ಬಾಸ್ಟನ್ ಚಹಾಕೂಟ
ಬಾಸ್ಟನ್ ಟೀ ಪಾರ್ಟಿ (ಬಾಸ್ಟನ್ ಚಹಾಕೂಟ)ಎಂಬುದು ಬಾಸ್ಟನ್ ನಲ್ಲಿನ ಬಡಾವಣೆ ವಾಸಿಗಳು. ಬ್ರಿಟಿಶ್ ಸರ್ಕಾರದ ವಿರುದ್ದ ಕೈಗೊಂಡ ನೇರ ಪ್ರತಿಕ್ರಿಯೆಯಾಗಿದೆ,ಮ್ಯಾಸೆಚುಸೆಟ್ಸ್ ನಲ್ಲಿನ ಬ್ರಿಟಿಶ್ ಕಾಲೊನಿಯಾಗಿದೆ.ಬಾಸ್ಟನ್ ಚಹಾಕೂಟವೆನ್ನುವುದು ಸಮಂಜಸವೆನಿಸದಿದ್ದ್ದರೂ ಬ್ರಿಟಿಶ್ ಸರ್ಕಾರದ ಅನಿಯಮಿತ ತೆರೆಗೆಯಿಂದ ಪಾರಾಗಲು ಜನರು ಕೈಗೊಂಡ ಒಂದು ಮಾದರಿ ಚಳವಳಿ ಎಂದರೂ ತಪ್ಪಾಗಲಾರದು. ಡಿಸೆಂಬರ್ 16,1773 ರಲ್ಲಿ ಬಾಸ್ಟನ್ ನಲ್ಲಿರುವ ಅಧಿಕಾರಿಗಳು ತೆರಿಗೆ ಕಟ್ಟಿದ ಮೂರು ಹಡಗಿನಷ್ಟು ಚಹಾವನ್ನು ಬ್ರಿಟನ್ ಗೆ ಕಳಿಸಲು ನಿರಾಕರಿಸಿದರು.ಆಗ ಅ ಕಾಲೊನಿನ ಒಂದು ಗುಂಪು ಆ ಹಡಗುಗಳನ್ನು ಒತ್ತಾಯಪೂರ್ವಕವಾಗಿ ಹತ್ತಿ ಅದರಲ್ಲಿನ ಚಹಾವನ್ನು ಬಾಸ್ಟನ್ ಬಂದರಿನಲ್ಲಿ ಚೆಲ್ಲಿ ನಾಶಪಡಿಸಿದರು. ಈ ಮಾದರಿಯ ಚಳವಳಿಯು ಅಮೆರಿಕನ್ ಇತಿಹಾಸದಲ್ಲಿ ಅತ್ಯಂತ ಅವಿಸ್ಮರಣೀಯ ಘಟನೆಯಾಗಿದೆಯಲ್ಲದೇ,ಹಲವಾರು ರಾಜಕೀಯ ಪ್ರತಿಭಟನೆಗಳು ಆಗಾಗ ಇದನ್ನು ಉಲ್ಲೇಖಿಸುತ್ತಿರುತ್ತವೆ.
ದಿ ಟೀ ಪಾರ್ಟಿಯು ಟೀ ಆಕ್ಟ್ ವಿರುದ್ದದ ಬ್ರಿಟಿಶ್ ಅಮೆರಿಕಾದ ನಿರಂತರ ಒಗ್ಗಟ್ಟಿನ ಚಳವಳಿಯಾಗಿದೆ.ಇದು 1773 ರಲ್ಲಿ ಬ್ರಿಟಿಶ್ ಸಂಸತ್ ನಿಂದ ಜಾರಿಗೊಳಿಸಲ್ಪಟ್ಟಿತು. ಅಲ್ಲಿನ ವಸಾಹುತಗಾರರು ಟೀ ಕಾಯ್ದೆಯನ್ನು ವಿಭಿನ್ನ ಕಾರಣಗಳಿಗಾಗಿ ವಿರೋಧಿಸಿದರು,ಬಹುಮುಖ್ಯವಾದುದೆಂದರೆ ಇದು ಅವರ ಹಕ್ಕನ್ನು ಉಲ್ಲಂಘಿಸಿದೆ,ಅದೆಂದರೆ ಈ ತೆರಿಗೆಯು ತಾವೇ ಆರಿಸಿ ಕಳಿಸಿದ ಜನಪ್ರತಿನಿಧಿಗಳು ವಿಧಿಸಬೇಕೇ ವಿನಹ ಬೇರೆಯವರಲ್ಲ. ಇನ್ನುಳಿದ ವಸಾಹತುಗಳಲ್ಲಿ ತೆರಿಗೆ ಹಾಕಿದ ಚಹಾವನ್ನು ಮೂರು ಕಡೆಗಳಲ್ಲಿ ಇಳಿಸುವುದನ್ನು ಯಶಸ್ವಿಯಾಗಿ ತಡೆಗಟ್ಟಿದರು.ಆದರೆ ಬಾಸ್ಟನ್ ನಲ್ಲಿ ರಾಯಲ್ ಗವರ್ನರ್ ಥಾಮಸ್ ಹಚಿಸನ್ ಈ ಚಹಾವು ಬ್ರಿಟನ್ ಗೆ ಮರುಳುವುದನ್ನು ನಿರಾಕರಿಸಿ ತಡೆಯೊಡ್ಡಿದರು.ಆದರೆ ಈ ಪ್ರತಿಭಟನಾಕಾರರು ಇದನ್ನು ನಾಶಗೊಳಿಸುತ್ತಾರೆ ಎಂಬುದನ್ನು ನಿರೀಕ್ಷಿರಲಿಲ್ಲ,ಕೊನೆಯ ಪಕ್ಷ ಇವರು ಶಾಸಕದ ಅಧಿಕಾರಕ್ಕೆ ಬೆಲೆ ಕೊಟ್ಟು ನೇರವಾಗಿ ಕ್ರಮಕೈಗೊಳ್ಳಲಾರರು ಎಂಬ ಅಭಿಪ್ರಾಯವಿತ್ತು.
ದಿ ಬಾಸ್ಟನ್ ಟೀ ಪಾರ್ಟಿ ಎಂಬ ಘಟನೆಯು ಅಮೆರಿಕಾದ ಕ್ರಾಂತಿಯ ಬೆಳವಣಿಗೆಗೆ ಒಂದು ಬೀಗದ ಕೈ ಆಗಿ ಕೆಲಸ ಮಾಡಿತು. ಪಾರ್ಲಿಮೆಂಟ್ 1774 ರಲ್ಲಿ ಬಲವಂತದ ಕಾನೂನುಗಳನ್ನು ಜಾರಿಗೆ ಅಂದಿತು.ಇದರೊಂದಿಗೆ ಬಾಸ್ಟನ್ ನ ವಾಣಿಜ್ಯಕ್ಕೆ ತೆರೆ ಎಳೆಯಲಾಯಿತು;ಎಲ್ಲಿಯವರೆಗೆ ಎಂದರೆ ನಾಶ ಮಾಡಿದ ಚಹಾದ ಬೆಲೆಯನ್ನು ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿಗೆ ಮರುಪಾವತಿ ಮಾಡುವವರೆಗೆ ಇದು ಬಂದಾಗಿತ್ತು. ವಸಾಹಸುತುದಾರರು ಈ ಬಲವಂತದ ಕಾಯ್ದೆಗೆ ಮತ್ತೊಂದು ತೆರನಾದ ಪ್ರತಿಭಟನೆ ಮಾಡಲು ಫಸ್ಟ್ ಕಾಂಟಿನೆಂಟಲ್ ಕಾಂಗ್ರೆಸ್ ಸಮಾವೇಶ ನಡೆಸಿದರು.ಅದಲ್ಲದೇ ಬ್ರಿಟಿಶ್ ಅರಸೊತ್ತಿಗೆಗೆ ಒಂದು ಮನವಿಯೊಂದನ್ನು ರವಾನಿಸಿ ಇಂತಹ ಕಠಿಣ ಕಾಯ್ದೆಗಳನ್ನು ಹಿಂಪಡೆದು ಈ ಪ್ರತಿಭಟನೆಯ ಬೇಡಿಕೆಗಳನ್ನು ಮನ್ನಿಸಿ ಸಹಕರಿಸುವಂತೆ ಕೇಳಿಕೊಂಡರು. ಈ ಬಿಕ್ಕಟ್ಟು ಉಲ್ಬಣಿಸಿತು,ಅಲ್ಲದೇ 1775ರ ಸುಮಾರಿಗೆ ಅಮೆರಿಕಾ ಕ್ರಾಂತಿ ಯುಧ್ದವು ಬಾಸ್ಟನ್ ಗೆ ಹತ್ತಿರವಾಗತೊಡಗಿತು.
ಹಿನ್ನೆಲೆ
[ಬದಲಾಯಿಸಿ]ದಿ ಬಾಸ್ಟನ್ ಟೀ ಪಾರ್ಟಿಯು ಎರಡು ಪ್ರಮುಖ ಕಾರಣಳಿಗಾಗಿ 1773ರಲ್ಲಿ ಬ್ರಿಟಿಶ್ ಸಾಮ್ರಾಜ್ಯದೊಂದಿಗೆ ವ್ಯಾಜ್ಯಕ್ಕಿಳಿಯಿತು.ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿಯ ಹಣಕಾಸಿನ ಸಮಸ್ಯೆಗಳು,ಅಲ್ಲದೇ ಪ್ರಸ್ತುತದಲ್ಲಿದ್ದ ಪಾರ್ಲಿಮೆಂಟಿನ ಅಧಿಕಾರದ ಬಗೆಗಿನ ವ್ಯಾಪ್ತಿ,ಅಂದರೆ ಬ್ರಿಟಿಶ್ ಅಮೆರಿಕನ್ ರಿಗೆ ಕಾಲೊನಿಯಲ್ಲಿ ಯಾವುದೇ ಚುನಾಯಿತ ಜನಪ್ರತಿ ಪ್ರತಿನಿಧಿಸದೇ ಇರುವುದು ಕೂಡಾ ವಿವಾದಕ್ಕೆ ಕಾರಣವಾಯಿತು. ನಾರ್ತ್ ಮಿನಿಸ್ಟ್ರಿಯು ಈ ವ್ಯಾಜ್ಯಗಳ ಬಗೆಹರಿಸಲು ಬಹಳಷ್ಟು ಯತ್ನ ಮಾಡಿತಾದರೂ ಅದು ಕೊನೆಗೆ ಕ್ರಾಂತಿಗೇ ಕುಮ್ಮಕ್ಕಾಯಿತೆನ್ನಬಹುದು.
1767ಕ್ಕೆ ಚಹಾ ವ್ಯಾಪಾರ
[ಬದಲಾಯಿಸಿ]ಯಾವಾಗ ಯುರೊಪಿಯನ್ ರು ಚಹಾದ ರುಚಿ ಕಂಡರೋ ಆಗ 17 ನೆಯ ಶತಮಾನದ ಹೊತ್ತಿಗೆ ಇನ್ನುಳಿದ ಪೈಪೋಟಿ ನೀಡುತ್ತಿದ್ದ ಕಂಪನಿಗಳು ತಮ್ಮದೇ ಸಂಸ್ಥೆ ಆರಂಭಿಸಿ [೨]ಈಸ್ಟ್ ಇಂಡೀಸ್ ನಿಂದ ಚಹಾದ ಆಮದು ಮಾಡಲಾರಂಭಿಸಿದರು. ಇಂಗ್ಲೆಂಡ್ ನಲ್ಲಿ ಅಲ್ಲಿನ ಪಾರ್ಲಿಮೆಂಟ್ 1698 ರಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ಚಹಾ ಆಮದಿಗೆ ಸಂಪೂರ್ಣ ಏಕಸ್ವಾಮ್ಯ [೩]ಘೋಷಿಸಿತು. ಯಾವಾಗ ಚಹಾವು ಬ್ರಿಟಿಶ್ ಕಾಲೊನಿಗಳಲ್ಲಿ ಜನಪ್ರಿಯಗೊಂಡಿತೋ ಆಗ ಪಾರ್ಲಿಮೆಂಟ್ ವಿದೇಶಿ ಪೈಪೋಟಿ ನಿಲ್ಲಿಸಲು 1721 ರಲ್ಲಿ ಒಂದು ಕಾನೂನನ್ನು ಜಾರಿಗೊಳಿಸಿತು.ಇದರ ಪ್ರಕಾರ ಕಾಲೊನಿಯವರು ತಮಗಾಗಿ ಚಹಾ ಆಮದು ಮಾಡಿಕೊಳ್ಳಬೇಕಿದ್ದರೆ ಅವರು ಕೇವಲ ಗ್ರೇಟ್ ಬ್ರಿಟನ್ ನಿಂದ ಮಾತ್ರ ತರಿಸಿಕೊಳ್ಳುವಂತೆ [೪]ಸೂಚಿಸಿತು. ಬದಲಾಗಿ ಈಸ್ಟ್ ಇಂಡಿಯಾ ಕಂಪನಿಯು ಕಾಲೊನಿಗಳಿಗೆ ಚಹಾವನ್ನು ರಫ್ತು ಮಾಡಲಿಲ್ಲ.ಅದರ ಬದಲಾಗಿ ಕಂಪನಿಯು ಸಗಟು ವ್ಯಾಪಾರದ ರೀತಿಯಲ್ಲಿ ಇಂಗ್ಲೆಂಡ್ ನಲ್ಲಿಯೇ ಹರಾಜು ನಡೆಸಲು ಆರಂಭಿಸಿತು. ಬ್ರಿಟಿಶ್ ಸಣ್ಣ ವ್ಯಾಪಾರಿಗಳು ಈ ಚಹಾವನ್ನು ತಂದು ಕಾಲೊನಿಗಳಿಗೆ ರಫ್ತು ಮಾಡಿದರು,ನಂತರ ವ್ಯಾಪಾರಿಗಳಿಗೆ ಇದನ್ನು ಮರುಮಾರಾಟ ಮಾಡಲಾಗುತಿತ್ತು,ಇದನ್ನು ಬಾಸ್ಟನ್ ,ನ್ಯುಯಾರ್ಕ್ ,ಫಿಲಿಡೆಲ್ಫಿಯಾ ಮತ್ತು ಚಾರ್ಲ್ಸ್ ಟನ್ ಗಳಲ್ಲಿ ಮಾರಾಟ [೫]ಮಾಡಲಾಗುತಿತ್ತು.
