ಮಾರನೇ ದಿನ ಮತ್ತೊಂದು ಉಪಗ್ರಹ ಒಯ್ಯಲು ಅಣಿಯಾಗಬಲ್ಲವು. ಇವೆಲ್ಲ ಸಾಕಾರಗೊಳ್ಳಲು ಹಲವು ವರ್ಷಗಳೇ ಬೇಕಾಗಬಹುದು. ಆದರೆ, ಇದಕ್ಕೆ ಬೇಕಾಗುವ ತಂತ್ರಜ್ಞಾನದ ಮೂಲ ತತ್ವ ಸಿದ್ಧಿಸಿಕೊಳ್ಳುವಲ್ಲಿ ಭಾರತೀಯ ವಿಜ್ಞಾನಿಗಳು ಇದೀಗ ಯಶಸ್ವಿಯಾಗಿದ್ದಾರೆ. ಇದು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಕ್ರಾಂತಿಕಾರಿ ಬೆಳವಣಿಗೆ.
  • ಈ ಅದ್ಭುತ ತಂತ್ರಜ್ಞಾನವನ್ನು ತನ್ನದಾಗಿಸಿಕೊಳ್ಳುತ್ತಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಈ ತಂತ್ರಜ್ಞಾನದ ರೂವಾರಿ ಯಾರೆಂಬುದನ್ನು ಪತ್ತೆ ಮಾಡಲು ಹೊರಟಾಗ, ಇಸ್ರೊ ವಿಜ್ಞಾನಿಗಳು ಬೊಟ್ಟು ಮಾಡಿದ್ದು ಹಿರಿಯ ವಿಜ್ಞಾನಿ, ಕನ್ನಡಿಗ ಡಾ. ಬಿ.ಎನ್‌.ಸುರೇಶ್‌ ಅವರತ್ತ. ಆದರೆ, ಸುರೇಶ್‌ ಅವರು ಆ ‘ಕೀರ್ತಿಯ ಕಿರೀಟ’ ತಮ್ಮದೆಂದು ಹೇಳಿಕೊಳ್ಳಲು ಖಡಾಖಂಡಿತ ನಿರಾಕರಿಸಿದ್ದು ಮಾತ್ರವಲ್ಲದೆ. ‘ಅದು ಸಮಸ್ತ ಇಸ್ರೊ ವಿಜ್ಞಾನಿ ಸಮುದಾಯಕ್ಕೆ ಸಲ್ಲುತ್ತದೆ’ ಎಂದರು. ಯಾವುದೇ ಕಾರಣಕ್ಕೂ ‘ನಾನೇ ಕಾರಣಕರ್ತ ಎಂಬಂತೆ ಬರೆಯಬೇಡಿ’ ಎಂದೂ ತಾಕೀತು ಮಾಡಿದರು. (ಮಾಹಿತಿಯನ್ನು ಡಾ. ಸುರೇಶ್‌ ಅವರು ‘ಪ್ರಜಾವಾಣಿ’ಗೆ ಹಂಚಿಕೊಂಡರು)

ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಗೌರವಿಸಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

