ವಿಷಯಕ್ಕೆ ಹೋಗು

ಮಾನಸಿಕ ಆರೋಗ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅದರ ಯಾವುದೇ ರೂಪಗಳಲ್ಲಿ ಅಧಿಕಾರ ಚಲಾಯಿಸುವವರ ಮೇಲೆ ಪರಿಣಾಮ ಬೀರುವ ಭಾವನಾತ್ಮಕ ಅಸ್ವಸ್ಥತೆಗಳಿವೆ, ಅವುಗಳಲ್ಲಿ ಹಬ್ರಿಸ್ ಸಿಂಡ್ರೋಮ್, ಮೆಗಾಲೊಮೇನಿಯಾ, ಹಮಾರ್ಟಿಯಾ ಅಥವಾ ನಾರ್ಸಿಸಿಸಮ್ ಎದ್ದು ಕಾಣುತ್ತವೆ.

ಮಾನಸಿಕ ಆರೋಗ್ಯ ವು ,ಆರೋಗ್ಯಕರವಾಗಿರುವ ಗ್ರಹಣಶಕ್ತಿಯ ಅಥವಾ ಭಾವನೆಯ ಮಟ್ಟವನ್ನು ಅಥವಾ ಮಾನಸಿಕ ಅಸ್ವಸ್ಥತೆ ಇಲ್ಲದಿರುವುದನ್ನು ವಿವರಿಸುತ್ತದೆ.[][] ರಚನಾತ್ಮಕ ಮನೋವಿಜ್ಞಾನ ಅಥವಾ ಸಮಗ್ರತಾ ಸಿದ್ಧಾಂತ ವಿಭಾಗದ ದೃಷ್ಟಿಕೋನಗಳಿಂದ ಮಾನಸಿಕ ಆರೋಗ್ಯ, ಜೀವನವನ್ನು ಅನುಭವಿಸಬಲ್ಲ ವ್ಯಕ್ತಿಯ ಸಾಮರ್ಥ್ಯವನ್ನು ಹಾಗು ಜೀವನದ ಚಟುವಟಿಕೆಗಳು ಮತ್ತು ಮನೋವೈಜ್ಞಾನಿಕ ಸ್ಥಿತಿಸ್ಥಾಪಕತ್ವ ವನ್ನು ಸಾಧಿಸಲು ಮಾಡುವ ಪ್ರಯತ್ನದ ನಡುವೆ ಸಮತೋಲನೆ ಗಳಿಸುವುದನ್ನು ಒಳಗೊಂಡಿದೆ.[] ಮಾನಸಿಕ ಆರೋಗ್ಯವೆಂಬುದು ನಮ್ಮ ಭಾವನೆಗಳ ಅಭಿವ್ಯಕ್ತಿಯಾಗಿದ್ದು, ಬೇಡಿಕೆಗಳ ವ್ಯಾಪ್ತಿಗೆ ಯಶಸ್ವಿಯಾಗಿ ಹೊಂದಿಕೊಳ್ಳುವುದನ್ನು ಸೂಚಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಮಾನಸಿಕ ಆರೋಗ್ಯವನ್ನು, " ವ್ಯಕ್ತಿಯು ಅವನಲ್ಲಿರುವ ಅಥವಾ ಅವಳಲ್ಲಿರುವ ಸಾಮರ್ಥ್ಯವನ್ನು ಗುರುತಿಸಿಕೊಳ್ಳಬಲ್ಲ, ಜೀವನದ ಸಹಜ ಒತ್ತಡದೊಂದಿಗೆ ಸಮರ್ಥವಾಗಿ ನಿಭಾಯಿಸಬಲ್ಲ , ಉತ್ಪಾದನಾತ್ಮಕವಾಗಿ ಮತ್ತು ಪ್ರಯೋಜನಕರವಾಗಿ ಕಾರ್ಯನಿರ್ವಹಿಸಬಲ್ಲ ಮತ್ತು ಅವನ ಅಥವಾ ಅವಳ ಸಮುದಾಯಕ್ಕೆ ಕೊಡುಗೆಯನ್ನು ಕೊಡಬಲ್ಲ ಆರೋಗ್ಯಕರವಾದ ಸ್ಥಿತಿಯಾಗಿದೆ" ಎಂದು ವ್ಯಾಖ್ಯಾನಿಸಿದೆ.[] ಮಾನಸಿಕ ಆರೋಗ್ಯದ ಮೇಲೆ ಯಾವುದೇ "ಅಧಿಕೃತ" ವ್ಯಾಖ್ಯಾನವಿಲ್ಲವೆಂದು ಹಿಂದೆ ಹೇಳಲಾಗಿತ್ತು. ಸಾಂಸ್ಕೃತಿಕ ಭಿನ್ನತೆಗಳು, ವ್ಯಕ್ತಿನಿಷ್ಠ ತೂಲನೆ ಮತ್ತು ಸ್ಪರ್ಧಾತ್ಮಕ ವೃತ್ತಿಪರ ಸಿದ್ಧಾಂತಗಳು, ಇವುಗಳೆಲ್ಲಾ "ಮಾನಸಿಕ ಆರೋಗ್ಯ" ವನ್ನು ಹೇಗೆ ವ್ಯಾಖ್ಯಾನಿಸಲಾಗುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತವೆ.[] ಮಾನಸಿಕ ಆರೋಗ್ಯದ ವಿಭಿನ್ನ ರೀತಿಯ ಸಮಸ್ಯೆಗಳಿವೆ. ಅವುಗಳಲ್ಲಿ ಖಿನ್ನತೆ ಮತ್ತು ಆತಂಕದ ಅಸ್ವಸ್ಥತೆಯಂತಹ ಕೆಲವು ಸಮಸ್ಯೆಗಳು ಸಾಮಾನ್ಯವಾಗಿದ್ದರೆ, ಛಿದ್ರಮನಸ್ಕತೆ ಮತ್ತು ದ್ವಿಧ್ರುವಿ ಅವಸ್ವಸ್ಥತೆಯಂತಹ ಕೆಲವು ಸಮಸ್ಯೆಗಳು ಸಾಮಾನ್ಯವಾಗಿರುವುದಿಲ್ಲ.[]

