ಬರ್ಫಿ! (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬರ್ಫಿ!
One man and two women sit on an old wooden bench smiling at the camera, with fields of Darjeeling in the background. The title, director, producer, and distributor information is printed across the top. Text at the bottom of the poster reveals the release date and the rest of the credits.
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನಅನುರಾಗ್ ಬಾಸು
ನಿರ್ಮಾಪಕರಾನಿ ಸ್ಕ್ರ್ಯೂವಾಲಾ
ಸಿದ್ಧಾರ್ಥ್ ರಾಯ್ ಕಪೂರ್
ಚಿತ್ರಕಥೆಅನುರಾಗ್ ಬಾಸು
ಕಥೆಅನುರಾಗ್ ಬಾಸು
ಸಂಭಾಷಣೆಈಲಿಯಾನಾ ಡೀಕ್ರೂಜ಼್
ಪಾತ್ರವರ್ಗ
  • ರಣ್‍ಬೀರ್ ಕಪೂರ್
  • ಪ್ರಿಯಾಂಕಾ ಚೋಪ್ರಾ
  • ಈಲಿಯಾನಾ ಡೀಕ್ರೂಜ಼್
  • ಆಶೀಶ್ ವಿದ್ಯಾರ್ಥಿ
  • ಜೀಶು ಸೇನ್‍ಗುಪ್ತಾ
  • ರೂಪಾ ಗಾಂಗೂಲಿ
ಸಂಗೀತಪ್ರೀತಮ್
ಛಾಯಾಗ್ರಹಣರವಿ ವರ್ಮನ್
ಸಂಕಲನಅಕೀವ್ ಅಲಿ
ಸ್ಟುಡಿಯೋ
  • ಇಶಾನಾ ಮೂವೀಸ್
  • ಯುಟಿವಿ ಮೋಷನ್ ಪಿಕ್ಚರ್ಸ್
ವಿತರಕರುಯುಟಿವಿ ಮೋಷನ್ ಪಿಕ್ಚರ್ಸ್
ಬಿಡುಗಡೆಯಾಗಿದ್ದು
  • 14 ಸೆಪ್ಟೆಂಬರ್ 2012 (2012-09-14)
ಅವಧಿ150 ನಿಮಿಷಗಳು[೧]
ದೇಶಭಾರತ
ಭಾಷೆಹಿಂದಿ
ಬಂಡವಾಳ30 ಕೋಟಿ[೨]
ಬಾಕ್ಸ್ ಆಫೀಸ್est. 175–188 ಕೋಟಿ[೩][೪]

ಬರ್ಫ಼ಿ! ೨೦೧೨ರ ಒಂದು ಹಿಂದಿ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರ. ಅನುರಾಗ್ ಬಾಸು ಈ ಚಿತ್ರದ ಸಹ ನಿರ್ಮಾಪಕರು, ಬರಹಗಾರರು ಮತ್ತು ನಿರ್ದೇಶಕರಾಗಿದ್ದರು. ೧೯೭೦ರ ದಶಕವನ್ನು ಹಿನ್ನೆಲೆಯಾಗಿ ಹೊಂದಿದ ಈ ಚಿತ್ರವು ಮರ್ಫ಼ಿ "ಬರ್ಫ಼ಿ" ಜಾನ್ಸನ್‌ನ (ದಾರ್ಜಿಲಿಂಗ್‍ನ ಕಿವುಡ ಮೂಕ ಹುಡುಗ) ಕಥೆಯನ್ನು ಮತ್ತು ಇಬ್ಬರು ಮಹಿಳೆಯರಾದ ಶ್ರುತಿ ಮತ್ತು ಝಿಲ್ಮಿಲ್‍ರೊಂದಿಗೆ (ಸ್ವಲೀನತೆ ಇರುವ ಹುಡುಗಿ) ಅವನ ಸಂಬಂಧಗಳನ್ನು ನಿರೂಪಿಸುತ್ತದೆ. ಚಿತ್ರದಲ್ಲಿ ರಣ್‌ಬೀರ್ ಕಪೂರ್, ಪ್ರಿಯಾಂಕಾ ಚೋಪ್ರಾ ಮತ್ತು ಇಲಿಯಾನಾ ಡಿ ಕ್ರೂಸ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸೌರಭ್ ಶುಕ್ಲಾ, ಆಶೀಶ್ ವಿದ್ಯಾರ್ಥಿ, ಜಿಶ್ಶು ಸೇನ್‍ಗುಪ್ತಾ ಮತ್ತು ರೂಪಾ ಗಂಗೂಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಸುಮಾರು ₹30 ಕೋಟಿ ಬಂಡವಾಳದಲ್ಲಿ ತಯಾರಾದ ಬರ್ಫ಼ಿ! ವಿಶ್ವಾದ್ಯಂತ ೧೪ ಸೆಪ್ಟೆಂಬರ್ ೨೦೧೨ರಂದು ಬಿಡುಗಡೆಯಾಯಿತು. ಈ ಚಿತ್ರವು ಬಾಕ್ಸ್ ಆಫ಼ಿಸ್‍ನಲ್ಲಿ ಯಶಸ್ವಿಯಾಯಿತು ಮತ್ತು ವಿಶ್ವಾದ್ಯಂತ ₹1.75 ಶತಕೋಟಿಗಿಂತ ಹೆಚ್ಚು ಹಣಗಳಿಸಿತು.

ಬರ್ಫ಼ಿ! ಚಿತ್ರವನ್ನು ೮೫ನೇ ಅಕ್ಯಾಡೆಮಿ ಪ್ರಶಸ್ತಿಗೆ ಅತ್ಯುತ್ತಮ ವಿದೇಶೀ ಭಾಷೆಯ ಚಲನಚಿತ್ರದ ವರ್ಗಕ್ಕೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಮಾಡಲಾಯಿತು.[೫] ೫೮ನೇ ಫ಼ಿಲ್ಮ್‌ಫ಼ೇರ್ ಪ್ರಶಸ್ತಿ ಸಮಾರಂಭದಲ್ಲಿ, ಈ ಚಿತ್ರವು ಹದಿಮೂರು ನಾಮನಿರ್ದೇಶನಗಳನ್ನು ಪಡೆದು ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟ (ಕಪೂರ್), ಅತ್ಯುತ್ತಮ ಸಂಗೀತ ನಿರ್ದೇಶಕ (ಪ್ರೀತಮ್) ಪ್ರಶಸ್ತಿ ಸೇರಿದಂತೆ, ಏಳು ಪ್ರಶಸ್ತಿಗಳನ್ನು ಗೆದ್ದಿತು.[೬][೭] ೧೯ನೇ ಸ್ಕ್ರೀನ್ ಪ್ರಶಸ್ತಿ ಸಮಾರಂಭದಲ್ಲಿ, ಬರ್ಫ಼ಿ! ಇಪ್ಪತ್ಮೂರು ನಾಮನಿರ್ದೇಶನಗಳನ್ನು ಪಡೆದು ಏಳು ಪ್ರಶಸ್ತಿಗಳನ್ನು ಗೆದ್ದಿತು.[೮][೯][೧೦] ೧೪ನೇ ಜ಼ೀ ಸಿನೆ ಪ್ರಶಸ್ತಿ ಸಮಾರಂಭದಲ್ಲಿ, ಬರ್ಫ಼ಿ! ಒಂಬತ್ತು ನಾಮನಿರ್ದೇಶನಗಳನ್ನು ಪಡೆದು ಎಂಟು ಪ್ರಶಸ್ತಿಗಳನ್ನು ಗೆದ್ದಿತು.[೧೧][೧೨]

