ವಿಷಯಕ್ಕೆ ಹೋಗು

ಬಂಡವಾಳ ಹೂಡಿಕೆಯ ಬ್ಯಾಂಕಿಂಗ್ (ಬ್ಯಾಂಕ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Banking ಬಂಡವಾಳ ಹೂಡಿಕೆಯ (ಬ್ಯಾಂಕ್) ಎಂದರೆ ಒಂದು ಹಣಕಾಸು ಸಂಸ್ಥೆ.ಬಂಡವಾಳ ಒದಗಿಸುವುದು,ಷೇರುಗಳ ವಹಿವಾಟು ಹಾಗು ಕಾರ್ಪೊರೇಟ್ ಗಳ ವಿಲೀನದ ಉಸ್ತುವಾರಿ ಮತ್ತು ಸ್ವಾಧೀನದ ಕಾರ್ಯಕ್ಕೆ ಹಣಕಾಸಿನ ಸಾಲದ ನೆರವು ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕಾರ್ಪೊರೇಟ್ ಹಣಕಾಸು ಎಂಬುದು ಸಹ ಬಂಡವಾಳ ಹೂಡಿಕೆ ಬ್ಯಾಂಕ್ ಗೆ ಮತ್ತೊಂದು ಸಾಮಾನ್ಯ ಸಮಾನ ಪದವಾಗಿದೆ.

ಬಂಡವಾಳ ಹೂಡಿಕೆ ಬ್ಯಾಂಕುಗಳು ಕಂಪೆನಿ ಮತ್ತು ಸರ್ಕಾರಿ ಸಂಸ್ಥೆಗಳಿಗಾಗಿ ಲಾಭದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತವೆ.ಬಂಡವಾಳ ಮಾರುಕಟ್ಟೆಯಲ್ಲಿ ಷೇರುಗಳ ಬಿಡುಗಡೆ ಮತ್ತು ಮಾರಾಟ(ಇಕ್ವಿಟಿ ಮತ್ತು ಸಾಲಪತ್ರಗಳು) ಮತ್ತು ವಿಮಾ ಬಾಂಡ್ ಗಳ ಬಿಡುಗಡೆ ಸಹ ಇದರಲ್ಲಿದೆ.(ಉದಾ:ಬಾಕಿ ಉಳಿಸಿಕೊಂಡ ಷೇರುಗಳ ವಿನಿಮಯ ಮಾರಾಟ).ಇದರ ಜೊತೆಗೆ ಕಂಪೆನಿಗಳ ವಿಲೀನ ಮತ್ತು ಸ್ವಾಧೀನ ಕುರಿತ ವ್ಯವಹಾರಗಳಿಗೆ ಅದು ಸಲಹೆಗಾರನಾಗಿಯೂ ಕೆಲಸ ಮಾಡುತ್ತದೆ. ಬಹುತೇಕ ಬಂಡವಾಳ ಹೂಡಿಕೆ ಬ್ಯಾಂಕುಗಳು ವಿಲೀನ ಮತ್ತು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ನೈಪುಣ್ಯದ ಸಲಹಾ ಸೇವೆಗಳನ್ನು ಒದಗಿಸುತ್ತವೆ.ಇದೂ ಅಲ್ಲದೇ ಷೇರುಗಳಲ್ಲಿನ ಹಕ್ಕುಗಳ ಒಡೆತನದ ಪರಭಾರೆ ಇವುಗಳ ಬಗ್ಗೆ ಸಲಹಾ ಸೇವೆಗಳನ್ನು ಕೊಡಮಾಡುತ್ತದೆ.ಅಲ್ಲದೇ ಇತರೆ ಗ್ರಾಹಕರಿಗೆ ಮೂಲ ಷೇರುಗಳ ಮಾರಾಟ,ನಿಶ್ಚಿತ ಆದಾಯ,[[ವಿದೇಶಿ ವಿನಿಮಯ(/0),{0}ವಸ್ತುಗಳ]] ವಹಿವಾಟಿಗೆ ಮತ್ತು ಎಕ್ವಿಟಿ ಷೇರುಗಳ ವಿನಿಮಯಕ್ಕೆ ಅಗತ್ಯ ಹಾಗು ಅನುಕೂಲಕರ ಸಲಹೆಗಳನ್ನು ಕೊಡುತ್ತದೆ.

ಅಮೇರಿಕಾದಲ್ಲಿ ಇಂತಹ ಸೇವೆಗಳನ್ನು ಒದಗಿಸುವವರು ನಿರ್ದಿಷ್ಟ ಕಾನೂನು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.ಇಂತಹ ಸಲಹೆಗಾರನು ಲೈಸೆನ್ಸ್ ಹೊಂದಿದ ದಲ್ಲಾಳಿ-ವಹಿವಾಟುದಾರ,ಮತ್ತು ಸೆಕ್ಯೂರೊಟೀಸ್ ಮತ್ತು ಎಕ್ಸೇಂಜ್ ಕಮಿಷನ್ ನ(SEC) (FINRA) ನೀತಿ-ನಿಯಮಗಳಿಗೆ [೧] ಒಳಪಡಬೇಕಾಗುತ್ತದೆ. ಇಸವಿ 1999 ರ ವರೆಗೆ ಯುನೈಟೆಡ್ ಸ್ಟೇಟ್ಸ್ ಬಂಡವಾಳ ಹೂಡಿಕೆ ಬ್ಯಾಂಕ್ ಮತ್ತು ವಾಣಿಜ್ಯ ಬ್ಯಾಂಕುಗಳ ನಡುವೆ ಪ್ರತ್ಯೇಕತೆಯನ್ನು ಅನುಸರಿಸಿಕೊಂಡು ಬಂದಿತ್ತು. ಉಳಿದ ಕೈಗಾರಿಕರಣದ ರಾಷ್ಟ್ರಗಳು,G7 ರಾಷ್ಟ್ರಗಳನ್ನೊಳಗೊಂಡಂತೆ ಈ ಪ್ರತ್ಯೇಕತೆಯನ್ನು ಹಿಂದಿನಿಂದಲೂ ಕಾಯ್ದುಕೊಂಡಿಲ್ಲ. ಷೇರುಗಳನ್ನು ನಗದಿಗೆ ಅಥವಾ ಬದಲಿ ವಿನಿಮಯ(ವಹಿವಾಟಿಗಳಿಗೆ ಸೌಕರ್ಯ,ಮಾರುಕಟ್ಟೆ-ಒದಗಿಸುವಿಕೆ)ಅಥವಾ ಷೇರುಗಳಿಗೆ ಹೆಚ್ಚಿನ ಆದ್ಯತೆ(ಅಂದರೆ ಷೇರುಗಳಿಗೆ ಖಾತ್ರಿ ಒದಗಿಸುವಿಕೆ,ಸಂಶೋಧನೆ,ಇತ್ಯಾದಿ)ಇದನ್ನು "ಮಾರಾಟದ ವರ್ಗಕ್ಕೆ" ಸೇರಿದ್ದು ಎಂದು ಪರಿಗಣಿಸಲಾಗುತ್ತದೆ

ಪಿಂಚಣಿ ನಿಧಿಗಳು,ಮ್ಯೂಚವಲ್ ನಿಧಿಗಳು,(ಫಂಡ್) ಸಂಭವನೀಯ ನಷ್ಟ ಪರಿಹಾರದ ನಿಧಿಗಳಲ್ಲಿ ಇವು ವ್ಯವಹರಿಸುತ್ತವೆ.ಸಾರ್ವಜನಿಕ ಹೂಡಿಕೆದಾರರು ತಮಗೆ ಅಗತ್ಯವಿರುವ ಸರಕು-ಸೇವೆಗಳನ್ನು ಮಾರಾಟ ವಲಯದ ಮೂಲಕ ಪಡೆದುಕೊಳ್ಳುತ್ತಾರೆ.ಈ ಮೂಲಕ ತಮ್ಮ ಹೂಡಿಕೆಗೆ ಉತ್ತಮ ಪ್ರತಿಫಲ ಪಡೆದುಕೊಳ್ಳುವಿಕೆಯನ್ನು "ಖರೀದಿ ವಲಯ" ಹೊಂದಿರುತ್ತದೆ. ಹಲವು ಸಂಸ್ಥೆಗಳು ಉಪ-ವಸ್ತುಗಳ ಖರೀದಿ ಮತ್ತು ಮಾರಾಟದ ಕಾರ್ಯ ಮಾಡುತ್ತವೆ

ಬಂಡವಾಳ ಹೂಡಿಕೆ ಬ್ಯಾಂಕಿನ ಸಂಘಟನಾ ರಚನೆ[ಬದಲಾಯಿಸಿ]

ಪ್ರಮುಖ ಕಾರ್ಯ ಚಟುವಟಿಕೆ ಮತ್ತು ಘಟಕಗಳು[ಬದಲಾಯಿಸಿ]

ಬಂಡವಾಳ ಹೂಡಿಕೆ ಬ್ಯಾಂಕು ಬಹು ಮುಖ್ಯವಾಗಿ ಮೂರು ವಿಭಾಗಗಳಲ್ಲಿ ಪ್ರತ್ಯೇಕಿಸಲ್ಪಟ್ಟಿದೆ.ಅದೆಂದರೆ ಮುಂಚೂಣಿ ಕಛೇರಿ,ಮಧ್ಯಭಾಗದ ಕಛೇರಿ,ಮತ್ತು ಹಿಂಭಾಗದ ಕಛೇರಿ ದೊಡ್ದ ಪೂರ್ಣಪ್ರಮಾಣದ-ಸೇವಾವಲಯಗಳಲ್ಲಿ ಬಂಡವಾಳ ಹೂಡಿಕೆ ಬ್ಯಾಂಕುಗಳು ಎಲ್ಲಾ ರೀತಿಯ ವ್ಯಾಪಾರಿ ಚಟುವಟಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.ಅಂದರೆ ಎರಡೂ ಮಾರಾಟ ಮತ್ತು ಖರೀದಿ ವಲಯಗಳನ್ನು ಒಳಗೊಂಡಿರುತ್ತದೆ.ಸಣ್ಣ ಪ್ರಮಾಣದ ಮಾರಾಟ ವಲಯದ ಬಂಡವಾಳ ಹೂಡಿಕೆಗಳು ಅಂದರೆ ಸಣ್ಣ ಪ್ರಮಾಣದ ಬಂಡವಾಳ ಹೂಡಿಕೆ ಬ್ಯಾಂಕುಗಳು ಮತ್ತು ಚಿಕ್ಕ ಪ್ರಮಾಣದ ದಲ್ಲಾಳಿ-ವಹಿವಾಟುದಾರರು ಈ ಬಂಡವಾಳ ಬ್ಯಾಂಕಿನ ವಹಿವಾಟುಗಳ ಮೇಲೆ ಗಮನ ಕೇಂದ್ರೀಕರಿಸಿರುತ್ತಾರೆ.ಅದೂ ಅಲ್ಲದೇ ಅನುಕ್ರಮವಾಗಿ ಮಾರಾಟ/ವ್ಯಾಪಾರ/ಸಂಶೋಧನೆಗಳ ಮೇಲೂ ಇವು ಗಮನಹರಿಸುತ್ತವೆ.