ಇತ್ತೀಚೆಗಷ್ಟೇ, ಉದಯಗೊಂಡ ಜಾಗತಿಕ ಮಾನಸಿಕ ಆರೋಗ್ಯ ಕ್ಷೇತ್ರವನ್ನು ಹೀಗೆಂದು ವ್ಯಾಖ್ಯಾನಿಸಲಾಗಿದೆ: 'ಇದು ಮಾನಸಿಕ ಆರೋಗ್ಯವನ್ನು ಅಭಿವೃದ್ಧಿಪಡಿಸುವುದರ ಬಗ್ಗೆ, ಮತ್ತು ಪ್ರಪಂಚದಾದ್ಯಂತ ಎಲ್ಲಾ ಜನರಲ್ಲಿ ಸಮಾನ ಮಾನಸಿಕ ಆರೋಗ್ಯವನ್ನು ಹೊಂದುವುದರ ಬಗ್ಗೆ, ಆದ್ಯತೆಯನ್ನು ನೀಡುವ ಅಧ್ಯಯನದ , ಸಂಶೋಧನೆಯ ಮತ್ತು ಅಭ್ಯಾಸದ ಕ್ಷೇತ್ರವಾಗಿದೆ'.[]

ಇತಿಹಾಸ

[ಬದಲಾಯಿಸಿ]

ವಿಲಿಯಮ್ ಸ್ವಿಟ್ಜರ್ 19 ನೇ ಶತಮಾನದ ಮಧ್ಯಾವಧಿಯಲ್ಲಿ, "ಮಾನಸಿಕ ಆರೋಗ್ಯ" ಪದವನ್ನು ಸಷ್ಟವಾಗಿ ವ್ಯಾಖ್ಯಾನಿಸಿದ ಮೊದಲಿಗರಾಗಿದ್ದಾರೆ. ಇವರ ವ್ಯಾಖ್ಯಾನವು ಸಕಾರಾತ್ಮಕ ಮಾನಸಿಕ ಆರೋಗ್ಯವನ್ನು ಪ್ರೋತ್ಸಾಹಿಸುವುದರ ಮೇಲೆ ಮಾಡಲಾಗುತ್ತೀರುವ ಸಮಕಾಲೀನ ಕಾರ್ಯಗಳಿಗೆ ಪೂರ್ವವತಿಯಂತೆ ಕಂಡುಬರುತ್ತದೆ.[] ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ (ಅಮೇರಿಕದ ಮನೋವೈದ್ಯಕೀಯ ಸಂಘ)ನ ಹದಿಮೂರು ಜನ ಸಂಸ್ಥಾಪಕರಲ್ಲಿ ಒಬ್ಬರಾದ ಐಸಾಕ್ ರೇ, ಮಾನಸಿಕ ಆರೋಗ್ಯವನ್ನು ಮುಂದೆ ಹೀಗೆಂದು ವ್ಯಾಖ್ಯಾನಿಸಿದ್ದಾರೆ: ಇದು ಮನಸ್ಸಿನ ಶಕ್ತಿಯನ್ನು, ಗುಣಮಟ್ಟವನ್ನು ಅಥವಾ ಬೆಳವಣಿಗೆಯನ್ನು, ನಾಶಮಾಡುವ ಅಥವಾ ತಡೆಹಿಡಿಯುವ ಘಟನೆಗಳು ಮತ್ತು ಪ್ರಭಾವಗಳ ವಿರುದ್ಧ, ಮನಸ್ಸನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಕಲೆಯಾಗಿದೆ.[]