ಕಥಾವಸ್ತು[ಬದಲಾಯಿಸಿ]

ಮರ್ಫ಼ಿ "ಬರ್ಫ಼ಿ" ಜಾನ್ಸನ್ (ರಣ್‍ಬೀರ್ ಕಪೂರ್) ದಾರ್ಜೀಲಿಂಗ್‍ನಲ್ಲಿನ ಒಬ್ಬ ನೇಪಾಳಿ ದಂಪತಿಗೆ ಕಿವುಡ ಮತ್ತು ಮೂಕನಾಗಿ ಹುಟ್ಟಿದ ಒಬ್ಬ ಆಶಾವಾದಿ, ಬಹುಕೌಶಲಗಳ, ಆಕರ್ಷಕ ಯುವಕನಾಗಿರುತ್ತಾನೆ. ಅವನ ತಾಯಿ ಅವನು ಶಿಶುವಾಗಿದ್ದಾಗಲೇ ತೀರಿಕೊಂಡಿದ್ದು ಅವನ ತಂದೆ ಚಾಲಕನಾಗಿ ಕೆಲಸ ಮಾಡುತ್ತಲೇ ಅವನನ್ನು ಒಬ್ಬನೇ ಬೆಳೆಸಿರುತ್ತಾನೆ. ಬರ್ಫ಼ಿ ತೊಂದರೆಗಾರನಾಗಿ ಪರಿಚಿತನಾಗಿರುತ್ತಾನೆ – ಅವನು ಲಾಂದ್ರಕಂಬಗಳನ್ನು ಕತ್ತರಿಸುತ್ತಾನೆ, ಮುಗ್ಧರ ಮೇಲೆ ಗೇಲಿಮಾಡುವ ಕುಚೇಷ್ಟೆಗಳನ್ನು ಮಾಡುತ್ತಾನೆ, ಮತ್ತು ಒಬ್ಬ ಸ್ಥಳೀಯ ಪೋಲಿಸ್ ಅಧಿಕಾರಿಯಾದ ಸುಧಾಂಶು ದತ್ತಾ (ಸೌರಭ್ ಶುಕ್ಲಾ) ಇವನನ್ನು ಬೆನ್ನಟ್ಟುತ್ತಿರುತ್ತಾನೆ. ಬರ್ಫ಼ಿ ಆಗತಾನೇ ದಾರ್ಜೀಲಿಂಗ್‍ಗೆ ಆಗಮಿಸಿದ್ದ ಒಬ್ಬ ಕಣ್ಸೆಳೆವ ಸುಶಿಕ್ಷಿತ ಯುವತಿಯಾದ ಶ್ರುತಿ ಘೋಷ್‍ಳನ್ನು (ಈಲಿಯಾನಾ ಡಿಕ್ರೂಜ಼್) ಭೇಟಿಯಾಗುತ್ತಾನೆ; ರಂಜೀತ್ ಸೇನ್‍ಗುಪ್ತಾನೊಂದಿಗೆ (ಜೀಶೂ ಸೇನ್‍ಗುಪ್ತಾ) ಅವಳ ಮದುವೆ ನಿಶ್ಚಯವಾಗಿರುತ್ತದೆ ಮತ್ತು ಮೂರು ತಿಂಗಳಲ್ಲಿ ಮದುವೆಯಾಗುವುದಿರುತ್ತದೆ. ಬರ್ಫ಼ಿ ಶ್ರುತಿಯ ದಿವ್ಯ ಸೌಂದರ್ಯ ಮತ್ತು ಲಾವಣ್ಯದಿಂದ ತಕ್ಷಣ ಗ್ರಸ್ತನಾಗಿ, ಅಂತಿಮವಾಗಿ ಅವಳನ್ನು ಪ್ರೀತಿಸತೊಡಗುತ್ತಾನೆ. ಅವಳೂ ಬರ್ಫ಼ಿಯನ್ನು ಪ್ರೀತಿಸತೊಡಗುತ್ತಾಳೆ. ಆದರೆ ಅವಳ ತಾಯಿ ಅವನನ್ನು ಅನುಸರಿಸುವುದನ್ನು ತಡೆಯುತ್ತಾಳೆ, ಏಕೆಂದರೆ ಅವನು ತನ್ನ ಅಂಗವೈಕಲ್ಯ ಮತ್ತು ಹಣದ ಅಭಾವದ ಕಾರಣ ಅವಳನ್ನು ನೋಡಿಕೊಳ್ಳುವುದು ಸಾಧ್ಯವಿರುವುದಿಲ್ಲ. ಶ್ರುತಿ ತನ್ನ ಅಮ್ಮನ ಸಲಹೆಯನ್ನು ಒಪ್ಪಿ ಮದುವೆಯಾಗಿ, ಬರ್ಫ಼ಿಯೊಂದಿಗೆ ಎಲ್ಲ ಸಂಪರ್ಕ ಮುರಿದುಕೊಂಡು ಕೊಲ್ಕತ್ತಕ್ಕೆ ಸ್ಥಳಾಂತರವಾಗುತ್ತಾಳೆ.

