ಫಿರೋಝ್ ಗಾಂಧಿ
ಫಿರೋಝ್ ಗಾಂಧಿ | |
ಜನನ | |
---|---|
ಮರಣ | 8 September 1960 | (aged 47)
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಜೀವನಸಂಗಾತಿ | ಇಂದಿರಾ ಗಾಂಧಿ |
ಧರ್ಮ | ಪಾರ್ಸಿ |
ಫಿರೋಝ್ ಗಾಂ (ಆಗಸ್ಟ್ ೧೨ |
೧೯೧೨ - ಸೆಪ್ಟೆಂಬರ್ ೮, ೧೯೬೦
ಒಬ್ಬ ಭಾರತೀಯ ರಾಜಕಾರಣಿ ಮತ್ತು ಪತ್ರಕರ್ತರಾಗಿದ್ದರು. ಇವರು ಭಾರತದ ಸಂಸತ್ ಸದಸ್ಯರಾಗಿದ್ದು, ಭಾರತದ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಪತಿಯಾಗಿದ್ದು, ಸಂಜಯ್ ಗಾಂಧಿ ಮತ್ತು ಭಾರತದ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ತಂದೆ.
ಜೀವನದ ಮೊದಲ ಘಟ್ಟಗಳು
[ಬದಲಾಯಿಸಿ]ಫಿರೋಝ್ ಗಾಂಧಿ, ಒಬ್ಬ ಭಾರತದ ರಾಜಕಾರಣಿ ; ಹಾಗೂ ಪತ್ರಿಕೋದ್ಯಮಿ. ಅವರು ಆಜಾದ್ ಭಾರತದ ಪಾರ್ಲಿಮೆಂಟ್ ನ ಪ್ರಥಮ ಸದಸ್ಯರಲ್ಲೊಬ್ಬರು. ಮಾಜಿ ಪಂತ ಪ್ರಧಾನಿ, ಶ್ರೀಮತಿ. ಇಂದಿರಾ ಗಂಧಿಯವರ ಪತಿ, ಹಾಗೂ ಮಾಜೀ ಪ್ರಧಾನಿ, ರಾಜೀವ್ ಗಾಂಧಿಯವರ ತಂದೆ. ಅವರ ಬಾಲ್ಯದ ಹೆಸರು, "Feroze Gandhy," ಯೆಂದು. ಗುಜರಾತಿ ಭಾಷೆಮಾತನಾಡುವ ಪಾರ್ಸಿ ಪರಿವಾರದಲ್ಲಿ ಜನಿಸಿದರು. ತಂದೆ '(ಝೆಹಾಂಗೀರ್ ಗಾಂಧಿ)', ಆಗಿನ ಕಾಲದ ಬೇರೆಪಾರ್ಸಿಗಳೆಲ್ಲರ ತರಹ, ಫಿರೋಝ್, ಹಿಂದು ಸರ್ ನೇಮ್ ಇಟ್ಟುಕೊಂಡಿದ್ದರು. ಉದಾಹರಣೆಗೆ, ಪಾರ್ಸಿಗಳಲ್ಲಿ ಸಾಮಾನ್ಯವಾದ ಬಳಕೆಯಲ್ಲಿರುವ ಹೆಸರುಗಳೆಂದರೆ, 'ಶ್ರೋಫ್,' ಪದವನ್ನು ಹಿಂದು ಮತ್ತು ಪಾರ್ಸಿಗಳೆರದರಲ್ಲೂ ಇದನ್ನು ಬಳಸುತ್ತಾರೆ. ಫಿರೋಜ್ ರವರ ವಿದ್ಯಾಭ್ಯಾಸವೆಲ್ಲ, ನಗರದ 'City Anglo-Vernacular High School' ಮತ್ತು, 'Ewing Christian College', ನಲ್ಲಿನಡೆಯಿತು. ನಂತರದ ಓದು, ಇಂಗ್ಲೆಂಡ್ ನ '(London School of Economics)' ಲಂಡನ್ ಸ್ಕೂಲ್ ಆಫ್ ಎಕೊನೊಮಿಕ್ಸ್, ನಲ್ಲಿ ನಡೆಯಿತು. ೧೯೩೦ ರಲ್ಲಿ, ಫಿರೋಝ್ ಗಾಂಧಿಯವರು ಕಾಲೇಜ್ ವಿದ್ಯಾಬ್ಯಾಸವನ್ನು ಬಿಟ್ಟು, ದೇಶದ ಸ್ವಾತಂತ್ರ ಸಮರದಲ್ಲಿ ಧುಮುಕಿ, ಅದರಲ್ಲಿ ಸಕ್ರಿಯವಾಗಿ ಭಾಗಗೊಂಡರು. ಫಿರೋಜ್, ನೆಹ್ರೂ ಪರಿವಾರದ ಜೊತೆ ಸಂಪರ್ಕ ಬೆಳೆಯುತು. ಕಮಲ ನೆಹ್ರು ಮತ್ತು ಇಂದಿರ ಜೊತೆ, ಸಲಿಗೆಬೆಳೆಯಿತು.