ಡೊರ್ಥಿಯಾ ಡಿಕ್ಸ್ 1808-1887), "ಮಾನಸಿಕ ಆರೋಗ್ಯ" ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಿದ ಪ್ರಮುಖ ವ್ಯಕ್ತಿಯಾಗಿದ್ದಾರೆ. ಇವರು ಶಾಲಾ ಶಿಕ್ಷಕಿಯಾಗಿದ್ದು, ಮಾನಸಿಕ ರೋಗದಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ಮತ್ತು ಅವರನ್ನು ನೂಕಲಾಗಿದ್ದ ಶೋಚನೀಯ ಸ್ಥಿತಿಯನ್ನು ಬೆಳಕಿಗೆ ತರಲು ತಮ್ಮ ಇಡೀ ಜೀವನವನ್ನು ಚಳವಳಿಯಲ್ಲಿ ತೊಡಗಿಸಿಕೊಂಡರು.[] ಇದನ್ನು "ಮಾನಸಿಕ ಆರೋಗ್ಯ ಚಳವಳಿ" ಎಂದು ಕರೆಯಲಾಗುತ್ತದೆ.[] ಈ ಚಳವಳಿಯ ಮೊದಲು, 19 ನೇ ಶತಮಾನದಲ್ಲಿ ಮಾನಸಿಕ ರೋಗಕ್ಕೆ ಬಲಿಯಾದ ಜನರನ್ನು ಸಾಮಾನ್ಯವಾಗಿ ಕಾಣುತ್ತಿರಲಿಲ್ಲ. ಅವರನ್ನು ಅಲಕ್ಷ್ಯಿಸಲಾಗುತ್ತಿತ್ತು. ಅಲ್ಲದೇ ಅವರಿಗೆ ಸಾಕಷ್ಟು ಬಟ್ಟೆಯನ್ನು ಸಹ ನೀಡದೆ, ಶೋಚನೀಯ ಸ್ಥಿತಿಯಲ್ಲಿ ಒಬ್ಬರನ್ನೆ ಇರಿಸಲಾಗುತ್ತಿತು.[] ಡಿಕ್ಸ್ ರ ಪ್ರಯತ್ನದಿಂದಾಗಿ ಮಾನಸಿಕ ಆರೋಗ್ಯ ಸೌಲಭ್ಯಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿತು. ಇದರಿಂದಾಗಿ ಈ ರೋಗಿಗಳ ಕಡೆಗೆ ಹೆಚ್ಚು ಗಮನ ಹರಿಸಲಾಗಲಿಲ್ಲ ಮತ್ತು ಕಾಳಜಿವಹಿಸಲಾಗಲಿಲ್ಲ. ಏಕೆಂದರೆ ಈ ಸಂಸ್ಥೆಗಳು ಅಧಿಕ ಸಂಖ್ಯೆಯಲ್ಲಿ ಸಿಬಂದ್ಧಿಗಳನ್ನು ಹೊಂದಿರಲಿಲ್ಲ.[]

20 ನೇ ಶತಮಾನದ ಆರಂಭದಲ್ಲಿ ಕ್ಲಿಫೋರ್ಡ್ ಬೀರ್ಸ್ ನ್ಯಾಷನಲ್ ಕಮಿಟಿ ಫಾರ್ ಮೆಂಟಲ್ ಹೈಜೀನ್ (ಮಾನಸಿಕ ಆರೋಗ್ಯಕ್ಕಾಗಿ ರಾಷ್ಟ್ರೀಯ ಮಂಡಳಿ)ಅನ್ನು ಸ್ಥಾಪಿಸಿದರು. ಅಲ್ಲದೇ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಹೊರರೋಗಿ ಮಾನಸಿಕ ಆರೋಗ್ಯದ ಮೊದಲ ಕ್ಲಿನಿಕ್ ಅನ್ನು ತೆರೆದರು.[][]

ಮೊದಲ ಮನೋವೈದ್ಯಕೀಯ ಆಸ್ಪತ್ರೆ

[ಬದಲಾಯಿಸಿ]

ಮನೋವೈದ್ಯಕೀಯ ಆಸ್ಪತ್ರೆಯ ಚಿಕಿತ್ಸೆ ನಿಜವಾಗಿ ಐತಿಹಾಸಿಕವಾಗಿ ಯಾವ ಸಮಯದಲ್ಲಿ ಆರಂಭವಾಯಿತು ಎಂಬುದು ಇನ್ನೂ ವಿವಾದಾತ್ಮಕ ವಿಷಯವಾಗಿದ್ದರು, ಪಾಶ್ಚಾತ್ಯ ಪ್ರಪಂಚದಲ್ಲಿ ಮೊದಲ ನಿಜವಾದ ಮನೋವೈದ್ಯಕೀಯ ಆಸ್ಪತ್ರೆ 15 ನೇ ಶತಮಾನದಲ್ಲಿ ಸ್ಪ್ಯೇನ್ ನಲ್ಲಿ ಸ್ಥಾಪಿಸಲಾಗಿತ್ತು ಎಂಬುದಕ್ಕೆ ಸಾಕ್ಷ್ಯಾಧಾರಗಳು ದೊರೆತಿವೆ. ಈ ಸಾಕ್ಷ್ಯಿಯು , 1410 ರಲ್ಲಿ ಫಾಧರ್ ಜೊನ್ ಗಿಲ್ಬರ್ಟ್ ಜೊಫ್ರೆ ತೆರೆದ ಆಸ್ಪತ್ರೆಗಳಲ್ಲಿ ಮೊದಲನೆಯದರ ಬಗ್ಗೆ ವಿವರಿಸುತ್ತದೆ. ಇವರು ಮರ್ಸಿಡರಿಯನ್ ಕ್ರೈಸ್ತಬಿಕ್ಶುವಾಗಿದ್ದು, ವೆಲೆನ್ಸಿಯಾಕ್ಕೆ ಸೇರಿದ ನಾಗರಿಕರ ಗುಂಪು. ಈ ಆಸ್ಪತ್ರೆಯು ಇನ್ನೂ ಕಾರ್ಯನಿರ್ವಹಿಸುತ್ತಿದೆ.