ಸುಮಾರು 1767 ರ ವರೆಗೆ ಈಸ್ಟ್ ಇಂಡಿಯಾ ಕಂಪನಿಯು ಒಂದು ಆಡ್ ವೆಲೊರೆಮ್ ತೆರಿಗೆ ಸುಮಾರು 25% ರಷ್ಟು ತಾನು ಗ್ರೇಟ್ ಬ್ರಿಟನ್ ನೊಳಗೆ ಆಮದು ಮಾಡಿಕೊಂಡ ಚಹಾದ ಮೇಲೆ [೬]ನೀಡುತಿತ್ತು. ಬ್ರಿಟೇನ್ ನಲ್ಲಿ ಅಧಿಕ ಪ್ರಮಾಣದ ಚಹಾ ಬಳಕೆ ಮೇಲೆ ಪಾರ್ಲಿಮೆಂಟ್ ಹೆಚ್ಚುವರಿ ತೆರಿಗೆಯನ್ನು ವಿಧಿಸಿತು.ಈ ಅಧಿಕ ತೆರಿಗೆಯು ಈ ಕರಾರಿನ ಮೇಲೆ ಅಂದರೆ ಹಾಲಂಡ್ ನಲ್ಲಿ ಆಮದು ಮಾಡಿಕೊಂಡ ಚಹಾದ ಮೇಲೆ ಡಚ್ ಸರ್ಕಾರ ಯಾವುದೇ ತೆರಿಗೆ ವಿಧಿಸದಂತೆ ಸೂಚನೆ ನೀಡಿತು.ಇದರ್ಥವೆಂದರೆ ಬ್ರಿಟನ್ ರು ಮತ್ತು ಬ್ರಿಟಿಶ್ ಅಮೆರಿಕನ್ ರು ಕಳ್ಳ ಮಾರ್ಗದಿಂದ ಬಂದ ಡಚ್ ಚಹಾ ಕೊಳ್ಳುವಂತೆ [೭]ಹೇಳಿತು. ಸುಮಾರು 1760 ರಲ್ಲಿ ಇಂಗ್ಲೆಂಡ್ ಅಕ್ರಮ ಚಹಾ ಮಾರಾಟಕ್ಕೆ ಅತಿ ದೊಡ್ಡ ಮಾರುಕಟ್ಟೆಯಾಗಿ ಬೆಳೆಯಿತು,ಯಾಕೆಂದರೆ ಈಸ್ಟ್ ಇಂಡಿಯಾ ಕಂಪನಿಯು ಗ್ರೇಟ್ [೮]ಬ್ರಿಟನ್ ನಲ್ಲಿ ಪ್ರತಿವರ್ಷ £400,000 ಮೊತ್ತವನ್ನು ಈ ಕಳ್ಳ ಸಾಗಣಿಕಿಗೆ ಬಿಟ್ಟುಕೊಡಲಾರಂಭಿಸಿತು.ಅದರೊಂದಿಗೆ ಡಚ್ ಚಹಾ ಕೂಡಾ ಬ್ರಿಟಿಶ್ ಅಮೆರಿಕಾದಲ್ಲಿ ಕಳ್ಳ ಮಾರ್ಗದಿಂದ [೯]ಸಾಕಷ್ಟು ಪ್ರಮಾಣದಲ್ಲಿ ಬರಲಾರಂಭಿಸಿತು
ಈಸ್ಟ್ ಇಂಡಿಯಾ ಕಂಪನಿಗೆ ನೆರವಾಗಲು 1767 ರಲ್ಲಿ ಡಚ್ ಕಳ್ಳಸಾಗಾಣಿಕೆ ಚಹಾದೊಂದಿಗೆ ಪೈಪೊಟಿ ನಡೆಸಲು,ಇಂಡೆಮ್ನಿಟಿ ಆಕ್ಟ್ ಯೊಂದನ್ನು ಪಾರ್ಲಿಮೆಂಟ ಜಾರಿಗೊಳಿಸಿತು. ಗ್ರೇಟ್ ಬ್ರಿಟನ್ ನಲ್ಲಿ ಮಾರಾಟವಾಗುವ ಚಹಾದ ತೆರಿಗೆಯನ್ನು ಇಳಿಮುಖ ಮಾಡಿತು.ಇದರಿಂದ ಈಸ್ಟ್ ಇಂಡಿಯಾ ಕಂಪನಿಗೆ ಚಹಾದ ಮೇಲಣದ 25% ರಷ್ಟು ತೆರಿಗೆಯನ್ನು ವಾಪಸು ನೀಡಿತು.ಅದನ್ನು ಮತ್ತೆ ಕಾಲೊನಿಗಳಿಗೆ ಮರು ರಫ್ತು [೧೦]ಮಾಡಲಾಯಿತು. ಸರ್ಕಾರಕ್ಕೆ ಆದ ಈ ನಷ್ಟ ತುಂಬಿಕೊಳ್ಳಲು ಪಾರ್ಲಿಮೆಂಟ್ 1767 ರಲ್ಲಿ ಟೌನ್ಶೆಂಡ್ ರೆವಿನ್ಯು ಆಕ್ಟ್ ನ್ನು ಜಾರಿಗೊಳಿಸಿ ಹೊಸ ತೆರಿಗೆಗಳನ್ನು ವಿಧಿಸಲು ಮುಂದಾಯಿತು,ಅದರಲ್ಲೊಂದು ಎಂದರೆ ಕಾಲೊನಿಯಲ್ಲಿ ಮಾರಾಟವಾಗುವ ಚಹಾದ ಮೇಲೆ ಹಾಗು ಇನ್ನಿತರ [೧೧]ತೆರಿಗೆಗಳು. ಇಲ್ಲಿ ಕಳ್ಳಸಾಗಾಣಿಕೆಯ ಸಮಸ್ಯೆ ಬಗೆಹರಿಸದೇ ಟೌನ್ಷೆಂಡ್ ತೆರಿಗೆಗಳು ಹೊಸ ವಿವಾದವನ್ನು ಹುಟ್ಟುಹಾಕಿ ಕಾಲೊನಿಗಳಿಗೆ ತೆರಿಗೆ ಹಾಕುವ ಪಾರ್ಲಿಮೆಂಟಿನ ಹಕ್ಕಿನ ಬಗೆಗೆಯೇ ಚರ್ಚೆ ಆರಂಭಗೊಂಡಿತು.
ಟೌನ್ಶೆಂಡ್ ತೆರಿಗೆಯ ವಿವಾದ
[ಬದಲಾಯಿಸಿ]ಯಾವಾಗ ಮೊದಲ ಬಾರಿಗೆ ಪಾರ್ಲಿಮೆಂಟ್ 1760 ರಲ್ಲಿ ತನ್ನ ಆದಾಯಕ್ಕಾಗಿ ಕಾಲೊನಿಗಳಿಗೆ ನೇರ ತೆರಿಗೆಯನ್ನು ವಿಧಿಸಲು ಯೋಚಿಸಿತೋ ಆಗ ಗ್ರೇಟ್ ಬ್ರಿಟನ್ ಮತ್ತು ಕಾಲೊನಿಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿತು. ಕೆಲವು ಕಾಲೊನಿಗಳಲ್ಲಿ ತಾವು ಅಮೆರಿಕಾ ಕ್ರಾಂತಿಯ ಬೆಂಬಲಿಗರು ಎಂದು ಹೇಳಿಕೊಳ್ಳುವವರು ಈ ತೆರಿಗೆಯನ್ನು ಆಕ್ಷೇಪಿಸಿದರು,ಇದು ಬ್ರಿಟಿಶ್ ಸಂವಿಧಾನದ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ಅವರು ವಾದಿಸಿದರು. ಬ್ರಿಟನರು ಮತ್ತು ಬ್ರಿಟಿಶ್ ಅಮೆರಿಕನ್ ರು ಒಂದು ಒಪ್ಪಂದಕ್ಕೆ ಬಂದರು;ಅದೆಂದರೆ ಸಂವಿಧಾನದ ಪ್ರಕಾರ ಬ್ರಿಟಿಶ್ ನಾಗರಿಕರು ತಮ್ಮ ಚುನಾಯಿತ ಪ್ರತಿನಿಧಿಯ ಸಮ್ಮತಿಯಿಲ್ಲದೇ ಯಾವುದೇ ತೆರಿಗೆಯನ್ನು ನೀಡಲಾರರು. ಅಂದರೆ ಗ್ರೇಟ್ ಬ್ರಿಟನ್ ನಲ್ಲಿ ಪಾರ್ಲಿಮೆಂಟ್ ಮೂಲಕ ತೆರಿಗೆಯನ್ನು ವಿಧಿಸಬಹುದಾಗಿದೆ. ಆದರೆ ಕಾಲೊನಿ ವಾಸಿಗಳು ಪಾರ್ಲಿಮೆಂಟ್ ಗೆ ಸದಸ್ಯರನ್ನು ಆಯ್ಕೆ ಮಾಡಲಿಲ್ಲ,ಇದರಿಂದ ಆ ಚುನಾಯಿತ ಸಂಸ್ಥೆಯಿಂದ ಕಾಲೊನಿಗಳಿಂದ ತೆರಿಗೆ ವಸೂಲಿ ಮಾಡಲಾಗದೆಂದು ಅಮೆರಿಕನ್ ಕ್ರಾಂತಿಯ ಬೆಂಬಲಿಗರು ವಾದ ಮಾಡಿದರು. ಅಮೆರಿಕನ್ ಕ್ರಾಂತಿಯ ಬೆಂಬಲಿಗರ ಪ್ರಕಾರ ಅವರ ಸ್ವಂತದ ಕಾಲೊನಿಯಲ್ ಅಸೆಂಬ್ಲಿ ಮಾತ್ರ ತೆರಿಗೆ ವಿಧಿಸಲು ಅಧಿಕಾರ ಹೊಂದಿದೆ. ಕಾಲೊನಿಗಳ ನಿರಂತರ ಪ್ರತಿಭಟನೆಯು ಸ್ಟಾಂಪ್ ಆಕ್ಟ್ ನ್ನು 1765 ರಲ್ಲಿ ಮತ್ತು ಡಿಕ್ಲೇರೇಟರಿ ಆಕ್ಟ್ ನ್ನು 1766 ರಲ್ಲಿ ಹಿಂಪಡೆಯುವಂತೆ ಮಾಡಿದವು.ಆದರೂ ಕೂಡಾ "ತನಗೆ ಕಾಲ್ನಿಗಳಿಗಾಗಿ ಯಾವುದೇ ಹೊಸ ಕಾನೂನು ಮತ್ತು ತೆರಿಗೆ ವಿಧಿಸುವ ಹಕ್ಕಿದೆ" ಎಂದು ತನ್ನ ಶಾಸಕಾಂಗದ ಬಲವನ್ನು ಪ್ರಸ್ತಾಪಿಸಿತು.
ಯಾವಾಗ ಟೌನ್ಶೆಂಡ್ ರೆವುನ್ಯು ಆಕ್ಟ್ 1767 ರಲ್ಲಿ ಮತ್ತೆ ಹೊಸ ತೆರಿಗೆಗಳನ್ನು ವಿಧಿಸಲು ಮುಂದಾಯಿತೊ ಆಗ ಮತ್ತೆ ಕಾಲೊನಿಯಲ್ಲಿನ ಅಮೆರಿಕನ್ ಕ್ರಾಂತಿ ಬೆಂಬಲಿಗರ ಪ್ರತಿಭಟನೆ ಮತ್ತು ಬಹಿಷ್ಕಾರಗಳು ಮುಂದುವರೆದವು. ವ್ಯಾಪಾರಿಗಳು ಆಮದು-ರಹಿತ ಸಂಘಟನೆಯನ್ನು ಹುಟ್ಟು ಹಾಕಿದರು,ಹಲವಾರು ಕಾಲೊನಿ ವಾಸಿಗಳು ಬ್ರಿಟಿಶ್ ಚಹಾ ಕುಡಿಯದಂತೆ ದೂರ ಉಳಿದರು,ನಿವ್ ಇಂಗ್ಲೆಂಡ್ ನಲ್ಲಿ ಕಾರ್ಯಕರ್ತರು ಪರ್ಯಾಯಗಳನ್ನು ಸೂಚಿಸಿದರು,ಉದಾಹರಣೆಗೆ ಬ್ರಿಟಿಶ್ ಚಹಾದ ಬದಲಿಗೆ ಲ್ಯಾಬ್ರೇಡರ್ ಚಹಾವನ್ನು ಶಿಫಾರಸು [೧೨]ಮಾಡಿದರು. ಕಳ್ಳಸಾಗಾಣಿಕೆ ಅವ್ಯಾಹತವಾಗಿತ್ತು,ಸಾಮಾನ್ಯವಾಗಿ ನ್ಯುಯಾರ್ಕ್ ಮತ್ತು ಫಿಲಿದೆಲ್ಫಿಯಾದಲ್ಲಿಕ್ ಎಂದಿನಂತೆ ಚಹಾ ಕಳ್ಳಸಂತೆ ಮಾರಾಟ ಬಾಸ್ಟನ್ ಗಿಂತ ಹೆಚ್ಚು ನಡೆಯುತಿತ್ತು ಬ್ರಿಟಿಶ್ ತೆರಿಗೆ ಸಮೇತದ ಚಹಾವು ಬಾಸ್ಟನ್ ನೊಳಗೆ ಆಮದಾಗುತಿತ್ತು.ವಿಶೇಷವಾಗಿ ರಿಚರ್ಡ್ ಕ್ಲಾರ್ಕೆ ಮತ್ತು ಮ್ಯಾಚೆಚುಸೆಟ್ಸ್ ನ ಗವರ್ನರ್ ಥಾಮ್ಸನ್ ಹಚಿಸನ್ ಅವರ ಪುತ್ರರು ಅದನ್ನು ಆಮದು ಮಾಡಿಕೊಳ್ಳುತ್ತಿದ್ದರು.ಯಾವಾಗ ಮ್ಯಾಸೆಚೆಸೆಟ್ಸ್ ನ ಅಮೆರಿಕಾ ಕ್ರಾಂತಿಯ ಬೆಂಬಲಿಗರು ಆಮದು-ರಹಿತ ಸಂಘಟನೆಯ ಒಪ್ಪಂದವನ್ನು ಸೇರುವಂತೆ ಒತ್ತಡ ತಂದರೋ ಆಗ ಈ ಆಮದಿಗೆ ಕಡಿವಾಣ [೧೩]ಬಿತ್ತು.