ಷೇರುಗಳನ್ನು ಬಿಡುಗಡೆ ಮಾಡುವ ಕಂಪೆನಿಗಳು ಮತ್ತು ಷೇರುಗಳನ್ನು ಕೊಳ್ಳುವ ಹೂಡಿಕೆದಾರ ಇವರಿಬ್ಬರಿಗೂ ಬಂಡವಾಳ ಬ್ಯಾಂಕುಗಳು ಭದ್ರತೆ ಒದಗಿಸುತ್ತವೆ. ಮಾರುಕಟ್ಟೆಯಲ್ಲಿ ಕಾರ್ಪೋರೇಟ್ ವಲಯ ಯಾವಾಗ ಮತ್ತು ಹೇಗೆ ತಮ್ಮ ಷೇರುಗಳನ್ನು ಮಾರಾಟಕ್ಕೆ ಬಿಡುಗಡೆಗೊಳಿಸಬೇಕೆಂಬುದರ ಮಾಹಿತಿಯನ್ನು ಬಂಡವಾಳ ಹೂಡಿಕೆ ಬ್ಯಾಂಕುಗಳು ಒದಗಿಸುತ್ತವೆ. ಕಾರ್ಪೋರೇಷನ್ ಗಳು ತಮ್ಮಲ್ಲಿ ಇಲ್ಲದ ಮೂಲ ಸೌಕರ್ಯಗಳಿಗಾಗಿ ಸಾಮಾನ್ಯವಾಗಿ ವೆಚ್ಚ ಮಾಡಬೇಕಾಗಿಲ್ಲ. ಜವಾಬ್ದಾರಿಯುತ ಬಂಡವಾಳ ಹೂಡಿಕೆ ಬ್ಯಾಂಕುಗಳು ಸಾಮಾನ್ಯ ಹೂಡಿಕೆದಾರರಿಗೆ ಅಸುರಕ್ಷಿತ ಷೇರುಗಳ ವಿರುದ್ಧ ರಕ್ಷಣೆ ನೀಡುತ್ತವೆ. ಕೆಲವೇ ಕೆಲವು ಕಳಪೆ ಷೇರುಗಳ ಬಿಡುಗಡೆಯು ಕಂಪೆನಿಯ ಹೆಸರಿಗೆ ಗಂಭೀರ ಸ್ವರೂಪದ ನಷ್ಟ ಅಲ್ಲದೇ ವ್ಯಾಪಾರ ವಹಿವಾಟುಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ಬಂಡವಾಳ ಹೂಡಿಕೆಯ ಬ್ಯಾಂಕುಗಳು ಹೊಸ ಷೇರುಗಳು ಮಾರುಕಟ್ಟೆಗೆ ಬಿಡುಗಡೆ ಸಂದರ್ಭದಲ್ಲಿ ಬಹು ಮುಖ್ಯ ಪಾತ್ರವಹಿಸುತ್ತವೆ.

ಬಂಡವಾಳ ಹೂಡಿಕೆ ಬ್ಯಾಂಕ್ ನ ಚಟುವಟಿಕೆಗಳು[ಬದಲಾಯಿಸಿ]