ದೃಷ್ಟಿಕೋನಗಳು

[ಬದಲಾಯಿಸಿ]

ಮಾನಸಿಕ ಆರೋಗ್ಯಕರ ಸ್ಥಿತಿ

[ಬದಲಾಯಿಸಿ]

ಮಾನಸಿಕ ಆರೋಗ್ಯವನ್ನು ಅಖಂಡ ದ್ರವ್ಯದಂತೆ ನೋಡಬಹುದಾಗಿದ್ದು, ಇಲ್ಲಿ ವ್ಯಕ್ತಿಯ ಮಾನಸಿಕ ಆರೋಗ್ಯವು ಸಾಧ್ಯವಿರುವ ವಿಭಿನ್ನ ಪ್ರಮಾಣವನ್ನು ಹೊಂದಿರಬಹುದು.[೧೦] ಮಾನಸಿಕ ಆರೋಗ್ಯಕರ ಸ್ಥಿತಿಯನ್ನು ಸಾಮಾನ್ಯವಾಗಿ ಸಕಾರಾತ್ಮಕ ಲಕ್ಷಣದ ರೂಪದಲ್ಲಿ ನೋಡಲಾಗುತ್ತದೆ. ಉದಾಹರಣೆಗೆ, ವ್ಯಕ್ತಿಯು ಗುರುತಿಸಬಲ್ಲ ಯಾವುದೇ ಮಾನಸಿಕ ಆರೋಗ್ಯ ಸ್ಥಿತಿಯನ್ನು ಹೊಂದಿರದಿದ್ದರು ಕೂಡ ಅವರು ಮಾನಸಿಕ ಆರೋಗ್ಯದ ಅಧಿಕಗೊಂಡ ಮಟ್ಟವನ್ನು ತಲುಪಬಲ್ಲರು. ಮಾನಸಿಕ ಆರೋಗ್ಯದ ಈ ವ್ಯಾಖ್ಯಾನವು , ಭಾವನಾತ್ಮಕವಾಗಿ ಆರೋಗ್ಯಕರವಾಗಿರುವುದು, ಸಂಪೂರ್ಣ ಮತ್ತು ಸೃಜನಾತ್ಮಕ ಜೀವನ ನಡೆಸುವ ಸಾಮರ್ಥ್ಯ ಹಾಗು ಜೀವನದ ಅನಿವಾರ್ಯ ಸವಾಲುಗಳೊಂದಿಗೆ ವ್ಯವಹರಿಸುವ ನಮ್ಯತೆಯ ಮೇಲೆ ಬೆಳಕು ಚೆಲ್ಲುತ್ತದೆ.[ಸೂಕ್ತ ಉಲ್ಲೇಖನ ಬೇಕು] ಅನೇಕ ಚಿಕಿತ್ಸಾ ವ್ಯವಸ್ಥೆಗಳು ಮತ್ತು ಸ್ವ ಸಹಾಯಕ ಪುಸ್ತಕಗಳು, ಆರೋಗ್ಯಕರ ಜನರ ಮಾನಸಿಕ ಆರೋಗ್ಯವನ್ನು ಅಭಿವೃದ್ದಿಪಡಿಸುವಲ್ಲಿ ಪರಿಣಾಮಕಾರಿ ಎನ್ನುವಂತಹ, ಕಾರ್ಯನೀತಿಗಳು ಮತ್ತು ತಂತ್ರಗಳನ್ನು ಸಮರ್ಥಿಸುವ ವಿಧಾನಗಳ ಮತ್ತು ತತ್ತ್ವಚಿಂತನೆಯ ಅವಕಾಶ ನೀಡುತ್ತದೆ. ರಚನಾತ್ಮಕ ಮನೋವಿಜ್ಞಾನವು ಮಾನಸಿಕ ಆರೋಗ್ಯದಲ್ಲಿ ಪ್ರಮುಖವಾಗಿದೆ.

ಮಾನಸಿಕ ಆರೋಗ್ಯದ ಸಮಗ್ರತಾ ಸಿದ್ಧಾಂತದ ಮಾದರಿಯು ಸಾಮಾನ್ಯವಾಗಿ , ಮಾನವಶಾಸ್ತ್ರ, ಶೈಕ್ಷಣಿಕ, ಮನೋವೈಜ್ಞಾನಿಕ, ಧಾರ್ಮಿಕ ಮತ್ತು ಸಾಮಾಜಶಾಸ್ತ್ರದ ದೃಷ್ಟಿಕೋನಗಳ ಮೇಲೆ ಆಧರಿಸಿರುವ, ಹಾಗು ವ್ಯಕ್ತಿತ್ವ, ಸಾಮಾಜಿಕ, ಪ್ರಾಯೋಗಿಕ, ಆರೋಗ್ಯ ಮತ್ತು ವಿಕಾಸಾತ್ಮಕ ಮನಶಾಸ್ತ್ರದ ಊಹಾತ್ಮಕ ದೃಷ್ಟಿಕೋನಗಳ ಮೇಲೆ ಆಧರಿಸಿದ ಪರಿಕಲ್ಪನೆಗಳನ್ನು ಒಳಗೊಂಡಿದೆ.[೧೧][೧೨]