ಈ ನಡುವೆ, ಬರ್ಫ಼ಿಯ ಅಪ್ಪ ಕಾಯಿಲೆ ಬೀಳುತ್ತಾನೆ ಮತ್ತು ಬರ್ಫ಼ಿ ಹೇಗಾದರೂ ಮಾಡಿ ಅವನ ಚಿಕಿತ್ಸೆಗೆ ಹಣವನ್ನು ಕೂಡಿಸಬೇಕಿರುತ್ತದೆ. ಒಂದು ಸ್ಥಳೀಯ ಬ್ಯಾಂಕ್‍ನ್ನು ದರೋಡೆ ಮಾಡುವ ವಿಫಲ ಪ್ರಯತ್ನದ ನಂತರ, ಅವನು ಹಣಕ್ಕಾಗಿ ಝಿಲ್ಮಿಲ್ ಚ್ಯಾಟರ್ಜಿಯನ್ನು (ಪ್ರಿಯಾಂಕಾ ಚೋಪ್ರಾ) (ಬರ್ಫ಼ಿಯ ಸ್ವಲೀನತೆ ಇರುವ ಬಾಲ್ಯದ ಗೆಳತಿ ಮತ್ತು ತನ್ನ ಅಜ್ಜನ ಆಸ್ತಿಯ ಶ್ರೀಮಂತ ವಾರಸುದಾರಿಣಿ) ಅಪಹರಿಸಲು ಪ್ರಯತ್ನಿಸುತ್ತಾನೆ. ಆಗಮಿಸಿದ ನಂತರ, ಅವಳು ಆಗಲೇ ಅಪಹರಣವಾಗಿದ್ದಾಳೆ ಎಂದು ಬರ್ಫ಼ಿ ಕಂಡುಕೊಳ್ಳುತ್ತಾನೆ. ಅವನು ಅವಳನ್ನು ಒಂದು ವ್ಯಾನ್‍ನಲ್ಲಿ ನೋಡಿ, ಸದ್ದಿಲ್ಲದೆ ಒಳಗೆ ಹೋಗಿ ಝಿಲ್ಮಿಲ್‌ಳನ್ನು ಸುಲಿಗೆ ಹಣದ ವಶದಿಂದ ದೂರಕ್ಕೆ ಕರೆದುಕೊಂಡು ಹೋಗುತ್ತಾನೆ. ಪೋಲೀಸರು ಹಿಂಬಾಲಿಸುತ್ತಿರುವಾಗಲೇ ಅವನು ಅವಳನ್ನು ಅಪಾರ್ಟ್‌ಮಂಟ್‍ನಲ್ಲಿ ಬಚ್ಚಿಡುತ್ತಾನೆ. ಬರ್ಫ಼ಿ ಸುಲಿಗೆ ಹಣವನ್ನು ಸಂಗ್ರಹಿಸುತ್ತಾನೆ ಆದರೆ ಅವನು ಸಂದಾಯ ಮಾಡುವಷ್ಟರಲ್ಲೇ ಅವನ ತಂದೆ ತೀರಿಹೋದನೆಂದು ಕಂಡುಕೊಳ್ಳುತ್ತಾನೆ. ಖಿನ್ನನಾದ ಬರ್ಫ಼ಿ ಝಿಲ್ಮಿಲ್‍ಳನ್ನು ಅವಳ ಆರೈಕೆಗಾರ್ತಿಯ ಹಳ್ಳಿಯಲ್ಲಿ ಬಿಡಲು ಪ್ರಯತ್ನಿಸುತ್ತಾನೆ. ಆದರೆ ಅವಳು ಅವನನ್ನು ಬಿಡಲು ನಿರಾಕರಿಸುತ್ತಾಳೆ ಮತ್ತು ಶೀಘ್ರದಲ್ಲೇ ಅವರು ಕೋಲ್ಕತಾಗೆ ಸ್ಥಳಾಂತರವಾಗುತ್ತಾರೆ. ಅಲ್ಲಿ ಬರ್ಫ಼ಿ ಝಿಲ್ಮಿಲ್‍ಳ ಹೊಣೆ ವಹಿಸಿಕೊಂಡು ಅವಳ ಆರೈಕೆ ಮಾಡುತ್ತಾನೆ.

ಆರು ತಿಂಗಳ ನಂತರ, ಬರ್ಫ಼ಿ ಮತ್ತು ಶ್ರುತಿ ಅಕಸ್ಮಾತ್ತಾಗಿ ಭೇಟಿಯಾಗುತ್ತಾರೆ. ಶ್ರುತಿ ತನ್ನ ಮದುವೆಯಿಂದ ಸಂತೋಷವಾಗಿರುವುದಿಲ್ಲ ಮತ್ತು ತಾನು ಹಾಗೂ ಬರ್ಫ಼ಿ ತಮ್ಮ ಗೆಳೆತನವನ್ನು ಪುನರೂರ್ಜಿತಗೊಳಿಸಲು ಬಯಸುತ್ತಾಳೆ. ಇದು ಪ್ರೀತಿಯಲ್ಲಿ ಬಿದ್ದಿರುವ ಝಿಲ್ಮಿಲ್‍ಗೆ ಬಹಳ ಯಾತನೆಯುಂಟುಮಾಡುತ್ತದೆ. ನಂತರ ಅವಳು ತಪ್ಪಿಸಿಕೊಳ್ಳುತ್ತಾಳೆ. ಶ್ರುತಿ ಝಿಲ್ಮಿಲ್‌ಳಿಗಾಗಿ ಕಾಣೆಯಾದ ವ್ಯಕ್ತಿಯ ದೂರನ್ನು ದಾಖಲಿಸುತ್ತಾಳೆ. ದಾರ್ಜಿಲಿಂಗ್ ಪೋಲಿಸ್ ಈ ದೂರಿನ ಬಗ್ಗೆ ತಿಳಿದುಕೊಂಡು, ಬರ್ಫ಼ಿಗಾಗಿ ತಮ್ಮ ಬೆನ್ನಟ್ಟುವಿಕೆಯನ್ನು ಪುನರಾರಂಭಿಸಿ ಅವನನ್ನು ಬಂಧಿಸುತ್ತಾರೆ. ಅವನನ್ನು ವಿಚಾರಣೆ ಮಾಡುತ್ತಿರುವಾಗ, ಝಿಲ್ಮಿಲ್‌ಳಿಗಾಗಿ ಮತ್ತೊಂದು ಸುಲಿಗೆ ಹಣದ ಬೇಡಿಕೆಯನ್ನು ಮಾಡಲಾಗುತ್ತದೆ. ವಿನಿಮಯದ ಪ್ರಕ್ರಿಯೆಯಲ್ಲಿ ಅವಳನ್ನು ಕೊಲ್ಲಲಾಯಿತು ಎಂದು ತೋರುತ್ತದೆ, ಆದರೆ ಅವಳ ಶವ ಎಂದೂ ಸಿಗುವುದಿಲ್ಲ. ಪ್ರಕ್ರಣವನ್ನು ಅಂತ್ಯಗೊಳಿಸಲು, ಪೋಲಿಸರು ಝಿಲ್ಮಿಲ್‌ಳ ಕೊಲೆಗಾಗಿ ಬರ್ಫ಼ಿಯ ಮೇಲೆ ಸುಳ್ಳು ಆಪಾದನೆ ಹೊರಿಸಲು ಪ್ರಯತ್ನಿಸುತ್ತಾರೆ. ಅವನ ಉಪದ್ರವಗಳಿಗಾಗಿ ವಿಚಾರಣೆ ಮಾಡಿದ ಪೋಲಿಸ್ ಅಧಿಕಾರಿ ಸುಧಾಂಶು ದತ್ತಾ ಬರ್ಫ಼ಿಯನ್ನು ಇಷ್ಟಪಡಲು ಆರಂಭಿಸಿ ಅವನನ್ನು ಕರೆದುಕೊಂಡು ಹೋಗುವಂತೆ ಶ್ರುತಿಯನ್ನು ಕೇಳಿಕೊಂಡು ಅವನಿಗೆ ಬದುಕುವ ಎರಡನೇ ಅವಕಾಶವನ್ನು ನೀಡುತ್ತಾನೆ. ಅವಳು ಒಪ್ಪುತ್ತಾಳೆ ಮತ್ತು ಈಗ ಝಿಲ್ಮಿಲ್ ಇಲ್ಲದಿರುವಾಗ ಅವಳು ಅಂತಿಮವಾಗಿ ಬರ್ಫ಼ಿಯೊಂದಿಗೆ ಇರಬಹುದೆಂದು ಎದುರುನೋಡುತ್ತಾಳೆ.