 • ಬಂಡವಾಳ ಹೂಡಿಕೆ ಬ್ಯಾಂಕ್ , ಬಂಡವಾಳ ಹೂಡಿಕೆ ಬ್ಯಾಂಕುಗಳ ಕಾರ್ಯಚಟುವಟಿಕೆ ಒಂದು ಸಾಂಪ್ರದಾಯಿಕ ಹೂಡಿಕೆಯ ಭಾಗವೆನಿಸಿದೆ.ಇದು ಗ್ರಾಹಕರಿಗೆ ಬಂಡವಾಳ ಪೇಟೆಯಲ್ಲಿ ಹಣಕಾಸಿನ ನಿಧಿಗಳನ್ನು ಒಟ್ಟುಗೂಡಿಸುವಿಕೆಗೆ ನೆರವು ಹಾಗು ವಿಲೀನಗಳು ಮತ್ತು ಸ್ವಾಧೀನಪಡಿಸಿಕೊಳ್ಳುವ ವಿಷಯಗಳ ಬಗ್ಗೆ ಸಲಹೆ ನೀಡುವ ಸಹಾಯಕನಂತೆ ನೆರವಾಗುತ್ತದೆ. ಬಂಡವಾಳ ಹೂಡಿಕೆ ಬ್ಯಾಂಕು ಹೂಡಿಕೆದಾರರಿಗೆ ತಮ್ಮ ಹಣ ಹೂಡುವ ಭದ್ರತಾ ಪಾಲುದಾರನಾಗಿ ಕಾರ್ಯ ನಿರ್ವಹಿಸಿದರೆ ಬಿಡ್ಡರ್ ಗಳೊಂದಿಗೆ ವಿಲೀನ ಪ್ರಕ್ರಿಯೆಗೆ ಸಹಕಾರ ನೀಡುತ್ತದೆ.ಇದರಿಂದ ವಿಲೀನ ಪ್ರಕ್ರಿಯೆಯು ಸುಗಮಗೊಳ್ಳುತ್ತದೆ. ಕಾರ್ಪೋರೇಟ ಹಣಕಾಸು,ಸಂಸ್ಥೆಯು ಬಂಡವಾಳ ಹೂಡಿಕೆ ಬ್ಯಾಂಕ್ ನ ಒಂದು ಭಾಗವೆನಿಸಿದೆ. ಇದರ ಸಲಹಾ ಸಮೂಹವನ್ನು ವಿಲೀನ ಮತ್ತು ಸ್ವಾಧೀನತೆಗಳು ಎಂದೂ ಕರೆಯಲಾಗುತ್ತದೆ.(M&A) M&A ಬಗ್ಗೆ ಸಾಮರ್ಥ್ಯ ಹೊಂದಿರುವ ಕಪೆನಿಗಳಿಗೆ ಸೂಕ್ತ ಮಾರಾಟ ಬೆಲೆಯ ಪಿಚ್ ಬುಕ್ ನ್ನು(ಹಣಕಾಸಿನ ಸಾಮರ್ಥ್ಯ ತೋರುವ ವಿವರ) ಬ್ಯಾಂಕು ಅಲ್ಲಲ್ಲಿ ಹಂಚಿಕೆ ಮಾಡುತ್ತದೆ.ಇದರ ಪ್ರಸರಣದ ಮೂಲಕ ಉತ್ತಮ ಬಿಡ್ ದಾರನನ್ನು ಪತ್ತೆಹಚ್ಚಲು ನೆರವಾಗುತ್ತದೆ.ಹೀಗೆ ಪಿಚ್ ಬುಕ್ ಮೂಲಕ ಬ್ಯಾಂಕಿನ ಮಾರಾಟದ ವ್ಯವಹಾರ ಯಶಸ್ವಿಯಾದರೆ ತನ್ನ ಗ್ರಾಹಕನಿಗೆ ಉತ್ತಮ ವಹಿವಾಟಿನ ಅವಕಾಶವನ್ನು ಒದಗಿಸುತ್ತದೆ. ಬಂಡವಾಳ ಹೂಡಿಕೆ ಬ್ಯಾಂಕಿನ ವಿಭಾಗವು(IBD)ಸಾಮಾನ್ಯವಾಗಿ ಕೈಗಾರಿಕಾ ಮತ್ತು ಉತ್ಪಾದನಾ ರಕ್ಷಣಾ ಸಮೂಹ ಎಂದು ವಿಭಾಗಿಸಲ್ಪಟ್ಟಿದೆ. ಕೈಗಾರಿಕಾ ವಲಯದ ರಕ್ಷಣಾ ಸಮೂಹವು ವಿಶೇಷವಾಗಿ ಆರೋಗ್ಯ ರಕ್ಷಣೆ,ಕೈಗಾರಿಕೆಗಳು,ಅಥವಾ ತಂತ್ರಜ್ಣಾನ,ಮತ್ತು ಕಾರ್ಪೋರೇಷನ್ ಆಂತರಿಕ ಕೈಗಾರಿಕೆಗಳ ಉಸ್ತುವಾರಿ ಮತ್ತು ಮೇಲ್ವಿಚಾರಣೆಯನ್ನು ಬ್ಯಾಂಕಿನ ವ್ಯವಹಾರದ ಪರಿಧಿಯೊಳಕ್ಕೆ ತರುತ್ತದೆ. ಉತ್ಪಾದನಾ ರಕ್ಷಣಾ ಕವಚ ಹೊಂದಿರುವ ಸಂಸ್ಥೆಗಳು ಹಣಕಾಸಿನ ವ್ಯವಹಾರವಾದ ವಿಲೀನ ಮತ್ತು ಸ್ವಾಧೀನತೆಗೆ ಅಗತ್ಯವಿರುವ ಮೊತ್ತವನ್ನು ಒದಗಿಸುತ್ತವೆ.ಉದಾ:ಸಹಾಯಕ ಬಂಡವಾಳ ಎಕ್ವಿಟಿ,ಮತ್ತು ಬೃಹತ್ ಮಟ್ಟದ ಸಾಲ ಮತ್ತು ಕೈಗಾರಿಕಾ ಸಮೂಹದ ವಹಿವಾಟುಗಳಿಗೆ ಸಾಮಾನ್ಯವಾಗಿ ಕಾರ್ಯ ಮತ್ತು ವಿಶೇಷ ಅಗತ್ಯಗಳನ್ನು ಪೂರೈಸಲು ಬಂಡವಾಳ ಹೂಡಿಕೆ ಬ್ಯಾಂಕಿಂಗ್ ಸೇವೆ ನೆರವಾಗುತ್ತದೆ.
 • ಮಾರಾಟ ಮತ್ತು ವ್ಯಾಪಾರ ಗಳನ್ನು ಪರವಹಿಸಿ ಮಾಡುವುದು:ಬ್ಯಾಂಕುಗಳ ಪರವಾಗಿ ಮತ್ತು ಅದರ ಗ್ರಾಹಕರಿಗಾಗಿ,ಮುಖ್ಯವಾಗಿ ದೊಡ್ಡ ಬಂಡವಾಳ ಹೂಡಿಕೆ ಬ್ಯಾಂಕುಗಳು ಉತ್ಪಾದನೆಗಳ ಖರೀದಿ ಮತ್ತು ಮಾರಾಟದ ಚಟುವಟಿಕೆಯಲ್ಲಿ ತೊಡಗಿರುತ್ತವೆ. ಮಾರುಕಟ್ಟೆ ಸೃಷ್ಟಿ ಮಾಡುವಲ್ಲಿ,ವ್ಯಾಪಾರಿಗಳು ಹಣಕಾಸಿನ ಉತ್ಪನ್ನಗಳಲ್ಲಿ ಖರೀದಿ ಮತ್ತು ಮಾರಾಟದ ವಹಿವಾಟು ನಡೆಸಿ ಪ್ರತಿ ವ್ಯವಹಾರದಲ್ಲೂ ಉತ್ತಮ ಲಾಭ ಗಳಿಕೆಯ ಉದ್ದೇಶ ಹೊಂದಿರುತ್ತಾರೆ. ಮಾರಾಟಗಳು ಎನ್ನುವುದು ಬಂಡವಾಳ ಬ್ಯಾಂಕಿನ ಮಾರಾಟ ವಿಭಾಗದ ಒಂದು ಕಾರ್ಯ ಪಡೆಯಾಗಿರುತ್ತದೆ.ಇವುಗಳ ಪ್ರಾಥಮಿಕ ಚಟುವಟಿಕೆ ಎಂದರೆ ಹೂಡಿಕೆ ಸಂಸ್ಥೆಗಳು ಹಾಗು ದೊಡ್ಡ ಮಟ್ಟದ ಬಂಡವಾಳ ಹೂಡಿಕೆದಾರರಿಂದ ವ್ಯಾಪಾರಿ ತಂತ್ರಗಾರಿಕೆಗಳನ್ನು ಮತ್ತು ಆಲೋಚನಾ ಕ್ರಮಗಳನ್ನು ಸಲಹೆಯಾಗಿ ಪಡೆಯುವುದು. (ಆಪತ್ತಿನ ಸಂದರ್ಭದಲ್ಲಿ ನೆರವು ಒದಗಿಸುವ ಆಧಾರದ ಮೇಲೆ)ಇವುಗಳನ್ನು ಪಡೆಯಲು ಈ ಬ್ಯಾಂಕುಗಳು ಕಾರ್ಯ ಪ್ರವೃತ್ತವಾಗುತ್ತವೆ. ಬ್ಯಾಂಕಿನಲ್ಲಿರುವ ಮಾರಾಟ ಘಟಕಗಳು ತಮ್ಮ ಗ್ರಾಹಕರ ವ್ಯಾಪಾರಿ ಆದೇಶಗಳನ್ನು ನಿಗದಿತ ಗುರಿಗೆ ತಲುಪಿಸಲು ಸಂಪರ್ಕಸಾಧಿಸುತ್ತವೆ.ಇದರಿಂದ ದರ ನಿಗದಿ ಮತ್ತು ವ್ಯಾಪಾರ ಕುದುರಿಸುವುದು,ಅಥವಾ ವಿಶೇಷ ಉತ್ಪಾದನೆಗಳನ್ನು ಬೇಡಿಕೆಗೆ ತಕ್ಕಂತೆ ನಿಗದಿಪಡಿಸಲು ಇದು ಮುಂದಾಗುತ್ತದೆ. ಮೂಲ ಉತ್ಪನ್ನಗಳ ಮಾರಾಟ ಚಟುವಟಿಕೆಗಳು ಪೂರಕವಾಗಿ ರಾಚನಿಕ ವಿಧಾನ ಗಳನ್ನು ಕಂಡು ಹಿಡಿಯುವುದು ಕೂಡ ಇಂದಿನ ಅಗತ್ಯವೆನಿಸಿದೆ.ಅತ್ಯಧಿಕ ಕಾರ್ಮಿಕರು ಸಂಕೀರ್ಣ ಉತ್ಪಾದನೆಗಳನ್ನು ಸಿದ್ದಗೊಳಿಸಿ ಮಾರಾಟದ ಜಾಲಕ್ಕೆ ಒದಗಿಸುತ್ತಿದ್ದಾರೆ.ಇದರಿಂದಾಗಿ ದೊಡ್ಡ ಪ್ರಮಾಣದ ಲಾಭವೂ ಅದರ ಆಧುನಿಕ ತಂತ್ರಜ್ಞಾನದ ಬಳಕೆಯೂ ಸಮನಾಗಿರುತ್ತದೆ. ವಿವಿಧ ಮಾರುಕಟ್ಟೆಗಳಲ್ಲಿ ಅನುಸರಿಸುವ ತಂತ್ರಗಳನ್ನು ಗ್ರಾಹಕರಿಗೆ ವ್ಯಾಪಾರಿ ಪರಿಣಿತರು ನೀಡುತ್ತಾರೆ.ಈ ಸಲಹೆಯು ಬಾಹ್ಯ ಮತ್ತು ಆಂತರಿಕ ಗ್ರಾಹಕರಿಗೂ ಸೂಕ್ತವಾಗಿ ಮತ್ತು ಸಮನಾಗಿ ದೊರಕುವಂತೆ ಬಂಡವಾಳ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತವೆ. ಬೃಹತ್ ಆರ್ಥಿಕತೆ ಆಧಾರದ ಮೇಲೆ ವ್ಯಾಪಾರಿ ಪರಣಿತರು ಮೂಲ ವಸ್ತುಗಳಿಂದ ಹಿಡಿದು ನಿಗದಿತ ಕೈಗಾರಿಕೆಗಳವರೆಗೆ ಸಲಹೆ ಸೂಚನೆ ನೀಡುತ್ತಾರೆ.ಕಂಪೆನಿ ಮತ್ತು ಉದ್ಯಿಮೆಗಳನ್ನು ನಿಗದಿತ ಚೌಕಟ್ಟಿನೊಳಗೆ ತಂದು ಇವು ತಮ್ಮ ವಹಿವಾಟಿನ ಚಟುವಟಿಕೆಗಳಿಗೆ ಇಂಬು ನೀಡುತ್ತವೆ. ಈ ಸಲಹಾ ತಂತ್ರಗಾರಿಕೆಯು ಆ ಕಂಪೆನಿಯು ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳ ಮಾರಾಟದಲ್ಲಿ ಹೇಗೆ ವರ್ತಿಸುತ್ತದೆ ಎಂಬುದನ್ನು ಅಭ್ಯಸಿಸುತ್ತದೆ.ಇದರ ಫಲಿತಾಂಶ ಮಾರಾಟದ ನೈಪುಣ್ಯತೆವನ್ನು ಅವಲಂಬಿಸಿದೆ.ಕಂಪೆನಿಯು ತನ್ನ ಮಾಲಿಕತ್ವ ಅಥವಾ ಸ್ವಾಮ್ಯತೆ ಮತ್ತು ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಏನು ಎಂಬುದನ್ನು ಗಮನಿಸಬೇಕಾಗುತ್ತದೆ.ಮಾರಾಟ ಪ್ರತಿನಿಧಿಗಳು ಗ್ರಾಹಕರಿಗೆ ಯಾವ ರೀತಿಯಲ್ಲಿ ಉತ್ಪಾದನೆಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತಾರೆ ಎಂಬುದು ಬಹು ಮುಖ್ಯವೆನಿಸುತ್ತದೆ.ಇದೇ ತೆರನಾಗಿ ಹೊಸ ಉತ್ಪಾದನೆಗಳಿಗೆ ಹೊಸ ರೂಪ ನೀಡಲು ಸಹ ಈ ಸಲಹೆಗಳು ಸಹಕಾರಿಯಾಗುತ್ತವೆ. ಸ್ವಾಮ್ಯತ್ವ ಅಥವಾ ಒಡೆತನದ ವಹಿವಾಟಿನ ಮೂಲಕವೂ ಬ್ಯಾಂಕು ತನ್ನ ಹೊಣೆಗಾರಿಕೆಯನ್ನು ಮೆರೆಯುತ್ತದೆ.ಗ್ರಾಹಕರೊಂದಿಗೆ ನೇರ ಸಂಪರ್ಕವಿಲ್ಲದ ಬ್ಯಾಂಕಿನ ಕಾರ್ಯಪಡೆಯೊಂದು "ಪ್ರಮುಖ ಜವಾಬ್ದಾರಿ"ಯೊಂದಿಗೆ ತನ್ನ ಕಾರ್ಯನಿರ್ವಹಿಸುತ್ತದೆ.ಈ ಹೊಣೆಗಾರಿಕೆಯು ವಹಿವಾಟುದಾರರು ಖರೀದಿ ಅಥವಾ ಮಾರಾಟದಲ್ಲಿ ತೊಡಗಿದಾಗ ಉದ್ಭವವಾಗುತ್ತದೆ. ಆದರೆ ವಹಿವಾಟುದಾರ ಈ ಬಗ್ಗೆ ತೆರೆ ಮರೆಯಲ್ಲಿಯೇ ಉಳಿದು ತನ್ನ ವ್ಯಾಪಾರಿ ಕೌಶಲ್ಯ ಮೆರೆಯುತ್ತಾನೆ. ಬ್ಯಾಂಕುಗಳು ತಮ್ಮ ಹೊಣೆಗಾರಿಕೆಯನ್ನು ಲಾಭಾಂಶ ಹೆಚ್ಚಿಸಿಕೊಳ್ಳುವ ಮೂಲಕ ತಮ್ಮ ಕಂಪೆನಿ ಖಾತೆಗಳಲ್ಲಿ ಅದನ್ನು ದಾಖಲಿಸಿ ಸಮತೋಲನ ಕಾಯ್ದುಕೊಳ್ಳುತ್ತವೆ. ಮಾರಾಟ ಮತ್ತು ವ್ಯಾಪಾರಿ ವಲಯದಲ್ಲಿನ ಸಂಖ್ಯಾಶಾಸ್ತ್ರದ ಪರಿಣತಿಯ ಅಗತ್ಯತೆಯಿಂದಾಗಿ ಸಂಶೋಧನಾ ಅಭ್ಯರ್ಥಿಗಳಿಗೆ ಇಂದು ಉದ್ಯೋಗವಕಾಶ ದೊರಕುತ್ತದೆ.ಈ Ph.D.(ಸಂಶೋಧನಾ-ಅನುಸಂಧಾನ) ಅಧ್ಯಯನ ಮಾಡಿದವರನ್ನು ಗುಣಮಟ್ಟದ ವಿಶ್ಲೇಷಕರೆಂದು ನೇಮಕ ಮಾಡಿಕೊಳ್ಳಬಹುದಾಗಿದೆ.
 • ಸಂಶೋಧನೆ ಯು ಬ್ಯಾಂಕುಗಳ ಒಂದು ಶಾಖೆಯಾಗಿದೆ.ಕಂಪೆನಿಗಳನ್ನು ಪರಾಮರ್ಶಿಸಿ ಅವುಗಳ ಸವಿಸ್ತಾರ ಮಾಹಿತಿ ಬಗ್ಗೆ ಸಂಶೋಧಕರು ವರದಿಗಳನ್ನು ತಯಾರಿಸುತ್ತಾರೆ.ಅಂದರೆ ಕಂಪೆನಿಗಳ ಪ್ರಗತಿ ಮತ್ತು ಅವುಗಳ "ಖರೀದಿ" ಮತ್ತು "ಮಾರಾಟ"ದರಗಳ ಕುರಿತು ಈ ಅಧ್ಯಯನಗಳು ಸಂಪೂರ್ಣ ಮಾಹಿತಿ ನೀಡುತ್ತವೆ. ಆದರೆ ಈ ಸಂಶೋಧನಾ ಶಾಖೆಯು ಯಾವದೇ ಆದಾಯನ್ನು ತರುವುದಿಲ್ಲ. ಇವುಗಳಿಂದಾಗಿ ಗ್ರಾಹಕರ ತೊಂದರೆಗಳ ಬಗೆಗಿನ ಅಧ್ಯಯನ ನಡೆಸಿ ಮಾರಾಟ ಪ್ರಕ್ರಿಯೆಯನ್ನು ಚುರುಕುಗೊಳಿಸಬಹುದಾಗಿದೆ.ನಿಗದಿತ ಗ್ರಾಹಕರಿಗೆ ಉತ್ಪನ್ನಗಳ ಹಾಗೂ ಮಾರಾಟದ ಸೂಕ್ತ ಸಲಹೆಗಳನ್ನು ನೀಡುವ ಮೂಲಕ ವ್ಯಾಪಾರದ ವ್ಯಾಪ್ತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇಲ್ಲಿ ಹಿತಾಸಕ್ತಿಗಳ ಮೂಲ ಶಕ್ತಿ,ದಕ್ಷತೆ ಸಾಮರ್ಥ್ಯ ಕುರಿತಂತೆ ಬಂಡವಾಳ ಹೂಡಿಕೆ ಬ್ಯಾಂಕ್ ಮತ್ತು ವಿಶ್ಲೇಷಕರ ನಡುವೆ ಯಾವಾಗಲೂ ತಿಕ್ಕಾಟ ಅಥವಾ ಘರ್ಷಣೆ ಇಲ್ಲವೇ ಅಭಿಪ್ರಾಯ ಭೇದ ಉಂಟಾಗುವುದು ಸಹಜ. ಇತ್ತೀಚಿನ ವರ್ಷಗಳಲ್ಲಿ ಬಂಡವಾಳ ಹೂಡಿಕೆ ಬ್ಯಾಂಕ್ ಮತ್ತು ಸಂಶೋಧನೆ ನಡುವೆ ಸಮನ್ವತೆ ತರಲು ಸಾಕಷ್ಟು ನಿಯಂತ್ರಣ ರೇಖೆಗಳನ್ನು ಎಳೆಯಲಾಗುತ್ತಿದೆ.ಸಾರ್ವಜನಿಕ ಮತ್ತು ಖಾಸಗಿ ಚಟುವಟಿಕೆಗಳ ಮಧ್ಯೆ ಚೀನಾ ಗೋಡೆಯೊಂದು ಗಟ್ಟಿಯಾಗಿ ಅಲುಗಾಡದೇ ನಿಲ್ಲಬೇಕಿದೆ