  • 1993 - ಡಾ ಬಿರೇನ್ ರಾಯ್ ಸ್ಪೇಸ್ ಸೈನ್ಸ್ ಡಿಸೈನ್ ಅವಾರ್ಡ್ - ಏರೊನಾಟಿಕಲ್ ಸೊಸೈಟಿ ಆಫ್ ಇಂಡಿಯಾ
  • 1996 - ರಾಕೆಟ್ ತಂತ್ರಜ್ಞಾನದ ಅಭಿವೃದ್ಧಿಯ ಕೊಡುಗೆಗಾಗಿ 'ಎ ಎಸ್ ಐ' ಪ್ರಶಸ್ತಿ - ಏರೊನಾಟಿಕಲ್ ಸೊಸೈಟಿ ಆಫ್ ಇಂಡಿಯಾ
  • 1999 - ಅಗ್ನಿ ಪುರಸ್ಕಾರ, ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ, ರಕ್ಷಣಾ ಮಂತ್ರಾಲಯ-ಭಾರತ ಸರಕಾರ
  • 2002 - ಪದ್ಮಶ್ರೀ - ಭಾರತ ಸರಕಾರ
  • 2004 - ವಿಶೇಷ ವಿದ್ಯಾರ್ಥಿ ಪ್ರಶಸ್ತಿ - ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ಮದ್ರಾಸ್
  • 2005 - ರಾಮಾನುಜಂ ಸ್ಮಾರಕ ಪ್ರಶಸ್ತಿ (ರಾಷ್ಟ್ರೀಯ ವಿಚಾರಸಂಕಿರಣ-ಕೊಯಂಬತ್ತೂರು)
  • 2006 - ಟೆಕ್ನಿಕಲ್ ಎಕ್ಸೆಲೆನ್ಸ್ ಅವಾರ್ಡ್ - ಲಯನ್ಸ್ ಇಂಟರ್ನ್ಯಾಷನಲ್, ತಿರುವನಂತಪುರಂ
  • 2006 - ವಿಶ್ವಸಂಸ್ಥೆಯ 'ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶ ಬಳಕೆ' - ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಒಕ್ಕೂಟದ ಸಮಿತಿಯ ಅಧ್ಯಕ್ಷರಾಗಿ ನೇಮಕ
  • 2007 - ಜೀವಮಾನ ಸಾಧನೆ ಪ್ರಶಸ್ತಿ – ಇಸ್ರೋ, ಅಂತರಿಕ್ಷ ಮಂತ್ರಾಲಯ, ಭಾರತ ಸರಕಾರ
  • 2007 - ಜೀವಮಾನ ಸಾಧನೆ ಪ್ರಶಸ್ತಿ - ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್
  • 2007 - ನ್ಯಾಷನಲ್ ಸಿಸ್ಟಮ್ಸ್ ಚಿನ್ನದ ಪದಕ - ಜೀವಮಾನ ಸಾಧನೆ ಪ್ರಶಸ್ತಿ - ಸಿಸ್ಟಮ್ ಸೊಸೈಟಿ ಆಫ್ ಇಂಡಿಯಾ
  • 2009 - ಆರ್ಯಭಟ ಪ್ರಶಸ್ತಿ - ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ಅತ್ಯುನ್ನತ ಪ್ರಶಸ್ತಿ
  • 2013 - ಪದ್ಮಭೂಷಣ - ಭಾರತ ಸರಕಾರ
  • 2014 - ವಿಶೇಷ ಸಾಧಕ - ಮಲೆನಾಡು ವಿಪ್ರ ವೇದಿಕೆ, ಬೆಂಗಳೂರು
  • 2014 - ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರ
  • 2014 - ಬಿಗ್ ಕನ್ನಡಿಗ - ಬಿಗ್ 92.7 ರೇಡಿಯೋ ವಾಹಿನಿ
  • 2015 - ಎಂ ಆರ್ ಕುರುಪ್ ಎಂಡೋಮೆಂಟ್ ಅವಾರ್ಡ್ - ಸಿ ಐ ಸಿ ಆರ್, ತಿರುವನಂತಪುರ
  • 2016 - ಜೀವಮಾನ ಸಾಧನೆ ಪ್ರಶಸ್ತಿ - ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
  • 2016 - ಸರ್ ಎಂ ವಿಶ್ವೇಶ್ವರಯ್ಯ ಪ್ರಶಸ್ತಿ - ವಿಜ್ಞಾನ ಭಾರತಿ, ಕರ್ನಾಟಕ
  • 2018 - ಗ್ಲೋಬಲ್ ಪಯೋನೀರ್ ಅವಾರ್ಡ್ - ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಸಿಸ್ಟಮ್ ಇಂಜಿನಿಯರಿಂಗ್, ವಾಷಿಂಗ್ಟನ್
  • 2019 - 'ಇಂಟಿಗ್ರೇಟೆಡ್ ಡಿಸೈನ್ ಫಾರ್ ಸ್ಪೇಸ್ ಟ್ರಾನ್ಸ್ಪೋರ್ಟೇಷನ್' ಪುಸ್ತಕಕ್ಕೆ ಇಂಜಿನಿಯರಿಂಗ್ ಸೈನ್ಸ್ ಬುಕ್ ಪ್ರಶಸ್ತಿ- ಇಂಟರ್ನ್ಯಾಷನಲ್ ಆಸ್ಟ್ರೋನಾಟಿಕಲ್ ಕಾಂಗ್ರೆಸ್, ವಾಷಿಂಗ್ಟನ್
  • 2019 - ಗೀತಂ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್
  • 2020 - ಐಈಈ ಸೀಮೋನ್ ರಾಮೋ ಪ್ರಶಸ್ತಿ - ಐಈಈ ಸಂಸ್ಥೆ, ವಾಂಕೋವರ್, ಕೆನಡಾ