ಬರ್ಫ಼ಿ ಝಿಲ್ಮಿಲ್‌ಳ ಸಾವಿನಿಂದ ಬಹಳ ನೊಂದುಕೊಳ್ಳುತ್ತಾನೆ ಮತ್ತು ಅವಳಿಲ್ಲದೆ ನೆಮ್ಮದಿಯಾಗಿ ಬದುಕಲು ಆಗುವುದಿಲ್ಲ. ಅವನು ಝಿಲ್ಮಿಲ್‌ಳ ಬಾಲ್ಯ ಗೃಹದ ಸ್ಥಳವನ್ನು ಪತ್ತೆಹಚ್ಚಿ ಅವಳನ್ನು ಹುಡುಕುಲು ಶ್ರುತಿಯನ್ನು ಕರೆದುಕೊಂಡುಹೋಗುತ್ತಾನೆ. ಝಿಲ್ಮಿಲ್ ಇನ್ನೂ ಬದುಕಿದ್ದಾಳೆ ಮತ್ತು ಝಿಲ್ಮಿಲ್‌ಳ ನ್ಯಾಸನಿಧಿಯಿಂದ ಹಣವನ್ನು ಲಪಟಾಯಿಸಲು ಎರಡೂ ಅಪಹರಣಗಳನ್ನು ಅವಳ ತಂದೆ ಸೃಷ್ಟಿಸಿದನು ಎಂದು ಅವರಿಗೆ ಗೊತ್ತಾಗುತ್ತದೆ. ಎರಡನೇ ಪ್ರಯತ್ನದಲ್ಲಿ, ಎರಡನೇ ಬಾರಿ ಅವರು ಅವಳು ತನ್ನ ಮದ್ಯವ್ಯಸನಿ ತಾಯಿಯಿಂದ ದೂರವಿದ್ದು ತನ್ನ ವಿಶೇಷ ಆರೈಕೆ ಗೃಹಕ್ಕೆ ಮರಳುವಂತೆ ಮಾಡಲು ಅವಳ ಸಾವನ್ನು ಸೃಷ್ಟನೆ ಮಾಡಿದರು. ಬರ್ಫ಼ಿ ಮತ್ತು ಝಿಲ್ಮಿಲ್ ಸಂತೋಷದಿಂದ ಮತ್ತೆ ಸೇರಿ ಇಬ್ಬರೂ ವಿವಾಹವಾಗುತ್ತಾರೆ. ಬರ್ಫ಼ಿಯೊಂದಿಗೆ ಒಟ್ಟಿಗೆ ಇರುವ ಅವಕಾಶವನ್ನು ಕಳೆದುಕೊಂಡ ಶ್ರುತಿ ತನ್ನ ಉಳಿದ ದಿನಗಳನ್ನು ಸಮೃದ್ಧವಾಗಿ, ಆದರೆ ಒಂಟಿಯಾಗಿ ಕಳೆಯುತ್ತಾಳೆ.

ಹಲವಾರು ವರ್ಷಗಳ ನಂತರ, ಬರ್ಫ಼ಿ ಒಂದು ಆಸ್ಪತ್ರೆಯಲ್ಲಿ ಗಂಭೀರವಾಗಿ ಅಸ್ವಸ್ಥಗೊಂಡು ಸಾವಿಗೆ ಹತ್ತಿರವಾಗಿರುತ್ತಾನೆಂದು ತೋರಿಸಲಾಗುತ್ತದೆ. ಝಿಲ್ಮಿಲ್ ಬಂದು ಬರ್ಫ಼ಿಯೊಂದಿಗೆ ಅವನ ಆಸ್ಪತ್ರೆ ಹಾಸಿಗೆ ಮೇಲೆ ಮಲಗಿ, ಒಬ್ಬರನ್ನೊಬ್ಬರು ಬದುಕು ಮತ್ತು ಸಾವು ಎರಡರಲ್ಲೂ ಕೈಬಿಡಲು ಬಯಸದೇ ಇಬ್ಬರೂ ಒಟ್ಟಾಗಿ ಶಾಂತಿಯುತವಾಗಿ ಸಾಯುತ್ತಾರೆ ಎಂದು ಶ್ರುತಿ ನಿರೂಪಿಸುತ್ತಾಳೆ. ಚಿತ್ರವು ಬರ್ಫ಼ಿ ಮತ್ತು ಝಿಲ್ಮಿಲ್‌ಳ ಸಂತೋಷದ ದಿನಗಳನ್ನು ತೋರಿಸುತ್ತಾ ಮುಗಿಯುತ್ತದೆ ಮತ್ತು ಹೆಸರುಗಳ ಉಲ್ಲೇಖವಾಗುತ್ತದೆ.

ಪಾತ್ರವರ್ಗ[ಬದಲಾಯಿಸಿ]