ಬಂಡವಾಳ ಹೂಡಿಕೆ ಬ್ಯಾಂಕುಗಳು ಇನ್ನಿತರ ವ್ಯವಹಾರ-ವಹಿವಾಟುಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.[ಬದಲಾಯಿಸಿ]

ಮಧ್ಯಮ ಶ್ರೇಣಿಯ ಕಛೇರಿ [ಬದಲಾಯಿಸಿ]

 • ಹೊಣೆಗಾರಿಕೆಯ ಆಡಳಿತ ಎಂದರೆ ಮಾರುಕಟ್ಟೆ ಮತ್ತು ಸಾಲದ ಹೊಣೆಗಾರಿಕೆಯನ್ನು ವ್ಯಾಪಾರಿ ವರ್ಗ ಹೇಗೆ ನಿಭಾಯಿಸುತ್ತದೆ ಎಂಬುದು.ತಮ್ಮ ದಿನನಿತ್ಯದ ವಹಿವಾಟುಗಳನ್ನು ಸೂಕ್ತವಾಗಿ ಮತ್ತು ಕೂಲಂಕುಷವಾಗಿ ಗಮನಿಸುವುದೇ ಆಗಿದೆ.ತಮ್ಮ ಬ್ಯಾಲನ್ಸ್ ಶೀಟ್ ಗೆ ಅದನ್ನು ಕ್ರಮವಾಗಿ ವರ್ಗಾಯಿಸಲು ಅವರು ವ್ಯವಹಾರವನ್ನು ಸ್ಥಿಮಿತದಲ್ಲಿಡುತ್ತಾರೆ.ಇದರ ಮೂಲಕ ಕಳಪೆ ಅಥವಾ ಕೆಟ್ಟ ವ್ಯಾಪಾರಕ್ಕೆ ಕಡಿವಾಣ ಹಾಕಲು ಮತ್ತು ಒಟ್ಟಾರೆ ತಮ್ಮ ಉತ್ಪಾದನೆಗಳಿಗೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಮಧ್ಯಮ ತರಗತಿಯ ಕಛೇರಿಯ ಇನ್ನೊಂದು ಕಾರ್ಯಚಟುವಟಿಕೆಯೆಂದರೆ ಮೇಲೆ ಕಾಣಿಸಿದ ಹೊಣೆಗಾರಿಕೆಯ ಅಪಾಯಗಳನ್ನು ಖಚಿತವಾಗಿ ಗುರ್ತಿಸುವುದು.(ಎದುರು ಪಕ್ಷದ ವ್ಯಾಪಾರಿಯೊಂದಿಗಿನ ವಾಣಿಜ್ಯ ಒಪ್ಪಂದಂತೆ ವ್ಯಾಪಾರ ನಡೆಸುವುದು)ಅಂದರೆ (ಉತ್ತಮ ಪದ್ಧತಿಗಳಂತೆ ಗುಣಮಟ್ಟದ ವಿಧಾನಗಳ ಮೂಲಕ ಒಳ್ಳೆಯ ಮಾದರಿಗಳನ್ನು ನೊಂದಾಯಿಸುವುದು)ಮುಖ್ಯವಾಗಿ ಸಮಯಕ್ಕೆ ಸರಿಯಾಗಿ ಅಂದರೆ (ವ್ಯಾಪಾರವಾಗುವ 30 ನಿಮಿಷಗಳಲ್ಲಿ ಎಂದು ಊಹಿಸಬಹುದು.) ಇತ್ತೀಚಿನ ವರ್ಷಗಳಲ್ಲಿ ಪ್ರಮಾದ,ಲೋಪದೋಷಗಳ ಜವಾಬ್ದಾರಿಯನ್ನು ಅಥವಾ ಹೊಣೆಗಾರಿಕೆಯನ್ನು "ನಿರಂತರ ಜವಾಬ್ದಾರಿ"ಎಂದು ಪರಿಗಣಿಸಲಾಗುತ್ತದೆ.ಇಂತಹ ಹೊಣೆಗಾರಿಕೆಯನ್ನು ಸರಿಪಡಿಸಲು ಮಧ್ಯಮ ತರಗತಿಯ ಕಛೇರಿಯು ಪ್ರಯತ್ನ ನಡೆಸುತ್ತಿರುತ್ತದೆ. ಇಂತಹ ಲೋಪದೋಷಗಳನ್ನು ಸರಿಪಡಿಸುವ ಅಥವಾ ಹೊಡೆದು ಹಾಕುವ ಭರವಸೆ ಇಲ್ಲದಿದ್ದರೆ ಮಾರುಕಟ್ಟೆ ಮತ್ತು ಸಾಲದ ಹೊಣೆಗಾರಿಕೆಗಳ ವಿಶ್ಲೇಷಣೆಗಳು ವ್ಯಾಪಾರಿ ಹಗರಣಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ.
 • ಕಾರ್ಪೋರೇಟ್ ಗಳ ನಿಧಿ ಯು ಬಂಡವಾಳ ಹೂಡಿಕೆ ಬ್ಯಾಂಕಿನ ನಿಧಿಯ ಗಣಿಯಾಗಿದೆ.ಇದು ಬಂಡವಾಳ ರಚನೆಯ ಆಡಳಿತ ವ್ಯವಸ್ಥೆ,ಮತ್ತು ಷೇರುಗಳ ಮಾರಾಟದ ಹೊಣೆಗಾರಿಕೆಯ ಮೇಲ್ವಿಚಾರಣೆ ನಡೆಸುತ್ತದೆ
 • ಹಣಕಾಸು ನಿಯಂತ್ರಣ ವು ಕಂಪೆನಿಯ ಬಂಡವಾಳದ ಹರಿವನ್ನು ಸುಸ್ಥಿತಿಯಲ್ಲಿಡುತ್ತದೆ.ಹಣಕಾಸು ವಿಭಾಗವು ಹಿರಿಯ ಆಡಳಿತ ವರ್ಗಕ್ಕೆ ಉತ್ತಮ ಸಲಹೆಗಳನ್ನು ಕೊಡುವ ಮೂಲಕ ಜಾಗತಿಕ ಮಟ್ಟದ ಪೈಪೋಟಿ ಎದುರಿಸಲು ಒತ್ತು ನೀಡುತ್ತದೆ.ಇದರ ಜೊತೆಯಲ್ಲೇ ಲಾಭ ಗಳಿಕೆ ಮತ್ತು ಕಂಪೆನಿಯ ವಿವಿಧ ವ್ಯವಹಾರಗಳ ಬಗ್ಗೆ ರಾಚನಿಕ ವಿನ್ಯಾಸ ಒದಗಿಸುತ್ತದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗಡಮ್ ಗಳಲ್ಲಿ ಹಣಕಾಸು ನಿಯಂತ್ರಕ ಹುದ್ದೆಯು ಒಂದು ಹಿರಿಯ ಆಡಳಿತ ವಿಭಾಗದ ಕಾರ್ಯವಾಗಿದೆ.ಇವರು ಮುಖ್ಯ ಹಣಕಾಸು ಅಧಿಕಾರಿಗೆ ವರದಿ ಒಪ್ಪಿಸಿ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಾರೆ.
 • ಕಾರ್ಪೋರೇಟ್ ಗಳ ಕೌಶಲ್ಯ ,ಹೊಣೆಗಾರಿಕೆಯೊಂದಿಗೆ,ಹಣಕಾಸು,ಮತ್ತು ನಿಯಂತ್ರಣಗಳು ಕೂಡಾ ಹಣಕಾಸು ವಿಭಾಗಕ್ಕೆ ಸೇರಿರುತ್ತದೆ
 • ಕೆಲವೊಂದು ನಿಗದಿತ ವಾಣಿಜ್ಯ-ವಹಿವಾಟಿನ ಉದ್ದೇಶಗಳ ಪೂರೈಕೆ ಯು ಬಂಡವಾಳ ಹೂಡಿಕೆ ಬ್ಯಾಂಕಿನ ದೈನಂದಿನ ಚಟುವಟಿಕೆಗಳಾಗಿವೆ.ಸರ್ಕಾರಿ ನೀತಿನಿಯಮಗಳ ಪಾಲನೆ,ಅನುಸರಣೆ ಹಾಗು ಆಂತರಿಕ ನಿಯಂತ್ರಣಗಳೂ ಇದರ ಕಾರ್ಯವ್ಯಾಪ್ತಿಗೆ ಸೇರುತ್ತವೆ. ಇದನ್ನು ಹಲವು ಬಾರಿ ಹಿಂಭಾಗದ ಕಛೇರಿಯ ವಿಭಾಗವೆಂದೂ ಪರಿಗಣಿಸಲಾಗುತ್ತದೆ.