ಇಂದಿರಾರೊಂದಿಗೆ ವಿವಾಹ
[ಬದಲಾಯಿಸಿ]ಕಮಲನೆಹ್ರೂರವರ ಕಾಯಿಲೆಸಮಯದಲ್ಲಿ, ಅವರಿಗೆ ಸಹಾಯಮಾಡಲು, ನೆಹ್ರೂ ಪರಿವರದಜೊತೆ, ಅವರು ಯೂರೊಪ್ ಗೆ, ಪ್ರಯಾಣಮಾಡಿದರು. ಇಂಗ್ಲೆಂಡ್ ನಲ್ಲಿ ಕಾಲೇಜ್ ನಲ್ಲಿ ವಿದ್ಯಾಭ್ಯಾಸಮಾಡುವ ಸಮಯದಲ್ಲಿ ಇಂದಿರಾನೆಹೃ ಮತ್ತು ಫಿರೋಝ್, ಹತ್ತಿರವಾದರು. ಆ ಬೆಳವಣಿಗೆ, ಪ್ರೀತಿಯಲ್ಲಿ ತಿರುಗಿ, ಮದುವೆಯಬಗ್ಗೆ ಇಂದಿರ, ಪ್ರಸ್ತಾಪಿಸಿದಾಗ, ಕಮಲನೆಹ್ರೂ ಯಾಕೋ ಇಷ್ಟಪಡಲಿಲ್ಲ. ಒಬ್ಬಳೇ ಮಗಳ ವಿವಾಹವನ್ನು ಅದ್ಧೂರಿಯಾಗಿ ನೆರವೇರಿಸುವ ಮಹದಾಶೆಯನ್ನು ಅವರು ಇಟ್ಟುಕೊಂಡಿದ್ದರೆಂದು ತೋರಿತು.
ಕ್ವಿಟ್ ಇಂಡಿಯಾ ಚಳುವಳಿ
[ಬದಲಾಯಿಸಿ]'(Quit India Movement)' 'ಬ್ರಿತಿಷರೇ ಭಾರತಬಿಟ್ಟು ತೊಲಗಿ', ಎನ್ನುವ ಆಂದೋಳನದಸಮಯದಲ್ಲಿ, 'ಫಿರೋಝ್ ಗಾಂಧಿ' ಯವರನ್ನು ಬಂಧಿಸಲಾಗಿತ್ತು. ೬ ತಿಂಗಳು ಜೈಲು ವಾಸವನ್ನೂ ಫಿರೋಝ್ ಗಾಂಧಿಯವರು ಅನುಭವಿಸಿದ್ದರು. ಮದುವೆಯಾದಮೇಲೂ, ಇಲಹಾಬಾದಿನ " ನೈನಿ ಸೆಂಟ್ರೆಲ್ ಜೈಲ್," ನಲ್ಲಿ ಅವರನ್ನು ೧ ವರ್ಷಕಾಲ, ಬಂಧಿಸಿ, ಕೈದಿಯಾಗಿ ಇಡಲಾಗಿತ್ತು. ಇಂದಿರ ಅವರನ್ನೂ ಜೈಲಿನಲ್ಲಿ ಬಂಧಿಸಲಾಗಿತ್ತು.