  • ಮರ್ಫ಼ಿ "ಬರ್ಫ಼ಿ" ಜಾನ್ಸನ್ ಪಾತ್ರದಲ್ಲಿ ರಣ್‍ಬೀರ್ ಕಪೂರ್
  • ಝಿಲ್ಮಿಲ್ ಚ್ಯಾಟರ್ಜಿ ಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾ
  • ಶ್ರುತಿ ಘೋಷ್ ಪಾತ್ರದಲ್ಲಿ ಈಲಿಯಾನಾ ಡಿಕ್ರೂಜ಼್
  • ಹಿರಿಯ ಇನ್‍ಸ್ಪೆಕ್ಟರ್ ಸುಧಾಂಶು ದತ್ತಾ ಪಾತ್ರದಲ್ಲಿ ಸೌರಭ್ ಶುಕ್ಲಾ
  • ಜಂಗ್ ಬಹಾದುರ್ ಪಾತ್ರದಲ್ಲಿ ಆಕಾಶ್ ಖುರಾನಾ
  • ದುರ್ಜೋಯ್ ಚ್ಯಾಟರ್ಜಿ ಪಾತ್ರದಲ್ಲಿ ಆಶೀಶ್ ವಿದ್ಯಾರ್ಥಿ
  • ಶ್ರುತಿ ತಾಯಿಯ ಪಾತ್ರದಲ್ಲಿ ರೂಪಾ ಗಾಂಗೂಲಿ
  • ದಾಜು ಪಾತ್ರದಲ್ಲಿ ಹರಧನ್ ಬಂಡೋಪಾಧ್ಯಾಯ್
  • ಶ್ರುತಿ ತಂದೆ ಪಾತ್ರದಲ್ಲಿ ಉದಯ್ ಟಿಕೇಕರ್
  • ಝಿಲ್ಮಿಲ್ ಅಜ್ಜನ ಪಾತ್ರದಲ್ಲಿ ಅರುಣ್ ಬಾಲಿ
  • ಬರ್ಫ಼ಿಯ ಗೆಳೆಯನ ಪಾತ್ರದಲ್ಲಿ ಭೋಲಾರಾಜ್ ಸಪ್ಕೋಟಾ
  • ರಂಜೀತ್ ಸೇನ್‍ಗುಪ್ತಾ ಪಾತ್ರದಲ್ಲಿ ಜಿಶ್ಶು ಸೇನ್‍ಗುಪ್ತಾ
  • ಶ್ರುತಿ ಗೆಳತಿಯ ಪಾತ್ರದಲ್ಲಿ ಸುಮೋನಾ ಚಕ್ರವರ್ತಿ

ತಯಾರಿಕೆ[ಬದಲಾಯಿಸಿ]

ಬೆಳವಣಿಗೆ[ಬದಲಾಯಿಸಿ]

ತಮ್ಮ ಹಿಂದಿನ ನಿರ್ದೇಶನಾ ಯೋಜನೆಯ ತಯಾರಿಕೆ ವೇಳೆಯಲ್ಲಿ, ನಿರ್ದೇಶಕ ಅನುರಾಗ್ ಬಾಸು ಎರಡು ಪುಟಗಳ ಸಣ್ಣ ಕಥೆಯನ್ನು ಬರೆದರು, ಮತ್ತು ಇದನ್ನೇ ನಂತರ ಬರ್ಫ಼ಿ!ಯ ಚಿತ್ರಕಥೆಯಾಗಿ ಅಭಿವೃದ್ಧಿಪಡಿಸಲಾಯಿತು.[೧೩] ಈ ಚಿತ್ರಕಥೆಯು ಎರಡು ಕಾಲಾವಧಿಗಳ ನಡುವೆ ಪರ್ಯಾಯವಾಗುತ್ತಿತ್ತು, ಮತ್ತು ಈ ರೇಖೀಯವಲ್ಲದ ಕಥಾ ರಚನೆಯನ್ನೇ ಉಳಿಸಿಕೊಳ್ಳಲಾಯಿತು.

ಪಾತ್ರ ನಿರ್ಧಾರಣ[ಬದಲಾಯಿಸಿ]

  ರಣ್‍ಬೀರ್ ಕಪೂರ್ ನಿರ್ದೇಶಕ ಅನುರಾಗ್ ಬಾಸುರ ಮೊದಲ ಆಯ್ಕೆಯಾಗಿದ್ದರು. ಹೆದರಿಕೆಯ ನಡುವೆಯೂ ಅನುರಾಗ್ ಬಾಸು ಮುಖ್ಯ ಸ್ತ್ರೀಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾರನ್ನು ಆಯ್ಕೆಮಾಡಲಾಯಿತು. ಆದರೆ ಈ ಬೆಳವಣಿಗೆಯನ್ನು ಘೋಷಿಸಲಾಗಲಿಲ್ಲ ಏಕೆಂದರೆ ಬಾಸು ಮೊದಲು ಕಮ್ಮಟ ನಡೆಸಿ ಹೇಗೆ ನಡೆಯುತ್ತದೆಂಬುದನ್ನು ನೋಡಲು ಬಯಸಿದ್ದರು. ಕಮ್ಮಟದ ವೇಳೆ, ಚೋಪ್ರಾ ಆ ಪಾತ್ರಕ್ಕೆ ಸೂಕ್ತವೆಂದು ಬಾಸುರಿಗೆ ಮನವರಿಕೆಯಾಯಿತು.[೧೪] ಎರಡನೇ ಹೆಣ್ಣು ಪಾತ್ರವನ್ನು ವಹಿಸಲು ಬಾಸು ಹೊಸ ಮುಖವಾದ ಈಲಿಯಾನಾ ಡೀಕ್ರೂಜ಼್‍ರನ್ನು ಆಯ್ಕೆಮಾಡಿದರು.[೧೫] ಚಿತ್ರದಲ್ಲಿ ಈಲಿಯಾನಾ ನಿರೂಪಕಿ ಮತ್ತು ಕಪೂರ್‌ರ ಮೊದಲ ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆIn early December 2010, Ileana D'Cruz from south Indian films, was finalised for the second female lead, featuring as narrator and Kapoor's first love interest in the film.[೧೬]

ಪಾತ್ರಗಳು[ಬದಲಾಯಿಸಿ]

ತಮ್ಮ ಪಾತ್ರಕ್ಕಾಗಿ ಕಪೂರ್, ತೆರೆಯ ದಂತಕಥೆಗಳಾದ ರೊಬೆರ್ತೊ ಬೆನೀನಿ, ಚಾರ್ಲಿ ಚ್ಯಾಪ್ಲಿನ್ ಮತ್ತು ತಮ್ಮ ಅಜ್ಜ ರಾಜ್ ಕಪೂರ್‌ರಿಂದ ಸ್ಫೂರ್ತಿಪಡೆದರು. ಮುಖ್ಯ ನಟನ ಅಂಗವಿಕಲತೆಯ ಕಾರಣದಿಂದ, ಬಾಸು ಯಾವುದೇ ಸನ್ನೆ ಭಾಷೆಯನ್ನು ಬಳಸಲು ಬಯಸಲಿಲ್ಲ, ಆದರೆ ಕೆಲವು ವರ್ತನಾತ್ಮಕ ವಿನ್ಯಾಸಗಳನ್ನು ಬಳಸಿದರು.

ಝಿಲ್ಮಿಲ್ ಪಾತ್ರಕ್ಕೆ ಸಿದ್ಧವಾಗಲು ಚೋಪ್ರಾ ಹಲವಾರು ಮಾನಸಿಕ ಆಸ್ಪತ್ರೆಗಳಿಗೆ ಭೇಟಿನೀಡಿ ಸ್ವಲೀನತೆಯಿರುವ (ಆಟಿಜ಼ಮ್) ಜನರೊಂದಿಗೆ ಕಾಲ ಕಳೆದರು.