ಹಿಂಭಾಗದ ಕಛೇರಿ[ಬದಲಾಯಿಸಿ]

 • ಕಾರ್ಯ ಚಟುವಟಿಕೆ ಗಳಲ್ಲಿ ವ್ಯಾಪಾರ-ವಹಿವಾಟುಗಳ ಸಮಗ್ರ ಅಂಕಿಅಂಶಗಳ ಪರಿಶೋಧನೆಯೂ ಒಳಗೊಂಡಿರುತ್ತದೆ.ಯಾವುದೇ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ.ಅಗತ್ಯ ವಹಿವಾಟುಗಳನ್ನು ದಾಖಲಿಸುವ ಸಂದರ್ಭದಲ್ಲಿನ ವರ್ಗಾವಣೆಗೆ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. .ಬಂಡವಾಳ ಹೂಡಿಕೆ ಬ್ಯಾಂಕಿನ ವಿಭಾಗದಲ್ಲಿ ಅತಿ ದೊಡ್ಡ ಪ್ರಮಾಣದ ಕೆಲಸದ ಭದ್ರತೆ ಇದ್ದರೂ ಭವಿಷ್ಯತ್ ನ ಪ್ರಗತಿ ವಿಷಯದಲ್ಲಿ ಅತ್ಯಂತ ಕಡಿಮೆ ಅವಕಾಶಗಳಿವೆ ಎಂದು ಕೆಲವರು ನಂಬುತ್ತಾರೆ.ಇದಕ್ಕಾಗಿಯೇ ಇರಬೇಕು ಕೆಲವು ಬ್ಯಾಂಕುಗಳು ತಮ್ಮ ಕಾರ್ಯಚಟುವಟಿಕೆಯನ್ನು ಬೇರೆಡೆ ಗುತ್ತಿಗೆ ಆಧಾರದ ಮೇಲೆ ಹಸ್ತಾಂತರಿಸುವ [೩] ಪರಿಪಾಠವಿದೆ. ಹೇಗೆ ಆದರೂ ಇದು ಬ್ಯಾಂಕಿನ ವಿವಾದಾತ್ಮಕ ಭಾಗವೆನಿಸಿದೆ. ಹಣಕಾಸು ವಿಷಯಾಧಾರಿತ ಉದ್ಯೋಗವಕಾಶಗಳಲ್ಲಿ ಹೆಚ್ಚುತ್ತಿರುವ ಪೈಪೋಟಿಯಿಂದಾಗಿ ಸದ್ಯ ಬಂಡವಾಳ ಹೂಡಿಕೆ ಬ್ಯಾಂಕಿನ ಉನ್ನತ ಆಡಳಿತ(ಟೈಯರ್ 1 )ವರ್ಗದಲ್ಲಿ ಅವಕಾಶ ಗಿಟ್ಟಿಸಲು ಪದವಿ ಶಿಕ್ಷಣವನ್ನು [ಸಾಕ್ಷ್ಯಾಧಾರ ಬೇಕಾಗಿದೆ]ಕಡ್ಡಾಯಗೊಳಿಸಲಾಗಿದೆ. ಹಣಕಾಸಿನ ವಿಷಯದಲ್ಲಿನ ಒಂದು ಪದವಿ ಶಿಕ್ಷಣವು ಬ್ಯಾಂಕಿನ ಎಲ್ಲ ವಿಭಾಗಗಳಲ್ಲಿನ ಪ್ರಮುಖ ವ್ಯವಹಾರಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಸಹಕಾರಿಯಾಗಬಹುದು.
 • ತಂತ್ರಜ್ಞಾನ ವು ಬಹುಮುಖ್ಯವಾಗಿ ಮಾಹಿತಿ ತಂತ್ರಜ್ಞಾನದ ವಿಭಾಗವನ್ನು ಪ್ರತಿಧ್ವನಿಸುತ್ತದೆ. ದೊಡ್ಡಪ್ರಮಾಣದ ಬಂಡವಾಳ ಬ್ಯಾಂಕುಗಳಲ್ಲಿ ತನ್ನದೇ ಆದ ಸ್ವಯಂ ಅಭಿವೃದ್ಧಿಪಡಿಸಿದ ಸಾಫ್ಟ್ ವೇರ್ ತಂತ್ರಜ್ಞಾನ ಇರುತ್ತದೆ.ಬ್ಯಾಂಕಿಗೆ ತಂತ್ರಜ್ಞಾನದ ಬೆಂಬಲ ನೀಡುವ ತಾಂತ್ರಿಕ ವರ್ಗದ ಗುಂಪೊಂದು ಇದೇ ಉದ್ದೇಶಕ್ಕಾಗಿ ಕಾರ್ಯನಿರ್ವಸುತ್ತಿರುತ್ತದೆ. ಕಳೆದ ಕೆಲವು ವರ್ಷಗಳಿಂದ ತಂತ್ರಜ್ಞಾನವು ಸಾಕಷ್ಟು ಪ್ರಗತಿ ಸಾಧಿಸಿದೆ.ಹೆಚ್ಚಿನ ಭಾಗದ ಮಾರಾಟ ಮತ್ತು ವ್ಯಾಪಾರ ವಹಿವಾಟುಗಳು ಈಗ ಎಲೆಕ್ಟ್ರಾನಿಕ್ ವ್ಯಾಪಾರಿ ವಿಧಾನವನ್ನು ಹೊಂದಿವೆ. ಆಪತ್ತು ನಿರ್ವಹಣಾ ಉದ್ದೇಶಗಳಿಗಾಗಿ ಕೆಲವು ವಹಿವಾಟುಗಳು ಜಟಿಲ ಸಂಖ್ಯಾ ನಿಯಮಗಳನ್ನು ಅಳವಡಿಸಿಕೊಂಡಿವೆ.

ಚೀನಾ ಗೋಡೆ[ಬದಲಾಯಿಸಿ]

ಒಂದು ಬಂಡವಾಳ ಹೂಡಿಕೆ ಬ್ಯಾಂಕು ತನ್ನ ಕಾರ್ಯಚಟುವಟಿಕೆಗಳನ್ನು ಖಾಸಗಿ ಮತ್ತು ಸಾರ್ವಜನಿಕ ಎಂಬ ಪ್ರತ್ಯೇಕತೆ ಮೇಲೆ ವಿಂಗಡಿಸಲ್ಪಡುತ್ತದೆ. ಅವೆರಡರ ಮಧ್ಯ ಚೀನಾ ಗೋಡೆಯಂತಹದನ್ನು ನಿರ್ಮಿಸಿ ಉಭಯ ಕಾರ್ಯಗಳು ಒಂದಕ್ಕೊಂದು ಘರ್ಷಣೆಯಾಗದಂತೆ ನೋಡಿಕೊಳ್ಳುತ್ತದೆ. ಬ್ಯಾಂಕಿನ ಖಾಸಗಿ ವಲಯವು ತನ್ನೊಳಗೇ ಆಂತರಿಕ ಮಾಹಿತಿಯಾಗಿ ವ್ಯವಹರಿಸುತ್ತದೆ.ಈ ಮಾಹಿತಿಯನ್ನು ಬಹಿರಂಗಪಡಿಸಲಾಗುವದಿಲ್ಲ.ಇನ್ನುಳಿದ ಸಾರ್ವಜನಿಕ ತಿಳಿವಳಿಕೆಯಂತಹ ಷೇರುಗಳ ವಿಶ್ಲೇಷಣೆಯು ಸಾರ್ವಜನಿಕಗೊಳಿಸಲಾಗುತ್ತದೆ.

ಉದ್ಯಮದ ಗಾತ್ರ[ಬದಲಾಯಿಸಿ]

ಜಾಗತಿಕ ಬಂಡವಾಳ ಹೂಡಿಕೆ ಬ್ಯಾಂಕ್ ನ ಆದಾಯವು ಇಸವಿ 2007ರ ವರೆಗಿನ ಅಂದರೆ ಕಳೆದ ಐದು ವರ್ಷಗಳಲ್ಲಿ $84.3 ಬಿಲಿಯನ್ ಗೂ ಅಧಿಕ[೪] ವಾಗಿದೆ. ಇದು ಕಳೆದ ವರ್ಷದ ಆದಾಯಕ್ಕಿಂತ 22% ಹೆಚ್ಚಳ ಕಂಡಿದೆ.ವರ್ಷ 2003ರ ಮಟ್ಟಕ್ಕೆ ಹೋಲಿಸಿದರೆ ಇದು ದ್ವಿಗುಣಕ್ಕಿಂತ ಹೆಚ್ಚೇ ಎನ್ನಬಹುದಾದ ಪ್ರಮಾಣದಲ್ಲಿದೆ. ಚಂದಾ ಸಂಗ್ರಹಣೆಯ ಶುಲ್ಕ ಏರಿಕೆಯ ದಾಖಲೆಯಾಗಿದ್ದರೂ U.S.ನ ಸಬ್ ಪ್ರೈಮ್ ಷೇರುಗಳಲ್ಲಿ ಹೂಡಿಕೆ ಮಾಡಿದ್ದ ಹಲವು ಬಂಡವಾಳ ಹೂಡಿಕೆ ಬ್ಯಾಂಕುಗಳು ದೊಡ್ದ ಪ್ರಮಾಣದ ನಷ್ಟ ಅನುಭವಿಸಿದ ಉದಾಹರಣೆಯೂ ಇದೆ.

ಬಂಡವಾಳ ಹೂಡಿಕೆ ಬ್ಯಾಂಕ್ ಗಳಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನ(ಯುನೈಟೆಡ್ ಸ್ಟೇಟ್ಸ) ಪ್ರಮುಖ ಆರ್ಥಿಕ ಮೂಲವಾಗಿತ್ತು. 2007ರಲ್ಲಿ ಒಟ್ಟು ಆರ್ಥಿಕ ಆದಾಯದ ಮೂಲದಲ್ಲಿ 53% ರಷ್ಟು ಅಮೆರಿಕಾದ ಪಾಲು ಇತ್ತೆಂದು ಹೇಳಲಾಗುತ್ತದೆ.ಇದು ಕಳೆದ ದಶಕದ ಅನುಪಾತಕ್ಕೆ ಹೋಲಿಸಿದರೆ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ತೋರಿದೆ. ಯುರೋಪ್ (ಮಧ್ಯ ಪೂರ್ವ ಮತ್ತು ಆಫ್ರಿಕಾ ಒಳಗೊಂಡಂತೆ) ಒಟ್ಟು ಪ್ರಮಾಣದಲ್ಲಿ 32%ರಷ್ಟನ್ನು ಸೇರಿಸಿದೆ.ಅಂದರೆ ಒಂದು ದಶಕದ ಹಿಂದೆ 30%ರಷ್ಟು ಏರಿಕೆ ದಾಖಲಾಗಿದೆ. ಏಷಿಯಾದ ರಾಷ್ಟ್ರಗಳು ಉಳಿದ 15%ರಷ್ಟನ್ನು [ಸಾಕ್ಷ್ಯಾಧಾರ ಬೇಕಾಗಿದೆ]ಪೂರೈಸಿದವು. ಕಳೆದ ದಶಕದಲ್ಲಿ US(ಅಮೆರಿಕಾ) ನ ಶುಲ್ಕದ ಆದಾಯ80%ರಷ್ಟು ಹೆಚ್ಚಳ [ಸಾಕ್ಷ್ಯಾಧಾರ ಬೇಕಾಗಿದೆ]ತೋರಿದೆ. ಈ ಅವಧಿಗೆ ಹೋಲಿಕೆ ಮಾಡಿದರೆ ಯುರೋಪ್ ನಲ್ಲಿ 217%ರ ಪ್ರಮಾಣ ಮತ್ತು ಏಷಿಯಾದಲ್ಲಿ 250%ರಷ್ಟು ಅಧಿಕತೆ [ಸಾಕ್ಷ್ಯಾಧಾರ ಬೇಕಾಗಿದೆ]ಕಂಡಿದೆ. ಈ ಉದ್ಯಮವು ಸಣ್ಣ ಪ್ರಮಾಣದಲ್ಲಿ ಬೃಹತ್ ಹಣಕಾಸು ಕೇಂದ್ರಗಳ ಮೇಲೆ ತನ್ನ ಗಮನ ಕೇಂದ್ರೀಕರಿಸಿತು,ಲಂಡನ್,ನ್ಯೂಯಾರ್ಕ್ ನಗರ ಮತ್ತು ಟೋಕಿಯೊಗಳನ್ನೊಳಗೊಂಡು ಹಲವೆಡೆ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡಿತು.