ಅಂತಿಮವಾಗಿ ಪಾರ್ಲಿಮೆಂಟ್ ಪ್ರತಿಭಟನೆಗಳಿಗೆ ಮಣಿದು ಟೌನ್ಶೆಂಡ್ ತೆರಿಗೆಗಳನ್ನು 1770 ರಲ್ಲಿ ಹಿಂದಕ್ಕೆ ಪಡೆದು ತನ್ನ ಪ್ರತಿಕ್ರಿಯೆ ತೋರಿತು.ಚಹಾ ತೆರಿಗೆಯನ್ನು ಬಿಟ್ಟರೆ ಉಳಿದೆಲ್ಲಕ್ಕೂ "ಅಮೆರಿಕನ್ ರಿಗೆ ತೆರಿಗೆ ಹಾಕುವ ಹಕ್ಕು ಹೊಂದಿದೆ" ಎಂದು ಪಧಾನಿ ಲಾರ್ಡ್ ನಾರ್ತ್ ತಮ್ಮ ಹೇಳಿಕೆಯನ್ನು [೧೪]ಪ್ರತಿಪಾದಿಸಿದರು. ಇಂತಹ ಭಾಗಶಃ ಹಿಂಪಡೆಯುವ ತೆರಿಗೆ ನೀತಿಯು ಆಮದು-ರಹಿತ ಸಂಘಟನೆಯ ಚಳವಳಿ ತಾತ್ಕಾಲಿಕವಾಗಿ ಅಕ್ಟೋಬರ್ 1770 ರಲ್ಲಿ [೧೫]ನಿಂತುಹೋಯಿತು. ಮತ್ತೆ 1771 ರಿಂದ 1773 ರ ವರೆಗೆ ಕಾಲೊನಿಗಳಲ್ಲಿ ಮತ್ತೆ ಬೃಹತ್ ಪ್ರಮಾಣದಲ್ಲಿ ಚಹಾ ಆಮದಾಯಿತು,ಆಗ ಮಾರಾಟಗಾರರು ಪೌಂಡ್ ವೊಂದಕ್ಕೆ ಮೂರು ಪೆನ್ನಿಯಂತೆ ಟೌಣ್ಶೆಂಡ್ ತೆರಿಗೆ ನೀಡುವುದಕ್ಕೆ ಮಾರಾಟಗಾರರು [೧೬]ಆರಂಭಿಸಿದರು. ಕಾಲೊನಿಯಲ್ ಗಳಲ್ಲಿ ಬಾಸ್ಟನ್ ತೆರಿಗೆ ಸಮೇತದ ಚಹಾ ಆಮದು ಮಾಡಿಕೊಳ್ಳುವ ದೊಡ್ಡ ಮಾರುಕಟ್ಟೆಯಾಯಿತು;ಆದರೆ ನ್ಯುಯಾರ್ಕ್ ಮತ್ತು ಫಿಲಿದೆಲ್ಫಿಯಾದಲ್ಲಿ ಇನ್ನೂ ಕಳ್ಳಸಂತೆಯ ಮಾರಾಟ ತನ್ನ ಪ್ರಾಬಲ್ಯ [೧೭]ಮೆರೆದಿದೆ.
ಟೀ ಆಕ್ಟ್ 1773
[ಬದಲಾಯಿಸಿ]ನಷ್ಟ ಪರಿಹಾರದ ಇಂಡೆಮ್ನಿಟಿ ಆಕ್ಟ್ ಈಸ್ಟ್ ಇಂಡಿಯಾ ಕಂಪನಿಗೆ 25% ರಷ್ಟು ತೆರಿಗೆ ಮರುಪಾವತಿ ನೀಡಿದಾಗ ಮತ್ತೆ ಆಗ ಕಾಲೊನಿಗಳಿಗೆ ಚಹಾವನ್ನು ಮರು-ರಫ್ತು ಮಾಡಲಾಗಿತ್ತು,ಅದರೆ ಈ ಕಾನೂನು 1772 ರಲ್ಲಿ ತನ್ನ ಅವಧಿಯನ್ನು ಪೂರ್ಣಗೊಳಿಸಿತು. ಪಾರ್ಲಿಮೆಂಟ್ 1772ರಲ್ಲಿ ಹೊಸ ಕಾನೂನನ್ನು ಪಾಸು ಮಾಡಿ ರಿಯಾಯತಿಯ 25% ರಲ್ಲಿ ಮೂರಎಯ ಹದಿನೈದನೆಯ ಅಂಶದಷ್ಟು ತೆರಿಗೆಯನ್ನು ಬ್ರಿಟೇನ್ ನಲ್ಲಿ ಆಮದು ಮಾಡಿದ ಚಹಾದ ಮೇಲೆ ವಿಧಿಸಿ 10% ಕ್ಕೆ [೧೮]ಇಳಿಸಿತು. ಈ ಕಾನೂನು ಬ್ರಿಟೇನ್ ನಲ್ಲಿ ಚಹಾ ತೆರಿಗೆ ಹಿಂತೆಗೆದಿದ್ದ 1767 ರ ಕಾನೂನಿಗೆ ಮತ್ತೆ ಮರುಜೀವನೀಡಿತು.ಅಲ್ಲದೇ ಕಾಲೊನಿಗಳಲ್ಲಿ ಮೂರು ಪೆನ್ನಿಗಳಷ್ಟಿನ ಟೌನ್ಶೆಂಡ್ ತೆರಿಗೆಯನ್ನು ವಿಧಿಸಲಾಯಿತು. ಈ ಹೊಸ ತೆರಿಗೆ ಭಾರವು ಬ್ರಿಟೇನ್ ಚಹಾದ ದರ ಹೆಚ್ಚಿಸಿತಲ್ಲದೇ ಮಾರಾಟ ನೆಲಕಚ್ಚಿತು. ಕಂಪನಿಯು ದೊಡ್ಡ ಪ್ರಮಾಣದಲ್ಲಿ ಚಹಾವನ್ನು ಬ್ರಿಟೇನ್ ಗೆ ಆಮದು ಮಾಡಿಕೊಳ್ಳಲು ಆರಂಭಿಸಿತು,ದೊಡ್ಡ ಪ್ರಮಾಣದ ಇಳುವರಿಯನ್ನು ಅದು ತನ್ನ ದಾಸ್ತಾನಿಗಳಲ್ಲಿಟ್ಟಿತು,ಆದರೆ ಯಾರೂ ಅಂತಹ ಖರೀದಿದಾರರು [೧೯]ಬರಲಿಲ್ಲ. ಇದಕ್ಕಾಗಿ ಮತ್ತು ಇನ್ನಿತರ ಕಾರಣಗಳಿಗಾಗಿ ಬ್ರಿಟೇನ್ ನ ಪ್ರಮುಖ ವಾಣಿಜ್ಯ ಸಂಸ್ಥೆ ಈಸ್ಟ್ ಇಂಡಿಯಾ ಕಂಪನಿ 1772 ರಲ್ಲಿ ಗಂಭೀರ ಪ್ರಮಾಣದ ಹಣಕಾಸಿನ ಮುಗ್ಗಟ್ಟಿಗೆ [೨೦]ಸಿಲುಕಿತು.
ಕೆಲವು ತೆರಿಗೆಗಳನ್ನು ತೆಗೆದು ಹಾಕಿದ್ದು ಕೂಡಾ ಈ ಬಿಕ್ಕಟಿಗೆ ಪರಿಹಾರದಂತೆ ಕಂಡು ಬಂತು. ನಂತರದಲ್ಲಿ ಈಸ್ಟ್ ಇಂಡಿಯಾ ಕಂಪನಿ ಟೌನ್ಶೆಂಡ್ ತೆರಿಗೆಯನ್ನು ಹಿಂತೆಗೆಯುವಂತೆ ಕೇಳಿಕೊಂಡಿತು.ಆದರೆ ನಾರ್ತ್ ಮಿನಿಸ್ಟ್ರಿಗೆ ಇದರ ಬಗ್ಗೆ ಅಸಮಾಧಾನವಿತ್ತು,ಇದರಿಂದ ಪಾರ್ಲಿಮೆಂಟ್ ಗಿರುವ ಯಾವಾಗ ಬೇಕು ಆವಾಗ ಕಾನೂನು ಮಾಡುವ ತೆರಿಗೆ ವಿಧಿಸುವ ಹಕ್ಕಿಗೆ ಚ್ಯುತಿ ಬರಬಹುದೆಂದು ಅದರ [೨೧]ವಾದವಾಗಿತ್ತು. ಬಹು ಮುಖ್ಯವಾದುದೆಂದರೆ ಟೌನ್ಶೆಂಡ್ ತೆರಿಗೆ ಸಂಗ್ರಹಿತ ಹಣವನ್ನು ಕೆಲವು ಕಾಲೊನಿಗಳ ಗವರ್ನರ್ ಗಳಿಗೆ ಮತ್ತು ನ್ಯಾಯಾಧೀಶರ ಸಂಬಳಗಳನ್ನು ನೀಡಲು [೨೨]ಬಳಸಲಾಯಿತು. ಈ ಟೌನ್ಶೆಂಡ್ ತೆರಿಗೆಯ ಮುಖ್ಯ ಉದ್ದೇಶವೆಂದರೆ:ಈ ಮೊದಲು ಈ ಅಧಿಕಾರಿಗಳು ಕಾಲೊನಿಯಲ್ ಅಸಂಬ್ಲಿಗಳ ಮೂಲಕ ತಮ್ಮ ಸಂಬಳ ಪಡೆಯುತ್ತಿದ್ದರು,ಆದರೆ ಬ್ರಿಟಿಶ್ ಸರ್ಕಾರದ ಮೇಲೆ ಅವರನ್ನು ಅವಲಂಬಿತರನ್ನಾಗಿಸಲು ಮತ್ತು ಅವರು ಕಾಲೊನಿಗಳ ಬಗ್ಗೆ ವಾಲದಿರುವಂತೆ ಮಾಡಲು ಈ ವ್ಯವಸ್ಥೆ [೨೩]ಮಾಡಲಾಗಿದೆ.
ಇನ್ನೊಂದೆಂದರೆ ಈಸ್ಟ್ ಇಂಡಿಯಾ ಕಂಪನಿಯ ದಾಸ್ತಾನುಗಳಲ್ಲಿ ಶೇಖರವಾಗುತ್ತಿರುವ ಚಹಾವನ್ನು ಅಗ್ಗದ ದರದಲ್ಲಿ ಯುರೊಪಿನಲ್ಲಿ ಮಾರಾಟಕ್ಕೆ ಸಾಗ ಹಾಕುವುದು. ಆದರೆ ಈ ಸಾಧ್ಯತೆಯ ಬಗ್ಗೆ ತನಿಖೆ ಮಾಡಬೇಕಾದ ಪರಿಸ್ಥಿತಿ ಉಂಟಾಯಿತು,ಇಲ್ಲದಿದ್ದರೆ ಮತ್ತೆ ಚಹಾವನ್ನು ಗ್ರೇಟ್ ಬ್ರಿಟೇನ್ ಗೆ ಮರು ಕಳ್ಳಸಾಗಣೆ ಮಾಡಬೇಕಾಗುತ್ತದೆ.ಯಾಕೆಂದರೆ ಅಲ್ಲಿ ತೆರಿಗೆಸಹಿತದ ಚಹಾದ ಮಾರಾಟ [೨೪]ಕಡಿಮೆಯಾಗಿದೆ. ಈಸ್ಟ್ ಇಂಡಿಯಾ ಕಂಪನಿಯ ಹೆಚ್ಚ್ಚುವರಿ ಚಹಾ ಮಾರಾಟಕ್ಕೆ ಅಮೆರಿಕನ್ ಕಾಲೊನಿಗಳು ಅತ್ಯಂತ ಸೂಕ್ತ ಮಾರುಕಟ್ಟೆ ಎನಿಸಿದೆ,ಯಾಕೆಂದರೆ ಕಳ್ಳಸಾಗಣೆಯಲ್ಲಿ ಬಂದ ಡಚ್ ಚಹಾಗಿಂತ ಕಡಿಮೆ ಬೆಲೆಗೆ ಸಿಕ್ಕಿದರೆ ಅದನ್ನು ಮಾರಾಟ [೨೫]ಮಾಡಬಹುದಾಗಿದೆ.
ನಾರ್ತ್ ಮಿನಿಸ್ಟ್ರಿಯ ಪರಿಹಾರವೆಂದರೆ ಟೀ ಆಕ್ಟ್ ,ಈ ಬಗ್ಗೆ ಕಿಂಗ್ ಜಾರ್ಜ್ ಕೂಡಾ ಮೇ 10,1773ರಲ್ಲಿ ತಮ್ಮ ಸಮ್ಮತಿ [೨೬]ಸೂಚಿಸಿದರು. ಈ ಕಾನೂನು ಪ್ರಕಾರ ಈಸ್ಟ್ ಇಂಡಿಯಾ ಕಂಪನಿಯ 25% ರ ತೆರಿಗೆ ಮರುಪಾವತಿಯನ್ನು ಮಾಡುವ ಮೂಲಕ ಬ್ರಿಟೇನ್ ನಲ್ಲಿ ಒಳಬರುವ ಚಹಾದ ಆಮದಿನ ಮೇಲೆ ಹಾಕುವ ತೆರಿಗೆಯನ್ನು ರಿಯಾಯತಿ ದರದಲ್ಲಿ ಉಳಿಸಲಾಯಿತು.ಈ ಮೂಲಕ ಅದರದೇ ವೆಚ್ಚದಲ್ಲಿ ಕಾಲೊನಿಗಳಿಗೆ ಚಹಾವನ್ನು ರಫ್ತು ಮಾಡಲಾಯಿತು. ಇದರಿಂದಾಗಿ ಮಧ್ಯವರ್ತಿಗಳಿಂದಾಗುವ ವೆಚ್ಚವನ್ನ್ನು ಕಂಪನಿ ಉಳಿಸಿ ಖರ್ಚನ್ನು ಕಡಿಮೆ ಮಾಡಬಹುದು.ಸಗಟು ವ್ಯಾಪಾರಿಗಳು ಲಂಡನ್ ನಲ್ಲಿ ತಮ್ಮ ಹರಾಜಿನಲ್ಲಿ ತಂದ ಚಹಾವನ್ನು ಮಾರಾಟ [೨೭]ಮಾಡುವರು. ಮಧ್ಯವರ್ತಿಗಳಿಗೆ ಮಾರಾಟ ಮಾಡುವ ಬದಲಾಗಿ ಕಂಪನಿಯು ಕಾಲೊನಿಯ ವ್ಯಾಪಾರಿಗಳಿಗೇ ಚಹಾವನ್ನು ರವಾನೆ ಸರಕುಗಳ ಮೂಲಕ ಮಾರಿ ಅದರ ಮೇಲೆ ಕಮೀಶನ್ ಪಡೆಯಬಹುದೆಂದು ತಿಳಿಸಿತು. ಜುಲೈ 1773 ರಲ್ಲಿ ಚಹಾ ರವಾನೆ ಸರಕನ್ನು ಆಯ್ಕೆ ಮಾಡಿ ನ್ಯುಯಾರ್ಕ್ ,ಫಿಲಿಡೆಲ್ಫಿಯಾ,ಬಾಸ್ಟನ್ ಮತ್ತು ಚಾರ್ಲ್ಸಟನ್ ಗಳಲ್ಲಿ ನಿಗದಿ [೨೮]ಮಾಡಲಾಯಿತು.