ಚಿತ್ರೀಕರಣ[ಬದಲಾಯಿಸಿ]

ಪ್ರಧಾನ ಛಾಯಾಗ್ರಹಣವು ಮಾರ್ಚ್ ೨೦೧೧ರಲ್ಲಿ ಆರಂಭವಾಯಿತು.[೧೭][೧೮] ಬರ್ಫ಼ಿ! ಯನ್ನು ಜೂನ್ ೨೦೧೧ ಮತ್ತು ಫ಼ೆಬ್ರುವರಿ ೨೦೧೨ರ ನಡುವೆ ಚಿತ್ರೀಕರಿಸಲಾಯಿತು, ಬಹುತೇಕವಾಗಿ ದಾರ್ಜೀಲಿಂಗ್‍ನಲ್ಲಿ.[೧೯] ಮುಂಬೈನಲ್ಲೂ ಚಿತ್ರೀಕರಣ ನಡೆಯಿತು.[೨೦] ಕೆಲವು ದೃಶ್ಯಗಳನ್ನು ಕೊಯಂಬತ್ತೂರಿನ ಹೊರವಲಯದಲ್ಲಿ ಚಿತ್ರೀಕರಿಸಲಾಯಿತು, ವಿಶೇಷವಾಗಿ ಪೊಲ್ಲಾಚಿ ಮತ್ತು ಊಟಿಯಲ್ಲಿ.[೨೧] ಕೆಲವು ದೃಶ್ಯಗಳನ್ನು ಕೋಲ್ಕತಾದಲ್ಲಿ ಚಿತ್ರೀಕರಿಸಲಾಯಿತು.[೨೨]

ಧ್ವನಿವಾಹಿನಿ[ಬದಲಾಯಿಸಿ]

ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಪ್ರೀತಮ ಚಕ್ರಬೊರ್ತಿ ಸಂಯೋಜಿಸಿದರು. ಹಾಡುಗಳಿಗೆ ಸಾಹಿತ್ಯವನ್ನು ಸ್ವಾನಂದ್ ಕಿರ್ಕಿರೆ, ಆಶೀಶ್ ಪಂಡಿತ್, ನೀಲೇಶ್ ಮಿಶ್ರಾ ಮತ್ತು ಸಯೀದ್ ಕಾದ್ರಿ ಬರೆದರು. ಧ್ವನಿವಾಹಿನಿಯನ್ನು ೯ ಆಗಸ್ಟ್ ೨೦೧೨ ರಂದು ಬಿಡುಗಡೆ ಮಾಡಲಾಯಿತು. ಧ್ವನಿವಾಹಿನಿಯು ಬ್ರಜ಼ಿಲ್‍ನ ಬೊಸ ನೋವಾದಿಂದ ಪ್ರಭಾವಿತವಾಗಿತ್ತು.[೨೩]

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯसंगीतकारಗಾಯಕ(ರು)ಸಮಯ
1."ಆಲಾ ಬರ್ಫ಼ಿ"ಸ್ವಾನಂದ್ ಕಿರ್ಕಿರೆಪ್ರೀತಮ್ಮೋಹಿತ್ ಚೌಹಾನ್5:19
2."ಮ್ಞೆ ಕ್ಯಾ ಕರ್‍ಞೂ"ಆಶೀಶ್ ಪಂಡಿತ್ಪ್ರೀತಮ್ನಿಖಿಲ್ ಪೌಲ್ ಜಾರ್ಜ್4:30
3."ಕ್ಯ್ಞೂ"ನೀಲೇಶ್ ಮಿಶ್ರಾಪ್ರೀತಮ್ಪಾಪೋನ್, ಸುನಿಧಿ ಚೌಹಾನ್4:26
4."ಫಿರ್ ಲೇ ಆಯಾ ದಿಲ್"ಸಯೀದ್ ಕಾದ್ರಿಪ್ರೀತಮ್ಅರಿಜೀತ್ ಸಿಂಗ್5:05
5."ಆಶಿಯ್ಞಾ"ಸ್ವಾನಂದ್ ಕಿರ್ಕಿರೆಪ್ರೀತಮ್ಶ್ರೇಯಾ ಘೋಶಾಲ್, ನಿಖಿಲ್ ಪೌಲ್ ಜಾರ್ಜ್3:56
6."ಸಾವಲಿ ಸೀ ರಾತ್"ಸ್ವಾನಂದ್ ಕಿರ್ಕಿರೆಪ್ರೀತಮ್ಅರಿಜೀತ್ ಸಿಂಗ್5:08
7."ಆಲಾ ಬರ್ಫ಼ಿ (ಪುನರಾವೃತ್ತಿ)"ಸ್ವಾನಂದ್ ಕಿರ್ಕಿರೆಪ್ರೀತಮ್ಸ್ವಾನಂದ್ ಕಿರ್ಕಿರೆ5:41
8."ಫಿರ್ ಲೇ ಆಯಾ ದಿಲ್ (ಪುನರಾವೃತ್ತಿ)"ಸಯೀದ್ ಕಾದ್ರಿಪ್ರೀತಮ್ರೇಖಾ ಭಾರದ್ವಾಜ್4:45
9."ಫಿರ್ ಲೇ ಆಯಾ ದಿಲ್ (ರಿಡಕ್ಸ್)"ಸಯೀದ್ ಕಾದ್ರಿಪ್ರೀತಮ್ಶಫ಼್ಕತ್ ಅಮಾನತ್ ಅಲಿ5:03
10."ಆಶಿಯ್ಞಾ (ಏಕವ್ಯಕ್ತಿ)"ಸ್ವಾನಂದ್ ಕಿರ್ಕಿರೆಪ್ರೀತಮ್ನಿಖಿಲ್ ಪೌಲ್ ಜಾರ್ಜ್4:08
11."ಫ಼ಟಾಫ಼ಟಿ"ಅಮಿತಾಭ್ ಭಟ್ಟಾಚಾರ್ಯಪ್ರೀತಮ್ಅರಿಜೀತ್ ಸಿಂಗ್, ನಕಾಶ್ ಅಜ಼ೀಜ಼್, ಪ್ರೀತಮ್ ಚಕ್ರಬೊರ್ತಿ & ರಣ್‍ಬೀರ್ ಕಪೂರ್3:46

ಬರ್ಫ಼ಿ!ಯ ಧ್ವನಿವಾಹಿನಿಯು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.