ಬಂಡವಾಳ ಹೂಡಿಕೆ ಬ್ಯಾಂಕ್ ಕೂಡಾ ಹಲವು ಜಾಗತಿಕ ಉದ್ಯಮಗಳಲ್ಲಿ ಒಂದಾಗಿದೆ.ಅಲ್ಲದೇ ನಿರಂತರವಾಗಿರುವ ಅಭಿವೃದ್ಧಿಯ ಸವಾಲುಗಳಿಗೆ ಪ್ರತಿಕ್ರಿಯಿಸುವ ಮತ್ತು ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿನ ಆವಿಷ್ಕಾರಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳಬೇಕಿದೆ. ಇತಿಹಾಸದುದ್ದಕ್ಕೂ ಗಮನಿಸಿದರೆ ಬಂಡವಾಳ ಹೂಡಿಕೆ ಬ್ಯಾಂಕ್ ನ ಉತ್ಪನ್ನ ಹಾಗು ಸೇವೆಗಳನ್ನು ವಾಣಿಜ್ಯ ವಸ್ತು-ಸರಕನ್ನಾಗಿಸುವ ಸಾಕಷ್ಟು ಸಮೀಕರಣಗಳನ್ನು ಪ್ರಸ್ತಾಪಿಸಲಾಗಿದೆ. ಹೆಚ್ಚು ಲಾಭಾಂಶದ ಉದ್ದೇಶವಿರುವ ಹೊಸ ಉತ್ಪಾದನೆಗಳನ್ನು ನಿರಂತರವಾಗಿ ಸಂಶೋಧಿಸುವ ಮತ್ತು ಸಿದ್ಧಪಡಿಸುವ ಕಾರ್ಯದಲ್ಲಿ ಬ್ಯಾಂಕ್ ತೊಡಗಿದೆ.ಹೊಸ ಮಾರುಕಟ್ಟೆಯ ತಂತ್ರಜ್ಞಾನದ ಮಾಹಿತಿ ಹಾಗು ತಮ್ಮ ಗ್ರಾಹಕರ ಮನ ಗೆಲ್ಲಲು ಬಂಡವಾಳ ಹೂಡಿಕೆ ಬ್ಯಾಂಕುಗಳು ಪ್ರಯತ್ನಿಸುತ್ತಿವೆ. ಹೇಗಾದರೂ ಇಂತಹ ಹೊಸ ಸಂಶೋಧನೆಗಳು ಯಾವದೇ ಹಕ್ಕು ಸ್ವಾಮ್ಯ ಅಥವಾ ನಕಲು ಮಾಡುವದಕ್ಕೆ ನಿರ್ಭಂದಿಸುದಿಲ್ಲ, ಆದ್ದರಿಂದ ಇದರ ವ್ಯಾಪಾರಿ ಲಾಭಾಂಶದ ಮಟ್ಟ ಅನಿವಾರ್ಯವಾಗಿ ಇಳಿಕೆಯಾಗುತ್ತದೆ.

ಉದಾಹರಣೆಗೆ ಗ್ರಾಹಕರಿಗೆ ಮಾರಾಟ ಮಾಡುವ ವ್ಯಾಪಾರಿ ಬಾಂಡ್ ಗಳು ಮತ್ತು ಈಕ್ವಿಟಿಗಳು ಇಂದು ವಾಣಿಜ್ಯದ (ಮಾರಾಟದ) ಸರಕಾಗಿವೆ.ರಚನಾತ್ಮಕ ಕಾರ್ಯಚಟುವಟಿಕೆ ಮತ್ತು ಮೂಲಸೌಕರ್ಯಗಳ ವಹಿವಾಟಿನ ಉತ್ತಮ ಸಮಯದಲ್ಲಿ ಅಧಿಕ ಪ್ರಮಾಣದ ಲಾಭ ಗಳಿಕೆ ಕಾಣಬಹುದು.ಇನ್ನು ಮಾರುಕಟ್ಟೆಯ ಜಟಿಲ ಪರಿಸ್ಥಿಗಳಲ್ಲಿ ನಷ್ಟವೂ ಸಂಭವಿಸಬಹುದಾಗಿದೆ.ಉದಾಹರಣೆಗೆ 2007ರಲ್ಲಿ ಆರಂಭವಾದ ಕ್ರೆಡಿಟ್ ಕ್ರಂಚ(ಸಾಲದ ದೊಡ್ಡ ದಾಪುಗಾಲು)ಸಾಮಾನ್ಯವಾಗಿ ಸಂಕೀರ್ಣ ಸ್ಥಿತಿ ನಿರ್ಮಾಣ [ಸಾಕ್ಷ್ಯಾಧಾರ ಬೇಕಾಗಿದೆ]ಮಾಡಬಹುದಾಗಿದೆ. ಪ್ರತಿಯೊಂದು ಏಕಗವಾಕ್ಷಿ ಆಧಾರದ ಮೇಲಿನ ಒಪ್ಪಂದ ಕೆಲವು ಬಾರಿ ರಚನಾತ್ಮಕ ವ್ಯತ್ಯಾಸ ಹೊಂದಿರಬಹುದು.ಇದರಿಂದಾಗಿ ಸಂಕೀರ್ಣವೆನಿಸುವ ಹಣ ಸಂದಾಯದ ಪರಿಸ್ಥಿತಿ ಮತ್ತು ಕಂಪೆನಿಯ ಹೆಸರಿಗೆ ಗಂಡಾಂತರವಾಗುವ ಸಾಧ್ಯತೆ ಇದೆ. ಷೇರು ಪೇಟೆಯಲ್ಲಿ ಮಾರಾಟ ಪಟ್ಟಿಯಲ್ಲಿನ ಆಯ್ಕೆ ಹಕ್ಕನ್ನು ದೊಡ್ಡ ಷೇರು ವಿನಿಮಯ ಕೇಂದ್ರಗಳಲ್ಲಿ ಮೀಸಲಾಗಿಸಹುದಾಗಿದೆ. ಉದಾಹರಣೆಗೆCBOE ಮತ್ತು ಬಹುತೇಕ ಇವುಗಳನ್ನು ವಾಣಿಜ್ಯೀಕರಿಸುವ ಸಾಮಾನ್ಯ ಷೇರುಗಳಾಗಿ ಪರಿಗಣಿಸಲಾಗುತ್ತದೆ.

ಇನ್ನೂ ಹೆಚ್ಚೆಂದರೆ ಬಂಡವಾಳ ಬ್ಯಾಂಕುಗಳಲ್ಲಿ ಹೆಚ್ಚು ಉತ್ಪಾದಕಗಳನ್ನು ವಾಣಿಜ್ಯ ವಸ್ತುಗಳಾಗಿಸಿದ್ದರಿಂದ ಮತ್ತು ಏಕಸ್ವಾಮ್ಯತ್ವದ ವಹಿವಾಟಿನಿಂದ ಅಧಿಕ ಲಾಭ ಬಂದಿದೆ.(ಇದರಲ್ಲಿ ಗಾತ್ರವೂ ಕೂಡಾ ಋಣಾತ್ಮಕ ಲಾಭದ ಜಾಲವನ್ನು ಸೃಷ್ಟಿಸುತ್ತದೆ.ಮಾರುಕಟ್ಟೆಯಲ್ಲಿನ ಹರಿವು ಹಾಗು ಉತ್ತಮ ವ್ಯಾಪಾರ ಮತ್ತು ಮಾಹಿತಿಗಳನ್ನು ಗ್ರಾಹಕರಿಗೆ ತಲುಪಿಸುವ ಕಾರ್ಯ ಮಾಡುತ್ತವೆ)

ಬಂಡವಾಳ ಹೂಡಿಕೆ ಬ್ಯಾಂಕ್ ಉದ್ಯಮಗಳಲ್ಲಿ ವೇಗವಾಗಿ ಬೆಳೆಯುವ ಕ್ಷೇತ್ರವೆಂದರೆ ಸಾರ್ವಜನಿಕ ಕಂಪೆನಿಗಳಲ್ಲಿ ಖಾಸಗಿ ಹೂಡಿಕೆದಾರರನ್ನು ತೊಡಗಿಸುವ ಕಾರ್ಯ ಎನ್ನಬಹುದು. (PIPEs,ಇಲ್ಲವೆ ಇದನ್ನು ನಿಯಂತ್ರಕ ಡಿ D ಅಥವಾ ನಿಯಂತ್ರಕ ಎಸ್ S ಎನ್ನುತ್ತೇವೆ) ಇಂತಹ ವಹಿವಾಟುಗಳು ಕಂಪೆನಿಗಳು ಮತ್ತು ಅಧಿಕೃತ ಹೂಡಿಕೆದಾರರ ನಡುವೆ ಖಾಸಗಿಯಾಗಿ ಪರಸ್ಪರ ಮಾತುಕತೆಗಳಿಗೆ ಅನುವು ಮಾಡಿಕೊಡುತ್ತವೆ. ಇಂತಹ PIPE ವಹಿವಾಟುಗಳು ನಿಯಮರಹಿತ 144A ವ್ಯವಹಾರಗಳಾಗಿವೆ. .ದೊಡ್ದ ಪ್ರಮಾಣದ ಎದ್ದು ಕಾಣುವ ದಲ್ಲಾಳಿ ವಲಯದ ಸಂಸ್ಥೆಗಳು ಮತ್ತು ಚಿಕ್ಕ ಪ್ರಮಾಣದ ವ್ಯಾಪಾರ-ವ್ಯವಹಾರ ನಡೆಸುವ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಪೈಪೋಟಿಗಿಳಿಯುತ್ತವೆ. ವಿಶೇಷ ಉದ್ದೇಶದ ಸ್ವಾಧೀನ ಕಂಪೆನಿಗಳು(SPACs)ಅಥವಾ ಸ್ವತಂತ್ರ ಇಲ್ಲವೇ ಸ್ವಇಚ್ಚೆಯಂತೆ ನಡೆಯುವ ಕಾರ್ಪೋರೇಶನಗಳು ಈ ಉದ್ಯಮದ ಮೂಲಕ

ಸೃಷ್ಟಿಸಲ್ಪಟ್ಟಿವೆ.

ಸಮಗ್ರದೃಷ್ಟಿಕೋನ[ಬದಲಾಯಿಸಿ]

ಅಮೆರಿಕಾದಲ್ಲಿ 1929ರಲ್ಲಿ ನಡೆದ ಷೇರುಪೇಟೆಯ ಹಠಾತ್ ಹಾನಿ ಅನಾಹುತ ಸೃಷ್ಟಿಸಿತಲ್ಲದೇ ಗ್ಲಾಸ್-ಸ್ಟೀಗಲ್ ಕಾನೂನು ಜಾರಿಗೆ ನಾಂದಿಹಾಡಿತು.ಈ ಪ್ರಕರಣದಿಂದಾಗಿ ಬ್ಯಾಂಕುಗಳ ಠೇವಣಿ ಪಡೆಯುವ ಕಾರ್ಯ ಮತ್ತು ಷೇರುಗಳ ನಗದೀಕರಣದ ಪ್ರಕ್ರಿಯೆಗೆ ನಿರ್ಬಂಧ ಹಾಕಲಾಯಿತು.ಇದೇ ಮುಂದೆ ಬಂಡವಾಳ ಹೂಡಿಕೆ ಬ್ಯಾಂಕುಗಳನ್ನು ವಾಣಿಜ್ಯ ಬ್ಯಾಂಕುಗಳಿಂದ ಬೇರ್ಪಡಿಸಲು ಕಾರಣವಾಯಿತು. ಗ್ಲಾಸ-ಸ್ಟೀಗಲ್ ನ್ನು ಹಲವಾರು ದೊಡ್ದ ಕಂಪೆನಿಗಳ ಒತ್ತಾಯದ ಮೇರೆಗೆ ಹಿಂತೆಗೆದುಕೊಳ್ಳಲಾಯಿತು.1999 ರ ಗ್ರಾಮ-ಲೀಚ-ಬ್ಲಿಲಿ ಕಾನೂನು ಕೂಡಾ ಇದನ್ನು ರದ್ದುಗೊಳಿಸಲು ಕಾರಣವಾಯಿತು.