ಆರೋಗ್ಯಕರ ಸ್ಥಿತಿ ಮಾದರಿಯ ಉದಾಹರಣೆಯು, ಮೇಯರ್ಸ್, ಸ್ವೇನೆ ಮತ್ತು ವಿಟ್ಮರ್ ರು ಅಭಿವೃದ್ಧಿ ಪಡಿಸಿದಂತಹ ಮಾದರಿಯನ್ನು ಒಳಗೊಂಡಿದೆ. ಇದು ಜೀವನದ ಐದು ಕ್ರಿಯೆಗಳನ್ನು ಒಳಗೊಂಡಿದೆ— ಆಧ್ಯಾತ್ಮಿಕತೆಯ ಸಾರ, ಕೆಲಸ ಮತ್ತು ವಿರಾಮ, ಸ್ನೇಹ, ಪ್ರೇಮ ಮತ್ತು ಸ್ವ-ನಿರ್ದೇಶನ—ಹಾಗು ನಾಲ್ಕು ಉಪ ಕ್ರಿಯೆಗಳನ್ನು ಒಳಗೊಂಡಿದೆ—ಸ್ವಾಭಿಮಾನ, ಸ್ವ ಕಾರ್ಯಕಾರಿತ್ವ, ನೈಜ ನಂಬಿಕೆಗಳು, ಭಾವನಾತ್ಮಕ ಬುದ್ಧಿಶಕ್ತಿ ಮತ್ತು ಅನುಕರಣೆ, ಸಮಸ್ಯೆ ಪರಿಹರಿಸುವುದು ಮತ್ತು ಸೃಜನಶೀಲತೆ, ಹಾಸ್ಯ ಪ್ರವೃತ್ತಿ, ಪೌಷ್ಠಿಕ ಆಹಾರ, ವ್ಯಾಯಾಮ, ಸ್ವಕಾಳಜಿ, ಒತ್ತಡ ನಿರ್ವಹಣೆ, ಲಿಂಗ ಗುರುತು, ಮತ್ತು ಸಾಂಸ್ಕೃತಿಕ ಅನನ್ಯತೆ—ಇವುಗಳನ್ನು ಆರೋಗ್ಯಕರ ಸ್ಥಿತಿಯ ಪ್ರಮುಖ ಘಟಕಗಳೆಂದು ಮತ್ತು ಆರೋಗ್ಯಕರ ಕಾರ್ಯನಿರ್ವಹಿಸುವಿಕೆಯ ಗುಣಲಕ್ಷಣಗಳೆಂದು ಗುರುತಿಸಲಾಗಿದೆ. ಈ ಘಟಕಗಳು ಜೀವನದ ಪರಿಸ್ಥಿತಿಗಳಿಗೆ , ಆರೋಗ್ಯಕರ ಕಾರ್ಯಕಾರಿತ್ವವನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಪ್ರತಿಕ್ರಿಯೆಯನ್ನು ಒದಗಿಸುತ್ತವೆ. US ನ ಬಹುಪಾಲು ಜನಸಂಖ್ಯೆ ಮಾನಸಿಕ ಆರೋಗ್ಯದ ಬಗ್ಗೆ ಅರಿವನ್ನು ಹೊಂದಿಲ್ಲ.[೧೩]

ಮಾನಸಿಕ ಅಸ್ವಸ್ಥತೆಯ ಕೊರತೆ

[ಬದಲಾಯಿಸಿ]

ಮಾನಸಿಕ ಆರೋಗ್ಯವನ್ನು, ಪ್ರಧಾನ ಮಾನಸಿಕ ಆರೋಗ್ಯ ಸ್ಥಿತಿ(ಉದಾಹರಣೆಗೆ , ಡೈಯಗಾನಾಸ್ಟಿಕ್ ಅಂಡ್ ಸ್ಟಾಟಿಸ್ಟಿಕಲ್ ಮ್ಯಾನ್ಯೂವಲ್ ಆಫ್ ಮೆಂಟಲ್ ಡಿಸ್ ಆರ್ಡರ್ಸ್ ನಲ್ಲಿ ಬರುವ ಯಾವುದಾರರು ಒಂದು ರೋಗ ನಿರ್ಣಯ) ಇಲ್ಲದಿರುವುದೆಂದು ವ್ಯಾಖ್ಯಾನಿಸಬಹುದಾದರು ಕೂಡ, ರಚನಾತ್ಮಕ ಮನಶಾಸ್ತ್ರದಿಂದ(ಮೇಲೆ ನೋಡಿ) ಹುಟ್ಟಿಕೊಂಡ ಇತ್ತೀಚಿನ ಸಾಕ್ಷ್ಯಿ, ಮಾನಸಿಕ ಆರೋಗ್ಯವು, ಮಾನಸಿಕ ಅಸ್ವಸ್ಥತೆಯ ಅಥವಾ ರೋಗದ ಅನುಪಸ್ಥಿತಿಯಾಗಿದೆ ಎಂದು ಸೂಚಿಸುತ್ತದೆ. ಸರಳವಾಗಿ ಹೇಳುವುದಾದರೆ ಮಾನಸಿಕ ಆರೋಗ್ಯವೆಂಬುದು ವ್ಯಕ್ತಿಯ ಮನಸ್ಸಿನ ಆರೋಗ್ಯವಾಗಿದೆ.[೧೪] ಆದ್ದರಿಂದ ಸಾಮಾಜಿಕ, ಸಾಂಸ್ಕೃತಿಕ, ಭೌತಿಕ ಮತ್ತು ಶೈಕ್ಷಣಿಕ ಪ್ರಭಾವವು ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲವು.[]

ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಗಳು

[ಬದಲಾಯಿಸಿ]

ಮಾನಸಿಕ ಆರೋಗ್ಯವನ್ನು ಸಾಮಾಜಿಕವಾಗಿ ನಿರ್ಮಿಸಬಹುದು ಮತ್ತು ಸಾಮಾಜಿಕವಾಗಿ ವ್ಯಖ್ಯಾನಿಸಬಹುದು; ಎಂದರೆ, ವಿಭಿನ್ನ ವೃತ್ತಿಗಳು, ಸಮುದಾಯಗಳು, ಸಮಾಜಗಳು ಮತ್ತು ಸಂಸ್ಕೃತಿಗಳು, ಮಾನಸಿಕ ಆರೋಗ್ಯದ ಪ್ರವೃತ್ತಿ ಮತ್ತು ಕಾರಣಗಳನ್ನು ಕಲ್ಪನೆಯಾಗಿ ರೂಪಿಸಿಕೊಳ್ಳಲು, ಮಾನಸಿಕವಾಗಿ ಆರೋಗ್ಯವಾಗಿರುವುದೆಂದರೆ ಏನೆಂಬುದೆಂದು ನಿರ್ಧರಿಸಲು ಮತ್ತು ಯಾವ ಮಧ್ಯಸ್ಥಿಕೆಗಳು ಸರಿಯಾದುದ್ದೆಂದು ನಿರ್ಧರಿಸಲು ಅನೇಕ ವಿಭಿನ್ನ ಮಾರ್ಗಗಳನ್ನು ಹೊಂದಿರುತ್ತವೆ.[೧೫] ಹೀಗೆ ವಿಭಿನ್ನ ವೃತ್ತಿಪರರು ವಿಭಿನ್ನ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಗಳನ್ನು ಮತ್ತು ಅನುಭವಗಳನ್ನು ಹೊಂದಿರುತ್ತಾರೆ. ಇದು ಚಿಕಿತ್ಸೆಯ ಸಮಯದಲ್ಲಿ ಬಳಸುವ ವಿಧಾನದ ಮೇಲೆ ಪ್ರಭಾವ ಬೀರಬಹುದು.

ಸಂಶೋಧನೆಯು, ಮಾನಸಿಕ ರೋಗಗಳಿಗೆ ಸಂಬಂಧಿಸಿದಂತೆ ರೋಗಲಕ್ಷಣವಿದೆ ಎಂಬುದನ್ನು ತೋರಿಸಿದೆ.[೧೬] ಇಂಗ್ಲೆಂಡ್ ನಲ್ಲಿ ಮನೋವೈದ್ಯರ ರಾಯಲ್ ಕಾಲೇಜ್ , ರೋಗಲಕ್ಷಣವನ್ನು ಕಡಿಮೆ ಮಾಡಲು ಸಹಾಯ ಮಾಡುವುದಕ್ಕಾಗಿ ಚೇಂಚಿಂಗ್ ಮೈಂಡ್ಸ್ (1998–2003) ಎಂಬ ಕಾರ್ಯಾಚರಣೆಯನ್ನು ಏರ್ಪಡಿಸಿತ್ತು.[೧೭]

ಮಾನಸಿಕ ಆರೋಗ್ಯದ ಅನೇಕ ವೃತ್ತಿಪರರು, ಧಾರ್ಮಿಕ ವೈವಿದ್ಯತೆ ಮತ್ತು ಆಧ್ಯಾತ್ಮಿಕತೆಯಲ್ಲಿರುವ ಶಕ್ತಿಯನ್ನು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ ಅಥವಾ ಆಗಲೇ ಅರಿತು ಕೊಂಡಿದ್ದಾರೆ. ಅಮೇರಿಕನ್ ಸೈಕಾಲಜಿಕಲ್ ಅಸೋಸಿಯೇಷನ್ ಧರ್ಮವನ್ನು ಗೌರವಿಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ , ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಷಯಗಳಲ್ಲಿ ಶಿಕ್ಷಣ ನೀಡುವ ಅಗತ್ಯವನ್ನು ಕೂಡ ಸೂಚಿಸಿದೆ.[೧೮]

ಇವನ್ನೂ ಗಮನಿಸಿ

[ಬದಲಾಯಿಸಿ]