ಪ್ರಚಂಡ ವೇಗ ಮತ್ತು ಅಗ್ಗದಲ್ಲಿ ಕ್ಷಿಪಣಿ[ಬದಲಾಯಿಸಿ]

  • ನಭಕ್ಕೆ ಉಪಗ್ರಹಗಳನ್ನು ಹೆಗಲ ಮೇಲೆ ಹೊತ್ತೊಯ್ಯುವ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ರಾಕೆಟ್‌ಗಳಲ್ಲಿ ನೋದನ ಇಂಧನವು (ಪ್ರೊಪೆಲ್ಷನ್‌ ಫ್ಯೂಯೆಲ್‌) ಘನ ಅಥವಾ ದ್ರವ ರೂಪದಲ್ಲಿ ಇದ್ದು, ಅವುಗಳ ತೂಕವೇ ಹೆಚ್ಚಾಗಿರುತ್ತದೆ. ಆಮ್ಲಜನಕ ಇಲ್ಲದೆ ಯಾವುದೇ ಇಂಧನವೂ ಕೆಲಸ ಮಾಡುವುದಿಲ್ಲ. ರಾಕೆಟ್‌ಗಳಲ್ಲಿ ಜಲಜನಕವನ್ನೇ ಪ್ರಧಾನ ಇಂಧನವನ್ನಾಗಿ ಬಳಸಲಾಗುತ್ತದೆ.
  • ಆಮ್ಲಜನಕವು ಜಲಜನಕದ ಜೊತೆ ಮಿಶ್ರಣಗೊಂಡಾಗಲೇ ಇಂಧನವಾಗಿ ಕೆಲಸ ಮಾಡುತ್ತದೆ. ಸ್ಕ್ರಾಮ್‌ಜೆಟ್‌ ಎಂಜಿನ್‌ನ ವಿಶೇಷವೆಂದರೆ, ಆಮ್ಲಜನಕವನ್ನು ವಾತಾವರಣದಿಂದ ಅದು ಹೀರಿಕೊಳ್ಳುತ್ತದೆ. ಜಲಜನಕದ ಜೊತೆಗೆ ಮಿಶ್ರಣಗೊಳಿಸಿ ದಹಿಸುತ್ತದೆ. ಇದರಿಂದಾಗಿ ರಾಕೆಟ್‌ ಪ್ರತ್ಯೇಕವಾಗಿ ಆಮ್ಲಜನಕದ ಹೊರೆ ಒಯ್ಯಬೇಕಾಗುವುದಿಲ್ಲ. ಆಮ್ಲಜನಕ ರಹಿತ ರಾಕೆಟ್‌ ತೀರಾ ಹಗುರವಾಗುತ್ತದೆ. ಇದೇ ಪ್ಲಸ್‌ ಪಾಯಿಂಟ್‌.
  • ಈಗ ಕಾರ್ಯಾಚರಣೆಯಲ್ಲಿರುವ ಪಿಎಸ್‌ಎಲ್‌ವಿ ಅಥವಾ ಜಿಎಸ್‌ಎಲ್‌ವಿಯು 1 ಮ್ಯಾಕ್‌ ವೇಗದಲ್ಲಿ (ಶಬ್ದದ ವೇಗ) ಸಾಗುತ್ತದೆ. ಆದರೆ, ಸ್ಕ್ರಾಮ್‌ ಜೆಟ್‌ ಎಂಜಿನ್‌ನ ಆರಂಭದ ವೇಗವೇ ಮ್ಯಾಕ್‌ 5 ಅಥವಾ 6 ಆಗಿರುತ್ತದೆ. ಅಂದರೆ, ಪ್ರಚಂಡ ವೇಗ ಮತ್ತು ಶಕ್ತಿಯ ಮೂಲಕ ಉಪಗ್ರಹಗಳನ್ನು ರಾಕೆಟ್‌ ಒಯ್ಯುತ್ತದೆ.
  • ಇಲ್ಲಿಯವರೆಗೆ ಅಮೆರಿಕ ಮತ್ತು ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆಗಳು ಈ ಸಾಧನೆ ಮಾಡಿದ್ದವು. ರಷ್ಯಾ ಕೂಡ ಮಾಡಿದೆ ಎಂದು ಹೇಳಿಕೊಂಡರೂ ಪರೀಕ್ಷೆಗೆ ಸಂಬಂಧಿಸಿದಂತೆ ಪುರಾವೆಗಳಿಲ್ಲ. ‘ನಮ್ಮ ಪ್ರಯೋಗ ಒಳ್ಳೆ ಫಲಿತಾಂಶವನ್ನು ನೀಡಿದೆ. ದಹನ ಕ್ರಿಯೆ, ಒತ್ತಡ ಸೃಷ್ಟಿ ಮತ್ತು ಐದು ಸೆಕೆಂಡುಗಳ ಹಾರಾಟವು ಯೋಜನಾಬದ್ಧವಾಗಿಯೇ ನಡೆದಿದೆ’ಎಂದರು ಸುರೇಶ್‌.