ಇತ್ತೀಚಿನ ಬೆಳವಣಿಗೆ ಎಂದರೆ ಈ ವಲಯದ ಸಾಲ ಪ್ರಮಾಣದ ಭದ್ರತೆ ಒದಗಿಸುವ ಸಮಗ್ರ ಅಭಿವೃದ್ಧಿ ಕೂಡಾ ಏಕಪ್ರಕಾರವಾಗಿ ತನ್ನ ಲಂಬಿತ ಬೆಳವಣಿಗೆಯನ್ನು [ಸಾಕ್ಷ್ಯಾಧಾರ ಬೇಕಾಗಿದೆ]ದಾಖಲಿಸುತ್ತವೆ. ಈ ಹಿಂದೆ ಬಂಡವಾಳ ಹೂಡಿಕೆ ಬ್ಯಾಂಕುಗಳು ಸಾಲದ ನಿಧಿ ಹೆಚ್ಚಳಕ್ಕೆ ಸಹಕರಿಸುತ್ತಿದ್ದವು.ಸಾಲ ನೀಡುವವರ ಹಣವನ್ನು ಪರಿವರ್ತಿಸುವ ಮೂಲಕ ನಿಗದಿತ ಬಡ್ಡಿದರಗಳನ್ನು ವಿಧಿಸುವ ಸಾಮರ್ಥ್ಯವನ್ನೂ ಕಲ್ಪಿಸಿ ಸಾಲವನ್ನು ಬಾಂಡ್ ಗಳನ್ನಾಗಿಸಿ ಬದಲಾಯಿಸುತ್ತಿದ್ದವು. ಉದಾಹರಣೆಗೆ ಆಸ್ತಿಗಳ ಒತ್ತೆಗಳ ಮೇಲೆ ಸಾಲ ನೀಡುವವ ಅಥವಾ ಪಡೆಯುವವ ಮನೆ ನಿರ್ಮಿಸಲು ಮನೆ ಸಾಲ ಪಡೆಯಬಹುದಾಗಿದೆ.ಇಲ್ಲಿ ಬಂಡವಾಳ ಹೂಡಿಕೆ ಬ್ಯಾಂಕಿನ ಮೂಲಕ ಬಾಂಡ್ ಗಳನ್ನು ಮಾರಾಟ ಮಾಡಿ ಸಾಲ ತೀರಿಸಬಹುದಾಗಿದೆ.ಹೀಗೆ ಬಾಂಡ್ ಗಳ ಮಾರಾಟ ಮಾಡುವುದರ ಮೂಲಕ ಹೊಸ ಸಾಲ ಮಾಡಲು ಇದನ್ನು ವಿನಿಯೋಗಿಸಬಹುದಾಗಿದೆ.ಹೀಗೆ ಸಾಲ ನೀಡಿಕೆದಾರನು ಸಾಲದ ಕಂತುಗಳನ್ನು ಪಡೆದು ಬಾಂಡ್ ದಾರರಿಗೆ ಸಂದಾಯ ಮಾಡಬಹುದಾಗಿದೆ. ಇವುಗಳನ್ನು ಆಸ್ತಿ-ಪಾಸ್ತಿಗಳನ್ನು ಪಡೆದು ಅವುಗಳಿಗೆ ಭದ್ರತೆ ಒದಗಿಸಿ ಹೂಡಿಕೆದಾರರಿಗೆ ಮಾರಾಟ ಮಾಡುವ ಪ್ರಕ್ರಿಯೆಎನ್ನಲಾಗಿದೆ. ಮಾರ್ಟ್ ಗೇಜ್ ಸಾಲದಾರರು ತಮ್ಮ ಸಾಲಗಳಿಗೆ ಭದ್ರತೆಯೊಂದಿಗೆ ರಕ್ಷಣೆ ಪಡೆಯಲಾರಂಭಿಸಿದರು. ಇದರಿಂದಾಗಿ ಮತ್ತು ಇದು ಮುಂದುವರೆಯುವ ಭೀತಿಯಿಂದಾಗಿ ಹಲವಾರು ಬಂಡವಾಳ ಹೂಡಿಕೆ ಬ್ಯಾಂಕುಗಳು ತಾವೇ ಸಾಲನೀಡಿಕೆದಾರರಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದವು.ಸಾಲಗಳನ್ನೇ ಭದ್ರತೆಯ ರಕ್ಷಣಾ [೫] ಕವಚವನ್ನಾಗಿಸಿಕೊಂಡವು ವಾಣಿಜ್ಯಿಕ ಮಾರ್ಟಗೇಜ್ ಗಳಲ್ಲಿ ಹಲವಾರು ಬಂಡವಾಳ ಹೂಡಿಕೆ ಬ್ಯಾಂಕುಗಳು ಕಡಿಮೆ [ಸಾಕ್ಷ್ಯಾಧಾರ ಬೇಕಾಗಿದೆ]ದರದ ಬಡ್ಡಿಯಲ್ಲಿ ವ್ಯವಹರಿಸಿ ವಾಣಿಜ್ಯ ಮೂಲದ ಆಸ್ತಿ-ಪಾಸ್ತಿಗಳಲ್ಲಿ ಹೆಚ್ಚು ಬಂಡವಾಳ ಹೂಡಿಕೆಯ ಆಸಕ್ತಿ ತೋರುತ್ತಿದೆ.ಹೀಗಾಗಿ ಆಸ್ತಿಗಳಲ್ಲಿ ಹೂಡಿಕೆ ಮಾಡುವವರು ಮತ್ತು ಅಭಿವೃದ್ಧಿದಾರರು ಸಾಲ ಪಡೆಯುವ ಅವಕಾಶಗಳನ್ನು ಬಂಡವಾಳ ಹೂಡಿಕೆ ಬ್ಯಾಂಕ್ ತಾನಾಗಿಯೇ[ಸಾಕ್ಷ್ಯಾಧಾರ ಬೇಕಾಗಿದೆ] ನಿರ್ವಹಿಸಿದೆ. ಇಸವಿ 2007ರ ಆರಂಭದಲ್ಲಿ ಭದ್ರತಾ ಮನೆಸಾಲಗಳ ವ್ಯವಸ್ಥೆ ಸಬ್ ಪ್ರೈಮ್ ಮಾರ್ಟ್ ಗೇಜನ ವಿವಾದ ಉಲ್ಬಣಗೊಂಡಿತು.ಇದರ ಪರಿಣಾಮವಾಗಿ ಹೂಡಿಕೆದಾರರಿಗೆ ಇದು ಹೊಣೆಗಾರಿಕೆಯ ಸಂಗತಿಯಾಗಿದ್ದಂತೂ ಸತ್ಯ ಸಂಗತಿ.

2008 ರ ಆರ್ಥಿಕ ಹಿನ್ನಡೆ[ಬದಲಾಯಿಸಿ]

ಆರ್ಥಿಕ 2008ರ ವರ್ಷದಲ್ಲಿ ಅಮೆರಿಕಾದಲ್ಲಿನ ಬಂಡವಾಳ ಹೂಡಿಕೆ ಬ್ಯಾಂಕುಗಳು ದಿವಾಳಿತನದ ಅಪಾಯದ ದವಡೆಯಿಂದ ಪಾರಾದವು.ಇಲ್ಲವೇ ಇವುಗಳು ನಷ್ಟದ ಪರಿಸ್ಥಿಯಲ್ಲಿ ಬ್ಯಾಂಕ್ ಹೋಲ್ಡಿಂಗ್ ಕಂಪೆನಿಗಳಾಗಿ ಪರಿವರ್ತನೆ ಅನುಭವಿಸಿ [೬] ದಿಕ್ಕೆಡಲಿಲ್ಲ

ಬಡ್ಡಿದರದ ಸಂಭವನೀಯ ಘರ್ಷಣೆ[ಬದಲಾಯಿಸಿ]

ಬ್ಯಾಂಕಿನ ವಿವಿಧ ವಿಭಾಗಳ ನಡುವೆ ಬಡ್ಡಿದರದ ಬಗ್ಗೆ ಹಾಗು ಅದರ ಮೂಲಸಾಮರ್ಥ್ಯದ ಕುರಿತಂತೆ ಘರ್ಷಣೆ ಅಥವಾ ತಿಕ್ಕಾಟಗಳು ಆಗಬಹುದು.ಇಲ್ಲಿನ ಹಣಕಾಸಿನ ಚಲಾವಣೆಯಲ್ಲಿನ ಆಗುಹೋಗುಗಳು ಹಾಗು ಮಾರುಕಟ್ಟೆಯ ದುರ್ಬಳಕೆಯಾಗದಂತೆ ನಿಗಾ ವಹಿಸಬೇಕಾಗಿರುವುದು ಅತ್ಯವಶ್ಯವಾಗಿದ. ಬಂಡವಾಳ ಹೂಡಿಕೆ ಬ್ಯಾಂಕ್ ಗಳ ಯುನೈಟೆಡ್ ಕಿಂಗಡಮ್FSA ಮತ್ತು ಯುನೈಟೆಡ್ ಸ್ಟೇಟ್ಸ್SECಗಳು ಬ್ಯಾಂಕುಗಳು ತಮ್ಮ ಕಾರ್ಯಚಟುವಟಿಕೆಗಳಲ್ಲಿ ಚೀನಾ ಗೋಡೆಯನ್ನು ನಿರ್ಮಿಸುವಂತೆ ಆಗ್ರಹಪಡಿಸುತ್ತವೆ.ಈ ಬ್ಯಾಂಕುಗಳು ಒಂದೆಡೆ ಈಕ್ವಿಟಿಗಳ ಸಂಶೋಧನೆ ಇನ್ನೊಂದೆಡೆ ವ್ಯಾಪಾರ ನಡೆಸುವುದನ್ನು ಸರಿಯಾದ ರೀತಿಯಲ್ಲಿ ವರ್ಗೀಕರಿಸುವ ಬಗ್ಗೆ ಕೂಗು ಕೇಳಿ ಬರುತ್ತಿದೆ.ಇವುಗಳ ಮೇಲೆ ನಿರ್ಬಂಧವನ್ನು ಹೇರುವಂತೆ ಈ ನಿಯಂತ್ರಣ ಸಂಸ್ಥೆಗಳು ನಿಯಮಗಳನ್ನು ರಚಿಸಿವೆ.