ಮಾರಾಟಗಾರಿಕೆ ಮತ್ತು ಬಿಡುಗಡೆ[ಬದಲಾಯಿಸಿ]

ಚಿತ್ರದ ಅಧಿಕೃತ ಟ್ರೇಲರ್‌ನ್ನು ೨ ಜುಲೈ ೨೦೧೨ರಂದು ಬಿಡುಗಡೆ ಮಾಡಲಾಯಿತು. ಟ್ರೇಲರ್‌ನಲ್ಲಿ ಯಾವುದೇ ಸಂಭಾಷಣೆಯಿರಲಿಲ್ಲ, ಮತ್ತು ಹಾಸ್ಯವನ್ನು ಸನ್ನೆಗಳು ಮತ್ತು ಕ್ರಿಯೆಗಳ ಮೂಲಕ ಚಿತ್ರಿಸಲಾಗಿತ್ತು. ಇದನ್ನು ವಿಮರ್ಶಕರು ಮತ್ತು ಪ್ರೇಕ್ಷಕರು ಉತ್ತಮವಾಗಿ ಸ್ವೀಕರಿಸಿದರು.[೨೪]

ಬರ್ಫ಼ಿ! ಚಿತ್ರವನ್ನು ೧೪ ಸೆಪ್ಟೆಂಬರ್ ೨೦೧೨ ರಂದು ಬಿಡುಗಡೆ ಮಾಡಲಾಯಿತು.[೨೫] ಈ ಚಿತ್ರವನ್ನು ಡಿವಿಡಿ ಮತ್ತು ಬ್ಲೂ-ರೇನಲ್ಲಿ ನವೆಂಬರ್ ೨೦೧೨ರ ಮಧ್ಯದಲ್ಲಿ ಬಿಡುಗಡೆ ಮಾಡಲಾಯಿತು.[೨೬] ಚಿತ್ರವು ನೆಟ್‍ಫ್ಲಿಕ್ಸ್ನಲ್ಲಿ ಕೂಡ ಲಭ್ಯವಿದೆ.[೨೭]

ವಿವಾದಗಳು[ಬದಲಾಯಿಸಿ]

ಬ್ರಿಟಿಷ್ ಉತ್ಪಾದಕ ಮರ್ಫ಼ಿ ರೇಡಿಯೊ ಅದರ ೧೯೭೦ರ ದಶಕದ ಮುದ್ರಣ ಜಾಹೀರಾತುಗಳಿಂದ ವ್ಯಾಪಾರ ಚಿಹ್ನೆಯಾದ ಮರ್ಫ಼ಿ ಶಿಶು ಲೋಗೊವನ್ನು ಈ ಚಿತ್ರದಲ್ಲಿ ಅನುಮತಿ ಇಲ್ಲದೇ ಬಳಸಲಾಗಿದೆ ಎಂದು ಸಾಧಿಸಿತು.[೨೮]

ಚಿತ್ರದ ಬಿಡುಗಡೆಯ ನಂತರ, ಹಲವು ಬ್ಲಾಗ್‍ಗಳು ಮತ್ತು ಟ್ವಿಟ್ಟರ್, ಫೇಸ್‌ಬುಕ್‌ ಹಾಗೂ ಯೂಟ್ಯೂಬ್‍ನಂತಹ ಸಾಮಾಜಿಕ ಸಂಪರ್ಕಜಾಲ ತಾಣಗಳ ಬಳಕೆದಾರರು ನಿರ್ದೇಶಕನ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿದರು.[೨೯] ಇಷ್ಟೇ ಅಲ್ಲದೆ ಬಾಸು ಮೂಲ ಆಧಾರಗಳನ್ನು ಗುರುತಿಸಿ ಗೌರವ ನೀಡಿಲ್ಲ ಎಂದು ಮಾಧ್ಯಮಗಳು ಆರೋಪ ಮಾಡಿದವು. ಬರ್ಫ಼ಿ!ಯ ಸಂಗೀತ ನಿರ್ದೇಶಕ ಪ್ರೀತಮ್ ಹಿನ್ನೆಲೆ ಸಂಗೀತವನ್ನು ಬೇರೆ ಭಾಷೆಯ ಚಿತ್ರದಿಂದ ನಕಲಿಸಿದರು ಎಂದೂ ಆರೋಪಿಸಿದರು.[೩೦]

ಕೃತಿಚೌರ್ಯದ ಕಾರಣ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ಆಸ್ಕರ್ ಪ್ರಶಸ್ತಿಗೆ ಬರ್ಫ಼ಿ!ಯ ಆಯ್ಕೆಯನ್ನು ಟೀಕಿಸಲಾಯಿತು.

ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ[ಬದಲಾಯಿಸಿ]

ಭಾರತ[ಬದಲಾಯಿಸಿ]

A photograph of Priyanka Chopra, Ranbir Kapoor and Ileana D'Cruz looking forward, smiling and posing for the camera
ಪ್ರಿಯಾಂಕಾ ಚೋಪ್ರಾ, ರಣ್‍ಬೀರ್ ಕಪೂರ್ ಮತ್ತು ಈಲಿಯಾನಾ ಡಿಕ್ರೂಜ಼್ ತಮ್ಮ ಅಭಿನಯಗಳಿಗಾಗಿ ವ್ಯಾಪಕ ಮೆಚ್ಚುಗೆಯನ್ನು ಪಡೆದರು

ಈ ಚಿತ್ರವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ವಿಮರ್ಶಕರು ಅಭಿನಯಗಳು, ನಿರ್ದೇಶನ, ಚಿತ್ರಕಥೆ, ಛಾಯಾಗ್ರಹಣ, ಸಂಗೀತ ಮತ್ತು ಅಂಗವಿಕಲರ ಸಕಾರಾತ್ಮಕ ಚಿತ್ರಣವನ್ನು ಪ್ರಶಂಸಿಸಿದರು.[೩೧]

ವಿದೇಶದಲ್ಲಿ[ಬದಲಾಯಿಸಿ]

ಈ ಚಿತ್ರವು ವಿದೇಶದಲ್ಲಿ ಕೂಡ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು[ಬದಲಾಯಿಸಿ]

ಬಾಕ್ಸ್ ಆಫ಼ಿಸ್[ಬದಲಾಯಿಸಿ]

ಅದರ ಚಿತ್ರಮಂದಿರ ಬಿಡುಗಡೆಯ ಅವಧಿಯಲ್ಲಿ, ಬರ್ಫ಼ಿ! ಭಾರತದಲ್ಲಿ ₹1.06 ಬಿಲಿಯನ್‍ನಷ್ಟು ನಿವ್ವಳ ಮೊತ್ತವನ್ನು ಗಳಿಸಿತು.[೩೨] .ಮೂರು ವಾರಗಳು ಓಡಿದ ಈ ಚಿತ್ರವನ್ನು ಬಾಕ್ಸ್ ಆಫ಼ಿಸ್ ಇಂಡಿಯಾ "ಸೂಪರ್ ಹಿಟ್" ಎಂದು ಘೋಷಿಸಿತು.[೩೩] ಈ ಚಿತ್ರವು ವಿಶ್ವಾದ್ಯಂತ ₹1.75 ಬಿಲಿಯನ್‍ನಷ್ಟು ಗಳಿಸಿತು.[೩][೩೪]