  • ‘ಸ್ಕ್ರಾಮ್‌ಜೆಟ್‌ ತಂತ್ರಜ್ಞಾನಕ್ಕೆ ಮರುಬಳಕೆಯ ವಾಹನ (ರೀ ಯೂಸಬಲ್‌ ವೆಹಿಕಲ್‌) ಜೋಡಿಸಿ ಬಳಸಿದರೆ ಉಪಗ್ರಹ ಉಡಾವಣೆ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಬಹುದು. ಭಾರತ ಸಾಕಷ್ಟು ಹಣವನ್ನೂ ಉಳಿಸಬಹುದು. ಈಗ ಒಂದು ಕೆ.ಜಿ ತೂಕದ (ಉಪಗ್ರಹ) ಉಡಾವಣೆಗೆ ಸುಮಾರು ₹10 ಲಕ್ಷದಿಂದ 14 ಲಕ್ಷ (15 ಸಾವಿರದಿಂದ 20 ಸಾವಿರ ಡಾಲರ್‌ಗಳು) ಆಗುತ್ತದೆ. ಸ್ಕ್ರಾಮ್‌ಜೆಟ್‌ ಮತ್ತು ಆರ್‌ಯುವಿ ಬಳಸಿದರೆ ಆ ವೆಚ್ಚವು ಒಂದು ಕೆ.ಜಿಗೆ ಸುಮಾರು ₹1.5 ಲಕ್ಷದಿಂದ ₹ 2 ಲಕ್ಷಕ್ಕೆ (5 ಸಾವಿರದಿಂದ 6 ಸಾವಿರ ಡಾಲರ್‌) ಇಳಿಯುತ್ತದೆ’ ಎನ್ನುವ ಲೆಕ್ಕಾಚಾರ ಅವರದು.
  • ‘ಇದನ್ನು ಕೇವಲ ಭೂ ವಾತಾವರಣದಲ್ಲಿ ಬಳಸಲು ಸಾಧ್ಯ. ಅದರಿಂದ ಆಚೆಗೆ ಒಯ್ಯಲು ಸಾಧ್ಯವಿಲ್ಲ. ಬಾಹ್ಯಾಕಾಶ ಟೂರಿಸಂನಂತಹ ಕಾರ್ಯಕ್ರಮಗಳಿಗಂತೂ ಬಳಸಲು ಸಾಧ್ಯವಿಲ್ಲ. ಭೂಮಿಯ ಒಂದು ತುದಿಯಿಂದ ಮತ್ತೊಂದು ತುದಿಗೆ ಊಹಾತೀತ ವೇಗದಲ್ಲಿ ಸಾಗುವ ಕ್ರೂಸ್‌ ಕ್ಷಿಪಣಿಗಳನ್ನು ತಯಾರಿಸಬಹುದು. ಹೈದ್ರಾಬಾದ್‌ನಲ್ಲಿ ರಕ್ಷಣಾ ಇಲಾಖೆಯಿಂದ ಇದರ ಸಂಶೋಧನೆ ಮತ್ತು ಅಭಿವೃದ್ಧಿಯೂ ನಡೆದಿದೆ’
  • ‘ನಾವು ಎಂಜಿನ್‌ ಪರೀಕ್ಷೆಗಾಗಿ ರಾಕೆಟ್‌ನ ವಿನ್ಯಾಸವನ್ನು ಕೊಂಚ ಬದಲಾವಣೆ ಮಾಡಿದ್ದೆವು. ರಾಕೆಟ್‌ನ ಎರಡೂ ಬದಿಯಲ್ಲಿ ಅವಳಿ ಸ್ಕ್ರಾಮ್‌ಜೆಟ್‌ ಎಂಜಿನ್‌ಗಳನ್ನು ಅಳವಡಿಸಿದೆವು. ರಾಕೆಟ್‌ನ ಎರಡನೇ ಹಂತದ ಬೂಸ್ಟರ್‌ನ ದಹನ ಮುಗಿಯುತ್ತಿದ್ದಂತೆ ಸ್ಕ್ರಾಮ್‌ಜೆಟ್‌ ಆನ್‌ ಮಾಡಲಾಯಿತು. ಮ್ಯಾಕ್‌ 5ರ ವೇಗದಲ್ಲಿ ದಹನ ಕ್ರಿಯೆ ಆರಂಭಗೊಂಡು ಐದು ಸೆಕೆಂಡ್‌ಗಳಷ್ಟು ಕಾರ್ಯ ನಿರ್ವಹಿಸಿತು. ನಮ್ಮ ಯೋಜನೆಯಂತೆ ಎಲ್ಲವೂ ಚಾಚೂ ತಪ್ಪದೆ ನಡೆಯಿತು’.
  • ‘ತಿರುವನಂತಪುರ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕನಾಗಿದ್ದಾಗ 2002ರಲ್ಲಿ ಈ ಯೋಜನೆಗೆ ಒಪ್ಪಿಗೆ ಪಡೆಯಲಾಗಿತ್ತು. ಕಡಿಮೆ ವೆಚ್ಚದಲ್ಲಿ ಹಂತಹಂತವಾಗಿ ಅಭಿವೃದ್ಧಿಪಡಿಸುವ ನಮ್ಮ ಉದ್ದೇಶ ಫಲ ನೀಡಿದೆ. ಇಲ್ಲವಾದಲ್ಲಿ ಅಮೆರಿಕದ ‘ಸ್ಪೇಸ್‌ ಎಕ್ಸ್‌’ನಂತೆ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು. ಚಂದ್ರಯಾನ–1ರಲ್ಲಿ ಸಾಕಷ್ಟು ಪಾಠ ಕಲಿತು ಅದನ್ನು ಮಂಗಳಯಾನದಲ್ಲಿ ಬಳಸಿದ್ದರಿಂದ ಮಂಗಳ ನೌಕೆಯು ಇನ್ನೂ ಕಾರ್ಯ ನಿರ್ವಹಿಸುತ್ತಿದೆ’