ಈ ಟೀ ಆಕ್ಟ್ ಕಾಲೊನಿಗಳಿಗೆ ಆಮದಾದ ಚಹಾದ ಮೇಲಿನ ಮೂರು ಪೆನ್ಸ್ ಟೌನ್ಶೆಂಡ್ ತೆರಿಗೆಯನ್ನು ಉಳಿಸಿಕೊಂಡಿತು. ಕೆಲವು ಪಾರ್ಲಿಮೆಂಟ್ ಸದಸ್ಯರು ಇಂತಹ ತೆರಿಗೆಯನ್ನು ರದ್ದುಪಡಿಸಬೇಕೆಂದು ಹೇಳಿದ್ದರು,ಯಾಕೆಂದರೆ ಇದಕ್ಕಾಗಿ ಮತ್ತೊಂದು ಕಾಲೊನಿಯಲ್ ವಿವಾದವನ್ನು ಹುಟ್ಟು ಹಾಕುವುದು ಅವರಿಗೆ ಬೇಕಿರಲಿಲ್ಲ. ನಿವೃತ್ತ ಸಾರ್ವಜನಿಕ ಕೋಶಾಧಿಕಾರಿ (ಫಾರ್ಮರ್ ಚಾನ್ಸಲರ್ ಆಫ್ ದಿ ಎಕ್ಸ್ಚೆಕ್ಕರ್ )ವಿಲಿಯಮ್ ಡೌಡೆಸ್ವೆಲ್ ಅವರು ಈ ಟೌನ್ಶೆಂಡ್ ತೆರಿಗೆ ಉಳಿದರೆ ಅಮೆರಿಕನ್ ರು ಸಹಿಸಲಾರರು ಎಂದು ಅವರು ಲಾರ್ಡ್ ನಾರ್ತ್ ಅವರಿಗೆ ಎಚ್ಚರಿಕೆ [೨೯]ನೀಡಿದ್ದರು. ಆದರೆ ನಾರ್ತ್ ಮಾತ್ರ ಟೌನ್ಶೆಂಡ್ ತೆರಿಗೆಯಿಂದ ಬರುವ ಆದಾಯವನ್ನು ಬಿಟ್ಟುಕೊಡಲು ಸಿದ್ದರಿರಲಿಲ್ಲ,ಯಾಕೆಂದರೆ ಸಾಮಾನ್ಯವಾಗಿ ಇದನ್ನು ಕಾಲೊನಿಯಲ್ ಅಧಿಕಾರಿಗಳ ಸಂಬಳಕ್ಕಾಗಿ ಬಳಸಲಾಗುತಿತ್ತು.ಅಲ್ಲದೇ ಅಮೆರಿಕನ್ ರನ್ನು ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶವೂ [೩೦]ಎರಡನೆಯದ್ದಾಗಿತ್ತು. ಇತಿಹಾಸಜ್ಞ ಬೆಂಜಾಮಿನ್ ಲಾಬಾರಿ ಪ್ರಕಾರ "ಈ ಹಠಮರಿ ಲಾರ್ಡ್ ನಾರ್ತ್ ಹಳೆಯ ಬ್ರಿಟಿಶ್ ಸಾಮ್ರಾಜ್ಯದ ಶವದ ಪೆಟ್ಟಿಗೆಗೆ ಮೊಳೆಯೊಂದನ್ನು [೩೧]ಜಡೆದಿದ್ದಾರೆ."
ಟೌನ್ಶೆಂಡ್ ತೆರಿಗೆ ಜಾರಿಯಲ್ಲಿದ್ದರೂ ಈ ಟೀ ಆಕ್ಟ್ ಈಸ್ಟ್ ಇಂಡಿಯಾ ಕಂಪನಿಗೆ ಮೊದಲಿಗಿಂತಲೂ ಚಹಾವನ್ನು ಇನ್ನಷ್ಟು ಕಳ್ಳಸಾಗಾಣಿಕೆದಾರರಿಗಿಂತ ಅಗ್ಗದರದಲ್ಲಿ ಮಾರಾಟ ಮಾಡಲು ಅವಕಾಶ ನೀಡಿತು. ಅಧಿಕೃತವಾಗಿ 1772 ರಲ್ಲಿ ಅತ್ಯಂತ ಸಾಮಾನ್ಯ ಗುಣಮಟ್ಟದ ಬೊಹಿಯಾ ಚಹಾವು ಪ್ರತಿ ಪೌಂಡ್ ಗೆ 3 ಶಿಲ್ಲಾಂಗಳ ವರೆಗೆ (3s)[೩೨]ಮಾರಾಟವಾಯಿತು. ಟೀ ಆಕ್ಟ್ ನಂತರ ಕಾಲೊನಿಯಲ್ ದಾಸ್ತಾನುದಾರರು ಇದನ್ನು ಪ್ರತಿ ಪೌಂಡ್ ಗೆ 2 ಶಿಲ್ಲಾಂಗಗಳಿಗೆ ಮಾರಾಟ ಮಾಡಿದರು,ಇದು ಕಳ್ಳ ಸಂತೆಕೋರರು 2 ಶಿಲ್ಲಾಂಗಗಳು ಮತ್ತು ಒಂದು ಪೆನ್ನಿಗೆ(2s 1d)[೩೩]ಮಾರುತ್ತಿದ್ದರು. ಈ ಟೌನ್ಶೆಂಡ್ ತೆರಿಗೆಯು ರಾಜಕೀಯವಾಗಿ ಬಹಳಷ್ಟು ಸೂಕ್ಷ್ಮವಾಗಿದೆ ಎನಿಸಿದಾಗ,ಕಂಪನಿಯು ಈ ತೆರಿಗೆಯನ್ನು ಬಚ್ಚಿಟ್ಟು ಬೇರೆ ತೆರನಾದ ರೀತಿಯಲ್ಲಿ ವ್ಯವಸ್ಥೆ ಮಾಡಲು ಅದನ್ನು ಲಂಡನ್ ನಲ್ಲಿ ನೀಡುವ ವಿಧಾನ ಅನುಸರಿಸಿತು.ಚಹಾ ಮಾರಾಟದ ನಂತರ ಅದು ಕಾಲೊನಿಗಳಲ್ಲಿ ಬಂದು ಬಿದ್ದ ನಂತರ ಈ ಬಗ್ಗೆ ಯೋಚಿಸುವುದಾಗಿ ಅದು ಹೇಳಿತು. ಆದರೆ ಇದನ್ನು ಕಾಲೊನಿವಾಸಿಗಳಿಂದ ಬಚ್ಚ್ಕಿಡುವ ಯತ್ನ [೩೪]ಯಶಸ್ವಿಯಾಗಲಿಲ್ಲ.
ಟೀ ಆಕ್ಟ್ ಗೆ ತಡೆ
[ಬದಲಾಯಿಸಿ]ಸೆಪ್ಟೆಂಬರ್ ಮತ್ತು ಅಕ್ಟೋಬರ್ 1773 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಚಹಾ ಹೊತ್ತ ಏಳು ಹಡಗುಗಳನ್ನು ಕಾಲೊನಿಗಳಿಗೆ ರವಾನಿಸಲಾಯಿತು:ನಾಲ್ಕು ಬಾಸ್ಟನ್ ಗೆ ಮತ್ತು ನ್ಯುಯಾರ್ಕ್ ,ಫಿಲಿಡೆಲ್ಫಿಯಾ ಮತ್ತು ಚಾರ್ಲ್ಸಟನ್ ಗೆ ತಲಾ ಒಂದೊಂದು ಎಂದು [೩೫]ನಿಗದಿಗೊಳಿಸಲಾಯಿತು. ಈ ಹಡಗುಗಳಲ್ಲಿ ಸುಮಾರು 2,000 ಕ್ಕಿಂತ ಅಧಿಕ ಪೆಟ್ಟಿಗೆಗಳಲ್ಲಿ ಸುಮಾರು 600,000 ಪೌಂಡ್ ಗಳಷ್ಟು ಚಹಾ [೩೬]ಕಳಿಸಲಾಯಿತು. ಹಡಗುಗಳು ದಾರಿಯಲ್ಲಿರುವಾಗ ಅಮೆರಿಕನ್ ರಿಗೆ ಟೀ ಆಕ್ಟ್ ಬಗ್ಗೆ ವಿವರ ಗೊತ್ತಿತ್ತು,ಆಗ ವಿರೋಧ [೩೭]ಹೆಚ್ಚಲಾರಂಭಿಸಿತು. ಅಮೆರಿಕಾ ಕ್ರಾಂತಿಯ ಬೆಂಬಲಿಗರು ಸಾಮಾನ್ಯವಾಗಿ ತಮ್ಮನ್ನು ವಿಮೋಚನಾ ಪುತ್ರರೆಂದು ತಿಳಿಯುತ್ತಿದ್ದರು,ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರ ದಾಸ್ತಾನುದಾರರು ಹಿಂತೆಗೆಯುವಂತೆ ಮಾಡುತ್ತಿದ್ದರು,ಅದಲ್ಲದೇ ಸ್ಟಾಂಪ್ ಹಂಚಿಕೆ ಕೂಡಾ 1765 ರ ಸ್ಟಾಂಪ್ ಆಕ್ಟ್ ನ್ನು ಹಿಂದೆ ಪಡೆಯಲು [೩೮]ಒತ್ತಾಯಪಡಿಸಲಾರಂಭಿಸಿದರು.
ಇಂತಹ ಪ್ರತಿಭಟನಾ ಚಳವಳಿಯು ಬಾಸ್ಟನ್ ಟೀ ಪಾರ್ಟಿಯು ಕೇವಲ ಹೆಚ್ಚು ತೆರಿಗೆಗೆ ಸಂಬಂಧಿಸಿದ ವ್ಯಾಜ್ಯ ಅಲ್ಲ ಎಂಬುದು ಗೊತ್ತಾಯಿತು. ಅಧಿಕೃತವಾಗಿ ಆಮದು ಮಾಡಿದ ಚಹಾದ ಬೆಲೆಯನ್ನು 1773 ರ ಟೀ ಆಕ್ಟ್ ಕಡಿಮೆಗೊಳಿಸಿತು. ಪ್ರತಿಭಟನಾಕಾರರು ಇನ್ನುಳಿದ ವಿಭಿನ್ನ ವಿಷಯಗಳತ್ತ ಗಮನ ಹರಿಸಿದರು. ಸಾಮಾನ್ಯವಾಗಿ "ಪ್ರತಿನಿಧಿತ್ವ ಇಲ್ಲದೇ ತೆರಿಗೆ ವಿಧಿಸುವಿಕೆ ಇಲ್ಲ" ಎಂಬ ವಾದ ಜನಜನಿತವಾಯಿತು.ಪಾರ್ಲಿಮೆಂಟ್ ನಲ್ಲಿ ಕಾಲೊನಿವಾಸಿಗಳ ಭಾಗವಹಿಸುವಿಕೆಯ ಬಗ್ಗೆ ಬೇಡಿಕೆ ಮಾತ್ರ ಗಟ್ಟಿಯಾಗಿ [೩೯]ಉಳಿಯಿತು. ಈ ತೆರಿಗೆ ಉದ್ದೇಶವು ಕೆಲವು ಅಧಿಕಾರಿಗಳು ಕಾಲೊನಿಯಲ್ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ,ಅಲ್ಲದೇ ಕಾಲೊನಿನಿವಾಸಿಗಳ ಹಕ್ಕುಗಳನ್ನು ಮೊಟಕುಗೊಳಿಸುವುದು ಕೂಡಾ ಅಪಾಯಕಾರಿ ಎಂಬುದು ಆಗ ಸರ್ಕಾರಕ್ಕೆ [೪೦]ಹೊಳೆಯಿತು. ಇದು ಮ್ಯಾಸೆಚುಸೆಟ್ಸ್ ವಿಷಯದಲ್ಲಿ ನಿಜವಾಗಿದೆ.ಇದೊಂದೇ ಕಾಲೊನಿಯಲ್ಲಿ ಮಾತ್ರ ಟೌನ್ಶೆಂಡ್ ಯೋಜನೆಯನ್ನು ಸಂಪೂರ್ಣವಾಗಿ [೪೧]ಜಾರಿಗೊಳಿಸಲಾಗಿದೆ.
ಕಾಲೊನಿಯಲ್ ವ್ಯಾಪಾರಿಗಳು ಅಲ್ಲದೇ ಅದರೊಳಗೆ ಕೆಲವು ಕಳ್ಳಸಾಗಣೆದಾರರು ಈ ಪ್ರತಿಭಟನೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದಾರೆ. ಯಾಕೆಂದರೆ ಅಧಿಕೃತವಾಗಿ ಆಮದಾದ ಚಹಾವು ಡಚ್ ಚಹಾ ಬೆಲೆಗಿಂತ ಕಡಿಮೆಯಾಗಿದ್ದು ಹೀಗಾಗಿ ಕಳ್ಳಸಂತೆಯಲ್ಲಿ ಮಾರುವವರು ವ್ಯಾಪಾರದಿಂದ ದೂರ ಇರಬೇಕಾದ ಪ್ರಸಂಗ [೪೨]ಬಂತು. ಈಸ್ಟ್ ಇಂಡಿಯಾ ಕಂಪನಿಯಿಂದ ಕನ್ ಸೈನಿಗಳೆಂದು ಕರೆಯಿಸಿಕೊಳ್ಳದ ಅಧಿಕೃತ ಚಹಾ ಆಮದುದಾರರು ಕೂಡಾ ಟೀ ಆಕ್ಟ್ ನಿಂದ ಹಣಾಕಾಸಿನ ಸ್ಥಿತಿ ದುರವಸ್ಥೆಗೆ ಬರಬಹುದೆಂದು [೪೩]ಹೆದರಿಸಿದರು. ವ್ಯಾಪಾರಿಗಳಿಗೆ ಇನ್ನೊಂದು ಕಳವಳಕಾರಿ ವಿಷಯವೆಂದರೆ ಈ ಟೀ ಆಕ್ಟ್ ಈಸ್ಟ್ ಇಂಡಿಯಾ ಕಂಪನಿಗೇ ಸಂಪೂರ್ಣ ವ್ಯಾಪಾರದ ಏಕಸ್ವಾಮ್ಯ ನೀಡಿದ್ದು,ಯಾಕೆಂದರೆ ಇದು ಸರ್ಕಾರ ನಿರ್ಮಿಸಿದ ಏಕಸ್ವಾಮ್ಯ ಇರುವುದರಿಂದ ಇದು ಇನ್ನಿತರ ವಸ್ತುಗಳಿಗೂ ವಿಸ್ತರಿಸಿದರೆ ಎಂಬ ಕಳವಳ ಉಳಿದ ವ್ಯಾಪಾರಿಗಳಲ್ಲಿ [೪೪]ಮೂಡಿತು.