ಬಂಡವಾಳ ಹೂಡಿಕೆ ಬ್ಯಾಂಕಿನ ಬಡ್ಡಿದರದ ಬಗ್ಗೆ ಕೆಲವು ವಿವಾದಗಳನ್ನು ಗುರ್ತಿಸಲಾಗಿದೆ:ಅವುಗಳನ್ನು ಹೀಗೆ ಇಲ್ಲಿ ಪಟ್ಟಿ ಮಾಡಲಾಗಿದೆ.

 • ಹಿಂದಿನಿಂದಲೂ ಈಕ್ವಿಟಿ ಸಂಶೋಧನಾ ಸಂಸ್ಥೆಗಳು ಬಂಡವಾಳ ಹೂಡಿಕೆ ಬ್ಯಾಂಕುಗಳಿಂದಲೇ ಸ್ಥಾಪಿಸಲ್ಪಟ್ಟು ಅವುಗಳೇ ಬ್ಯಾಂಕುಗಳೇ ಮಾಲಿಕತ್ವ ಹೊಂದಿವೆ. .ಬಂಡವಾಳ ಹೂಡಿಕೆ ಬ್ಯಾಂಕ್ ಗಳ ಲಾಭದ ಮಟ್ಟ ಹೆಚ್ಚಿಸಲು ಈಕ್ವಿಟಿ ವಿಶ್ಲೇಷಣಾಕಾರರು ಕಂಪೆನಿಗಳ ರಕ್ಷಣಾ ಕವಚ ಮತ್ತು ಭದ್ರತೆ ಕುರಿತಂತೆ ಸಂಬಂಧಗಳ ಅಭಿವೃದ್ಧಿಗೆ ಒತ್ತು ನೀಡುತ್ತಾರೆ.ಇದು ಬ್ಯಾಂಕುಗಳ ವ್ಯವಹಾರದ ಲಾಭಾಂಶ ಹೆಚ್ಚಳಕ್ಕೂ ದಾರಿ ಮಾಡಿಕೊಡುತ್ತದೆ. ಇಸವಿ 1990 ರಲ್ಲಿ ಬಂಡವಾಳ ಹೂಡಿಕೆ ಬ್ಯಾಂಕ್ ಗಳಿಗಾಗಿ ನೇರ ವ್ಯಾಪಾರ ವಹಿವಾಟಿಗೆ ಈಕ್ವಿಟಿ ಸಂಶೋಧಕರು ಷೇರುಗಳ ದರ ನಿಗದಿ ವಿಷಯದಲ್ಲಿ ಇವುಗಳಿಗೆ ನೆರವಾದರು. ತಮ್ಮ ಷೇರುಗಳಿಗೆ ಆದ್ಯತೆಗನುಗುಣವಾಗಿ ಉತ್ತಮ ಬೆಲೆ ನಿಗದಿ ಮಾಡದಿದ್ದರೆ ಬಂಡವಾಳ ಹೂಡಿಕೆ ಬ್ಯಾಂಕ್ ಗಳ ಕಾರ್ಯಚಟುವಟಿಕೆಗಳನ್ನು ಪೈಪೋಟಿದಾರರಿಗೆ ವಹಿಸುವುದಾಗಿ ಕಂಪೆನಿ ಮಾಲಿಕರುಗಳು ಎಚ್ಚರಿಸಿದ್ದಾರೆ. ಇಂತಹ ಚಟುವಟಿಕೆಗಳನ್ನು ಅಪರಾಧಗಳನ್ನಾಗಿ ಪರಿಗಣಿಸುವ ಕಾನೂನುಗಳನ್ನು ರಾಜಕಾರಣಿಗಳು ಉತ್ಸಕರಾಗಿದ್ದಾರೆ. ನಿಯಂತ್ರಣ ನಿಯಮಗಳು ಮತ್ತು ಹಲವಾರು ಸರಣಿ ಕಾನೂನುಗಳು,ಕಂಪೆನಿಗೆ ಸಂಬಂಧಿಸಿದ ಅಂತಿಮ ನಿರ್ಧಾರಗಳು ಮತ್ತು ಕಾನೂನು ಮೊಕದ್ದಮೆಗಳು ಅಲ್ಲದೇ 2001ರ ಷೇರುಪೇಟೆಯಲ್ಲಿನ ಅಸ್ಥಿರತೆ ಇಂದು ಈ ಬ್ಯಾಂಕುಗಳ ವ್ಯವಹಾರವನ್ನು [ಸಾಕ್ಷ್ಯಾಧಾರ ಬೇಕಾಗಿದೆ]ಮೊಟಕುಗೊಳಿಸಿವೆ.
 • ಹಲವಾರು ಬಂಡವಾಳ ಹೂಡಿಕೆ ಬ್ಯಾಂಕುಗಳು ಸ್ವಂತವಾಗಿ ಸಣ್ಣ ಪ್ರಮಾಣದ ದಲ್ಲಾಳಿ ವಹಿವಾಟನ್ನು ನಡೆಸುತ್ತವೆ. ಕೆಲವು ಸಣ್ಣ ದಲ್ಲಾಳಿಸಂಸ್ಥೆಗಳು 1990ರಲ್ಲಿ ಯಾವುದೇ ಹೊಣೆಗಾರಿಕೆಯಅಂಶಗಳನ್ನು ಗ್ರಾಹಕರಿಗೆ ಷೇರುಗಳನ್ನು ಮಾರಾಟ ಮಾಡಿದರು. ಇಂತಹ ಪ್ರವೃತ್ತಿಯು ಬಂಡವಾಳ ಹೂಡಿಕೆ ಬ್ಯಾಂಕುಗಳ ವಹಿವಾಟಿಗೆ ದಾರಿ ಮಾಡಿಕೊಟ್ಟಿತು.ಇನ್ನೂ ಸಾರ್ವಜನಿಕ ವಲಯದಲ್ಲಿ ಹೆಚ್ಚುವರಿ ಷೇರುಗಳ ಬಿಡುಗಡೆಗೂ ಅವಕಾಶ ಮಾಡಿ ಸಾರ್ವಜನಿಕರ ಹಿತಕಾಪಾಡಿ ಷೇರುಗಳ ವಿತರಣೆಗೆ ಅನುವು ಮಾಡಿಕೊದಲಾಯಿತು.
 • ಬಂಡವಾಳ ಹೂಡಿಕೆ ಬ್ಯಾಂಕುಗಳು ಯಾವಾಗ ತಮ್ಮ ಖಾತೆಗಳಲ್ಲಿನ ವ್ಯಾಪಾರ-ವಹಿವಾಟಿಗಾಗಿ ತೊಡಗಿಕೊಂಡವೋ ಆಗ ವ್ಯಾಪಾರಿ ವಲಯದಲ್ಲಿ ಇವುಗಳು ಒಂದಿಲ್ಲೊಂದು ರೀತಿಯಲ್ಲಿ ಪ್ರಲೋಭನೆಗೆ ಒಳಗಾಗಿ ಮುಂಚೂಣಿ ಬಂಡವಾಳ ಹೂಡಿಕೆ ಬ್ಯಾಂಕುಗಳಾಗಿ ಮಾರ್ಪಟ್ಟವು. ಮುಂಚೂಣಿಯಲ್ಲಿರುವುದು ಷೇರು ದಲ್ಲಾಳಿಗಳಿಗೆ ಅನಧಿಕೃತವೆನಿಸುತ್ತದೆ,ಆದರೆ ಈ ಬ್ಯಾಂಕುಗಳು ತಮ್ಮದೇ ಅಸ್ತಿತ್ವಕ್ಕಾಗಿ ಷೇರು ವಹಿವಾಟಿಗೆ ಕೈಹಾಕುವುದು ಕೂಡ ಅವರ ಗ್ರಾಹಕರ ಹಿತದೃಷ್ಟಿಯಿಂದ ಅಷ್ಟಾಗಿ ಸೂಕ್ತವಾದುದಲ್ಲ ಎಂದೇ ಹೇಳಬೇಕಾಗುತ್ತದೆ ದರ ವ್ಯತ್ಯಾಸಗಳ ಆದೇಶಗಳನ್ನು ಮುಂಚೂಣಿಯಲ್ಲಿರುವವರು ಗಮನಿಸುವುದು ಅನಿವಾರ್ಯವಾಗುತ್ತದೆ.

ಹೆಚ್ಚಿನ ಓದಿಗೆ[ಬದಲಾಯಿಸಿ]

 • DePamphilis, Donald (2008). Mergers, Acquisitions, and Other Restructuring Activities. New York: Elsevier, Academic Press. p. 740. ISBN 978-0-12-374012-0. {{cite book}}: Cite has empty unknown parameter: |coauthors= (help)
 • Cartwright, Susan (2006). "Thirty Years of Mergers and Acquisitions Research: Recent Advances and Future Opportunities". British Journal of Management. 17 (S1): S1–S5. doi:10.1111/j.1467-8551.2006.00475.x. {{cite journal}}: Cite has empty unknown parameter: |month= (help); Unknown parameter |coauthors= ignored (|author= suggested) (help)
 • Harwood, I. A. (2006). "Confidentiality constraints within mergers and acquisitions: gaining insights through a 'bubble' metaphor". British Journal of Management. 17 (4): 347–359. doi:10.1111/j.1467-8551.2005.00440.x. {{cite journal}}: Cite has empty unknown parameters: |month= and |coauthors= (help)
 • Rosenbaum, Joshua (2009). Investment Banking: Valuation, Leveraged Buyouts, and Mergers & Acquisitions. Hoboken, NJ: John Wiley & Sons. ISBN 0-470-44220-4. {{cite book}}: Unknown parameter |coauthors= ignored (|author= suggested) (help)
 • Straub, Thomas (2007). Reasons for frequent failure in Mergers and Acquisitions: A comprehensive analysis. Wiesbaden: Deutscher Universitätsverlag. ISBN 9783835008441. {{cite book}}: Cite has empty unknown parameter: |coauthors= (help)
 • Scott, Andy (2008). China Briefing: Mergers and Acquisitions in China (2nd ed.).

ಆಕರಗಳು[ಬದಲಾಯಿಸಿ]

 1. U.S. ಷೇರುಗಳು ಮತ್ತು ವಿನಿಮಯ ಆಯೋಗ
 2. [39] ^ ಮರ್ಜೆಂಟ್‌ ಬ್ಯಾಂಕಿಂಗ್‌: ಪಾಸ್ಟ್‌ ಆಂಡ್ ಪ್ರಸೆಂಟ್‌
 3. http://asiapaccareers.jpmorgan.com/content/content_298.html
 4. [೧] Archived 2009-02-25 ವೇಬ್ಯಾಕ್ ಮೆಷಿನ್ ನಲ್ಲಿ. ಬ್ಯಾಂಕಿಂಗ್ ಸಿಟಿ ಬಿಸಿನೆಸ್ ಸಿರೀಸ್{/1
 5. "ಮೊರ್ಗನ್ ಸ್ಟೇನ್ಲಿಈ ರಿಯಲ ಎಸ್ಟೇಟ್ ಲೆಂಡಿಂಗ್". Archived from the original on 2009-02-25. Retrieved 2010-01-07.
 6. http://business.timesonline.co.uk/tol/business/industry_sectors/banking_and_finance/article4800550.ece

ಇದನ್ನೂ ಗಮನಿಸಿ[ಬದಲಾಯಿಸಿ]