ಟೆಂಪ್ಲೇಟು:Portal

  • ಜಾಗತಿಕ ಮಾನಸಿಕ ಆರೋಗ್ಯ
  • ಆರೋಗ್ಯ
  • ಶಿಶು ಮಾನಸಿಕ ಆರೋಗ್ಯ
  • ಮಾನಸಿಕ ಆರೋಗ್ಯದ ಕಾನೂನು
  • ಸಾರ್ವಜನಿಕ ಆರೋಗ್ಯ
  • ಮಾನಸಿಕ ಆರೋಗ್ಯದ ಸ್ವ-ಸಹಾಯ ಗುಂಪುಗಳು

ಸಂಬಂಧಿಸಿದ ಪರಿಕಲ್ಪನೆಗಳು

[ಬದಲಾಯಿಸಿ]
  • ವಿಭಜನೆ
  • ಮಾನಸಿಕ ಅಸ್ವಸ್ಥತೆ
  • ಮಾನಸಿಕ ಪರಿಸರ
  • ಮಾನಸಿಕ ಆರೋಗ್ಯ ವೃತ್ತಿಪರರು
  • ಚಿತ್ತಸ್ವಾಸ್ಥ್ಯ
  • DSM-IV ಗೆ ವಿನ್ಯಾಸಗೊಳಿಸಲ್ಪಟ್ಟ ವೈದ್ಯಕೀಯ ಸಂದರ್ಶನ
  • ಮಾನಸಿಕ ರೋಗ

ಸಂಬಂಧಿತ ವಿಭಾಗಗಳು ಮತ್ತು ವಿಶೇಷತೆಗಳು

[ಬದಲಾಯಿಸಿ]
  • DSM-IV ಸಂಕೇತಗಳು
  • ರಚನಾತ್ಮಕ ಮನಶಾಸ್ತ್ರ
  • ಮನೋವೈದ್ಯಕೀಯ ದಾದಿ
  • ಮನೋವೈದ್ಯಶಾಸ್ತ್ರ
  • ಮನೋವಿಜ್ಞಾನ
  • ಸಮಾಜ ಸೇವೆ
  • ಯುವ ಜನರ ಆರೋಗ್ಯ

