ಬಾಸ್ಕ್
ಯುಸ್ಕಲ್ಡುನಾಕ್ | |
---|---|
Total population | |
c. 3 million | |
Regions with significant populations | |
ಸ್ಪೈನ್ | ೨,೪೧೦,೦೦೦[೧],[೨] |
ಫ್ರಾನ್ಸ್ | ೨೩೯,೦೦೦[೧] |
ಯುನೈಟೆಡ್ ಸ್ಟೇಟ್ಸ್ | ೫೭,೭೯೩[೩] |
ಕೆನಡ | ೬,೯೬೫[೪] |
Languages | |
ಸ್ಪೇನಿಶ್, ಫ್ರೆಂಚ್ | |
Religion | |
ಕ್ರಿಶ್ಚಿಯನಿಟಿ (ಹೆಚ್ಚಾಗಿ ಕ್ಯಾಥೋಲಿಸಮ್),[೫] |
ಬಾಸ್ಕ್ - ಪಿರನೀಸ್ ಪರ್ವತದ ಇಳಿಜಾರು ಪ್ರದೇಶಗಳಲ್ಲಿ ವಾಸಿಸುವ ಜನರ ಹೆಸರು ಮತ್ತು ಭಾಷೆ. ಸ್ಪೇನ್ ಪ್ರಾಂತ್ಯದ ಬಿಸ್ಕೆ ಕೊಲ್ಲಿ ಪ್ರದೇಶದ ಜನರ ಪೈಕಿ ಸುಮಾರು ೨೩,೪೦,೦೦೦ ಮಂದಿಯೂ ಫ್ರಾನ್ಸಿನ ಪಿರನೀಸ್ ಫ್ರೆಂಚ್ ಪ್ರಾಂತ್ಯಗಳಲ್ಲಿಯ ಜನರ ಪೈಕಿ ಸುಮಾರು 5,00,000 ಮಂದಿಯೂ ಈ ಭಾಷೆಗಳನ್ನು ಮಾತನಾಡುತ್ತಾರೆ. ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಮೂಲ ರೂಪದಲ್ಲೇ ಉಳಿಸಿಕೊಂಡು ಈ ಜನ ಕೆಲಮಟ್ಟಿಗಾದರೂ ತಮ್ಮ ತಮ್ಮ ಭೌತಿಕ ಲಕ್ಷಣಗಳನ್ನು ಇನ್ನೂ ಉಳಿಸಿಕೊಂಡಿದ್ದಾರೆ.
ಭಾಷಾ ಹಿನ್ನೆಲೆ
[ಬದಲಾಯಿಸಿ]ಬಾಸ್ಕ್ ಭಾಷೆ ಅವರ್ಗೀಕೃತ ಭಾಷಾಪರಿವಾರಕ್ಕೆ ಸೇರಿದೆ. ಇದು ಇಬೇರಿಯನ್ ಭಾಷೆಯಿಂದ ವಿಕಾಸಗೊಂಡು ಅಕ್ವಂಟೇನಿಯನ್ ಭಾಷೆಯಿಂದ ಉಗಮಗೊಂಡಿರಬಹುದೆಂದು ಭಾಷಾವಿಜ್ಞಾನಿಗಳು ಊಹಿಸಿದ್ದಾರೆ. ಈ ಭಾಷೆಯನ್ನು ಇಬೆರೋಬಾಸ್ಕ್, ಯುಸ್ಕಾರ, ಎಸ್ಕುರ ಎಂತಲೂ ಕರೆಯುವರು. ಇದು ಪ್ರಾಚೀನ ಭಾಷೆಯಾಗಿದ್ದು ಅನೇಕ ಉಪಭಾಷೆಗಳನ್ನು ಹೊಂದಿದೆ. ಅವುಗಳ ಪೈಕಿ ಗುಇಪುಜ್, ಕೋಯಸ್, ವನರೀಸ್ ಲಬರ್ಡಿನ್ ಮತ್ತು ನೋವುಲಿನ್ ಮುಖ್ಯವಾದುವು. ನವರೀಸ್ ಉಪಭಾಷೆಯಲ್ಲಿ, ಬಾಸನ್ ಮತ್ತು ಹವುತ್ ಎಂಬ ಎರಡು ಪ್ರಭೇದಗಳಿವೆ. ಇವುಗಳಲ್ಲಿ ಇಂಡೊಯೂರೊಪಿಯನ್ ಭಾಷೆಗಳ ಪ್ರಭಾವ ಕಾಣಬಹುದು.