ಕುಟುಂಬ ಹಾಗೂ ರಾಜಕೀಯ
[ಬದಲಾಯಿಸಿ]ಇಂದಿರಾಗಂಧಿ ಫಿರೋಝ್ ಗಾಂಧಿ ದಂಪತಿಗಳಿಗೆ, ೧೯೪೪ ರಲ್ಲಿ ಭಾರತದ ಭವಿಷ್ಯದ ಪ್ರಧಾನಿ ರಾಜೀವ್ ಗಾಂಧಿ, ಜನಿಸಿದರು. ೧೯೪೬ ರಲ್ಲಿ ಸಂಜಯ್ ಗಾಂಧಿಯವರು, ಹುಟ್ಟಿದರು. ಇಂದಿರಾ ಗಾಂಧಿಯವರು, ತಮ್ಮ ಪತಿ ಮತ್ತು ಮಕ್ಕಳ ಜೊತೆ ಇಲಹಾಬಾದ್ ನಲ್ಲಿ ವಾಸ್ತವ್ಯ ಹೂಡಿದರು. ಫಿರೋಜ್ ಗಾಂಧಿಯವರು ತಮ್ಮ ಮಾವ, ಜವಹರ್ ಲಾಲ್ ನೆಹ್ರೂ ರವರು, ಹುಟ್ಟುಹಾಕಿದ ಪತ್ರಿಕೆ, "(The National Herald)", 'ದಿ ನ್ಯಾಷನಲ್ ಹೆರಾಲ್ಡ್' ನ ಸಂಪಾದಕರಾದರು. ಫಿರೋಜ್ ರವರು, ೧೯೫೨ ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಿನಿಂತು, ಸ್ವತಂತ್ರ ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ, ಉತ್ತರಪ್ರದೇಶದ 'ರಾಯ್ ಬರೇಲಿ' ಕ್ಷೇತ್ರ ದಿಂದ, ಚುನಾಯಿತರಾದರು. ಅವರ ಪ್ರೀತಿಯಪತ್ನಿ, ಇಂದಿರ, ಅವರಪರವಾಗಿ ಚುನಾವಣಾ ಪ್ರಚಾರಮಾಡಿದ್ದರು. ಫಿರೋಜ್ ಗಾಂಧಿ ಸಹಜವಾಗಿ ಗೆದ್ದರು. ಸ್ವತಂತ್ರ ಮನೋವೃತ್ತಿಯವರಾದ ಫಿರೋಜ್, ನೆಹ್ರುರವರ ನೀತಿಯನ್ನು ಹಲವೊಮ್ಮೆ ಖಂಡಿಸಿಮಾತಾಡುತ್ತಿದ್ದರು. ರಾಜಕೀಯವಲಯದಲ್ಲಿ ನಡೆಯುತ್ತಿದ್ದ ಹಲವಾರು, ಭ್ರಷ್ಟಾಚಾರಗಳಾದ, ಲಂಚ ಹಾಗೂ ಇತರ ದುರ್ವ್ಯವಹಾರಗಳನ್ನು ಖಡಾಖಂಡಿತವಾಗಿ, ವಿರೋಧಿಸಿ ಬಯಲಿಗೆಳೆಯುತ್ತಿದ್ದರು.