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ About.com (2006 ರ ಜುಲೈ 25). ವಾಟ್ ಇಸ್ ಮೆಂಟಲ್ ಹೆಲ್ತ್? . About.com Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ. ನಿಂದ 2007 ರ ಜೂನ್ 1 ರಂದು ಪುನಃ ಪಡೆಯಲಾಯಿತು.
  2. ಪ್ರಿನ್ಸಟನ್ ವಿಶ್ವವಿದ್ಯಾಲಯ. (ಕೊನೆಯದಾಗಿ ನವೀಕರಿಸಿರುವುದು ತಿಳಿಯದು). Princeton.edu[ಶಾಶ್ವತವಾಗಿ ಮಡಿದ ಕೊಂಡಿ] ನಿಂದ 2007 ರ ಜೂನ್ 1 ರಂದು ಪುನಃ ಪಡೆಯಲಾಯಿತು.
  3. ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ (2005). ಪ್ರಮೋಟಿಂಗ್ ಮೆಂಟಲ್ ಹೆಲ್ತ್: ಕಾನ್ ಸೆಪ್ಟ್ಸ್,ಎಮರ್ಜಿಂಗ್ ಎವಿಡೆನ್ಸ್, ಪ್ರಾಕ್ಟೀಸ್: ಅ ರೀಫೋರ್ಟ್ ಆಫ್ ದಿ ವಲ್ಡ್ ಹೆಲ್ತ್ ಆರ್ಗನೈಸೇಷನ್ , ಡಿಪಾರ್ಟ್ಮೆಂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ಸಬ್ ಸ್ಟ್ಯಾನ್ಸಸ್ ಅಬ್ಯೂಸ್ ಇನ್ ಕೊಲಬರೇಷನ್ ವಿತ್ ದಿ ವಿಕ್ಟೋರಿಯನ್ ಹೆಲ್ತ್ ಪ್ರಮೋಷನ್ ಫೌಂಡೇಷನ್ ಅಂಡ್ ದಿ ಯುನಿವರ್ಸಿಟಿ ಆಫ್ ಮೆಲ್ಬರ್ನ್. ವಲ್ಡ್ ಹೆಲ್ತ್ ಆರ್ಗನೈಸೇಷನ್ ಜಿನೀವಾ
  4. ವಲ್ಡ್ ಹೆಲ್ತ್ ರಿಫೋರ್ಟ್ 2001 - ಮೆಂಟಲ್ ಹೆಲ್ತ್: ನ್ಯೂ ಅಂಡರ್ ಸ್ಟ್ಯಾಂಡಿಂಗ್ ನ್ಯೂ ಹೋಪ್, ವಲ್ಡ್ ಹೆಲ್ತ್ ಆರ್ಗನೈಸೇಷನ್, 2001
  5. ೫.೦ ೫.೧ ಕಿಚನರ್, BA ಅಂಡ್ ಜಾರ್ಮ್, AF, 2002, ಮೆಂಟಲ್ ಹೆಲ್ತ್ ಫಸ್ಟ್ ಏಡ್ ಮ್ಯಾನ್ಯುವಲ್. ಸೆಂಟರ್ f.o.r ಮೆಂಟಲ್ ಹೆಲ್ತ್ ರಿಸರ್ಚ್ ಅಂಡ್ ಕ್ಯಾನ್ ಬೆರಾ.. p 5
  6. ಪಟೇಲ್, ವಿ. , ಪ್ರಿನ್ಸ್, ಎಂ. (2010). ಗ್ಲೋಬಲ್ ಮೆಂಟಲ್ ಹೆಲ್ತ್ - ಅ ನ್ಯೂ ಗ್ಲೋಬಲ್ ಹೆಲ್ತ್ ಫೀಲ್ಡ್ ಕಮ್ಸ್ ಆಫ್ ಏಜ್. JAMA, 303 , 1976-1977.
  7. ೭.೦ ೭.೧ ೭.೨ ಜಾನ್ಸ್ ಹಾಪ್ಕಿನ್ಸ್ ಯುನಿವರ್ಸಿಟಿ. (2007). ಒರಿಜನ್ಸ್ ಆಫ್ ಮೆಂಟಲ್ ಹೆಲ್ತ್ . JHSPH.edu Archived 2008-07-06 ವೇಬ್ಯಾಕ್ ಮೆಷಿನ್ ನಲ್ಲಿ. ನಿಂದ 2007 ರ ಜೂನ್ 1 ರಂದು ಪುನಃ ಪಡೆಯಲಾಯಿತು.
  8. ೮.೦ ೮.೧ ೮.೨ ೮.೩ ಬಾರ್ಲೊ, ಡಿ.ಹೆಚ್., ಡುರಾಂಡ್, ವಿ.ಎಮ್., ಸ್ಟಿವಾರ್ಡ್, ಎಸ್.ಹೆಚ್. (2009). ಅಬ್ ನಾರ್ಮಲ್ ಸೈಕಾಲಜಿ: ಆನ್ ಇಂಟಿಗ್ರೇಟಿವ್ ಅಪ್ರೋಚ್ (ಸೆಕೆಂಡ್ ಕೆನಡಿಯನ್ ಎಡಿಷನ್). ಟೊರಾಂಟೊ: ನೆಲ್ಸನ್. p.16
  9. ಕ್ಲಿಫರ್ಡ್ ಬೀರ್ಸ್ ಕ್ಲಿನಿಕ್. (2006ರ ಅಕ್ಟೋಬರ್‌ 30). ಅಬೌಟ್ ಕ್ಲಿಫರ್ಡ್ ಬೀರ್ಸ್ ಕ್ಲಿನಿಕ್ . CliffordBeers.org Archived 2007-04-09 ವೇಬ್ಯಾಕ್ ಮೆಷಿನ್ ನಲ್ಲಿ. ನಿಂದ 2007 ರ ಜೂನ್ 1ರಂದು ಪುನಃ ಪಡೆಯಲಾಯಿತು.
  10. Keyes, Corey (2002). "The mental health continuum: from languishing to flourishing in life". Journal of Health and Social Behaviour. 43 (2): 207–222. doi:10.2307/3090197.
  11. Witmer, J.M. (1992). "A holistic model for wellness and prevention over the lifespan". Journal of Counseling and Development. 71: 140–148. {{cite journal}}: Unknown parameter |coauthors= ignored (|author= suggested) (help)
  12. Hattie, J.A. (2004). "A factor structure of wellness: Theory, assessment, analysis and practice". Journal of Counseling and Development. 82: 354–364. {{cite journal}}: Unknown parameter |coauthors= ignored (|author= suggested) (help)
  13. Myers, J.E. (2000). "The wheel of wellness counseling for wellness: A holistic model for treatment planning. Journal of Counseling and Development". Journal of Counseling and Development. 78: 251–266. {{cite journal}}: Unknown parameter |coauthors= ignored (|author= suggested) (help)
  14. Barbara Kozier (2008). Fundamentals of nursing: concepts, process and practice. Pearson Education. p. 181. ISBN 9780131976535. Retrieved 18 December 2010.
  15. Weare, Katherine (2000). Promoting mental, emotional and social health: A whole school approach. ಲಂಡನ್: RoutledgeFalmer. p. 12. ISBN 978-0415168755.
  16. ಆಫೀಸ್ ಆಫ್ ದಿ ಡೆಪ್ಯೂಟಿ ಪ್ರೈ ಮಿನಿಸ್ಟರ್ - ಸೋಷಿಯಲ್ ಎಕ್ಸ್ ಕ್ಲೂಷನ್ ಯುನಿಟ್: "ಫ್ಯಾಕ್ಟ್ ಶೀಟ್1: ಸ್ಟಿಗ್ಮ ಅಂಡ್ ಡಿಸ್ಕ್ರಿಮಿನೇಷನ್ ಆನ್ ಮೆಂಟಲ್ ಹೆಲ್ತ್ ಗ್ರೌಂಡ್ಸ್ Archived 2008-12-29 ವೇಬ್ಯಾಕ್ ಮೆಷಿನ್ ನಲ್ಲಿ.".2004.
  17. ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ಸ್: ಚೇಂಚಿಂಗ್ ಮೈಂಡ್ಸ್.
  18. Richards, P.S. (2000). Handbook of Psychotherapy and Religious Diversity. Washington D.C.: American Psychological Association. p. 4. ISBN 978-1557986245. {{cite book}}: Unknown parameter |coauthors= ignored (|author= suggested) (help)

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]