ಸ್ಪೇನ್ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್‌ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.
ವ್ಯಾಕರಣಾಂಶ
[ಬದಲಾಯಿಸಿ]ಅಕ್ಷರಗಳು
[ಬದಲಾಯಿಸಿ]ಈ ಭಾಷೆಯ ಸ್ವರ ಹಾಗೂ ವ್ಯಂಜನ ಧ್ವನಿಗಳು ಸರಳವಾಗಿ ಕಂಡುಬಂದರೂ ಅವುಗಳಿಂದ ಸಿದ್ಧಗೊಂಡ ಪದಗಳನ್ನು ಉಚ್ಚರಿಸುವುದು ಕಷ್ಟ. ಕ್ಲಿಷ್ಟಪದಗಳು ಈ ಭಾಷೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹ್ರಸ್ವ ಮತ್ತು ದೀರ್ಘ ಸ್ವರಗಳಲ್ಲಿ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ. ಈ ಭಾಷೆ ಅಶ್ಲಿಷ್ಟ ಅಂತ್ಯಯೋಗಾತ್ಮಕ ಭಾಷೆ. ಉಪಪದಗಳನ್ನು ಪರಸರ್ಗಗಳಂತೆ ಅಂತ್ಯದಲ್ಲಿ ಉಪಯೋಗಿಸಲಾಗುತ್ತದೆ.
ನಾಮರೂಪಗಳು
[ಬದಲಾಯಿಸಿ]ಸರ್ವನಾಮಗಳು ಬಹಳ ಸರಳವಾಗಿವೆ. ಇವು ಸೆಮಿಟಿಕ್ ಮತ್ತು ಹೆಮೆಟಿಕ್ ಭಾಷಾಪರಿವಾರಕ್ಕೆ ಸೇರಿದ ಭಾಷೆಗಳನ್ನು ಹೆಚ್ಚು ಹೋಲುತ್ತವೆ. ಕ್ರಿಯಾರೂಪಗಳು ತುಂಬ ಜಟಿಲವಾಗಿದೆ. ಅಲ್ಲದೆ ಅವುಗಳ ಪ್ರ್ರಯೋಗದಲ್ಲಿ ಕೂಡ ಕ್ಲಿಷ್ಟತೆ ಕಾಣಿಸಿಕೊಳ್ಳುತ್ತದೆ.
ಕ್ರಿಯಾರೂಪಗಳು
[ಬದಲಾಯಿಸಿ]ಕ್ರಿಯಾರೂಪಗಳನ್ನು ಅವುಗಳ ಅಭ್ಯಾಸಬಲದಿಂದ ಮಾತ್ರ ಪತ್ತೆ ಹಚ್ಚಿ ವಿವರಿಸಿಕೊಳ್ಳಲು ಸಾಧ್ಯ. ಸರ್ವನಾಮ ಹಾಗೂ ಕ್ರಿಯಾರೂಪಗಳು ಪರಸ್ಪರ ಐಕ್ಯವಾಗಿ ಹೋಗಬಹುದಾದ ಸಾಧ್ಯತೆ ಈ ಭಾಷೆಯಲ್ಲಿದೆ. ಕ್ರಿಯಾ ಹಾಗೂ ಸರ್ವನಾಮ ರೂಪಗಳು ಕೂಡಿಕೊಂಡಾಗ ಅವುಗಳ ಮೂಲರೂಪವನ್ನು ಸುಲಭವಾಗಿ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ವಾಕ್ಯರಚನೆ, ಶಬ್ದಗಳ ಉಚ್ಚಾರಣೆ ಸುಲಭವಲ್ಲ. ಕ್ರಿಯಾ ರೂಪಗಳು ಇಂಡೊಅರ್ಯನ್ ಭಾಷೆಗಳಂತೆಯೇ ಸಾಮಾನ್ಯವಾಗಿ ಅಂತ್ಯದಲ್ಲಿಯೇ ಬರುತ್ತವೆ. ಲಿಂಗ ವಚನ ವಿಚಾರ ಸ್ಪಷ್ಟವಿಲ್ಲ. ಲಿಂಗ ವಿಚಾರ ಸಾಮಾನ್ಯವಾಗಿ ಕ್ರಿಯಾರೂಪವನ್ನೇ ಅವಲಂಬಿಸಿ ನಿರ್ಧರಿತವಾಗುತ್ತದೆ. ಅಲ್ಲದೆ ಅವು ಕ್ರಿಯೆಯನ್ನು ಅನುಸರಿಸಿಯೇ ವ್ಯತ್ಯಾಸವಾಗುತ್ತವೆ. ಕ್ರಿಯಾಪದಗಳಲ್ಲಿ ಗೌರವಸೂಚಕ ಮತ್ತು ಅಗೌರವಸೂಚಕ ಎಂಬ ಎರಡು ರೂಪಗಳಿವೆ. ಕ್ರಿಯಾ ಧಾತುಗಳು ವಾಕ್ಯರಚನೆ ಅಥವಾ ಪದರಚನೆಗಳಲ್ಲಿ ಪರಿವರ್ತನೆಗೊಂಡಾಗ ಅವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
ಪದರಚನಾ ಕ್ರಮ
[ಬದಲಾಯಿಸಿ]ಈ ಭಾಷೆಯಲ್ಲಿ ಶಬ್ಧಗಳ ಸಂಖ್ಯೆ ಬಲು ಕಡಿಮೆ. ಸೂಕ್ಷ್ಮಭಾವಗಳನ್ನು ಅಭಿವ್ಯಕ್ತಗೊಳಿಸಲು ಶಬ್ದಗಳೇ ದೊರೆಯುವುದಿಲ್ಲ. ಇಂಥ ಶಬ್ದಗಳ ಅಭಾವದಿಂದಾಗಿಯೇ ವಾಕ್ಯಗಳಲ್ಲಿ ಪರಿಪೂರ್ಣತೆ ಹಾಗೂ ವ್ಯಾಕರಣದಲ್ಲಿ ಸ್ಪಷ್ಟತೆ ಕಂಡುಕೊಳ್ಳಲು ಕಷ್ಟವಾಗಿದೆ.