ವಿತ್ತಸಚಿವ, 'ಟಿ. ಟಿ.ಕ್ರಿಷ್ಣಮಾಚಾರಿ' ಯವರ, ರಾಜೀನಾಮೆ :
[ಬದಲಾಯಿಸಿ]ಆಗಿನ ಸಮಯದಲ್ಲಿ ವಿತ್ತಮಂತ್ರಿಯಾಗಿದ್ದ, ಟಿ.ಟಿ ಕ್ರಿಷ್ಣಮಾಚಾರಿಯವರನ್ನೂ, ಮತ್ತು 'ಜೀವವಿಮೆ ಕಂಪೆನಿ' ಗಳಲ್ಲಿ ಆಗಿರುವ ಹಣದ ಹೇರಾಫೇರಿಗಳನ್ನು ಧರ್ಯವಾಗಿ, ಬಹಿರಂಗವಾಗಿ ಅಂದಿನ ಲೋಕಸಭೆಯಲ್ಲಿ, ಖಂಡಿಸಿಮಾತಾಡಿದರು. ಇಂತಹ ವದಂತಿಗಳನ್ನು ಬಯಲಿಗೆಳೆದು, ಅವರ ತರಹ ದಿಟ್ಟವಾಗಿ ಹೊಡೆದಾಡುವ ಸಾಹಸವನ್ನು ಯಾರೂಮಾಡುತ್ತಿರಲಿಲ್ಲ. ಟಿ.ಟಿ.ಕೆಯವರು, ರಾಜಿನಾಮೆ ಸಲ್ಲಿಸಲೇಬೇಕಾಯಿತು. ಇಂತಹ ಇನ್ನೂ ಹಲವಾರು ರಾಜಕೀಯ ಬೆಳವಣಿಗೆಗಳು, ನೆಹ್ರೂ ರವರ ಹೆಸರನ್ನು ಹಾಗೂ ಅವರ ಜನಪ್ರಿಯತೆಯನ್ನು ಕುಲಗೆಡಿಸುತ್ತಿರುವುದೆಂಬ ಮಾತುಗಳು ಅಂದಿನ ಕಾಂಗ್ರೆಸ್ ಪಕ್ಷಕ್ಕೆ ತೋರಲಾರಂಭಿಸಿತು. ಇಂದಿರಾರವರಿಗೂ, ತಂದೆಯವರನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಣೆಹ್ರೂರವಿಗೂ ಕಸಿವಿಸಿಯಾಯಿತು. ಒಂದು ಕಡೆ, ತವರುಮನೆಯ ವಾತ್ಸಲ್ಯ, ಇನ್ನೊಂದು ಕಡೆ ಪ್ರೀತಿಯ ಪತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಪ್ರಸಂಗಗಳು, ಯಾವ ಹೆಣ್ಣಿಗಾದರೂ ತೊಡಕಾದ ಸಂದಿಗ್ಧ ಸನ್ನಿವೇಶಗಳು. ಇದನ್ನು ಎದುರಿಸಲು ಇಂದಿರಾ ಸ್ವಲ್ಪಕಾಲ ಹೆಣಗಬೇಕಾಯಿತು. ಕೊನೆಗೆ, ಅವರು ತಮ್ಮ ತಂದೆಯವರಿಗೇ ಹೆಚ್ಚಿನ ಸಹಕಾರನೀಡಲು ಮುಂದೆ ಬಂದರು. ಫಿರೋಜ್, ತಮ್ಮದೇ ಆದ ಒಂದು ಗುಂಪನ್ನು ನಿರ್ಮಿಸಿಕೊಂಡು, ಸರ್ಕಾರದ ವಿರುದ್ಧ ಹೋರಾಡಲು ಶುರುಮಾಡಿದರು. ೧೯೫೭ ರ ಚುನಾವಣೆಯಲ್ಲಿ ಪುನಃ ಗೆದ್ದು ಪಾರ್ಲಿಮೆಂಟ್ ಗೆ ವಾಪಸ್ಸಾಗಿ ಬಂದರು. ೧೯೫೮ ನೆಯ ಇಸವಿಯಲ್ಲಿ, ಪ್ರಥಮಬಾರಿ ಅವರಿಗೆ ಹೃದಯಾಘಾತವಾಯಿತು. ಪತ್ನಿ, ಇಂದಿರಾರವರು ಪತಿ, ಫಿರೋಜ್ ರವರನ್ನೂ ಈಬ್ಬರು ಪುಟ್ಟ ಮಕ್ಕಳ ಸಮೇತ, ಹವಾ ಬದಲಾವಣೆಗಾಗಿ, ಕಾಶ್ಮೀರ್ ಕ್ಕೆ ಕರೆದೊಯ್ದರು. ಆದರೆ ೧೯೬೦ ರಲ್ಲಿ, ಫಿರೋಝ್ ರವರ ಹೃದಯರೋಗ ಮರುಕಳಿಸಿದ್ದು ಮತ್ತೊಂದು ಹೃದಯಾಘಾತದಲ್ಲಿ ಫಿರೋಝ್ ಗಾಂಧಿಯವರು ತಮ್ಮ ಅಸುನೀಗಿದರು.