ಉಲ್ಲೇಖಗಳು[ಬದಲಾಯಿಸಿ]

  1. "Barfi! (PG)". British Board of Film Classification. 11 September 2012. Archived from the original on 31 January 2016. Retrieved 1 October 2012.
  2. Thakkar, Mehul S (22 September 2012). "Directors who got their mojo back". ದಿ ಟೈಮ್ಸ್ ಆಫ್‌ ಇಂಡಿಯಾ. Archived from the original on 25 ಅಕ್ಟೋಬರ್ 2012. Retrieved 11 April 2013.
  3. ೩.೦ ೩.೧ "Top Ten Worldwide Grossers 2012". Box Office India. 17 January 2013. Archived from the original on 2 June 2013. Retrieved 11 April 2013. ಉಲ್ಲೇಖ ದೋಷ: Invalid <ref> tag; name "Gross" defined multiple times with different content
  4. "Barfi! Box Office Collection till Now". Bollywood Hungama. Retrieved 17 June 2019.
  5. "Ranbir Kapoor's Barfi! out of the Oscar race". Hindustan Times. 5 December 2012. Archived from the original on 11 April 2013. Retrieved 11 April 2013.
  6. "58th Idea Filmfare Awards nominations are here!". Filmfare. 13 January 2013. Archived from the original on 27 December 2014. Retrieved 13 January 2013.
  7. "Winners of 58th Idea Filmfare Awards 2012". Bollywood Hungama. 20 January 2013. Archived from the original on 23 January 2013. Retrieved 21 January 2013.
  8. "Nominations: 19th Annual Colors Screen Awards". Bollywood Hungama. 2 January 2013. Archived from the original on 5 January 2013. Retrieved 4 January 2013.
  9. "Winners of 19th Annual Colors Screen Awards". Bollywood Hungama. 12 January 2013. Archived from the original on 25 September 2013. Retrieved 13 January 2013.
  10. "Winner's of 19th Annual Screen Awards". The Indian Express. Archived from the original on 14 January 2013. Retrieved 13 January 2013.
  11. "Nominations for Zee Cine Awards 2013". Bollywood Hungama. 29 December 2012. Archived from the original on 2 January 2013. Retrieved 4 January 2013.
  12. "Winners of Zee Cine Awards 2013". Bollywood Hungama. Archived from the original on 27 December 2013. Retrieved 14 January 2013.
  13. Prabhakaran, Mahalakshmi (13 September 2012). "Anurag Basu's happy state of mind the reason behind Barfi!". Daily News and Analysis. Archived from the original on 29 October 2012. Retrieved 11 April 2013.
  14. Gupta, Pratim D. (17 September 2012). "The Barfi! man". The Telegraph. Archived from the original on 23 November 2012. Retrieved 13 April 2013.
  15. "Asin lost out role opposite Ranbir !". ದಿ ಟೈಮ್ಸ್ ಆಫ್‌ ಇಂಡಿಯಾ. 10 July 2010. Archived from the original on 3 ಜೂನ್ 2013. Retrieved 9 January 2013.
  16. Jha, Subhash K. (13 December 2010). "Anurag Basu confirms Telugu actress Ileana D'Cruz opposite Ranbir in Barfii". Bollywood Hungama. Archived from the original on 3 October 2012. Retrieved 9 January 2013.
  17. Jha, Subhash K. (26 March 2011). "Priyanka Chopra begins shooting for Anurag Basu's Barfi". Bollywood Hungama. Archived from the original on 1 May 2011. Retrieved 12 April 2011.
  18. Jha, Subhash K. (5 October 2011). "Release Dates". Bollywood Hungama. Archived from the original on 7 October 2011. Retrieved 5 October 2011.
  19. Banerjee, Amitava (24 September 2012). "Barfi! emerges as Darjeeling's brand ambassador". Hindustan Times. Archived from the original on 21 June 2016. Retrieved 30 December 2012.
  20. Gupta, Pratim D. (16 March 2011). "Barfi this monsoon". The Telegraph. Archived from the original on 29 October 2013. Retrieved 30 December 2012.
  21. "Ranbir Kapoor gets practical". ದಿ ಟೈಮ್ಸ್ ಆಫ್‌ ಇಂಡಿಯಾ. 4 December 2011. Archived from the original on 3 ಜೂನ್ 2013. Retrieved 30 December 2012.
  22. "Check Out: Ranbir's daredevil act in Barfi". Bollywood Hungama. 23 January 2012. Archived from the original on 16 July 2012. Retrieved 30 December 2012.
  23. Holla, Anand. "On Record — Yum this Barfi!". ದಿ ಟೈಮ್ಸ್ ಆಫ್‌ ಇಂಡಿಯಾ. Archived from the original on 11 ಏಪ್ರಿಲ್ 2013. Retrieved 11 April 2013.
  24. "Barfi! trailer releases, Ranbir trends on Twitter". Hindustan Times, accessed via Highbeam Research. 4 July 2012. Archived from the original on 25 May 2013. Retrieved 11 April 2013.
  25. "Barfi! Has Excellent Weekend". Box Office India. 17 September 2012. Archived from the original on 19 September 2012. Retrieved 11 April 2013.
  26. "Ranbir Kapoor asks fans to gift Barfi DVDs this Diwali". India Today. 12 November 2013. Archived from the original on 28 January 2013. Retrieved 11 April 2013.
  27. "Barfi!". Netflix. Retrieved 3 September 2019.
  28. Awaasthi, Kavita (12 September 2012). "Barfi! faces Rs. 50 cr suit for copyright violation". Hindustan Times. Archived from the original on 9 January 2013. Retrieved 4 January 2013.
  29. "And the Oscar for the Most Originally Plagiarised Film goes to... 'Barfi!". Zee News. 30 September 2013. Archived from the original on 23 December 2012. Retrieved 28 December 2012.
  30. "'Barfi': The thin line between inspiration and plagiarism". CNN-IBN. 27 September 2013. Archived from the original on 20 November 2012. Retrieved 28 December 2012.
  31. "Barfi! sparks debate about the portrayal of the differently abled in films". NDTV. 22 September 2012. Archived from the original on 14 June 2013. Retrieved 11 April 2013.
  32. "Top Ten 2012 Lifetime Grossers". Box Office India. 31 October 2012. Archived from the original on 2 November 2012. Retrieved 11 April 2013.
  33. "New Releases Poor OMG! Oh My God Excellent Barfi! Closing In On 100 Crore". Box Office India. 5 October 2012. Archived from the original on 2 December 2012. Retrieved 11 April 2013.
  34. "Fastest To The Century: Barfi! In 17 Days". Box Office India. 9 October 2012. Archived from the original on 11 October 2012. Retrieved 11 April 2013.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]