ಸುರೇಶ್‌ ಅವರ ಕೊಡಿಗೆ[ಬದಲಾಯಿಸಿ]

  • ‘ಮಾನವ ಸಹಿತ ಯಾನ’ದ ಕ್ಯಾಪ್ಸೂಲ್‌ ನಿರ್ಮಾಣದ ಯೋಜನೆಯಲ್ಲಿ ಪ್ರಧಾನ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿದ್ದಲ್ಲದೆ, ಅದರ ಉಡಾವಣೆ ಮತ್ತು 10 ದಿನಗಳ ಹಾರಾಟದ ಬಳಿಕ ಕ್ಯಾಪ್ಸೂಲ್‌ ಮರುವಶದ ಉಸ್ತುವಾರಿ ಯಶಸ್ವಿಯಾಗಿ ನೋಡಿಕೊಂಡಿದ್ದರು. ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿಗಳ ವಿನ್ಯಾಸ ಮತ್ತು ನಿಯಂತ್ರಣ ಕಾರ್ಯದಲ್ಲಿ ಬಹಳಷ್ಟು ವರ್ಷಗಳ ಶ್ರಮ ಸುರೇಶ್‌ ಅವರದು.

ಕನ್ನಡದ ಆಭಿಮಾನ[ಬದಲಾಯಿಸಿ]

  • ತಿರುವನಂತಪುರ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ನಿರ್ದೇಶಕ ಮತ್ತು ‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೇಸ್‌ ಅಂಡ್‌ ಟೆಕ್ನಾಲಜಿ’ ಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಅವರು, ಕೇರಳದ ನೆಲದಲ್ಲಿ ಕನ್ನಡ ಸಂಘವನ್ನು ಕಟ್ಟಿ ಕನ್ನಡ ಉಳಿಸುವ ಕೆಲಸ ಮಾಡಿದ್ದರು. ಕನ್ನಡ ಪುಸ್ತಕಗಳ ದೊಡ್ಡ ಓದುಗರಾಗಿರುವ ಇವರಿಗೆ ಎಸ್‌.ಎಲ್‌.ಭೈರಪ್ಪ ಅವರ ಕಾದಂಬರಿಗಳೆಂದರೆ ಅಚ್ಚುಮೆಚ್ಚು.

[೨]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "dr-bn-suresh". Archived from the original on 2016-08-12. Retrieved 2016-09-11.
  2. "ಸ್ಕ್ರಾಮ್‌ಜೆಟ್‌'". Archived from the original on 2016-09-11. Retrieved 2016-09-11.