ಸ್ವಾತಂತ್ರ್ಯಪೂರ್ವದ, 'ಭಾರತೀಯ ಪಾರ್ಲಿಮೆಂಟ್,' ನ ಸ್ವರೂಪ- ಎಲ್ಲಾ ಹೊಸದು, :
[ಬದಲಾಯಿಸಿ]ಫಿರೋಝ್ ಗಾಂಧಿ, 'ಜವಹರ್ ಲಾಲ್ ನೆಹ್ರು' ರವರಂತಹ ಪ್ರಚಂಡ ಜನಪ್ರಿಯ ನಾಯಕನ ವಿರುದ್ಧ, ಚಕಾರವೆತ್ತುವ ಸಾಹಸ ಮಾಡಿದ್ದು, ಕೆಲವು ವೈಮನಸ್ಯಕ್ಕೆ ಎಡೆಮಾಡಿಕೊಟ್ಟಿತ್ತು.
'ಜವಹರ್ಲಾಲ್ ನೆಹೃ,' ರವರ, ಪ್ರಚಂಡ ಜನಪ್ರಿಯತೆ, ಹಾಗೂ ಅವರ 'ವರ್ಚಸ್ಸು' :
[ಬದಲಾಯಿಸಿ]ನೆಹ್ರೂ ಸಮಯದ ರಾಜಕಾರಣವೆಂದರೆ, ಆಗಿನ್ನೂ ಪ್ರಜಾಪ್ರಭುತ್ವ ಮೊಳಕೆಯೊಡೆದು ಭೄಣಾಂಕುರವಾಗುತ್ತಿದ್ದ ಸಂಕೀರ್ಣ ಸಮಯ. ಭಾರತದ ಪಾರ್ಲಿಮೆಂಟ್ ನಲ್ಲಿ ಹೆಸರಿಗೆ 'ವಿರೋಧಪಕ್ಷ' ವಿತ್ತಷ್ಟೆ. ಕಾಂಗ್ರೆಸ್ ನ ಬಹುಮತವಿದ್ದದ್ದರಿಂದ ಮಸೂದೆಗಳಲ್ಲಾ ಸಲೀಸಾಗಿ ಕಾನೂನಿನರೂಪ ಪಡೆಯುತ್ತಿದ್ದವು. ನೆಹ್ರೂ ರವರದು ಮೇರುವ್ಯಕ್ತಿತ್ವ. ಯಾವತೊಂದರೆಯೂ ಇಲ್ಲದೆ ಎಂಥಹ ಕಠಿಣ ಪರಿಸ್ಥಿತಿಯನ್ನೂ ಅವರು ಎದುರಿಸುವಷ್ಟು ಅವರಲ್ಲಿ ಧಾರ್ಢ್ಯವಿತ್ತು. ಜನಗಳು ನೆಹ್ರೂ ರವರಮಾತಿಗೆ ಅತ್ಯಂತ ಬೆಲೆಕೊಡುತ್ತಿದ್ದರು. ಈಗಿನಂತೆ, ಸದಸ್ಯರಿಗೆ ತಮ್ಮ ವಾದವನ್ನು ಮಂಡಿಸಲು, ಸಾಭಾತ್ಯಾಗ, ಚಿರಾಟ, ಹೊಡೆದಾಟಗಳ ಇತ್ಯಾದಿಗಳ ಅಗತ್ಯವಿರಲಿಲ್ಲ. ಆದರೆ, ಎಲ್ಲರೂ ತಮ್ಮ ಮಾತನ್ನೇ ಕೇಳಬೇಕೆನ್ನುವ 'ಅಹಂ' ನೆಹ್ರೂರವರ ಮನಸ್ಸಿನಲ್ಲಿ ಬೇರೂರಿರಲು ಸಾಧ್ಯ. ಇಂತಹ ಸನ್ನಿವೇಶದಲ್ಲಿ ಬಿಸಿರಕ್ತದ, ಫಿರೋಝ್ ಗಾಂಧಿಯವರ ಮಾತುಗಳು, ಅಸಂಬದ್ಧವಾಗಿ ತೋರಿರಲೂ ಸಾಕು. ಬಹುಶಃ ಇಂತಹ ಭೂಮಿಕೆಯಲ್ಲಿ, ಕೆಲಸಮಾಡುವಾಗ ಕೆಲವು ಅನಿವಾರ್ಯತೆಗಳು ಉದ್ಭವಿಸಿರಬಹುದು. ಇವೆಲ್ಲಾ ಚರಿತ್ರೆಯ ವಿರೋಧಾಭಾಸಗಳು.