ಬಾಸ್ಟನ್ ನ ದಕ್ಷಿಣದ ಪ್ರತಿಭಟನಾಕಾರರು ಚಹಾ ಕನ್ ಸೈನೀಗಳು ಹಿಂತೆಗೆಯುವಂತೆ ಮಾಡಲು ಯಶಸ್ವಿಯಾದರು. ಡಿಸೆಂಬರ್ ನಲ್ಲಿ ಚಾರ್ಲ್ಸಟನ್ ನಲ್ಲಿ ವ್ಯಾಪಾರಿಗಳು ಒತ್ತಾಯಪೂರ್ವಕವಾಗಿ ಹಿಂಪಡೆಯುವಂತೆ ಮಾಡಲಾಯಿತು.ಅಲ್ಲಿ ಅನಧಿಕೃತ ಚಹಾದ ದಾಸ್ತಾನನ್ನು ಸುಂಕದ ಅಧಿಕಾರಿಗಳು [೪೫]ವಶಪಡಿಸಿಕೊಂಡರು. ಫಿಲಿಡೆಲ್ಫಿಯಾದಲ್ಲಿ ಬೃಹತ ಪ್ರತಿಭಟನಾ ಸಭೆಗಳು ಆಯೋಜಿತವಾಗಿದ್ದವು. ಈ ಚಹಾ ಬಂದಿಳಿಯುವುದನ್ನು ವಿರೋಧಿಸುವಂತೆ ಬೆಂಜಾಮಿನ್ ರಶ್ ತನ್ನ ದೇಶೀಯರಿಗೆ ಕರೆ ನೀಡಿ,ಈ ಹಡಗಿನಲ್ಲಿ "ಗುಲಾಮಗಿರಿಯ ಬೀಜಗಳಿವೆ"ಎಂದು [೪೬]ವಿವರಿಸಿದ. ಡಿಸೆಂಬರ್ ಆರಂಭದಲಿ ಫಿಲಡೆಲ್ಫಿಯಾ ದಾಸ್ತಾನು ರವಾನೆದಾರರು ಹಿಂದಕ್ಕೆ ಸರಿದರು.ಹಡಗಿನ ನಾಯಕನೊಂದಿಗಿನ ಚಕಮಕಿಯು ನಡೆಯಿತು. ಅಲ್ಲದೇ ಚಹಾದ ಹಡಗು ತನ್ನ ದಾಸ್ತಾನಿನೊಂದಿಗೆ ಇಂಗ್ಲೆಂಡ್ ಗೆ [೪೭]ಮರಳಿತು. ನ್ಯುಯಾರ್ಕ್ ಸಿಟಿಗೆ ತೆರಳುವ ಹಡಗು ಕೂಡಾ ವ್ಯತಿರಿಕ್ತ ಹವಾಮಾನದಿಂದಾಗಿ ವಿಳಂಬವಾಯಿತು,ಅದೇ ವೇಳೆಗೆ ರವಾನೆದಾರರು ಹಿಂದಕ್ಕೆ ಸರಿದರು.ಅಲ್ಲದೇ ಚಹಾದಿಂದ್ ತುಂಬಿದ್ದ ಹಡಗು ಇಂಗ್ಲೆಂಡ್ ಗೆ [೪೮]ಮರಳಿತು.
ಬಾಸ್ಟನ್ ನಲ್ಲಿ ಯಶಸ್ವಿ ತಡೆ
[ಬದಲಾಯಿಸಿ]ಮಾಸೆಚುಸೆಟ್ಸ್ ಬಿಟ್ಟರೆ ಉಳಿದೆಲ್ಲೆಡೆ ಪ್ರತಿಭಟನಾಕಾರರು ದಾಸ್ತಾನುಗಳನ್ನು ಹಿಂಪಡೆಯುವಂತೆ ಅಥವಾ ಚಹಾವನ್ನು ಇಂಗ್ಲೆಂಡ್ ಗೆ ಮರಳಿಸುವಂತೆ [೪೯]ಒತ್ತಾಯಪಡಿಸುತ್ತಿದ್ದರು. ಆದರೆ ಬಾಸ್ಟನ್ ನಲ್ಲಿ ಮಾತ್ರ ಗವರ್ನರ್ ಹಚಿಸನ್ ಮಾತ್ರ ತಮ್ಮ ನಿಲುವಿಗೆ ಬದ್ದರಾಗಿದ್ದರು. ತನ್ನ ಇಬ್ಬರೂ ಮಕ್ಕಳು ಚಹಾದ ದಾಸ್ತಾನು ರವಾನೆಯನ್ನು ಹಿಂದೆ ಕಳಿಸದಂತೆ ಅವರು [೫೦]ತಿಳಿಹೇಳಿದರು.
ನವೆಂಬರ್ ಅಂತ್ಯದಲ್ಲಿ ಚಹಾ ತುಂಬಿದ ಹಡಗು ಡಾರ್ಟ್ ಮೌತ್ ಬಾಸ್ಟನ್ ಬಂದರಿಗೆ ಬಂದಾಗ,ಅಮೆರಿಕಾ ಕ್ರಾಂತಿಯ ಬೆಂಬಲಿಗರ ನಾಯಕ ಸ್ಯಾಮ್ಯುವಲ್ ಆಡ್ಮಸ್ ಬೃಹತ್ ಪ್ರತಿಭಟಾನಾ ಸಭೆಗಳು ನವೆಂಬರ್ 29, 1773 ರಂದು ಫ್ಯಾನ್ಯುಲ್ ಹಾಲ್ ನಲ್ಲಿ ನಡೆಯುವಂತೆ ಕರೆ ಕೊಟ್ಟನು. ಸಾವಿರಾರು ಜನರು ಅಲ್ಲಿ ಜಮಾಯಿಸಿದಾಗ ಸಭೆಯನ್ನು ವಿಶಾಲವಾದ ಒಲ್ಡ್ ಸೌತ್ ಮೀಟಿಂಗ್ ಹೌಸ್ ಗೆ [೫೧]ವರ್ಗಾಯಿಸಲಾಯಿತು. ಬ್ರಿಟಿಶ್ ಕಾನೂನು ಪ್ರಕಾರ ಡಾರ್ಟ್ ಮೌತ್ ನಲ್ಲಿನ ದಾಸ್ತಾನನ್ನು ಇಳಿಸಿಕೊಂಡು ಇಪ್ಪತ್ತು ದಿನಗಳಲ್ಲಿ ತೆರಿಗೆಯನ್ನು ಕಟ್ಟಬೇಕು ಇಲ್ಲವಾದರೆ ಸುಂಕದ ಅಧಿಕಾರಿಗಳು ಈ ದಾಸ್ತಾನನ್ನು ವಶಪಡಿಸಿಕೊಳ್ಳುತ್ತಾರೆ ಎಂದು [೫೨]ಎಚ್ಚರಿಸಿತು. ಈ ಬೃಹತ್ ಸಭೆಯಲ್ಲಿ ಆಡಮ್ಸ್ ಪರಿಚಯಿಸಿದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು,ಫಿಲೆಡೆಲ್ಫಿಯಾದಲ್ಲಿ ಇದೇ ವಿಷಯದ ಕುರಿತು ಇಂಥದೇ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿತ್ತು.ಡಾರ್ಟ್ ಮೌತ್ ನ ನಾಯಕನು ಯಾವುದೇ ಆಮದು ಶುಲ್ಕ ನೀಡದೇ ಹಡಗನ್ನು ವಾಪಸು ಕಳಿಸಲು ಒತ್ತಾಯಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸಭೆಯು ಇಪ್ಪತ್ತೈದು ಜನರನ್ನು ನೇಮಿಸಿ ಚಹಾ ಮತ್ತಿತರೆ ಪೆಟ್ಟಿಗೆಗಳನ್ನು ಲಂಡನ್ನಿನ ಡೇವಿಸನ,ನಿವ್ ಮ್ಯಾನ್ ಅಂಡ್ ಕಂ.ಇಳಿಸದಂತೆ ನೋಡಿಕೊಳ್ಳಲು [೫೩]ಸೂಚಿಸಲಾಯಿತು.
ಆದರೆ ಗವರ್ನರ್ ಹಚಿಸನ್ ಅವರು ಸುಂಕ ನೀಡದೇ ಡಾರ್ಟ್ ಮೌತ್ ಹೋಗುವುದನ್ನು ನಿರಾಕರಿಸಿದರು. ಇನ್ನೆರಡು ಚಹಾ ಹಡಗುಗಳು ಎಲೆನರ್ ಮತ್ತು ಬೀವರ್ ಗಳು ಬಾಸ್ಟನ್ ಬಂದರಿಗೆ ಬಂದಿಳಿದವು.(ಇದೇ ವೇಳೆಗೆ ಇನ್ನೊಂದು ಹಡಗು ವಿಲಿಯಮ್ ಬಾಸ್ಟನ್ ನೆಡೆಗೆ ಬರುತ್ತಿದ್ದುದು ಬಿರುಗಾಳಿಗೆ ಸಿಲುಕಿ ಅದು ತನ್ನ ಸ್ಥಾನಕ್ಕೆ ಬರುವ ಮುಂಚೆಯೇ [೫೪]ನಾಶವಾಯಿತು. ಡಿಸೆಂಬರ್ 16-ಡಾರ್ಟ್ ಮೌತ್ ನ ಅಂತಿಮ ಗಡುವಿನ ದಿನ,ಸುಮಾರು 7,000 ಜನರು ಒಲ್ಡ್ ಸೌತ್ ಮೀಟಿಂಗ್ ಹೌಸ್ ನ ಸುತ್ತಮುತ್ತ [೫೫]ಜಮಾಯಿಸಿದರು. "ಮತ್ತೆ ಗವರ್ನರ್ ಹಚಿಸನ್ ಅವರು ಹಡಗಗಳನ್ನು ಬಿಡಲು ನಿರಾಕರಿಸುತ್ತಿದ್ದಾರೆಂಬ ವರದಿಯಂತೆ ಆಡಮ್ಸ್ ಘೋಷಿಸಿದೆಂದರೆ "ಈ ಸಭೆಯು ದೇಶವನ್ನು ರಕ್ಷಿಸಲು ಹೆಚ್ಚಿನದೇನೂ ಮಾಡದು."ಎಂದರು. ಇದಕ್ಕೆ ಸಂಬಂಧಿಸಿದ ಕಥೆಯಂತೆ ಆಡಮ್ ನ ಹೇಳಿಕೆಯು ಈ "ಟೀ ಪಾರ್ಟಿ"ಗೆ ಮೊದಲೇ ನಿರ್ಧರಿಸಿದ ವ್ಯವಸ್ಥೆಯಂತಿತ್ತು.ಆದರೆ ಈ ಬಗೆಗಿನ ಹೇಳಿಕೆಯು ಒ6ದು ಶತಮಾನದ ವರೆಗೂ ಯಾವುದೇ ಮುದ್ರಣ ಮಾಧ್ಯಮದಲ್ಲಿ ಕಾಣಿಸಿರಲಿಲ್ಲ.ಆದರೆ ಆಡಮ್ಸ್ ನ ಮರಿಮೊಮ್ಮಗ ಆತನ ಬಗ್ಗೆ ಬರೆದ ಆತ್ಮ ಚರಿತ್ರೆಯಲ್ಲಿ ಕೆಲವೊಂದು ಸಾಕ್ಷಿಗಳನ್ನು ಅಪಾರ್ಥಗೊಳಿಸಲಾಗಿದೆ ಎಂದು [೫೬]ಹೇಳಲಾಗುತ್ತದೆ. ಪ್ರತ್ಯಕ್ಷ ಸಾಕ್ಷಿಗಳು ಹೇಳುವಂತೆ ಆಡಮ್ಸ್ ನ ಹೇಳಿಕೆ ಸಂಜ್ಞೆ ಬರುವವರೆಗೆ ಹತ್ತು ಹದಿನೈದು ನಿಮಿಷಗಳ ವರೆಗೆ ಜನ ಸಭೆಯಿಂದ ಕದಲಲಿಲ್ಲ.ಯಾಕೆಂದರೆ ಈ ಸಭೆ ಇನ್ನೂ [೫೭]ಮುಗಿದಿರಲಿಲ್ಲ.
ಚಹಾದ ನಾಶಪಡಿಸುವಿಕೆ
[ಬದಲಾಯಿಸಿ]ಸ್ಯಾಮ್ಯುವಲ್ ಆಡಮ್ಸ್ ಈ ಸಭೆಯನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದರು,ಆದರೆ ಅಲ್ಲಿದ್ದ ಜನತೆ ಒಲ್ಡ್ ಸೌತ್ ಮೀಟಿಂಗ್ ಹೌಸ್ ನಿಂದ ಬಾಸ್ಟನ್ ಹಾರ್ಬರ್ ಗೆ ಓಡಿದರು. ಆ ಸಂಜೆ ಸುಮಾರು 30 ರಿಂದ 130 ರವರೆಗಿನ ಗುಂಪು ಮೊಹಕ್ ಭಾರತೀಯ ಬುಡಕಟ್ಟಿನವರಂತೆ ವೇಷ ಧರಿಸಿ ಸಣ್ಣ ನಾವೆಗಳಲ್ಲಿ ಬಂದರು.ಸುಮಾರು ಮೂರು ಗಂಟೆಯಲ್ಲಿಯೇ ಎಲ್ಲಾ 342 ಚಹಾ ಪೆಟ್ಟಿಗೆಗಳನ್ನು ನೀರಿನಲ್ಲಿ [೫೮]ಚೆಲ್ಲಿದರು. ಆದರೆ ಗ್ರಿಫಿನ್ ನ ವ್ಹಾರ್ಫ್ ನ ಟೀ ಪಾರ್ಟಿ ಸ್ಥಳವು ಎಲ್ಲಿದೆ ಎಂಬುದನ್ನು ಹೇಳಲಾಗುವುದಿಲ್ಲ.ಆದರೆ ಇದರ ಸಂಭವದ ಬಗ್ಗೆ ನಿಖರವಾದ ಯಾವುದೇ ಮಾಹಿತಿ ಇಲ್ಲ.(ಇಂದು ಇದನ್ನು ಹಚಿಸನ್ ಸ್ಟ್ರೀಟ್ ,ಪರ್ಲ್ ಸ್ಟ್ರೀಟ್ )[೫೯]ಎನ್ನಲಾಗುತ್ತದೆ.
