ಬಿ.ಕೆ.ಸುಮಿತ್ರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಬಿಳಲುಕೊಪ್ಪ ಕೃಷ್ಣಯ್ಯ ಸುಮಿತ್ರ ಅಥವಾ ಬಿ. ಕೆ. ಸುಮಿತ್ರ, ಕನ್ನಡ ಚಿತ್ರರಂಗದ ಪ್ರಮುಖ ಹಿನ್ನೆಲೆ ಗಾಯಕಿಯರಲ್ಲಿ ಒಬ್ಬರು. ಸಂಗೀತದ ಎಲ್ಲ ಪ್ರಕಾರಗಳಲ್ಲೂ ಹಾಡಿರುವ ಹೆಗ್ಗಳಿಕೆ ಇವರದು.

ಜನನ ಹಾಗೂ ಬಾಲ್ಯ[ಬದಲಾಯಿಸಿ]

೦೧.೦೭.೧೯೪೬ ಸಂಗೀತದ ಎಲ್ಲ ಪ್ರಕಾರಗಳಲ್ಲಿಯೂ ಹಾಡಿ ವಿಶಿಷ್ಟ ಸಾಧನೆ ಮಾಡಿರುವ ಸುಮಿತ್ರರವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಬಿಳಿಲು ಕೊಪ್ಪಗ್ರಾಮದಲ್ಲಿ. ತಂದೆ ಪಟೇಲ್‌ಕೃಷ್ಣಯ್ಯ, ತಾಯಿ ಗಂಗಮ್ಮ, ಚಿಕ್ಕಂದಿನಿಂದಲೂ, ರಾತ್ರಿ ವೇಳೆ ಅಡಿಕೆ ಸುಲಿಯಲು ಬರುತ್ತಿದ್ದ ಕೆಲಸದವರ ಜಾನಪದಗೀತೆಗಳು, ಕಥೆಗಳು, ತಾಯಿ ಮತ್ತು ಸೋದರತ್ತೆಯವರು ಹಾಡುತ್ತಿದ್ದ ಸಂಪ್ರದಾಯದ ಹಾಡುಗಳಿಂದ ಪ್ರಭಾವಿತರು. ಮಂಜಪ್ಪ ಜೋಯಿಸ್‌ಮತ್ತು ಎಂ. ಪ್ರಭಾಕರ್ ರವರಲ್ಲಿ ಸಂಗೀತ , ಸೀನಿಯರ್ ಗ್ರೇಡ್‌ನಲ್ಲಿ ತೇರ್ಗಡೆ. ಕಾಲೇಜು ಕಲಿಯುತ್ತಿದ್ದಾಗ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಗೀತೆಗಳನ್ನು ಕೇಳಿ ಅಭ್ಯಾಸ, ಜಾನಪದಗೀತೆ, ಭಾವಗೀತೆ, ಭಕ್ತಿಗೀತೆಗಳ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿ, ಕುವೆಂಪು, ದ.ರಾ. ಬೇಂದ್ರೆ, ಕೆ.ಎಸ್‌.ನ, ಜಿ.ಎಸ್‌.ಎಸ್‌, ನಿಸಾರ್ ಅಹಮದ್‌, ಲಕ್ಷ್ಮೀನಾರಾಯಣಭಟ್ಟರು ಮುಂತಾದವರ ಕವಿತೆಗಳನ್ನು ಆಕಾಶವಾಣಿ, ದೂರದರ್ಶನ, ಕ್ಯಾಸೆಟ್‌, ಸಿ.ಡಿ ಗಳಿಗಾಗಿ ಹಾಡುಗಾರಿಕೆ. ೧೯೯೨,೯೭,  ೨೦೦೨ ರಲ್ಲಿ ಅಮೆರಿಕಾ ಪ್ರವಾಸ. ಹಲವಾರು ಪ್ರಮುಖ ನಗರಗಳ ಕನ್ನಡ ಕೂಟಗಳಲ್ಲಿ ನೀಡಿದ ಸುಗಮಸಂಗೀತ ಕಾರ್ಯಕ್ರಮ. ಜಿ.ಕೆ. ವೆಂಕಟೇಶ್‌ ರವರ ಸಂಗೀತ ನಿರ್ದೇಶನದ ಕವಲೆರಡು ಕುಲವೊಂದು ಚಿತ್ರದಲ್ಲಿ ಗಾಯಕಿಯಾಗಿ ಚಿತ್ರರಂಗ ಪ್ರವೇಶ, ವಿಜಯ ಭಾಸ್ಕರ್, ಎಂ. ರಂಗರಾವ್‌, ರಾಜನ್‌ ನಾಗೇಂದ್ರ, ಸತ್ಯಂ, ಉಪೇಂದ್ರಕುಮಾರ್ ಸಂಗೀತ ನಿರ್ದೇಶನದಲ್ಲಿ ಹಲವಾರು ಚಿತ್ರಗಳ ಗಾಯಕಿ. ಎಚ್‌.ಎಂ.ವಿ. ಸಿ.ಬಿ.ಎಸ್‌, ಸಂಗೀತ, ಲಹರಿ ಮುಂತಾದ ಧ್ವನಿಸುರುಳಿ ಸಂಸ್ಥೆಗಳಿಗೆ, ಉಡುಪಿ ಕೃಷ್ಣ, ಧರ್ಮಸ್ಥಳ ಮಂಜುನಾಥ, ಎಡೆಯೂರು ಸಿದ್ಧಲಿಂಗೇಶ್ವರ ಮುಂತಾದ ಭಕ್ತಿಗೀತೆಗಳಿಗೆ ಹಾಡುಗಾರಿಕೆ. ಲಾವಣ್ಯಲೇಖಕರ ಬಳಗದಿಂದ ಗಾನ ಕೋಗಿಲೆ, ಕೆಂಪೇಗೌಡ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.

