ಬಿಶಂಬರ್ ಸಿಂಗ್
Personal information | |||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|
ಜನನ | ೧ ಆಕ್ಟೋಬರ್ ೧೯೪೦ ಬಹಿಪುರ್, ಉತ್ತರ ಪ್ರದೇಶ, ಭಾರತ | ||||||||||||||||||||||
ಮರಣ | ೨೦೦೪ | ||||||||||||||||||||||
ಎತ್ತರ | ೧೫೬ ಸೆಂಟಿಮೀಟರ್ | ||||||||||||||||||||||
ತೂಕ | ೫೭ ಕೆಜಿ | ||||||||||||||||||||||
Sport | |||||||||||||||||||||||
ಕ್ರೀಡೆ | ಫ್ರೀಸ್ಟೈಲ್ ರೆಸ್ಲಿಂಗ್ | ||||||||||||||||||||||
ಕ್ಲಬ್ | ಇಂಡಿಯನ್ ರೈಲ್ವೇಸ್ | ||||||||||||||||||||||
Medal record
|
ಬಿಶಂಬರ್ ಸಿಂಗ್ (೧ ಅಕ್ಟೋಬರ್ ೧೯೪೦) ಒಬ್ಬ ನಿವೃತ್ತ ಭಾರತೀಯ ಬಾಂತಮ್ವೈಟ್ ಕುಸ್ತಿಪಟು.೧೯೬೪ನಲ್ಲಿ ಅವರಿಗೆ ಅರ್ಜುನ ಪ್ರಶಸ್ತಿ ಲಭಿಸಿತು.[೧]
ಜನನ[ಬದಲಾಯಿಸಿ]
ಬಿಶಂಬರ್ ಸಿಂಗ್ ಅವರು ೧ ಅಕ್ಟೋಬರ್ ೧೯೪೦ ರಲ್ಲಿ ಉತ್ತರ ಪ್ರದೇಶದ ಬಾಹಿಪುರ್ ಜಿಲ್ಲೆಯಲ್ಲಿ ಜನಿಸಿದರು. ಅವರ ಎತ್ತರವು ೫ ಅಡಿ ಹಾಗು ೧ ಇನ್ಚಸ್ ಆಗಿದ್ದರೂ ಕೂಡ ಅವರು ೫೭ಕೆ.ಜಿ.ಯ ತೂಕದ ಅಡಿಯಲ್ಲಿನ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದರು.[೨]
ಸಾಧನೆಗಳು[ಬದಲಾಯಿಸಿ]
ಅವರು ಭಾರತದ ಪ್ರತಿನಿಧಿಯಾಗಿ ಭಾಗವಹಿಸುವುದರ ಜೊತೆಯಾಗಿ ಭಾರತೀಯ ರೈಲ್ವೆಗಳ ತಂಡವನ್ನು ಕೂಡ ಪ್ರತಿನಿಧಿಸಿದ್ದಾರೆ.ಬಿಶಂಬರ್ ಸಿಂಗ್ ಅವರು ೧೯೬೦ರ ದಶಕದಲ್ಲಿ ಅವರ ಸಮಯದಲ್ಲಿ ಪ್ರಮುಖ ಮಲ್ಲಯುದ್ಧರಾಗಿದ್ದರು. ಒಬ್ಬ ಶ್ರೇಷ್ಠ ಕುಸ್ತಿಪಟು, ತರಬೇತುದಾರ ಮತ್ತು ತಾಂತ್ರಿಕ ತಜ್ಞ.ಅವರು ಅರ್ಜುನ ಪ್ರಶಸ್ತಿ ವಿಜೇತರಾಗಿದ್ದಾರೆ. ಅವರು ಆಧುನಿಕ ಫ್ರೀಸ್ಟೈಲ್ ಕುಸ್ತಿಗೆ ಹೊಂದಿಕೊಳ್ಳಲು ಸಾಧ್ಯವಾಯಿತು ಮತ್ತು ೫೭ ಕೆ.