ಪ್ರತಿಕ್ರಿಯೆ
[ಬದಲಾಯಿಸಿ]ಸ್ಯಾಮ್ಯುವಲ್ ಆಡಮ್ಸ್ ಬಾಸ್ಟನ್ ಟೀ ಪಾರ್ಟಿಗೆ ಸಹಾಯ ಮಾಡಿದನೋ ಇಲ್ಲವೋ ಗೊತ್ತಿಲ್ಲ ಆದರೆ ಇದನ್ನು ಎಲ್ಲೆಡೆಗೂ ಪ್ರಚಾರಕ್ಕಿಳಿಸಲು ಆತ ತಕ್ಷಣದ ಕ್ರಮ [೬೦]ಕೈಗೊಂಡ. ಆತನ ವಾದದಂತೆ ಟೀ ಪಾರ್ಟಿ ಎಂಬುದು ಕಾನೂನು ಮೀರಿದ ಜನರ ಗುಂಪಲ್ಲ,ಇದು ತತ್ವಕ್ಕಾಗಿ ಹೋರಾಡುವ ಗುಂಪು,ಅಲ್ಲದೇ ಜನರು ತಮ್ಮ ಸಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವ ಏಕೈಕ ವೇದಿಕೆಯಾಗಿದೆ,ಎಂದು [೬೧]ಹೇಳಿದನು.
ಗವರ್ನರ್ ಥಾಮಸ್ ಹಚಿಸನ್ ಸನ್ಸ್ ಆಫ್ ಲಿಬರ್ಟಿಯವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಲಂಡನ್ ನನ್ನು ಒತ್ತಾಯಿಸಿದರು. ಆತ ಇನ್ನುಳಿದ ರಾಯಲ್ ಗವರ್ನರ್ ಗಳು ಮಾಡಿದಂತೆ ಮಾಡಿದ್ದರೆ ಅಲ್ಲದೇ ಹಡಗು ಮಾಲಿಕರನ್ನು ಮತ್ತು ನಾಯಕರನ್ನು ಈ ಸಮಸ್ಯೆ ಬಗೆಹರಿಸುವಂತೆ ಕಾಲೊನಿಯವರಿಗೆ ಹೇಳಿದ್ದರೆ,ಡಾರ್ಟ್ ಮೌತ್ ,ಎಲೆನೇರ್ ಮತ್ತು ಬೀವರ್ ಗಳು ಯಾವುದೇ ಪ್ರಮಾಣದ ಚಹಾವನ್ನು ಇಳಿಸದೇ ಹಾಗೆಯೇ ವಾಪಸಾಗುತ್ತಿದ್ದವು.
ಬ್ರಿಟೇನ್ ನಲ್ಲಿ ಎಲ್ಲಾ ರಾಜಕಾರಣಿಗಳು ಕಾಲೊನಿಯ ಸ್ನೇಹಿತರಂತೆ ತೋರಿದರೂ ಕೆಲವು ವಿಷಯಗಳಲ್ಲಿ ಮಾತ್ರ ಕಾಲೊನಿಯವರ ಈ ನಡತೆಯ ವಿರುದ್ಧ ತಮ್ಮ ಅಸಮಾಧಾನ ತೋರಿದರು. ಪ್ರಧಾನಿ ಲಾರ್ಡ್ ನಾರ್ತ್ ಅವರ ಪ್ರಕಾರ "ಯಾವುದೇ ತೊಂದರೆ ಬಂದರೂ ನಾವು ಅದನ್ನು ಎದುರಿಸಲೇಬೇಕಾಗುತ್ತದೆ,ನಾವು ಹೊಣೆಗಾರಿಕೆಯನ್ನು ತೆಗೆದುಕೊಳ್ಳದಿದ್ದರೆ ನಮ್ಮದೆಲ್ಲ [೬೨]ಮುಗಿದಂತೆಯೇ." ಈ ಕ್ರಿಯೆಯು ಯಾವುದೇ ಶಿಕ್ಷೆ ಇಲ್ಲದೇ ತಪ್ಪಿಸಿಕೊಳ್ಳಬಾರದು ಎಂದು ಬ್ರಿಟಿಶ್ ಸರ್ಕಾರ ಯೋಚಿಸಿತು,ಬಾಸ್ಟನ್ ಬಂದರನ್ನು ಮುಚ್ಚಿಸಿತಲ್ಲದೇ ಇನ್ನುಳಿದ "ಕಠಿಣ ಕಾನೂನುಗಳ"ನ್ನು ಅನುಷ್ಟಾನಗೊಳಿಸಲು ಸೂಚಿಸಿತು.
ಬೆಂಜಾಮಿನ್ ಫ್ರಾಂಕ್ಲಿನ್ ಕಾಲೊನಿಯಲ್ಲಿ ಹೇಳಿರುವಂತೆ ನಾಶಗೊಳಿಸಿದ ಚಹಾವನ್ನು ಅದರ ಬೆಲೆ ಪೂರ್ಣ 90,000 ಪೌಂಡ್ಸಗಳನ್ನು ಭರಿಸುವಂತೆ ಹೇಳಿಕೆ ನೀಡಿದ. ರಾಬರ್ಟ್ ಮುರಿ ಎಂಬ ನ್ಯುಯಾರ್ಕ್ ವ್ಯಾಪಾರಿ ಲಾರ್ಡ್ ನಾರ್ತ್ ಅವರ ಬಳಿ ಮೂವರು ಇನ್ನಿತರ ವ್ಯಾಪಾರಿಗಳೊಂದಿಗೆ ತೆರಳಿ ಈ ಹಾನಿಯನ್ನು ತುಂಬಿಕೊಡುವುದಾಗಿ ಹೇಳಿದ.ಆದರೆ ಈ ಬೇಡಿಕೆಯನ್ನು ತಳ್ಳಿ [೬೩]ಹಾಕಲಾಯಿತು. ಕಾಲೊನಿ ವಾಸಿಗಳಲ್ಲಿ ಕೆಅಲ್ವರು ಇಂತಹದೇ ಕೆಲಸಕ್ಕೆ ಮುಂದಾದರು,ಉದಾಹರಣೆಗೆ ಪೆಗ್ಗಿ ಸ್ಟೆವರ್ಟ್ ನಾವೆಯನ್ನು ಸುಟ್ಟು ಹಾಕಿದರು. ಹೀಗೆ ಬಾಸ್ಟನ್ ಟೀ ಪಾರ್ಟಿಯ ಹಲವಾರು ಘಟನೆಗಳು ಅಮೆರಿಕನ್ ಕ್ರಾಂತಿಕಾರಿ ಯುದ್ದಕ್ಕೆ ದಾರಿ ಮಾಡಿಕೊಟ್ಟವು.
ಫೆಬ್ರವರಿ 1775 ರಲ್ಲಿ,ಬ್ರಿಟೇನ್ ಸಮನ್ವಯ ನಿರ್ಧಾರವೊಂದನ್ನು ಪಾಸು ಮಾಡಿತು,ಇದು ಕಾಲೊನಿಯನ್ ರಿಗೆ ತೃಪ್ತಿದಾಯಕ ಕೆಲಸ ಆಗುವವರೆಗೂ ಯಾವುದೇ ತೆರಿಗೆ ವಿಧಿಸುವ ಬಗ್ಗೆ ವಿವರ ನೀಡಿತು.ಇದು ಸಾಮ್ರಾಜ್ಯದ ಹಿತರಕ್ಷಣೆ ಮತ್ತು ಸಾಮ್ರಜ್ಯದ ಅಧಿಕಾರಿಗಳನ್ನು ಸೂಕ್ತವಾಗಿಡುತ್ತದೆ. ಟೀ ಆಕ್ಟ್ ನ್ನು ಟ್ಯಾಕ್ಸೇಶನ್ ಆಫ್ ಕಾಲೊನೀಸ್ ಆಕ್ಟ್ 1778 ಹಿಂದಕ್ಕೆ ಪಡೆಯುವಂತೆ ಮಾಡಿತು.
ಇದರ ನಂತರ ಬಾಸ್ಟನ್ ಟೀ ಪಾರ್ಟಿ ಮತ್ತು ಅದಕ್ಕೆ ಸಂಬಂಧಿಸಿದ ಚಳವಳಿಗಳ ಪ್ರತಿಕ್ರಿಯೆಗಳು ಥರ್ಟೀನ್ ಕಾಲೊನಿಗಳು ಮಾಡುತ್ತಿರುವ ಕ್ರಾಂತಿಗೆ ಬೆಂಬಲ ನೀಡಿದವು.ತರುವಾಯ ಇವರೆಲ್ಲ ಮಾಡುತ್ತಿದ್ದ ಸ್ವಾತಂತ್ರ್ಯ ಹೋರಾಟ ಯಶಸ್ಸು ಕಂಡಿತು.
ಪರಂಪರೆ
[ಬದಲಾಯಿಸಿ]ಇತಿಹಾಸತಜ್ಣ ಅಲ್ಫ್ರೆಡ್ ಯಂಗ್ ಅವರ ಪ್ರಕಾರ "ಬಾಸ್ಟನ್ ಟೀ ಪಾರ್ಟಿ"ಎಂಬುದು 1834 ರ ವರೆಗೆ ಮುದ್ರಣ ಮಾಧ್ಯಮದಲ್ಲಿ [೬೪]ಕಾಣಿಸಲಿಲ್ಲ. ಇದಕ್ಕಿಂತ ಮೊದಲು ಈ ಘಟನೆಯನ್ನು ಸಾಮಾನ್ಯವಾಗಿ "ಚಹಾದ ನಾಶಗೊಳಿಸುವಿಕೆ" ಎನ್ನಲಾಗುತಿತ್ತು. ಬರಹಗಾರ ಯಂಗ್ ಅವರ ಪ್ರಕಾರ ಇಂತಹ ಸೊತ್ತು ನಾಶಪಡಿಸುವಿಕೆಯ ಘಟನೆಯನ್ನು ಅಮೆರಿಕನ್ ಬರಹಗಾರರು ಅಷ್ಟಾಗಿ ಮಹತ್ವ ನೀಡಲಿಲ್ಲ.ಆದ್ದರಿಂದ ಇದು ಅಮೆರಿಕನ್ ಕ್ರಾಂತಿ ಇತಿಹಾಸದಲ್ಲಿ ದಾಖಲಾಗಲಿಲ್ಲ. ಇದು 1830 ರ ಸುಮಾರಿಗೆ ಬದಲಾವಣೆಗೆ ಒಳಪಟ್ಟಿತು,ವಿಶೇಷವಾಗಿ ಜಾರ್ಜ್ ರಾಬರ್ಟ್ ಟ್ವೆಲ್ವ್ ಹೆವ್ಸ್ ಅವರ ಜೀವನ ಚರಿತ್ರೆ ಬೆಳಕು ಕಂಡ ನಂತರ ಅದೂ ಅಲ್ಲದೇ ಆ "ಟೀ ಪಾರ್ಟಿ"ಯ ಘಟನೆಯ ಪ್ರತ್ಯಕ್ಷ ಸಾಕ್ಷಿ ಇನ್ನೂ ಇರುವುದನ್ನು ಇಲ್ಲಿ ಸಾಕ್ಷಿ ಪ್ರಜ್ಞೆಯನ್ನಾಗಿ [೬೫]ಬಳಸಲಾಗಿದೆ.
ಬಾಸ್ಟನ್ ಟೀ ಪಾರ್ಟಿಯನ್ನು ಸಾಮಾನ್ಯವಾಗಿ ಉಳಿದೆಲ್ಲ ರಾಜಕೀಯ ಪ್ರತಿಭಟನೆಗಳೊಂದಿಗೆ ಉಲ್ಲೇಖ ಮಾಡಲಾಗುತ್ತದೆ. ಯಾವಾಗ ಮಹಾತ್ಮಾ ಕೆ.ಗಾಂಧಿಯವರ ನೇತೃತ್ವದಲ್ಲಿನ ಗುಂಪೊಂದು ದಕ್ಷಿಣ ಆಫ್ರಿಕಾದಲ್ಲಿ ಇಂಡಿಯನ್ ರಜಿಸ್ಟ್ರೇಶನ್ ಕಾರ್ಡ್ ಗಳನ್ನು ಪ್ರತಿಭಟನೆಗೋಸುಗ 1908 ರಲ್ಲಿ ಸುಡಲು ಯತ್ನಿಸಿತು ಆಗ ಈ ಘಟನೆಯನ್ನು ಸಹ ಬಾಸ್ಟನ್ ಟೀ ಪಾರ್ಟಿಗೆ ಹೋಲಿಕೆ [೬೬]ಮಾಡಲಾಯಿತು. ಯಾವಾಗ ಗಾಂಧಿ ಬ್ರಿಟಿಶ್ ವೈಸ್ ರಾಯ್ ಅವರನ್ನು 1930 ರ ಭಾರತೀಯ ಉಪ್ಪಿನ ಸತ್ಯಾಗ್ರಹದ ಪ್ರತಿಭಟನೆ ಚಳವಳಿ ನಂತರ ಭೇಟಿ ಮಾಡಿದಾಗ,ಅವರು ಕೆಲವು ಪ್ರಮಾಣದ ತೆರಿಗೆ ರಹಿತ ಉಪ್ಪನ್ನು ತಮ್ಮ ಶಾಲಿನಲ್ಲಿ ಕಟ್ಟಿಕೊಂಡದ್ದನ್ನು ಇಲ್ಲಿ ನೆನಪಿಸಬಹುದು."ಈ ಶಾಲು ನಮಗೆ ಪ್ರಸಿದ್ದ ಬಾಸ್ಟನ್ ಟೀ ಪಾರ್ಟಿಯನ್ನು ನೆನಪಿಸುತ್ತದೆ." ಎಂದು ಅವರು ಮುಗುಳ್ನಗೆಯೊಂದಿಗೆ [೬೭]ಹೇಳಿದರು.