ಚಿತ್ರರಂಗಕ್ಕೆ ಪಾದಾರ್ಪಣೆ[ಬದಲಾಯಿಸಿ]

ಜಿ.ಕೆ.ವೆಂಕಟೇಶ್‌ ರವರ ಸಂಗೀತ ನಿರ್ದೇಶನದ ಕವಲೆರಡು ಕುಲವೊಂದು ಚಿತ್ರದಿಂದ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು.ಹೆಚ್.ಎಂ.ವಿ.,ಸಿ.ಬಿ.ಎಸ್.,ಸಂಗೀತ.,ಲಹರಿ ಮುಂತಾದ ಧ್ವನಿಸುರುಳಿ ಸಂಸ್ಥೆಗಳಿಗೆ ಹಾಡಿದ್ದಾರೆ.ಉದುಪಿಯ ಕೃಷ್ಣ,ಧರ್ಮಸ್ಥಳದ ಮಂಜುನಾಥ,ಎಡೆಯೂರು ಸಿದ್ಧಲಿಂಗೇಶ್ವರ..ಮುಂತಾದ ಭಕ್ತಿಗೀತೆಗಳನ್ನು ಹಾಡಿದ್ದಾರೆ.ಪತಿ ಸುಧಾಕರ್.ಮಗಳು ಸೌಮ್ಯ ಖ್ಯಾತ ಬಾಲಿವುಡ್ ಗಾಯಕಿ.ಮಗ ಸುನೀಲ್‌ರಾವ್ ಕನ್ನಡದ ಉದಯೋನ್ಮುಖ ಚಿತ್ರನಟ.

ಪ್ರಸಿದ್ಧ ಹಾಡುಗಳು[ಬದಲಾಯಿಸಿ]

 • ಸಂಪಿಗೆ ಮರದ ಹಸಿರೆಲೆ ನಡುವೆ.... - ಉಪಾಸನೆ
 • ನೋಡು ನೋಡು ಕಣ್ಣಾರೆ ನಿಂತಿಹಳು...{ಭಕ್ತಿಗೀತೆ}
 • ಶರಣರ ಕಾಯೈ ಚಾಮುಂಡೇಶ್ವರಿ..(ಭಕ್ತಿಗೀತೆ)
 • ಇಂದು ಶುಕ್ರವಾರ..ಶುಭವ ತರುವ ವಾರ..(ಭಕ್ತಿಗೀತೆ)
 • ದ್ವಾದಶ ಸ್ತ್ರೋತ್ರ..(ಭಕ್ತಿ ಗೀತೆ)
 • ಮಧುರ ಮಧುರವೀ ಮಂಜುಳ ಗಾನ..(ಸತೀ ಸುಕನ್ಯ)
 • ಧರಣಿ ಮಂಡಲ ಮಧ್ಯದೊಳಗೆ-ಪುಣ್ಯ ಕೋಟಿ...(ತಬ್ಬಲಿಯು ನೀನಾದೆ ಮಗನೇ)

ಮತ್ತು ಪ್ರಸಿದ್ದ ಜನಪದ ಗೀತೆಗಳಾದ..

 • ನಿಂಬೀಯಾ ಬನಾದ ಮೇಗಳ ಚಂದ್ರಮಾ ಚಂಡಾಡಿದ.
 • ಘಲ್ಲು ಘಲ್ಲೆನುತ ಗೆಜ್ಜೆ

ಸುಮಿತ್ರಮ್ಮನ ನೂರಾರು ಭಕ್ತಿಗೀತೆಗಳು..ಜಾನಪದ ಗೀತೆಗಳು ಅಂದಿನಿಂದ ಇಲ್ಲಿಯವರೆಗೂ ಜಮ ಮಾನಸದಲ್ಲಿ..ಪ್ರಸಿದ್ದ ಪುಣ್ಯ ಕ್ಷೇತ್ರಗಳಲ್ಲಿ ಆರಾಧನೆಯನ್ನು ಮಾಡುತ್ತಿವೆ.https://www.youtube.com/watch?v=DWHHFrIbDWA

ಪ್ರಶಸ್ತಿಗಳು[ಬದಲಾಯಿಸಿ]

 • ಲಾವಣ್ಯ ಲೇಖಕರ ಬಳಗದಿಂದ ಗಾನಕೋಗಿಲೆ ಪ್ರಶಸ್ತಿ.
 • ಕೆಂಪೇಗೌಡ ಪ್ರಶಸ್ತಿ.
 • ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ.
 • ರಾಜ್ಯೋತ್ಸವ ಪ್ರಶಸ್ತಿ.
 • ಕನ್ನಡ ಕೋಗಿಲೆ.
 • 2015ರಲ್ಲಿ ಹಂಪಿ ವಿವಿ ಯಿಂದ ಗೌರವ ನಾಡೋಜ ಮತ್ತು ಇದೇ ವರ್ಷದಲ್ಲಿ ಬೆಂಗಳೂರು ವಿವಿ ಯಿಂದ ಗೌರವ ಡಾಕ್ಟರೇಟ್

ಹೊರ ಸಂಪರ್ಕ[ಬದಲಾಯಿಸಿ]