ಜಿ ವಿಭಾಗದಲ್ಲಿ ಪ್ರಶಸ್ತಿಗಳನ್ನು ಗೆದ್ದರು. ಅವರು ೧೯೬೨ ರಲ್ಲಿ ಹಿಂದ್ ಕೇಸರಿ ಪ್ರಶಸ್ತಿಯನ್ನು ಗೆದ್ದಾಗ ಅವರು ಮೊದಲ ಬಾರಿಗೆ ಪ್ರಾಮುಖ್ಯತೆಯನ್ನು ಪಡೆದರು.೧೯೬೪ ರಲ್ಲಿ ಟೋಕಿಯೋ ಒಲಿಂಪಿಯಾಡ್ನಲ್ಲಿ ೬ ನೇ ಸ್ಥಾನ ಪಡೆದರು ಮತ್ತು ಅದೇ ವರ್ಷ ಅರ್ಜುನ ಪ್ರಶಸ್ತಿ ಪಡೆದುಕೊಂಡರು. ೧೯೬೬ ರಲ್ಲಿ ಜಮೈಕಾ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರು ಚಿನ್ನದ ಪದಕವನ್ನು ಗೆದ್ದರು.[೩] ೧೯೬೭ ರಲ್ಲಿ ೫೭ ಕೆ.ಜಿ ಫ್ರೀಸ್ಟೈಲ್ ವ್ರೆಸ್ಲಿಂಗ್ ವಿಭಾಗದಲ್ಲಿ ಫಿಲಾ ವರ್ಲ್ಡ್ ವ್ರೆಸ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಕಾಕತಾಳೀಯವಾಗಿ, ೧೯೬೭ ರ ಚಾಂಪಿಯನ್ಷಿಪ್ಗಳನ್ನು ನವದೆಹಲಿಯಲ್ಲಿ ನಡೆಸಲಾಯಿತು. ೧೯೬೬ ರಲ್ಲಿ ಅವರು ಫ್ರೀಸ್ಟೈಲ್ ಕುಸ್ತಿಯ ವಿಭಾಗದಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದರು. ಮುಂದಿನ ವರ್ಷ ಅವರು ವಿಶ್ವದ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಅವರು ೧೯೬೪ ಮತ್ತು ೧೯೬೮ ರಲ್ಲಿ ಫ್ರೀಸ್ಟೈಲ್ ಮತ್ತು ಗ್ರೀಕೋ-ರೋಮನ್ ವಿಭಾಗಗಳಲ್ಲಿ ೧೯೬೪ ರಲ್ಲಿ ಫ್ರೀಸ್ಟೈಲ್ನಲ್ಲಿ ಆರನೇಯ ಸ್ಥಾನದ ಅತ್ಯುತ್ತಮ ಫಲಿತಾಂಶದೊಂದಿಗೆ ಸ್ಪರ್ಧಿಸಿದರು. ಹೀಗೆ ಭಾರತಕ್ಕೆ ಹೆಮ್ಮೆ ತಂದರು.
ಕೊನೆಯ ದಿನಗಳು[ಬದಲಾಯಿಸಿ]
ಬಿಶಂಬರ್ ಸಿಂಗ್ ಅವರು ಭಾರತೀಯ ರೈಲ್ವೇಯಿಂದ ಕ್ರೀಡಾ ಅಧಿಕಾರಿಯಾಗಿ ನಿಧನರಾದರು. ಅವರ ಅಕಾಲಿಕ ಮರಣದ ಮುಂಚೆಯೇ ಒಂದು ವಾರದ ಮೊದಲು ಬಿಶಾಂಬರ್ ಅವರು ಭಾರತೀಯ ಶೈಲಿ ವ್ರೆಸ್ಲಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಭೀಷ್ಮಾ ಪಿಟಾಮಾ ಪ್ರಶಸ್ತಿಯನ್ನು ನೀಡಿದ್ದರು. ಅದೇ ಅವಧಿಯಲ್ಲಿ ಸ್ಪರ್ಧಿಸಿದ ಕುಸ್ತಿಪಟುಗಳಾದ ಭೀಮ್ ಸಿಂಗ್ ಮತ್ತು ಬಿಶ್ವಾನಾಥ್ ಸಿಂಗ್ರೊಂದಿಗೆ ಭಾಗವಹಿಸಿದ್ದರು, ಆದರೆ ಹೆವಿವೇಯ್ಟ್ ವಿಭಾಗದಲ್ಲಿ. ಅವರು ೨೦೦೪ ರಲ್ಲಿ ನಿಧನರಾದರು.