ವಿವಿಧ ಕಡೆಯಲ್ಲಿನ ಅಮೆರಿಕನ್ ಚಳವಳಿಗಾರರು ತಮ್ಮ ರಾಜಕೀಯ ದೃಷ್ಟಿಯಿಂದ ಟೀ ಪಾರ್ಟಿಯನ್ನು ಒಂದು ಸಂಕೇತವನ್ನಾಗಿ ಬಳಸಲು ಆರಂಭಿಸಿದರು.ಬಾಸ್ಟನ್ ಟೀ ಪಾರ್ಟಿಯ 200 ನೆಯ ವರ್ಷಾಚರಣೆಯ ಪ್ರಯುಕ್ತ 1973 ರಲ್ಲಿ ಫನಿಯುಲ್ ಹಾಲ್ ನಲ್ಲಿ ನಡೆದ ಬೃಹತ್ ಸಭೆಯೊಂದು ಅಧ್ಯಕ್ಷ ರಿಚರ್ಡ್ ನಿಕ್ಸನ್ ರನು ಛೀ ಮಾರಿ ಹಾಕುವಂತೆ ಕರೆ ನೀಡಿತು.ಅಲ್ಲದೇ ಆಗ ನಡೆಯುತ್ತಿದ್ದ ತೈಲ ಕೊರತೆಯ ವಿವಾದವನ್ನು ಮುಂದೆ ಮಾಡಿ ತೈಲ ಕಂಪನಿಗಳ ವಿರುದ್ದ ಪ್ರತಿಭಟನೆ ನಡೆಸಲಾಯಿತು. ನಂತರ ಪ್ರತಿಭಟನಾಕಾರರು ಒಂದು ಅಣಕು ಹಡಗನ್ನು ಏರಿ ಬಾಸ್ಟನ್ ಬಂದರಿಗೆ ಪಯಣಿಸಿ ಅದಕ್ಕೆ ನಿಕ್ಸನ್ ರ ಪ್ರತಿಕೃತಿ ನೇತು ಹಾಕಿ ಹಲವಾರು ಖಾಲಿ ತೈಲ್ ಬ್ಯಾರಲ್ ಗಳನ್ನು ಸಮುದ್ರಕ್ಕೆ ಎಸೆದು [೬೮]ಪ್ರತಿಭಟಿಸಿದರು. US ನ ಇಬ್ಬರು ಕಂಜರ್ವೇಟಿವ್ ಕಾಂಗ್ರೆಸ್ಸಿಗರು 1998 ರಲ್ಲಿ ಪೆಟ್ಟಿಗೆಯೊಂದರ ಮೇಲೆ ಫೆಡ್ರಲ್ ಟ್ಯಾಕ್ಸ್ ಕೋಡ್ ಎಂದು ನಮೂದಿಸಿ ಇದರ ಮೇಲೆ "ಟೀ" ಎಂದು ಬರೆದು ಅದನ್ನು ಬಂದರಿನಲ್ಲಿ ಎಸೆದು [೬೯]ಪ್ರತಿಭಟಿಸಿದರು.
ಸುಮಾರು 2006 ರಲ್ಲಿ ವಿಮೋಚನಾ ರಾಜಕೀಯ ಪಕ್ಷ ಎಂದು ಕರೆಸಿಕೊಳ್ಳುವ ಪಕ್ಷವೊಂದಕ್ಕೆ "ಬಾಸ್ಟನ್ ಟೀ ಪಾರ್ಟಿ" ಎಂದು ನಾಮಕರಣ ಮಾಡಿ ಅದನ್ನು ಸ್ಥಾಪಿಸಲಾಯಿತು. ನಂತರ 2007 ರಲ್ಲಿ ರೊನ್ ಪೌಲ್ "ಟೀ ಪಾರ್ಟಿ" ಮನಿ ಬಾಂಬ್ ತನ್ನ 234 ನೆಯ ಬಾಸ್ಟನ್ ಟೀ ಪಾರ್ಟಿ ವಾರ್ಷಿಕೋತ್ಸವ ಹಮ್ಮಿಕೊಂಡಿತ್ತು.ಅಂದು ಅದು ಪಕ್ಷಕ್ಕಾಗಿ $6.04 ದಶಲಕ್ಷ ನಿಧಿಯನ್ನು 24 ಗಂಟೆಗಳಲ್ಲಿ ಸಂಗ್ರಹಿಸಿ ದಾಖಲೆ [೭೦]ನಿರ್ಮಿಸಿತು.
ಆರಂಭದ ವರ್ಷದ 2009 ರಲ್ಲಿ ನಾಗರಿಕರ ಸರಣಿ ಸಭೆಗಳು "ಟೀ ಪಾರ್ಟಿಸ್ "ಎಂಬ ಹೆಸರಿನಲ್ಲಿ ನಡೆದವು,ಸರ್ಕಾರದ ದುಂದು ವೆಚ್ಚವನ್ನು ಪ್ರತಿಭಟಿಸಿ ಈ ಸಭೆಗಳು ನಡೆದವು.ಅದರಲ್ಲೂ ಅಧ್ಯಕ್ಷ ಒಬಾಮಾ ಅವರ ಬಜೆಟ್ ನಲ್ಲಿನ ಅಧಿಕ ಖರ್ಚನ್ನು ನಾಗರಿಕರು ಪ್ರತಿಭಟಿಸಿದರು.ಇದರಲ್ಲಿ ಆರ್ಥಿಕ ಸ್ಥಿರತೆಯ ನೀತಿ ಸೂತ್ರದ ಬಗ್ಗೆಯೂ ನಾಗರಿಕರಲ್ಲಿ ಕೆಲಮಟ್ಟಿನ ವಿರೋಧ [೭೧][೭೨]ಕಾಣಿಸಿತು. ಇದರಲ್ಲಿ ಪ್ರಥಮವಾಗಿ ನಡೆದ ಸಭೆಯು ಏಪ್ರಿಲ್ 15,2009 ರಲ್ಲಿ ಬಾಸ್ಟನ್ ಕಾಮನ್ ನಲ್ಲಿ ನಡೆಯಿತು.ಇದು ಮೂಲ ಬಾಸ್ಟನ್ ಟೀ ಪಾರ್ಟಿಯ ಸ್ಥಳದಿಂದ ಕೆಅಲ್ವೇ ಕೆಲವು ಬ್ಲಾಕ್ [೭೩]ಅಂತರದಲ್ಲಿತ್ತು.
ಇವನ್ನೂ ನೋಡಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ಟಿಪ್ಪಣಿಗಳು
- ↑ ಯಂಗ್ ,ಶೂಮೇಕರ್, 183–85.
- ↑ ಲ್ಯಾಬರೀ,ಟೀ ಪಾರ್ಟಿ' , 3–4.
- ↑ ನಾಲೆಂಬರ್ಗ್ ,ಗ್ರೊತ್' , 90.
- ↑ ನಾಲೆಂಬರ್ಗ್ ,ಗ್ರೊತ್' , 90; ಲ್ಯಾಬರೀ,ಟೀ ಪಾರ್ಟಿ' , 7.
- ↑ ಲ್ಯಾಬರೀ,ಟೀ ಪಾರ್ಟಿ' , 8–9.
- ↑ ಲ್ಯಾಬರೀ,ಟೀ ಪಾರ್ಟಿ' , 6–8; ನಾಲೆಂಬರ್ಗ್ ,ಗ್ರೊತ್' , 91; ಥಾಮಸ್ ,ಟೌನ್ಶೆಂಡ್ ಡ್ಯೂಟೀಸ್' 18.
- ↑ ಲ್ಯಾಬರೀ,ಟೀ ಪಾರ್ಟಿ' , 6.
- ↑ ಲ್ಯಾಬರೀ,ಟೀ ಪಾರ್ಟಿ' , 59.
- ↑ ಲ್ಯಾಬರೀ,ಟೀ ಪಾರ್ಟಿ' , 6–7.
- ↑ ಲ್ಯಾಬರೀ,ಟೀ ಪಾರ್ಟಿ' , 13; ಥಾಮಸ್ ,ಟೌನ್ಶೆಂಡ್ ಡ್ಯೂಟೀಸ್' 26–27. ಇಂತಹ ಮರಳಿ ನೀಡುವಿಕೆ ಅಥವಾ ರಿಯಾಯತಿಯನ್ನು ಒಂದು "ದೋಷ"ಎನ್ನಲಾಗುತ್ತದೆ.
- ↑ ಲ್ಯಾಬರೀ,ಟೀ ಪಾರ್ಟಿ' , 21.
- ↑ ಲ್ಯಾಬರೀ,ಟೀ ಪಾರ್ಟಿ' , 27–30.
- ↑ ಲ್ಯಾಬರೀ,ಟೀ ಪಾರ್ಟಿ' , 32–34.
- ↑ ನಾಲೆಂಬರ್ಗ್ ,ಗ್ರೊತ್' , 71; ಲ್ಯಾಬರೀ,ಟೀ ಪಾರ್ಟಿ' , 46.
- ↑ ಲ್ಯಾಬರೀ,ಟೀ ಪಾರ್ಟಿ' , 46–49.
- ↑ ಲ್ಯಾಬರೀ,ಟೀ ಪಾರ್ಟಿ' , 50–51.
- ↑ ಲ್ಯಾಬರೀ,ಟೀ ಪಾರ್ಟಿ' , 52.
- ↑ ದಿ 1772 ಟ್ಯಾಕ್ಸ್ ಆಕ್ಟ್ 12 Geo. III c. 60 sec. 1; ನಾಲೆಂಬರ್ಗ್ ,ಗ್ರೊತ್' , 351n12.
- ↑ ಥಾಮಸ್ ,ಟೌನ್ಶೆಂಡ್ ಡ್ಯೂಟೀಸ್' 248–49; ಲ್ಯಾಬರೀ,ಟೀ ಪಾರ್ಟಿ' , 334.
- ↑ ಲ್ಯಾಬರೀ,ಟೀ ಪಾರ್ಟಿ' , 58, 60–62.
- ↑ ನಾಲೆಂಬರ್ಗ್ ,ಗ್ರೊತ್' , 90–91.
- ↑ ಥಾಮಸ್ ,ಟೌನ್ಶೆಂಡ್ ಡ್ಯೂಟೀಸ್' 252–54.
- ↑ ನಾಲೆಂಬರ್ಗ್ ,ಗ್ರೊತ್' , 91.
- ↑ ಥಾಮಸ್ ,ಟೌನ್ಶೆಂಡ್ ಡ್ಯೂಟೀಸ್' 250; ಲ್ಯಾಬರೀ,ಟೀ ಪಾರ್ಟಿ' , 69.
- ↑ ಲ್ಯಾಬರೀ,ಟೀ ಪಾರ್ಟಿ' , 70, 75.
- ↑ ನಾಲೆಂಬರ್ಗ್ ,ಗ್ರೊತ್' , 93.
- ↑ ಲ್ಯಾಬರೀ,ಟೀ ಪಾರ್ಟಿ' , 67, 70.
- ↑ ಲ್ಯಾಬರೀ,ಟೀ ಪಾರ್ಟಿ' , 75–76.
- ↑ ಲ್ಯಾಬರೀ,ಟೀ ಪಾರ್ಟಿ' , 71; ಥಾಮಸ್ ,ಟೌನ್ಶೆಂಡ್ ಡ್ಯೂಟೀಸ್' 252.
- ↑ ಥಾಮಸ್ ,ಟೌನ್ಶೆಂಡ್ ಡ್ಯೂಟೀಸ್' 252.
- ↑ ಲ್ಯಾಬರೀ,ಟೀ ಪಾರ್ಟಿ' , 72–73.
- ↑ ಲ್ಯಾಬರೀ,ಟೀ ಪಾರ್ಟಿ' , 51.
- ↑ ಥಾಮಸ್ ,ಟೌನ್ಶೆಂಡ್ ಡ್ಯೂಟೀಸ್' 255; ಲ್ಯಾಬರೀ,ಟೀ ಪಾರ್ಟಿ' , 76–77.
- ↑ ಲ್ಯಾಬರೀ,ಟೀ ಪಾರ್ಟಿ' , 76–77.
- ↑ ಲ್ಯಾಬರೀ,ಟೀ ಪಾರ್ಟಿ' , 78–79.
- ↑ ಲ್ಯಾಬರೀ,ಟೀ ಪಾರ್ಟಿ' , 77, 335.
- ↑ ಲ್ಯಾಬರೀ,ಟೀ ಪಾರ್ಟಿ' , 89–90.
- ↑ ನಾಲೆಂಬರ್ಗ್ ,ಗ್ರೊತ್' , 96.
- ↑ ಥಾಮಸ್ ,ಟೌನ್ಶೆಂಡ್ ಡ್ಯೂಟೀಸ್' 246.
- ↑ ಲ್ಯಾಬರೀ,ಟೀ ಪಾರ್ಟಿ' , 106.
- ↑ ಥಾಮಸ್ ,ಟೌನ್ಶೆಂಡ್ ಡ್ಯೂಟೀಸ್' 245.
- ↑ ಲ್ಯಾಬರೀ,ಟೀ ಪಾರ್ಟಿ' , 102; ನೋಡಿ ಜಾನ್ ಡಬ್ಲು. ಟೇಲರ್, ಸ್ಮಗಲರ್ಸ್ & ಪಾಟ್ರಿಯಟ್ಸ್: ಬಾಸ್ಟನ್ ಮರ್ಚಂಟ್ಸ್ ಅಂಡ್ ದಿ ಅಡ್ವೆಂಟ್ ಆಫ್ ದಿ ಅರಿಕನ್ ರೆವಲುಶನ್ (ಬಾಸ್ಟನ್, 1986).
- ↑ ಥಾಮಸ್ ,ಟೌನ್ಶೆಂಡ್ ಡ್ಯೂಟೀಸ್' 256.
- ↑ ನಾಲೆಂಬರ್ಗ್ ,ಗ್ರೊತ್' , 95–96.
- ↑ ನಾಲೆಂಬರ್ಗ್ ,ಗ್ರೊತ್' , 101.
- ↑ ಲ್ಯಾಬರೀ,ಟೀ ಪಾರ್ಟಿ' , 100. ನೋಡಿ ಅಲನ್ ಬ್ರಾಡ್ಸ್ಕಿ, ಬೆಂಜಾಮಿನ್ ರಶ್ (Macmillan, 2004), 109.
- ↑ ಲ್ಯಾಬರೀ,ಟೀ ಪಾರ್ಟಿ' , 97.
