ಪ್ರೇರಣಾ ಕೊಹ್ಲಿ
ಡಾ. ಪ್ರೇರಣಾ ಕೊಹ್ಲಿ | |
---|---|
ಜನನ | ಅಲಿಘರ್, ಉತ್ತರ ಪ್ರದೇಶ, ಭಾರತ | ೨೧ ಡಿಸೆಂಬರ್ ೧೯೬೫
ಶಿಕ್ಷಣ ಸಂಸ್ಥೆ | ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ (ಎ.ಎಮ್.ಯು) |
ವೃತ್ತಿ(ಗಳು) | ಕ್ಲಿನಿಕಲ್ ಸೈಕಾಲಜಿಸ್ಟ್ ಸಾಮಾಜಿಕ ಕಾರ್ಯಕರ್ತೆ |
ಜಾಲತಾಣ | www |
ಡಾ. ಪ್ರೇರಣಾ ಕೊಹ್ಲಿ ಕ್ಲಿನಿಕಲ್ ಸೈಕಾಲಜಿಸ್ಟ್, ಸಾಮಾಜಿಕ ಕಾರ್ಯಕರ್ತೆ ಮತ್ತು ಲೇಖಕಿ. ಮಾನಸಿಕ ಆರೋಗ್ಯದ ಕುರಿತಾದ ಅವರ ಕೆಲಸಕ್ಕಾಗಿ ಅವರು ೨೦೧೬ ರಲ್ಲಿ ಭಾರತದ ರಾಷ್ಟ್ರಪತಿಗಳಿಂದ 'ಭಾರತದ ೧೦೦ ಮಹಿಳಾ ಸಾಧಕರು' ಪ್ರಶಸ್ತಿಯನ್ನು ಪಡೆದರು. [೧] [೨]
ವೃತ್ತಿ
[ಬದಲಾಯಿಸಿ]ಕೊಹ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ (ಎ.ಎಮ್.ಯು) ಕ್ಲಿನಿಕಲ್ ಸೈಕಾಲಜಿಯಲ್ಲಿ ಪಿಎಚ್‌ಡಿ ಮುಗಿಸಿದರು. ೧೯೯೪ ರಲ್ಲಿ ಗುರುಗ್ರಾಮ್‌ನಿಂದ ಅಭ್ಯಾಸವನ್ನು ಪ್ರಾರಂಭಿಸಿದರು. [೩] ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಆಫ್ ಇಂಡಿಯಾ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗದಂತಹ ವಿವಿಧ ಸರ್ಕಾರಿ ಸಮಿತಿಗಳಿಗೆ ಕೊಹ್ಲಿ ಸಲಹೆ ನೀಡಿದ್ದಾರೆ. [೪] [೫]
ಕೊಹ್ಲಿ ಮಾನಸಿಕ ಆರೋಗ್ಯದ ಕುರಿತು ಸೈಕಾಲಜಿಸ್ಟ್ ಮ್ಯೂಸಿಂಗ್ಸ್ ಎಂಬ ಪುಸ್ತಕದ ಲೇಖಕರಾಗಿದ್ದಾರೆ. [೬] [೭] ಅವರು ಜೈಲು ಕೈದಿಗಳಿಗೆ ಹಾಗೂ ತಿಹಾರ್ ಜೈಲು ಮತ್ತು ಅಲಿಗಢ ಜೈಲಿನ ಜೈಲು ಅಧಿಕಾರಿಗಳಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡಿದ್ದಾರೆ. [೮]
೨೦೧೬ರ ಜನವರಿಯಲ್ಲಿ ಅವರು ಅಂದಿನ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ದೇಶದ ಅಗ್ರ ೧೦೦ ಮಹಿಳಾ ಸಾಧಕರಲ್ಲಿ ಒಬ್ಬರಾಗಿ ಗೌರವಿಸಲ್ಪಟ್ಟರು. [೯]
ಸಹ ನೋಡಿ
[ಬದಲಾಯಿಸಿ]- ರಾಧಿಕಾ ಚಂದಿರಮಣಿ
- ಇಂದಿರಾ ಶರ್ಮಾ
- ಭಾರ್ಗವಿ ದಾವರ್
ಉಲ್ಲೇಖಗಳು
[ಬದಲಾಯಿಸಿ]- ↑ "Making People Self-Reliant through a Psycho-Spiritual Approach". healthcare.siliconindia.com. India: Siliconindia.com. Retrieved 16 August 2021.
- ↑ "Dr. Prerna Kohli - The Times of India". Retrieved 16 August 2021.
- ↑ Mastakar, Manasi Y (2021-03-06). "Women's Day 2021: Dr Prerna Kohli talks about spreading awareness about mental health". The Free Press Journal. Retrieved August 16, 2021.
{{cite journal}}
: Cite journal requires|journal=
(help) - ↑ "Don't let the walls close in". indiatoday.in. July 13, 2020. Retrieved 16 August 2021.
- ↑ "Dr. Prerna Kohli: Being Happy - TED Talk". Retrieved 16 August 2021.
- ↑ Psychologist Musings book by Prerna Kohli. Retrieved 16 August 2021.
- ↑ Psychologist Musings book by Dr. Prerna Kohli.
- ↑ Agha, Eram (February 27, 2016). "Understaffed and overworked, Aligarh prison guards lead stressful lives". timesofindia.indiatimes.com (in ಇಂಗ್ಲಿಷ್). Retrieved 16 August 2021.
- ↑ Dhawan, Himanshi (January 23, 2016). "On 'Beti Bachao' anniversary, President Pranab Mukherjee hosts 100 women achievers". timesofindia.indiatimes.com (in ಇಂಗ್ಲಿಷ್). Retrieved 16 August 2021.