ಲಿಪಿ
[ಬದಲಾಯಿಸಿ]ಈ ಭಾಷೆಯನ್ನು ಬರೆಯಲು ಲ್ಯಾಟಿನ್ ಲಿಪಿಯನ್ನು ಬಳಸುತ್ತಾರೆ.
ಉಲ್ಲೇಖ
[ಬದಲಾಯಿಸಿ]- ↑ ೧.೦ ೧.೧ cite book|format=PDF|url=http://www.euskara.euskadi.net/contenidos/informacion/argitalpenak/eu_6092/adjuntos/V.%20Inkesta.pdf%7Ctitle=V. inkesta soziolinguistikoa 2011|trans-title=V. Sociolinguistic Survey|language=eu|publisher=Central Publications Service of the Basque Government|location=Vitoria-Gasteiz|year=2013|isbn=978-84-457-3303-5|accessdate=2 November 2016
- ↑ cite web |url=http://www.ine.es/FichasWeb/RegComunidades.do?fichas=4&buscador=&botonFichas=Ir+a+la+tabla+de+resultados |title=INE |author= |date=2013 |website= |publisher=INE |accessdate=5 November 2014
- ↑ cite web|format=XLS|url=https://www.census.gov/population/socdemo/ancestry/ancestry_q_by_DAC_2000.xls%7Ctitle=Census 2000: Table 1. First, Second, and Total Responses to the Ancestry Question by Detailed Ancestry Code: 2000|work=U.S. Census Bureau|date=22 January 2007|accessdate=2 November 2016}}
- ↑ cite web|url=http://www12.statcan.gc.ca/census-recensement/2016/dp-pd/prof/details/page.cfm?Lang=E&Geo1=PR&Code1=01&Geo2=PR&Code2=01&Data=Count&SearchText=Canada&SearchType=Begins&SearchPR=01&B1=Ethnic%20origin&TABID=1 |title=Census Profile, 2016 Census - Canada [Country] and Canada [Country] |publisher=2.statcan.gc.ca |date=2018-03-20 |accessdate=2018-04-16
- ↑ Estadísticas Enseñanzas no Universitarias – Resultados Detallados – Curso 2007–2008, Ministry of Education, educacion.es – Compiled by Fernando Bravo. FP: Formación Profesional (Vocational training).