- ↑ ಲ್ಯಾಬರೀ,ಟೀ ಪಾರ್ಟಿ' , 96; ನಾಲೆಂಬರ್ಗ್ ,ಗ್ರೊತ್' , 101–02.
- ↑ ಲ್ಯಾಬರೀ,ಟೀ ಪಾರ್ಟಿ' , 96–100.
- ↑ ಲ್ಯಾಬರೀ,ಟೀ ಪಾರ್ಟಿ' , 104–05.
- ↑ ಇದು ಅಧಿಕೃತ ಪಟ್ಟಣದ ಸಭೆಯಲ್ಲ,ಆದರೆ "ಗ್ರೇಟರ್ ಬಾಸ್ಟನ್ ಜನರ ಸಂಘಟನೆಯ ಒಂದು ಸಭೆ" ಅಲೆಕ್ಶಾಂಡರ್ ,ರೆವಲುಶನರಿ ಪಾಲಿಟಿಸಿಯನ್' 123.
- ↑ ಅಲೆಕ್ಶಾಂಡರ್ ,ರೆವಲುಶನರಿ ಪಾಲಿಟಿಸಿಯನ್' 124.
- ↑ ಅಲೆಕ್ಶಾಂಡರ್ ,ರೆವಲುಶನರಿ ಪಾಲಿಟಿಸಿಯನ್' 123.
- ↑ ದಿ ಸ್ಟೊರಿ ಆಫ್ ಬಾಸ್ಟನ್ ಟೀ ಪಾರ್ಟಿ ಶಿಪ್ಸ್The ಬೈ ದಿ ಬಾಸ್ಟನ್ ಟೀ ಪಾರ್ಟಿ ಹಿಸ್ಟಾರಿಕಲ್ ಸೊಸೈಟಿ
- ↑ ಅಲೆಕ್ಶಾಂಡರ್ ,ರೆವಲುಶನರಿ ಪಾಲಿಟಿಸಿಯನ್' 125.
- ↑ ರಾಫೆಲ್, ಫೌಂಡಿಂಗ್ ಮಿತ್ಸ್ , 53.
- ↑ ಮೇಯರ್, ಒಲ್ಡ್ ರೆವಲುಶನರೀಸ್ , 27–28n32; ರಾಫೆಲ್, ಫೌಂಡಿಂಗ್ ಮಿತ್ಸ್ , 53. ಮೊದಲ ಬಾರಿಗೆ ಆಡಮ್ಸ್ ಟೀ ಪಾರ್ಟಿಗಾಗಿ ಸೂಚನೆಯನ್ನು ಕೊಟ್ಟದ್ದು ವ್ಯತಿರಿಕ್ತಕ್ಕೆ ತಿರುಗಿದ ಕಥೆ ನೋಡಿ ಎಲ್ .ಎಫ್ ಎಸ್ .ಅಪ್ಟಾನ್ ed., "ಪ್ರೊಸಿಡಿಂಗ್ ಆಫ್ ಯೆ ಬಾಡಿ ರೆಸ್ಪೆಕ್ಟಿಂಗ್ ದಿ ಟೀ", ವಿಲ್ಯಮ್ ಅಂಡ್ ಮೇರಿ ಕ್ವಾರ್ಟರ್ಲಿ , ಥರ್ಡ್ ಸಿರೀಸ್ , 22 (1965), 297–98; ಫ್ರಾನ್ಸಿಸ್ ಎಸ್ .ಡ್ರೇಕ್ , ಟೀ ಲೀವ್ಸ್: ಬೀಯಿಂಗ್ ಎ ಕಲೆಕ್ಷನ್ ಆಫ್ ಲೆಟರ್ಸ್ ಅಂಡ್ ಡಾಕುಮೆಂಟ್ಸ್ , (ಬಾಸ್ಟನ್, 1884), LXX; ಬಾಸ್ಟನ್ ಇವಿನಿಂಗ್ -ಪೊಸ್ಟ್ , ಡಿಸೆಂಬರ್ 20, 1773; ಬಾಸ್ಟನ್ ಗೆಜೆಟ್ , ಡಿಸೆಂಬರ್ 20, 1773; ಮಾಸೆಚೆಸಿಟ್ಸ್ ಗೆಜೆಟ್ ಅಂಡ್ ಬಾಸ್ಟನ್ ವೀಕ್ಲಿ ನಿವ್ಸ್ ಲೆಟರ್ , ಡಿಸೆಂಬರ್ 23, 1773.
- ↑ ಅಲೆಕ್ಶಾಂಡರ್ ,ರೆವಲುಶನರಿ ಪಾಲಿಟಿಸಿಯನ್' 125–26; ಲ್ಯಾಬರೀ,ಟೀ ಪಾರ್ಟಿ' , 141–44.
- ↑ Robertson, John. "Where Was the Actual Boston Tea Party Site?". Archived from the original on 2010-12-13. Retrieved 2009-06-20.
- ↑ ಅಲೆಕ್ಶಾಂಡರ್ ,ರೆವಲುಶನರಿ ಪಾಲಿಟಿಸಿಯನ್' 126.
- ↑ ಅಲೆಕ್ಶಾಂಡರ್ ,ರೆವಲುಶನರಿ ಪಾಲಿಟಿಸಿಯನ್' 129.
- ↑ ಕಾಬೆಟ್, ಪಾರ್ಲಿಮೆಂತರಿ ಹಿಸ್ಟರಿ ಆಫ್ ಇಂಗ್ಲೆಂಡ್ , XVII, pg. 1280-1281
- ↑ ಕೆಚುಮ್, ಡಿವೈಡೆದ್ ಲಾಯಲ್ಟೀಸ್ , 262.
- ↑ ಯಂಗ್ ,ಶೂಮೇಕರ್' , xv.
- ↑ ಯಂಗ್ ,ಶೂಮೇಕರ್' .
- ↑ ಎರಿಕ್ ಎಚ್ ಎರಿಕಸನ್ , ಗಾಂಧೀಸ್'s ಟ್ರುತ್ Truth: ಆನ್ ದಿ ಒರಿಜಿನ್ಸ್ ಆಫ್ ಮಿಲಿಟಂಟ್ ನಾನ್ ವೈಲನ್ಸ್ (ನ್ಯುಯರ್ಕ್ : ನಾರ್ಟನ್, 1969), 204.
- ↑ Erikson, Gandhi's Truth , 448.
- ↑ ಯಂಗ್ ,ಶೂಮೇಕರ್' , 197.
- ↑ ಯಂಗ್ ,ಶೂಮೇಕರ್' , 198.
- ↑ "Ron Paul's "tea party" breaks fund-raising record". Archived from the original on 2010-03-28. Retrieved 2010-07-29.
- ↑ Taxpayers Strike Back With 'Tea Parties'. ಬೈ ಬ್ರೆಟ್ ಬಿಯರ್. ಫಾಕ್ಸ್ ನ್ಯೂಸ್ಜ್. ಪ್ರಕಾಶನ ಮಾರ್ಚ್ 16, 2009.
- ↑ ಏಪ್ರಿಲ್ ನಲ್ಲಿ ಆಗಸ್ತಾ ತನ್ನದೇ ಸ್ವಂತ ಟೀ ಪಾರ್ಟಿ ಆಯೋಜಿಸಿತ್ತು. Archived 2009-03-24 ವೇಬ್ಯಾಕ್ ಮೆಷಿನ್ ನಲ್ಲಿ.. ಬೈ ರಿಚ್ ರೊಜರ್ಸ್ . NBC ನಿವ್ಸ್: ಆಗಸ್ಟಾ. ಪ್ರಕಾಶನ ಮಾರ್ಚ್ 21, 2009.
- ↑ ""ಪ್ರೊಟೆಸ್ಟರ್ಸ್ ಥ್ರೊ'ಟೀ ಪಾರ್ಟಿ' ಆಟ್ ಬಾಸ್ಟನ್ ಕಾಮನ್, ದಿ ಸಫೊಲ್ಕ್ ಜರ್ನಲ್ , April 22, 2009". Archived from the original on ಅಕ್ಟೋಬರ್ 5, 2009. Retrieved ಜುಲೈ 29, 2010.
- ನಿಯಮಿತ ಕಾನುವ ಕಾರ್ಯಗಳು
- ಅಲೆಕ್ಶಾಂಡರ್, ಜಾನ್ ಕೆ..ಸ್ಯಾಮ್ಯುವಲ್ ಆಡ್ಮ್ಸಸ್: ಅಮೆರಿಕಾಸ್ ರೆವಲುಶನರಿ ಪಾಲಿಟಿಸಿಯನ್ . ಲಾನ್ಹಾಮ್, ಮೇರೊಲ್ಯಾಂಡ್ : ರೊಮ್ಯಾನ್& ಲಿಟಲ್ ಫೀಲ್ಡ್ , 2002. ISBN 0-06-095339-X
- ಕೆಚುಮ್, ರಿಚರ್ಡ್. ಡಿವೈಡೆಡ್ ಲಾಯಲ್ಟೀಸ್: ಹೌ ದಿ ಅಮೆರಿಕನ್ ರೆವಲುಶನ್ ಕೇಮ್ ಟು ನ್ಯುಯಾರ್ಕ್ . 2002. ISBN 0-7910-6772-6
- ನ್ಲೆಂಬರ್ಗ್, ಬೆನಾರ್ಡ್ . ಗ್ರೊತ್ ಆಫ್ ದಿ ಅಮೆರಿಕನ್ ರೆವಲುಶನ್, 1766–1775. ನ್ಯುಯಾರ್ಕ್ ಫ್ರೀ ಪ್ರೆಸ್ : 1975. ISBN 0-521-22515-9.
- ಲಾಬೆರೀ,ಬೆಂಜಾಮಿನ್ ವುಡ್ಸ್. ದಿ ಬಾಸ್ಟನ್ ಟೀ ಪಾರ್ಟಿ . (ಮೊದಲಿಗೆ 1833ಯಲ್ಲಿ ಪ್ರಕಟಗೊಂಡಿತು) ಬಾಸ್ಟನ್ : ನಾರ್ತ್ ಈಸ್ಟರ್ನ್ ಯುನ್ವರ್ಸಿಟಿ ಪ್ರೆಸ್ , 1979. ISBN 0-521-22515-9.
- ಮೇಯರ್, ಪೌಲೈನ್. ದಿ ಒಲ್ಡ್ ರೆವಲುಶನರೀಸ್ : ಪಾಲಿಟಿಕಲ್ ಲೈವ್ಸ್ ಇನ್ ದಿ ಏಜ್ ಆಫ್ ಆಡ್ಮ್ಸ್ . ನ್ಯುಯಾರ್ಕ್ : Knopf, 1980. ISBN 0-521-22515-9.
- ರಾಫೆಲ್, ರೆ. ಫೌಂಡಿಂಗ್ ಮಿತ್ಸ್ : ಸ್ಟೋರೀಸ್ ದ್ಯಾಟ್ ಹೈಡ್ ಅವರ್ ಪ್ಯಾಟ್ರೊಟಿಕ್ ಪಾಸ್ಟ್. ನ್ಯುಯಾರ್ಕ್: ದಿ ನಿವ್ ಪ್ರೆಸ್ , 2004. ISBN 974-8496-78-3.
- ಥಾಮಸ್ ,ಪೀಟರ್ ಡಿ.ಜಿ . ದಿ ಟೌನ್ಶೆಂಡ್ ಡ್ಯೂಟೀಸ್ ಕ್ರೈಸಿಸ್: ದಿ ಸೆಕೆಂಡ್ ಫೇಸ್ ಆಫ್ ದಿ ಅಮೆರಿಕನ್ ರೆವಲುಶನ್, 1767–1773 . ಆಕ್ಸ್ಫರ್ಡ್: ಆಕ್ಸ್ಫರ್ಡ್ ಯುನ್ವರ್ಸಿಟಿ ಪ್ರೆಸ್ , 1987. ISBN 0-521-22515-9.
- ಥಾಮಸ್ , ಪೀಟರ್ ಡಿ. ಜಿ. ಟೀ ಪಾರ್ಟಿ ಟು ಇಂಡೆಪೆಂಡನ್ಸ್ : ದಿ ಥರ್ಡ್ ಫೇಸ್ ಆಫ್ ದಿ ಅಮೆರಿಕನ್ ರೆವಲುಶನ್ , 1773–1776 . ಆಕ್ಸ್ಫರ್ಡ್: ಕ್ಲಾರೆಂಡನ್ ಪ್ರೆಸ್, 1991. ISBN 0-521-22515-9.
- ಯಂಗ್,ಅಲ್ಫ್ರೆಡ್ ಎಫ್. ದಿ ಶೂಮೇಕರ್ ಅಂದ್ ದಿ ಟೀ ಪಾರ್ಟಿ: ಮೆಮರಿ ಅಂಡ್ ದಿ ಅಮೆರಿಕನ್ ರೆವಲುಶನ್. ಬಸ್ಟನ್: ಬಿಕಾನ್ ಪ್ರೆಸ್ , 1999. ISBN 0-8070-5405-4; ISBN 978-0-8070-5405-5.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with hatnote templates targeting a nonexistent page
- Commons link is on Wikidata
- Coordinates on Wikidata
- ಬಾಸ್ಟನ್ ಹಾರ್ಬರ್
- 1773 ರ ಸುಮಾರಿನಲ್ಲಿ ಹದಿಮೂರು ಕಾಲೊನಿಗಳಲ್ಲಿ
- 1773 ಹಿಂಸಾಕೃತ್ಯಗಳು
- ಅಮೆರಿಕನ್ ಕ್ರಾಂತಿಯಲ್ಲಿನ ಮಾಸೆಚುಸೆಟ್ಸ್
- ಯುನೈಟೆಡ್ ಸ್ತೇಟ್ಸ್ ನಲ್ಲಿರುವ ರಾಜಕೀಯ ನಿಯಂತ್ರಣಗಳು
- ಹಿಸ್ಟರಿ ಆಫ್ ಥರ್ಟೀನ್ ಕಾಲೊನೀಸ್
- ಯುನೈಟೆಡ್ ಸ್ಟೇಟ್ಸ್ ನಲ್ಲಿನ ಬಂಡುಕೋರರು
- ತೆರಿಗೆ ತಡೆ
- ಹಿಸ್ಟರಿ ಆಫ್ ಬಾಸ್ಟನ್ ,ಮಾಸೆಚೆಸೆಟ್ಸ್
- Tea
- ಅಮೇರಿಕ ಸಂಯುಕ್ತ ಸಂಸ್ಥಾನದ ಇತಿಹಾಸ
- Pages using ISBN magic links